ಅವನ ಪ್ರೀತಿಯಲ್ಲಿ ಅವಳ ಚಿತ್ರವಿದೆ: ಪದ್ಮಾ ಭಟ್, ಇಡಗುಂದಿ

                      
ಅವನು ಅವಳಿಗಾಗಿ ಕಾಯುತ್ತ ಕುಳಿತಿದ್ದನು.. ಜೋರಾಗಿ ಮಳೆ ಬರಲು ಶುರುವಾದಾಗಲೇ ಅವನ ಕನಸುಗಳೂ ಮಳೆಯಲ್ಲಿ ತೋಯುತ್ತಿದ್ದವು.. ಇನ್ನೂ ಆ ಹುಡುಗಿ ಬಂದಿಲ್ವಲ್ಲಾ.. ಎನ್ನುತ್ತ ದಾರಿ ನೋಡುತ್ತಿದ್ದವನಿಗೆ ದೂರದಿಂದಲೇ ಅವಳ ಬರುವಿಕೆ ಕಾಣಲು ಪ್ರಾರಂಭವಾಯಿತು.. ಯಾಕೆ ಇಷ್ಟು ಹೊತ್ತು ಕಾದೆ ಅವಳಿಗೆ ಎನ್ನುವುದಕ್ಕಿಂತ, ಅವಳ ಬರುವಿಕೆಯಲ್ಲಿನ ಕಾಯುವಿಕೆಯಲ್ಲಿಯೂ ಅವನು ಖುಷಿಪಡುತ್ತಿದ್ದ.. ಜೀವನವೆಂದರೆ ನಮ್ಮ ಸಂತೋಷಕ್ಕಾಗಿ ಮಾತ್ರ ಬದುಕುವುದಲ್ಲ.. ನಮ್ಮಿಂದ ಸಂತೋಷವಾಗುವವರಿಗಾಗಿ ಬದುಕುವುದು.. ಎಂದು ಎಲ್ಲೋ ಓದಿದ ಎರಡು ಸಾಲು ನೆನಪಾದಂತಿತ್ತು ॒ಅವಳು ಅವನ ಹತ್ತಿರ ಬರುತ್ತಿದ್ದಂತೆಯೇ ಕಣ್ಣುಗಳೆಲ್ಲ ತುಂಬಿ ಬಂದಿದ್ದವು.. ಇಷ್ಟು ಹೊತ್ತು ಕಾದ ಕ್ಷಣವೆಲ್ಲಾ ಅವಳ ಮುಂದೆ ಶೂನ್ಯವಾಗಿ ಕಾಣುವಂತಿತ್ತು.. ಇಬ್ಬರ ನಡುವಿನ ಮೌನಕ್ಕೂ, ಮಾತು ಕಲಿಸುವವರ್‍ಯಾರೆಂಬ ಪ್ರಶ್ನೆ. ಪ್ರೀತಿಯೆಂದರೆ ಇದೇನಾ? ಪ್ರೀತಿಸುವವರಿಗೆ ಕೆಲವೊಮ್ಮೆ ಇಡೀ ಜಗತ್ತೂ ಸುಂದರವಾಗಿ ಕಾಣುತ್ತಂತೆ.. ಅವರೊಂದು ಜೊತೆಗಿದ್ದರೆ, ಜಗತ್ತೇ ಜೊತೆಗಿದ್ದಷ್ಟು ಭದ್ರತೆಯಂತೆ ಎನ್ನುವ ಮಾತು ಇಬ್ಬರಿಗೂ ನಿಜವಾಗಿ ಕಂಡಿತ್ತು.. ಒಂದಿಷ್ಟು ಪ್ರೀತಿಯ ಬಗೆಗಿನ ಮಾತುಗಳು ಅವನ ಮನಸ್ಸಿನಲ್ಲಿ ಮೂಡಲಾರಂಭಿಸಿದವು..

ಸುಂದರ ಬದುಕೆನ್ನುವುದು ಒಂದು ಕಲ್ಪನೆಯಷ್ಟೇ..ಆದರೆ ನಿಜವಾದ ಬದುಕು ಕಲ್ಪನೆಗಿಂತಲೂ ಸುಂದರವಾಗಿರುತ್ತದೆ.. ಪ್ರೀತಿ ಎಂಬ ಪದಕ್ಕೆ ಎಷ್ಟೋ ಜನರು ಅರ್ಥವನ್ನು ಹುಡುಕಲು ಹೊರಟರೂ, ಅದಕ್ಕೆ ಸರಿಯಾದ ಪರಿಪೂರ್ಣ ಉತ್ತರ ಹುಡುಕಲು ಸಾಧ್ಯವೇ ಆಗಲಿಲ್ಲ ನೋಡು.. ಬಹುಶಃ ಅರ್ಥವಾಗದಿರುವ ಆತ್ಮೀಯತೆಯೇ ಪ್ರೀತಿಯಿರಬಹುದೇನೋ ಎಂದು ಗೊಣಗಿಕೊಳ್ಳುತ್ತಿದ್ದ.. ಹೌದೆಂಬಂತೆ ತಲೆಯಾಡಿಸಿದ ಆಕೆ, ಹೂಂ ಪ್ರೀತಿ ಇಲ್ಲದಿರುವ ಮನುಷ್ಯ ಜಗತ್ತಿನಲ್ಲಿ ಯಾರೂ ಇರಲಾರದು.. ಹೃದಯ ಇದ್ದವರಿಗೆಲ್ಲಾ ಈ ಪ್ರೀತಿ ಎನ್ನುವುದು ಇದ್ದೇ ಇರುತ್ತದೆ ಎಂಬಂತೆ ಮಾತನಾಡಿದಳು.

ಈ ಪ್ರೀತಿಗೆ ಹುಟ್ಟೆಲ್ಲಿ ಇರುತ್ತದೋ, ಗೊತ್ತಿಲ್ಲ..ಆದರೆ ಸಾವು ಇರುವುದೇ ಇಲ್ಲ.. ವ್ಯಕ್ತಿಗಳು ಸತ್ತರೂ ಪ್ರೀತಿ ಸಾಯಲಾರದು.. ಇನ್ನೂ ಎಷ್ಟೋ ಸಲ ಪ್ರೀತಿಯನ್ನು ಕೊಂದು ಹಾಕಿದೆ, ಪ್ರೀತಿಯನ್ನು ಬೇರ್ಪಡಿಸಿ ಬಿಟ್ಟೆ ಎಂಬಂತಹ ಮಾತನ್ನೆಲ್ಲಾ ಕೇಳುತ್ತಿರುತ್ತೇವೆ..ಪ್ರೀತಿ ಕಡಿಮೆಯಾಗಿದೆ, ಸತ್ತಿದೆ ಎಂಬ ವಾಕ್ಯದ ಉತ್ತರ ಕೊಟ್ಟರೆ, ಅಲ್ಲಿ ಪ್ರೀತಿಯೇ ಇರಲಿಲ್ಲವಾಗಿತ್ತೆಂದು ಅಂದುಕೊಳ್ಳಬಹುದೇ ವಿನಃ ಪ್ರೀತಿಗೆ ಎಂದಿಗೂ ಸಾವಿಲ್ಲ. ಆಕರ್ಷಣೆಗೂ, ಪ್ರೀತಿಗೂ ಹೊಂದಾಣಿಕೆಗೂ ತುಂಬಾ ವ್ಯತ್ಯಾಸವಿದೆ.. .ಆಕರ್ಷಣೆಯು ಅಲ್ಪಾವಧಿಯ ಜೀವಿತವನ್ನಷ್ಟೇ ಹೊಂದಿರುತ್ತದೆ.. ಹೊಂದಾಣಿಕೆ ಎಂಬುವುದು ಆಯಾ ಸಂಧರ್ಭಕ್ಕೆ ತಕ್ಕಂತೆ ಬರುತ್ತದೆ..ಆದರೆ ಪ್ರೀತಿಯು ಹಾಗಲ್ಲ.. ಅಲ್ಲಿ ನಮ್ಮ ಜೀವದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೇವೋ, ಅಷ್ಟೇ ಕಾಳಜಿಯು ನಮಗೆ ನಾವು ಪ್ರೀತಿಸುವ ಜೀವಕ್ಕಿರುತ್ತದೆ..

ಜೀವನದಲ್ಲಿ  ಎಲ್ಲವನ್ನೂ ಕೊಡುತ್ತೇನೋ ಬಿಡುತ್ತೇನೋ, ಆದರೆ ಬದುಕು ನನಗಾಗಿ ಕೊಟ್ಟ ಎಲ್ಲವನ್ನೂ ನಿರ್ವಂಚನೆಯಿಂದ ನಿನಗೆ ಕೊಡುತ್ತೇನೆಂಬ ಮಾತಿರುತ್ತದೆ ಈ ಪ್ರೀತಿಯಲ್ಲಿ ಎಲ್ಲೋ ಕಳೆದು ಹೋದನೆಮ್ಮದಿಯನ್ನು ಪುನಃ ಸೃಷ್ಟಿಸುವ ಅದ್ಭುತ ಶಕ್ತಿಯಿದೆ..ಕತ್ತಲಲ್ಲಿ ಬೆಳಕಿನೆಡೆಗೆ ಕನಸು ಕಾಣುವ ಕಾತರವಿದೆ.. ಮುಸ್ಸಂಜೆಯ ತಂಗಾಳಿಯಲ್ಲಿ ಅವಳ ನೆನಪನ್ನು ಹರವಿ ಕುಳಿತುಬಿಡುವ ಹುಮ್ಮಸ್ಸಿದೆ.

ಹೀಗೆಲ್ಲಾ ಯೋಚಿಸುತ್ತಿದ್ದ ಅವನನ್ನು ಒಮ್ಮೆಲೇ ಅವಳು ಸ್ಪರ್ಶಿಸಿದಾಗ, ಯೋಚನೆಯ ಗೂಡಿನಿಂದ ವಾಸ್ತವ ಪ್ರಪಂಚಕ್ಕೆ ಬಂದಿದ್ದ..ನನ್ನ ಜಗತ್ತೆಲ್ಲವನ್ನೂ ಪ್ರೀತಿಯು ಆವರಿಸಿಕೊಂಡುಬಿಟ್ಟಿದೆ ಎಂಬ ಭಾವದಲ್ಲಿ ಅವಳನ್ನು ದಿಟ್ಟಿಸಿದಾಗ, ಅವಳ ತುಟಿಯಂಚಿನಲ್ಲಿ ಮೂಡಿದ್ದ ಕಿರುನಗೆಯು, ಅವನ ಮನಸ್ಸನ್ನು ಮತ್ತೊಮ್ಮೆ ಪುಳಕಗೊಳ್ಳುವಂತೆ ಮಾಡಿತ್ತು. ಇಬ್ಬರ ನಡುವಿನ ಅಗಾಧ ಮೌನಕ್ಕೆ ಸಾಕ್ಷಿಯಾಗಿದ್ದು ಸಂಜೆಯ ಸೂರ್‍ಯನ ತಂಪು ಬೆಳಕು.. ಹಕ್ಕಿಗಳ ಚಿಲಿಪಿಲಿಯ ಸಂಗೀತ.. ಪ್ರೀತಿಯನ್ನು ಹೊರತು ಇನ್ನೇನೂ ಇಲ್ಲ ಬದುಕಿನಲ್ಲಿ ಎಂಬಂತಹ ಭಾವಗಳು ಸಣ್ಣಗೆ ಹುಟ್ಟಿ, ಎಷ್ಟೋ ದಿನಗಳಾಗಿಬಿಟ್ಟಿದ್ದವು..ಪ್ರಪಂಚವೆಂದರೆ ಪ್ರೀತಿಯನ್ನು ಹೊತ್ತಿರುತ್ತೋ ಗೊತ್ತಿಲ್ಲ..ಆದರೆ ಪ್ರೀತಿಯಲ್ಲಿ ಇಡೀ ಪ್ರಪಂಚವೇ ಇದೆಯೆಂದು ಮನಸ್ಸಿನ ತುಂಬೆಲ್ಲಾ ಬಣ್ಣದ ಚಿತ್ತಾರಗಳು ಇಬ್ಬರಮನಸ್ಸಿನಲ್ಲಿ..

   *****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Srinidhi jois
Srinidhi jois
9 years ago

Nice.. 🙂

Akhilesh Chipli
Akhilesh Chipli
9 years ago

ಹೌದು. ಪ್ರೀತಿಯಿಂದ ಏನನ್ನಾದರೂ ಗೆಲ್ಲಬಹುದು. ಚೆನ್ನಾಗಿದೆ.

ಶಿವರಾಜ ಯಲಿಗಾರ್
ಶಿವರಾಜ ಯಲಿಗಾರ್
9 years ago

ತುಂಬಾ ಚನ್ನಾಗಿದೆ…

3
0
Would love your thoughts, please comment.x
()
x