ಬಲಿಯಾಗದಿರಲಿ ಯುವಜನತೆಯ ಮನಸು..ಕನಸು: ಪದ್ಮಾ ಭಟ್

ಅವನು ತುಂಬಾ ಬುದ್ದಿವಂತನಾಗಿದ್ದರೂ ಕೆಟ್ಟ ಚಟಗಳ ಸಹವಾಸದಿಂದ ಬದುಕನ್ನೇ ಸ್ಮಶಾನದತ್ತ ಒಯ್ದುಬಿಟ್ಟ..ಊರಿನಲ್ಲಿರುವ ಅಪ್ಪಅಮ್ಮ ತನ್ನ ಮಗ ಚನ್ನಾಗಿ ಓದುತ್ತಿದ್ದಾನೆಂದು ಹಾಸ್ಟೇಲಿನಲ್ಲಿಟ್ಟರೆ ಡ್ರಗ್ಸ್‌ ಜಾಲಕ್ಕೆ ಬದುಕನ್ನು ಬಲಿಯಾಗಿಸಿಕೊಂಡ..ಇದು ಉದಾಹರಣೆಯಷ್ಟೇ.. ಇಂತಹ ಹಲವಾರು ವಿಚಾರಗಳು ದೈನಂದಿನ ಬದುಕಿನಲ್ಲಿ ನಡೆಯುತ್ತಲೇ ಇರುತ್ತದೆ..ಎಷ್ಟು ಬುದ್ದಿವಂತನಾದರೇನು? ಗುಣವಿದ್ದರೇನು..? ಬದುಕು ಯಾರಿಗೂ ಯಾವತ್ತೂ ಪದೇ ಪದೇ ಅವಕಾಶಗಳನ್ನು ಕೊಡುವುದಿಲ್ಲ..ಯಾರ ಜೊತೆಗೂ ಅವರಿಗೆ ಬೇಕಾದ ಹಾಗೆ ಹೊಂದಾಣಿಕೆಯನ್ನು ಮಾಡಿಕೊಳ್ಳುವುದೂ ಇಲ್ಲವಲ್ಲ. ಇಂದಿನ ಯುವಜನತೆಯು ಹಲವಾರು ಕ್ಷೇತ್ರಗಳಲ್ಲಿ ಬುದ್ದಿವಂತರೇ ಆಗಿದ್ದರೂ ಇಂತಹ ಕೆಟ್ಟ ಚಟಗಳು, ಇನ್ನೊಂದು ಕಡೆಯಿಂದ ಅವನತಿಯ ಹಂತಕ್ಕೆ ದೂಡುತ್ತಾ ಬರುತ್ತಿರುತ್ತದೆ. ಡ್ರಗ್ಸ್‌ ಜಾಲಕ್ಕೆ ಸಿಕ್ಕಿ ಹಾಕಿಕೊಂಡರೆಂದರೆ ಅರ್ಧಜೀವನ ಮುಗಿದಂತೆಯೇ.. ಅದರೊಳಗೆ ಹೋಗಲು ಸಾವಿರ ದಾರಿಗಳಿದ್ದರೂ, ಅದರಿಂದ ಮುಕ್ತವಾಗಿ ಹೊರಗೆ ಬರುವುದು ಸುಲಭವೇನಲ್ಲ..ಈ ಡ್ರಗ್‌ಜಾಲವು ಎಷ್ಟು ದೊಡ್ಡದಾಗಿ ಹರಡಿಕೊಂಡಿರುತ್ತದೆಯೆಂದರೆ,  ಡ್ರಗ್ ಗೆ ಹೊಂದಿಕೊಂಡವರಿಗೆ ಪ್ರತೀನಿತ್ಯವೂ ಸಪ್ಲೈ ಮಾಡುವ ಎಷ್ಟೋ ಅಂಗಡಿಗಳು ಸದ್ದಿಲ್ಲದಂತೆಯೇ ಇಂತಹ ಕೆಲಸವನ್ನು ಮಾಡುತ್ತದೆ.. ಡ್ರಗ್ ಸೇವಿಸುವವರನ್ನು ಬಿಟ್ಟು ಯಾರಿಗೂ ಗೊತ್ತಾಗದಂತೆಯೇ..

ಯುನೈಟೆಡ್ ನೇಷನ್ಸ್‌ ಡ್ರಗ್‌ ಕಂಟ್ರೋಲ್ ಪ್ರೋಗ್ರಾಂನ ಒಂದು ಅಂದಾಜಿನ ಪ್ರಕಾರ ೩:೩ ರಿಂದ ೪:೧ ರಷ್ಟು ನಿಷೇಧಿತ ಡ್ರಗ್‌ನ್ನು ಉಪಯೋಗಿಸಲಾಗುತ್ತಿದೆ. ದಿನದಿಂದ ದಿನಕ್ಕೆ ಕೋರ್ಸುಗಳ ಸಂಖ್ಯೆ, ಪ್ರತಿಭಾನ್ವಿತರ ಸಂಖ್ಯೆ, ಪರೀಕ್ಷೆಯಲ್ಲಿ ತೆಗೆದುಕೊಳ್ಳುವ ಅಂಕದ ಸಂಖ್ಯೆ ಹೇಗೆ ಹೆಚ್ಚುತ್ತಿದೆಯೋ ಅಂತೆಯೇ ಡ್ರಗ್ ಎಂಬ ಜಾಲಕ್ಕೆ ಬೀಳುವ ಯುವಜನತೆಯ ಸಂಖ್ಯೆಯೂ ಹೆಚ್ಚುತ್ತಾ ಬಂದಿದೆ.

ಅದರಲ್ಲಿಯೂ ವಿದ್ಯಾರ್ಥಿಗಳೇ ಹೆಚ್ಚಿರುತ್ತಾರೆಂದರೆ ಸುಳ್ಳಾಗದು. ಡ್ರಗ್ ಸೇವಿಸುವ ವಿಧಾನದಲ್ಲಿ ಇಂಜೆಕ್ಷನ್ ಮೂಲಕ ತೆಗೆದುಕೊಳ್ಳುವವರು ಹೆಚ್ಚು. ಅಲ್ಲದೇ ಮೂಗಿನ ಮೂಲಕ ತೆಗೆದುಕೊಳ್ಳುತ್ತಾರೆ. ಇಷ್ಟು ಮಾತ್ರವಲ್ಲ. ಚರ್ಮದ ಮೂಲಕವೂ ಡ್ರಗ್‌ನ್ನು ದೇಹದೊಳಕ್ಕೆ ಪ್ರವೇಶಿಸುತ್ತಾರಂತೆ. ಡ್ರಗ್ ನ್ನು ಸೇವಿಸುತ್ತಾ ಸೇವಿಸುತ್ತಾ ಎಷ್ಟು ಅದರ ಮೇಲೆ ಅವಲಂಬಿತರಾಗುತ್ತಾರೆಂದರೆ ದೈಹಿಕವಾಗಿ ಹಾಗೂ ಮಾನಸಿಕವಾಗಿಯೂ ಪರಿಣಾಮಗಳು ಇರುತ್ತದೆ..ದೈಹಿಕವಾಗಿ ಎಂದರೆ ನಿದ್ರೆಯಲ್ಲಿ ಏನೋ ಗೊಂದಲಗಳು, ವಾಂತಿ ಬರುವುದು, ಡಿಪ್ರೆಶನ್ ಗೂ ಹೋಗುವಷ್ಟು ಈ ಡ್ರಗ್ ನ ಜೊತೆ ಸಂಬಂಧ ಇರುವವರು ಒಂದು ದಿನ ಸೇವಿಸಿಲ್ಲ ಎಂದರೆ ಅನುಭವಿಸುತ್ತಾರೆ. ಮಾನಸಿಕವಾಗಿ ಏನನ್ನೋ ಕಳೆದುಕೊಂಡ ಅನುಭವವನ್ನು ಜೊತೆಗೆ ಮರೆವು ಜಾಸ್ತಿಯಾಗುವುದನ್ನೂ, ಇನ್ನಲ್ಲದೇ ಒಂದು ರೀತಿಯಲ್ಲಿ ಖುಷಿ ಎಂಬುದು ಮಾಸಿಹೋಗಿಬಿಡುತ್ತದೆ..

ಡ್ರಗ್ ಬಳಸುವವರು ಹೇಗಾಗಿ ಬಿಡುತ್ತಾರೆಂದರೆ ದಿನನಿತ್ಯದ ಕೆಲಸದಲ್ಲಿ ಡ್ರಗ್ ಸೇವಿಸುವುದೂ ಒಂದು ಮುಖ್ಯವಾಗಿಬಿಡುತ್ತದೆ. ಸರಿಯೋತಪ್ಪೋ ಎಂದು ಯೋಚಿಸುವ ತಾಳ್ಮೆಯು ಕೂಡ ಅವರಲ್ಲಿರುವುದಿಲ್ಲ. ಡ್ರಗ್ ಸೇವಿಸುವುದನ್ನು ನಿಲ್ಲಿಸಬೇಕೆಂದುಕೊಂಡರೂ, ಇನ್ನೊಂದು ಮನಸ್ಸು ಗೊತ್ತಿಲ್ಲದಂತೆಯೇ ಡ್ರಗ್‌ ಜೊತೆ ಸ್ನೇಹವನ್ನು ಬೆಳೆಸಿಕೊಂಡಿರುತ್ತದೆ. ಡ್ರಗ್ ಕೊಳ್ಳಲು ಹಣ ಸಾಕಾಗದೇ ಇದ್ದಾಗ ಇನ್ನೊಂದಿಷ್ಟು ಅನ್ಯ ಮಾರ್ಗವನ್ನು ಅನುಸರಿಸುತ್ತ ಹೋಗುತ್ತಾರೆ. ಡ್ರಗ್ ಸೇವಿಸಿದಾಗ ಆಗುವ ಕ್ಷಣಿಕ ಸುಖಕ್ಕೋಸ್ಕರ ನೂರು ವರುಷದ ದಾರಿಯನ್ನು ಚಿಕ್ಕದಾಗಿ ಮಾಡಿಕೊಂಡು ಬಿಡುತ್ತಾರೆ. ಡ್ರಗ್ ಸೇವಿಸಿ ಡ್ರೈವ್ ಮಾಡಿ ಅಪಘಾತದ ಹಂತಕ್ಕೆ ತಲುಪುವವರ ಸಂಖ್ಯೆಗೂ ಕಡಿಮೆಯಿಲ್ಲ.

ಶೇ ೫೦% ಗಿಂತ ಹೆಚ್ಚು ಜನಡ್ರಗ್ ಸೇವಿಸುವವರಲ್ಲಿ ೧೦ ರಿಂದ ೨೦ ವರುಷದೊಳಗಿನ ವ್ಯಕ್ತಿಗಳೇ ಇರುತ್ತಾರಂತೆ. .೭೦-೭೫% ಡ್ರಗ್‌ ಉಪಯೋಗಿಸುವವರಲ್ಲಿ ೧೬ ರಿಂದ ೩೫ ವರುಷದೊಳಗಿನ ವ್ಯಕ್ತಿಗಳು. ಇಷ್ಟಲ್ಲದೇ ೬೭% ಡ್ರಗ್ ಸೇವಿಸುವ ವ್ಯಕ್ತಿಗಳು ರೆಗ್ಯೂಲರ್ ಆಗಿ ಸತತ ೫ ವರುಷಗಳ ವರೆಗೂ ಸೇವಿಸುತ್ತಾರೆಂದು ಹೇಳಲಾಗುತ್ತದೆ. ಕೆಲವು ನಿಷೇಧಿತ ಡ್ರಗ್ ಗಳು ಮತ್ತಷ್ಟು ಶಕ್ತಿಯನ್ನು ಕೊಟ್ಟಂತೆ, ಹುರುಪನ್ನು ಕೊಟ್ಟಂತೆ ಆ ಕ್ಷಣದಲ್ಲಿ ಅನಿಸಿದರೂ ಅದು ಮಿದುಳಿನ ಮೇಲೆಯೇ ಪರಿಣಾಮವನ್ನು ಬೀರುತ್ತದೆ. .ರಕ್ತದ ಜೊತೆಗೆ ಸೇರಿ ಹಲವಾರು ಖಾಯಿಲೆಗಳೂ ಡ್ರಗ್‌ ಉಪಯೋಗಿಸುವುದರಿಂದ ಬರುತ್ತದೆ. ಕೆಲವೇ ಕೆಲವಿನ ನಿಮಿಷಗಳ ಸುಖಕ್ಕೋಸ್ಕರ ನಮ್ಮ ಜೀವನದ ಹಲವಾರು ವರುಷಗಳನ್ನೇ ಡ್ರಗ್ ಎಂಬ ಭೂತಕ್ಕೆ ಕೊಟ್ಟು ಬಿಡುವುದು ಯಾವ ನ್ಯಾಯ ಅಲ್ಲವಾ?

ಭಾರತದಲ್ಲಿ ಯುವಜನರೇ ಹೆಚ್ಚಿಗೆ ಇರುವವರು. ನಾಳಿನ ಬದುಕಿನ ಮುನ್ನುಡಿಯನ್ನು ಬರೆಯುತ್ತಿರುವ ಯುವಜತೆಯಲ್ಲಿ ೩ ಬಿಲಿಯನ್‌ಗಿಂತಲೂ ಹೆಚ್ಚು ಜನ ನಿಷೇಧಿತ ಡ್ರಗ್ ನ್ನುಉಪಯೋಗಿಸುತ್ತಾರೆಂದರೆ ಕಷ್ಟವಾದರೂ ನಂಬಲೇಬೇಕು. ಡ್ರಗ್ ಸೇವಿಸದ ಹೊತ್ತು ಸಹಜತೆಯನ್ನು ಕಳೆದುಕೊಳ್ಳುತ್ತಾ, ಕೊನೆಗೆ ಸೇವಿಸದೇ ಇರುವ ಹೊತ್ತಿನ ಮೇಲೂ ಈ ಡ್ರಗ್ ಪರಿಣಾಮವನ್ನು ಬೀರುತ್ತದೆ. ಡ್ರಗ್ ಸೇವಿಸದ ವ್ಯಕ್ತಿಗಳಿಗಿಂತ ಡ್ರಗ್ ಸೇವಿಸುವ ವ್ಯಕ್ತಿಗಳಲ್ಲಿಯೇ ರೋಗಗಳು ಬರುವ ಸಂಭವ ಹೆಚ್ಚಾಗಿರುತ್ತದೆ. ಹಾಗಂತ ಡ್ರಗ್ ಸೇವಿಸುವವರಿಗೆ ಇದೆಲ್ಲಾ ಗೊತ್ತಿಲ್ಲವೆಂದಲ್ಲ. ಅವರು ತಮಗೆ ಗೊತ್ತಿಲ್ಲದಂತೇ ಆ ಜಾಲಕ್ಕೆ ಬಿದ್ದು ಪರಿಣಾಮಗಳೇನೇ ಇದ್ದರೂ ತಮ್ಮ ಮನಸನ್ನು ಕಂಟ್ರೋಲ್‌ ಮಾಡಿಕೊಳ್ಳಲಾಗದೇ ಬಳಲುತ್ತಿದ್ದಾರೆ. ಮಾನಸಿಕವಾಗಿಯೂ ದಿನದಿಂದ ದಿನಕ್ಕೆ ಕುಂದುತ್ತಿದ್ದಾರೆ. ಇನ್ನೂ  ಪ್ರೌಢವ್ಯವಸ್ಥೆಯಲ್ಲಿಯೇ ಅದರ ಕಡೆಗೆ ವಾಲುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಆದರೆ ಭವಿಷ್ಯದ ಕನಸುಗಳೆಲ್ಲಾ ಇನ್ನೊಂದು ಕಡೆಯಲ್ಲಿ ಚಿವುಟಿ ಹೋಗುವ ಸಂಭವಗಳು ಬಂದುಬಿಡುತ್ತದೆ.

ಡ್ರಗ್ ಸೇವಿಸಲು ಹಲವಾರು ಕಾರಣಗಳು ಇರುತ್ತದೆ: 

ಸ್ನೇಹಿತರ ಜೊತೆಗೂಡಿ: ಹೇ ಒಂದಿನ ಈ ಡ್ರಗ್‌ತೊಗೋ ಹೆಂಗಾಗತ್ತೆಗೊತ್ತಾ? ನೀ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದಂತ ಖುಷಿ ಸಿಗುತ್ತದೆಯೆಂಬ ಮಾತಿನಿಂದ ತಾನು ಹಾಳಾಗಿರೋದಲ್ಲದೇ ಬೇರೆಯವರನ್ನೂ ಆ ಜಗತ್ತಿಗೆ ಸೇರಿಸುವವರಿರುತ್ತಾರೆ..ಗುಂಪು ಗುಂಪಾದ ಸ್ನೇಹಿತರ ದಂಡಿನಲ್ಲಿ ಒತ್ತಾಯದ ಮೂಲಕವೂ ಡ್ರಗ್ ನ ಜಾಲಕ್ಕೆ ಪರಿಚಯಿಸುತ್ತಾರೆ.

ಪ್ರಬುದ್ಧತೆ ಇಲ್ಲದಿರುವುದು:- ಇನ್ನೂ ಟೀನ್ ವರುಷಗಳಾಗಿರುವುದರಿಂದ, ಯಾವುದು ತಪ್ಪು ಯಾವುದು ಸರಿ ಎಂಬ ಸಾಮಾನ್ಯ ಕಲ್ಪನೆಯೂ ಕೆಲವರಲ್ಲಿರುವುದಿಲ್ಲ. ಇದರ ಕಾರಣದಿಂದ ಯಾರೋ ಹೇಳಿದ್ದು ಕೇಳಿಯೋ, ಸುಲಭವಾಗಿ ಸಿಗುತ್ತದೆಯೆಂದೋ ಈ ಜಾಲದಲ್ಲಿ ಸೇರಿಕೊಳ್ಳುವವರು ಅನೇಕ ಮಂದಿ.

ಪಾಲಕರ ಬೇಜವಾಬ್ದಾರಿ: ಮನಃಶಾಸ್ತ್ರದ ಪ್ರಕಾರ ಮಾನಸಿಕವಾಗಿ ಯಾರು ಧೃಢತೆಯನ್ನು ಹೊಂದಿರುವುದಿಲ್ಲವೋ ಅವರು ಚಟಗಳತ್ತ ಸುಲಭವಾಗಿ ಜಾರುತ್ತಾರಂತೆ..ಪಾಲಕರ ಸಹಕಾರ ಯಾವುದೋ ಕನಸಿಗೆ ಸಿಗದಿರುವುದು, ಪಾಲಕರು ಮಕ್ಕಳನ್ನು ಚನ್ನಾಗಿ ನೋಡಿಕೊಳ್ಳದಿರುವುದೆಲ್ಲವೂ ಅವರ ಮನಸ್ಸನ್ನು ಮತ್ತಷ್ಟು ತೀಕ್ಷ್ಣಗೊಳಿಸುತ್ತ, ಬಲಹೀನನಾಗಿಸುತ್ತ ಹೋಗುತ್ತದೆ.

ಈ ಡ್ರಗ್ ಗಳಿಂದ ಸಂಬಂಧಿಕರು, ಒಳ್ಳೆಯ ಸ್ನೇಹಿತರೆಲ್ಲಾ ದೂರವಾಗುತ್ತಾ ಹೋಗುತ್ತಾರೆ.

ಇಷ್ಟಲ್ಲದೇ ಇನ್ನೂ ಹಲವಾರು ಜೀನ್ ಗಳೂ ಕಾರಣವಾಗುತ್ತದೆ. ಮನೆಯಲ್ಲಿ ಯಾರೋ ಸಾರಾಯಿ ಕುಡಿಯುತ್ತಾರೆಂದರೆ ಮಕ್ಕಳೂ ಅದರ ಮೇಲೆ ಆಕರ್ಷಿತವಾಗುವುದು ಸುಲಭ..

ದುಷ್ಪರಿಣಾಮಗಳಂತೂ ಒಂದೆರಡಲ್ಲ. ದೈ॒ಹಿಕವಾಗಿ ಹಾಗೂ ಮಾನಸಿಕವಾಗಿ ಖಾಯಿಲೆಗಳನ್ನು ಆಹ್ವಾನ ಮಾಡಿಕೊಂಡಂತೆಯೇ. .ಓದಿನಲ್ಲಿ ಆಸಕ್ತಿ ಕಡಿಮೆಯಾಗುತ್ತ ಬರುತ್ತದೆ..ಮಾನಸಿಕ ಸ್ಥಿರತೆಯಿರುವುದಿಲ್ಲ. ಮೆದುಳಿಗೆ ಸಂಬಂಧಿಸಿದ ಖಾಯಿಲೆಗಳಿಗೆ ಅಧಿಪತಿಯಾಗಬೇಕಾಗುತ್ತದೆ.. ಶಕ್ತಿಯು ಕುಂದುತ್ತಲ್ಲದೇ ಯಾವುದೇ ಒಳ್ಳೆಯ ಕೆಲಸದಲ್ಲಿ ಆಸಕ್ತಿಯರುವುದಿಲ್ಲ. ಹೃದಯದ ಖಾಯಿಲೆಗಳು, ರಕ್ತದೊತ್ತಡ, ಇನ್ಸೋಮಿಯಾ, ಇಫೋರಿಯಾದಂತಹ ಹಲವಾರು ಖಾಯಿಲೆಗಳು ಬರುತ್ತದೆ ಎಂದು ವೈದ್ಯಕೀಯ ಶಾಸ್ತ್ರವೇ ಹೇಳುತ್ತದೆ.. ಡ್ರಗ್ ಸೇವನೆ ಒಂದು ಚಟ ಮಾತ್ರಅಲ್ಲ.. ಅದು ಮನುಷ್ಯನನ್ನು ಚಟ್ಟಕ್ಕೆ ಒಯ್ಯುವ ಒಂದು ಮಾರ್ಗವೆಂದು ಹೇಳಿದರೆ ತಪ್ಪಾಗಲಾರದು..

ಅನೇಕ ಡ್ರಗ್ ಗಳನ್ನು ನಿಷೇಧಿಸಿದಾಗಲೂ ಅದು ಮತ್ತೆಯುವಜನತೆಯ ಕೈಗೆ ಸಿಗುತ್ತಿದೆಯೆಂದರೆ..ಅದನ್ನು ಪೂರೈಸುವವರುಯಾರು ಎಂಬ ಪ್ರಶ್ನೆಯು ಬಹುಶಃ ಎಷ್ಟೋ ವರುಷಗಳಿಂದ ಪ್ರಶ್ನೆಯಾಗಿಯೇ ಉಳಿದಿದೆ. .. ಅಷ್ಟು ಸುಲಭಕ್ಕೆ ಬೇಕಾಬಿಟ್ಟಿಯಾಗಿ ಸಿಗುವ ನಿಷೇಧಿತ ಡ್ರಗ್‌ಗಳ ಹಿಂದೆ ಎಷ್ಟು ದೊಡ್ಡಜಾಲವು ಹರಡಿಕೊಂಡಿದೆಯೋಯಾರಿಗೆಗೊತ್ತು??ಬಹುಶಃ ಎಷ್ಟೋ ಜನರುಇಂತಹದರಿಂದಲೇಜೀವನವನ್ನು ನಡೆಸುತ್ತಲೂಇರಬಹುದು..

ಬದುಕು ನಮ್ಮಿಷ್ಟದಂತೆಯೇ..ಎಷ್ಟೋ ಬಾರಿ ನಮ್ಮಿಷ್ಟದ ವಿರುದ್ಧವೂ ನಡೆಯುತ್ತದೆ..ದೇವರು ಹಲವಾರು ಬಾರಿ ಅವಕಾಶಗಳನ್ನೂ ಕೊಟ್ಟಿರುತ್ತಾನೆ..ಮಾಡುವ ಕೆಲಸ, ಓದು ಎಲ್ಲದರಲ್ಲಿಯೂ ಹೆಸರು ಗಳಿಸುವ ಗುರಿಯೂ ಇರುತ್ತದೆ..ಆದರೆ ಈ ಡ್ರಗ್ ಎಂಬ ಹಂತಕ ಎಲ್ಲವನ್ನೂ ನಾಶಮಾಡಿ ಬಿಡುತ್ತಾನಲ್ಲವೇ..? ಮತ್ತೆ ಮತ್ತೆ ಡ್ರಗ್ ಸೇವಿಸದಿರುವುದರ ಬಗೆಗೆ ಎಷ್ಟೋ ಕ್ಯಾಂಫ್‌ಗಳು ನಡೆದಿದೆ..ಎಲ್ಲವೂ ಹೌದಾದರೂ ಒಂದಷ್ಟು ಕ್ಷಣದ ಆನಂದಕ್ಕೆ, ದುಃಖ ಮರೆಯುತ್ತೇವೆಂಬ ಸುಳ್ಳು ನೆಪಕ್ಕೆ ಡ್ರಗ್ ಹಿಂದೆ ಹೋದ ಎಷ್ಟೋ ಜನ ಯುವಜನತೆಯ ಬದುಕು ಸಾರವನ್ನು ಕಳೆದುಕೊಂಡು ಸಪ್ಪೆಯಾಗಿ ಕಾಣಿಸದೇ ಉಳಿದೀತೆ??ಯಾವಯಾವ ವಯಸ್ಸಿಗೆ ನಮ್ಮ ಜವಾಬ್ದಾರಿಗಳು, ಕರ್ತವ್ಯಗಳು ಇರುತ್ತವೆಯೋ ಅದನ್ನು ಸರಿಯಾಗಿ ನಿಭಾಯಿಸುವುದು ಮುಖ್ಯ. ಇಲ್ಲ ಸಲ್ಲದ ಚಟಕ್ಕೆ ಬಲಿಯಾಗುವ ಮುಂಚೆ ಒಮ್ಮೆಯಾದರೂ ಯೋಚಿಸಲೇಬೇಕು. ಭವಿಷ್ಯತ್ತಿನ ಕನಸುಗಳನ್ನು, ನಮ್ಮ ಮೇಲೆಯೇ ನಿರೀಕ್ಷೆಗಳನ್ನು ಇಟ್ಟ ಅಪ್ಪ ಅಮ್ಮನನ್ನು, ಚಿಕ್ಕಂದಿನಲ್ಲಿ ಕಂಡ ಹಲವಾರು ಗುರಿಗಳನ್ನು,  ನಮ್ಮದೇ ಆದ, ನಾವು ಮಾಡಲೇಬೇಕಾದ ಕೆಲಸಗಳ ಸಂಖ್ಯೆ ತುಂಬಾ ಇದೆ. ಇದೆಲ್ಲವನ್ನೂ ಬಿಟ್ಟು ಡ್ರಗ್ ಎಂಬ ಸಾವಿನ ದಡದತ್ತ ಹೋಗದೇ ಇರುವುದು ಒಳ್ಳೆಯದು.

ಪದೇ ಪದೇ ಕಳೆದು ಹೋದ ಸಮಯಗಳು ಸಿಗಲಾರದು..ಎಂಜಾಯ್‌ಮೆಂಟ್ ಎಂಬ ಹೆಸರಿನಲ್ಲಿ ಮಾಡಿದ ಎಲ್ಲಾ ಕೆಲಸಗಳೂ ಅಲ್ಪತೃಪ್ತಿಯನ್ನು ನೀಡಬಲ್ಲುದೇ ವಿನಃ ಬದುಕಿಗೆ ಸ್ಪೂರ್ತಿಯನ್ನು ನೀಡಲಾರದು. ಮತ್ತೆ ಮತ್ತೆ ಅಂಟಿಕೊಂಡ ಚಟಗಳು ಹಿಂತಿರುಗಿ ಬರಲಾರದಷ್ಟು ಮುಂದೆ ಕರೆದುಕೊಂಡು ಹೋಗಿಬಿಡುತ್ತದೆ..ರೋಗಗಳಗೂಡನ್ನಾಗಿ ಮಾಡಲು ಹೊಂಚುಹಾಕಿರುತ್ತದೆ.. ಇರುವ ಮುಗ್ಧ ಜೀವನದಲಿ, ಗುರಿಯೊಂದು ಇರಲಿ.. ಪ್ರೀತಿ, ವಿಶ್ವಾಸಗಳು, ಕನಸುಗಳೆಲ್ಲಾ ನನಸಾಗಲಿ..ಡ್ರಗ್ ಎಂಬ ಮಹಾಭೂತವನ್ನು ಕನಸಿನಲ್ಲಿಯೂ ಎಣಿಸದಷ್ಟು ಎಷ್ಟೋ ಜನರು ಬದಲಾಗಲೇಬೇಕಾದ ಅನಿವಾರ್‍ಯತೆಗಳಿವೆ. .ಕಲ್ಲಿನ ಮೇಲೆ ಹೆಸರು ಬರೆಯುವುದು ಸ್ವಲ್ಪ ಕಷ್ಟವೇ..ಆದರೆ ಅದು ಶಾಶ್ವತವಾರಿತ್ತದೆ.. ಮರಳಿನ ಮೇಲೆ ಸುಲಭವಾಗಿ ಬರೆದ ಅಕ್ಷರಗಳಿಗಿಂತ.. ಕಷ್ಟವೋ, ಇಷ್ಟವೋ ಸಮಾಜದಲ್ಲಿ ಒಳ್ಳೆಯ ಪ್ರಜೆಯಾಗಿ ಬಾಳಲೇಬೇಕಲ್ಲವೇ..ಎಲ್ಲಾ ದುಷ್ಟ ಚಟಗಳಿಂದ ದೂರವಾಗಬೇಕು. ಸುಂದರ ಬದುಕಿನ ಪುಸ್ತಕದಲ್ಲಿ ಒಳ್ಳೆಯ ಅಕ್ಷರಗಳಿಗೆ ಮಾತ್ರ ಅವಕಾಶವಿರಬೇಕು..ಕಳೆದ ಎಲ್ಲಾ ದಿನಗಳೂ ಬದುಕಿನಾದ್ಯಂತ ಸಾರ್ಥಕದ ದಿನವಾದರೆ ಎಷ್ಟು ಚಂದಅಲ್ಲವೇ?? ಬದುಕೆಂಬ ಪುಸ್ತಕ..

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
Akhilesh Chipli
Akhilesh Chipli
9 years ago

ಯುವಜನತೆಗೊಂದು ಪಾಠ ಹೇಳುವಂತಿದೆ.

Raghavendra
Raghavendra
9 years ago

beautyful article…distributable.!

 

ವನಸುಮ
9 years ago

ಉತ್ತಮ ಬರಹ. ಯುವ ಜನತೆಗೆ ಉತ್ತಮ ಸಂದೇಶವನ್ನ ನೀಡಿದ್ದೀರ. ಡ್ರಗ್ಸ್ ನಿರ್ಮೂಲನೆಗೆ ಸರಕಾರ ಕಠಿಣ ಕ್ರಮಗಳನ್ನು ಕೈಗೊಂಡರೆ ಇನೂ ಉತ್ತಮ ಅಲ್ಲವೇ?

ಆಶಯ ಹಿಡಿಸಿತು.

ಶುಭವಾಗಲಿ.

prashasti.p
9 years ago

ಚೆನ್ನಾಗಿ ಬರದ್ದೆ ಪದ್ಮಾ.. ಒಂದೊಳ್ಳೇ ಸಂದೇಶ ಕೊಡೋ ಲೇಖನ

4
0
Would love your thoughts, please comment.x
()
x