ಹ್ಹೋ.. ಏನು ..?: ಅನಿತಾ ನರೇಶ್ ಮಂಚಿ


ನಾಯಿ ಬೊಗಳುವ ಸದ್ದಿಗೆ ಒಬ್ಬೊಬ್ಬರಾಗಿ ಹೊರ ನಡೆದ ನಮ್ಮ ಮನೆಯ ಸದಸ್ಯರು ಯಾರೊಂದಿಗೋ ಏನು ? ಏನು? ಎಂದು ವಿಚಾರಿಸುತ್ತಿರುವುದು ಕೇಳಿಸಿತು. ಮಧ್ಯಾಹ್ನದ ಊಟದ ಸಿದ್ದತೆಯಲ್ಲಿದ್ದ ನಾನು ಯಾರಿರಬಹುದು ಎಂಬ ಕುತೂಹಲದಲ್ಲಿ ಹೊರಗೆ ದೃಷ್ಟಿ ಹಾಯಿಸಿದೆ. ಅರ್ರೇ .. ನಮ್ಮ ಪ್ರೀತಿಯ ಗೌರತ್ತೆ.. ಅದೂ ಕೊಡಗಿನ  ಕಾವೇರಿಯ ಉಗಮಸ್ಥಾನದಿಂದ  ಮೊದಲ ಬಾರಿಗೆ ನಮ್ಮನೆಗೆ ಬರುತ್ತಾ ಇರುವುದು. ನಾವೆಲ್ಲಾ ಅವರ ಮನೆಗೆ ಹೋಗಿ ದಿನಗಟ್ಟಲೆ ಟೆಂಟ್ ಊರುತ್ತಿದ್ದೆವು. ಸ್ವಲ್ಪವೂ ಬೇಸರಿಸಿಕೊಳ್ಳದೇ ಉಪಚಾರ ಮಾಡಿ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು.  ಅಲ್ಲಿಂದ ಮರಳುವಾಗ ’ಇನ್ನೊಮ್ಮೆ ಪುರುಸೋತ್ತಲ್ಲಿ ಬನ್ನಿ .. ಈ ಸಲ ನೀವು ಇದ್ದಿದ್ದು ಇದ್ದ ಹಾಗೇ ಅನಿಸಲಿಲ್ಲ ನೋಡಿ..’ ಅಂತ ಅನ್ನಿಸಿಕೊಂಡು ಬರುತ್ತಿದ್ದೆವು. ಅದೇ ನಾವುಗಳು ’ಅವರನ್ನು ಮನೆಗೆ ಬನ್ನಿ ಅತ್ತೇ’ ಅಂತ ಕರೆದರೆ, ಅವರ ಕಾಫಿ ತೋಟದ ಮುನ್ನೂರೆಂಟು ಕೆಲಸಗಳು ಅವರ ಕಾಲಿಗೆ ತೊಡರಿಕೊಂಡು ಬಿಡುತ್ತಿದ್ದವು. ಅವರ ಮನೆಯ ಜವಾಬ್ಧಾರಿಗಳು ಅವರನ್ನು ಎಲ್ಲಿಗೂ ಹೊರಡಲು ಬಿಡುತ್ತಿರಲಿಲ್ಲ. ಎಲ್ಲರಿಗೂ ಅವರು ಆತ್ಮೀಯರಾಗುವುದಕ್ಕೆ ಕಾರಣ ಅವರ ಮಾತುಗಳು.. ಹಿರಿ ಕಿರಿ ಎಂಬ ಭೇದವಿಲ್ಲದೆ ಎಲ್ಲರನ್ನೂ ಮಾತಿನ ಮೋಡಿಯಲ್ಲಿ ಮರುಳು ಮಾಡುವ ಅವರೊಡನಾಟವೇ ಒಂದು ಹಬ್ಬದಂತೆ. 

ನಮ್ಮನ್ನೆಲ್ಲಾ ಪ್ರೀತಿಯ ಸಿಂಚನದಿಂದ ತೋಯಿಸುತ್ತಿದ್ದ ಗೌರತ್ತೆ ನಮ್ಮ ಅಂಗಳದಲ್ಲಿ ಪ್ರತ್ಯಕ್ಷವಾದದ್ದನ್ನು  ಕಂಡು ಖುಶಿಯಿಂದ  ಹೋ ! ಏನತ್ತೆ ಅಂತ ಕೇಳಿದೆ.ಮೊದಲೇ ಸಪ್ಪಗಾದಂತಿದ್ದ ಅವರ ಮೊಗ ಇನ್ನೂ ಸಪ್ಪಗಾಗಿ ಏನನ್ನೋ ಗೊಣಗಿದಂತೆ ನುಡಿದು ಮೌನವಾದರು. ಮತ್ತೆ ಅವರನ್ನು ಕುಳ್ಳಿರಿಸಿ ಆದರಾತಿಥ್ಯದ  ಎಲ್ಲಾ ಕ್ರಮಗಳನ್ನು ಒಂದೊಂದಾಗಿ ಅನುಸರಿಸುತ್ತಾ ನಡೆದಂತೆ ಅವರ ಬಾಡಿದ ಮೊಗ ಮೆಲ್ಲನೆ ಅರಳತೊಡಗಿತು. ಅವರು ನಮ್ಮ ಮನೆಯಿಂದ ಹೊರಡುವವರೆಗೂ ಮೌನಕ್ಕೆ ನೋ ಎಂಟ್ರಿ ಬೋರ್ಡ್ ಹಾಕಿ ಮಾತಾಡಿದ್ದೇ ಮಾತಾಡಿದ್ದು. 
        
ಹಳೆಯ ಹೊಸ ನೆನಪುಗಳ ಮೇಳ ಒಂದೊಂದಾಗಿ ಮೆರವಣಿಗೆ ಹೊರಟು ಮತ್ತೆ ನೆನಪುಗಳಾಗಿ ಮನದೊಳಗೆ ಅಲಂಕರಿಸಿಕೊಳ್ಳುತ್ತಿದ್ದವು ರಾತ್ರಿ ಹಗಲೆನ್ನದೆ.  ಆದರೆ  ಈ ಕಾಲ ಅನ್ನೋದು ಒಂದು ಇದೆ ನೋಡಿ ಅದು ಶತ್ರುವಿನಂತೆ ನಮ್ಮ ನಡುವೆ ನುಸುಳಿ ಅವರು ಹೊರಡಲೇಬೇಕಾದ ಅನಿವಾರ್ಯವನ್ನು ಸೃಷ್ಟಿಸಿಯೇ ಬಿಟ್ಟಿತು. ಮನೆಯ ದೊಡ್ಡ ಗೇಟಿನವರೆಗೆ ಅವರನ್ನು ಬಿಟ್ಟು ಬರಲು ನಾನು ಹಿಂಬಾಲಿಸಿದೆ. ’ನೀನ್ಯಾಕಮ್ಮ ಈ ಬಿಸ್ಲಲ್ಲಿ.. ನಾನು ಹೋಗ್ತೀನಿ  ದಾರಿ ಗೊತ್ತಿದೆ ಬಿಡು’ ಎಂದರು. ನಾನು ಸೀರಿಯಸ್ಸಾಗಿ ’ಹೌದು ಅತ್ತೇ ಮತ್ತೆ ನೀವು ತಿರುಗಿ ಬರದಿರಲಿ ಅಂತ ಬಸ್ಸು ಹತ್ತಿ ಹೋಗಿದ್ದು ಕನ್‌ಫರ್ಮ್ ಮಾಡಕ್ಕೆ ನಾನು ಬರ್ತಾ ಇರೋದು’ ಅಂದೆ. ’ಹೋ.. ಹೌದಾ ಸರಿ ಹಾಗಿದ್ರೆ ನನ್ನ ಮನೆಯವರೆಗೂ ಬಂದು ಬಿಡು.. ಅರ್ಧ ದಾರಿಯಲ್ಲಿ ಇಳಿದು ನಾನು ತಿರುಗಿ ಬಂದರೆ’  ಎಂದು ನನ್ನ  ತಲೆಗೆ ಮೊಟಕುತ್ತಾ ಮಾತು ಮುಂದುವರಿಸಿದರು. 

’ಒಂದು ಮಾತು ಕೇಳ್ತೀನಮ್ಮ ಬೇಸರ ಮಾಡ್ಬೇಡ.. ನೋಡು ನಾನೇನು ಹೊರಗಿನವಳಲ್ಲ.. ಹಾಗಾಗಿ ನೇರವಾಗಿ ಹೇಳಬಲ್ಲೆ .. ಮೊನ್ನೆ ನಾನು ನಿಮ್ಮ ಮನೆಗೆ ಕಾಲಿಟ್ಟಂತೇ ಎಲ್ಲರೂ ನನ್ನನ್ನು ಏನು ಅಂತ ಕೇಳಿದಿರಲ್ಲಾ.. ಇದಕ್ಕೇನಂತ ಉತ್ತರ ಹೇಳೋದು? ಬಂದದ್ದು ಏನು ಅಂತ ತಾನೇ ನಿಮ್ಮ ಮಾತಿನ ಅರ್ಥ.. ನಿಮ್ಮನ್ನೆಲ್ಲಾ ನೋಡಿ ಮಾತಾಡಿಸಬೇಕು ಅಂತಾಯ್ತು ಅದಕ್ಕೆ ಬಂದೆ ಬಿಡು. ಮೊದಲೇ ಹೇಳಿ ಬರಲಿಲ್ಲ ಅನ್ನೋದಕ್ಕೆ ಎಲ್ಲರೂ ಬಂದು  ಬಂದು ಏನು ಏನು ಅಂತ ಕೇಳಿದ್ರಲ್ಲಾ ನಂಗೆಷ್ಟು ಬೇಸರ ಆಯ್ತು ಗೊತ್ತಾ’ ಅಂದರು. 

ನಾನು ಅವರ ಜೊತೆ ಹೆಜ್ಜೆ ಹಾಕುತ್ತಲೇ ಜೋರಾಗಿ ನಗತೊಡಗಿದೆ. ’ಅಯ್ಯೋ ಅತ್ತೆ ಅದು ನಮ್ಮ ಕರಾವಳಿಯವರ ಸಂಪ್ರದಾಯ. ಮನೆಗೆ ಬಂದವರನ್ನು ಸ್ವಾಗತಿಸುವ ಪರಿ. ಅದರ ಬಗ್ಗೆ  ನಿಮ್ಗೊಂದು ಗಮ್ಮತ್ತು ಹೇಳ್ತೀನಿ ಕೇಳಿ. ನಾನು ಈ ಮನೆಗೆ ಮದುವೆಯಾಗಿ ಬಂದ ಹೊಸತು. ಮನೆಗೆ ಬರುವ ಗಂಡನ ಕಡೆಯ ನೆಂಟರೆಲ್ಲಿ ಕೆಲವು ಜನರು ಪರಿಚಿತರು ಅನ್ನೋದು ಬಿಟ್ರೆ ಹೆಚ್ಚಿನವರು ನನಗೆ ಅಪರಿಚಿತರು. ಅಂತಹವರು ಯಾರಾದ್ರು ಮನೆಗೆ ಭೇಟಿ ಕೊಟ್ಟಾಗ ನಾನು ಅವರಿಗೆ ನಮಸ್ಕಾರ ಹೇಳಿ ಕುಳಿತುಕೊಳ್ಳಲು ಆಸನ ತೋರಿಸಿ  ಬನ್ನಿ ಕೂತ್ಕೊಳ್ಳಿ ಅಂತಾ ಇದ್ದೆ. ಅವರ ಮೊಗದಲ್ಲಿ ಮೂಡುವ ಅಪ್ರಸನ್ನತೆಯ ಭಾವ ನನಗೆ ಅರ್ಥವಾಗುತ್ತಲೇ ಇರಲಿಲ್ಲ. ಇಷ್ಟೇ ಅಲ್ಲ  ನಾನು ಬೇರೆ ಮನೆಗಳಿಗೆ ಹೋದ ತಕ್ಷಣ ಅವರು ಏನು ಅಂತ ಕೇಳಿದರೆ ನಾನು ಬಿಗುವಿನಿಂದಲೇ ಏನಿಲ್ಲ ಅಂತ ಉತ್ತರಿಸುತ್ತಿದ್ದೆ. ಇದನ್ನು ಗಮನಿಸಿದ ನನ್ನತ್ತೆ ಒಂದು ದಿನ ನನ್ನ ಹತ್ರ ನೋಡಮ್ಮಾ.. ಮನೆಗೆ ಯಾರೇ ಬಂದರೂ ಏನು ಅಂತ  ಕೇಳುವುದು ನಮ್ಮ ಕರ್ತವ್ಯ. ಅವರು ನಿನಗೆ ಪರಿಚಿತರೋ ಅಪರಿಚಿತರೋ ಅನ್ನುವ ಪ್ರಶ್ನೆ ಮತ್ತೆ. ಬೇರೆ ಮನೆಗೆ ಹೋದಾಗ ಯಾರಾದ್ರು ನಿನ್ನನ್ನು ಹಾಗೆ ಕೇಳಿದರೆ ಏನಿಲ್ಲ ಅಂತ ಹೇಳಬಾರದು ’ಒಳ್ಳೇದು’ ಅಂತ ಹೇಳಬೇಕು ಅಂದರು. ಆಗಲೇ ನಂಗೆ ಗೊತ್ತಾಗಿದ್ದು ಈ ಏನು ಎನ್ನುವ ಪ್ರಶ್ನೆಗೆ ಒಳ್ಳೇದು ಎನ್ನುವ ಉತ್ತರ. ಇವೆರಡೂ ಅರ್ಥವಿಲ್ಲದವುಗಳಂತೆ ಕಂಡರೂ ಸ್ವಾಗತಿಸುವ, ಮಾತಿಗೆ ಶುರು ಮಾಡುವ ಒಂದು ಪದ್ಧತಿ ಅಂತ.. ಈಗ ಹೇಳಿ ನೋಡುವಾ ಏನು ಅಂತ ಕೇಳಿದ್ರೆ ನೀವು ಹೇಳಬೇಕಾಗಿದ್ದ ಉತ್ತರ..’ ಎಂದೆ. 

’ಹ್ಹೋ .. ಹೌದೇನೇ.. ಇದಂತೂ ನನಗೆ ಹೊಸತು.. ನಾನೂ ಕೂಡಾ ನಿನ್ನ ತರವೇ ಮೊನ್ನೆ ನಿಮ್ಮ ಮನೆಯರೆಲ್ಲಾ ಏನು ಅಂತ ವಿಚಾರಿಸುವಾಗ ಬೇಸರಗೊಂಡಿದ್ದು ತಪ್ಪು ಅಂತ ಈಗ ಗೊತ್ತಾಯ್ತು. ಮನುಷ್ಯನಿಗೆ ಕಲಿತು ಮುಗಿಯೋದು ಅಂತ ಇಲ್ಲವಲ್ಲಾ.. ಇದೊಂದು ಹೊಸ ಕಲಿಕೆ ನನಗೆ’ ಅಂತಾ ಹೇಳ್ತಾ ಇರುವಾಗಲೇ ಅವರು ಹೋಗಬೇಕಾಗಿದ್ದ ಬಸ್ಸು  ಬಂದು ಅವರನ್ನು ಏರಿಸಿಕೊಂಡು ಹೋಯಿತು.

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

9 Comments
Oldest
Newest Most Voted
Inline Feedbacks
View all comments
Arathi ghatikar
Arathi ghatikar
9 years ago

Chennagide baraha. 🙂 ho enu  andre gothyathu !

amardeep.p.s.
amardeep.p.s.
9 years ago

like it……

ಕೆಲವು ಭಾಗದ ಸ್ಠಳಗಳ ರೂಢೀ ಕ್ರಮ ಇದ್ದದ್ದನ್ನು ಇದ್ದಹಾಗೆ ಅದನ್ನು ಒಪ್ಪಿಕೊಂಡು ಬಿಡಬೇಕು…ಹೊಸಬರಿಗೆ ಈ ರೀತಿ ಮುಜುಗರವಾಗೋದು ಸಹಜ.  ಆದರೆ ನಿಮ್ಮ ರೀತಿ ಅವರಿಗೆ ತಿಳಿಸಿ ಹೇಳಿದರೆ ತಾನೆ?  ಅವರಿಗೂ ಆಯಾಯ ಪರಿಸರದ, ವಾತಾವರಣದ ರೂಢಿಗಳು ಗೊತ್ತಾಗುತ್ತವೆ….. ಒಂದು ತಮಾಷೆ ಹೇಳ್ತೀನಿ ಕೇಳಿ…. ನಮ್ಮ ಕಡೆ ತೀರ ಆತ್ಮೀಯರಿಗೆ, ಓರಗೆಯವರಿಗೆ ಊಟ, ತಿಂಡಿ ಏನ್ ತಗೋತೀರಿ ಅಂಥ ಕೇಳೋದನ್ನೇ "ಹೊಟ್ಟೆಗೇನ್ ತಿಂತಿ "? ಅಂತಾನೂ ಕೇಳಿ ಕಾಡುವುದು ಇದೆ……

mamatha keelar
mamatha keelar
9 years ago

ಹೌದು ನಾನೂ ಇಂತ ಪರಿಸ್ಥಿತಿ ಎದುರಿಸಿದ್ದೇನೆ…ನಮ್ಮ ಕಡೆ ಯಾರಾದರೂ ಮನೆಗೆ ಬಂದರೆ ಆರಾಮಾ ಅಂತ ಕೇಳ್ತಿವಿ..ಆದರೆ ಗಂಡನ ಮನೆಯಲ್ಲಿ ಏನು ಅಂತ ಕೇಳ್ತಾರೆ ಮೊದಲು ನನಗು ತುಂಬಾ ಮುಜುಗರ ಅನಸ್ತಿತ್ತು ಇವರೆಲ್ಲ ಯಾಕೆ ಏನು ಕೇಳ್ತಾರೆ ಅಂತ..ಈಗ ಗೊತ್ತಾಗಿದೆ…:)

pramod
pramod
9 years ago

ನಾನು ಅಲ್ಲಿಯವನಲ್ಲ, ಆದರೂ ಇದು ನನ್ನ ಅನಿಸಿಕೆ. ದಕ್ಷಿಣ ಕನ್ನಡ ಸಮೃದ್ದವಾದ ನೆಲ, a land gifted with natural resources. ಜನರು ಕಸ್ಟ ಪಡುವವರು. Naturally with all this people are more educated and liberal. They are also self sufficient and donot have to depend on each other unless required for mutual monitory growth. They are also progressive and forward looking. A natural characteristic of this kind of society (any similar society like US) is it creates nuclear families/ nuclear joint families (i use this term assuming dakshina kannada has such families) where unless required (for some reason which has real quantifiable value addition in terms of money/knowledge) they donot expect to meet each other. This is the case where they may ask 'enu bandiddu'. Hope you understand that i am not being critical here. It is just a nature of societies according to economic freedom.

Anitha Naresh Manchi
Anitha Naresh Manchi
9 years ago
Reply to  pramod

ಪ್ರಮೋದ್ ಅವರೇ.. ದ.ಕ ದ ಪ್ರಾದೇಶಿಕ ಭಾಷೆ ತುಳು.. ಅದರಲ್ಲಿ ಮನೆಗೆ ಬಂದವರನ್ನಾಗಲಿ, ದಾರಿಯಲ್ಲಿ ಸಿಕ್ಕಿದ ಪರಿಚಿತರನ್ನಾಗಲೀ ಮೊದಲು ಮಾತನಾಡಿಸಲು ಬಳಸುವ ಶಬ್ಧ ಎಂದರೆ ;ದಾನೆ'  ( ಏನು) ಅದಕ್ಕೆ ಉತ್ತರ ಎಡ್ಡೆ.. ( ಒಳ್ಳೇದು)

ಅಂದರೆ ಏನು ಮತ್ತು ಒಳ್ಳೆಯದು ಎಂಬುದು  ದ. ಕ. ದವರ ಸುಸಂಸ್ಕೃತ ಮನದ ಕನ್ನಡಿ. ಏನು ಎಂಬ ಧ್ವನಿಯಲ್ಲಿಯೇ ನೀವು ಹೇಗಿದ್ದೀರಿ, ಕುಶಲವೇ ಎಂಬ ಅರ್ಥವಿದ್ದರೆ ಒಳ್ಳೇದು ಎಂಬುದರಲ್ಲಿ ತನ್ನ ಕ್ಷೇಮದ ಜೊತೆಗೆ ಎದುರಿನವರ ಶುಭವನ್ನು ಬಯಸುವ ಸಂದೇಶವಿದೆ. 

pramod
pramod
9 years ago

The comment should have been a reply to anitharava comment. so pasting again.

ಅದು ಹಿಂದಿನಿಂದ ಬಂದ ಸಂಸ್ಕೃತಿ ಆಗಿದ್ದ್ರೆ ಅದು ಸರಿಯಾಗಿದೆ. ಆತರ ಮಾತ್ನಾಡುವ ಪರಿ ಹೇಗೆ ಬಂತು ಅಂತ ಯೋಚಿಸುತ್ತೇನೆ. without setting the context, 'enu' is the first word that is asked to people, there must be a good reason for that kind of start. Was it because people were living in very remote areas (deep inside forests having arecanut farms) and they are not expected to meet each  other unless for a very strong reason? (like in novel 'doorada betta'? by karanth). If there is a person coming to your house who is not from D.K, the same words are used which gives a different meaning. Do you agree on some part of what i told in my first comment? (it happens even in bangalore where there are more nuclear upper middle clas families). Every culture keeps on taking shape according to economic statuses during different times. A person in raichur( i am not from that place just giving an example. I am from bangalore, father from shimogga) may actually come all the way with her aunt till the bus stop to see her go (aunt has come alone)

kavitha n s
kavitha n s
9 years ago
Reply to  pramod

ಪ್ರಮೋದ್  ಅವರೇ, ಕಾರಂತರು 'ಬೆಟ್ಟದ ಜೀವ' ಕಾದಂಬರಿ ಬರೆದಿದ್ದಾರೆ .ಈ 'ದೂರದ ಬೆಟ್ಟ' ಯಾವುದು ತಿಳಿಸಿದರೆ 'ಒಳ್ಳೇದು ' ಮಾರಾರ್ಯೇ 

pramod
pramod
9 years ago
Reply to  kavitha n s

kavitha avare yes it is 'bettada jeeva' not doorada betta. My apologies for wrongly saying that. I recently started reading few novels (very less) and i did not have the habit of reading novels and hence you see the mistake. Here the context was not novel and i kind of overlooked it…Thanks for reading the comment

pramod
pramod
9 years ago

ಅದು ಹಿಂದಿನಿಂದ ಬಂದ ಸಂಸ್ಕೃತಿ ಆಗಿದ್ದ್ರೆ ಅದು ಸರಿಯಾಗಿದೆ. ಆತರ ಮಾತ್ನಾಡುವ ಪರಿ ಹೇಗೆ ಬಂತು ಅಂತ ಯೋಚಿಸುತ್ತೇನೆ. without setting the context, 'enu' is the first word that is asked to people, there must be a good reason for that kind of start. Was it because people were living in very remote areas (deep inside forests having arecanut farms) and they are not expected to meet each  other unless for a very strong reason? (like in novel 'doorada betta'? by karanth). If there is a person coming to your house who is not from D.K, the same words are used which gives a different meaning. Do you agree on some part of what i told in my first comment? (it happens even in bangalore where there are more nuclear upper middle clas families). Every culture keeps on taking shape according to economic statuses during different times. A person in raichur( i am not from that place just giving an example. I am from bangalore, father from shimogga) may actually come all the way with her aunt till the bus stop to see her go (aunt has come alone)

9
0
Would love your thoughts, please comment.x
()
x