ಡುಂಡಿ ಅರಣ್ಯಕನೊಬ್ಬ ಗಣಪತಿಯಾದ ಕಥೆ: ಮಂಜು ಅರ್ಕಾವತಿ


ಸುರರು ಹರಸಲೆಂದು ನಾನು ಕರಗಳೆತ್ತಿ ಬೇಡಿದೆ.

ಅಸುರರು ಕೈಹಿಡಿದು ನನ್ನ ಜತನದಿ ಕಾಪಾಡಿದರು

ಕಾಣದೆಲ್ಲೋ ಅವಿತಿರುವ ದೇವರುಗಳ ವಂದಿಸಿದೆ

ಎದುರಿರುವ ನನ್ನಂತಹ ನರರುಗಳನೇ ನಿಂದಿಸಿದೆ

ದೇವರುಗಳನು ಮಾಡಲು ಹೋದೆ ಅತಿಸನ್ಮಾನ

ನನ್ನ ನಾನು ಮಾಡಿಕೊಂಡಿದ್ದು ಅತಿ ಅವಮಾನ

ಸಾಕಿನ್ನು ಬೇಡುವ, ಕಾಡುವ ವ್ಯರ್ಥ ಕೆಲಸಗಳು

ಜೋಡಣೆಯಾಗಲಿ ಹರಿದಿರುವ ಬದುಕುಗಳು 

ತಾನು ಪೂಜಿಸಿದ ಆರ್ಯರ ಪಡೆಯಿಂದ ಸಾವಿನಂಚಿಗೆ ಹೋಗಿ ಡುಂಡಿಯ ಗಣದಿಂದ ಕಾಪಾಡಲ್ಪಟ್ಟ ಯಾಜ್ಞಿಕನ ನುಡಿ. 

ಶಂಬರನೆನ್ನುವ ಅರಣ್ಯಕನೊಬ್ಬ ಯಾಜ್ಞಿಕನೆಂಬ ಭ್ರಾಹ್ಮಣನೊಬ್ಬನ ಜೊತೆ ಮರಣ ಶಯ್ಯೆಯಲ್ಲಿರುವ ಡುಂಡಿಯನ್ನು ನೋಡಲು ಹೊರಡುತ್ತಾನೆ ದಾರಿಯಲ್ಲಿ ಡುಂಡಿ ಗಣಪತಿಯ ಗುರು ವದೀರಜ್ಜನ ತಂಡ  ಸಿಗುತ್ತದೆ ಆ ಪ್ರಯಾಣದ ಮದ್ಯೆ ಶಂಬರನಿಗೆ ವದೀರಜ್ಜ ತನ್ನ ಡುಂಡಿ “ಗಣಪತಿ”ಯಾದ ಕಥೆಯನ್ನು ವಿಸ್ತಾರವಾಗಿ ಹೇಳುತ್ತಾ ಹೋಗುವುದೇ ಡುಂಡಿ ಕಥೆ 

ನಾನು ಬಿ.ಎ ಪ್ರಾಚೀನ ಭಾರತದ ಇತಿಹಾಸ ಓದಬೇಕಾದ್ರೆ ಅಲ್ಲಿ ಮೊದಲ ಮೂರು ಪುಟಗಳಲ್ಲಿ ನಮ್ಮಲ್ಲಿದ್ದ ಗಣ ಪದ್ದತಿಯ ಬಗ್ಗೆ ಓದಿದ್ದೆ ನಮ್ಮಲ್ಲಿ ಪ್ರಾಚೀನ ಕಾಲದಲ್ಲಿ ಇಲ್ಲಿದ್ದ ದ್ರಾವಿಡ ಜನಾಂಗಗಳೆಲ್ಲಾ ಗಣಗಳಾಗಿ ವಿಗಂಡನೆಯಾಗಿದ್ದವು ಪ್ರತಿಯೊಂದು ಗಣಕ್ಕೂ ತನ್ನದೇ ಆದ ನಾಯಕನಿದ್ದ ಅವನನ್ನು ಗಣಪತಿ ಅಂತ ಕರೆಯುತ್ತಿದ್ದರು, ಗಣಪತಿ ಅಂದ್ರೆ ಹೆಸರಲ್ಲ ಅದು ಪದವಿ ಹಲವಾರು ಗಣಗಳಿಗೆ ಅದಿಪತಿಯಾದವನಿಗೆ ಮಹಾಗಣಪತಿ ಎನ್ನುತ್ತಿದ್ದರು, ಹಾಗೆ ಡುಂಡಿ ಇದ್ದ ವಯನದ ಕಾಡು ಕೂಡ ಒಂದು ಗಣವಾಗಿತ್ತು ಅಲ್ಲಿ ಡುಂಡಿ ತನ್ನ ಪರಿವಾರದೊಂದಿಗೆ ಬದುಕುತ್ತಿರುತ್ತಾನೆ  ಡುಂಡಿಯ ತಾಯಿ ಮಾಲಿನಿ ಡುಂಡಿಗೆ ಜನ್ಮ ಕೊಟ್ಟು ಸತ್ತಿರುತ್ತಾಳೆ.

ಅಮ್ಮನನ್ನು ಕಳೆದುಕೊಂಡ ಡುಂಡಿ ವದೀರಜ್ಜನ ಜೊತೆ ಇರುತ್ತಾನೆ ಡುಂಡಿಗೆ 12 ವರ್ಷ ವಯಸಿದ್ದಾಗ ಇವರಿದ್ದ ಕಾಡಿನಲ್ಲಿ ಋಷಿಗಳಿಗೆ ಯಾಗಗಳನ್ನು ಮಾಡಲು ಜಾಗ ಮಾಡಿಕೊಡಬೇಕು ಅಂತ ವಯನದ ರಾಜನ ಸೈನಿಕರು ಅವರ ಕಾಡನ್ನು ಸುಟ್ಟುಹಾಕಲು ಬಂದಾಗ ಅಲ್ಲಿದ್ದ ಜನರಿಗೂ ಮತ್ತು ಸೈನಿಕರಿಗೂ ಸಂಘರ್ಷವಾಗುತ್ತದೆ. ಅದೇ ಸಂದರ್ಭದಲ್ಲಿ ತನ್ನನ್ನು ಕೆಣಕಿದ ಸೇನಾದಿಪತಿಗೆ 12 ವರ್ಷದ ಡುಂಡಿ ಕಲ್ಲಿನಲ್ಲಿ ಒಡೆಯುತ್ತಾನೆ. ಇಲ್ಲಿಂದ ನಿರಂತರವಾಗಿ ಸಂಘರ್ಷ ಶುರುವಾಗುತ್ತದೆ.

ಮುಂದೆ ಸೋಮನಾಥದಲ್ಲಿ ನಡೆಯುತ್ತಿದ್ದ ಕ್ಷಾತ್ರ ಪಂದ್ಯಗಳನ್ನು ನೋಡಲು ಮಿತ ಮತ್ತು ವದೀರಜ್ಜನ ಜೊತೆ ಹೊಗುತ್ತಾನೆ. ಅಲ್ಲಿಗೆ ಬಂದ ಪಾರ್ವತಿಯ ಆಪ್ತ ಸಖಿ ಧನು ಡುಂಡಿಗೆ ಮತ್ತು ಮಿತನಿಗೆ ಆಚಾರಿಗೆ ಹೇಳಿ ಒಂದೊಂದು ಕೊಡಲಿ ಕೊಡಿಸುತ್ತಾಳೆ, ಆಚಾರಿ ಇದನ್ನು ಮೊದಲು ಯಾವುದರ ಮೇಲೆ ಪ್ರಯೋಗಿಸುತ್ತೀರೋ ಅದೇ ಕಡೆಯವರೆಗೂ ಮುಂದುವರೆಯುತ್ತೆ ಅಂತ ಹೆಳ್ತಾನೆ. ಮಿತ ಒಂದು ದೊಡ್ಡ ದಿಮ್ಮಿಯನ್ನು ಉರುಳಿಸಿದರೆ. ಡುಂಡಿ ಹಾಗೆ ಇರುತ್ತಾನೆ. ನಂತರ ನಡೆಯುವ ಪಂದ್ಯದಲ್ಲಿ ಮಿತನನ್ನು ಮೋಸದಿಂದ ಸಾಯುವಂತೆ ಮಾಡುತ್ತಾರೆ, ವದೀರಜ್ಜ ರಾಜನಿಗೆ ಹೇಳಲು ಹೋದಾಗ ಕೇಳದೇ ಹೋದಾಗ ವದೀರಜ್ಜ ನಿನಗೆ ಸರಿ ಎನಿಸಿದ್ದನ್ನು ಮಾಡು ಅಂತ ಹೇಳ್ತಾನೆ. ಅಷ್ಟು ಹೇಳೋದನ್ನೆ ಕಾಯುತ್ತಿದ್ದ ಡುಂಡಿ ಮಿತನ ಸಾವಿಗೆ ಕಾರಣವಾದ ರಾಜನ ಮಕ್ಕಳಿಬ್ಬರನ್ನು ಕೊಡಲಿಯಿಂದ ಕತ್ತರಿಸಿ ಹಾಕುತ್ತಾನೆ.

 ಪ್ರತಿಯೊಂದು ಅನ್ಯಾಯವನ್ನು ವಿರೋಧಿಸಿ ಭಂಡಾಯ ನಾಯಕನಾಗಿ ಬೆಳೆಯ ತೊಡಗುವ ಡುಂಡಿಯನ್ನು ಶಿಕ್ಷಿಸಿ ಅಂತ ರುದ್ರನ ಹತ್ತಿರ ದೂರು ತಗೊಂಡು ಹೊದ ದೇವತೆಗಳು ರುದ್ರನಿಂದ ಉಗಿಸಿಕೊಂಡು ಪಾರ್ವತಿಯ ಹತ್ತಿರ ಸುಳ್ಳು ಸುಳ್ಳು ದೂರು ನೀಡುತ್ತಾರೆ, ಪಾರ್ವತಿಯ ಶಕ್ತಿಗಣದಿಂದ ಡುಂಡಿಯ ಬಂಧನಮಾಡಿಸುತ್ತಾಳೆ. ಆದ್ರೆ ಪಾರ್ವತಿಗೆ ತನ್ನ ಗೆಳತಿಯ ಮಗನೇ ಡುಂಡಿ ಎಂಬ ಸತ್ಯ ತಿಳಿದು ದತ್ತು ಪುತ್ರನಾಗಿ ಸ್ವೀಕರಿಸಿ ಗುಣೇಶ ಅಂತ ಹೆಸರನ್ನು ಇಡುತ್ತಾಳೆ. 

ಜೊತೆಗೆ ರುದ್ರ ಪಾರ್ವತಿಯ ಸಂಭೋಗ ಸಮಯದಲ್ಲಿ ಬೀಜ ಕೊಡದೇ ಇಡೀ ಜಗತ್ತಿಗೆ ನಾನೆ ತಂದೆ ನೀನೆ ತಾಯಿ ಹಾಗಿರಬೇಕಾದ್ರೆ ನಮಗೆ ಪ್ರತ್ಯೇಕ ಮಕ್ಕಳೇಕೆ ಅಂತ ತಿಳಿ ಹೇಳೋದು. ಮುಂದೆ ಪಾರ್ವತಿ ಅಶೋಕ ಗಿಡವನ್ನೇ ಮಗುವಾಗಿ ದತ್ತು ತೆಗೆದುಕೊಳ್ಳುವುದು.

ಮುಂದೆ ಡುಂಡಿಯನ್ನು ಪಾರ್ವತಿಯ ಮಾತಂಗ ಗಣದ ಗಣಪತಿಯಾಗಿ ಆಯ್ಕೆ ಮಾಡುತ್ತಾರೆ, ಈ ಮದ್ಯೆ ಡುಂಡಿ ಬುಡಕಟ್ಟು ಜಗತ್ತಿನ ಅನಿಯಂತ್ರಿತ ಕಾಮಕ್ಕೆ ಪಾರ್ವತಿಯನ್ನೇ ಮೋಹಿಸುತ್ತಾನೆ. ಆದ್ರೆ ಪಾರ್ವತಿ ಮಾತೃ ವಾತ್ಸಲ್ಯದಿಂದ ಅವನನ್ನು ಕಟ್ಟಿಹಾಕುತ್ತಾಳೆ. ತನ್ನ ಸ್ನಾನದ ಮನೆಗೆ ಕಾವಲಾಗಿ ಡುಂಡಿಯನ್ನು ಇಡೋದು ಅಲ್ಲಿಗೆ ಬಂದ ರುದ್ರನಿಗೆ ಡುಂಡಿ ಸೊಪ್ಪು ಹಾಕದೇ ಅವನ ಗಣವನ್ನು ಹಿಗ್ಗಾಮುಗ್ಗಾ ಚಚ್ಚುತ್ತಾನೆ ರುದ್ರನ ಕೋಪಕ್ಕೆ ಗುರಿಯಾಗಿ ಡುಂಡಿ ಪ್ರಾಣಾಪಾಯ ಸ್ಥಿತಿಗೆ ತಲುಪುವ ಡುಂಡಿ ಬೇಷಜರಿಂದ ಸಂಜೀವಿನ ಚಿಕಿತ್ಸೆ ಪಡೆದು ಪಾರಾಗುತ್ತಾನೆ. ಮುಂದೆ ರುದ್ರನಿಂದ ಮಹಾ ಗಣಪತಿಯಾಗಿ ಪದವಿ ಪಡೆದುಕೊಳ್ಳುತ್ತಾನೆ. 

ಈ ಮಹಾಗಣಪತಿಯ ಪಟ್ಟವನ್ನು ಪಡೆದ ನಂತರ ತನ್ನ ವಯನದಲ್ಲಿ ಆನೆಯ ಮೇಲೆ ಕೂತು ಹೆಂಡ ಕುಡಿಯುತ್ತಾ ಮಲಗಿದ್ದ ಡುಂಡಿ ಯಜ್ಞದ ಪಾಲನ್ನು ಪಡೆಯಲು ಹೋಗುತ್ತಿರುವುರ ದೇವೇಂದ್ರನ ತಂಡದಿಂದ ನಿದ್ರೆಗೆ ತೊಂದರೆ ಬಂದು  ವಚಾರಿಸಲು ಬಂದಾಗ ಅವನನ್ನ ಲೆಕ್ಕಿಸದ ಉದ್ದಟವಾಗಿ ನಡೆದುಕೊಳ್ಳುವ ದೇವಂದ್ರನ ಪಟಾಲಮ್‍ನ್ನು ಬಗ್ಗು ಬಡಿಯುವ ಡುಂಡಿ ಅವನ ಕಿರೀಟವನ್ನು ಕಿತ್ತಕೊಂಡು ಕಳುಹಿಸುತ್ತಾನೆ. ಹೀಗೆ ಭಂಡಾಯದ ನಾಯಕನಾಗಿ ಗುರುತಿಸಿಕೊಳ್ಳುವ ಡುಂಡಿ ತನ್ನ ಮಾತಂಗ ಗಣದಿಂದ 20 ಆನೆಗಳನ್ನು ತೆಗೆದುಕೊಂಡು ಹೋದ ವಯನದ ಸುದರ್ಶನನಿಂದ ಅದಕ್ಕೆ ಪ್ರತಿಫಲವನ್ನು ನ್ಯಾಯ ಪಾಲನ್ನು ತೆಗೆದುಕೊಳ್ಳಲು ಹೋದಾಗ ಆಗುವ ಅವಮಾನದಿಂದ ಇಡೀ ರಾಜ್ಯವನ್ನೇ ದೂಳಿಪಟ ಮಾಡುತ್ತಾನೆ. ಈ ಸಂಧರ್ಭದಲ್ಲಿಯೇ ಸುದರ್ಶನ ಅಸುರರಿಗೆ ಹೆದರಿ ಓಡಿಹೀಗುವ ದೇವತೆಗಳನ್ನು ನಂಬಿಕೆಟ್ಟೆ ಎಂದು ಗೋಳಾಡುತ್ತಾನೆ. 

ಮುಂದೆ ಅವನ ದಾಳಿಗಳನ್ನು ತಪ್ಪಿಸಿಕೊಳ್ಳುವ ಸಲುವಾಗಿ ಅವನಿಗೆ ಕಾಣಿಕೆಗಳನ್ನು ಕೊಡುತ್ತಾ ಹೋಗುತ್ತಾರೆ. ಹೀಗೆ ಮುಂದುವರೆದು ಅವನಿಗೆ ದೈವತ್ವ ಕೊಡುವ ಆಮಿಷವೊಡ್ಡಿ ಅವನಿಂದ ರಕ್ಷಿಸಿಕೊಳ್ಳುತ್ತಾರೆ. ಹಾಗೆಯೇ  ಈ ಕೃತಿಯ ಮತ್ತೊಂದು ವಿಶೇಷತೆ ಅಂದ್ರೆ ರುದ್ರಗಣ, ಮೂಷಿಕ ಗಣ, ಶಕ್ತಿ ಗಣ, ಮಾತಂಗ ಗಣ, ಭದ್ರಗಣ, ಮಯೂರ ಗಣ, ಹೀಗೆ ಪ್ರತಿ ಗಣಗಳಿಗೂ ಗಣಪತಿಗಳು ಬದಲಾಗುತ್ತಾ ಹೋಗುತ್ತಾರೆ, ಡುಮಡಿಯ ಕಾಲಕ್ಕೆ ಪಾರ್ವತಿ ಶಕ್ತಿಗಣದ ನಾಯಕಿಯಾಗಿರುತ್ತಾಳೆ ಆದ್ರೆ ಕಥೆ ಮುಗಿಯುವ ಹೊತ್ತಿಗೆ ಅರಣ್ಯಕ ಶಂಬರನಿಂದ ಅಂಬಾ ಅಂತ ಕರೆಸಿಕೊಳ್ಳುವ ಅವನ ತಾಯಿ ವಸುಮಾಳೆ ಅಂಭಾ ಭವಾನಿಯಾಗಿ ಶಕ್ತಿಗಣದ ಅಧಿನಾಯಕಿಯಾಗಿರುತ್ತಾಳೆ.

ಇಡೀ ಕಥೆಯನ್ನು ಓದುತ್ತಾ ಹೋಗುತ್ತಾ ನಮ್ಮ ಗೊಲ್ಲರ ಕೃಷ್ಣ, ರುದ್ರ, ಪಾರ್ವತಿ, ಇವರೆಲ್ಲಾ ಸಾಮಾನ್ಯ ಮನುಷ್ಯರಾಗಿ ಕಾಣಿಸುವ ಜೊತೆಗೆ ನಮಗೆ ಹತ್ತಿರವೆನಿಸುತ್ತಾರೆ. ಗಣಗಳ ನಾಯಕರನ್ನು ದೇವರುಗಳನ್ನಾಗಿಸಿ ನಮ್ಮಿಂದ ದೂರ ಮಾಡಿದ್ದ ವಿದ್ಯೆ ಕಲಿತಿದ್ದ ಒಂದು ವರ್ಗ ಅನ್ನೋ ಸತ್ಯ ಕೂಡ ಅರಿವಾಗುತ್ತದೆ. “ಡುಂಡಿ” ಓದಿದ ಬಳಿಕ ನನಗೆ ಗಣಪತಿ ತುಂಬಾ ಹತ್ತಿರದವನೆನಿಸುತ್ತಾ ಇದ್ದಾನೆ.

******

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
prashasti
10 years ago

ಚೆನ್ನಾಗಿದೆ.. ಇಂಗ್ಲಿಷಿನಲ್ಲೂ ಒಂದು ಪುಸ್ತಕ ಬಂದಿತ್ತು . Immortals of Meluha ಅಂತ.. ಅದರಲ್ಲಿ ಶಿವನನ್ನು ಮನುಷ್ಯನಾಗಿ ಚಿತ್ರಿಸೋ ಪ್ರಯತ್ನ ನಡೆದಿತ್ತು.. ನಿಮ್ಮ ಲೇಖನ ಓದ್ತಾ ಅದರ ನೆನಪಾಯ್ತು. ಕಲ್ಲಿನಲ್ಲಿ ಒಡೆಯು, ಗುಣೇಶ.. ಹಿಗೆ ಕೆಲವೊಂದು ಕಡೆ ಮುದ್ರಾರಾಕ್ಷಸನ ಪ್ರಭಾವ ಇಣುಕಿರೋದು ಸ್ವಲ್ಪ ಬೇಸರ ತರಿಸಿತು..

ದಿವ್ಯ ಆಂಜನಪ್ಪ

ಲೇಖನದ ಕೊನೆಯ ನಾಲ್ಕು ಸಾಲುಗಳಂತಹ ತಮ್ಮ ಓದಿನ ಅನುಭವಗಳನ್ನು ಮತ್ತಷ್ಟು ನಿರೀಕ್ಷಿಸುವಂತೆ ಮಾಡಿದೆ. ಧನ್ಯವಾದಗಳು 🙂

2
0
Would love your thoughts, please comment.x
()
x