ಗಿಫ್ಟ್ ಶಾಪ್ ನಲ್ಲೊಂದು ದಿನ: ಸಂತೋಷ್ ಕುಮಾರ್ ಎಲ್.ಎಮ್.


ಪ್ರಪಂಚ ಓಡುತ್ತಿದೆ ಅನ್ನುವ ಭ್ರಮೆಯಲ್ಲಿ ನಾವು! ಪ್ರಪಂಚವೇನೂ ಓಡುತ್ತಿಲ್ಲ, ಅದು ಇದ್ದಲ್ಲೇ ಇದೆ. ಆದರೆ ಮನುಷ್ಯನೆಂಬೋ ಈ ಮನುಷ್ಯ ಮಾಮೂಲಿ ಜೀವನವನ್ನು ಸುಖಾಸುಮ್ಮನೆ ಓಡಿಸುತ್ತಿದ್ದಾನೆ ಎನ್ನುವುದು ತಿಳಿದವರ ಮಾತು. ಅದೇನೇ ಇರಲಿ ಈ ಓಡುತ್ತಿರುವ ಜೀವನದ ಮಧ್ಯೆ ಅದೆಷ್ಟೋ ಮುಗ್ಧರು, ಬಡವರು, ಅಸಹಾಯಕ ಪುಟಾಣಿಗಳು ನಮ್ಮ ಕಾಲಿಗೆ ಎಡವಿದರೂ ನಮಗೆ ಗೊತ್ತೇ ಇಲ್ಲದವರಂತೆ ಮುಂದೆ ಹೋಗುತ್ತಿರುತ್ತೇವೆ.


ನಮ್ಮ ಪಕ್ಕದಲ್ಲೇ ರಸ್ತೆಯಲ್ಲಿ ಅಪಘಾತವಾಗಿ ನಮ್ಮ ಅಪ್ಪನ ವಯಸ್ಸಿನ ವ್ಯಕ್ತಿಯೊಬ್ಬ ಬಿದ್ದು ಹೊರಳಾಡುತ್ತಿದ್ದರೆ ಆತನ ಕಡೆಗೆ ಕಣ್ಣಾಯಿಸಿಯೂ ನೋಡದೆ ಆಫೀಸಿನತ್ತ ಗಾಡಿ ನಡೆಸುತ್ತೇವೆ. ಬಣ್ಣಬಣ್ಣದ ದೀಪಗಳೊಂದಿಗೆ ಜಗಮಗಿಸುವ ಪಾನಿಪೂರಿ ಅಂಗಡಿಯಲ್ಲಿ ಅಷ್ಟೊಂದು ಯೋಗ್ಯವಲ್ಲದಿದ್ದರೂ ಅದಕ್ಕೆ ನಲವತ್ತು ಐವತ್ತು ರೂಪಾಯಿ ಕೊಟ್ಟು ತಿನ್ನುವವರಿಗೆ, ಅಲ್ಲೇ ಹಿಂದೆ ನಿಂತು "ಅಮ್ಮ,ಅಣ್ಣಾ, ಹೊಟ್ಟೆಗೆ ಏನೂ ತಿಂದಿಲ್ಲಣ್ಣ, ಏನಾದರೂ ಸಹಾಯ ಮಾಡಿ" ಎನ್ನುವ ಸ್ವರ ಕೇಳಿಸುವುದೇ ಇಲ್ಲ. ಅವರಿಗೆ ಐವತ್ತು ಪೈಸೆ ಕೊಡದಿದ್ದರೂ ನಡೆದೀತು. ಆ ಹಸಿವಿನ ಮುಖವನ್ನೊಮ್ಮೆ ನೋಡಿದರೆ ಸಾಕು. ಕಡೇ ಪಕ್ಷ ಆ ಹಸಿವಿನ ನೋವಾದರೂ ಗೊತ್ತಾಗುತ್ತದೆ. ಆದರೆ ಅವರತ್ತ ನೋಡುವ ವ್ಯವಧಾನವೆಲ್ಲಿಯಾದರೂ ನಮಗೆಲ್ಲಿದೆ.


ಇಂತಹ ಪ್ರಪಂಚದ ಮಧ್ಯದಲ್ಲೂ ಅಲ್ಲಲ್ಲಿ ಬೇರೆಯೇ ತರಹದ ಜನಗಳು ನಮಗೆ ಕಾಣ ಸಿಗುತ್ತಾರೆ. ಅಂತಹದ್ದೊಂದು ಅನುಭವವನ್ನು ನಾ ಹೇಳುತ್ತಿದ್ದೇನೆ.

ನೆನಪಿಡಿ, ಇದು ಕಟ್ಟು ಕಥೆಯಲ್ಲ!!


—————————————————

ಅರಮನೆ ನಗರಿ ಮೈಸೂರಿನ ಹೃದಯಭಾಗದಲ್ಲಿರುವ ಸರಸ್ವತಿಪುರಂನಲ್ಲಿ ಪ್ರತಿಷ್ಟಿತ ಕಂಪೆನಿಯ ಗಿಫ್ಟ್ ಶಾಟ್ ಒಂದಿದೆ. ಅಲ್ಲಿಗೆ ಬರುವ ಗ್ರಾಹಕರೆಲ್ಲರೂ ಕೊಂಚ ಶ್ರೀಮಂತ ವರ್ಗದವರೇ. ಏಕೆಂದರೆ ಅಲ್ಲಿ ಮಾರುವ ಉಡುಗೊರೆ ಸಾಮಾನುಗಳೆಲ್ಲ ಬ್ರಾಂಡೆಡ್ ನವು, ಹೆಚ್ಚಾಗಿ ವಿದೇಶೀ ಮಾಲುಗಳೇ. ಬೇರೆಲ್ಲೋ ಚಿಕ್ಕ ಅಂಗಡಿಗಳಲ್ಲಿ ಕೊಂಡರೆ ಸಿಗುವ ಸಾಮಾನುಗಳನ್ನು ಇಲ್ಲಿ ದುಪ್ಪಟ್ಟು ದರದಲ್ಲಿ ಮಾರಾಟ ಮಾಡಲಾಗುತ್ತದೆ. ಕೊಡುವ ಕಾರಣವೊಂದೇ, ಅವುಗಳ ಗುಣಮಟ್ಟ ಬೇರಾವ ಅಂಗಡಿಗಳಿಗೂ ಸರಿಸಾಟಿಯಾಗಲಾರದು.


ಅಲ್ಲಿ ಕೇವಲ ಗ್ರಾಹಕರ ನಿರ್ವಹಣೆಗಾಗಿ ಐದಾರು ಜನ ಹುಡುಗಿಯರು ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸವೆಂದರೆ ಗ್ರಾಹಕರಿಗೆ ತಮ್ಮ ಗಿಫ್ಟ್ ಗಳನ್ನು ಆರಿಸಿಕೊಳ್ಳಲು ಸಹಾಯ ಮಾಡುವುದು. ಅವರು ಆರಿಸಿದ ಮೇಲೆ ಅವುಗಳನ್ನು ಉಡುಗೊರೆಗಾಗಿ ಗಿಫ್ಟ್ ಪ್ಯಾಕ್ ಮಾಡುವುದು.ಆ ಹುಡುಗಿಯರಿಗೆ ಆ ಗಿಫ್ಟ್ ಶಾಪ್ ನ ಮಾಲೀಕ ಕೊಡುವುದು ಮಾಸಿಕ ಕೇವಲ ಎರಡು ಸಾವಿರ ರುಪಾಯಿ. ಅವರುಗಳಿಗೆ ಆ ಸಂಬಳವನ್ನು ಬಿಟ್ಟರೆ ಬೇರಾವ ಆದಾಯ ಬರುವುದಿಲ್ಲ. ಆದರೆ ದಿನದ ಹೊಟ್ಟೆಪಾಡಿಗಾಗಿ ಕೆಲಸ ಮಾಡಲೇಬೇಕು. ಅದೂ ಬೆಳಗ್ಗೆ ಒಂಭತ್ತರಿಂದ ರಾತ್ರಿ  ಎಂಟರತನಕ! ನೆನಪಿಡಿ, ದಿನ ಪೂರ ನಿಂತೇ ಇರಬೇಕು. ಅಲ್ಲಿ ಆ ಹುಡುಗಿಯರು ಕೆಲಸದ ಮಧ್ಯೆ ಗಿರಾಕಿಗಳ ಬಗ್ಗೆ ಗಮನ ಕೊಡದೇ, ಮಧ್ಯೆ ಕುಳಿತುಬಿಡುತ್ತಾರೆ ಎಂಬ ಕಾರಣದಿಂದ ಅವರಿಗಾಗಿ ಯಾವುದೇ ಕುರ್ಚಿಗಳನ್ನು ಹಾಕಿಲ್ಲ.  ಮಾಲೀಕ ಎಂತಹ ಜಿಪುಣನೆಂದರೆ, ಹಬ್ಬ ಹರಿದಿನಗಳಲ್ಲಿ ರಾತ್ರಿ ಎಂಟರ ನಂತರ ಸ್ವ ಇಚ್ಚೆಯಿಂದ ಕೆಲಸ ಮಾಡಿದರೂ ಒಂದು ರೂಪಾಯಿಯನ್ನೂ ಜಾಸ್ತಿ ಕೊಡುತ್ತಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಹೇಗಾದರೂ ಮಾಡಿ ಹೆಚ್ಚು ವ್ಯಾಪಾರ ಮಾಡಬೇಕು ಎನ್ನುವುದು ಮಾಲೀಕನ ಆಶಯ, ಹೀಗಾಗಿ ಕೆಲಸದ ಹುಡುಗಿಯರ ಮೇಲೆ ಒತ್ತಡ ಹೇರುತ್ತಿದ್ದ.


ಅದೊಂದು ಮಧ್ಯಾಹ್ನ, ಹೊರಗೆ ಬಿರುಬಿಸಿಲು. ಸದ್ಯದಲ್ಲೇ ಯಾವುದೋ ಹಬ್ಬವಿದ್ದುದರಿಂದ ಆ ಅಂಗಡಿ ಉಡುಗೊರೆ ಕೊಳ್ಳುವ ಗ್ರಾಹಕರಿಂದ ತುಂಬಿಹೋಗಿದೆ.  ಎಲ್ಲ ಹುಡುಗಿಯರು ಗ್ರಾಹಕರನ್ನು ಗಮನಿಸುವುದರಲ್ಲಿ ತಲ್ಲೀನರಾಗಿದ್ದಾರೆ. ಆಗ BMW ಕಾರೊಂದು ಬಂದು ನಿಲ್ಲುತ್ತದೆ. ಅದರೊಳಗಿಂದ ಇಳಿದ ವ್ಯಕ್ತಿಯ ವೇಷ ಭೂಷಣ ಹಾವ ಭಾವವೇ ಆತ ಆಗರ್ಭ ಶ್ರೀಮಂತ ಎನ್ನುವುದನ್ನು ಸಾರಿ ಹೇಳುತ್ತಿತ್ತು. ಟಕಟಕನೆ ನಡೆದು ಬಂದು ನೇರ ಆ ಹುಡುಗಿಯ ಬಳಿಗೆ ಹೋಗುತ್ತಾನೆ. "ನನ್ನ ಕಸಿನ್ ಮಗುವಿನ ಹುಟ್ಟಿದ ದಿನ ಇವತ್ತು. ಏನಾದರೂ ಉಡುಗೊರೆ ಕೊಡಬೇಕು. ಕೊಂಚ ನಿಮ್ಮ ಅಂಗಡಿಯಲ್ಲಿರುವ ಉಡುಗೊರೆಯ ವಸ್ತುಗಳನ್ನೆಲ್ಲ ತೋರಿಸುತ್ತೀಯ" ಅಂತ ಕೇಳಿ ಒಂದೊಂದನ್ನು ಗಮನಿಸುತ್ತ ಹೋಗುತ್ತಾನೆ. ಅದೇಕೋ ಯಾವುದೂ ಇಷ್ಟವಾಗುವುದಿಲ್ಲ. ಕೊನೆಗೆ "ಯಾವುದೂ ಬೇಡ, ಒಳ್ಳೆಯ ಚಾಕಲೇಟ್ ಗಳನ್ನು ತೋರಿಸು" ಅಂತ ಕೇಳುತ್ತಾನೆ.


ಆ ಹುಡುಗಿ ಒಂದೊಂದು ಚಾಕಲೇಟ್ ತೆಗೆದು ತೋರಿಸುತ್ತ ಅವುಗಳ ಬೆಲೆ ಹೇಳತೊಡಗುತ್ತಾಳೆ. ಕೊನೆಗೆ ಆಯ್ಕೆ ಮಾಡಿದ ಎರಡರಲ್ಲಿ ಯಾವುದು ಅತ್ಯಂತ ರುಚಿಯಾಗಿದೆ ಅಂತ ಕೇಳುತ್ತಾನೆ. ಈಕೆ ಬರೇ ಬೆಲೆ ನೋಡಿ ದುಬಾರಿ ಬೆಲೆಯ ಚಾಕಲೇಟ್ ತೋರಿಸಿ "ಇದು ಚೆನ್ನಾಗಿದೆಯಂತೆ ಸರ್, ತಗೊಳ್ಳಿ" ಅಂತ ಕೇಳುತ್ತಾಳೆ.


"ಚೆನ್ನಾಗಿದೆಯಂತಾ, ಯಾಕೆ ಈ ಅಂತೆ-ಕಂತೆ? ಯಾಕಮ್ಮ ನಿಮಗೆ ಗೊತ್ತಿಲ್ವಾ ?"ಅವನ ಪ್ರಶ್ನೆ.

ಈಕೆ ಒಂದು ಕ್ಷಣ ಯೋಚಿಸತೊಡಗುತ್ತಾಳೆ. ಬರುತ್ತಿರೋದೆ ತಿಂಗಳಿಗೆ ಎರಡು ಸಾವಿರ, ಅದರಲ್ಲಿ ತಮ್ಮನ ಟ್ಯೂಷನ್ ಫೀಸ್, ಮನೆಗೆ ಅಡಿಗೆ ಸಾಮಾನು ಎಲ್ಲವನ್ನೂ ಅದರಲ್ಲೇ ತರಬೇಕು. 

ಇನ್ನು ಈ ಚಾಕಲೇಟ್ ಗೆ ಎಲ್ಲಿಂದ ನಾಲ್ಕುನೂರು ರೂಪಾಯಿಗಳನ್ನು ಕೊಡುವುದು?


"ಕ್ಷಮಿಸಿ ಸರ್, ಇಲ್ಲಿರುವ ಯಾವ ಹುಡುಗಿಗೂ ಇದರ ಟೇಸ್ಟ್ ಗೊತ್ತಿಲ್ಲ,  ನಮ್ಮ ಯೋಗ್ಯತೆಗೆ ಇದರ ಬೆಲೆ ಬಹಳ ದುಬಾರಿ ಸರ್. ನಮಗೆ ಸಿಗೋ ಸಂಬಳಕ್ಕೆ ನಮ್ಮ ಜೀವನ ಸಾಗಿಸೋದೆ ದೊಡ್ಡ ವಿಷಯ. ಅಂಥದ್ದರಲ್ಲಿ ಈ ಚಾಕಲೇಟ್ ತಿನ್ನುವ ದೊಡ್ಡ ಆಸೆ ಯಾಕೆ ಸರ್? ಅದಕ್ಕೋಸ್ಕರ ಬರೀ ಇದರ ಬಗ್ಗೆ ಕೇಳಿ ತಿಳಿದುಕೊಂಡಿದ್ದೇವೆ ಅಷ್ಟೇ!!" ಆ ಮುಗ್ಧ ಹುಡುಗಿಯ ನೇರ ನುಡಿ.


"ಓಕೆ ಕಣಮ್ಮ, ಪರವಾಗಿಲ್ಲ ಬಿಡಿ.ಎರಡು ಕೊಡಿ" ಎಂದು ಕೈಯಲ್ಲಿ ನೂರರ ಎಂಟು ನೋಟನ್ನು ಕೊಟ್ಟು, ನಂತರ ಹೇಳಿದರು.


"ಬರೀ ಒಂದನ್ನು ಮಾತ್ರ ಗಿಫ್ಟ್ ಪ್ಯಾಕ್ ಮಾಡಮ್ಮ, ಮತ್ತೊಂದನ್ನು ನೀವೆಲ್ಲರೂ ಹಂಚಿಕೊಂಡು ತಿನ್ನಿರಿ"!! ಅಂತ ಹೇಳಿ ಯಾರ ಮಾತಿಗೂ ಕಾಯದೇ, ತಾನು ಪ್ಯಾಕ್ ಮಾಡಿಸಿಕೊಂಡ ಚಾಕಲೇಟ್ ಹಿಡಿದು ಹೊರ ನಡೆಯುತ್ತಾನೆ.


ಅಲ್ಲಿ ನಿಂತಿದ್ದ ಆ ಎಲ್ಲ ಕೆಲಸದ ಹುಡುಗಿಯರ ಕಣ್ಣಲ್ಲಿ ಕೃತಜ್ಞ ಭಾವ, ಕಾಣದ ಹನಿ ಕಣ್ಣೀರು.

ಅಂಗಡಿ ಮಾಲೀಕ ಮಾತ್ರ ಬೆಪ್ಪು!!


 ನನಗನ್ನಿಸಿದ್ದು "ಹೀರೋಗಳನ್ನು ನೋಡೋಕೆ ಸಿನಿಮಾಗಳಿಗೇ ಹೋಗಬೇಕಾ??

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

21 Comments
Oldest
Newest Most Voted
Inline Feedbacks
View all comments
ಸುಮತಿ ದೀಪ ಹೆಗ್ಡೆ

ಜೀವನದಲ್ಲಿ ಇಂಥಹ ಪುಟ್ಟ ಪುಟ್ಟ ವಿಷಯಗಳಿಂದ ತುಂಬಾನೇ ಕಲೀಬೇಕು. ನೈಸ್ ರೈಟಿಂಗ್ ಸಂತೋಷ್…..

Santhoshkumar LM
10 years ago

ಹೌದು ಸುಮತಿ, ಪ್ರತಿ ಘಟನೆಗಳು ನಮಗೆ ಪಾಠ ಕಲಿಸುತ್ತವೆ. ಅವುಗಳನ್ನು ಗುರುತಿಸುವ ನೋಟ ನಮ್ಮದಾಗಬೇಕು ಅಷ್ಟೇ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು:)

Venkatesh Prasad
Venkatesh Prasad
10 years ago

NIce one !
ಒಳ್ಳೆತನಕ್ಕೆ ಜಗತ್ತಿನಲ್ಲಿ ಇಂದೂ ಬೆಲೆಯಿದೆ !

Santhoshkumar LM
10 years ago

Thank you very much Venkatesh Prasad:-)

sunitha.a
sunitha.a
10 years ago

wahhh

Santhoshkumar LM
10 years ago
Reply to  sunitha.a

Thank u Sunithakka:)

nandi
nandi
10 years ago

ಇಂತಹ ಹೃದಯವಂತಿಕೆಯವರು ಎಲ್ಲೆಡೆ ಇದ್ದಾರೆ, ಇಂತಹವರ ಸಾಲಿನಲ್ಲಿ ನಾವಿರುವ ಎಲ್ಲರೂ ಮನಸ್ಸು ಮಾಡಿದರೆ ಸದಾಚಾರ ಸದ್ವಿಚಾರ ಹೆಚ್ಚೆಚ್ಚು ಪ್ರಸರಿಸಬಹುದಲ್ಲವೇ . ಹಂಚಿಕೊಂಡದ್ದಕ್ಕೆ ಧನ್ಯವಾದಗಳು.   

Santhoshkumar LM
10 years ago
Reply to  nandi

Thank you so much Nandi sir, for your reply and support 🙂

Vasuki
10 years ago

ಒಂಚೂರೂ ಮೆಲೊಡ್ರಮ್ಯಾಟಿಕ್ ಆಗದೆ ಮನಮುಟ್ಟಿವಂತೆ ಬರೆದಿದ್ದೀರ…ಒಳ್ಳೇ ಬರಹ!!

Santhoshkumar LM
10 years ago
Reply to  Vasuki

Thank u so much Vasuki 🙂

sharada moleyar
sharada moleyar
10 years ago

 
ಅಲ್ಲಿ ನಿಂತಿದ್ದ ಆ ಎಲ್ಲ ಕೆಲಸದ ಹುಡುಗಿಯರ ಕಣ್ಣಲ್ಲಿ ಕೃತಜ್ಞ ಭಾವ, ಕಾಣದ ಹನಿ ಕಣ್ಣೀರು.
ಅಂಗಡಿ ಮಾಲೀಕ ಮಾತ್ರ ಬೆಪ್ಪು!!
nice ending
keep it up

Santhoshkumar LM
10 years ago

Thank u so much for your comment and constant support for all my writings sharada madam:-)

ಸಿ. ಎಸ್. ಮಠಪತಿ
ಸಿ. ಎಸ್. ಮಠಪತಿ
10 years ago

ನಿಜ ಗೆಳೆಯ …….ಪರದೆಯ ಮೇಲಿನ ಹೀರೋಗಳನ್ನೇ ಬೆಚ್ಚುಗಣ್ಣಿಂದ  ನೋಡಿ ಬೆಪ್ಪು ತಕ್ಕಡಿಗಳಂತೆ ಅಲ್ಲಾಡುತ್ತಲೇ ಚಪ್ಪಾಳೆ ಹೊಡೆವ ನಾವು ನಿಜವಾಗಲೂ ಯಾರು? ಸೂಪರ್ ಲೇಖನ…………..

ಸಿ. ಎಸ್. ಮಠಪತಿ
ಸಿ. ಎಸ್. ಮಠಪತಿ
10 years ago

ನಿಜ ಗೆಳೆಯ …….ಪರದೆಯ ಮೇಲಿನ ಹೀರೋಗಳನ್ನೇ ಬೆಚ್ಚುಗಣ್ಣಿಂದ  ನೋಡಿ ಬೆಪ್ಪು ತಕ್ಕಡಿಗಳಂತೆ ಅಲ್ಲಾಡುತ್ತಲೇ ಚಪ್ಪಾಳೆ ಹೊಡೆವ ನಾವು, ನಿಜವಾಗಲೂ ಯಾರು? ಸೂಪರ್ ಲೇಖನ…………..

Santhoshkumar LM
10 years ago

Thank u Mathapathi 🙂

Badarinath Palavalli
10 years ago

"ಹೀರೋಗಳನ್ನು ನೋಡೋಕೆ ಸಿನಿಮಾಗಳಿಗೇ ಹೋಗಬೇಕಾ??" ಎನ್ನುವ ನಿಮ್ಮ ಮಾತು ಚಡೀ ಎಟಿನಂತೆ ತಾಕುತ್ತದೆ. ನಾವು ಬರೀ ಫೋಸುಗಾರರು, ಮನೆಯಲ್ಲಿ ಮಾತೇ ಆಡದೇ ಹೊರಗೆ ಭಾಷಣ ಬಿಗಿಯುವವರು. ತುಂಬಾ ಮಾರ್ಮಿಕವಾದ ಬರಹ ಕಾಣಪ್ಪಾ.. ತಾಕಬೇಕಾದಲ್ಲಿ ತಾಕಿ ರಿಪೇರಿ ಮಾಡುತ್ತದೆ.

Santhoshkumar LM
10 years ago

Thank u so much Badari sir:-)
ನಿಮ್ಮ ಪ್ರತಿಕ್ರಿಯೆ ನೋಡಿ ಬಹಳ ಖುಷಿಯಾಯಿತು.

Ganesh
10 years ago

ಒಮ್ಮೆ ಮೈಮೇಲಿನ ರೋಮಗಳೆಲ್ಲ ಎದ್ದುನಿಂತಿತು. ಅವರಿಗೆ ಸಿಕ್ಕ ಚಾಕೊಲೆಟ್ ಕಸಿದುಕೊಂಡು ಮತ್ತೆ ಮಾರಾಟಕ್ಕೆ ಇಡದಿದ್ದರೆ ಸಾಕು ಮಾಲಿಕ. ಚೆನ್ನಾಗಿದೆ.

Santhoshkumar LM
10 years ago
Reply to  Ganesh

ಹೌದು ಗಣೇಶ್,
ಕೆಲವು ಮಾಲೀಕರು ಅಂತಹ ನೀಚ ಕೆಲಸಕ್ಕೆ ಇಳಿಯುವುದಕ್ಕೂ ಹಿಂದೆ ಮುಂದೆ ಯೋಚಿಸುವುದಿಲ್ಲ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು 🙂

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
10 years ago

ಅತ್ಯುತ್ತಮ ಲೇಖನ. ಧನ್ಯವಾದಗಳು ಸರ್ 🙂

Santhoshkumar LM
10 years ago

Thank you very much DIvya madam 🙂

21
0
Would love your thoughts, please comment.x
()
x