ಕತ್ತಲ ಗುಮ್ಮ: ಶೀಲಾ ಗೌಡ

ಕಾಲೇಜ್, ಟುಟೋರಿಯಲ್ಸ್, ಟೆಸ್ಟ್, ಪರೀಕ್ಷೆ ಬರೀ ಇದೇ ಆಗಿದೆ ನಮ್ಮ ದೈನಂದಿನ ಕೆಲಸ. ಬೇಜಾರು ಮಾಡಿಕೊಳ್ಳೋ ಹಾಗಿಲ್ಲ, ಅಕಾಸ್ಮಾತ್ತಾದರೂ ಹೇಳುವ ಹಾಗಿಲ್ಲ. ಅಪ್ಪಿ ತಪ್ಪಿ ಹೇಳಿದರೆ ಕೇಳಿದವರ ಪುಕಸಟ್ಟೆ ಭೋದನೆ ಜೊತೆಗೆ ನಗು ಮೊಗದಿಂದ ಆಲಿಸುವ ಶಿಕ್ಷೆ. ಒಟ್ಟಿನಲ್ಲಿ ಓದೋ, ಮಾರ್ಕ್ಸ್ ತೆಗೆಯೋ ರೇಸಿನಲ್ಲಿ ಓಡ್ತಿದಿವಿ. ಹೀಗೆ ತಮ್ಮ ಬೇಸರವನ್ನು ಹಂಚಿಕೊಳ್ಳುತ್ತ ಟುಟೋರಿಯಲ್ಸ ಕಡೆ ಹೆಜ್ಜೆ ಹಾಕುತಿದ್ದರು ಐವರು ಗೆಳೆಯರು. ಅರವಿಂದನ ಹಾಗೆ ನಾವೆಲ್ಲ ಡಿಪ್ಲೋಮ ಮಾಡಬೇಕಿತ್ತು ಹೀಗೆ ಒಂದೆ ಸರಿ ಟೆನ್ನಷನ್ ಇರ್ತಿರ್ಲಿಲ್ಲ ಎಂದ ಸುನಿಲನ ಮಾತಿಗೆ ಸುಮ್ಮನಿರೋ ಅವನಿಗೆ ಎಷ್ಟು ಕೇಲಸವಿದೆಯೋ ಯಾರಿಗೆ ಗೊತ್ತು ಅಂದಳು ಆಶ. ಹ್ಹ ಹೌದು ಅವನು ಸಿಕ್ಕಿ ಮೂರು ತಿಂಗಳ ಮೇಲಾಗಿದೆ ಎಂದು ಅಶ್ಚರ್ಯದಿಂದ ನುಡಿದಳು ದಿವ್ಯ. ದಿನಾ ಜೊತೆಗಿರುವವರು ತಿಂಗಳಾದರು ಸಿಗದೆ ಇದ್ದಿವಿ ಎಂದು ¨ಬೇಸರಿಸುತ್ತಿದ್ದ ಸುನೀಲ್.

ದಿವ್ಯ, ಆಶ, ಸುಮ, ಸುನಿಲ್, ಪ್ರಣವ್, ಅರವಿಂದ ಎಲ್ಲಾರು ಬಾಲ್ಯ ಸ್ನೇಹಿತರು, ಒಟ್ಟಿಗೆ ಆಡಿ ಬೆಳೆದವರು. ಎಲ್ಲರ ಮನೆ, ಶಾಲೆ ಎಲ್ಲಾ ಹತ್ತಿರದಲ್ಲೆ. ಹತ್ತನೇ ತರಗತಿವರೆಗೆ ಒಂದೇ ಶಾಲೆಯಲ್ಲಿ ಓದಿದವರು. ಎಲ್ಲರು ಪಿಯುಸಿ ಸೈನ್ಸ್ ಆರಿಸಿಕೊಂಡವರೇ, ಅರವಿಂದ ಡಿಪ್ಲೋಮಾ ಆಯ್ದುಕೊಂಡಿದ್ದ. ಮೊದಲನೇ ವರ್ಷ ಬರೀ ಕಾಲೇಜ್ ಹಾಗೂ ಟುಷನ್ಸ ಸೇರಿರದ ಕಾರಣ ಎಲ್ಲರು ಸಂಜೆ ಕಾಲೇಜು ಮುಗಿದಮೇಲೆ ಸಿಗುತಿದ್ದರು, ಆದರೆ ಎರಡನೆ ವರ್ಷ ಶುರುವಾದ ಮೇಲೆ ಕಾಲೇಜ್, ಟುಷನ್ಸ್ ಅಂತ ಇವರಿಗೆ ಸಮಯವಿಲ್ಲ. ಕಾಲೇಜ್, ಮಿನಿ ಪ್ರಾಜೆಕ್ಟ್ ಎಂಬ ಓಡಾಟದಲ್ಲಿ ಅರವಿಂದನಿಗೂ ಸಮಯ ಸಿಕ್ಕಿರಲ್ಲಿಲ್ಲ. ಇದು ಇವರೆಲ್ಲರನ್ನು ಮತ್ತಷ್ಟು ಬೇಸರಿಸಿತ್ತು.

ಓಡಾಟ, ಓದು, ಬರೆಯುವುದು, ಅಭ್ಯಾಸ ಮಾಡುವುದರಲ್ಲಿ ಬೇಸರಗೊಂಡ ಹುಡುಗರಿಗೆ ಉಪನ್ಯಾಸಕರ ಅನಾರೋಗ್ಯದಿಂದ ಅಂದು ಟುಟೋರಿಯಲ್ಸಗೆ ಒಂದು ದಿನ ರಜ ಘೋಷಿಸಿದ್ದರು. ಸ್ವರ್ಗಕ್ಕೆ ಮೂರೆ ಗೇಣು, ಎಷ್ಟು ಆನಂದವಾಯಿತೋ ಇವರಿಗೆಲ್ಲಾ. ಸಿಕ್ಕದ್ದು ೪ ತಾಸು ಬಿಡುವು ಆದರೆ ಇನ್ನು ಮುಂದೆ ಹೀಗೆ ಖಾಲಿ ಇರುವ ಹಾಗೆ ಪ್ಲಾನಿಂಗ್ ಶುರು ಮಾಡಿದರು ಎಲ್ಲಾ ಸ್ನೇಹಿತರು. ಒಬ್ಬರು ಓದೋದಿದೆ ನಾನು ಮನೆಗೆ ಹೋಗುವೆ ಎಂದರೆ ಮತ್ತೊಬ್ಬರು ನಾನು ಮನೆಗೆ ಹೋಗಿ ಮಲಗುತ್ತೇನೆ, ಹುಡುಗಿಯರು ಶಾಪಿಂಗ್ ಹೋಗೋಣ ಎಂದೆಲ್ಲಾ ಮಾತಾಡಿಕೊಳ್ಳುತ್ತಿದ್ದರು. ಅಷ್ಟರಲ್ಲಿ ಸುನಿಲ್ ಅರವಿಂದನ ಮನೆಗೆ ಹೋಗೋಣ, ಸರ್ಪರೈಸ್ ವಿಸಿಟ್ ಎಂದು ಹುಬ್ಬು ಹಾರಿಸುತ್ತ ಎಲ್ಲರ ಒಪ್ಪಿಗೆಗೆ ಕಾದವನಂತೆ ಎಲ್ಲರತ್ತ ನೋಡಿದ. ಎಲ್ಲರು ಖುಷಿಯಾಗಿ ಒಟ್ಟಗೆ ಓಕೆ ಎಂದರು. ಆದರೆ ಅವನ ಮನೆಗೆ ಹೋದವರಿಗೆ ನಿರಾಸೆ ಕಾದಿತ್ತು, ಅರವಿಂದ್ ತನ್ನ ಪ್ರಾಜೆಕ್ಟ್ ಕೆಲಸಕ್ಕಾಗಿ ಹೊರಗಡೆ ಹೋಗಿರುವನು ಎಂದು ಎಲ್ಲರಿಗು ಒಳಗೆ ಕರೆದು, ಕಾಫಿ ಕೋಟ್ಟು ತಿಳಿಸಿದರು ಅವನ ತಾಯಿ.

ಮನೆಗೆ ಹಿಂತಿರುಗಿ ಮನೆಯಲ್ಲಿ ರಜದ ವಿಷಯ ತಿಳಿಸಿದಾಗ ಎಲ್ಲರ ಮನೆಯಲ್ಲು ಒಂದೇ ರಾಗ ಬಿಡುವಿದೆ ಎಂದು ಟೈಮ್ ವೇಸ್ಟ ಮಾಡಬೇಡ ಓದಿಕೋ, ಮತ್ತೆ ಎಲ್ಲಾರಿಗು ಒಂದೇ ಪ್ರಶ್ನೆ ಕಾಂಪಂಸೆಟರಿ ಕ್ಲಾಸ್ ಯಾವಾಗ ಎಂದು. ಪಾಪ ಬೇಸತ್ತವರಿಗೆ ಇನ್ನು ಮಕ್ತಿ ಇಲ್ಲ. ಪೋಷಕರ ಪ್ರಶ್ನೆ ತಿಳಿದವರಂತೆ ಟುಟೋರಿಯಲ್ಸ್ ರೇಗುಲರ್ ಕ್ಲಾಸ್ ಮುಗಿದ ಮೇಲೇ ಮುಂದಿನ ನಾಲ್ಕು ದಿನ ಒಂದು ಗಂಟೆ ಎಕ್ ಸ್ಟ್ರಾ ಕ್ಲಾಸ್ ಎಂದು ತಿಳಿಸಿದ್ದರು. ಮಾರನೇ ದಿನ ಬೆಳಗ್ಗೆಯಿಂದ ಕಾಲೇಜು ಮುಗಿಸಿ ಬಂದವಳೆ ಬೇಗ ಬೇಗ ರೆಡಿಯಾಗಿ ಟುಷನ್ಗೆ ಹೊರಟಳು ದಿವ್ಯ. ತಿಂಡಿ ಕೊಟ್ಟ ಅಮ್ಮ ಇಂದು ಕ್ಲಾಸ್ ಬಿಡುವುದು ತಡವಾಗುವುದೆಂದು ತಿಳಿದಿದ್ದರಿಂದ ಕರೆದುಕೊಂಡು ಬರಲು ನಾನು ಬರಲೆ ಎಂದು ಕೇಳಿದರು. ಬೇಡಮ್ಮ ಎಲ್ಲಾ ಗೆಳಯರು ಒಟ್ಟಿಗೆ ಬರುವೆವೆಂದು ತಿಳಿಸಿ ಹೊರಟಳು. ಎಂದಿನಂತೆ ಕ್ಲಾಸ್ ಗೆ ಎಲ್ಲಾ ಸ್ನೇಹಿತರು ಒಟ್ಟಿಗೆ ಹೋದರು. ಅಷ್ಟು ಸ್ನೇಹಿತರು ಒಟ್ಟಗೆ ಇರುವರು ಒಟ್ಟಿಗೆ ಹೋಗಿ ಬರುವರು ಎಂದು ತಿಳಿದಿದ್ದರಿಂದ ಇವರೆಲ್ಲಾ ಪೋಷಕರಿಗೆ ಭಯವಿರಲಿಲ್ಲ ತಡವಾದರೂ.

ಅರವಿಂದ್ ತನ್ನ ಸ್ನೇಹಿತರು ನೆನ್ನೆ ಮನೆಗೆ ಬಂದರು ಸಿಗಲಿಲ್ಲವಲ್ಲ ಎಂದು ಬೇಜಾರಿನಲ್ಲಿದವನು ಮನೆಗೆ ಬಂದೊಡನೆ ಗಡಿಯಾರ ನೋಡಿ ಗೆಳೆಯರಿಗೆ ಟುಷನ್ ಬಿಡುವ ಸಮಯ ಹೋಗಿ ಭೇಟಿ ಮಾಡೋಣವೆಂದು ಹೊರಟ. ಹಾಗೆ ಹೋಗುತ್ತಿರುವವನಿಗೆ ಎದುರಾದವರು ದಿವ್ಯಳ ಅಮ್ಮ. ಕಾಲೇಜು ಮುಗಿಯಿತ?, ಇತ್ತ ಕಡೆ ಎಲ್ಲಿಗೆ ಹೊರಟೆ ಎಂದು ಕೇಳಿದವರಿಗೆ ಟುಷನ್ ಹತ್ತಿರ ಹೋಗುತಿದ್ದೇನೆ ಅವರೆಲ್ಲರು ಕ್ಲಾಸ್ ಮುಗಿಸಿದ ಮೇಲೆ ಎಲ್ಲಾ ಒಟ್ಟಾಗಿ ಮನೆಗೆ ಬರುವೆವು ಎಂದುತ್ತರಿಸಿದ. ಸಮಯದ ಕಡೆ ಕಣ್ಣಾಡಿಸಿ ಅಯ್ಯೋ ಟೈಮ್ ಆಯಿತು ಎಂದು ಕೊಳ್ಳುತ್ತಿರುವವನಿಗೆ ಅವರಿಗೆಲ್ಲಾ ಇಂದು ಸ್ಪೆಶಲ್ ಕ್ಲಾಸ್ ಇದೆ ಇನ್ನು ಒಂದು ಗಂಟೆ ತಡವಾಗುವುದು ಕ್ಲಾಸ್ ಮುಗಿಯುವುದಕ್ಕೆ ಎಂದು ತಿಳಿಸಿದರು. ಓ ಸರಿ ಹಾಗಿದ್ದರೆ ಸ್ವಲ್ಪ ಹೊತ್ತಿನ ನಂತರ ಹೋಗುತ್ತೇನೆ ಎಂದುಕೊಂಡ, ಆದರೆ ಇಲ್ಲಿ ಮನೆಯ ಹತ್ತಿರ ಕಾಯಲು ಮನಸಾಗದೆ ಅಲ್ಲೆ ಹೋಗಿ ಕಾಯೋಣ ಎಂದುಕೊಂಡು ಟುಟೋರಿಯಲ್ಸ್ ಬಳಿ ತೆರಳಿದ. ಅವನು ತಲುಪುವ ವೇಳೆಗಾಗಲೇ ಕತ್ತಲಾಗಿತ್ತು, ಇನ್ನು ಮುಕ್ಕಾಲು ಗಂಟೆ ಬಾಕಿ ಇತ್ತು ಹಾಗಾಗಿ ಅಲ್ಲೆ ಎದುರುಗಡೆ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತ. ತನ್ನ ಮಾವನ ಮಾತು ಕೇಳಿ ಡಿಪ್ಲೋಮಾ ಸೇರಿಕೊಂಡೆ, ಇಲ್ಲದಿದ್ದರೆ ಇವರೆಲ್ಲರೊಟ್ಟಿಗೆ ನಾನು ಇರಬಹುದಿತ್ತು ಎಂದು ಯೋಚಿಸುತಿದ್ದವನ ಕಣ್ಣುಗಳು ಅಲ್ಲೆ ಸ್ವಲ್ಪ ದೂರದಲ್ಲಿದ್ದ ಸೈಕಲ್ ಸ್ಟಾಂಡ್ನಲ್ಲಿದ್ದ ತನ್ನ ಗೆಳೆಯರ ಸೈಕಲ್ ಕಡೆಗೆ ಹರಿದಿತ್ತು.

ಅಲ್ಲೆ ಸೈಕಲ್ ಮೇಲೆ ಯಾರೋ ಕುಳಿತಿರುವ ಹಾಗೆ ಒಂದು ಕಪ್ಪು ಆಕೃತಿ. ಅಲ್ಲಿ ಯಾವ ಲೈಟ್ ಅಥವಾ ಬೇರೆ ಯಾರು ಇರಲಿಲ್ಲ. ಆಗಲೇ ಹುಡುಗನಲ್ಲಿ ಭಯ ಶುರುವಾಗಿತ್ತು. ತನ್ನ ಶಕ್ತಿಯಲ್ಲಾ ಒಗ್ಗೂಡಿಸಿ ಯಾರದು, ಯಾರದು ಸೈಕಲ್ ಹತ್ತಿರ ಎಂದು ಜೋರಾಗಿ ಕೇಳಿದ. ಅತ್ತಕಡೆಯಿಂದ ಉತ್ತರ ಬರಲಿಲ್ಲ. ಕೇಳಿಸಿಲ್ಲವೇನೋ ಎಂದುಕೊಂಡು ಎರಡೆಜ್ಜೆ ಮುಂದೆ ಬಂದು ಮತ್ತೆ ಯಾರದು ಎಂದು ಕೇಳಿದನು, ಆದರೆ ಅತ್ತಕಡೆ ಇಂದ ಒಂದು ಸ್ವಲ್ಪವು ಬದಲಾವಣೆ ಇಲ್ಲ. ಮತ್ತೆ ಉತ್ತರ ಬರದಿದ್ದಾಗ ಇನ್ನು ಹೆದರಿ ಕಂಗಾಲಾದ, ಬೆವರಲಾರಂಭಿಸಿದ್ದ. ಅಲ್ಲಿಂದ ಓಡಬೇಕು ಎಂದುಕೊಂಡರೂ ಕಾಲುಗಳೇಕೋ ಅವನ ಮಾತು ಕೇಳದೆ ಸೋತು ನಿಂತಲ್ಲೇ ಸ್ಥಾಪಿತವಾದಂತಿದ್ದವು. ಅಷ್ಟರಲ್ಲಿ ಒಳಗಿನಿಂದ ಕೆಲವರು ನಗುತ್ತ ಮಾತನಾಡುತ್ತಾ ಬರುತ್ತಿರುವ ಸದ್ದಾಗಿ ಹೋದ ಜೀವ ಬಂದಂತಾಗಿ ಜೋರು ನಡಿಗೆಯಲ್ಲಿ ಅತ್ತಕಡೆ ಹೋದ. ಅಲ್ಲಿ ತನ್ನ ಗೆಳೆಯರ ಗುಂಪನ್ನು ಕಂಡು ಸಮಾಧಾನವಾಗಿತ್ತು ಆದರೆ ಮುಖದಲ್ಲಿ ಇದ್ದ ಭಯವನ್ನು ಅವರೆಲ್ಲರು ಗಮನಿಸಿದ್ದರು.

ಯಾಕೋ ಅರವಿಂದ್ ಏನಾಯತು ಕೇಳಿದಳು ಸುಮ, ನೀರು ಕೊಟ್ಟಳು ದಿವ್ಯ. ನೀರು ಕುಡಿಯುತಿದ್ದವನು ಸೈಕಲ್ ಸ್ಟಾಂಡ್ ಕಡೆ ಕೈ ತೋರಿದ. ಸಮಾಧಾನ ಮಾಡಿಕೋ ಏನಾಯಿತು ನಿಧಾನವಾಗಿ ಹೇಳೆಂದು ಸುನಿಲ್ ಕೇಳಿದ, ಅಷ್ಟರಲ್ಲಿ ಅರವಿಂದ ಕೈ ತೋರಿದ ದಿಕ್ಕಿನೆಡೆ ಹೋರಟ ಪ್ರಣವ್. ಅವನನ್ನು ತಡೆದ ಅರವಿಂದ್ ಅಲ್ಲಿ ಯಾರೋ ಅಲ್ಲಲ್ಲ ಏನೋ ಮನುಷ್ಯಕಾರದ್ದು ಇರುವ ಹಾಗಿದೆ ಒಬ್ಬನೇ ಹೋಗಬೇಡವೆಂದು ನಿಲ್ಲಿಸಿದ. ಏನೋ ಹೇಳುತ್ತಿದೀಯಾ ದೆವ್ವನಾ ಎಂದು ತಾನು ಹೆದರುವುದಲ್ಲದೆ ಎಲ್ಲರನ್ನು ಭಯ ಹುಟ್ಟುವಂತೆ ಮಾಡಿದಳು ಸುಮ. ಅವಳ ಮಾತಿಗೆ ಸಮ್ಮತಿಸುವಂತೆ ಅವಳೆಡೆಗೆ ನೋಡಿದ ಅರವಿಂದ್. ಇವನು ಹೆದರಿರುದು ನೋಡಿದರೆ ನನಗೂ ಭಯವಾಗುತಿದೆ, ಇಲ್ಲೆ ಸೈಕಲ್ ಬಿಟ್ಟು ಮನೆಗೆ ಹೋಗೋಣ, ಬೆಳಿಗ್ಗೆ ಸೈಕಲ್ ತೆಗೆದುಕೊಂಡು ಹೋದರಾಯಿತು, ಮೊದಲು ಇಲ್ಲಿಂದ ಹೊರಡೋಣ ಎಂದಳು ದಿವ್ಯ. ಎಲ್ಲರು ಸರಿ ಎಂದರು, ಬೇಗ ಬೇಗ ಗೇಟಿನೆಡೆಗೆ ಹೆಜ್ಜೆಹಾಕತೊಡಗಿರದರು .

ಆದರೆ ಗೇಟಿನ ಬಳಿ ಬೇರೆ ವಿದ್ಯಾಥಿಗಳು ಅರಾಮಾಗಿ ಸೈಕಲ್ ತೆಗೆದುಕೋಂಡು ಹೋಗುತ್ತಿರುವುದನ್ನು ಗಮನಿಸಿದ ಸುನಿಲ್ ಸೈಕಲ್ ಸ್ಟಾಂಡ್ ಕಡೆ ಕಣ್ಣು ಹಾಯಿಸಿದ. ಅಲ್ಲೇನು ಕಂಡಂಗೆ ಆಗಲಿಲ್ಲ, ಅಲ್ಲೇನು ಇಲ್ಲವಲ್ಲೋ ಎಂದ. ಎಲ್ಲರು ಅತ್ತಕಡೆ ನೋಡಿ ಹೌದಲ್ಲ ಇವನು ಏನು ನೋಡಿ ಇಷ್ಟೊಂದು ಹೆದರಿದ ಎಂದುಕೊಂಡೆ ಎಲ್ಲರು ಸೈಕಲ್ ಕಡೆ ನೆಡೆದರು. ಸೈಕಲ್ ಹೊರಗೆ ತರುತಿದ್ದಂತೆ ಮರದ ಹಿಂದೆ ಮತ್ತೆ ಏನೋ ನೋಡಿದಂತಾಗಿ ಪಕ್ಕದಲ್ಲಿದ್ದ ದಿವ್ಯಾಳಿಗೆ ಮರದತ್ತ ಕೈ ತೋರಿಸಿ ನಿನಗೂ ಕಾಣಿಸುತ್ತಿದೆಯ ಎಂದನು ಅರವಿಂದ್. ಒಂದು ನಿಮಿಷ ಭಯಗೊಂಡ ದಿವ್ಯ ಅತ್ತ ನೋಡಿದಳು, ಮತ್ತೆ ಅರವಿಂದನ ಮುಖ ನೋಡಿದಳು. ಅಷ್ಟರಲ್ಲಿ ಎಲ್ಲ ಗೆಳೆಯರು ಇವರಿಬ್ಬರ ಪಕ್ಕಕ್ಕೆ ಬಂದಿದ್ದರು. ಮತ್ತೆ ಹೆದರಿದ ಅರವಿಂದನ ಮುಖ ನೋಡಿದವಳು ಜೋರಾಗಿ ತಡೆಯಲಾರದಂತೆ ನಗಲಾರಂಭಿಸಿದಳು. ಎಲ್ಲರಿಗೂ ಹಾಗೆ ನಗುತ್ತಲೇ ಮರದ ಕಡೆ ಕೈ ಮಾಡಿ “ಕತ್ತಲ ಗುಮ್ಮ” ಎನ್ನುತ್ತ ನಗುತ್ತಲೇ ಇದ್ದಳು. ಅವಳು ಹೇಳಿದನ್ನು ಕೇಳಿ ಒಂದು ಬಾರಿ ಮರದತ್ತ ನೋಡಿ ಮತ್ತೆ ಅರವಿಂದ್ ಕಡೆ ನೋಡಿ ಎಲ್ಲರೂ ನಗಲಾರಂಭಿಸಿದರು.

ಅರವಿಂದ್ ಭಯ ಇವರೆಲ್ಲರು ನಗುವುದನ್ನು ನೋಡಿ ಕಡಿಮೆಯಾಯಿತು ಆದರೆ ಯಾಕೆ ನಗುತ್ತಿರುವರು ಎಂದು ತಿಳಿಯಲಿಲ್ಲ. ಏನು ಅರ್ಥವಾಗದೆ ಎಲ್ಲರೆಡೆಯೊಮ್ಮೆ ನೋಡಿ ಸುನೀಲ್ ಕಡೆ ತಿರುಗಿ ಏನಾಯಿತು ಎಂಬ ಪ್ರಶ್ನೆ ಮಾಡಿದ. ಅವನು ನಮಗೆ ಸೆಕೆಂಡ್ ಇಯರ್ ಶುರುವಾದಾಗಿಂದ ದಿವ್ಯಳ ಹಿಂದೆ ಬಿದ್ದಿದಾನೆ, ಅವಳು ಎಲ್ಲೆ ಹೋದರು ಬಂದರು ಅವಳ ಹಿಂದೆ ಇರುವನು ಎಂದ ಸುನಿಲ್. ನಾವೆಲ್ಲ ಜೊತೆಗೆ ಇರುವುದರಿಂದ ಭಯವಿಲ್ಲ ಎಂದು ಸೇರಿಸಿದಳು ದಿವ್ಯ. ಸುಮ ತನ್ನ ಮಾತು ಸೇರಿಸಿದಳು ಅವನೆಂದು ನಮ್ಮೆದುರಿಗೆ ಬಂದಿಲ್ಲ ಅಥವಾ ಅವಳನ್ನು ಮಾತಾಡಿಸುವ ಧೈರ್ಯ ಮಾಡಿಲ್ಲ. ಮನುಷ್ಯ ಹೀಗೆ ಎಲ್ಲಾದರು ಕತ್ತಲಲ್ಲಿ, ಮರದ ಹಿಂದೆ, ಗಾಡಿ ಮರೆಯಲ್ಲಿ ನಿಂತು ನೋಡುವನೇ ಹೊರತು ಎದುರಿಗೆ ಕಾಣಿಸೋದಿಲ್ಲ, ಅದಕ್ಕೆ ನಾವೆಲ್ಲ ಅವನಿಗೆ ಕತ್ತಲ ಗುಮ್ಮ ಎಂದು ಹೆಸರಿಟ್ಟಿದ್ದೀವಿ ಎಂದು ನಗುತ್ತಲಿದ್ದಳು. ಅಷ್ಟ್ರಲ್ಲಿ ಪ್ರಣವ್ ಹೇಳಿದ, ನಾವೆಲ್ಲ ಗಮನಿಸಿದಹಾಗೆ ಯಾವಾಗಲು ಬಿಳಿ ಷರ್ಟ ಹಾಕುತಿದ್ದ ಇವತ್ತು ನಿನ್ನ ಅದೃಷ್ಟಕ್ಕೆ ಕಪ್ಪು ಬಟ್ಟೆ ಹಾಕಿಕೊಂಡಿದ್ದಾನೆ ಎಂದು ಅರವಿಂದನನ್ನು ರೇಗಿಸುತಿದ್ದರು. ಇನ್ನೂ ಎಲ್ಲರೂ ನಗುತ್ತಲೆ ಇದ್ದರು. ಅರವಿಂದ್ ಜೋರಾಗಿ ಉಸಿರು ಬಿಟ್ಟು ಎಲ್ಲರೊಟ್ಟಿಗೆ ನಗಲಾರಂಭಿಸಿದ. ನಂತರ ದಿವ್ಯಳ ಕಡೆ ನೋಡಿ ಎಲ್ಲಿಂದ ಸಿಕ್ಕಿಕೊಂಡೆ, ನನ್ನ ಸಮ್ಮನೆ ಹೆದರಿಸಿಬಿಟ್ಟ. ಆದರೂ ದಿವ್ಯ ನೀನು ಲಕ್ಕಿ ಬಿಡು, ಯಾವತ್ತು ಎದುರಿಗೆ ಬರದವನು ಇನ್ನು ನಿನ್ನ ಎದುರಿಗೆ ಮಾತಾಡುವ ಧೈರ್ಯ ಹೇಗೆ ಮಾಡಿಯಾನು ಎಂದು ಎಲ್ಲರೊಟ್ಟಿಗೆ ದಿವ್ಯಳನ್ನು ರೇಗಿಸತೋಡಗಿದ ಅರವಿಂದ್. ಹೋಗೋ ಗೊತ್ತಿಲ್ಲದಿರುವನು, ಕಾಣಿಸದೆ ಮರೆಯಲ್ಲಿ ನಿಂತು ಹೆದರಿಸುತ್ತಿದ್ದಾನೆ ನೀನು ಬೇರೆ ರೇಗಿಸ್ತಿದೀಯ ಎಂದು ಹುಸಿ ಮುನಿಸು ತೋರಿಸಿದಳು. ಅರವಿಂದ ಇನ್ಮುಂದೆ ಬೇರೇ ಯಾವುದಕ್ಕು ಹೆದರುವ ಅವಶ್ಯಕತೆ ಇರುವುದಿಲ್ಲ ಅಷ್ಟೊಂದು ಹೆದರಿಸಿಬಿಟ್ಟಿದಾನೆ ಎಂದ ಸುಮಾಳ ಮಾತಿಗೆ ಮತ್ತೆ ಎಲ್ಲಾ ಜೋರಾಗಿ ನಗಲಾರಂಭಿಸಿದರು ಅವನ ಹೆದರಿದ ಮುಖವನ್ನು ನೆನೆದು. ಮೂರು ತಿಂಗಳಿಗೊಮ್ಮೆ ಸಿಕ್ಕರೆ ಹೀಗೆ ವಿಷಯಗಳು ತಿಳಿಯುವುದಿಲ್ಲ, ಇನ್ನು ಮುಂದಾದರು ಎಲ್ಲರು ವಾರಕೂಮ್ಮೆಯಾದರು ಸಿಗುವ ಎಂದು ಮಾತನಾಡುತ್ತ ಮನೆ ತಲುಪಿದರು.

ಜೀವನ ಸಾಗಿದಂತೆ ಪ್ರತಿಯೊಬ್ಬರ ದಾರಿ ಬೇರೆ ಬೇರೆಯಾಗತೊಡಗುತ್ತವೆ, ಒಮ್ಮೆ ಪ್ರತೀ ಕೆಲಸವು, ವಿಚಾರಗಳು ಒಟ್ಟಿಗೆ ಮಾಡಿದ್ದರು. ದಾರಿ ಬೇರೆಯಾದಾಗ ಸ್ವಂತ ಕೆಲಸದಲ್ಲಿ ತೊಡಗಿ ಒಬ್ಬರ ಬಗ್ಗೆ ತಿಳಿದುಕೊಳ್ಳದಷ್ಟು ದೂರಾಗಿಬಿಡುವೆವು. ಆದರೆ ಮತ್ತೆ ಸಿಕ್ಕಾಗ ಅದೇ ಅತ್ಮೀಯತೆ ಉಳಿಯುವುದು ಸ್ನೇಹಿತರ ನಡುವೆ.

-ಶೀಲಾ ಗೌಡ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x