ಜೀವನದ ಆಸೆ ಆಕಾಂಕ್ಷೆಗಳು ಹಾಗೂ…..?: ಶೀಲಾ ಎಸ್.‌ ಕೆ.

ಒಂದು ಲೋಟ ಕಾಫಿ ಕೊಡ್ತಿಯಾ ಪದ್ಮ ಎಂದು ಹಜಾರಕ್ಕೆ ಬಂದು ಕುಳಿತರು ನಂಜುಂಡಪ್ಪ. ಕೈಯಲ್ಲಿ ಕಾಫಿ ಲೋಟ ಹಿಡಿದು ಬಂದ ಪದ್ಮ ತುಂಬ ಸುಸ್ತಾದವರಂತೆ ಕಾಣುತಿದ್ದಿರಿ ಎಂದು ಕೇಳಿದರು, ಆಗ ತಾನೇ ಕೆಲಸ ಮುಗಿಸಿ ಬಂದಿದ್ದ ತನ್ನ ಗಂಡನನ್ನ. ಸ್ವಲ್ಪ ಕೆಲಸ ಜಾಸ್ತಿ ಈಗ ಮೊದಲಿನಂತೆ ಅಲ್ಲ ಎಲ್ಲ ಹೊಸ ಹೊಸ ಪ್ರಯೋಗಗಳು, ಹೊಸ ಬಗೆಯ ಕೋಚಿಂಗ್ ಅಂತಾರೆ, ಈಗ ಅದನ್ನು ಕಲಿಯಲು ಅಥವಾ ಅಳವಡಿಸಿಕೊಳ್ಳಲು ಸ್ವಲ್ಪ ಸಮಯ ಹಾಗು ಶ್ರಮವಾಗುತ್ತಿದೆ ಅಷ್ಟೆ ಎಂದರು. ಸರಿ ಬೇಗ ಅಡುಗೆ ಮಾಡಿಬಿಡುತ್ತೇನೆ ಊಟ ಮಾಡಿ ಬೇಗ ಮಲಗಿ ರೆಸ್ಟ ತಗೊಳ್ಳಿ ಎನ್ನುತ ಒಳಗಡೆ ಹೋದರು ಪದ್ಮಮ್ಮ.

ಪುಟ್ಟ ಗ್ರಾಮದಲ್ಲಿ ಸರ್ಕಾರಿ ಶಾಲೆಯಲ್ಲಿ ಪ್ರಾದ್ಯಾಪಕರಾಗಿ ಕೆಲಸಮಾಡಿಕೊಂಡು ಜೀವನ ಸವೆದಿದ್ದರು ನಂಜುಂಡಪ್ಪ. ಮನೆಯ ಮುಂಭಾಗದಲ್ಲಿ ಕಾಫಿ ರುಚಿ ಸವಿಯುತ ಕುಳಿತವರಿಗೆ ಅಲ್ಲೇ ಆಡುತಿದ್ದ ಮಕ್ಕಳಲೊಬ್ಬ ನಾಳೆ ಇಂದ ಶಾಲೆಗೆ ೩ ದಿನ ರಜಾ ಎಂದು ಖುಷಿಯಾಗಿ ಕುಣಿಯುತಿದ್ದನ್ನು ಕಂಡು ತಮ್ಮ ಹಳೆಯ ನೆನಪಿಗೆ ಜಾರಿದರು.
ಮಕ್ಕಳನ್ನು ಶಾಲೆಗೆ ಕಳಿಸದ ಜನವಿರುವ ಗ್ರಾಮಕ್ಕೆ ಪೋಸ್ಟಿಂಗ್, ೧೦ ವರ್ಷದ ಮಗ, ಹೆಂಡತಿಯೊಂದಿಗೆ ಹೊಸ ಊರಿನಲ್ಲಿ ವಾಸ್ತವ್ಯ. ಆದರೆ ಛಲ ಬಿಡದ ಮೇಸ್ಟ್ರು ಶಾಲೆಗೆ ಮಕ್ಕಳನ್ನು ಕರೆ ತಂದರು, ಶುಚಿಗೊಳಿಸಿದರು, ಶಾಲಾ ಆವರಣದಲ್ಲಿ ಹುಡುಗರನ್ನು ಜೊತೆ ಸೇರಿಸಿಕೊಂಡು ಗಿಡ ಮರಗಳನ್ನು ಬೆಳಿಸಿದರು, ಎಲ್ಲರಿಗು ಶಾಲೆ ಇಷ್ಟವಾಗುವಂತೆ, ಮಕ್ಕಳು ಶಾಲೆಗೆ ಕಲಿಯೋಕೆ ಬರುವಂತೆ ಮಾಡಿದರು. ಸ್ವಲ್ಪ ವರ್ಷಗಳ ನಂತರ ಮಕ್ಕಳ ಸಂಖ್ಯೆ ಏರುತ್ತಿದ್ದಂತೆ ಹೊಸ ಮೇಸ್ಟ್ರುಗಳನ್ನು ಸರ್ಕಾರ ನೇಮಕ ಮಾಡಿತ್ತು, ಹಾಗೆ ಒಬ್ಬ ಹೆಡ್ ಮಾಸ್ಟರ್ ಸಹ ಬಂದರು. ಹೀಗೆ ಒಂದು ಮಾದರಿ ಶಾಲೆಯಾಗಿತ್ತು. ಹಾಗೆ ನಂಜುಂಡಪ್ಪ ಮೇಸ್ಟ್ರು ಅಂದರೆ ಮಕ್ಕಳಿಗೆ ಅಚ್ಚು ಮೆಚ್ಚು ಇಂದಿಗೂ. ತನ್ನ ಮಗನು ಕೂಡ ಅದೇ ಶಾಲೆಯಲ್ಲಿ ಕಲಿಯುತ್ತಿದ್ದನು. ಎಲ್ಲ ಮಕ್ಕಳು ಕಲಿತು ದೊಡ್ಡವರಾಗಿ ದೇಶಕ್ಕೆ ಬೆನ್ನೆಲುಬಾಗಬೇಕು, ದೇಶಕ್ಕೆ ಸೇವೆ ಮಾಡಬೇಕು ಎನ್ನೋದು ಮೇಸ್ಟ್ರು ಬಯಕೆ. ದೇಶ ಭಕ್ತಿಯನ್ನು ಮಕ್ಕಳಿಗೆ ತುಂಬುತಿದ್ದರು.
ಅದೊಂದು ದಿನ ಹೆಡ್ ಮಾಸ್ಟರ್ ಕರೆದು ನಿಮಗೆ ಸರ್ಕಾರದಿಂದ ಉತ್ತಮ ಅಧ್ಯಾಪಕ ಪ್ರಶಸ್ತಿ ಕೊಟ್ಟಿದೆ, ಡಿಸ್ಟ್ರಿಕ್ಟ್ ಹೆಡ್ ಕ್ವಾರ್ಟರ್ಸ್ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹೋಗಿ ಬನ್ನಿ ಎಂದು ಖುಷಿ ಇಂದ ಹೇಳಿದರು. ಶಾಲೆಯಲ್ಲಿ ಎಲ್ಲ ಮಕ್ಕಳಿಗೆ, ಸಹೋದ್ಯೋಗಿಗಳು ಖುಷಿಂದ ಹೆಮ್ಮೆಯಿಂದ ಬೀಗುತಿದ್ದರು. ಮೇಸ್ಟ್ರು ತಮ್ಮ ಹೆಂಡತಿ ಹಾಗು ಮಗನೊಡನೆ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹೋದರು, ಅಲ್ಲಿ ಎಲ್ಲ ಕಡೆ ಇಂದ ಬಂದ ಜನರಿದ್ದರು, ಗಣ್ಯ ವ್ಯಕ್ತಿಗಳಿದ್ದರು, ಅವರೊಟ್ಟಿಗೆ ಬಂದಿದ್ದ ಅವರ ಮಕ್ಕಳಿದ್ದರು. ರೀ ಅಡುಗೆ ರೆಡಿ, ಊಟ ಬಡಿಸಲೇ ಎಂಬ ಪದ್ಮಮ್ಮನ ಕರೆಗೆ ನೆನಪಿನಂಗಳದಿಂದ ಮನೆಯೊಳಗೆ ನೆಡೆದರು.

ಆ ಕಾರ್ಯಕ್ರಮದಲ್ಲಿ ನಮ್ಮ ಮೇಸ್ಟ್ರು ಮಗ ರಮೇಶನಿಗೆ ಸಿಟಿ ಇಂದ ಬಂದ ಮಕ್ಕಳನ್ನು ಕಂಡು ನಮಗೂ ಅವರಿಗೂ ವ್ಯತ್ಯಾಸವಿದೆ ಎನಿಸತೊಡಗಿತ್ತು. ಎಲ್ಲ ಮಕ್ಕಳೊಡನೆ ಬೆರೆತು ಕಾಲ ಕಳೆಯುತ್ತ ಅವರ ಹಾವ ಭಾವ ಅರಿಯತೊಡಗಿದ. ೪ ದಿನದ ಒಡನಾಟದಲ್ಲಿ ಅವನಿದ್ದ ಹಳ್ಳಿಗೂ ಮತ್ತು ಸಿಟಿಗೂ ವ್ಯತ್ಯಾಸವಿದೆ, ಸಿಟಿಯೆಲ್ಲಿ ಎಲ್ಲ ಸುಲಭವಾಗಿ ಸಿಗುತವೆ, ತುಂಬ ಸೌಲಭ್ಯವಿದೆ. ಸಿಟಿ ಜೀವನ ಮೋಜಿನದ್ದು, ಐಷಾರಾಮಿ ಹಾಗು ಹಳ್ಳಿಯಲ್ಲಿ ಕಷ್ಟದ ಬದುಕು ಎಂದು ತಲೆ ತುಂಬಿಕೊಂಡಿದ್ದನು. ಸಿಟಿಯಲ್ಲಿ ತನ್ನ ಮುಂದಿನ ಜೀವನವೆಂದು ಕನಸುಕಂಡನು.

ಓದಿನಲ್ಲಿ ಮುಂದೆ ಇದ್ದ ಮಗ ಒಂದು ಒಳ್ಳೆ ಸರ್ಕಾರಿ ನೌಕರಿ ಹಿಡಿದು ಒಳ್ಳೆ ಸಂತೋಷದ ಜೀವನ ನಮ್ಮ ಕಣ್ಣು ಮುಂದೆ ನೆಡೆಸುವನು ಎಂದೆಣಿಸಿದರು. ಇಂಜಿನೀಯರಿಂಗ್ ಮಾಡಬಯಸಿದ ಮಗನ ಕನಸಿಗೆ ಬೆನ್ನೆಲುಬಾಗಿ ನಿಂತ ದಂಪತಿಗಳು ಅವನನ್ನು ಡಿಸ್ಟ್ರಿಕ್ಟ್ ಹೆಡ್ಕ್ವಾರ್ಟನಲ್ಲಿ ಇದ್ದ ಇಂಜಿನಿಯರ್ ಕಾಲೇಜಿಗೆ ಸೇರಿಸಿದರು.
ಓದು ಮುಗಿಸಿ ಮನೆಗೆ ಮರಳಿದ ಮಗ ದೂರದ ದೇಶದಲ್ಲಿ ಸಿಕ್ಕ ಕೆಲಸದ ಬಗ್ಗೆ ತಿಳಿಸಿ ಹೋಗಬಯಸುವೆ ಎಂದನು. ಮಗನ ಆಸೆಗೆ ಒಲ್ಲೆಯೆನ್ನದೆ ಕಳಿಸಿಕೊಟ್ಟರು ಅಪ್ಪ, ಅಮ್ಮ. ಆದಷ್ಟು ಬೇಗ ಮರಳಿ ಬಂದು ಇಲ್ಲೇ ನೆಲೆಸಲು ವ್ಯವಸ್ಥೆ ಮಾಡಿಕೋ, ಒಂದು ಒಳ್ಳೇ ನಿರ್ಧಾರ ತೆಗೆದುಕೋ ಮುಂದಿನ ಜೀವನದ ಬಗ್ಗೆ ಎಂದು ಕಿವಿ ಮಾತು ಹೇಳಿದರು ಮಾಸ್ಟರು.

ಹೋದ ಒಂದೆರಡು ತಿಂಗಳು ದಿನ ರಾತ್ರಿ ಕರೆ ಮಾಡಿ ತಂದೆ ತಾಯಿಯ ಯೋಗಕ್ಷೇಮ ವಿಚಾರಿಸುತಿದ್ದ. ಅಮ್ಮನ ಹತಿರ ಅಲ್ಲಿನ ಜನ, ಭಾಷೆ, ರಸ್ತೆ, ಬಿಲ್ಡಿಂಗ್ ಹೀಗೆ ಎಲ್ಲದರ ಬಗ್ಗೆ ಹೊಗಳಿ ಹಾಡುತಿದ್ದ. ಮಗನ ಖುಷಿ ನೋಡಿ ಇಲ್ಲಿ ಇವರು ಖುಷಿಯಿಂದಿದ್ದರು. ಆದರೆ ಮತ್ಯಾವ ಮಕ್ಕಳಿಗೂ ದೇಶಕ್ಕಾಗಿ ದುಡಿಯಿರಿ ಎಂದು ಏಳುವುದನ್ನೇ ಬಿಟ್ಟುಬಿಟ್ಟರು ಮೇಷ್ಟ್ರು. ಅದೇ ಊರಿನಲ್ಲಿ ಹಾಗು ಹತ್ತಿರದ ರಾಜಧಾನಿಯಲ್ಲಿ ಇದ್ದ ತಮ್ಮ ಶಿಷ್ಯಂದಿರು ಬಂದು ಮಾತಾಡಿಸಿದಾಗ ಅವರಿಗಾಗುತಿದ್ದ ಆನಂದ ಹೇಳತೀರದು. ಪದ್ಮಮ್ಮ ಕೂಡ ಮೇಷ್ಟ್ರು ಎಲ್ಲಾ ಶಿಷ್ಯರನ್ನು ತನ್ನ ಮಗನಂತೆ ಕಾಣುತ್ತಿದ್ದರು. ಮನೆ ಪಾಠಕ್ಕೆ ಬಂದಾಗ ಚೆನ್ನಾಗಿ ಗಮನಿಸಿಕೊಳ್ಳುತಿದ್ದರು, ಹಾಗಾಗಿ ಅವರೆಲ್ಲರೂ ಶಾಲೆಗೆ ಹೋಗಿ ಮೇಸ್ಟ್ರನ್ನು ಮಾತಾಡಿಸಿಕೊಂಡು ಹೋಗುವುದಕ್ಕಿಂತ ಮನೆಗೆ ಹೋಗಿ ಇಬ್ಬರನ್ನು ಮಾತಾಡಿಸಿಕೊಂಡು ಹೋಗಲು ಇಷ್ಟಪಡುತ್ತಿದ್ದರು.

ಅತ್ತ ರಮೇಶ್ ತನ್ನ ಕೆಲಸ, ತಿರುಗಾಟ, ಸ್ನೇಹಿತರೊಡನೆ ಕಾಲ ಕಳೆಯುತ್ತಾ ದಿನ ದೂಡಲಾರಂಭಿಸಿದ. ತನ್ನ ಸ್ನೇಹಿತರು ನಮ್ಮ ದೇಶಕ್ಕೆ ಹಿಂದಿರುಗುವುದನ್ನು ನೋಡಿ ದಡ್ಡರು ಎಂದೆನಿಸುತಿತ್ತು ಅವನಿಗೆ.
ಈಗಾಗಲೇ 4 ವರ್ಷ ಕಳೆದಿತ್ತು. ದಿನಾ ಬರುತಿದ್ದ ಕರೆ ಈಗ ವಾರಕೊಮ್ಮೆಯಾಗಿತ್ತು. ಯೋಗಕ್ಷೇಮ ವಿಚಾರಿಸಿ ಮುಗಿಯುತ್ತಿದ್ದವು ಮಾತುಗಳು.

ಪದ್ಮಮ್ಮ ಬಹಳ ಸರಿ ಊರಿಗೆ ಬಂದು ಮದುವೆಯಾಗಿ ಹೋಗು ಎಂದು ಹೇಳಿದರು ತಲೆ ಕೆಡಿಸಿಕೊಳ್ಳಲಿಲ್ಲ ರಮೇಶ, ಆ ಮಾತು ಬಂದಾಗಲೆಲ್ಲಾ ಆದರಾಯಿತು ಈಗ ಏನು ಅರ್ಜೆಂಟ್ ಎಂದು ತಳ್ಳಿ ಹಾಕುತಿದ್ದ. ಹೀಗೆ ಇನ್ನೊಂದೆರಡು ವರ್ಷಗಳುರುಳಿದವು. ತನ್ನೆಲ್ಲ ಸಹಪಾಠಿಗಳಿಗೂ ಮದುವೆಯಾಗಿ ಮಕ್ಕಳಾಗಿದ್ದವು. ಅಲ್ಲಿ ಹೊರ ದೇಶದಲ್ಲಿ ಇಲ್ಲಿಂದ ಹೋಗಿದ್ದ ಕೆಲ ಸಮಕಾಲೀನರು ಮದುವೆಯಾಗಿ ತಮ್ಮ ಹೆಂಡತಿಯರೊಂದಿಗೆ ಸಂಸಾರದಲ್ಲಿ ಮುಳುಗಿದ್ದರು, ಇನ್ನು ಕೆಲವರು ದುಡಿಮೇನೇ ಎಲ್ಲ ಅಲ್ಲ, ಮದುವೆಯಾಗಿ ವಯಸಾದ ಅಪ್ಪ ಅಮ್ಮನ ಜೊತೆ ಇರ್ಬೇಕು ಎಂದೇಳಿ ಮರಳಿ ಬಂದರು, ಮತ್ತೆ ಕೆಲವರಿಗೆ ಅವಕಾಶಗಳಿಲ್ಲದೆ ಹಿಂದಿರುಗಬೇಕಾಯಿತು. ಹೀಗಾಗಿ ರಮೇಶನಿಗೆ ಆಗಾಗ ಒಂಟಿತನ ಕಾಡತೊಡಗಿತು, ಯೋಚನೆ ಮಾಡಿ ಈ ಸಾರಿ ಊರಿಗೆ ಬರುವೆ ಮಾದುವೆ ಮಾಡಿಕೊಳ್ಳುವೆ ಎಂದು ಅಮ್ಮನಿಗೆ ಕರೆ ಮಾಡಿ ಹೇಳಿದನು. ಖುಷಿಯಿಂದ ಪದ್ಮಮ್ಮ ಎಷ್ಟೇ ಹೆಣ್ಣು ನೋಡಿದರು ರಮೇಶ ಯಾವ ಹೆಣ್ಣನ್ನು ಒಪ್ಪುತ್ತಿರಲಿಲ್ಲ.

ಮೇಷ್ಟ್ರಿಗೆ ವಯೋ ಸಹಜ ಕಾಯಿಲೆಗಳಿಂದ ಹಾಸಿಗೆ ಹಿಡಿದರು, ಅವರ ಪ್ರೀತಿಯ ಶಿಷ್ಯಂದಿರು ಎಲ್ಲ ಊರಿನವರು ಬಂದು ಯೋಗಕ್ಷೇಮ ವಿಚಾರಿಸಿ ಬೇಕು ಬೇಡಗಳೆಲ್ಲವನ್ನು ಮಾಡಿಕೊಡುತ್ತಿದ್ದರು ಸ್ವತಃ ಅವರ ತಂದೆಗೆ ಮಾಡುವ ಹಾಗೆ. ಹಾಗೆ ಪದ್ಮಮ್ಮನಿಗೆ ಎಲ್ಲ ರೀತಿಯಲ್ಲೂ ನೆರವಿಗೆ ಬಂದರು. ಆದರೆ ಹೆತ್ತ ಮಗ ರಜವಿಲ್ಲ, ಹಿಂದುರಿಗಿ ಬಂದರೆ ಮತ್ತೆ ಬರಲು ಅವಕಾಶಗಳು ಸಿಗುವುದಿಲ್ಲ ಎಂದೆಲ್ಲ ನೆಪ ಹೇಳಿಕೊಂಡು ಬರಲೇ ಇಲ್ಲ. ಇತ್ತ ಮೇಷ್ಟ್ರು ಇಹಲೋಕ ತೇಜಿಸಿದರು ಆದರೂ ತಾನು ಬರಲಿಲ್ಲ.

ಪದ್ಮಮ್ಮ ಒಂಟಿಯಾಗಿ ಕೆಲ ವರ್ಷಗಳು ಕಳೆದರು.
ಒಂದು ದಿನ ತಮ್ಮ ಮನೆಯ ಬಾಗಿಲಲ್ಲಿ ಬಂದು ನಿಂತ ಕಾರೊಂದನ್ನು ಕಂಡು ಪದ್ಮಮ್ಮ ಯಾರಿರಬಹುದು ಎಂದು ಯೋಚಿಸುವಷ್ಟರಲ್ಲಿ ರಮೇಶ ಅಮ್ಮ ಎಂದನು. ಎಷ್ಟೆ ಆದರು ಹೆತ್ತ ಕರುಳು ಮಗನನ್ನು ಕಂಡು ಖುಷಿಪಟ್ಟರು. ದಿನ ಕಳೆದಂತೆ ರಮೇಶ ಅಲ್ಲೇ ವ್ಯವಸಾಯ ಮಾಡುವುದಾಗಿ ತಿಳಿಸಿ ಅಪ್ಪನ ಸ್ವಲ್ಪ ಜಮೀನಿನಲ್ಲಿ ಸಾವಯವ ಕೃಷಿ ಶುರು ಮಾಡಿದನು. ತುಂಬಾ ಜನ ಎಷ್ಟೊಂದು ಓದಿ, ಹೊರ ದೇಶದಲ್ಲಿ ದುಡಿದು ಈಗ ಇಲ್ಲಿ ಬಂದು ವ್ಯವಸಾಯ ಎಂದು ಹಂಗಿಸಿದರು, ಹೀಯಾಳಿಸಿದರು ದೃತಿಕೆಡದೆ ತನ್ನ ನಿರ್ಧಾರದಂತೆ ನೆಡೆದುಕೊಂಡನು.

ಕೆಲದಿನಗಳೆದಂತೆ ದೂರದ ಸಂಬಂಧಿಯ ಮಗಳನ್ನು ತಂದು ಪದ್ಮಮ್ಮ ಅತನಿಗೆ ಮದುವೆ ಕೂಡ ಮಾಡಿದರು. ಕೃಷಿಕನಾಗಿ ಒಳ್ಳೇ ಇಳುವರಿ ಪಡೆದು, ಒಳ್ಳೇ ಹೆಸರನ್ನು ಸಂಪಾದಿಸಿದ. ಎಲ್ಲ ಕಡೆ ಅವನ ಹಾಗು ಅವನ ಸಾವಯವ ಕೃಷಿಯದ್ದೇ ಚರ್ಚೆ.
ಹೀಗಿರುವಾಗ ಒಂದು ದಿನ ತನ್ನನ್ನು ಕಾಣಲು ಬಂದ ಸ್ನೇಹಿತನೊಂದಿಗೆ ಊರಿನ ಹೊರಗಿನ ಟಿ ಅಂಗಡಿಯಲ್ಲಿ ಇಬ್ಬರು ಮಾತನಾಡುವಾಗ ಸ್ನೇಹಿತನು ಕೇಳಿದನು ಹೊರದೇಶದಲ್ಲಿರಬೇಕು, ಐಷಾರಾಮಿ ಜೀವನ ನೆಡೆಸಬೇಕು ಅಂತಿದ್ದವನಾ ನೀನು. ಅಲ್ಲಿಂದ ಬಂದೆ ಸರಿ, ಇಲ್ಲಿ ಸಿಟಿಯಲ್ಲಿ ಕೆಲಸ ಮಾಡಿಕೊಂಡು ಅಮ್ಮನನ್ನು ನೋಡಿಕೊಂಡು ಇರುವೆ ಎಂದೆನಣಿಸಿದೆವು ಎಲ್ಲರು ಆದರೆ ನೀನು ಮಾಡಿದ್ದೆ ಬೇರೆ. ಏನಾಯಿತು, ಯಾಕೆ ಈ ನಿರ್ಧಾರ ಯಾರ ಬಳಿಯೂ ಹಂಚಿಕೊಂಡಿಲ್ಲವಲ್ಲ ಗೆಳೆಯ ಎಂದಾಗ.
ದೂರದ ಬೆಟ್ಟ ನುಣ್ಣಗೆ ಎಂದು ರಮೇಶ್ ಏನೋ ಯೋಚನೆಯಲ್ಲಿ ಕಳೆದು ಹೋದನು.

ತಾನು ಒಂಟಿತನದಿಂದ ಅನುಭವಿಸಿದ ವೇದನೆ. ಹೆಚ್ಚು ಕೆಲಸ, ಅದನ್ನು ನಿಭಾಯಿಸಲಾಗೆ ಒದ್ದಾಡಿದ ದಿನಗಳು, ಹುಷಾರು ತಪ್ಪಿದಾಗ ಒಂದು ಲೋಟ ನೀರು ಕೊಡಲು ಪಕ್ಕದಲ್ಲಿ ನನ್ನವರು ಇಲ್ಲದ ಆ ಜೀವನ ನೆನೆಯುತಿದ್ದನು. ಅಷ್ಟರಲ್ಲಿ ರಮೇಶ ಎಂದು ಸ್ನೇಹಿತ ಕರೆದಾಗ ಅಪ್ಪನ ಮುಖವನ್ನು ನೋಡಲಾಗಲಿಲ್ಲ ಆ ನೋವು ಜೀವನ ಪೂರ್ತಿ ನನ್ನೆದೆಯಲ್ಲಿ ಉಳಿದುಬಿಟ್ಟಿದೆ ಅವರ ಆಸೆಯಂತೆ ನಾನು ಇಲ್ಲೇ ನಮ್ಮ ಮನೆಯಲ್ಲೇ ಇದ್ದು ದೇಶಕ್ಕೆ ಒಳ್ಳೇ ಹೆಸರು ತರಬೇಕು ಎಂದುಕೊಂಡೆ ಇಲ್ಲಿ ಬಂದು ಸಾವಯವ ಕೃಷಿ ಶುರು ಮಾಡಿದೆ ಹಾಗು ಅದರಲ್ಲೇ ಯಶಸ್ಸು ಕಾಣುತಿದ್ದೇನೆ ಎಂದನು. ಹೀಗೆ ಇಬ್ಬರು ಮಾತನಾಡುತ್ತಾ ಕೆಲ ಸಮಯ ಕಳೆದು ತಮ್ಮ ಮನೆ ಕಡೆ ಹೊರಟರು.

ಎಲ್ಲಾರಿಗೂ ಅವರ ಜೀವನ ದೊಡ್ಡದು ಅದರಲ್ಲಿ ಅವರ ಅಸೆ ಆಕಾಂಕ್ಷೆಗಳಿಗೆ ಮಹತ್ವ. ಅದರೊಟ್ಟಿಗೆ ನಮ್ಮನ್ನು ಅಂತ ಅಸೆ ಆಕಾಂಕ್ಷೆಗಳನ್ನು ಪಡೆಯಲು ಜೊತೆಯಾದ, ಮುಖ್ಯ ಪಾತ್ರವಹಿಸಿದ ಅಪ್ಪ ಅಮ್ಮನಿಗೆ ದೊಡ್ಡ ಜೀವನದಲ್ಲಿ ಒಂದು ಚಿಕ್ಕ ಜಾಗ ಮೀಸಲಿರಿಸಿದರೆ ಕಳೆದುಕೊಳ್ಳುವುದೇನಿದೆ.

ಶೀಲಾ ಎಸ್.‌ ಕೆ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
Girija Jnanasundar
Girija Jnanasundar
3 years ago

ತುಂಬಾ ಸೊಗಸಾಗಿ ಬರೆದಿದ್ದೀರ.ಪರದೇಶದ ಅಮಲು ಮತ್ತು ಅದರಲ್ಲಿ ಕಳೆದುಕೊಳ್ಳುವ ನಮ್ಮತನ,ನಿಜಕ್ಕೂ ಮನಮುಟ್ಟುವಂತೆ ಮೂಡಿದೆ.

Mamatha
Mamatha
3 years ago

Right message in a nice way… 👍

Mamatha
Mamatha
3 years ago

Nice message at the end.
Simple kannada… Ellarigu artha aago thara idhe

3
0
Would love your thoughts, please comment.x
()
x