Facebook

ಪ್ರೀತಿಯಲ್ಲಿ ನಾ ಎಡವಿದೆ ಆದರೇ….. ನೀ…!: ಪಿ ಎಸ್ ಜೀವನ್ ಕುಮಾರ್ ಕಲ್ಲೇಗ

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರೀತಿ ಎಂಬುವುದು ಯಾರ ಅನುಮತಿ ಕೇಳಿ ಹುಟ್ಟುವುದಿಲ್ಲ. ಪ್ರೇಮದ ಬಲೆಯಲ್ಲಿ ಸಿಲುಕಿ ಅದರಿಂದ ಹೊರಬರುವ ತಾಳ್ಮೆ ಒಂದಿದ್ದರೆ ಜೀವನದಲ್ಲಿ ಯಾವುದೇ ಕಷ್ಟಗಳು ಎದುರಾದರೆ ಅದು ಕಷ್ಟ ಎಂದು ಅನಿಸುವುದಿಲ್ಲ.

ನಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದವಳು ನನ್ನ ಹತ್ತಿರ ಬಂದು ಬ್ರೇಕ್ ಅಪ್ ಎಂದು ಹೇಳಿದಾಗ ಏನೂ ಅರ್ಥವಾಗುವುದಿಲ್ಲ. ಬದಲಿಗೆ ವಿಪರೀತವಾದ ಕೋಪ, ತಡೆಯಲಾರದಷ್ಟು ದುಃಖ, ಸಹಿಸಲಾರದಷ್ಟು ನೋವು ಶುರುವಾಗುತ್ತದೆ. ಆ ಕ್ಷಣ ಎಲ್ಲಿಗೆ ಹೋಗಬೇಕು, ಏನು ಮಾಡಬೇಕೆಂದು ಅರ್ಥವಾಗುವುದಿಲ್ಲ. ಆ ಕ್ಷಣ ಪ್ರಪಂಚದಲ್ಲಿ ಎಷ್ಟೋಜನ ಇದ್ದರೂ ಯಾರು ನನ್ನ ಕಣ್ಣಿಗೆ ಕಾಣಲಿಲ್ಲ, ನನ್ನ ಕಣ್ಣಿಂದ ನನ್ನ ಅನುಮತಿ ಇಲ್ಲದೆಯೇ ಕಣ್ಣೀರು ಜಾರಿ ಹರಿಯಿತು. ಆ ಸಮಯದಲ್ಲಿ ಮನದಲ್ಲಿ ಮೂಡಿದ ಎರಡು ಪ್ರಶ್ನೆಗಳು ಬಾರೀ ನೋವನ್ನು ಉಂಟು ಮಾಡಿತು. ನನ್ನನ್ನು ಯಾಕೆ ಬಿಟ್ಟು ಹೋದಳು….? ನಾನು ಏನು ತಪ್ಪು ಮಾಡಿದೆ….?

ಈ ಎರಡು ಪ್ರಶ್ನೆಗಳಿಗೆ ಉತ್ತರ ಸಿಗದೆ ಮೊಬೈಲ್‍ನಲ್ಲಿ ಇದ್ದಂತಹ ಪ್ರೇಯಸಿಯ ಫೋಟೋ ನೋಡುತ್ತಾ ಆಕೆ ವಾಟ್ಸಾಪ್‍ನಲ್ಲಿ ಮಾಡಿದ ಮೆಸ್ಸೇಜ್ ನೋಡುತ್ತಾ ವೇದನೆಯ ಸಾಗರದಲ್ಲಿ ಎಲ್ಲರು ಇದ್ದರೂ ಏಕಾಂಗಿಯಾಗಿ ಮುಳುಗಿರುತ್ತಿದ್ದೆ. ಇವೆಲ್ಲದಕ್ಕಿಂತ ತುಂಬಾ ಕಷ್ಟ ಕೊಡುವ ಸಂಗತಿಯೆಂದರೆ ರಾತ್ರಿ ಅಪ್ಪ, ಅಮ್ಮ ಹಾಗು ಅಣ್ಣನ ಜೊತೆ ಮಲಗಿರುವಾಗ ಒಂದು ಚೂರೂ ಶಬ್ಧ ಮಾಡದೆ ಬೆಡ್‍ಶೀಟ್ ಹೊದ್ದುಕೊಂಡು ಅಳುವುದು ಎಲ್ಲದರಕ್ಕಿಂತ ಹೆಚ್ಚು ನರಕ ಯಾತನೆಯನ್ನು ನೀಡುತ್ತದೆ. ಆದರೆ ನಾನು ಅದನ್ನು ದಿನಾಲೂ ಮಾಡುತ್ತಿದ್ದೆ. ಒಬ್ಬಳು ಹುಡುಗಿ ಅಳಲು ಹಲವಾರು ಕಾರಣಗಳಿರುತ್ತದೆ ಆದರೆ ಒಬ್ಬ ಹುಡುಗ ಅಳುತ್ತಿದ್ದಾನೆ ಎಂದರೆ ಅದಕ್ಕೆ ಒಂದೇ ಒಂದು ಕಾರಣವಿರುತ್ತದೆ ಅದೇನೆಂದರೆ ತನ್ನ ತಾಯಿಗಿಂತ ಮಿಗಿಲಾಗಿ ಪ್ರೀತಿಸಿದ ಹುಡುಗಿ ಕೈ ಕೊಟ್ಟಾಗ ಮಾತ್ರ. ಆ ನೋವಿನಿಂದ ಹೊರಬರಲಾರದೆ ಕೆಟ್ಟ ಚಟಗಳಿಗೆ ಬಲಿಪಶು ಆಗಿಬಿಟ್ಟೆ. ಪ್ರೀತಿ ಎಂದರೆ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಕಷ್ಟದಲ್ಲೂ ಸುಖದಲ್ಲೂ, ನೋವಿನಲ್ಲೂ ನಲಿವಿನಲ್ಲೂ ಜೊತೆಯಿದ್ದು ಒಂದೇ ಪ್ರಾಣದಂತಿರಬೇಕು. ಇದಲ್ಲದೆ ದೈಹಿಕ ಆನಂದಕ್ಕೋಸ್ಕರ ಹುಟುವ ಪ್ರೀತಿ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ. ಇದು ನೀರಿನ ಮೇಲೆ ಹುಟ್ಟಿದ ಗುಳ್ಳೆಗಳ ತರ ಕ್ಷಣಿಕ ಮಾತ್ರ. ನೂರರಲ್ಲಿ 99% ಲವ್ ಫೈಲ್ಯೂರ್ ಆಗಲು ಕಾರಣ ಮಿಸ್ ಅಂಡರ್ ಸ್ಟಾಂಡಿಂಗ್.

ಒಂದು ಕ್ಷಣ ವಿಶ್ರಾಂತಿಯಿಂದ ಕುಳಿತು ತರ್ಕಯುತವಾಗಿ ಯೋಚಿಸಿದೆ ಪ್ರೀತಿ ಮುರಿದು ಹೋದ ನಂತರ ಸಾಯಲು ಹೋಗುವ ಮುನ್ನ ನನ್ನನು ಒಂಬತ್ತು ತಿಂಗಳು ಹೆತ್ತು ಹೊತ್ತು, ನಾನು ಎಡವಿ ಬಿದ್ದಾಗ ಕೈ ಹಿಡಿದು ಎದ್ದು ನಿಲ್ಲಿಸಿ, ನನಗೆ ನೋವಾದಾಗ ಆಕೆಯ ಕಣ್ಣಲ್ಲಿ ಭಷ್ಪ ಹರಿಸುತ್ತಾ ನನ್ನ ಜೀವನದ ನೋವು ನಲಿವಿನಲ್ಲೂ ಹೆಗಲಿಗೆ ಆಧಾರವಾಗಿ ನಿಲ್ಲುವ ವ್ಯಕ್ತಿಯೆಂದರೆ ಅವಳು ತಾಯಿ. ಎಂತಹದೇ ಪರಿಸ್ಥಿತಿಯಲ್ಲೂ ಅವಳು ನನ್ನನು ಬಿಟ್ಟು ಕೊಡುವುದಿಲ್ಲ ಹಾಗಿರುವಾಗ ನಾನಾದರು ಯಾವ ಕಾರಣಕ್ಕೆ ಅವಳನ್ನು ಬಿಟ್ಟು ಹೋಗಬೇಕು. ಎಂತಹುದೇ ಪರಿಸ್ಥಿತಿಯಲ್ಲಿಯೂ ಏನೇ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಜನ್ಮದಾತೆಯ ಅಭಿಪ್ರಾಯವನ್ನು ತಿಳಿಯುವುದು ಉತ್ತಮ ಏಕೆಂದರೆ ಅವಳು ಯಾವ ಪರಿಸ್ಥಿತಿಯಲ್ಲೂ ನಮ್ಮನ್ನು ಬಿಟ್ಟುಕೊಡಲಾರಳು ಆದರೆ ನನು ಇದನ್ನು ಅರ್ಥಮಾಡುವುದರಲ್ಲಿ ಕೊಂಚ ತಡಮಾಡಿದೆ.

ಪ್ರೇಮಿಗಳು ಬ್ರೇಕ್ ಅಪ್ ಆದ ಬಳಿಕ ತನ್ನ ಸರ್ವಸ್ವವನ್ನು ಕಳೆದುಕೊಂಡೆಯೆಂದು ಭಾವಿಸಿ, ಸಾವಿನ ಹಾದಿಯನ್ನು ಹಿಂಬಾಲಿಸುವವರು ಒಮ್ಮೆ ತಮ್ಮ ಪರಿವಾರದ ಪರಿಸ್ಥಿತಿಯನ್ನು ಯೋಚಿಸಿ. ನಾನು ಯಾರು…..! ಯಾತಕ್ಕೋಸ್ಕರ ಈ ನಿರ್ಧಾರವನ್ನು ತೆಗೆದುಕೊಂಡೆ…..? ನನ್ನ ಅಂತ್ಯದಿಂದಾಗುವ ಪ್ರಯೋಜನವಾದರೂ ಏನು…..? ಎಂದು ತಾಳ್ಮೆಯಿಂದ ನೆನೆದರೆ ಸಾಕು ಮುಂದೆಂದು ಅಂತಹ ನಿರ್ಧಾರವನ್ನು ತೆಗೆದುಕೊಳ್ಳಲಾರಿರಿ. ಹುಟ್ಟುವಾಗ ಯಾರ ಅನುಮತಿ ಕೇಳಿಯೂ ಹುಟ್ಟುವುದಿಲ್ಲ; ಹಾಗಾದರೆ ಆತ್ಮಹತ್ಯೆ ಮಾಡಲು ನಿಮಗೆ ಅನುಮತಿಯಾದರೂ ಯಾರು ನೀಡಿದ್ದು. ಪ್ರಪಂಚದಲ್ಲಿ ಎಲ್ಲವೂ ನಶ್ವರ ಹುಟ್ಟು ಸಾವು ಎಂಬುವುದು ಜಗದ ನಿಯಮ ಅದನ್ನು ತಪ್ಪಿಸುವ ಶಕ್ತಿ ಯಾರಿಗು ಇರುವುದಿಲ್ಲ ಹಾಗಂತ ಅದನ್ನು ನಾವೇ ತಂದುಕೊಳ್ಳುವುದು ಮಹಾ ಅಪರಾದ. ಏನೇ ಆಗಲಿ ಎಂತಹದೇ ಪರಿಸ್ಥಿತಿಯಲ್ಲಿ ಕಷ್ಟಗಳನ್ನು ಎದುರಿಸಿ ನಿಲ್ಲುವ ಧೈರ್ಯ ಒಂದಿದ್ದರೆ ಸಾಕು ನಾವು ಏನನ್ನೂ ಬೇಕಾದರು ಸಾಧಿಸಬಹುದು.
-ಪಿ ಎಸ್ ಜೀವನ್ ಕುಮಾರ್ ಕಲ್ಲೇಗಕನ್ನಡದ ಬರಹಗಳನ್ನು ಹಂಚಿ ಹರಡಿ
You can leave a response, or trackback from your own site.

Leave a Reply