Facebook

ಆಧ್ಯಾತ್ಮಿಕತೆಯ ಆಧುನಿಕ ನೆಲೆ……: ಪ್ರವೀಣ್.ಪಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

ಆಧುನಿಕತೆಯ ಸುಳಿಯಲ್ಲಿ ಸಿಲುಕಿರುವ ಇಂದಿನ ಸಮಾಜ ವಿಭಿನ್ನತೆಯೊಂದಿಗೆ ಹೊಸ ಬದುಕಿಗೆ ತೆರದುಕೊಳ್ಳಲು ಹವಣಿಸುತ್ತಿದೆ. ಬದಲಾದ ಸಾಮಾಜಿಕ ವ್ಯವಸ್ಥೆಯಲ್ಲಿ ಹೊಸತನದ ಅಲೆಯೊಂದು ಜನರನ್ನ ಬೇರೆ ದಿಕ್ಕಿಗೆ ಸೆಳೆಯುತ್ತಿದೆ. ಮಾರ್ಡನಿಟಿಗೆ ಮಾರುಹೋದ ಜನರು ತಮ್ಮ ಆಲೋಚನೆ ಹಾಗೂ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಲು ಆರಂಭಿಸಿದ್ದಾರೆ. ಪ್ರೀತಿಯು ಆಧುನಿಕತೆಯ ನೆಲೆಯಲ್ಲಿ ನಡೆಯುತ್ತಿದೆ. ಇದರಲ್ಲಿ ಆಧ್ಯಾತ್ಮಿಕ ಕ್ಷೇತ್ರವು ಹೊರತಾಗಿಲ್ಲ.

ಆಧ್ಯಾತ್ಮವು ಇಂದು ಉದ್ಯಮಶೀಲತೆಯ ತಳಹದಿಯಲ್ಲಿ ಸಾಗುತ್ತಿದೆ. ಆಚಾರ, ಸಂಪ್ರದಾಯ, ಪೂಜೆ, ಪುನಸ್ಕಾರ, ಸಂಸ್ಕೃತಿ ಎಲ್ಲವೂ ಆಧುನೀಕರಣದೊಂದಿಗೆ ಬೆರೆತು ಹೋಗಿದೆ. ಇದರ ಪರಿಣಾಮ ಹುಡುಗರಲ್ಲಿ ಬೇರೊಂದು ಆಧ್ಯಾತ್ಮಿಕ ಶೈಲಿವು ರೂಢಿಯಲ್ಲಿರುವುದನ್ನು ಗಮನಿಸಬೇಕಿದೆ. ಬೇರೆ ಬೇರೆ ಮಜಲುಗಳಲ್ಲಿ ಹುಡಗರ ಆಧ್ಯಾತ್ಮ ರೂಪುಗೊಂಡಿರುತ್ತದೆ.

ಹುಡುಗರ ಧಾರ್ಮಿಕ ಸ್ವಭಾವ ತೀರಾ ಸಂಪ್ರದಾಯಕತೆಯಿಂದ ಕೂಡಿರದೆ ಪಾಶ್ಚಿಮಾತ್ಯ ಸಂಸ್ಕತಿಯ ಆಕರ್ಷಣೆಯೊಂದಿಗೆ ಬೇರೆತುಹೋಗಿದೆ. ಜೀವನಶೈಲಿಯಲ್ಲಿನ ಕೆಲವೊಂದು ಆಂತರೀಕ ಬದಲಾವಣೆಗಳು ಹುಡುಗರ ಮನಸ್ಥಿತಿಯ ಮೇಲೆ ಗಾಢವಾಗಿ ಪರಿಣಾಮ ಬೀರುತ್ತದೆ.

ಆಧುನಿಕತೆಯೊಂದಿಗೆ ಬೆಸೆದ ಆಧ್ಯಾತ್ಮ.
ಆಧುನಿಕತೆಯಿಂದಾಗಿ ಸಂಪ್ರದಾಯಿಕ ಕುರುಹುಗಳು ಮಾಯವಾಗಿ ಹೊಸ ಪರಿಯ ಆಚರಣೆಗಳು ಚಾಲ್ತಿಗೆ ಬಂದವು. ಹುಡುಗರು ಮಾರ್ಡ್ ನಿಟಿ ಕಾಲಕ್ಕೆ ತಕ್ಕಂತೆ ಆಧ್ಯಾತ್ಮಿಕ ಅಂಶಗಳನ್ನು ರೂಢಿಸಿಕೊಂಡರು. ಆಧ್ಯಾತ್ಮಿಕತೆ ಎನ್ನುವುದು ಕೇವಲ ನಂಬಿಕೆ ಎನ್ನುವ ನಿರ್ಧಾರಕ್ಕೆ ಯುವಮನಸ್ಥಿತಿಗಳು ಬದಲಾದವು. ಮನೆಯಲ್ಲಿ ಪೋಷಕರ ಒತ್ತಾಯದ ಮೇರೆಗೆ ಯುವಕರು ಪೂಜೆ, ಹಬ್ಬಹರಿದಿನಗಳಲ್ಲಿ ಭಾಗವಹಿಸುತ್ತಾರೆಯೇ ಹೊರತು ಆಧ್ಯಾತ್ಮಿಕತೆಯ ಮೇಲಿರುವ ಗೌರವದಿಂದ ಅಲ್ಲ. ನಾಸ್ತಿಕ ಯುಕರ ನಡುವೆಯೋ ಕಟ್ಟ ಸಂಪ್ರದಾಯಕ್ಕೆ ಮಾರು ಹೋದ ಯುವಕರನ್ನು ನಾವು ಕಾಣಬಹುದು. ಸಮಾಜದಲ್ಲಿ ಎಲ್ಲ ರೀತಿಯ ಮನಸ್ಥಿತಿ ಹೊಂದಿದವರು ಜೀವಿಸುತ್ತಿದ್ದು, ಅವರವರ ಭಾವನೆಗೆ ತಕ್ಕಂತೆ ಆಧ್ಯಾತ್ಮಿಕತೆ ಮೈಗೂಡಿಸಿಕೊಂಡಿರುತ್ತಾರೆ.

ಸಂಪ್ರದಾಯವಾದ ಗುಡ್ ಬೈ
ಸಂಪ್ರದಾಯಕತೆಯನ್ನು ವಿಭಿನ್ನ ದೃಷ್ಠಿಕೋನದಿಂದ ನೋಡುವವರಿರುವ ಸಮಾಜಿಕ ವ್ಯವಸ್ಥೆಯಲ್ಲಿ ಕಟ್ಟ ಸಂಪ್ರದಾಯವನ್ನ ಇಂದಿನ ಯುವಕರು ಒಪ್ಪುವುದು ತೀರಾ ಕಡಿಮೆ. ಮೋಜು, ಮಸ್ತಿ ಎನ್ನುವ ಕಾಲಘಟ್ಟದಲ್ಲಿ ಸಂಪ್ರದಾಯಗಳ ಆಚರಣೆ ಯುವಕರಿಗೆ ಕಿರಿಕಿರಿ ಯಾಗಲಾರಂಭಿಸಿದೆ. ಒತ್ತಡದ ಬದುಕಿನಲ್ಲಿ ಸಂಪ್ರದಾಯಬದ್ಧವಾಗಿ ಮಾಡುವ ಆಚರಣೆಯ ಬಗೆಗಳಿಗೆ ಹುಡುಗರಿಗೆ ಆಸಕ್ತಿತೋರುತ್ತಿಲ್ಲ ಸಂಪ್ರದಾಯದ ಮೌಲ್ಯಅರಿತರೆ ಸಾಕು ಅದರ ಪಾಲನೆ ಬೇಡ ನಮಗೆ ಎನ್ನುವ ವಾದಕ್ಕೆ ಹುಡುಗರು ಬಂದು ತಲುಪಿದ್ದಾರೆ. ಕೆಲವು ಸಂಪ್ರದಾಯಗಳು ಕೇವಲ ನಾಮಕಾವಸ್ಥೆ ಎಂಬತೆ ಜಾರಿಯಲ್ಲಿರುವುದನ್ನು ಸಹ ನೋಡಬಹುದಾಗಿದೆ.

ಪಾಶ್ಚಾತ್ಯ ಸಂಸ್ಕೃತಿಗೆ ಹೆಚ್ಚಿದ ಒಲವು
ಪುರಾತನ ಸಂಸ್ಕೃತಿ, ಸಂಪ್ರದಾಯಗಳ ಮೇಲೆ ಪಾಶ್ಚತ್ಯೀಕರಣದ ಪ್ರಭಾವ ಆಗಾಧವಾಗಿ ಪ್ರಭಾವ ಬೀರಿದ ಮೇಲೆ ಕ್ರಮೇಣವಾಗಿ ಆಚರಣೆಗಳಲ್ಲಿ ಕೆಲವೊಂದು ಬದಲಾವಣೆಗಳು ಆಗಲಾರಂಭಿಸಿದವೂ. ಆಧುನಿಕ ಆಚರಣೆಗಳಿಗೆ ಮನಸೋತ ಹುಡುಗರು ಅದೇ ಹಾದಿಯಲ್ಲಿ ಬೆಳವಣಿಗೆ ಹೊಂದಲು ಅಣಿಯಾದರು. 21ನೇ ಶತಮಾನದಲ್ಲಿ ಸಂಸ್ಕೃತಿಯ ಸ್ಥಾನ ಪಲ್ಲಟ ಕ್ರೀಯೆ ಹೆಚ್ಚಾಗತೊಡಗಿದವು, ಸಂಸ್ಕೃತಿ ವಿನಿಮಯ ಕಾರ್ಯಕ್ರಮಗಳ ಮೂಲಕ ಇತರೆ ಸಂಸ್ಕೃತಿ ,ಆಚರಣೆ, ಆಧ್ಯಾತ್ಮಿಕತೆಯ ಅನುಕರಣೆ ನಿಧಾನವಾಗಿ ಹುಡುಗರಲ್ಲಿ ಅತ್ಯಧಿಕವಾಗಿ ಬೇರೂರಿದವು.

ನಡಾವಳಿಗಳಲ್ಲಿ ಭಿನ್ನತೆ
ಭಿನ್ನ ಮನಸ್ಥಿತಿಗಳಿರುವಂತೆ ನಡಾವಳಿಗಳಲ್ಲಿಯೂ ಭಿನ್ನತೆ ಯಿರುವುದು ಸಹಜ ಅದರಂತೆ ಬೇರೆ ಬೇರೆ ತೇರನಾದ ನಡಾವಳಿಗಳ ಮೂಲಕ ಹುಡುಗರ ಆಧ್ಯಾತ್ಮಿಕತೆ ಪ್ರಕಟಗೊಳ್ಳತ್ತಿದೆ. ದೇವರನ್ನ ಮೂರ್ತಿ ಪೂಜೆಯಲ್ಲಿ ಆರಾಧಿಸುವವರ ವರ್ಗ ಒಂದು ಕಡೆ ಆದರೆ, ದೇವರನ್ನು ಮನಸ್ಸಿನಲ್ಲಿಯೇ ಆರಾಧಿಸುವ ವರ್ಗ ಇನ್ನೊಂದೆಡೆ ಹೀಗೆ ವಿಭಿನ್ನ ರೀತಿಯಲ್ಲಿ ಹಲವಾರು ಬಗೆಯ ನಡಾವಳಿಗಳನ್ನ ಪಾಲಿಸುತ್ತಿದ್ದಾರೆ ಆಧುನಿಕ ಮನಸ್ಥಿತಿಯ ಹುಡುಗರು.

ಸ್ವತಂತ್ರ್ಯ ಅಭಿರುಚಿ
ಸಾಮಾಜಿಕ ಸ್ತರ ವ್ಯವಸ್ಥೆ ಯಲ್ಲಿ ಸ್ವತಂತ್ರ್ಯವಾಗಿ ಚಿಂತಿಸುವ ಸ್ವಾತಂತ್ರ್ಯವಿದೆ, ಎಲ್ಲವನ್ನು ಅವರವರ ಆಲೋಚನೆಗಳ ಮಟ್ಟಕ್ಕೆ ಅನುಗುಣವಾಗಿ ಚಿಂತಿಸುತ್ತಾರೆ. ಆಧ್ಯಾತ್ಮಿಕತೆಯು ಹಾಗೆ ಅವರವರ ಇಚ್ಛೆಯಂತೆ ರೂಢಿಸಿಕೊಳ್ಳುವ ಸ್ವತಂತ್ರ್ಯವನ್ನು ಹೊಂದಿರುತ್ತಾರೆ. ಸಮಾನ ಮನಸ್ಥಿತಿಗಳನ್ನು ಅಳೆಯುವುದು ತೀರಾ ಕಷ್ಟಕರ . ಒಬ್ಬೊಬ್ಬರು ಒಂದೊಂದು ಪ್ರಕಾರದ ಆಧ್ಯಾತ್ಮಿಕ ಅಭಿರುಚಿಯನ್ನು ಬೆಳೆಸಿಕೊಂಡಿರುತ್ತಾರೆ.

ಆಧ್ಯಾತ್ಮ v/s ವಾಸ್ತವ ನಂಬಿಕೆಗಳು
ಆಧ್ಯಾತ್ಮ ಹಾಗೂ ವಾಸ್ತವ ನಂಬಿಕೆಗಳು ಮನುಷ್ಯನ ಬದುಕಿನ ಎರಡು ಪ್ರಮುಖ ಸಂಗತಿಗಳು. ಎರಡನ್ನೂ ಸಮಾನವಾಗಿ ತೂಗಿಸಲು ಸಾಧ್ಯವಿಲ್ಲ. ಆಧ್ಯಾತ್ಮಿಕರಹಿತವಾದ ಜೀವನ ವ್ಯರ್ಥ ಎಂಬ ನಂಬಿಕೆ ಒಂದುಕಡೆ, ವಾಸ್ತವವಾಗಿ ನಡೆಯುವ ಘಟನೆಗಳ ಮೇಲೆ ಜೀವನ ಸಾಗುತ್ತದೆ ಎನ್ನುವ ನಂಬಿಕೆ ಒಂದು ಕಡೆ ಎರಡನ್ನೂ ತಾಳೆಮಾಡಿದಾಗ ಆಧ್ಯಾತ್ಮಿಕತೆ ಹಾಗೂ ವಾಸ್ತವ ನಂಬಿಕೆಗಳೆರಡೂ ಬದುಕಿಗೆ ಅನಿವಾರ್ಯ ಎಂಬುದು ಸತ್ಯ.

ಆಧ್ಯಾತ್ಮಿಕತೆ ಬದುಕಿನ ಒಂದು ಭಾಗವಾಗಿ ಬೇರೆ ಬೇರೆ ಪ್ರಕಾರಗಳಲ್ಲಿ ಅನುಸರಿಸಲಾಗುತ್ತಿದೆ. ತಾತ್ವಿಕ ನೆಲೆಗಟ್ಟಿನಲ್ಲಿ ಸರಿ ಯಾವುದು, ತಪ್ಪು ಯಾವುದು ಎಂಬ ಪರಾಮರ್ಶೆಯ ಮೂಲಕ ಅಂತಿಮ ನಿರ್ಧಾರಕ್ಕೆ ಬರುವುದು ಅಷ್ಟು ಸುಲಭವಲ್ಲ. ಆಧ್ಯಾತ್ಮಿಕತೆಯನ್ನು ಸಂಧರ್ಭಕ್ಕೆ ತಕ್ಕಂತೆ ಸ್ವೀಕರಿಸಿ ನಡೆಸುವುದು ಉತ್ತಮ.

ಪ್ರವೀಣ್.ಪಿಕನ್ನಡದ ಬರಹಗಳನ್ನು ಹಂಚಿ ಹರಡಿ
You can leave a response, or trackback from your own site.

One Response to “ಆಧ್ಯಾತ್ಮಿಕತೆಯ ಆಧುನಿಕ ನೆಲೆ……: ಪ್ರವೀಣ್.ಪಿ”

  1. ಹೆಚ್‌ ಎನ್‌ ಮಂಜುರಾಜ್ says:

    ಲೇಖನ ಚೆನ್ನಾಗಿದೆ ಸರ್…..ಆದರೆ ತುಂಬ ಅಕ್ಷರ ಸ್ಖಾಲಿತ್ಯಗಳಿವೆ. ದಯಮಾಡಿ ಮುಂದೆ ಸರಿಪಡಿಸಿಕೊಳ್ಳಿರೆಂದು ಮನವಿಸುವೆ. ಆಧ್ಯಾತ್ಮ ಅಲ್ಲ, ಅದು ಅಧ್ಯಾತ್ಮ ಎಂದಾಗಬೇಕು. ಎರಡೂ ರೂಪ ಬಳಕೆಯಲ್ಲಿದೆ ಎಂಬ ವಾದ ಬೇಡ….ಅಧಿ + ಆತ್ಮ ಎಂದಾದಾಗ ಅಧ್ಯಾತ್ಮ ಎಂದಾಗುತ್ತದೆ. ಇದು ವ್ಯಾಕರಣದ ಪ್ರಕಾರ ಭಾವನಾಮ..ಇದು ಮುಂದೆ ಆಧ್ಯಾತ್ಮಿಕ, ಆಧ್ಯಾತ್ಮಿಕತೆ ಎಂದಾಗುತ್ತದೆ. ಇದನ್ನು ನಿಷ್ಪನ್ನ ಭಾವನಾಮ ಎಂದು ಕರೆಯುತ್ತಾರೆ. ಕೋಪಿಸಿ ಕೊಳ್ಳಬೇಡಿ, ಕ್ಷಮಿಸಿ.

Leave a Reply