ಪ್ರಸ್ತುತ ವಿಜ್ಞಾನ ತಂತ್ರಜ್ಞಾನದ ಬಳಕೆ: ಪ್ರಿಯಾಂಕಾ ಬನ್ನೆಪ್ಪಗೋಳ

ಭಾರತವು ಕೃಷಿ ಪ್ರಧಾನ ದೇಶ ಇಲ್ಲಿ ಹೆಚ್ಚಿನ ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ಪ್ರಸ್ತುತ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದಾಗಿ ಅಧಿಕ ಬೆಳೆ ಹಾನಿ ಸಂಭವಿಸಿ ರೈತನು ಆತಂಕಕ್ಕೀಡಾಗಿದ್ದಾನೆ. ರೈತನು ಕೃಷಿಯಲ್ಲಿ ವಿಜ್ಞಾನ ತಂತ್ರಜ್ಞಾನವನ್ನು ಬಳಸಿ ತನ್ನ ಉದ್ಯೋಗದಲ್ಲಿ ಹೆಚ್ಚಿನ ಲಾಭಗಳಿಸಿ ತನ್ನ ಜೀವನಮಟ್ಟವನ್ನು ಸುಧಾರಿಸಬಹುದು. ಇದರಿಂದಾಗಿ ರೈತರ ಜೀವನಮಟ್ಟ ಹೆಚ್ಚಾಗಿ ದೇಶದ ಆದಾಯವೂ ಸಹ ಹೆಚ್ಚಾಗುವುದು.

ರೈತನನ್ನು ದೇಶದ ಬೆನ್ನೆಲುಬು ಎಂದು ಕರೆಯುವರು. ರೈತರು ಬೆಳೆಗಳನ್ನು ಬೆಳೆದರೆ ಮಾತ್ರ ನಮಗೆಲ್ಲರಿಗೂ ಆಹಾರ ದೊರೆಯುವುದು. ಇಲ್ಲದಿದ್ದರೆ ಅಧೋಗತಿ. ಅಲ್ಲದೇ ನಾವು ಹಲವು ದಿನಗಳವರೆಗೆ ಆಹಾರ ಸೇವಿಸದೇ ಇದ್ದರೆ ನಮಗೆ ಅನಾರೋಗ್ಯ ವುಂಟಾಗಬಹುದು ಇಲ್ಲವೆ ಸಾವೂ ಕೂಡ ಸಂಬವಿಸಬಹುದು. ಇಂದು ನಮ್ಮ ದೇಶದ ಜನಸಂಖ್ಯೆ ನೋಡಿದಾಗ ಪ್ರತಿಯೊಬ್ಬರಿಗೂ ಆಹಾರ ದೊರೆಯುವುದು ಸುಲಭವಲ್ಲ. ಹೀಗಿರುವಾಗ ರೈತರು ತಮ್ಮ ಕೃಷಿ ಉದ್ಯೋಗದಲ್ಲಿ ವಿಜ್ಞಾನ ತಂತ್ರಜ್ಞಾನವನ್ನು ಬಳಸುವುದು ಅತ್ಯಗತ್ಯವಾಗಿದೆ. ರೈತರು ತಾವು ಬೆಳೆಯುವ ಬೆಳೆ-ಧಾನ್ಯಗಳನ್ನು ತಮ್ಮ ಉಪಜೀವನಕ್ಕೆ ಅಗತ್ಯವಿರುವಷ್ಟು ಸಂಗ್ರಹ ಮಾಡಿಕೊಂಡು ಉಳಿದಿದನ್ನು ಮಾರುಕಟ್ಟೆಗೆ ಕಳಿಸಿ ಹೆಚ್ಚಿನ ಹಣ ಸಂಪಾದಿಸಬಹುದು. ರೈತನಿಗೆ ಇದರಿಂದ ಬಂದ ಹಣದಿಂದ ಮತ್ತೆ ಬೆಳೆಗಳನ್ನು ಬೆಳೆಯಲು ಅಂದರೆ ಬಿತ್ತುವುದು, ನೇಗಿಲು ಹೊಡೆಯುವುದು , ಕಸಕಡ್ಡಿಗಳನ್ನು ತೆಗೆಯಲು ಇನ್ನಿತರ ಕೆಲಸಗಳಿಗೆ ಅನುಕೂಲವಾಗಬಹುದು.

ಆರ್ಥಿಕತೆ:
ಜನರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುತ್ತಿದ್ದಾರೆ. ಕೆಲವೊಂದು ಸಲ ಜನರು ಕೆಲವೊಂದು ಪ್ರದೇಶಗಳಿಗೆ ಹೊಂದಿಕೊಳ್ಳಲಾರದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದರ ಬದಲಾಗಿ ಕೆಲವೊಂದು ಗ್ರಾಮೀಣ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಮೂಲಭೂತ ಸೌಕರ್ಯಗಳಾದ ಭೂಮಿ, ನೀರು, ವಿದ್ಯುತ್ ಮೊದಲಾದವುಗಳನ್ನು ಒದಗಿಸಬೇಕು. ಇದರಿಂದ ಜನರಿಗೆ ಉದ್ಯೋಗ ದೊರೆಯುತ್ತದೆ. ಅಲ್ಲದೇ ದೇಶದ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಬಹುದಾಗಿದೆ. ಅಲ್ಲದೇ ಜನರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ಕೂಡ ತಪ್ಪಿಸಬಹುದು. ಜನರು ಕೈಗಾರಿಕೆಗಳಲ್ಲಿ ವಿಜ್ಞಾನ ತಂತ್ರಜ್ಞಾನವನ್ನು ಬಳಸಿ ವಿದೇಶಗಳಲ್ಲಿ ತಯಾರಿಸುವ ಹಲವಾರು ವಸ್ತು ಹಾಗೂ ಉತ್ಪನ್ನಗಳನ್ನು ನಮ್ಮ ದೇಶದಲ್ಲಿಯೇ ತಯಾರಿಸುವಂತಾಗಬೇಕು. ಇದರಿಂದ ಸ್ವಾವಲಂಬನೆ ಸಾಧಿಸಲು ಸಾಧ್ಯ. ಅಲ್ಲದೇ ದೇಶದ ಕೀರ್ತಿಯೂ ಹೆಚ್ಚಾಗುವುದು. ನಮ್ಮ ದೇಶದಲ್ಲಿ ತಯಾರಿಸಿದ ವಸ್ತುಗಳಿಗೆ ಕಡಿಮೆ ತೆರಿಗೆ ವಿಧಿಸುವುದರ ಮೂಲಕವೂ ಉದ್ಯೋಗಾಭಿವೃದ್ದಿಯನ್ನು ಹೆಚ್ಚಿಸಲು ಸಾಧ್ಯ. ಅಲ್ಲದೇ ಸಣ್ಣ ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ದೊರೆಯುವುದು. ಹೀಗೆ ಮಾಡಿದಾಗ ನಮ್ಮ ದೇಶವು ಮುಂದೊಂದು ದಿನ ಮುಂದುವರಿದ ರಾಷ್ಟ್ರವಾಗಲು ಸಾಧ್ಯ. ಹೀಗಾಗಿ ಕೈಗಾರಿಕೆಗಳಲ್ಲಿ ವಿಜ್ಞಾನ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಬೇಕು.

ಶೈಕ್ಷಣಿಕ:
ಭಾರತದ 2011ರ ಜನಗಣತಿಯ ಪ್ರಕಾರ ಸಾಕ್ಷರತಾ ದರ ಶೇಕಡಾ 65.20 ರಷ್ಟು ಇದೆ. ಸಾಕ್ಷರತಾ ಪ್ರಮಾಣವನ್ನು ಹೆಚ್ಚು ಮಾಡಲು ಶಿಕ್ಷಣದಲ್ಲಿ ಹೊಸ ಹೊಸ ಯೋಜನೆಗಳನ್ನು ಹಾಕಿಕೊಳ್ಳಬೇಕು. ಕೆಲ ಹಳ್ಳಿಗಳಲ್ಲಿ/ಗ್ರಾಮೀಣ ಪ್ರದೇಶದಲ್ಲಿ ಹೊಸ ಹೊಸ ಶಾಲೆಗಳನ್ನು ಸ್ಥಾಪಿಸಿ ಪ್ರತಿಯೊಬ್ಬರೂ ಶಿಕ್ಷಣದಿಂದ ವಂಚಿತರಾಗದಂತೆ, ಹೊಸ ಪ್ರತಿಭೆಗಳು ಅರಳುವಂತೆ ಮಾಡಬೇಕು ಇದಕ್ಕಾಗಿ ಪ್ರಮುಖ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಉದಾಃ ಕಟ್ಟಡ, ಶೌಚಾಲಯ, ನೀರಿನ ವ್ಯವಸ್ಥೆ, ಬಿಸಿ ಊಟ ಮೊದಲಾದವುಗಳು. ಗ್ರಾಮದಿಂದ ನಗರದವರೆಗೆ ಶೈಕ್ಷಣಿಕ ಕ್ರಾಂತಿಯಾಗಬೇಕು. ಅನಕ್ಷರಸ್ಥರ ಸಂಖ್ಯೆ ಕಡಿಮೆಯಾಗಿ ಉದೋಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ತೊಡಗುವಂತಾಗಬೇಕು. ಹೀಗಾಗಲು ಶಿಕ್ಷಣದಲ್ಲಿ ವಿಜ್ಷಾನ ತಂತ್ರಜ್ಷಾನದ ಬಳಕೆಯ ಅತ್ಯವಶ್ಯಕತೆಯಿದೆ. ಇದನ್ನು ಸರಿಯಾಗಿ ಬಳಸಿದಾಗ ನಮ್ಮ ದೇಶ 100 ಪ್ರತಿಶತಃ ಸುಶಿಕ್ಷಿತ ರಾಷ್ಟ್ರವಾಗುವುದು. ಹೀಗಾಗಿ ಶಿಕ್ಷಣದಲ್ಲಿ ಹೆಚ್ಚಾಗಿ ವಿಜ್ಞಾನ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು.

ಕೆಲವೊಮ್ಮೆ ನಮ್ಮ ದೇಶದ ಜನರು ಬದಲಾವಣೆಗಳನ್ನು ಬೇಗನೆ ಒಪ್ಪಿಕೊಳ್ಳಲಾರರು. ಏಕೆಂದರೆ ಅವರು ಅನಕ್ಷರಸ್ಥರು, ಸರಿಯಾದ ಜ್ಞಾನ ಹಾಗೂ ಮೂಢನಂಬಿಕೆ ಅಡ್ಡಿಬರುತ್ತದೆ.

ಉದಾಹರಣೆಃ
1)ಥಾಮಸ್ ಅಲ್ಪಾ ಎಡಿಸನ್ ಎಂಬ ವಿಜ್ಞಾನಿಯು ಬಲ್ಬನ್ನು ಕಂಡುಹಿಡಿದು ಜನರಿಗೆ ಪರಿಚಯಿಸಿದಾಗ ಜನರು ಅದರಿಂದ ಅಂಜಿ ಓಡಿ ಹೋಗುತ್ತಿದ್ದರು.
2)ಕ್ಯಾಮೆರಾ ಮುಂದೆ ನಿಂತು ಪೋಟೋ ತೆಗೆಸಿಕೊಂಡರೆ ಜನರು ತಮ್ಮ ಆಯಸ್ಸು ಕಡಿಮೆಯಾಗುತ್ತದೆ ಎಂದು ನಂಬಿದ್ದರು.

ಉಪಸಂಹಾರಃ
ಒಟ್ಟಾರೆಯಾಗಿ ಭಾರತದಲ್ಲಿ ವಿಜ್ಞಾನ ತಂತ್ರಜ್ಞಾನದ ಬಳಕೆ ಇಂದು ಅತ್ಯವಶ್ಯಕವಾಗಿದೆ. ಏಕೆಂದರೆ ಜನರಲ್ಲಿದ್ದ ಮೂಢನಂಬಿಕೆ, ಅಜ್ಞಾನಗಳನ್ನು ಹೋಗಲಾಡಿಸಲು, ಜನರ ಜೀವನ ಮಟ್ಟ ಹೆಚ್ಚಿಸಲು, ದೇಶದ ಆದಾಯ ಹೆಚ್ಚಿಸಲು, ಬಡತನ-ನಿರುದ್ಯೋಗದಂತಹ ಹಲವಾರು ಪ್ರಮುಖ ಸಮಸ್ಯೆಗಳ ನಿವಾರಣೆಗೆ ವಿಜ್ಞಾನ ತಂತ್ರಜ್ಞಾನದ ಅತ್ಯವಶ್ಯಕತೆಯಿದೆ. ಇವುಗಳ ಮೂಲಕ ನಮ್ಮ ದೇಶವು ಮುಂದುವರಿದ ರಾಷ್ಟ್ರವಾಗಲು ಸಾಧ್ಯ.
ಪ್ರಿಯಾಂಕಾ ಬನ್ನೆಪ್ಪಗೋಳ


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
M H Mokashi
M H Mokashi
3 years ago

ತಮ್ಮ ಲೇಖನ ಉತ್ತಮವಾಗಿದೆ. ಹೀಗೆಯೇ ಬರೆಯುತ್ತಿರಿ, ನಿಮ್ಮ ಯಶಸ್ವಿನತ್ತ ಸಾಗಿರಿ

1
0
Would love your thoughts, please comment.x
()
x