ನಾಲ್ವರ ಹನಿಗಳು: ಹುಸೇನ್ ಎನ್, ಶೀತಲ್, ಉಪೇಂದ್ರ ಪ್ರಭು, ಹರಿಪ್ರಸಾದ್ ಎ.

 

ದನಿಯಾಗದ ಹನಿಗಳು 

೧.
ನೆನಪಿನ ಪುಟಗಳಲ್ಲಿ ಅಡರಿ ಬಿದ್ದ 
ನಿನ್ನೆಗಳಲ್ಲಿ ನನ್ನ ಪ್ರಣಯಕ್ಕೆ 
ನಿನ್ನ ರೂಪವಿತ್ತು..
ಇಂದು ನನ್ನ ವಿರಹಕ್ಕೂ…!  
 
೨.
ದುಃಖ ಸತ್ಯಗಳು 
ನನ್ನ ನೋಡಿ 
ನಗುತಿದೆ;
ದುಃಖ ಮರೆಯಲು 
ನಾನೂ..!  
 
೩.
'ಯಾಕಾಗಿ ನೀನನ್ನ ಉಪೇಕ್ಷಿಸಿದ್ದು?' 
ಕೇಳಿತು ಕಣ್ಣೀರ ಹನಿ … ಕಣ್ಣಲ್ಲಿ.
'ನಾನನುಭವಿಸುವ ನೋವು ನಿನಗೆ ತಿಳಿಯದಿರಲು..!'  
ಉತ್ತರಿಸಿತು ಕಣ್ಣು.  
 
೪.
ಎಲೆಗಳು ಪರಸ್ಪರ ತಾಕದಿರಲು
ದೂರ ದೂರದಲಿ ನೆಟ್ಟ 
ಮರದ ಬೇರುಗಳು 
ಭೂಗರ್ಭದಲಿ ಬಿಗಿದಪ್ಪಿದವು..!
 
-ಹುಸೇನ್ ಎನ್ 

 

ತಂಗಾಳಿ..

ಪ್ರಿಯೆ ನೀನಿಲ್ಲದ ಜೀವನ ,
ಭಾವನೆಗಳಿರದ ಬರಿಯ ಪದಗಳ ಕವನ ,
ಬಾ ಬೇಗ ಬಾಡಿರುವ ಬದುಕಿಗೆ  ಮರಳಿ ,
ಬೀಸಿದಂತೆ  ಬರಡು  ಭೂಮಿಯಲ್ಲಿ ತಂಗಾಳಿ…

-ಶೀತಲ್

 

ಗೌರವ

ನಾಲಗೆ ಸಡಿಲಾಗಿ
ಮಾತು ಹಗುರಾದಾಗ
ಗಳಿಸಿದ್ದೆಲ್ಲಾ
ಮಣ್ಣುಪಾಲು!

-ಹರಿಪ್ರಸಾದ್ ಎ.

 

ಜ್ಞಾನಾರ್ಜನೆ

ಕೆಲವಂ ಬಲ್ಲವರಂ ಕಾಡಿ

ಕೆಲವಂ ಬಲ್ಲವರಂ ಬೇಡಿ

ಕೆಲವು ಬಲ್ಲವರಂ ಕಾಡಿ, ಬೇಡಿ

ಮತ್ತೆ ಕೆಲವರಂ ಕಾಡಬೇಡಿ

ಇನ್ನು ಕೆಲವರು ಬೇಡ ಬಿಡಿ…

-ಉಪೇಂದ್ರ ಪ್ರಭು

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

9 Comments
Oldest
Newest Most Voted
Inline Feedbacks
View all comments
sharada moleyar
sharada moleyar
11 years ago

ದನಿಯಾಗದ ಹನಿಗಳು -by -ಹುಸೇನ್ ಎನ್
ತಂಗಾಳಿ.-by -ಶೀತಲ್
ಗೌರವ-by -ಹರಿಪ್ರಸಾದ್ ಎ.
ಜ್ಞಾನಾರ್ಜನೆ-by -ಉಪೇಂದ್ರ ಪ್ರಭು
alla hanigavanagalu uttamavagive.
attracts the readers. by inner meanings.
ಗೌರವ-thumba istavaythu

Ganesh Khare
11 years ago

ಎಲ್ಲ ಹನಿಗಳೂ ಅರ್ಥಭರಿತವಾಗಿವೆ.

ಶ್ರೀವತ್ಸ ಕಂಚೀಮನೆ.

ಎಲ್ಲವೂ ಇಷ್ಟವಾದವು…

ಡಾ. ಆಜಾದ್

ಎಲ್ಲಾ ಹನಿಗಳೂ ತಣಿಸುತ್ತವೆ…

Santhoshkumar LM
11 years ago

All are superb.
Upendra sir, "ಬೇಡ ಬಿಡಿ" made me laugh:)  Good Punch.

hipparagi Siddaram
hipparagi Siddaram
11 years ago

ಹನಿಗಳು ತೊಟ್ಟಿಕ್ಕುತ್ತಿವೆ….
ರುಚಿಯೊಂದಿಗೆ….ಚೆನಗನಾಗಿವೆ…ಧನ್ಯವಾದಗಳು !

Raghunandan K
11 years ago

ಎಲ್ಲವೂ ಇಷ್ಟವಾದವು, especially ದನಿಯಾಗದ ಹನಿಗಳ ಮೌನ ಕಾಡುವಂತಿದೆ…

Hussain
11 years ago

ಮೆಚ್ಚಿದ ಮಹನೀಯರಿಗೆ ಧನ್ಯವಾದಗಳು .. ಪಂಜುವಿನ ಅಖಾಡಕ್ಕೆ ಕರೆ ತಂದ ನಟರಾಜಣ್ಣನಿಗೆ ಹ್ರಿದಯಸ್ಪರ್ಶಿ ಧನ್ಯವಾದ ..  

Rukmini Nagannavar
11 years ago

Ella hanigalu sundara… thanks for sharing with us…

9
0
Would love your thoughts, please comment.x
()
x