Facebook

Archive for 2020

ಪಂಜು ಕಾವ್ಯಧಾರೆ

ಹೊತ್ತೊಯ್ಯುವ ಮುಂಚೆ… ಕೋಳಿ ಪಿಳ್ಳಿಗಳ ಜತೆ ಓಡಾಟ ಹಸುಕರುಗಳೊಡನೆ ಕುಣಿದಾಟ ಗೆಳೆಯರೊಟ್ಟಿಗೆ ಕೆಸರಿನಾಟ ಅಪ್ಪ ಸಾಕಿದ್ದ ಕಂದು ಬಣ್ಣದ ಮೇಕೆಯ ತುಂಟಾಟ, ನಮಗೆಲ್ಲ ಅದರೊಂದಿಗೆ ಆಡುವದು ಇಷ್ಟ ಅಪ್ಪನಿಗೂ ಮೇಕೆಯಂದ್ರೆ ಪ್ರೀತಿ ಗಾಂಧಿತಾತನಂತೆ ಮೇಕೆ ಹಾಲು ಅವನ ಪಾಲಿಗೆ ಪಂಚಾಮೃತ ಅಪ್ಪ ಕೇಳಿದಾಗಲೆಲ್ಲ ಅವ್ವ ಮಾಡಿಕೊಡಲೇಬೇಕು ಚಹಾ ಹಾಲಿಗಿದೆಯಲ್ಲ ಮೊಗೆದಷ್ಟು ತುಂಬಿಕೊಡುವ ಕಾಮಧೇನು ಒಂದು ದಿನ ಅದೇನೋ ತಿಂದ ಮೇಕೆಗೆ ಹೊಟ್ಟೆಯುಬ್ಬರದ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದು, ಜೀವದಂತಿದ್ದ ಮೇಕೆ ಪ್ರಾಣ ಉಳಿಸದ ಪಶುವೈದ್ಯ ಕಟುಕನಂತೆ ಕಂಡು […]

ಮಕ್ಕಳ ಕಥೆ: ಸುಳ್ಳು ಕಹಿಯಾಗಿರುವುದು: ಸಿಂಧು ಭಾರ್ಗವ್

ಜೀವಂತ್ ಅಪ್ಪ ಅಮ್ಮನ ಮುದ್ದಿನ ಮಗ. ಆದರೂ ಅವನಿಗೆ ಬೇಕು ಬೇಕಾದ್ದನೆಲ್ಲ ಕೊಡಿಸುತ್ತ ಇರಲಿಲ್ಲ. ಹಣದ ಬೆಲೆ ತಿಳಿಯಲೆಂದು ಹಾಗೆ ಮಾಡುತ್ತಿದ್ದರು. ಆದರೆ ಅಪ್ಪ ಅಮ್ಮ ಇಬ್ಬರೂ ಉದ್ಯೋಗಕ್ಕೆ ಹೋಗುತ್ತಿದ್ದರು. ಆದ ಕಾರಣ ಮನೆಗೆ ಬರುವಾಗ ರಾತ್ರಿ ಎಂಟು ಘಂಟೆಯಾಗುತ್ತಿತ್ತು. ಶಾಲೆಗೆ ಹೋಗುವ ಪುಟ್ಟ ಜೀವಂತ್, ಮನೆಗೆ ಬಂದರೆ ಯಾರೂ ಇರುತ್ತಿರಲಿಲ್ಲ‌. ಹತ್ತು ವರುಷದ ಹುಡುಗನಾದ್ದರಿಂದ ಹೆತ್ತವರಿಗೂ ಏನೂ ಭಯವಿರಲಿಲ್ಲ‌ ಅವನಾಗೇ ಮನೆಗೆ ಬಂದು ಬಾಗಿಲು ತೆರೆದು ಊಟ ಮಾಡಿ, ಹಾಲು ಕುಡಿದು ಟಿ.ವಿ.ನೋಡುತ್ತ ಕುಳಿತು ಕೊಳ್ಳುತ್ತಿದ್ದ. […]

ಪ್ರಸ್ತುತ ವಿಜ್ಞಾನ ತಂತ್ರಜ್ಞಾನದ ಬಳಕೆ: ಪ್ರಿಯಾಂಕಾ ಬನ್ನೆಪ್ಪಗೋಳ

ಭಾರತವು ಕೃಷಿ ಪ್ರಧಾನ ದೇಶ ಇಲ್ಲಿ ಹೆಚ್ಚಿನ ಜನರು ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ಪ್ರಸ್ತುತ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದಾಗಿ ಅಧಿಕ ಬೆಳೆ ಹಾನಿ ಸಂಭವಿಸಿ ರೈತನು ಆತಂಕಕ್ಕೀಡಾಗಿದ್ದಾನೆ. ರೈತನು ಕೃಷಿಯಲ್ಲಿ ವಿಜ್ಞಾನ ತಂತ್ರಜ್ಞಾನವನ್ನು ಬಳಸಿ ತನ್ನ ಉದ್ಯೋಗದಲ್ಲಿ ಹೆಚ್ಚಿನ ಲಾಭಗಳಿಸಿ ತನ್ನ ಜೀವನಮಟ್ಟವನ್ನು ಸುಧಾರಿಸಬಹುದು. ಇದರಿಂದಾಗಿ ರೈತರ ಜೀವನಮಟ್ಟ ಹೆಚ್ಚಾಗಿ ದೇಶದ ಆದಾಯವೂ ಸಹ ಹೆಚ್ಚಾಗುವುದು. ರೈತನನ್ನು ದೇಶದ ಬೆನ್ನೆಲುಬು ಎಂದು ಕರೆಯುವರು. ರೈತರು ಬೆಳೆಗಳನ್ನು ಬೆಳೆದರೆ ಮಾತ್ರ ನಮಗೆಲ್ಲರಿಗೂ ಆಹಾರ ದೊರೆಯುವುದು. ಇಲ್ಲದಿದ್ದರೆ ಅಧೋಗತಿ. […]

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 6): ಎಂ. ಜವರಾಜ್

-೬- “ಏಯ್, ಎದ್ರು ಮ್ಯಾಕ್ಕೆ..” ನಾನು ದಿಗ್ಗನೆದ್ದು ಅತ್ತಿತ್ತ ನೋಡ್ದಾಗ ಮಿಂಚು ಫಳಾರ್ ಅಂತ ಹೊಳಿತಲ್ಲಾ.. ಗಾಳಿ ಜೋರಾಗಿ ಬೀಸಿತಲ್ಲಾ.. ಕೂಗಿದ್ಯಾರಾ.. ಅಂತ ಅತ್ತಿತ್ತ ನೋಡ್ತ ಕಣ್ಕಣ್ಣು ಬಿಡೊ ಹೊತ್ತಲಿ “ಏಯ್ ಏನ ಕಣ್ಕಣ್ ಬುಡದು ಮಿಂಚು ಹೊಳಿತಿಲ್ವ ಗಾಳಿ ಬೀಸ್ತಿಲ್ವ ಗಡುಗುಡುಗುಡನೆ ಗುಡುಗು ಸದ್ದಾಗದು ಕೇಳ್ತಿಲ್ವ.. ಬಿರ್ಗಾಳಿನೇ ಬರ್ಬೊದು ನೋಡಾ..” ನಾ ಆ ಕಡೆ ದಿಗಿಲಿಂದ ನೋಡ್ತ “ಇಲ್ಲ ಇಲ್ಲ ಹಂಗೇನಿಲ್ಲ.. ಅಂತಂತ ಹಂಗೇ ಕುಂತರು ಬಿಡದ ಆ ಮೆಟ್ಟು ಬೆಂಕಿ ಕೆಂಡದಡೆತರ ಬೆಳಗಿ ಹಾಗೆ […]

ಶಾಲು, ಮಾಲು, ಕೆಲಸ, ಆರಾಮು!!: ಸಹನಾ ಪ್ರಸಾದ್‌

“ಕೆಲಸ, ಕೆಲಸ, ಕೆಲಸ, ಬರೀ ಇದೇ ಆಗೋಯ್ತಲ್ಲ ನಿಂದು” ಶಾಲುಗೆ ಮಾಲು ಬೈಯುತ್ತ ಇದ್ದಿದ್ದು ಪಕ್ಕದ ರೂಮಿನಲ್ಲಿದ್ದ ನನಗೆ ಸ್ಪಷ್ಟವಾಗಿ ಕೇಳುತ್ತಿತ್ತು. “ಇರೋದು ಒಂದು ಜೀವನ, ಎಂಜಾಯ್ ಮಾಡೋದು ಕಲಿತುಕೊ. ರಜೆ ತೊಗೋ, ಮಜಾ ಮಾಡು. ಅದು ಬಿಟ್ಟು…” ಅವಳ ವಾಕ್ ಪ್ರವಾಹ ನಡೀತಾನೆ ಇತ್ತು. ಇವಳು ಮಾತ್ರ ಮೌನ. ಮಧ್ಯಾಹ್ನ ಲಂಚ್ ಗೆ ಶಾಲು ಸಿಕ್ಕಿದಾಗ ಅವಳ ಮುಖದಲ್ಲಿ ಯಾವ ಆತಂಕವೂ ಕಂಡು ಬರಲಿಲ್ಲ. ಹಾಯಾಗಿ ತಂದಿದ್ದ ಊಟ ಮುಗಿಸಿ ಕಾಫಿ ಕುಡೀತಾ ಕುಳಿತ್ತಿದ್ದವಳನ್ನು ನೋಡಿ […]

ಮೊಬೈಲ್ ಸೆಲ್ ಫೋನ್ ಗಳ ಅತಿಯಾದ ಬಳಕೆಯಿಂದಾಗುವ ದುಷ್ಪರಿಣಾಮಗಳು: ಚಂದ್ರಿಕಾ ಆರ್ ಬಾಯಿರಿ

” ಒಂದು ಚಿತ್ರ ಸಾವಿರ ಪದಗಳಿಗಿಂತಲೂ ಮಿಗಿಲು”. ಆನೆಯ ಬಗ್ಗೆ ಸಾವಿರ ಪದಗಳಲ್ಲಿ ಬಣ್ಣಿಸುವುದಕ್ಕಿಂತಲೂ ಆನೆಯ ಒಂದು ಚಿತ್ರವನ್ನು ತೋರಿಸುವುದು ಉತ್ತಮ ಎಂದು ಹೇಳುವುದುಂಟು. ಚಿಕ್ಕ ಮಕ್ಕಳಿಗೆ ಪಾಠ ಮಾಡುವಾಗ ಕೇವಲ ವಿವರಣೆ ನೀಡುವುದಕ್ಕಿಂತಲೂ ಚಾರ್ಟ್ ಗಳನ್ನು ತೋರಿಸಿ ಬೋಧಿಸಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಈಗಿನ ಕಂಪ್ಯೂಟರ್ ಯುಗದಲ್ಲಿ ಪಾಠಕ್ಕೆ ಸಂಬಂಧಿಸಿದ ವೀಡಿಯೋಗಳನ್ನು ತೋರಿಸುವುದರಿಂದ ಪಾಠವು ನೈಜ ಅನುಭವವನ್ನು ನೀಡುತ್ತದೆ. ಇನ್ನು ಹಿಂದಿನ ಕಾಲದಲ್ಲಿ ಮನೆಮನೆಗಳಲ್ಲಿ ರೇಡಿಯೋಗಳಿತ್ತು. ಜನರು ವಾರ್ತೆಗಳನ್ನು, ಚಿತ್ರಗೀತೆಗಳನ್ನು ಕೇಳುತ್ತಲೇ ದಿನದ ಕೆಲಸಗಳನ್ನು ಲವಲವಿಕೆಯಿಂದ ಮಾಡು […]

ಮನಸ್ಸು ಒಂದು ಅದ್ಬುತ ಶಕ್ತಿ!: ಕೆ ಟಿ ಸೋಮಶೇಖರ್ ಹೊಳಲ್ಕೆರೆ.

ಮನಸ್ಸು ಅದ್ಭುತವಾದುದು! ಅತ್ಯದ್ಬುತವಾದುದು! ಯಾರೂ ಅವರವರ ಮನಸ್ಸಿನ ಬಗ್ಗೆ ಚಿಂತಿಸಿದರೆ ಮನಸ್ಸಿನ ಅದ್ಭುತ ಶಕ್ತಿ ಗಮನಕ್ಕೆ ಬರುವುದು. ಅದರ ಬಗ್ಗೆ ಚಿಂತಿಸದಿರುವುದರಿಂದ ಅದರ ಅದ್ಭುತ ಶಕ್ತಿ ಗಮನಕ್ಕೆ ಬರುವುದಿಲ್ಲ! ಆದ್ದರಿಂದ ಯಾರೂ ಮನಸ್ಸಿನ ಅದ್ಭುತ ಶಕ್ತಿಯನ್ನು ಸದುಪಯೋಗ ಮಾಡಿಕೊಳ್ಳುವುದೇ ಇಲ್ಲ! ಆದನ್ನು ಬಳಸಿದರೆ ಅದಕ್ಕೆ ಇರುವ ಅದ್ಬುತ ಶಕ್ತಿ ತಿಳಿಯುವುದು! ಈಗ ಮನಸ್ಸಿಗೆ ಅದ್ಭುತ ಶಕ್ತಿ ಇದೆ ಎಂದು ಹೇಗೆ ನಂಬಬೇಕು ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿರಬಹುದು. ಹೌದು! ಅದಕ್ಕಿರುವ ಶಕ್ತಿ ಗೊತ್ತಾಗುವುದಿಲ್ಲ! ಅದು ಜೀವಂತ ಮಾನವನಲ್ಲಿದ್ದರೂ […]