Facebook

Archive for 2020

ಪಂಜು ಕಾವ್ಯಧಾರೆ

ಸಾಧನಕೇರಿಯ ಬೇಂದ್ರೆ ಅಜ್ಜ ಕನ್ನಡ ನುಡಿಸೇವೆ ನಿನ್ನ ಕಜ್ಜ. ಪದ್ಯ ಕಟ್ಟಿ ಹಾಡಿದ್ಯಂದ್ರೆ ಕೇಳೋ ಕಿವಿಗಳಿಗೆ ಇಲ್ಲ ತೊಂದ್ರೆ… ಅಜ್ಜ ನಿನ್ನ ಬರೆಯೋ ಕೋಲ್ಗೆ ಎಂಥ ಶಕ್ತಿ ಇತ್ತು. ಅದ್ನೆ ನೀನು ಎತ್ತಿ ಹಿಡಿದೆ ನಿನ್ನ ಕೈ ಕಲ್ಪವೃಕ್ಷವಾಯ್ತು… ನಗ್ ನಗ್ತ್ ಹೇಳ್ದೀ ಬುದ್ಧಿಮಾತು ನಿನ್ ದುಃಖ ನೀನ್ ನುಂಗಿ. ಅಜ್ಜ ಅಂದ್ರ ನೆನಪಿಗ್ ಬರ್ತದ ತಲೆಗೆ ಪಟಗ ನಿಲುವಂಗಿ.. ಅಜ್ಜ ನಿನ್ ಪದಗಳಂತು ಸಜ್ಜಿತೆನಿ ತೊನೆದ್ಹಾಂಗ. ಕೇಳ್ತಾ ಕೇಳ್ತಾ ತಲೆದೂಗ್ತಾವಾ ಹಸುಕಂದಮ್ಗಳು ಹಾಂಗಾ.. ಬಾಳ್ಗೆ ನಾಕು […]

ಜೋಕರ್ ಮತ್ತು ಅವನ ಹಿಂದಿನ ತಲೆಮಾರಿನವರು!!: ಸಂತೋಷ್ ಕುಮಾರ್ ಎಲ್.ಎಂ.

೨೦೧೯ರಲ್ಲಿ ಬಿಡುಗಡೆಯಾಗಿ ಬಾಕ್ಸಾಫೀಸಿನಲ್ಲಿ ಕೊಳ್ಳೆ ಹೊಡೆದು, ವಿಮರ್ಶಕರಿಂದ ಶಹಬ್ಬಾಷ್ ಅನ್ನಿಸಿಕೊಂಡ ಇಂಗ್ಲೀಷ್ ಸಿನಿಮಾ “ಜೋಕರ್”. ಈ ಸಿನಿಮಾ ನೋಡಿದ ಮೇಲೆಯೂ ಸಿಕ್ಕಾಪಟ್ಟೆ ಕಾಡುತ್ತದೆ. ಅಸಹಾಯಕತೆ, ಅವಮಾನ, ಹಿಂಸೆ, ತಾನು ಬೆಳೆದ ರೀತಿ, ಕೆಟ್ಟ ಬಾಲ್ಯ.. ಎಲ್ಲವೂ ಒಬ್ಬನನ್ನು ಹೇಗೆ ಹಿಂಸೆಗೆ ತಳ್ಳುತ್ತದೆ ಅನ್ನುವ ಸಿನಿಮಾ. ಗಮನಿಸಿದರೆ ಜೋಕರ್ ಮಾಡುವ ಪ್ರತೀ ಕೊಲೆಗೂ ಒಂದೊಂದು ಕಾರಣವಿದೆ ಈ ಸಿನಿಮಾ ನೋಡಿದ ಮೇಲೆ ಅದರ ವಿವರಗಳ ಬಗ್ಗೆ ಕಣ್ಣಾಯಿಸಿದಾಗ ಸಿಕ್ಕ ಎರಡು ಸಿನಿಮಾಗಳು “ಟ್ಯಾಕ್ಸಿ ಡ್ರೈವರ್(೧೯೭೬)” ಮತ್ತು “ದ ಕಿಂಗ್ […]

ಕತೆ: ಸೂರಿ ಹಾರ್ದಳ್ಳಿ

ಕಂಪನಿಯೊಂದರಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದು ಆರಂಕಿಯ ಸಂಬಳ ಪಡೆಯುತ್ತಿದ್ದ ಕಾಶೀಪತಿಗೆ ಸಾಲದ ತುರ್ತು ಅವಶ್ಯಕತೆಯೇನೂ ಇರದಿದ್ದರೂ ಆ ಜಾಹಿರಾತು ಅವನ ತಲೆಯಲ್ಲಿ ದುಷ್ಟ ಯೋಚನೆಗಳನ್ನು ತುಂಬಿದ್ದಂತೂ ನಿಜ. ಪತ್ರಿಕೆಯೊಂದರಲ್ಲಿ ಪ್ರಕಟವಾದ ‘ವೈಯಕ್ತಿಕ ಸಾಲ ಬೇಕಾಗಿದೆಯೇ? ಕೇವಲ ಮೂರು ಪರ್ಸೆಂಟ್ ಬಡ್ಡಿಯಲ್ಲಿ ಎರಡು ಕೋಟಿ ರೂ.ಗಳ ತನಕ ಸಾಲ ಪಡೆಯಿರಿ. ಸಂಪರ್ಕಿಸಿ..’ ಎಂಬ ಕ್ಲಾಸಿಫೈಡ್ ಜಾಹೀರಾತು ಬೆಳಗಿನ ಬಿಸಿ ಬಿಸಿ ಕಾಫಿ ಹೀರುತ್ತಿದ್ದ ಕಾಶೀಪತಿಯ ಕಣ್ಣಿಗೂ ಬಿದ್ದಿತ್ತು, ಅವನ ಹೆಂಡತಿ ಮಾದೇವಿಯ ಕಣ್ಣಿಗೂ ಬಿದ್ದಿತ್ತು. ಕಾಶೀಪತಿ ಪತ್ರಿಕೆಯ ಇತರ ಸುದ್ದಿಗಳನ್ನು […]

ಕಟಾವು: ವೀಣಾ ನಾಗರಾಜು

‘ಲಚ್ಚೀ ಏ ಲಚ್ಚೀ ಅದೇನು ಮಾಡ್ತಾ ಇದ್ದೀಯಮ್ಮೀ ಒಳಗೇ ಆಗಲೇ ಏಟೋತ್ತಾಗದೆ ಬಿರನೆ ಒಂದೆರಡು ತುತ್ತು ಉಂಡು ಬರಬಾರದಾ.? ಮಧ್ಯಾಹ್ನಕ್ಕೆ ಅಂತಾ ಒಂದು ಮುದ್ದೆ ಹೆಚ್ಚಾಗಿ ಬುತ್ತಿ ಕಟ್ಕೋ ಉಂಬಕೆ ವಸಿ ಸಮಯ ಆದರೂ ಸಿಗ್ತದೇ. ನೀ ಹಿಂಗೇ ಉಂಡಿದ್ದೆಲ್ಲಾ ಕೈಗೆ ಕಾಲಿಗೆ ಇಳಿಸ್ಕೊಂಡು ಕುಂತರೇ ಇವೊತ್ತೂ ಆ ಗುತ್ತಿಗೆದಾರ ಶಾಮಣ್ಣನ ತಾವ ಉಗಿಸಿಕೊಳ್ಳೋದರ ಜೊತಿಗೆ ಒಂದು ಗಂಟೆ ಸಂಬಳಕ್ಕೂ ಕತ್ತರಿ ಹಾಕಿಸ್ಕೋಬೇಕಾಗುತ್ತೆ. ಮೊದಲೇ ನಮ್ಮ ಗ್ರಹಚಾರ ಬೇರೆ ಸರಿ ಇಲ್ಲಾ ನಿನ್ನೆ ಸ್ವಲ್ಪ ತಡವಾಗಿ ಹೋಗಿದ್ದಕ್ಕೆ […]

ಇಬ್ಬರು ಗೆಳೆಯರು: ಆಶಾರಾಣಿ

ಮನೆಯ ಹೊರಗಿನ ಹೂದೋಟದಲ್ಲಿ ಒಂದು ಹೆಗ್ಗಣ ಮತ್ತು ಇಲಿ ವಾಸವಾಗಿದ್ದವು. ದಿನವೂ ಮನೆಯ ಯಜಮಾನಿ ಹೊರಗೆ ಚೆಲ್ಲುವ ಮುಸುರೆಯಲ್ಲಡಗಿರುವ ಅನ್ನ, ಕಾಳು, ತರಕಾರಿಗಳನ್ನು ಆಯ್ದಾಯ್ದು ತಿಂದುಂಡು ಸಂತೋಷದಿಂದ ದಿನಗಳನ್ನು ದೂಡುತ್ತಿದ್ದವು. ಹೀಗಿರಬೇಕಾದರೆ ಒಂದು ದಿನ ಹೆಗ್ಗಣಕ್ಕೊಂದು ಕೆಟ್ಟ ಆಲೋಚನೆ ಹೊಳೆಯಿತು. ಅದು ತನ್ನ ಗೆಳೆಯನಿಗೆ, “ಏಯ್, ಗೆಳೆಯಾ. . ಎಷ್ಟು ದಿನವೆಂದು ಈ ಮುಸುರೆಯನ್ನವನ್ನು ತಿಂದುಂಡು ಜೀವಿಸುವುದು!?ಹೊಟ್ಟೆಬಿರಿಯುವ ಹಾಗೆ ತಿನ್ನಲು ಏನಾದರೂ ಹೊಸ ಉಪಾಯ ಹುಡುಕೋಣ” ಎಂದಿತು. ಇಲಿಗೆ ಆಶ್ಚರ್ಯದೊಂದಿಗೆ ಸಂದೇಹವುಂಟಾಯಿತು “ಅಲ್ಲಾ ಗೆಳೆಯ, ಹೇಗೊ ಸಿಕ್ಕಿದ್ದನ್ನು […]

ಕಾಗೆಯ ಕೊಳಲು: ರೇಣುಕಾ ಕೋಡಗುಂಟಿ

ಅದೊಂದು ದಟ್ಟ ಅರಣ್ಯ. ಆ ಅರಣ್ಯದ ಒಂದು ಭಾಗವು ಗುಂಪು ಗುಂಪಾದ ಹಚ್ಚ ಹಸಿರಿನಿಂದ ಕೂಡಿತ್ತು. ಅಲ್ಲಿ ಎಲ್ಲಾ ಬಗೆಯ ಮರಗಳು ಬೆಳೆದು ನಿಂತು ತಂಪು ಸೂಸುತ್ತಾ, ಹೂವುಗಳ ಪರಿಮಳ ಬೀರುತ್ತಾ ಕಣ್ಣಿಗೆ ಮುದ ನೀಡುವಂತಿದ್ದವು. ಆ ಗಿಡಗಳ ಕಾಲ ಅಡಿಯಲ್ಲಿ ನೀರಿನ ಸಣ್ಣ ಹಳ್ಳ ಜುಳು ಜುಳು ಸದ್ದು ಮಾಡುತ್ತಾ ಹರಿಯುತ್ತಿತ್ತು. ಇದರೊಂದಿಗೆ ಹಕ್ಕಿಗಳ ಕಲರವವೂ ಜೊತೆಗೂಡಿ ಸಂಗೀತ ಹೊಮ್ಮಿದಂತಿತ್ತು. ಅರಣ್ಯದ ಈ ಒಂದು ಭಾಗವು ಹಕ್ಕಿಗಳಿಗೆ ಮೀಸಲಾಗಿತ್ತು. ಎಲ್ಲಾ ಬಗೆಯ ಹಕ್ಕಿಗಳು ಅಲ್ಲಿ ನೆಲೆಸಿದ್ದವು. […]

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ ೫): ಎಂ. ಜವರಾಜ್

-೫- ಅಯ್ಯೋ ದೇವ್ರೇ ಯಾಕಪ್ಪ ಈ ಕ್ವಾಟ್ಲ ಕೊಟ್ಟ ನಂಗ ಈ ಅಯ್ನೋರು ಒಳಗ ಹೋದೋರು ಇನ್ನುವ ಅದೇನ್ಮಾಡ್ತಿದ್ದರೋ.. ಈ ಅಯ್ನೋರ್ ದೆಸೆಯಿಂದ ಈ ಕತ್ಲೊಳ್ಗ ನಾ ಒಬ್ನೆ ಆದ್ನಲ್ಲೊ.. ಒಳಗೆ ಅದೇನೋ ಸದ್ದು ನಾ ನೋಡವ ಅಂದ್ರ ಬಾಗಿಲು ಮುಚ್ಚಿತ್ತು “ನೋಡು ಅವತ್ತು ಬಂದಾಗ ಏನಂದೆ ನೀನು ಬಂದು ಬಂದು ಹೋದ್ರ ನಾ ಬುಟ್ಟಿನಾ ತಂದು ಕೊಡಗಂಟ ನನ್ನ ಮುಟ್ಟಂಗಿಲ್ಲ” ಮಾತು ಬಾಗಿಲು ಸೀಳಿ ಬಂದದ್ದು ಗೊತ್ತು. ಈ ನಾಯಿ ಬಡ್ಡೆತದು ಈ ಕತ್ತಲ ಸಾಮ್ರಾಜ್ಯದಲಿ […]

ಅಂಬಿಕಾತನಯನ ಕಾವ್ಯಾನುಸಂಧಾನ: ಅಶ್ಫಾಕ್ ಪೀರಜಾದೆ

ದಿನಾಂಕ ೦೭/೦೧/೨೦೨೦ ರಂದು ಧಾರವಾಡದ ಬೇಂದ್ರೆ ಭವನದಲ್ಲಿ ವಿಜಯಶ್ರೀ ಸಾಹಿತ್ಯ ಪ್ರಶಸ್ತಿ ವಿಜೇತ ಯುವ ಸಾಹಿತಿ ಶ್ರೀ ಮಾರ್ತಾಂಡಪ್ಪ ಎಂ. ಕತ್ತಿಯವರು ರಚಿಸಿದ “ಅಂಬಿಕಾತನಯನ ಕಾವ್ಯಾನುಸಂಧಾನ” ಗ್ರಂಥ ಲೋಕಾರ್ಪಣೆಗೊಂಡಿತು. ಈ ಪ್ರಯುಕ್ತ ಕೃತಿ ಪರಿಚಯ ಇಲ್ಲಿದೆ. ಈ ಕೃತಿಯಲ್ಲಿ ಕತ್ತಿಯವರು ಒಟ್ಟು ಮೂವತ್ತಾರು ಬೇಂದ್ರೆ ಕವಿತೆಗಳೊಂದಿಗೆ ಹೃದಯ ಸಂಪರ್ಕ ಸಾಧಿಸಿದ್ದಾರೆ. ವರ ಕವಿ ಬೇಂದ್ರೆಯವರ ವಿವಿಧ ಕಾವ್ಯ ಸಂಕಲನಗಳಿಂದ ಅತಿಮುಖ್ಯ ಅನಿಸುವ ಕವಿತೆಗಳನ್ನು ಅಯ್ದುಕೊಂಡು ಅದರೊಂದಿಗೆ ಅನುಸಂಧಾನ ನಡೆಸಿದ್ದಾರೆ. ನಾಕು ತಂತಿ, ಜೋಗಿ, ಪರಾಗ, ಏಲಾಗೀತ, ನನ್ನವಳು, […]