ಪಂಜು ಕಾವ್ಯಧಾರೆ

ಹನಿಗಳು.. ನಗಲು ಹೇಳಿದಬುದ್ಧಆದರೆಮಾನವ ನಗದು ಗಾಗಿನಗುವುದನ್ನೇಮರೆತಬುದ್ಧಮೌನನಾದ… ನಾನು ಅಹಂಕಾರದಲ್ಲಿಶಾಂತಿ ನೆಮ್ಮದಿಗಾಗಿಊರೂರುಅಲೆದೆಶಾಂತಿ ತನ್ನೊಳಗೆ ಇದೆಎಂದು ತಿಳಿದಾಗಅವನ್ನಲ್ಲಿನ‘ನಾನು’ ಚಿರನಿದ್ರೆಗೆಜಾರಿತ್ತು… ನಾಕಷ್ಟವೆಂದುಬುದ್ಧನೆಡೆಗೆ ಹೋದೆಬುದ್ಧನ ನಗುಕಂಡನನ್ನ ಕಷ್ಟಗಳುನನ್ನಲ್ಲಿಯೇಲೀನವಾದವು… ಬುದ್ಧನೆಂಬ ಬೆಳಕುಇಲ್ಲಿ ಹಚ್ಚಿಟ್ಟ ದೀಪದ ಪ್ರಭೆಬೆಳಕ ನಡುವೆದುಃಖಕಷ್ಟಅಹಿಂಸೆಅಶಾಂತಿಅಸುನಿಗಿದ್ದವು… ಜಗತ್ತಿನ್ನು ನಿದ್ದೆಯಿಂದ ಎಬ್ಬಿಸಲುನಡುರಾತ್ರಿ ನಿದ್ದೆತೊರೆದ ಬುದ್ದುಜಗತ್ತಿನ ನಿದ್ದೆಯಿಂದ ಏಳುವಯಾವ ಪ್ರಯತ್ನಮಾಡಲಿಲ್ಲ.. ನಗುವಿನ ಶಾಂತಿಯಮಹತ್ವ ಹೇಳಿದಬುದ್ದನಗರದ ಗದ್ದಲದನಡುವೆಬುದ್ದ ನಗುವಿತ್ತುಯಾರ ಮನಸ್ಸಿನಲ್ಲಿನಗುವಿನ ಕುರುಹು ಇರಲಿಲ್ಲ.. ಬುದ್ದನಪ್ರತಿಮೆಗೆಗೆದ್ದಲು ಕಟ್ಟಿರಬಹುದುಪ್ರತಿ ಎದೆಯಲ್ಲಿ ನೆಲೆಸಿರುವಬುದ್ಧನವಿಚಾರಗಳಿಗಲ್ಲ.. -ವೃಶ್ಚಿಕ ಮುನಿ.. ಶಾಲ್ಮಲೆಯ ಸ್ವಗತ ಧಾರವಾಡದ ಸೋಮೇಶ್ವರ ತಾಣದಿಹುಟ್ಟುವೆ ನಾನು ಚಿಕ್ಕ ಚಿಲುಮೆಯ ರೂಪದಿಶಾಲ್ಮಲಾ ಎಂದೆನುವ ಸುರನದಿಯು … Read more

“ಸಮಾನತೆಯ ಹರಿಕಾರ” ಕುವೆಂಪು: ಡಾ. ಅವರೆಕಾಡು ವಿಜಯ ಕುಮಾರ್

ಪ್ರತಿಯೊಂದು ಮಗುವೂ ಹುಟ್ಟುತ್ತಲೇವಿಶ್ವಮಾನವ, ಬೆಳೆಯುತ್ತಾ ನಾವು ಅದನ್ನು ಅಲ್ಪಮಾನವ’ನನ್ನಾಗಿ ಮಾಡುತ್ತೇವೆ.ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೇ ಶಿಕ್ಷಣದ ಕರ್ತವ್ಯವಾಗಬೇಕು. -ಕುವೆಂಪು ಪ್ರಕೃತಿಯ ತಾಣವಾದ ಮಲೆನಾಡಿನ ಅಪ್ರತಿಷ್ಠಿತ ಮನೆತನ ಒಂದರಲ್ಲಿ 1904, ಡಿಸೆಂಬರ್ 29ರಂದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆ ಗ್ರಾಮದಲ್ಲಿ ಶ್ರೀ ವೆಂಕಟಪ್ಪ ಮತ್ತು ಶ್ರೀಮತಿ ಸೀತಮ್ಮ ಅವರ ಬಾಳಿನ ಬೆಳಕಾಗಿ ಪುಟ್ಟಪ್ಪನವರು ಜನಿಸಿದರು. ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿ ಗ್ರಾಮದಲ್ಲಿ ಬೆಳೆದವರು ವಿಶ್ವಮಾನವರಾಗಿ ವಿಜೃಂಭಿಸಿ ಇತಿಹಾಸ ಪುಟದ ಸ್ವರ್ಣ ಅಕ್ಷರಗಳಲ್ಲಿ ಸೇರ್ಪಡೆಯಾದರು. ಆಗಿನ ಕಾಲದ ಬಡತನ, ದಾರಿದ್ರ್ಯ, ಅಸಾಯಕತೆ ಇವುಗಳನ್ನು … Read more

“ಬಯಲುಡುಗೆಯ ಬೊಂತಾ – ಕತ್ತಲ ಗರ್ಭದ ಬೇಗೆಯಲಿ ಬೇಯುವ ಸಾವಿರದ ಒಂದು ಚಿತ್ರಕಾವ್ಯ”: ಎಂ.ಜವರಾಜ್

“ಸಂಸಾರವೆಂಬುದೊಂದು ಗಾಳಿಯ ಸೊಡರು,ಸಿರಿಯೆಂಬುದೊಂದು ಸಂತೆಯ ಮಂದಿ, ಕಂಡಯ್ಯ!ಇದ ನೆಚ್ಚಿ ಕೆಡಬೇಡ ಸಿರಿಯೆಂಬುದ!ಮರೆಯದೆ ಪೂಜಿಸುಆಚಾರವೇ ಸ್ವರ್ಗ, ಅನಾಚಾರವೇ ನರಕ,ನೀವೇ ಪ್ರಮಾಣು ಕೂಡಲಸಂಗಮದೇವ”(-ಬಸವಣ್ಣ) ಲೇಖಕ, ತಾನು ಅನುಭಿಸಿದ ನೋವು, ಯಾತನೆ, ತುಮುಲ, ರಂಜನೆ, ಕಾಮ, ಭೋಗ, ಶೀಲ, ಶೋಷಣೆ, ಚಳುವಳಿ, ಹೋರಾಟ, ಧರ್ಮ, ದೇವರು, ಜಾತಿ, ಮತ, ಪಂಥ, ಕುರಿತಾದ ತನ್ನೊಳಗಿನ ಅನುಭವವನ್ನು ಹೊಸದೇ ಎನುವ ಸೃಜನಶೀಲ ಕತೆ ಕವಿತೆ ಕಾದಂಬರಿ ಮತ್ತು ಮಹಾಕಾವ್ಯವಾಗಿ ಚಿತ್ರಿಸಿದ್ದಿದೆ. ಇದರ ಆಚೆಗು ಲೇಖಕನೊಬ್ಬನ ಮೂಲಕ ತಾನು ಹುಟ್ಟುವ ಮುನ್ನಿನ – ಈಗಾಗಲೇ ನಡೆದು … Read more

ಒಂದು ನಾಯಿಮರಿಗಾಗಿ….: ಜೆ.ವಿ.ಕಾರ್ಲೊ

ಅಂದು ಸಂಜೆ ಲಂಡನಿನಲ್ಲಿ ಮೈ ಕೊರೆಯುವಂತ ಚಳಿ. ಬಸ್ಸಿನೊಳಗೆ ಹಲ್ಲು ಕಚ್ಚಿಕೊಂಡು ಮುದುಡಿ ಕುಳಿತಿದ್ದ ಪ್ರಯಾಣಿಕರಿಗೆ ಯಾರೋ ಎಡೆಬಿಡದೆ ಚೂರಿಯಿಂದ ಕೊಚ್ಚುತ್ತಿರುವಂತ ಅನುಭವವಾಗುತ್ತಿತ್ತು. ಸದ್ದು ಮಾಡುತ್ತಾ ರೊಂಯ್ಯನೆ ಬಸ್ಸಿನೊಳಗೆ ನುಗ್ಗುತ್ತಿದ್ದ ಗಾಳಿಯಿಂದ ರಕ್ಷಣೆ ಪಡೆದುಕೊಳ್ಳಲು ಜನ ಹರಸಾಹಸ ಪಡುತ್ತಿದ್ದರು. ಬಸ್ಸು ಮುಂದಿನ ಸ್ಟಾಪಿನಲ್ಲಿ ನಿಂತಾಗ ಇಬ್ಬರು ಮಹಿಳೆಯರು, ಮತ್ತೊಬ್ಬ ಪುರುಷ ಬಸ್ಸು ಹತ್ತಿ ಖಾಲಿ ಇದ್ದ ಸೀಟುಗಳಲ್ಲಿ ಆಸೀನರಾದರು, ಮಹಿಳೆಯರಲ್ಲಿ ಒಬ್ಬಾಕೆಗೆ ಅಷ್ಟೇನೂ ವಯಸ್ಸಾಗಿರಲಿಲ್ಲ. ಆಕೆ ಸೀಲ್ ಚರ್ಮದ ಕೋಟು ಧರಿಸಿದ್ದಳು. ಅಂದಿನ ಮೇಲ್ಮಧ್ಯಮ ವರ್ಗದ ಸ್ತ್ರೀಯರ … Read more

ದಂತ ಪುರಾಣ: ಸಂಗೀತ ರವಿರಾಜ್

ಹಾಲು ಕುಡಿಯಲೊಲ್ಲದ ಮಗಳಿಗೆ ಪ್ರೇರೇಪಿಸಲು ಚಂದ್ರನ ತೋರಿಸಿ ಗಣಪತಿಯ ದಂತ ಮುರಿದದ್ದು ಹೇಗೆ ಗೊತ್ತಾ ಎಂಬ ಕತೆಯನ್ನು ಪ್ರಾರಂಭಿಸಿದೆ. ಆನೆ ತಲೆ ಜೋಡಿಸಿದ್ದನ್ನು ನೋಡಿ ನಕ್ಕ ಚಂದ್ರನಿಗೆ ಗಣಪತಿ ಸಿಟ್ಟಿನಿಂದ ತನ್ನ ಮುಖದ ದಂತವನ್ನು ತುಂಡರಿಸಿ ಎಸೆದ ಎಂದು ನನಗೆ ತಿಳಿದ ಗಣಪತಿಯ ‘ ದಂತ’ ಕತೆಯನ್ನು ಹೇಳಿ ಲೋಟ ಖಾಲಿ ಮಾಡಿಸಿದೆ. ಆದರೆ ಈಗ ನಾನು ಮನುಷ್ಯರ ದಂತದ ಕುರಿತ ಸ್ವಾರಸ್ಯಕರ ಕತೆಗಳನ್ನು ಹೇಳಹೊರಟಿರುವೆ. ದೇಹದ ಯಾವ ಅಂಗಕ್ಕು ಚಿಕ್ಕ ಗಾಯವಾದರು ಆ ದಿನ ಏನೋ … Read more

ಕತ್ತಲ ಗುಮ್ಮ: ಶೀಲಾ ಗೌಡ

ಕಾಲೇಜ್, ಟುಟೋರಿಯಲ್ಸ್, ಟೆಸ್ಟ್, ಪರೀಕ್ಷೆ ಬರೀ ಇದೇ ಆಗಿದೆ ನಮ್ಮ ದೈನಂದಿನ ಕೆಲಸ. ಬೇಜಾರು ಮಾಡಿಕೊಳ್ಳೋ ಹಾಗಿಲ್ಲ, ಅಕಾಸ್ಮಾತ್ತಾದರೂ ಹೇಳುವ ಹಾಗಿಲ್ಲ. ಅಪ್ಪಿ ತಪ್ಪಿ ಹೇಳಿದರೆ ಕೇಳಿದವರ ಪುಕಸಟ್ಟೆ ಭೋದನೆ ಜೊತೆಗೆ ನಗು ಮೊಗದಿಂದ ಆಲಿಸುವ ಶಿಕ್ಷೆ. ಒಟ್ಟಿನಲ್ಲಿ ಓದೋ, ಮಾರ್ಕ್ಸ್ ತೆಗೆಯೋ ರೇಸಿನಲ್ಲಿ ಓಡ್ತಿದಿವಿ. ಹೀಗೆ ತಮ್ಮ ಬೇಸರವನ್ನು ಹಂಚಿಕೊಳ್ಳುತ್ತ ಟುಟೋರಿಯಲ್ಸ ಕಡೆ ಹೆಜ್ಜೆ ಹಾಕುತಿದ್ದರು ಐವರು ಗೆಳೆಯರು. ಅರವಿಂದನ ಹಾಗೆ ನಾವೆಲ್ಲ ಡಿಪ್ಲೋಮ ಮಾಡಬೇಕಿತ್ತು ಹೀಗೆ ಒಂದೆ ಸರಿ ಟೆನ್ನಷನ್ ಇರ್ತಿರ್ಲಿಲ್ಲ ಎಂದ ಸುನಿಲನ … Read more

ಕಷ್ಟವೇ ದೇವರು………?: ದೀಪಾ ಜಿ.ಎಸ್

ನಮ್ಮ ಜೀವನದಲ್ಲಿ ಕಷ್ಟ ಬಂದಾಗ ಮಾತ್ರ ನಾವುಗಳು ಯಾಕೆ ದೇವರನ್ನ ನೆನಪು ಮಾಡ್ಕೊಂತೀವಿ . ಅದೇ ನಾವು ಸಂತೋಷದಿಂದ ಇದ್ದಾಗ ದೇವರನ್ನ ನೆನಪು ಮಾಡ್ಕೊಳ್ಳೊದೇ ಇಲ್ಲ ಅಲ್ವಾ. ಜೀವನದಲ್ಲಿ ಕಷ್ಟಗಳು ಬಂದಾಗ ನಾವ್ ಯಾಕೆ ತಲೆ ಬಾಗಬೇಕು. ನಾವ್ ಯಾಕೆ ಕಷ್ಟಗಳಿಗೆ ಹೆದರ್ಬೇಕು……? ನಾವ್ ಯಾಕೆ ಕಷ್ಟಗಳಿಗೆ ಅಂಜಬೇಕು…..? ಕಷ್ಟಗಳು ಬಂದಾಗ ನಾವ್ ಯಾಕೆ ಹೆದರಿ ಕೂತ್ಕೋಬೇಕು….? ನಾವ್ ಯಾಕೆ ಅಳ್ಬೇಕು….? ಹೀಗೆ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಾಗ ಉತ್ತರ ನಮ್ಮಲ್ಲೇ ಇದೆ ಅಲ್ವ. ನಮ್ಮಲ್ಲೂ ಕೂಡ ಆ … Read more

ಚಿಮಮಾಂದ ಅಧಿಚೀಯ Americanah: ನಾಗರೇಖಾ ಗಾಂವಕರ

“A white boy and a black girl who grow up in the same working class town in England can get together and race is secondary, but in America even if the white boy and black girl grow up in the same neighbourhood , race would be primary” ಇದು ಆಫ್ರಿಕಾದ ಸಮಕಾಲೀನ ಸಾಹಿತ್ಯ ಲೋಕದ ಶ್ರೇಷ್ಠ ಪ್ರತಿಭೆ ಚಿಮಮಾಂದ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 57 & 58): ಎಂ. ಜವರಾಜ್

-೫೭-ತಿಥಿ ಆಗಿ ತಿಂಗ್ಳಾಯ್ತುಈ ಅಯ್ನೋರು ಅಂದ್ಕೊಂಡಂತೆಪಂಚಾಯ್ತಿ ಚೇರ್ಮನ್ರು ಆದ್ರುಈ ನೆಪ ಮುಂದಿಟ್ಕಂಡುಸುತ್ಮುತ್ಲ ಮುಂದಾಳ್ನೆಲ್ಲತ್ವಾಟ್ಗ ಬರೇಳ್ಕಂಡಿದ್ರು ರಾತ್ರ ಆಗಿತ್ತುಆ ಆಳು ಎಲ್ಲಯವಸ್ತಿ ಮಾಡಿದ್ನಎತ್ತಗ ತಿರಿಕಂಡ್ರು ಬಾಡೆಬಾಡುನ್ ಗಮಲೆಯಾರ್ ಕೈಲ್ನೋಡು ಹೆಂಡುದ್ ಬಾಟ್ಲೆಹೆಂಡುದ್ ವಾಸ್ನೆನೆ ಈಗ ಪಂಚಾಯ್ತಿ ಆಳ್ತನ ಎಲ್ಲಈ ಅಯ್ನೋರ್ ಕೈಲೆ ಆಗ ಆ ಚೆಂಗುಲಿಸೋದುರ್ ಮಾವ ಬಂದ ಅನ್ಸುತ್ತಈ ಅಯ್ನೋರು‘ಹ್ಞು ಏನಾ ಇಲ್ಲಿಗಂಟ ಬಂದಿದೈ’ ಅಂದ್ರು‘ಅಯ್ನೋರಾ ಕೇಸು ಏನಾಯ್ತು’‘ನೀನು ಮೈಸೂರ್ ಸಿಟಿಲಿರಂವಕೋರ್ಟು ಲಾಯಿರಿಕಾನೂನ್ ಗೊತ್ತಿರಂವದುಡ್ಡುಕಾಸು ತುಂಬಿರಂವನೀನ್ತಾನೆ ಕಂಪ್ಲೆಂಟ ಕೊಡ್ಸಿಆ ಪರ್ಶುನ ಎಳಿಸ್ದಂವಕಾಲ್ನು ಕಾಲ್ನೆಡ್ತಿನು ಗಲಾಟಿ ಮಾಡಕರಂಪ ರಾದ್ದಾಂತುಕ್ಕ … Read more