ದೀಪಾವಳಿ ವಿಶೇಷಾಂಕಕ್ಕೆ ಲೇಖನ ಆಹ್ವಾನ

ಸಹೃದಯಿಗಳೇ, ಈ ವರ್ಷದ ದೀಪಾವಳಿ ವಿಶೇಷಾಂಕಕ್ಕಾಗಿ ನಿಮ್ಮ ಲೇಖನ, ಪ್ರಬಂಧ, ಕವಿತೆ, ಕತೆ ಇತ್ಯಾದಿ ಸಾಹಿತ್ಯದ ಬರಹಗಳನ್ನು ಪಂಜುವಿಗಾಗಿ ಕಳಿಸಿಕೊಡಿ. ನಿಮ್ಮ ಲೇಖನಗಳು ನವೆಂಬರ್ 13 ರ ಸಂಜೆಯೊಳಗೆ ತಲುಪಲಿ… ಕನ್ನಡ ರಾಜ್ಯೋತ್ಸವದ ಶುಭಾಶಯಗಳೊಂದಿಗೆ… ನಿಮ್ಮ ಲೇಖನಗಳ ನಿರೀಕ್ಷೆಯಲ್ಲಿಪಂಜು ಬಳಗhttps://panjumagazine.com/ ನಮ್ಮ ಇ ಮೇಲ್‌ ವಿಳಾಸ: editor.panju@gmail.com, smnattu@gmail.com ವಿ.ಸೂ.: ಪಂಜು ಅಪ್ರಕಟಿತ ಬರಹಗಳನ್ನಷ್ಟೇ ಸ್ವೀಕರಿಸುತ್ತದೆ. ಲೇಖಕರು ಕಳುಹಿಸುವ ಲೇಖನವು ಬ್ಲಾಗ್, ಎಫ್ ಬಿ, ಸೇರಿದಂತೆ ಬೇರೆ ಎಲ್ಲಾದರು ಪ್ರಕಟವಾಗಿದ್ದರೆ ಅಂತಹ ಬರಹವನ್ನು ಸ್ವೀಕರಿಸುವುದಿಲ್ಲ.

ಎ.ಟಿ.ಎಂ. ನಲ್ಲೊಂದು ದಿನ……: ಪಿ.ಎಸ್. ಅಮರದೀಪ್

“ಥೋ…….. ನಮ್ದೇನ್ ಕರ್ಮನಪ್ಪ… ಎಸೆಲ್ಸಿ ಕಂಡೋರ್ ಕೈಲಿ ಪರೀಕ್ಷೆ ಬರೆಸಿ ಪಾಸಾಗಿ ಅವರಪ್ಪನ ನೌಕ್ರೀನ ಅಯ್ಯೋ ಪಾಪ ಅಂತ ಅನುಕಂಪದ ಆಧಾರದ ಮೇಲೆ ತಗಂಡಿದ್ದೇ ಬಂತು… ಒಂದ್ ಸೆಂಟೆನ್ಸ್ ಇಂಗ್ಲೀಷು, ಒಂದ್ ಸೆಂಟೆನ್ಸ್ ಕನ್ನಡಾನ ಒಂದು ಸ್ಪೆಲಿಂಗ್ ಮಿಸ್ಟೇಕ್ ಇಲ್ದೇ ಒಂದಕ್ಷರ ತಪ್ಪಿಲ್ದೇ ಬರೆಯೋಕ್ ಯೋಗ್ತೆ ಇಲ್ದಂತವರಿಗೆ ಎಲ್ಡೆಲ್ಡ್ ಪ್ರಮೋಷನ್ನೂ, ದೊಡ್ಡ ಹುದ್ದೆ ಬೇರೆ ಕೇಡು.. ಅಂತ ಹೆಬ್ಬೆಟ್ಟು “ಎಲ್ಲಪ್ಪ”ನಿಗೆ ನಾವು ಕೊಳ್ಳಿಗೊಂದ್ ಹಾರ ಹಾಕಬೇಕು… ಸ್ವೀಟು, ಖಾರ ತಂದು ಪುಗಸಟ್ಟೆ ಬಹುಪರಾಕ್ ಹೇಳಿ, ಚಪ್ಪಾಳೆ ತಟ್ಟಿ … Read more

ಮರೆಯಲಾಗದ ಮದುವೆ (ಭಾಗ 14): ನಾರಾಯಣ ಎಮ್ ಎಸ್

ಇಲ್ಲಿಯವರೆಗೆ ತಿಂಡಿ ಮುಗಿಸಿ ಸುಬ್ಬು, ಮುರಳಿ, ಸೀತಮ್ಮನವರು, ಮೋಹನ ಮತ್ತು ಕೃಷ್ಣಯ್ಯರ್ ಸ್ವಾಮಿ ಸರ್ವೋತ್ತಮಾನಂದರ ಆಶ್ರಮಕ್ಕೆ ಕಾರಿನಲ್ಲಿ ಹೊರಟರು. ಸುಮಾರು ಹದಿನೈದು ಮೈಲು ದೂರದ ಆಶ್ರಮವನ್ನು ತಲುಪಲು ಅರ್ಧ ಘಂಟೆಯಾಗಬಹುದೆಂದು ಡ್ರೈವ್ ಮಾಡುತ್ತಿದ್ದ ಮೋಹನ ಹೇಳಿದ. ಸ್ವಾಮೀಜಿಯೊಂದಿಗೆ ಸಮಾಲೋಚಿಸಿ ಮದುವೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಮುರಳಿಯವರ ನಿರ್ಧಾರ ಸುಬ್ಬುವಿಗೆ ಸಮಾಧಾನ ತಂದಿರಲಿಲ್ಲ. ಆದರೆ ಸಾಧುಸಂತರ ಬಗ್ಗೆ ತನ್ನ ತಾಯಿಗಿದ್ದ ಅಪಾರ ಶ್ರದ್ಧಾಭಕ್ತಿಯ ಅರಿವಿದ್ದುದರಿಂದ ಈ ವಿಚಾರದಲ್ಲಿ ತನಗೆ ಅಮ್ಮನ ಬೆಂಬಲ ಸಿಕ್ಕುವ ನಂಬಿಕೆಯಿರಲಿಲ್ಲ. ಇನ್ನು ಮುರಳಿ ಚಿಕ್ಕಪ್ಪನ … Read more

ನನ್ನೊಳಗಿನವಳು ಅವಳು: ಮಸಿಯಣ್ಣ ಆರನಕಟ್ಟೆ.

ಕೂಡ್ಲಹಳ್ಳಿಯಲ್ಲಿ ಸಂಗಮೇಶ್ವರನ ಜಾತ್ರೆ ಸಾಗಿತ್ತು. ಕರೋನ ಅಬ್ಬರದಿಂದ ಜನ ಸೇರಿರಲಿಲ್ಲ. ಜಾತ್ರೆ ಎಂದರೆ ತಪ್ಪಾಗಬಹುದೇನೋ! ಒಂದು ದೇವಸಂತೆ ಎಂದರೆ ಸಮಂಜಸ ಅನ್ನಬಹುದು.ಆದ್ರೂ ಸಹ ಪೂಜೆ ಪುನಸ್ಕಾರಗಳೆಲ್ಲಾ ವಿಧಿವಿಧಾನದಂತೆ ಯತವತ್ತಾಗಿ ನಡೆಯುತ್ತಿದ್ದವು.ನಾನು ಹೋಗಿದ್ದೆ.ಸಾಮಾಜಿಕ ಅಂತರ ಕಾಯ್ದುಕೊಂಡೆ ಅಂದುಕೊಳ್ತಿನಿ ಕಾರಣ ನನಗೆ ಕರೋನ ಸಂಬಂಧ ಯಾವುದೇ ಪಾಸಿಟೀವ್ ತಂಟೆ ತಕರಾರೆದ್ದಿಲ್ಲ. ದರ್ಶನ ಆಯ್ತು, ಅವ್ವ ರೊಟ್ಟಿ ಕಟ್ಟಿ ಕೊಟ್ಟಿದ್ಲು . ಕಜ್ಜಾಯ ಸಹ ಮಾಡಿ ಕೊಟ್ಟಿದ್ಲು. ದೇವಸ್ಥಾನ ಬಿಟ್ಟು ಹತ್ತತ್ರ ೧ ಮೈಲಿ ನಡೆದರೆ ಅಜ್ಜಯ್ಯನ ಆಲದಮರದ ತೋಪು ಸಿಗುತ್ತೆ. … Read more

ಊದ್ಗಳಿ ಕವನ ಸಂಕಲ: ನಂದಾದೀಪ, ಮಂಡ್ಯ

ಉದ್ಗಳಿ ಕವನ ಸಂಕಲನ ಪುಸ್ತಕದ ಹೆಸರೇ ವಿಭಿನ್ನ ಎನಿಸಿತು.. ಆ ಹೆಸರೇ ಕೇಳಿಲ್ಲ ಹಾಗಂದರೆ ಅರ್ಥ ಏನು ಎನ್ನುವ ಕುತೂಹಲದಲ್ಲೆ ಪುಸ್ತಕವನ್ನು ಕೈಗೆತ್ತಿಕೊಂಡಾಗ ಮೊದಲು ಪುಸ್ತಕದ ಮುಖಪುಟದಲ್ಲಿದ್ದ ಅಗ್ಗಿಷ್ಟಿಕೆ, ಕೊಳವೆ ನೋಡಿ ಇದಕ್ಕೂ ಹೆಸರಿಗೂ ಏನು ಸಂಬಂಧ ಎಂದು ಮುನ್ನುಡಿ ಓದಿದಾಗಲೇ ತಿಳಿದಿದ್ದು ‘ಊದ್ಗಳಿ’ ಎಂದರೆ ಒಲೆಯ ಊದುವ ಪುಟ್ಟದಾದ ಒಂದು ಕೊಳವೆ ಎಂದು..(ಒಂದೊಂದು ಕಡೆ ಒಂದೊಂದು ಹೆಸರಿನಿಂದ ಕರೆಯುತ್ತಾರೆ ಹಾಗಾಗಿ ಹೊಸ ಪದ ಎನಿಸಿದ್ದು) ನಿಜಕ್ಕೂ ಒಬ್ಬ ಹೆಣ್ಣು ಮಗಳು ಪುಟ್ಟ ಗ್ರಾಮದಲ್ಲಿ ಹುಟ್ಟಿ ಶಿಕ್ಷಣ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 51 & 52): ಎಂ. ಜವರಾಜ್

-೫೧-ಕಣ್ಬುಟ್ಟಾಗ ತ್ವಾಟುದ್ತುಂಬಜನ ಜಗನ್ಜಾತ್ರ್ಯಾಗಿ ಕಾಣ್ತುಬರೋರು ಬತ್ತನೇ ಅವ್ರಇಡಿ ಊರೇ ಇತ್ತುಈ ಊರೇನುಅಕ್ಕಪಕ್ದ ಊರೋರ್ ಜನಾನು ಕಂಡ್ರು ಆ ಆಳುಆ ಜನ್ಗಳ ಸಂದಿಲಿಅತ್ತಗು ಇತ್ತಗು ಓಡಾಡ್ತ ಇದ್ನ‘ಮಗ ಮಾಡ್ದ ತಪ್ಗ ಅಪ್ಪುನ್ಗ ಶಿಕ್ಷ..’‘ಅಯ್ನೋರೇನ ಅನ್ತ ಈಗ್ಲಾರುಗೊತ್ತಿರ್ಬೇಕು ಪೋಲೀಸ್ರುಗ’‘ಆದ್ರ ಊರಾಳ್ದಂವ್ರು ಅವ್ಮಾನ ಅಲ್ವ’‘ಎಲ್ಯ ನಾ ವಸಿ ನೋಡ್ತಿನಿ ಅಯ್ನೋರಾರಾತ್ರ್ಯಲ್ಲ ಟೇಸನಲ್ಲೆ ಇರುಸ್ಕಂಡಿದ್ರಂತಅಂವ ಶಂಕ್ರ ಇನ್ನು ಸಿಕ್ಕಿಲ್ವಂತನೋಡಕ ಮಂಗ್ಯಾಗಿದ್ನನೋಡು ಎನ್ತ ಕೆಲ್ಸ ಮಾಡನಹೋಗಿ ಹೋಗಿ ಕುಲ್ಗೆಟ್ಟವ್ಳ ಮದ್ವ ಆದ್ನಆಗ್ಲು ಅಯ್ನೋರು ಸಯಿಸ್ಕಂಡ್ರುಕೇರಿನೇ ತಲ ತಗ್ಸ ತರ ಮಾಡುದ್ನಆಗ ಅಯ್ನೋರುಹೆಂಗ್ ನ್ಯಡ್ಕಂಡ್ರು ಅನ್ತ … Read more

ಕಳೆದು ಹೋಗುವ ಸುಖ (ಭಾಗ 2): ಡಾ. ಹೆಚ್ಚೆನ್ ಮಂಜುರಾಜ್

ಇಲ್ಲಿಯವರೆಗೆ ಏನಾದರೊಂದು ಕೆಲಸಗಳಲ್ಲಿ ಅದರಲ್ಲೂ ರಚನಾತ್ಮಕ ಕಾರ‍್ಯಗಳಲ್ಲಿ ತೊಡಗಿಸಿಕೊಳ್ಳುವ ಮನೋಧರ್ಮ ಇಂದಿನ ಅಗತ್ಯವಾಗಿದೆ. ‘ಕೆಲಸದ ಬಗ್ಗೆ ಮಾತಾಡಿದರೆ ಕೆಲಸ ಮಾಡಿದಂತಾಗುವುದಿಲ್ಲ’ ಎಂದು ಬಹು ಹಿಂದೆಯೇ ವಕ್ರೋಕ್ತಿಯೊಂದನ್ನು ಹೊಸೆದಿದ್ದೆ. ಇಂದು ನಾವು ಕೆಲಸ ಮಾಡುವುದು ಕಡಮೆ; ಅದನ್ನು ಕುರಿತು ಮಾತಾಡುವುದು ಹೆಚ್ಚು. ಬದುಕುವುದು ಕಡಮೆ; ಬದುಕಲು ಮಾಡಿಕೊಳ್ಳುವ ಸಿದ್ಧತೆಯೇ ಹೆಚ್ಚು. ‘ಕಂಪ್ಯೂಟರ್ ಬಳಸಿ ಕೆಲಸ ಮಾಡಬೇಕು; ಕಂಪ್ಯೂಟರ್ ಬಳಸುವುದೇ ಕೆಲಸವಾಗಬಾರದು’ ಎಂದೂ ಇನ್ನೊಮ್ಮೆ ಬರೆದಿದ್ದೆ. ಅಂದರೆ ಮಂತ್ರಕ್ಕಿಂತ ಉಗುಳೇ ಹೆಚ್ಚು ಎಂಬಂತಾಗಿದೆ ನಮ್ಮಗಳ ಪರಿಸ್ಥಿತಿ! ಬಹುತೇಕ ಸಭೆ/ಮೀಟಿಂಗುಗಳ ನಿರ್ಧಾರವೇನೆಂದರೆ … Read more