ಹಗಲು ದರೋಡೆಕೋರರು…: ಗುರುಪ್ರಸಾದ ಕುರ್ತಕೋಟಿ

ನಾನು ಮದ್ಯಾಹ್ನ ಮಲಗೋದೇ ಅಪರೂಪ. ಆದರೂ ಅವಕಾಶ ಸಿಕ್ಕಾಗ ಬಿಡೋಲ್ಲ. ನಾನು ಹಾಗೆ ಮಲಗಿದಾಗ ನನ್ನ ಫೋನಿಗೆ ನನ್ನ ಮೇಲೆ ತುಂಬಾ ಅಸೂಯೆ! ಅವತ್ತೂ ಬೊಬ್ಬೆ ಹೊಡೆದು ನನ್ನ ಬಡಿದೆಬ್ಬಿಸಿತ್ತು. ನಮ್ಮ “ಬೆಳೆಸಿರಿ”ಯಲ್ಲಿ ಕೆಲಸ ಮಾಡುತ್ತಿದ್ದವ ಮಾಡಿದ ಫೋನ ಅದು. ಕಟ್ ಮಾಡಿದರೂ ಮತ್ತೆ ಮತ್ತೆ ಮಾಡತೊಡಗಿದ. ಒಂದಿಷ್ಟು ತರಕಾರಿಗಳ ಡೆಲಿವರಿ ಮಾಡಲು ನನ್ನ ಸ್ಕೂಟರ್ ನಲ್ಲಿ ಯೆಲಹಂಕಾದ ಬಳಿಯ ಒಂದು ಅಪಾರ್ಟ್ಮೆಂಟ್ ಗೆ ಹೋಗಿದ್ದ. ಆಗ ತಾನೇ ಜೋಂಪು ಹತ್ತಿದ್ದ ಬ್ರಾಹ್ಮಣನ ನಿದ್ದೆ ಭಂಗ ಮಾಡುವುದು … Read more

ಬರಹ – ನೂರು ನೂರು ತರಹ: ಡಾ. ಹೆಚ್ಚೆನ್ ಮಂಜುರಾಜ್

ಇತ್ತೀಚೆಗೆ ನನ್ನ ಪರಿಚಿತರೊಬ್ಬರು ‘ಬರೆಯುವುದು ಹೇಗೆ?’ ಎಂದು ಕೇಳಿಬಿಟ್ಟರು. ಇದುವರೆಗೂ ಇಂಥ ಪ್ರಶ್ನೆಯೊಂದನು ನಾನು ಕೇಳಿರಲೂ ಇಲ್ಲ; ಕೇಳಿಕೊಂಡಿರಲೂ ಇಲ್ಲ. ಅಚ್ಚರಿಯೆಂದರೆ ಏನೂ ಮಾತಾಡದೆ ಸುಮ್ಮನೆ ನಕ್ಕುಬಿಟ್ಟೆ. ಆಮೇಲನಿಸಿತು, ಗಂಭೀರನಾದೆ. ಇದು ಬರೆಹವೊಂದು ಉದಿಸುವ ಮುಹೂರ್ತ. ಅದನೇ ಬರೆದು ಬಿಡೋಣ ಎಂದು ಕುಳಿತು ಬರೆಯುತ್ತ ಹೋದೆ. ಈ ಬರೆಹ ಜನಿಸಿತು. ಅಂದರೆ ಬರೆಹದ ಪ್ರಾಥಮಿಕ ಲಕ್ಷಣವೇ ಕುಳಿತು ಬರೆಯುತ ಹೋಗುವುದು ಅಷ್ಟೇ. ಪರೀಕ್ಷೆಯಲ್ಲಿ ಮೂರು ಗಂಟೆಗಳ ಕಾಲ ಬರೆಯುತ್ತೇವೆ. ಹೇಗದು ಸಾಧ್ಯವಾಯಿತು? ಏಕಾಗ್ರತೆ, ಉದ್ದೇಶ, ಮನೋಭಾವ ಮತ್ತು … Read more

ದಯೆಯ ಯಾದೃಚ್ಛ ಕ್ರಿಯೆ (Random act of kindness): ದಿನೇಶ್ ಉಡಪಿ

ಶುಕ್ರವಾರ ಕಾಲೇಜಿನ ಕೆಲಸಕ್ಕೆ ರಜೆ ಹಾಕಿಕೊಂಡು, ಕೆಲವು ಅಗತ್ಯ ಕೆಲಸಕ್ಕಾಗಿ ಕೆ.ಆರ್.ನಗರಕ್ಕೆ ಹೋಗಬೇಕಿತ್ತು. ಬೆಳಗಿನಿಂದಲೇ ಮೋಡ ಕವಿದ ವಾತಾವರಣವಿತ್ತು, ಅತಿಯಾದ ತೇವಾಂಶದ ಕಾರಣ ವಿಪರೀತ ಶೆಕೆಯೂ ಇತ್ತು. ಮಧ್ಯಾಹ್ನದ ಹೊತ್ತಿಗೆ ಎಲ್ಲಾ ಕೆಲಸ ಮುಗಿಸಿಕೊಂಡು ಮೈಸೂರಿನತ್ತ ಹೊರಟೆ. ಬಿಳಿಕೆರೆ ಹತ್ತಿರ ಬರುವಷ್ಟರಲ್ಲಿ ಮಳೆ ಸುರಿಯತೊಡಗಿತು, ಕುಂಭದ್ರೋಣ ಮಳೆ ಅಂತಾರಲ್ಲ ಹಾಗೆ. ಕಾರಿನ ವೈಪರ್ ಪೂರ್ತಿ ವೇಗದಲ್ಲಿ ನೀರನ್ನು ತಳ್ಳುತ್ತಿದ್ದರೂ ರಸ್ತೆ ಕಾಣದಷ್ಟು ಮಳೆ. ಬಹುತೇಕ ಎಲ್ಲ ವಾಹನಗಳೂ ರಸ್ತೆ ಪಕ್ಕ ಹಾಕಿಕೊಂಡು ನಿಂತಿದ್ದರು. ನನ್ನ ಚಿರಪರಿಚಿತ ರಸ್ತೆ … Read more

ಕೋವಿಡ್ ಕಲಿಸಿದ ಪಾಠ: ಗೀತಾ ಜಿ ಹೆಗಡೆ ಕಲ್ಮನೆ.

ಮೊನ್ನೆ ಒಂದಿನ ಸಾಯಂಕಾಲ ಆಗುತ್ತಿದ್ದಂತೆ ಗಂಟಲು ಸ್ವಲ್ಪ ಉರಿ, ನೆಗಡಿಯಾಗುವಾಗ ಆಗುತ್ತಲ್ಲಾ ಹಾಗೆ ಒಂದು ರೀತಿಯ ಇರಿಟೇಷನ್. ಉಸಿರಾಟದಲ್ಲಿ ಸ್ವಲ್ಪ ಕಷ್ಟ ಅಂದರೆ ಬಾಯಿ ತೆರೆದು ಉಸಿರಾಡಬೇಕು ಅನಿಸುವಷ್ಟು. ಸಂಜೆ ದೀಪ ಹಚ್ಚಿ ಸ್ವಲ್ಪ ಭಗವತ್ಗೀತೆ ಪಾರಾಯಣ ಮಾಡುವ ರೂಢಿ. ಎಂದಿನಂತೆ ಸರಾಗವಾಗಿ ಓದಲು ಆಗುತ್ತಿಲ್ಲ. ಸ್ವರವೇ ಹೊರಗೆ ಬರ್ತಿಲ್ಲ. ಅಯ್ಯೋ ಶಿವನೇ….ಇದೆನಾಯಿತು ನನಗೆ? ಪಕ್ಕನೆ ಕೊರೋನಾ ಸಿಂಟೆಮ್ಸ ಹೀಗೀಗೆ ಇರುತ್ತದೆ ಎಂದು ಟೀವಿಯಲ್ಲಿ ಪೇಪರಲ್ಲಿ ವಾಲಗ ಊದುತ್ತಿದ್ದದ್ದು ಜ್ಞಾಪಕ ಬಂತು ನೋಡಿ…. ಸೋಫಾದಲ್ಲಿ ಕೂತವಳು ಸಣ್ಣಗೆ … Read more

ಮರೆಯಲಾಗದ ಮದುವೆ (ಭಾಗ 12): ನಾರಾಯಣ ಎಮ್ ಎಸ್

“ಸಾರ್… ರೈಲ್ವೇಸಿಂದ ಫೋನು, ಅದ್ಯಾವ್ದೋ ಕಾವ್ಲೀ ಅನ್ನೋ ಸ್ಟೇಷನ್ನಲ್ಲಿ ಯಾವ್ದೋ ವಯ್ಸಾಗಿರೋರ ಹೆಣಾ ಸಿಕ್ಕಿದ್ಯಂತೇ…ಈಗ್ಲೇ ಯಾರಾರೂ ಬಾಡಿ ಐಡೆಂಟಿಫೈ ಮಾಡಕ್ಕೋಗ್ಬೇಕಂತೆ” ರಿಸೆಪ್ಷನ್ ಕೌಂಟರಿನಿಂದ ಯಾವನೋ ಅವಿವೇಕಿ ಗಟ್ಟಿಯಾಗಿ ಕಿರುಚಿದ್ದ. ಲಾಬಿಯಿಡೀ ನೀರವ ಮೌನ ಆವರಿಸಿತು. ಪಾಪ ಸೀತಮ್ಮನವರ ಹೊಟ್ಟೆ ತಳಮಳಗುಟ್ಟಿತು. ಮೆಲ್ಲನೆ ತಮ್ಮ ಎಡಕುಂಡೆಯನ್ನೆತ್ತಿ ಸುಧೀರ್ಘವಾಗಿ ’ಠುಯ್ಯ್…………………’ ಎಂದು ತಾರಕಸ್ಥಾಯಿಯಲ್ಲಿ ಸದ್ದು ಹೊರಡಿಸಿ ಕಣ್ಣು ತೇಲಿಸಿಬಿಟ್ಟರು. ಮೊಮ್ಮಗ ಕಣ್ಣನ್ ಕಣ್ಣರಳಿಸಿ ಸುರುಳಿಯಾಗಿಸಿದ ಅಂಗೈಯನ್ನು ಬಾಯಿನ ಸುತ್ತ ಹಿಡಿದು ’ಠುಯ್ಯ್…………………’ ಎಂದು ನಕಲು ಮಾಡಿ ಪಕಪಕನೆ ನಕ್ಕ. ಇದರಿಂದ … Read more

ಸೂಲಂಗಿಯ ಕತೆ-ವ್ಯಥೆ: ಸುಂದರಿ. ಡಿ

ಅದೊಂದು ದಿನ ಜಮೀನಿನಲ್ಲಿ ಕಬ್ಬು ಕಟಾವು ಕೆಲಸ ನಡೆಯುತ್ತಿತ್ತು, ಹೋಗಿ ನೋಡುವಾಸೆ! ಏಕೆಂದರೆ ಕಬ್ಬು ಬಿತ್ತನೆಯ ಸಮಯದಲಿ ಖುಷಿಯಿಂದಲೇ ನಾನೊಂದಷ್ಟು ನಾಟಿ ಮಾಡಿದ್ದೆ. ಅದೇ ಪ್ರತಿ ದಿನದ ಕಾಯಕವಾದರೆ ಅದು ಈ ಮಟ್ಟದ ಖುಷಿ ಕೊಡಲಾರದು. ಆಗೊಮ್ಮೆ – ಈಗೊಮ್ಮೆ ಜಮೀನಿನ ಮುಖ ನೋಡಿ ಬರುವ ನಮ್ಮನ್ನು ಮರೆತು, ಉಳುವವರೇ ವಾರಸುದಾರರೆಂದು ಜಮೀನು ಎಲ್ಲಿ ತಪ್ಪು ತಿಳಿದೀತೆಂದು ಭಾವಿಸಿ ಅದರ ನಿಜವಾದ ವಾರಸುದಾರರು ನಾವೆಂದು ನೆನಪು ಮಾಡುವ ಸಲುವಾಗಿ ಹೋಗುವ ನಮ್ಮಂಥ ಮಧ್ಯಮವರ್ಗದ ಜನಗಳಿಗೆ ನಿತ್ಯದ ಕಾಯಕವಾಗಿ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 47 & 48): ಎಂ. ಜವರಾಜ್

-೪೭-ಈ ಅಯ್ನೋರುಈ ಆಳುನ್ ಗುಟ್ಟ ಕಂಡಿರ್ನಿಲ್ಲಸಂದಲಿಈ ಆಳಾಡ್ದ ಮಾತ್ಗಅಯ್ನೋರ್ ತಿಕುದ್ ಸಂದಿಲೆಇರಂಗಾಯ್ತು ‘ಏ ಬಲ ಇಲ್ಲಿ’ತಲ ಕೆರಿತಾ‘ಅಯ್ನೋರಾ’ ಅನ್ತ ಬಂದರಾತ್ರ ಎಂಟೆಂಟುವರೆ ಗಂಟ್ಯಾಗಿತ್ತು.‘ಅದೇನ್ಲ ನಾ ಅನ್ಕಂಡಂಗೆಕಡ್ಡಿ ಮುರ್ದಾಗಿ ಅನ್ಕಡಾ’‘ಆ ಕಾಲುನ್ ಮಗಂವ್ನಲ್ಲಪರ್ಶುರಾಗಿ ಮಿಲ್ತವ್ಶಿವ್ಲಿಂಗಪ್ಪೋರ್ ಜೊತ್ಗ ನಿಂತಿದ್ನಆ ಶಿವ್ಲಿಂಗಪ್ಪೋರು,‘ಏ ಕಾಲುನ್ ಮಗ್ನೆನಿಮ್ಮಯ್ನೋರು ಗೆದ್ದರಾ’ ಅಂದ್ರುಅದ್ಕ ಪರ್ಶು‘ನಾ ಮಾತಾಡಗಿದ್ದ ಬುದ್ದಿಸೋಲ್ಲಿ ಅಂತಾನೆ ನಾನುಅದ್ರ ಗೆಲ್ಲದೆ ಆವಯ್ಯಬುದ್ದಿ ನೀವೆಲ್ಲ ಕೈಕಟ್ಟುದ್ರಏನಾರ ಮಾಡ್ಬೇದು’ಅಂದ ಅಯ್ನೋರಾಅದ್ಕ ಆ ಶಿವ್ಲಿಂಗಪ್ಪೋರು‘ಎಲಕ್ಷನು ಕಸ್ಟ ಕಣಆದ್ರ ಒಂದ್ ಕೆಲ್ಸ ಮಾಡು’ಅಂದ್ರು ಅದ್ಕ ಈ ಪರ್ಶು‘ಹೇಳ್ಬದ್ದಿ ನೀವು ಕಾಲ್ಲಿತೋರುದ್ದ ಕಣ್ಗೊತ್ತಿ … Read more

‘ಪಾಠವೂ ಮುಖ್ಯ, ಪ್ರಾಣವೂ ಮುಖ್ಯ’: ಬೀರೇಶ್ ಎನ್ ಗುಂಡೂರ್

ಈ ವಯಸ್ಸಿಗೆನೇ ಮೊಬೈಲ್ ಅಬ್ಯಾಸ ಇರಲೇಬಾರದು. ಮಕ್ಳು ಕೆಟ್ಟೋಗ್ತವೆ. ಕಣ್ಣು ಹಾಳಾಗ್ತವೆ. ಅಂತಿದ್ದ ಪಾಲಕರೆಲ್ಲಾ ಈಗ ಅದೇ ಮಕ್ಕಳನ್ನು ಹಿಡಿದು ಮೊಬೈಲ್ ಕೊಟ್ಟು ಹೊಡ್ಡು ಬಡ್ಡು ಕೂರಿಸುತಿದ್ದಾರೆ. ಪರದೆಯ ಮೇಲೆ ಇಟ್ಟ ದೃಷ್ಟಿ ಸ್ವಲ್ಪ ಕದಲಿದರೆ ಸಾಕು, ನೀನು ಸರಿಯಾಗಿ ಕಲಿಯುತ್ತಿಲ್ಲ. ಫೀಸ್ ಕಟ್ಟಿದಿವಿ. ಕಲಿಲಿಲ್ಲ ಅಂದ್ರೆ ಅಷ್ಟೇ ಈ ವರ್ಷ, ಅಂತ ರಾಗ ಹಾಡುತಿದ್ದಾರೆ. ಮಕ್ಕಳಿಗೆ ಇದೊಂತರ ವಿಚಿತ್ರ ಅನಿಸುತಿದ್ದೆ. ಇಷ್ಟು ದಿವಸ ಮೊಬೈಲ್ ಕೇಳಿದರೆ ಕಣ್ಣು ಬಿಡುತಿದ್ದವರು…ಈಗ ಅದೇ ಮೊಬೈಲ್ ಕೊಟ್ಟು ದಿಟವಾಗಿ ನೋಡು, … Read more

ಗಿರಿಕನ್ಯೆಯ ಗುನುಗು: ಗೀತಾ ಪ್ರಸನ್ನ

ಅಣ್ಣಾವ್ರ ಗಿರಿಕನ್ಯೆ ಬರ್ತಿತ್ತು ಇವತ್ತು. ಎಷ್ಟ್ ಚೆಂದದ ಜೋಡಿ.. ಚೆನ್ನ ಚೆಲುವೆ. ಜಯಮಾಲಾ ಎಳೇ ಬಳ್ಳಿ, ಅಣ್ಣಾವ್ರ ಕರಿಷ್ಮಾ – ಇಬ್ಬರ ಜೋಡಿ ಆಹಾ.. ಆ ಎವರ್ ಗ್ರೀನ್ ಹಾಡುಗಳು. “ನಗು ನಗುತಾ ನೀ ಬರುವೆ.. ನಗುವಿನಲೆ ಮನ ಸೆಳೆವೆ.. “ ಆಹಾ ಎಂಥಾ ಮುದ. ದೋಣಿಯಲ್ಲಿ ಇಬ್ಬರ ರೋಮ್ಯಾನ್ಸ್!! ಈ ದೋಣಿ ಸೀನ್ ನೋಡಿ ಸೀದಾ ಕಾಲೇಜು ದಿನಕ್ಕೆ ಹೋಯ್ತು ನೆನಪು. ಅಣ್ಣಾವ್ರು ಹುಟ್ಟು ಹಾಕ್ತಾ ಇದ್ರೆ, ಚೆಲುವೆ ಎಳೇ ಬಳ್ಳಿ ಹಾಗೆ ಮರಕ್ಕೆ ಹಬ್ಬಿಕೊಳ್ಳೋ … Read more