ಪಂಜು ಕಾವ್ಯಧಾರೆ

ಮಣ್ಣಿನ ಮಮತೆ ಹೆತ್ತತಾಯಿ ಉದರದಲ್ಲಿಜನಿಸಿದ ನಾವೇ ಭಾಗ್ಯವಂತರುಈ ಪುಣ್ಯಭೂಮಿಯಲ್ಲಿಬೆಳೆದ ನಾವೇ ಪುಣ್ಯವಂತರು ಹಚ್ಚ ಹಸಿರು, ಚಿನ್ನದಂತಹ ಪೈರುತೊನೆದಾಡುವುದ ನೋಡಿರಿಬಣ್ಣಬಣ್ಣದ ಸುಮಗಳಿಂದಅರಳಿದ ಲತೆಯ ಕಾಣಿರಿ ಖಗ ಮಿಗಗಳು‌ ನೇಹದಿಂದಕಾಡಿನಲಿ ಬಾಳುತಿವೆಹಕ್ಕಿಗಳ ಕಲವರಕೆಎನ್ನೀ ಮನ ಸೋಲುತಿದೆ ಜನನ ಇಲ್ಲೇ ಮರಣ ಇಲ್ಲೇಅಪ್ಪಿಕೊಳ್ವುದು ಭೂಮಿಯುಆಡಿ ಕುಣಿದು ಬೆಳೆದ ಎಮ್ಮಕೈಬಿಡಳು ಭೂಮಿ ತಾಯಿಯು ಬೆಳೆಬೆಳೆವ ರೈತರುಭೂತಾಯಿಗೆ ನಮಿಸುವರುಕಷ್ಟ ನಷ್ಟವ ಎಲ್ಲವನುಸಮನಾಗಿ ಕಾಣ್ವರು ಮಣ್ಣಿನ ಮಮತೆಯ ಎಂದಿಗೂಮರೆಯಲಾಗದು ಗೆಳೆಯಾಈ ಮಣ್ಣಿನ ಋಣವ ಎಂದಿಗೂತೀರಿಸಲಾಗದು ಗೆಳೆಯಾ –ಸಿಂಧು ಭಾರ್ಗವ್ ಜೀವನ ಚಕ್ರ…..! ಕದಿಯಲು ಬಂದ ಕಳ್ಳನಿಗೆಶ್ರೀಮಂತನಾಗುವ … Read more

ಸಂಗೀತ ಲೋಕದ ಬೆರಗು ಎಸ್‍ಪಿಬಿ: ಡಾ. ಹೆಚ್ ಎನ್ ಮಂಜುರಾಜ್

‘ಮಲೆಗಳಲುಲಿಯುವ ಓ ಕೋಗಿಲೆಯೇಬಲು ಚೆಲ್ವಿದೆ ನಿನ್ನೀ ಗಾನಇಂಗ್ಲಿಷಿಗೆ ತರ್ಜುಮೆ ಮಾಡಿದರೆದೊರೆವುದು ನೊಬೆಲ್ ಬಹುಮಾನ’ ಕುವೆಂಪು ಅವರ ಕವಿತೆಯೊಂದರ ಸಾಲುಗಳಿವು. ಇದನ್ನು ಪ್ರಸ್ತಾಪಿಸುತ್ತಾ ಡಾ. ಹಾ ಮಾ ನಾಯಕರು, ‘ಕೋಗಿಲೆಯ ಹಾಡನ್ನು ಇಂಗ್ಲಿಷಿಗೆ ತರ್ಜುಮೆ ಮಾಡುವವರು ಯಾರು?’ ಎಂದು ಕೇಳುತ್ತಾ, ಪರೋಕ್ಷವಾಗಿ ಕುವೆಂಪು ಅವರ ಪ್ರತಿಭೆಗೆ ನೊಬೆಲ್ ಬಹುಮಾನ ಲಭಿಸುವುದು ಯಾವಾಗ? ಎಂಬ ದನಿಯಲ್ಲಿ ಬರೆದಿದ್ದರು. ಏಕೆ ಈಗ ಈ ಮಾತು ನೆನಪಾಯಿತೆಂದರೆ, ಇಂಥ ಸವಾಲನ್ನೂ ಸಾಹಸವನ್ನೂ ಅಪೂರ್ವ ರೀತಿಯಲ್ಲಿ ತಮ್ಮ ಬದುಕಿನುದ್ದಕ್ಕೂ ಕೈಗೊಂಡು ಗಾಯನ ರಸಯಾತ್ರೆಯಲ್ಲಿ ಸಹೃದಯರನ್ನು … Read more

ಬದುಕೇ ಶೂನ್ಯವೆಂಬ ನಿಜದನಿಯ ಎಲ್ಲರೆದೆಗೆ ಆವಾಹಿಸಿದ ‘ಕೊರೋನಾ’: ಸುಂದರಿ. ಡಿ.

ಕಾರ್ಮೋಡ ಆವರಿಸಿದ ಇಳಿಸಂಜೆಯ ಮಬ್ಬಾದ ವಾತಾವರಣ ಕುಳಿತು ನೋಡುತಿರಲು ಆ ವಾತಾವರಣವೇ ಇಡೀ ಜಗತ್ತಿಗೆ ಕವಿಯಿತೇ? ಎಂಬ ಪ್ರಶ್ನೆ ಆ ಸವಿಯಾದ ಇಳಿಸಂಜೆಯನ್ನು ಸವಿಗಾಣದಂತೆ ಮನದ ಮೂಲೆಯಲಿ ಮನೆಮಾಡಿದ ಆತಂಕದ ಪರಮಾವಧಿಯ ಸ್ಥಿತಿ ಅಂದಿನದು. ಆದರೂ ಒಮ್ಮೆ ದವಾಖಾನೆಯ ಕಿಟಕಿಯ ಸರಳುಗಳ ಭದ್ರ ಸೆರೆಯಿಂದ ಬಿಡಿಸಿಕೊಂಡು ಬಾಂದಳದ ಬಾನಾಡಿಯಂತೆ ವಿಹರಿಸುತ ಇಳಿಸಂಜೆಯ ಸವಿಯುವಾಸೆ. ಕಿಟಕಿಗಳಿಂದ ಹೊರ ನೋಟ ಮೇಲ್ನೋಟಕ್ಕೆ ಸಂತಸ ಕೊಟ್ಟರೂ, ಮನದ ಮೂಲೆಯಲಿ ಬಲು ಭಾರವ ಬಹಳ ಕಾಲ ಹೊತ್ತ ಅನುಭವ. ಕಳೆದ ರಾತ್ರಿಯ ಕಳೆಯುವುದೇ … Read more

ಗಜಲ್ ಹಾದಿಯಲ್ಲಿ: ‘ನೇರಿಶಾ’ಳ ಹೊಂಬೆಳಕು: ಯಲ್ಲಪ್ಪ ಎಮ್ ಮರ್ಚೇಡ್

ಪುಸ್ತಕ : ‘ನೇರಿಶಾ’ (ಗಜಲ್ ಸಂಕಲನ)ಗಜಲ್ ಕವಿ: ನಂರುಶಿ ಕಡೂರುಬೆಲೆ : 180/-ಸಂಪರ್ಕಿಸಿ: 8073935296, 8277889529 ಗಜಲ್ ಸಂಕ್ಷಿಪ್ತ ಪರಿಚಯ : ಗಜಲ್‌ ಎಂದರೆ ಪ್ರೀತಿ–ಪ್ರೇಮ ಕುರಿತಾಗಿಯೇ ಬರೆಯಲಾಗಿರುವ ಮತ್ತು ಬರೆಯಬೇಕಾಗಿರುವ ಕಾವ್ಯ ಪ್ರಕಾರ ಎನ್ನುವುದು ಸರಿಯಲ್ಲ. ಸಾಂಪ್ರದಾಯಿಕ ವಸ್ತು ಮತ್ತು ವ್ಯಾಪ್ತಿ ಮೀರಿ ಗಜಲ್‌ ತುಂಬಾ ದೂರ ಕ್ರಮಿಸಿದೆ. ಇದರ ಗೇಯತೆ, ಲಯ, ಕೋಮಲ ವಿನ್ಯಾಸದಲ್ಲಿ ವರ್ತಮಾನಕ್ಕೆ ‘ಮುಖಾಮುಖಿ’ ಆಗುವುದಿಲ್ಲ ಎನ್ನುವ ಮತ್ತೊಂದು ಆಕ್ಷೇಪವಿದೆ. ಆದರೆ ಗಜಲ್‌ಗಳಲ್ಲಿ ಬಂಡಾಯ ಮತ್ತು ಸಾಮಾಜಿಕತೆಯ ಧ್ವನಿಯೂ ಇದೆ. ನವ್ಯಕಾವ್ಯದ … Read more

ತುಂಬಿದ ಮಡಿಲು: ಭಾರ್ಗವಿ ಜೋಶಿ…..

ಅಂದು ನಸುಕಿನಲ್ಲಿ ನಾಲ್ಕನೇ ದಿನದ ನೀರು ಹಾಕಿಕೊಂಡು ಅಡುಗೆ ಮನೆ ಹತ್ತಿರ ಬರುತ್ತಿದ್ದ ಪದ್ಮಾವತಿಗೆ ಒಳಗಡೆ ಅತ್ತೆ ರಮಾಬಾಯಿ ಒಲೆ ಮುಂದೆ ಕುಳಿತು ಕಾಫಿ ಮಾಡುತ್ತ ಹೇಳುತ್ತಿದ್ದರು ಮಾತು ಜೋರು ಜೋರಾಗಿ ಕೇಳಿಸುತ್ತಿತ್ತು. ತಾಯಿ ಮಾತಿಗೆ ಎದುರು ಕುಳಿತ ಶ್ರೀನಿವಾಸ ಹೂಂ ಗುಟ್ಟುತ್ತಿದ್ದ. “ಅಲ್ಲೋ ಶ್ರೀನಿ, ನಿನ್ ಮದುವೆ ಆಗಿ ಐದು ವರ್ಷ ಆತು, ಇನ್ನು ಮಕ್ಕಳು, ಮರಿ, ಸುದ್ದಿನೇ ಇಲ್ಲೆಲ್ಲೋ? ನೋಡು ಇನ್ನು ತಡ ಮಾಡಬೇಡ. ನನ್ ಮಾತು ಕೇಳು. ಇನ್ನೊಂದು ಮದುವೆ ಮಾಡಿಕೊಂಡು ಬಿಡು … Read more

ಸಮರ್ಥ ಜೀವನ ನಿರ್ವಹಣೆಗೆ ಬೇಕು ಜೀವನ ಕೌಶಲ್ಯಗಳು: ತೇಜಾವತಿ ಹುಳಿಯಾರ್

ಜೀವನವೆನ್ನುವುದು ಮನುಷ್ಯನ ಜನನದಿಂದ ಮರಣದವರೆಗಿನ ನಿರಂತರ ಪಯಣ. ನಮ್ಮ ಜೀವನವನ್ನು ನಾವೇ ಸುಂದರಗೊಳಿಸಿಕೊಳ್ಳದ ಹೊರತು ಮತ್ಯಾರೂ ಸುಂದರಗೊಳಿಸಲು ಸಾಧ್ಯವಿಲ್ಲ. ಸಾಗುವ ಮಾರ್ಗದಲ್ಲಿ ಹಲವು ಏರು -ತಗ್ಗುಗಳನ್ನು, ತಿರುವುಗಳನ್ನು ಕಾಣುತ್ತೇವೆ. ಇಂದಿನ ಯಾಂತ್ರಿಕ ಯುಗದಲ್ಲಿ ಜೀವನ ನಿರ್ವಹಣೆಯು ಕೂಡ ಒಂದು ಕಲೆಯೇ ಹೌದು. ಬರುಬರುತ್ತಾ ಮಾನವರ ಭಾವನೆಗಳು ಕೂಡ ಸನ್ನಿವೇಶಕ್ಕೆ ತಕ್ಕಂತೆ ಕೃತಕವಾಗಿ ಜನ್ಮ ತಳೆಯುತ್ತಿರುವ ಈ ಸಂದರ್ಭದಲ್ಲಿ ಅವುಗಳ ತೀವ್ರತೆಯೂ ಕಡಿಮೆಯೇ. ಹಿಂದಿನಂತೆ ಗಟ್ಟಿ ಬೇರುಗಳು ಪಳಗುವ ಕೈಗಳು ತೀರಾ ವಿರಳ. ಜನರು ಕ್ಷಣಿಕ ಲಾಲಸೆಗಳಿಗೆ ಒಳಗಾಗಿ … Read more

ಮರೆಯಲಾಗದ ಮದುವೆ (ಭಾಗ 10): ನಾರಾಯಣ ಎಮ್ ಎಸ್

-೧೦- ಬಹುಶಃ ಬದುಕಿನಲ್ಲಿ ಮೊದಲಬಾರಿಗೆ ಅಯ್ಯರಿಗೆ ತನಗೆ ವಯಸ್ಸಾಗುತ್ತಿರುವ ಅರಿವಾಯಿತು. ಕೊಮ್ಮರಕುಡಿಯಿಂದ ಗೂಡೂರಿಗೆ ಕಾಲ್ನಡಿಗೆಯಲ್ಲಿ ಹೊರಟಿದ್ದ ಅಯ್ಯರ್ ಒಂದೆರಡು ಮೈಲು ನಡೆಯುವಷ್ಟರಲ್ಲೇ ಹೈರಾಣಾಗಿ ಬಿಟ್ಟಿದ್ದರು. ಮೊದಲೇ ಅಯ್ಯರಿಗೆ ಒರಟು ರಸ್ತೆಯಮೇಲೆ ಚಪ್ಪಲಿಯೂ ಇಲ್ಲದೆ ಬರಿಗಾಲಲ್ಲಿ ನಡೆದು ಅಭ್ಯಾಸವಿರಲಿಲ್ಲ, ಸಾಲದ್ದಕ್ಕೆ ಏರುಬಿಸಿಲು ಬೇರೆ. ಅರೆಕ್ಷಣಕ್ಕೆ ಸುಮ್ಮನೆ ಕೊಮ್ಮರಕುಡಿ ರೈಲ್ವೇ ಸ್ಟೇಷನ್ನಿಗೆ ಮರಳಿ ಸಂಜೆ ನಾಲ್ಕೂಕಾಲಿನವರೆಗೂ ಕಾದು ವಿಜಯವಾಡಕ್ಕೆ ಹೋಗುವ ರೈಲಿನಲ್ಲಿ ನೆಲ್ಲೂರಿಗೆ ಹೋದರೆ ಹೇಗೆಂಬ ಯೋಚನೆ ಬಂತು. ಮರುಕ್ಷಣವೇ ಟಿಕೆಟ್ಟಿಗೆ ಹಣವಿಲ್ಲದ್ದು ನೆನಪಾಗಿ ಖೇದವಾಯಿತು. ಹಿಂದೆಯೇ ಆಪತ್ಕಾಲದಲ್ಲಿ ಅನಿವಾರ್ಯವಾಗಿ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 43 & 44): ಎಂ. ಜವರಾಜ್

-೪೩-ಮದ್ಯಾನ ಮೂರಾಗಿಬಿಸುಲ್ಲಿದ್ರ ಚುರ್ ಅನ್ತನೆಳ್ಗೋದ್ರ ಸಳಿಡ್ಯತರ ಆಗದುಈ ದನುರ್ಮಾಸ್ವೆ ಹಿಂಗೆಲ್ವ ಈ ಅಯ್ನೋರುತ್ವಾಟುದ್ ಮನಲಿಬಿಸುಲ್ಗೊಸಿ ನೆಳ್ಗೊಸಿಎದ್ದು ಬಂದು ಕುಂತ್ಗಳದುಹಿಂಗೆ ಎಡ್ತಾಕರು ಸುಗ್ಗಿ ಈಗಅರ್ಧ ಒಕ್ಣ ಆಗಿಇನ್ನರ್ಧ ಇತ್ತುಕಾಯಮ್ಮಾಗಿ ಚೆಲ್ವಿ ಬರವ ಹಿಂಗಬಿಸುಲ್ಗು ನೆಳ್ಗು ಎಡ್ತಾಕಅಯ್ನೋರ್ ಕಾಲ್ದೆಸಲಿಚೆಲ್ವಿ ಕುಂತ್ಕಂಡು,‘ಅಯ್ನೋರಾ ಸವ್ವಿ ಹೆಂಗಿದಳುಅಂವ ಚೆಂಗುಲಿ ನೋಡಿನಾ..’‘ನೋಡು ಸುಮ್ಗ ಇದ್ಬುಡುಮಾತಾಡಿ ಮಾತಾಡಿಊರ್ಗ ಆರ ಯಾಕಾದೈ’‘ಆರ್ತಿಂಗ ಆಗದ ಮಗಿಗನಂಗ ಜೀವ ಬಡ್ಕತ್ತ ಅಯ್ನೋರಾ’‘ಜೀವ ಬಡ್ಕಂಡುದಾ..ಹೆತ್ಕರ್ಳು ಬಡ್ಕಳ್ದೆ ಇದ್ದಾ..’‘ಅಯ್ನೋರಾ ಒಗ್ಟಾಗಿ ಆಡ್ಬೇಡಿಕರ್ಳು ಕರ್ಳೇ..’‘ಆ ಕರ್ಳ ನಿ ಹೆಂಗ್ ನೋಡ್ಕಬೇಕು,ಕರ್ಳನ್ತ ಕರ್ಳು..ಅವ್ಳ್ ಬಗ್ಗ ಸೊಲ್ಲತ್ಬೇಡಅಂವ ಇಲ್ವ … Read more

ಜಾನ್ ಕೀಟ್ಸ್- ಪ್ರೇಮ ಮತ್ತು ಸಾವು: ನಾಗರೇಖಾ ಗಾಂವಕರ

“If I die, said I to myself, I have left no immortal work behind me, nothing to make my friends proud of my memory- but I have loved the principles of beauty in all things, and if I had time I would have made myself remembered” ಇದು ಕೀಟ್ಸ್ ಫ್ಯಾನಿಗೆ ಬರೆದ ಪತ್ರದ ಸಾಲುಗಳು. ಮನುಷ್ಯನ ಬದುಕು ಕ್ಷಣಿಕ. … Read more