ನೆಲಕಿರುಬನೆಂಬ ಜೇಡ: ಚರಣಕುಮಾರ್

ನಾವು ಚಿಕ್ಕವರಿರುವಾಗ ನಮ್ಮ ತುಂಟಾಟಗಳನ್ನು ನಿಭಾಯಿಸುವುದು ಮನೆಮಂದಿಗೆಲ್ಲಾ ಬಲು ಕಷ್ಟವಾಗಿರುತ್ತಿತ್ತು. ನಮ್ಮನ್ನು ನಿಯಂತ್ರಿಸಲು ಭೂತದ ಕಥೆ, ಹುಲಿ, ಚಿರತೆ ಮತ್ತು ಮಂಗಗಳ ಚಿತ್ರಗಳನ್ನು ತೋರಿಸಿಯೋ ಅಥವಾ ಅವುಗಳ ಹೆಸರುಗಳನ್ನು ಹೇಳಿಯೋ ಹೆದರಿಸುತ್ತಿದ್ದರು. ನನ್ನೂರಿನಲ್ಲಿ ಅಜ್ಜಿಯು, ನೀನೊಬ್ಬನೆ ಮನೆಯಿಂದ ಆಚೆ ಹೋದರೆ ನೆಲಗುಮ್ಮ ಬಂದು ನಿನ್ನನ್ನು ನುಂಗಿಬಿಡುತ್ತದೆ ಎಂದು ಒಮ್ಮೆಯಾದರೆ, ನೋಡು ಆಚೆ ಹೋದರೆ ಆ ಗೋಡೆಯ ಪಕ್ಕದಲ್ಲಿ ನೆಲಪಟ್ಟು ಅಡಗಿ ಕುಳಿತಿದೆ ನಿನ್ನನ್ನು ಕಚ್ಚಿ ತಿಂದುಬಿಡುತ್ತದೆ ಎಂದು ಮತ್ತೊಮ್ಮೆಯಾದರೆ, ನಾವು ಊಟಮಾಡದೆ ಹಠಮಾಡುತ್ತಿರುವಾಗ ಒಂದು ಕೊಳವೆಯಾಕಾರದಲ್ಲಿ ಪಿ.ವಿ.ಸಿ … Read more

ಇದೇ ‘ರಮ್ಯ’ ಚೈತ್ರ ಕಾಲ: ಬೀರೇಶ್ ಎನ್. ಗುಂಡೂರ್

ಇಲ್ಲಿ ಎಲ್ಲದಕ್ಕೂ ಉತ್ತರವಿಲ್ಲ. ಪ್ರಶ್ನೆಗಳೇ ಎಲ್ಲ. ನಿನ್ನ ಒಪ್ಪಿಸುವ ಭರದಲ್ಲಿ ನಾನೆಲ್ಲೋ ಸೋತು ನಿಸ್ಸಾಯಕನಾಗಿ ನಿಂತುಬಿಟ್ಟೆ ಅನಿಸುತ್ತದೆ. ಅದೇನೋ, ಬೇರೆಯವರಲ್ಲಿ ನಿನ್ನನ್ನು ಹುಡುಕಿಕೊಳ್ಳುವುದು..ನೀರಿಲ್ಲದೆ ಮೀನು ತನ್ನ ಅಸ್ತಿತ್ವ ಹುಡುಕಿಕೊಂಡಂತೆ ಅನಿಸುತ್ತದೆ. ಈ ಜಗತ್ತಿನ ಸೊಬಗಿಗೆ, ನಾಳೆಗಳ ಆಕಾಂಕ್ಷೆಗಳಿಗೆ, ಎಲ್ಲವನ್ನು ಮೀರಿ ಬದುಕಿಬಿಡುತ್ತೇನೆ, ಗೆದ್ದುಬಿಡುತ್ತೇನೆ ಎನ್ನುವ ಈ ಮಂದಿಯ ಅದಮ್ಯ ಚೇತನಕ್ಕೆ ಅದೊಂದೇ, ‘ಪ್ರೀತಿ’ಯೇ ಕಾರಣ ಅಂತ ಅಷ್ಟು ಬಾರಿ ಓದಿಕೊಂಡಿದ್ದೇನೆ. ಅದೊಂದು ತಪಸ್ಸು. ಆರಾಧನೆ. ಎಲ್ಲವನ್ನೂ ಸಾದ್ಯವಾಗಿಸುವ, ಎಲ್ಲವನ್ನೂ ಮರೆಸುವ, ಮೆರೆಸುವ, ಇನ್ನೆಲ್ಲವನ್ನೂ ತೆಕ್ಕೆಗೆ ಬಾಚಿಕೊಳ್ಳುವ, ಎಲ್ಲವನ್ನೂ … Read more

ದೇವಮಾನವ: ಡಾ. ದೋ. ನಾ. ಲೋಕೇಶ್

ಮಾಸಿದ ಬಟ್ಟೆ, ತಲೆಗೆ ಸುತ್ತಿದ ಕೊಳಕು ಟವೆಲ್, ಎಣ್ಣೆ, ನೀರು ಕಾಣದೆ ಧೂಳು ತುಂಬಿದ, ಕನಿಷ್ಟ ದಿನಕೊಮ್ಮೆ ಬಾಚಣಿಗೆಯೂ ಕಾಣದೆ ಗುಂಗುರು ಗುಂಗುರಾದ ಕೇಶರಾಶಿಯನ್ನು ಹೊಂದಿದ್ದ, ತನ್ನ ಶಿಳ್ಳೆಯೊಂದರಿಂದಲೇ ಹಯವೇಗದಲ್ಲಿ ಓಡುತ್ತಿದ್ದ ಬಸ್ಸನ್ನು ನಿಲ್ಲಿಸುತ್ತಿದ್ದ, ಹಾಗೂ ನಿಂತಿದ್ದ ಬಸ್ಸನ್ನು ಅದೇ ಶಿಳ್ಳೆಯಿಂದ ಚಲಿಸುವಂತೆ ಮಾಡುತಿದ್ದ ಎಲ್ಲರ ನಡುವೆ ಇದ್ದೂ ಇಲ್ಲದಂತಿದ್ದ ಅವನೊಬ್ಬನಿದ್ದ. ಅವನ ಹೆಸರೇ ಕ್ಲೀನರ್. ಹಿಂದೆ ನಮ್ಮ ಬಾಲ್ಯದಲ್ಲಿ ಹಳ್ಳಿಗಾಡಿನ ಸಾರಿಗೆ ಸಂಪರ್ಕ ಸಾಧನಗಳೆಂದರೆ ಖಾಸಗಿ ಬಸ್ಸುಗಳೇ. ಈಗಿನಂತೆ ಸಾರಿಗೆ ಸಂಸ್ಥೆಯ ಬಸ್ಸುಗಳಾಗಲಿ, ಜನಗಳನ್ನು ಸರಕು … Read more

ಆಕ್ರಮಣ (ಭಾಗ 2): ಜೆ.ವಿ. ಕಾರ್ಲೊ

ಇಲ್ಲಿಯವರೆಗೆ ತಾನೊಬ್ಬ ಮಹಾನ್ ಬುದ್ಧಿವಂತ ಎಂದು ತಿಳಿದುಕೊಂಡಿರುವ ಮನುಷ್ಯನಿಗೆ ಒಂದು ಯಕಃಶ್ಚಿತ್ ಇರುವೆ ಯೋಚಿಸಲು ಶಕ್ತವಾಗಿರುವುದಷ್ಟೇ ಅಲ್ಲದೆ ಯೋಜನೆಯನ್ನೂ ರೂಪಿಸಲೂ ಶಕ್ತವಾಗಿರುತ್ತದೆ ಎಂದರೆ ನಂಬುವುದು ಕಷ್ಟವೇ. ಲೆನಿಂಜೆನ್ನನ ಐರೋಪ್ಯ ಬುದ್ಧಿವಂತಿಕೆ ಮತ್ತು ಬ್ರೆಜಿಲಿನ್ನಿಯರರ ದೇಶಿ ಬುದ್ಧಿವಂತಿಕೆ ಈ ಇರುವೆಗಳ ಬುದ್ದಿವಂತಿಕೆಗೆ ಸರಿಸಾಟಿಯಾಗಬಲ್ಲುದೇ? ನಿಜ. ಲೆನಿಂಜೆನ್, ಇರುವೆಗಳು ಒಳಗೆ ಬರದಂತೆ ನೀರಿನ ಕಾಲುವೆಯನ್ನೇನೋ ನಿರ್ಮಿಸಿದ್ದ. ಲೆನಿಂಜೆನ್ನನ ಯೋಜನೆ ಏನೇ ಇರಲಿ.. ಅದನ್ನು ಹಾಳುಗೆಡುವುದೇ ಇರುವೆಗಳ ಪ್ರತಿಯೋಜನೆಯಾಗಿತ್ತು. ಸಂಜೆ ನಾಲ್ಕರಷ್ಟೊತ್ತಿಗೆ ಇರುವೆಗಳ ಆಕ್ರಮಣದ ಅಂತಿಮ ರೂಪುರೇಷೆಗಳು ತಯಾರಾದಂತೆ ಕಾಣಿಸಿತು. ಕಾಲುವೆಯೊಂದೇ … Read more

ಮರೆಯಲಾಗದ ಮದುವೆ (ಭಾಗ 7): ನಾರಾಯಣ ಎಮ್ ಎಸ್

ಇಲ್ಲಿಯವರೆಗೆ -೭- ’ಶ್ಯೀ…ಕುಯ್ಯ್… ಶ್ಯೀ…ಕುಯ್ಯ್… ಶ್ಯೀ…ಕುಯ್ಯ್… ಕುಯ್ಯ್…’ ಎಂದಾದ ಸದ್ದಿಗೆ ಅಯ್ಯರಿಗೆ ಎಚ್ಚರವಾಯ್ತು. ಕೂತಲ್ಲೇ ಕಣ್ತೆರೆದರು. ಎದುರಿಗೆ ಒಂದು ಬಡಕಲು ಕುನ್ನಿ ಕಂಡಿತು. ಅದೀಗ ಸ್ವಲ್ಪದೂರದಲ್ಲಿ ಬಿದ್ದಿದ್ದ ನಶ್ಯದಕವರಿನತ್ತ ದಿಟ್ಟಿಸಿ ತನ್ನ ಕೋರೆಹಲ್ಲು ತೋರುತ್ತಾ ಗುರ್ರ್ ಎಂದು ಗುರುಗುಟ್ಟತೊಡಗಿತು. ಪಾಪ ಪ್ರಾಣಿ ಏನೋ ತಿನ್ನಲು ಸಿಕ್ಕಿತೆಂದು ನಶ್ಯದಕವರಿಗೆ ಬಾಯಿಹಾಕಿರಬೇಕು. ನಶ್ಯದ ಫಾಟಿಗೆ ಸೀನುಬಂದು ನಾಯಿ ಗಾಬರಿಗೊಂಡಿತ್ತು. ಅಯ್ಯರಿಗೆ ತಾನೆಲ್ಲಿದ್ದೇನೆ ತಿಳಿಯಲಿಲ್ಲ. ಅಪರಾತ್ರಿಯ ನೀರವತೆಯಲ್ಲಿ ದೂರದಲ್ಲೆಲ್ಲೋ ಜೀರುಂಡೆಗಳು ಗುಯ್ಗುಟ್ಟುತ್ತಿದ್ದುವು. ನಿಧಾನಕ್ಕೆ ಸಿಕ್ಕಿಕೊಂಡಿದ್ದ ಪರಿಸ್ಥಿತಿ ಅರಿವಾಗಹತ್ತಿತು. ಕೈಯಲ್ಲಿ ಬಿಡುಗಾಸಿಲ್ಲ. ಮೈಮೇಲೆ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 39 & 40): ಎಂ. ಜವರಾಜ್

-೩೯- ಕುಲ ಸೇರಿತ್ತು ಈ ಅಯ್ನೋರು ಕೆಂಡವಾಗಿದ್ರು ಶಂಕ್ರಪ್ಪೋರು ಕೈಕಟ್ಟಿದ್ರು. ‘ಅಯ್ನೋರಾ, ನೀವಿಲ್ಗ ಬರಂಗೇ ಇರ್ನಿಲ್ಲ ನಾವು ಕುಲ ಸೇರ್ಬೇಕೇ ಇರ್ನಿಲ್ಲ ಆದ್ರ ಕುಲ ಕುಲನೆ ಈ ಕುಲ್ಕ ಬ್ಯಲ ಕೊಟ್ಟು ಬಂದಿದರಿ… ಇಸ್ಟು ಜಿನ್ವು ನೀವೆ ನ್ಯಯ ಮಾಡ್ತಿದ್ರಿ ಆದ್ರ ದೂರು ನಿಮ್ಮನ ಕಡಿಂದ ಅದ ಕುಲ್ದ ನಿಯ್ಮ ಎಲ್ರುಗು ಒಂದೆ ಅನ್ತ ಗೊತ್ತಿರದೆ ಅಲ್ವ. ನಾವು ನಿಮ್ಬುಟ್ಟು ಕುಲ ಮಾಡ್ಬೇಕಾಗಿ ಬಂದುದಾ. ಈ ಕಾರ್ಣ ನಿಮ್ಮ ಕರೆಸ್ಬೇಕಾಯ್ತು, ಕರಸ್ದು.. ನೀವು ಬಂದಿದರಿ ಅದ್ಕ ಈ … Read more

ಗೆಳೆಯನಲ್ಲ (ಭಾಗ 5): ವರದೇಂದ್ರ ಕೆ.

ಇಲ್ಲಿಯವರೆಗೆ… (9) ಪ್ರೀತಿಯ ತಂದೆ ಬಂದು “ಅಳಿಯಂದ್ರೆ, ಗೋಪಾಲಯ್ಯ ಎಂದರೆ ಯಾರು? ಒಂದೇ ಸಮನೆ ನಿಮ್ಮ ತಾಯಿಯವರು, ಗೋಪಾಲಯ್ಯ ಕೊಲೆ ಕೊಲೆ ಎನ್ನುತ್ತಿದ್ದಾರೆ. ಬೇಗ ಬನ್ನಿ” ಎನ್ನುತ್ತಾರೆ. ಗೋಪಾಲಯ್ಯ ಹೋ ನನ್ನ ತಂದೆಯವರನ್ನು ಕೊಲ್ಲಿಸಿದವನು ಎಂದು ಆಗಾಗ ಅಮ್ಮ ಹೇಳುತ್ತಿದ್ದರು. ಈಗ್ಯಾಕೆ ಅವನ ಹೆಸರು ಹೇಳುತ್ತಿದ್ದಾರೆ. ಎಂದು ಆಶ್ಚರ್ಯದಿಂದ ಒಳ ಓಡುತ್ತಾನೆ. ಕಮಲಮ್ಮಗೆಎಚ್ಚರವಾಗಿರುತ್ತೆ. ಅಮ್ಮಾ, ಏನಾಯಿತಮ್ಮ? ಎಂದಾಗ ಬೆಳಿಗ್ಗೆ ಗೋಪಾಲಯ್ಯನ ಹಾಗೆಯೇ ಇದ್ದವ ಯಾರೋ ನಮ್ಮ ಮನೆ ಮುಂದೆ ಬಂದಿದ್ದ, ನಿಮ್ಮಪ್ಪನನ್ನು ಕೊಲ್ಲಿಸಿದ್ದು ಸಾಕಾಗಲಿಲ್ಲವೇನೋ, ಮತ್ಯಾರನ್ನು ಕೊಲ್ಲಲು … Read more

ಜೀವನದ ಆಸೆ ಆಕಾಂಕ್ಷೆಗಳು ಹಾಗೂ…..?: ಶೀಲಾ ಎಸ್.‌ ಕೆ.

ಒಂದು ಲೋಟ ಕಾಫಿ ಕೊಡ್ತಿಯಾ ಪದ್ಮ ಎಂದು ಹಜಾರಕ್ಕೆ ಬಂದು ಕುಳಿತರು ನಂಜುಂಡಪ್ಪ. ಕೈಯಲ್ಲಿ ಕಾಫಿ ಲೋಟ ಹಿಡಿದು ಬಂದ ಪದ್ಮ ತುಂಬ ಸುಸ್ತಾದವರಂತೆ ಕಾಣುತಿದ್ದಿರಿ ಎಂದು ಕೇಳಿದರು, ಆಗ ತಾನೇ ಕೆಲಸ ಮುಗಿಸಿ ಬಂದಿದ್ದ ತನ್ನ ಗಂಡನನ್ನ. ಸ್ವಲ್ಪ ಕೆಲಸ ಜಾಸ್ತಿ ಈಗ ಮೊದಲಿನಂತೆ ಅಲ್ಲ ಎಲ್ಲ ಹೊಸ ಹೊಸ ಪ್ರಯೋಗಗಳು, ಹೊಸ ಬಗೆಯ ಕೋಚಿಂಗ್ ಅಂತಾರೆ, ಈಗ ಅದನ್ನು ಕಲಿಯಲು ಅಥವಾ ಅಳವಡಿಸಿಕೊಳ್ಳಲು ಸ್ವಲ್ಪ ಸಮಯ ಹಾಗು ಶ್ರಮವಾಗುತ್ತಿದೆ ಅಷ್ಟೆ ಎಂದರು. ಸರಿ ಬೇಗ … Read more

ಪ್ರಸಾದ್‌ ನಾಯ್ಕ್‌ ಅವರ ಸಫಾ ಪುಸ್ತಕದಿಂದ

ಪುಸ್ತಕವಾಗಿ ಹೊರಬಂದಿದ್ದ ನನ್ನ ಆತ್ಮಕಥನವನ್ನು ಚಲನಚಿತ್ರವಾಗಿ ತೆರೆಯ ಮೇಲೆ ಮೂಡಿಸಲು ಆಫರ್ ಗಳು ಬರುತ್ತಲೇ ಇದ್ದರೂ ನಾನು ಹಲವು ವರ್ಷಗಳ ಕಾಲ ನಿರಾಕರಿಸುತ್ತಲೇ ಬಂದಿದ್ದೆ. 1998 ರಲ್ಲಿ ಪುಸ್ತಕವು ಬಿಡುಗಡೆಯಾದಾಗಿನಿಂದ ಹಾಲಿವುಡ್ ನ ಹಲವು ಖ್ಯಾತ ನಿರ್ದೇಶಕರುಗಳು ನನ್ನ ಬಳಿ ಬಂದು ಈ ಕಥೆಯನ್ನು ಚಲನಚಿತ್ರವಾಗಿ ಪ್ರೇಕ್ಷಕರ ಮುಂದಿಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಈ ಸಂಬಂಧವಾಗಿ ಹಲವು ಕಾನ್ಸೆಪ್ಟುಗಳನ್ನೂ ನನ್ನ ಮುಂದಿಡಲಾಯಿತು. ಆದರೆ ಈ ಎಲ್ಲಾ ಕಾನ್ಸೆಪ್ಟುಗಳಲ್ಲಿ ಇದ್ದಿದ್ದು ಒಂದೇ ಥೀಮ್: ಆಫ್ರಿಕಾದ ಸಿಂಡ್ರೆಲ್ಲಾ; ಮರುಭೂಮಿಯಿಂದ ಫ್ಯಾಷನ್ ರ್ಯಾಂಪ್ … Read more

ಪ್ರಥಮ ಆಂಗ್ಲೋ ಇಂಡಿಯನ್ ಕವಯತ್ರಿ-ತೋರು ದತ್ತ: ನಾಗರೇಖಾ ಗಾಂವಕರ

ತೋರು ದತ್ತ ಆಂಗ್ಲ ಹಾಗೂ ಪ್ರೇಂಚ ಭಾಷೆಯಲ್ಲಿ ಬರೆದ ಭಾರತೀಯ ಕವಯತ್ರಿ. ಆಕೆಗೆ ಕಾವ್ಯ ರಚನೆ ಜನ್ಮತಃ ಸಿದ್ಧಿಸಿದ ಕಲೆ. ಹಾಗಾಗೆ ಅತೀ ಅಲ್ಪಾಯುಷಿಯಾದ ಬರೀ 21 ವರ್ಷಕ್ಕೆ ಇಹಲೋಕ ತ್ಯಜಿಸಿದ ತೋರು ದತ್ತ ಅವಿಸ್ಮರಣೀಯವೆನಿಸುವ ಕೃತಿಗಳನ್ನು ರಚಿಸಿ ಇಂಗ್ಲೀಷ ಸಾಹಿತ್ಯ ಲೋಕದಲ್ಲಿ ತನ್ನದೇ ಛಾಪು ಒತ್ತಿದ್ದಾಳೆ. ರಾಮ ಬಾಗನ್ ದತ್ತ ಕುಟುಂಬದಲ್ಲಿ 1856 ಮಾರ್ಚ 4ರಂದು ಜನಿಸಿದ ತೋರು ದತ್ತರ ತಂದೆ ಗೋವಿನ್ ಚಂದರ ದತ್ತ. 1862ರಲ್ಲಿ ಕುಟುಂಬ ಕ್ರೈಸ್ತಧರ್ಮಕ್ಕೆ ಮತಾಂತರಗೊಂಡಿತು. ತೋರುವಿನ ಸಹೋದರ ಅಬ್ಜು,ಅಕ್ಕ … Read more