ರಾಮಾಚಾರಿ ಹಾಡುವ ಲಾಲಿ ಹಾಡ ಕೇಳವಾ…: ಗುರುಪ್ರಸಾದ ಕುರ್ತಕೋಟಿ

ಅವತ್ತಿನ ಒಂದೊಂದು ಕ್ಷಣಗಳು ನನಗೆ ಒಂದು ಚಲನಚಿತ್ರದ ಫ್ರೆಮುಗಳಂತೆ ನೆನಪಿವೆ, ಅದೂ ಕಲರ್ ಸಿನಿಮಾ! ಹುಬ್ಬಳ್ಳಿಯ ಸುಧಾ ಚಿತ್ರಮಂದಿರದಲ್ಲಿ ರಾಮಾಚಾರಿ ಚಿತ್ರವನ್ನು ಅಮ್ಮನ ಜೊತೆ ಕುಳಿತುಕೊಂಡು ನೋಡಿದ ಮಧುರ ಕ್ಷಣಗಳವು. ಅದು ನನ್ನಮ್ಮನ ಜೊತೆ ನೋಡಿದ ಕೊನೆಯ ಸಿನೆಮಾ. ಹತ್ತು ಹಲವಾರು ಅರೋಗ್ಯ ಸಮಸ್ಯೆಗಳು ಅವಳನ್ನು ತುಂಬಾ ಬಸವಳಿಯುವಂತೆ ಮಾಡಿದ್ದವು. ದಿನ ದಿನಕ್ಕೂ ಅವಳಲ್ಲಿ ಜೀವಿಸುವ ಹಂಬಲ ಕಡಿಮೆಯಾಗುತ್ತಿದ್ದ ಸಮಯವದು. ಆದರೆ ತುಂಬಾ ಜೀವನೋತ್ಸಾಹಿಯಾಗಿದ್ದ ಅವಳು ಇಂತಹ ಸಂಧರ್ಬದಲ್ಲೂ ‘ರಾಮಾಚಾರಿ’ ಯನ್ನು ನೋಡಲು ಬಯಸಿದ್ದಳು. ಸಿನೆಮಾದ ಕೆಲವೊಂದು … Read more

ತೆರೆಯ ಮರೆಗೆ ಸರಿದ ಧೋನಿಯ ಮರೆಯುವ ಮುನ್ನ: ಸತೀಶ್ ಶೆಟ್ಟಿ ವಕ್ವಾಡಿ

ಪ್ರತಿಯೊಂದಕ್ಕೂ ಅಂತ್ಯವಿರಲೆ ಬೇಕು ಮತ್ತು ಆ ಅಂತ್ಯದ ಆರಂಭದ ಮೊದಲೆ ಅಂತ್ಯವಾದರೆ ಆ ಅಂತ್ಯಕ್ಕೊಂದು ಅಂತ್ಯವಿಲ್ಲದ ಇತಿಹಾಸವಿರುತ್ತದೆ. ಹೌದು ಸ್ವಲ್ಪ ಕಷ್ಟವಾದರೂ ಜೀರ್ಣಿಸಿಕೊಳ್ಳಲು ಸಾಧ್ಯವಾಗುವ ಸಾಲಿದು ಮತ್ತು ಕ್ರೀಡಾಪಟುಗಳಿಗೆ ಅನಂತ ಸಂತೃಪ್ತಿ ನೀಡುವ ಸಾಲಿದು. ಪ್ರತಿಯೊಬ್ಬ ಕ್ರೀಡಾಪಟುವಿಗೂ ತನ್ನ ವೃತ್ತಿ ಜೀವನದ ಅಂತ್ಯದ ಆರಂಭ ಜಗತ್ತಿಗೆ ತಿಳಿಯುವ ಮೊದಲೆ ಗೋಚರಿಸುತ್ತೆ . ಆದರೆ ಅದನ್ನು ಅವನು ಯಾವ ರೀತಿ ನಿರ್ವಹಿಸುತ್ತಾನೆ ಅನ್ನೊದರ ಮೇಲೆ ಅವನ ವೃತ್ತಿಯೋತ್ತರ ಜೀವನ ರೂಪಿತವಾಗುತ್ತೆ. ಎಷ್ಟೋ ಕ್ರೀಡಾಳುಗಳು ಜಗತ್ತು ನಿಬ್ಬೆರಗಾಗುವಂತೆ ತಮ್ಮ ವೃತ್ತಿ … Read more

ಬಂಜೆ ಪದಕ್ಕೆ ಪುಲ್ಲಿಂಗ ಏನು?: ಗಿರಿಜಾ ಜ್ಞಾನಸುಂದರ್

“ಚಪಾತಿ ಹೊತ್ತಿಹೋಗ್ತಿದೆ, ಸ್ವಲ್ಪ ನೋಡ್ಬಾರ್ದಾ?” ತನ್ನ ಅತ್ತೆಯ ಕೂಗಿನಿಂದ ವರ್ತಮಾನಕ್ಕೆ ಬಂದಳು ಪ್ರೀತಿ. “ಅಡುಗೆಮನೆಲ್ಲಿದೀಯ….. ಮಾಡೋ ಕೆಲ್ಸದ ಕಡೆ ಗಮನ ಇರ್ಲಿ” ಅಂದು ಯಾಕೋ ಅವಳ ಅತ್ತೆ ಕಮಲಾ ಸ್ವಲ್ಪ ಖಾರವಾಗಿಯೇ ಇದ್ದಳು. ಪ್ರೀತಿಗೆ ಏನು ಹೇಳಲು ತೋಚದೆ ಸುಮ್ಮನೆ ತಲೆ ಬಗ್ಗಿಸಿ ಚಪಾತಿ ಮಾಡುವ ಕಡೆ ಗಮನ ಮಾಡಿದ್ದಳು. ” ಏನ್ರಿ, ನೆನ್ನೆ ಸೀತಮ್ಮನ ಮನೆಗೆ ಕುಂಕುಮಕ್ಕೆ ಹೋಗಿದ್ದೆ. ಅವಳ ಮಗನ ಮಾಡುವೆ ಮಾಡಿ ಇನ್ನು ೩ ವರ್ಷ ಆಗಿಲ್ಲ…. ಆಗ್ಲೇ ಮನೆಲ್ಲಿ ಅವಳಿ ಜವಳಿ … Read more

ಆಕ್ರಮಣ (ಭಾಗ 1): ಜೆ.ವಿ. ಕಾರ್ಲೊ

ಮೂಲ: ಕಾರ್ಲ್ ಸ್ಟೀಫನ್ ಸನ್ ಅನುವಾದ: ಜೆ.ವಿ. ಕಾರ್ಲೊ “ಒಂದು ವೇಳೆ ಅವು ದಿಕ್ಕು ಬದಲಿಸಿದರೆ, ಬೇರೆ ಮಾತು.. ಆದರೆ ಹಾಗೆಂದು ಭಾವಿಸಲು ಯಾವುದೇ ಆಧಾರಗಳಿಲ್ಲ. ಅವು ನಿಮ್ಮ ತೋಟದ ಕಡೆಗೇ ಬರುತ್ತಿವೆ. ಹೆಚ್ಚೆಂದರೆ ಇನ್ನು ಎರಡು ದಿವಸ!” ಲೆನಿಂಜೆನ್ನನ ಮುಖದ ಮೇಲೆ ಆತಂಕದ ಗೆರೆಗಳು ಮೂಡಿದವು. ತನ್ನ ನಂದಿ ಹೋಗಿದ್ದ ದಪ್ಪನೆಯ ಚಿರೂಟನ್ನು, ಹಸಿದವನಂತೆ ಗಬಗಬನೆ ಸೇದತೊಡಗಿದ. ಅವನಿಗೆ ಸುದ್ಧಿ ಕೊಡಲು ಬಂದಿದ್ದ ಜಿಲ್ಲಾಧಿಕಾರಿಯ ಮುಖದ ಮೇಲೂ ಚಿಂತೆಯ ಗೆರೆಗಳು ಮೂಡಿದ್ದವಷ್ಟೇ ಅಲ್ಲದೆ ಅವನು ಯಥೇಚ್ಛವಾಗಿ … Read more

ಮರೆಯಲಾಗದ ಮದುವೆ (ಭಾಗ 6): ನಾರಾಯಣ ಎಮ್ ಎಸ್

ಇಲ್ಲಿಯವರೆಗೆ -೬- ರಾತ್ರಿ ಎರಡು ಘಂಟೆಗೆ ರೈಲು ನೆಲ್ಲೂರನ್ನು ತಲುಪಿತು. ಅದು ಎಲ್ಲರೂ ಹೆಣಗಳಂತೆ ನಿದ್ರಿಸುವ ಹೊತ್ತು. ಕಳ್ಳ ಕಾಕರು ಸಕ್ರಿಯರಾಗುವ ಹೊತ್ತು. ಸಾಮಾನ್ಯವಾಗಿ ಆ ಸಮಯದಲ್ಲಿ ರೈಲ್ವೇ ಪೋಲೀಸರು ಪ್ರಯಾಣಿಕರನ್ನು ಜಾಗೃತಗೊಳಿಸುವುದು ಪದ್ಧತಿ. ಅದರಂತೆ ನೆಲ್ಲೂರಿನಲ್ಲಿ ರೈಲುಹತ್ತಿದ ಇಬ್ಬರು ರೈಲ್ವೇ ಪೋಲೀಸರು “ನಿಂ ನಿಂ ಬೆಲೆಬಾಳೋ ವಸ್ತು ಜೋಪಾನಾ… ಕಿಟ್ಕಿ ಬಾಗ್ಲು ಹಾಕ್ಕಳೀ…ಒಡವೆ ವಸ್ತ್ರ ಜೋಪಾನಾ…” ಎಂದು ಪ್ರತಿಬೋಗಿಯಲ್ಲೂ ಕೂಗುತ್ತಾ ಬರುತ್ತಿದ್ದರು. ಅಯ್ಯರ್ ಬೋಗಿಯಲ್ಲಿಯೂ ಬಂದು ಕೂಗುತ್ತಿದ್ದಂತೆ ಅಯ್ಯರ್ ತಂಡಕ್ಕೆ ಸೇರದ ಅಲ್ಲಿದ್ದ ಪ್ರಯಾಣಿಕನೊಬ್ಬ “ಬೋಗಿ … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 37 & 38): ಎಂ. ಜವರಾಜ್

-೩೭- ಬಾಗ್ಲು ‘ಕಿರ್..’ ಅನ್ತು ನನ್ಗ ಮಂಪ್ರು ನೋಡ್ಬೇಕು ಅಂದ್ರು ಆಯ್ತಿಲ್ಲ ಹಂಗೆ ಕಣ್ಮುಚ್ದಿ ‘ಕಿರ್..’ ಅದೆ ಬಾಗ್ಲು ಸದ್ದು ಇನ್ನೊಂದ್ಸಲ. ಈ ಅಯ್ನೋರು ನಾಟ್ಕ ನೋಡ್ತ ಎದ್ಬಂದಾಗ ಬೆಳುಗ್ಗ ನಾಕತ್ರ ಆಗಿತ್ತು ಈಗ್ತಾನೆ ನಿದ್ದ ಹತ್ತಿತ್ತು ಅರಗಣ್ಣು ಬುಟ್ಟಿ ನೀಲವ್ವೋರು ಕಂಡ್ರು ಅದ್ಯಾಕಾ ಏನಾ ಇವತ್ತು ಸೀಗಕಡ್ಡಿ ಹಿಡಿದೆ ಇಟ್ಗ ಗುಡ್ಡಲಿ ತಿಕ ಊರಿ ಮಂಡಿ ತಬ್ಕಂಡು ಬಿಸುಲ್ಗ ಮುಖ ಕೊಟ್ಗಂಡು ಕುಂತ್ರು. ದೊಡ್ಡವ್ವ ಬಂದು ‘ಕುಸೈ ನೀಲ ಹೆಂಗಿದ್ದಯ್ ನೀ ಯೋಚ್ನ ಮಾಡ್ಬೇಡ ಮೈಯಿಳಿಸ್ಕಂಡದು … Read more