Facebook

Archive for 2020

ಪಂಜು ಕಾವ್ಯಧಾರೆ

ಬೆಳಕಾದವರಿಗೆ ನಮಸ್ಕಾರ… ಮೊದಲು ತಾಯಿಗೆ ಜನ್ಮ ಕೊಟ್ಟ ತಂದೆಗೆ ಎರಡೂ ಕಣ್ಣು ಕೊಟ್ಟ ದೇವರಿಗೆ ಭೂಮಿಯಿಂದ ಜನಿಸಿದಾಗ ಸುತ್ತಾ ಮುತ್ತಾ ಪಸರಿಸಿತ್ತು ಪ್ರೀತಿ ಪ್ರೇಮದ ಗಂಧ ಪ್ರೀರಿಗೊಂದು‌ ಅರ್ಥ ಕೊಟ್ಟು ರೂಪ ಕೊಟ್ಟ ತಾಯಿಗೆ ಸಹನೆಯೆಂಬ ಜೇನು ಸುರಿದು ಬರಗಾಲ-ಉಳಿಗಾಲ-ಅಳಿಗಾಲದಲ್ಲೂ ಗರಿಕೆಯ ರಸಕುಡಿಸಿ ಭರವಸೆಯ ಬೆಳಕಾದ ತಾಯಿಗೆ ಗರಿಕೆಯೊಳಗೆ ಜೀವವಾಗಿ ಉಸುರು ತುಂಬಿ ತಾಯಿ ಮಗುವ ತಬ್ಬಿದ ತಂದೆಗೆ ಯಾವ ಭೂಮಿ ಎಲ್ಲಿಯ ಜಲ ಆಕಾಶವೆಂಬುವುದು ನಿತ್ಯಜನ್ಯಲೋಕ ಅರಿವಿನ ಕಿರಣ ಕೊಟ್ಟ ಗುರುವಿಗೆ ಬೆಳಕಾದ ಮನದಿಂದ ನಮಸ್ಕಾರ […]

ಹುಲಿ ಬಂತು ಹುಲಿ: ನಂದಾದೀಪ, ಮಂಡ್ಯ

ಹುಲಿ ಬಂತು ಹುಲಿ ಎಂದು ಅಜ್ಜಿ ಕತೆ ಶುರು ಮಾಡಿ ಹುಲಿ ಜಿಂಕೆನಾ ತಿಂದು ಬಿಡ್ತು ಎಂದು ಕತೆ ಮುಗಿಸುವಾಗ ನಮ್ಮೆಲ್ಲರ ಮನಸಲ್ಲಿ ಹುಲಿ ಎಂದರೆ ಏನೋ ಒಂದು ಅವ್ಯಕ್ತ ಭಯ ಆವರಿಸುತ್ತದೆ..! ಭಯದ ಜೊತೆಗೆ ಹುಲಿಯನ್ನು ನೋಡಬೇಕೆಂಬ ಕುತೂಹಲವು ಹೆಚ್ಚಾಗುತ್ತದೆ..! ಮೃಗಾಲಯದಲ್ಲಿ ದೂರದಿಂದಲೇ ಹುಲಿಯನ್ನು ಬೆರಗುಗಣ್ಣಿಂದಲೇ ತುಂಬಿಕೊಂಡಿದ್ದು ಉಂಟು..! ಹುಲಿಯ ಮೇಲಿನ ಕುತೂಹಲ ಹೆಚ್ಚಿದಂತೆ ಅದರ ಬಗ್ಗೆ ತಿಳಿಯಲು ಒಂದಷ್ಟು ವಿಷಯಗಳನ್ನು ತಿಳಿಯಲು ಹೊರಟಾಗ ಅದು ಭಯ ಹುಟ್ಟಿಸುವ ಜೀವಿ ಅನ್ನೋದಕ್ಕಿಂತ ಸ್ವಾಭಿಮಾನಿ ಜೀವಿ ಎನ್ನುವುದು […]

ನಾವು… ನಮ್ಮದು: ಗುರುಪ್ರಸಾದ ಕುರ್ತಕೋಟಿ

(ಇಲ್ಲಿಯವರೆಗೆ) ನಮ್ಮ ಜೀವನದ ಗತಿಯನ್ನು, ನಮ್ಮ ಯೋಚನಾ ಲಹರಿಯನ್ನು ಬದಲಿಸಬಲ್ಲ ತಾಕತ್ತು ಇರುವುದು ಪುಸ್ತಕಗಳಲ್ಲಿ ಮಾತ್ರ ಎಂದು ಬಲವಾಗಿ ನಂಬಿರುವವನು ನಾನು. ನಮ್ಮ ಮನೆಯಲ್ಲಿದ್ದ ಪುಸ್ತಕಗಳು, ವಾರಕ್ಕೊಮ್ಮೆ ಬರುತ್ತಿದ್ದ ತರಂಗ, ಸುಧಾ ಗಳಂತಹ ಪತ್ರಿಕೆಗಳು ನಮ್ಮ ಓದಿನ ಹುಚ್ಚು ಹೆಚ್ಚಿಸಿದ್ದಲ್ಲದೆ ನಮ್ಮ ಯೋಚನಾ ಕ್ರಮವನ್ನೇ ಬದಲಿಸಿದ್ದವು. ಅವುಗಳು ಈಗಿನ ಗೂಗಲ್ ಗಿಂತ ಹೆಚ್ಚಿನ ಮಾಹಿತಿಗಳನ್ನು ಕೊಡುತ್ತಿದ್ದವು. ಈಗಿನ ಅಂತರ್ಜಾಲ ಒಂದು ಸಾಗರ. ಅದರಲ್ಲಿ ನಮಗೆ ಬೇಕಾದ ನಿಖರ ಮಾಹಿತಿ ತೊಗೊಳ್ಳೋದು ಅಂದರೆ ಒಳ್ಳೆಯ ಬಲೆಯಲ್ಲಿ ಮೀನು ಹಿಡಿದಂತೆ. […]

ಮರೆಯಲಾಗದ ಮದುವೆ (ಭಾಗ 4): ನಾರಾಯಣ ಎಮ್ ಎಸ್

ಇಲ್ಲಿಯವರೆಗೆ ಅಂದು ವೈಕುಂಠಸಮಾರಾಧನೆ. ಹನ್ನೆರಡು ದಿನದ ಅಶುಭ ಕಳೆದು ನಡೆಯುತ್ತಿದ್ದ ಶುಭಕಾರ್ಯವದು. ನೆಂಟರಷ್ಟರಿಂದ ತುಂಬಿದ ಮನೆ ಚಟುವಟಿಕೆಗಳ ಗಿಜಿಗಿಜಿಯಿಂದ ತುಂಬಿತ್ತು. ಅಂದಿನ ಸಮಾರಂಭ ಮುಗಿಸಿ ಅಯ್ಯರ್ ಮರುದಿನ ತಿರುವಾರೂರಿಗೆ ಹೊರಡುವವರಿದ್ದರು. ಬೆಳಗಿನ ಕಾಫಿ ಕುಡಿದು ಕೊಳಕ್ಕೆ ಹೋಗಿ ಸ್ನಾನ ಮುಗಿಸಿದ ಅಯ್ಯರ್ ಆಗಷ್ಟೆ ಮನೆಗೆ ಹಿಂತಿರುಗಿ ಹಜಾರದಲ್ಲಿ ಕುಳಿತಿದ್ದ ಇನ್ನೂ ಐದಾರು ಜನರೊಂದಿಗೆ ಕುಳಿತು ತಿಂಡಿತಿನ್ನುತ್ತಿದ್ದರು. ಅಷ್ಟರಲ್ಲಿ ಸಾಲಾಗಿ ಕುಳಿತಿದ್ದವರಿಗೆಲ್ಲಾ ಚಟ್ನಿ ಬಡಿಸಿಕೊಂಡು ಬಂದ ಮುಕ್ತಾಳನ್ನು ಕಂಡ ಅಯ್ಯರಿನ ಸ್ಥಿಮಿತ ತಪ್ಪಿದಂತಾಯಿತು. ಚಿಕ್ಕಚಿಕ್ಕ ವಿಷಯಗಳು ಮಾಡುವ ದೊಡ್ಡ […]

ಸೌಂದರ್ಯವೇ ಸತ್ಯ, ಸತ್ಯವೇ ಸೌಂದರ್ಯ – ಅಮರ ಕವಿ ಜಾನ್ ಕೀಟ್ಸ್: ನಾಗರೇಖಾ ಗಾಂವಕರ

ಅತಿ ಚಿಕ್ಕ ವಯಸ್ಸಿನಲ್ಲಿ, ಅತೀ ಕಡಿಮೆ ಅವಧಿಯಲ್ಲಿ ಅಪಾರ ಅದ್ವಿತೀಯ ಪ್ರಗಾಥ ಸಾಹಿತ್ಯವನ್ನು ರಚಿಸಿ ಜಾಗತಿಕ ಸಾರಸ್ವತ ಲೋಕದ ಧ್ರುವತಾರೆಯಂತೆ ಬೆಳಗಿದವನೆಂದರೆ ಜಾನ್ ಕೀಟ್ಸ್. ಅಕ್ಷರ ಜಗತ್ತಿನಲ್ಲಿ ಚಿಮ್ಮಿದ ಬೆಳಕಿನ ಸೂಡಿ ಕೀಟ್ಸ್. ಆತನ ಜೀವನದುದ್ದಕ್ಕೂ ಸಾವು ಸುಳಿಯುತ್ತಲೇ ಇತ್ತು. ಹೆತ್ತವರ, ಒಡಹುಟ್ಟಿದವರ, ಸಾವು ಆತನ ವಿಚಲಿತಗೊಳಿಸುತ್ತಲೇ ಇದ್ದರೂ ಸಾವಿನಲ್ಲೂ ಸೌಂದರ್ಯ ಕಂಡ ಕವಿ. ತನ್ನ ಗೋರಿ ವಾಕ್ಯವನ್ನು ತಾನೇ ಬರೆದಿಟ್ಟ ಧೀರ. ವಿಲಿಯಂ ವಡ್ರ್ಸವರ್ಥ, ಎಸ್ ಟಿ. ಕೋಲ್ರಿಡ್ಜ್ ಇಂಗ್ಲೆಂಡಿನಲ್ಲಿ ರೋಮ್ಯಾಂಟಿಕ್ ಯುಗದ ಪ್ರವರ್ತಕರಾಗಿ “ಲಿರಿಕಲ್ […]

ಗೆಳೆಯನಲ್ಲ (ಭಾಗ 4): ವರದೇಂದ್ರ ಕೆ.

ಇಲ್ಲಿಯವರೆಗೆ… (7) ಇತ್ತ ಕಮಲಮ್ಮ ಸಂಪತ್ಗೆ ಫೋನ್ ಮಾಡಿ ಪ್ರೀತಿ ತವರು ಮನೆಗೆ ಹೋದ ವಿಷಯ ತಿಳಿಸಿ, ಮನೆಗೆ ಬೇಗ ಬರಲು ಹೇಳುತ್ತಾಳೆ. ಸಂಜೆ ಆಯಿತು ಮಗ ಮನೆಗೆ ಬರುವ ಸಮಯ ಬದಲಾಗಿದೆ, ಫೋನ್ ಮಾಡಿದರೆ ಸ್ವೀಕರಿಸುವುದಿಲ್ಲ. ಸ್ವೀಕರಿಸಿದರೂ ಸರಿಯಾಗಿ ಮಾತನಾಡುವುದಿಲ್ಲ. ಯಾವಾಗಲೂ ಏನೋ ಚಿಂತೆಯಲ್ಲಿರುವಂತೆ ಕಾಣಿಸುತ್ತಾನೆ. ಮದುವೆಯಾಗಿ ಹೊಸತರಲ್ಲಿ ಹೇಗಿರಬೇಕು? ಸಂಪತ್ನ ವಿಚಾರಿಸಬೇಕು ಮನೆಗೆ ಬಂದ ಕೂಡಲೆ ಎಂದು ಕಮಲಮ್ಮ ಕಾದು ಕೂಡುತ್ತಾರೆ. ತಡರಾತ್ರಿ ಮನೆಗೆ ಬಂದ ಸಂಪತ್ ಅನ್ನು ತಾಯಿ ವಿಚಾರಿಸುತ್ತಾಳೆ, “ಸಂಪತ್, ಪ್ರೀತಿ […]

ಜೀವನದ ಗತಿಯನ್ನು ಬದಲಿಸುವ ‘ಗುರು’: ತೇಜಾವತಿ ಎಚ್.ಡಿ

ಮಾತೃ ದೇವೋಭವ ಪಿತೃ ದೇವೋಭವ ಆಚಾರ್ಯ ದೇವೋಭವ ಅತಿಥಿ ದೇವೋಭವ ಬ್ರಹ್ಮನಾಗಿದ್ದಾನೆ, ಅವನೇ ವಿಷ್ಣುವೂ ಕೂಡ. ಅವನೇ ಸಾಕ್ಷಾತ್ ಪರಬ್ರಹ್ಮ ಆದ್ಯಂತಿಕ ಸತ್ಯ. ಅಂತಹ ಗುರುವಿಗೆ ನಮಸ್ಕಾರ. ಗುರುವಿನಲ್ಲೇ ಪರಬ್ರಹ್ಮನನ್ನು ಕಾಣುವ ಮೂಲಕ ಅವನನ್ನು ಪೂಜ್ಯ ಭಾವನೆಯಿಂದ ನೋಡುತ್ತೇವೆ. ಇಂದಿಗೂ ಕೂಡ ಯಾವುದೇ ಕಾರ್ಯವನ್ನು ಮಾಡುವ ಸಂದರ್ಭದಲ್ಲಿ ನಾವು ಈ ಶ್ಲೋಕವನ್ನು ಪಠಿಸುತ್ತೇವೆ. ಸಮಾಜ ಇಷ್ಟೊಂದು ಗೌರವವನ್ನು ಶಿಕ್ಷಕರಿಗೆ ನೀಡುವಾಗ ಅವರೂ ಕೂಡ ತಮ್ಮ ಜವಾಬ್ದಾರಿಯನ್ನು ನಿಭಾಯಿಸುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಶಿಕ್ಷಕ ಸಕಾರಾತ್ಮಕತೆಯ ಕಿರಣವಾಗಿದ್ದು ಎಂತಹ […]

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 35 & 36): ಎಂ. ಜವರಾಜ್

-೩೫- ‘ದೊಡ್ಡವ್ವವ್..’ ಎದುರು ಮನ ಪಡ್ಸಾಲ್ಲಿ ಕುಂತು ಎಲ ಅಡ್ಕ ಹಾಕತ ಅಯ್ನೋರ್ ದನಿ. ಆ ದನಿಗ, ‘ಕುಸೈ ಒಳ್ಳಿ ಕೆಲ್ಸ ಮಾಡ್ದ ಬುಡು ಊರು ಸುಮ್ನಿದ್ದಾ.. ಈ ವಯ್ಸಲಿ ಇದ್ಯಾನ ಹಿಂಗಾ.. ನೀಲ ಒಳ್ಳೋಳೆ ಆದ್ರ ಹಣಬರ ಇರ್ಬೇಕಲ್ಲ ಬುಡು ಈಗೇನ ಶಂಕ್ರಿಲ್ವ.. ಸಾಕು ಬುಡು ಹೆಂಗು ಅವ್ನುಗು ಗಂಡಾಗದ ವಂಶ ಹೆಸರೇಳಕಾದ್ರು ಆಯ್ತಲ್ಲ ಬುಡು’ ‘ದೊಡ್ಡವ್ವವ್ ಸುಮ್ನಿದ್ದಯ.. ಕುಲ್ಗೆಟ್ಟವೆಲ್ಲ ನನ್ ವಂಶನಾ..’ ‘ಮೊಗ ಅವ ಕುಲ್ಗೆಟ್ಟ ಹೆಣ್ಣೇ ಇರಬೋದು ನಿನ್ ರಕ್ತ ಕುಲ್ಗೆಟ್ಟೊಗಿದ್ದಾ.. ಶಂಕ್ರನ್ […]

ಲಾಕ್ಡೌನ್ – ವರ್ಕ್ ಫ಼್ರಮ್ ಹೋಮ್ ಮತ್ತು ಫ಼ಾರ್ ಹೋಮ್!!: ಸಹನಾ ಪ್ರಸಾದ್

ಅಬ್ಬಾ, ೪ ತಿಂಗಳು!! ಇಷ್ಟು ಸಮಯ ಒಟ್ಟಿಗೆ ಮನೆಯಲ್ಲಿ ಇದ್ದದ್ದು ನೆನಪಿಲ್ಲ. ಮೊದಲ ಸಲ ಮಾರ್ಚ್ ೨೪ರಿಂದ ಎಲ್ಲಾ ಲಾಕ್ ಎಂದು ಘೋಷಿಸಿದಾಗ ಮೊದಲು ಅನಿಸಿದ್ದು ” ಅಯ್ಯೊ, ಕೆಲಸದವಳು ಇಲ್ಲವಲ್ಲ, ಹೇಗೆ ನಿಭಾಯಿಸುವುದು” ಎಂದು. ಎಲ್ಲರೂ ಕೋವಿಡ್, ಕೋವಿಡ್ ಎಂದು ಕೂಗಾಡುತ್ತಿದ್ದರೂ ಅಷ್ಟೇನು ಭಯವಿರಲಿಲ್ಲ. ಶಾಲಾ, ಕಾಲೇಜು ರಜೆ ಎಂದಾಗ ಮನಸ್ಸು ಸ್ವಲ್ಪ ಸೀರಿಯಸ್ ಆಗಿದ್ದು ನಿಜ. ಬೆಳಗ್ಗೆ ಎದ್ದ ತಕ್ಷಣ ಶುರುವಾದ ಕೆಲಸಗಳು ಮುಗಿಯುತ್ತಲೇ ಇಲ್ಲ, ಪಾತ್ರೆಗಳು ಸಿಂಕ್ ಅಲ್ಲಿ ಕರಗುತ್ತಲೇ ಇಲ್ಲ! ಮನೆಯ […]