Facebook

Archive for 2020

ಎಲ್ಲರೂ ಮಲಗಿದ್ದಾಗ…: ಗುರುಪ್ರಸಾದ ಕುರ್ತಕೋಟಿ

ಚಿಕ್ಕಂದಿನಲ್ಲಿ ನನಗೆ ನಿದ್ದೆಯಲ್ಲಿ ನಡೆದಾಡುವ (Sleep walking) ಖಾಯಿಲೆ ಇತ್ತು. ಹಾಗೆ ರಾತ್ರಿ ಅಡ್ಡಾಡಿದ್ದು ಬೆಳಿಗ್ಗೆ ಎದ್ದಾಗ ನನಗೆ ನೆನಪೇ ಇರುತ್ತಿರಲಿಲ್ಲ. ಆ ನನ್ನ ಖಾಯಿಲೆಯಿಂದ ತುಂಬಾ ಕಷ್ಟ ಅನುಭವಿಸಿದವಳು ನನ್ನಮ್ಮ. ಮಗ ಹೀಗೆ ಒಂದು ರಾತ್ರಿ ಎದ್ದು ಹೊರಗೆ ಹೋಗಿಬಿಟ್ಟರೆ ಎನು ಗತಿ ಅಂತ ಮನೆಯ ತಲಬಾಗಿಲಿಗೆ ಹಾಗು ಹಿತ್ತಲ ಬಾಗಿಲಿಗೆ ಒಳಗಿನಿಂದ ಕೀಲಿ ಹಾಕಿ ಮಲಗುತ್ತಿದ್ದಳು. ನಾನು ಎದ್ದು ಅಡ್ಡಾಡುತ್ತಿದ್ದೆನೆ ವಿನಃ ಕೀಲಿ ತೆಗೆದು ಹೊರಗೆ ಹೋಗುತ್ತಿರಲಿಲ್ಲ, ಅದೊಂದು ವಿನಾಯತಿ ನೀಡಿತ್ತು ಆ ಖಾಯಿಲೆ! […]

ಪಂಜು ಕಾವ್ಯಧಾರೆ

ಖಾಲಿಯಿದೆ… ಈಗಲೂ ನನ್ನೀ ಹೃದಯ ನೆತ್ತರು ಚಿಮ್ಮುತಿದೆ ನಿತ್ಯವೂ ಮಿಡಿಯುತಿದೆ ಬದುಕಿಗಾಗಿ ತುಡಿಯುತಿದೆ ಹೃದಯವಿನ್ನೂ ಖಾಲಿಯಿದೆ ದಣಿವಿಲ್ಲ ಗುರಿಯಿಲ್ಲ ಕನಸೇಕೋ ಕಾಡುತಿಲ್ಲ ಯಾವುದೋ ನೋವಿನಲ್ಲಿ ಹೇಳಲಾರೆ ದನಿಯಿಲ್ಲ ಯಾತರದ್ದೋ ಗೊಣಗಾಟ ಯಾತಕ್ಕಾಗಿಯೋ ಹೆಣಗಾಟ ಹಾರಿ ಹೋಗದು ಜೀವ ತೂರಾಡುತಿಹುದು ಭಾವ ಬೀಸುತಿದೆ ಬಿರುಗಾಳಿ ಹೃದಯವಂತೂ ಖಾಲಿಯಿದೆ ಏನ ಬಯಸಿ ಸೋಸುತಿಹುದು ಜೀವ ಹಿಡಿಯಲಾಗದೇನೋ ಮನದ ನೋವಾ ದಕ್ಕುವುದೇ ಎಂದಿಗಾದರೂ ಪ್ರೇಮಾಮೃತಪಾನ ಹೃದಯವು ಸದಾ ಖಾಲಿಯೇ ಖಾಲಿ ಕಾವಲಿಯ ಕಾವಲಿಗೆ ನಿಂತು ಮಾಡುವುದೇನು ಹೃದಯವೀಗಲೂ ಖಾಲಿ ಖಾಲಿ –ಚಿನ್ನು […]

ಮರೆಯಲಾಗದ ಮದುವೆ (ಭಾಗ 3): ನಾರಾಯಣ ಎಂ ಎಸ್

   ಇಲ್ಲಿಯವರೆಗೆ -೩- ಇತ್ತೀಚೆಗೆ ಸೀತಮ್ಮನ ತಂದೆಯವರ ಆರೋಗ್ಯ ಕ್ಷೀಣಿಸಿ ಹಾಸಿಗೆ ಹಿಡಿದುಬಿಟ್ಟಿದ್ದರು. ಮಧುರಮ್ಮನವರಲ್ಲೂ ಮುಂಚಿನ ಕಸುವು ಉಳಿದಿರಲಿಲ್ಲ. ಹಾಗಾಗಿ ಈ ಬಾರಿ ತನ್ನ ಏಳನೇ ಹೆರಿಗೆಗೆ ಸೀತಮ್ಮ ಕಾವಶ್ಯೇರಿಗೆ ಹೋಗಲಿಲ್ಲ. ಆದರೆ ಬಸುರಿ ಹೆಂಗಸಿಗೆ ತಗುಲಿದ ಟಯ್ಫಾಡ್ ಖಾಯಿಲೆ ಸೀತಮ್ಮಳನ್ನು ಹಣಿದುಬಿಟ್ಟಿತು. ಸಾಲದ್ದಕ್ಕೆ ಏಳನೇ ತಿಂಗಳಿಗೆ ಗರ್ಭಪಾತವೂ ಆಗಿಹೋಯಿತು. ಸೀತಮ್ಮಳ ಪುಣ್ಯ! ಅವಳ ಆಯಸ್ಸು ಗಟ್ಟಿಯಿದ್ದಿರಬೇಕು. ತಿರವಾರೂರಿನಲ್ಲಿ ಉಳಿಯದೆ ವಾಡಿಕೆಯಂತೆ ಕಾವಶ್ಯೇರಿಗೆ ಹೋಗಿಬಿಟ್ಟಿದ್ದರೆ ಏನೇನೂ ವೈದ್ಯಕೀಯ ಸೌಕರ್ಯಗಳಿಲ್ಲದ ಆ ಕುಗ್ರಾಮದಲ್ಲಿ ಅವಳು ಬದುಕುಳಿಯುತ್ತಿದ್ದದು ಅನಮಾನವೇ. ಒಂದೆರಡು […]

ಕೊಡೆಯ ಕಡ್ಡಿಗಳು ಮತ್ತು ಬೆಚ್ಚನೆಯ ನೆನಪು: ಸಾವಿತ್ರಿ ಹಟ್ಟಿ

ಒಂಬತ್ತು ವರ್ಷದ ಹಿಂದಿನ ನೆನಪು. ಕೊಡೆ ಹಿಡ್ಕೊಂಡು ಅವಸರದಾಗ ಹೊಂಟಾಕಿಗಿ “ಹಿ ಹೀ ಹೀ ಸಾವಿತ್ರಿ ಊಟ ಆಯ್ತಾ” ಅಂತ ಆ ಹಾಲಿನ ಚಿಗವ್ವ ಕೇಳಿದಾಗ ಅಕಿಗೆ ಉತ್ತರ ಹೇಳೂಕ್ಕಿಂತ ನನ್ನೊಳಗ ಎದ್ದ ಪ್ರಶ್ನೆಗೆ ಉತ್ರ ಹೊಳೀಲಿಲ್ಲ. ‘ಊಟಾಯ್ತಾ ಸಾವಿತ್ರಿ’ ಅಂತಷ್ಟೇ ಕೇಳಿದ್ರ ನಡೀತಿರಲಿಲ್ಲನು! ಮತ್ಯಾಕ ಈಕಿ ಅಷ್ಟೂ ಬೆಳ್ಳನ್ನ ಹಲ್ಲು ತಗದು ಹಿಹೀಹೀ ಅಂತ ನಕ್ಳು ಅಂತ ತಲಿ ಕೆರಕೊಂಡು ಆಕಿಗಿ ಉತ್ತರಿಸೂವಷ್ಟರಾಗ ಮತ್ತೆ ಕೇಳೀದ್ಲು, “ ಅಲ್ಲಾ ಸಾವಿತ್ರಿ ತುಂಬಾ ಬೆಳ್ಳಗಿದ್ದೀಯಲ್ಲಾ, ಕಪ್ಪಾಗ್ತೀನಿ ಅಂತ […]

ಜಾನ್ ಡನ್ – ಎರಡು ಅನುಭಾವಿಕ ಕವಿತೆಗಳು: ನಾಗರೇಖಾ ಗಾಂವಕರ

ಹದಿನಾರನೇ ಶತಮಾನ ಜ್ಞಾನ ಪುನರುಜ್ಜೀವನದ ಮೇರು ಕಾಲ. ಅದರ ಉತ್ತರಾರ್ಧದಲ್ಲಿ ಜನಿಸಿದ ಡನ್ ಜಗತ್ತಿನ ಶ್ರೇಷ್ಟ ಸಾಹಿತಿಗಳಾದ ಶೇಕ್ಸಪಿಯರ್, ಸ್ಪೆನ್ಸರ್,ಮಿಲ್ಟನ್ , ಡ್ರೈಡನ್ ಮುಂತಾದ ಪ್ರಮುಖ ಕವಿಗಳ ಸಾಲಿನಲ್ಲಿ ಕಾಣಿಸಿಕೊಂಡರೂ ಆ ರಿನೇಸ್ಸಾನ್ಸ್‍ನ ಪ್ರಭಾವಕ್ಕೆ ಸಿಲುಕಿಯೂ ಸಿಲುಕದಂತೆ ಹೊಸ ಕಾವ್ಯ ಜಗತ್ತನ್ನು ಸೃಷ್ಟಿಸಿದ. ವಿದ್ವತ್ತಿನ ಪ್ರಭಾವಕ್ಕಿಂತಲೂ ಅನುಭವದ ನೈಜ ಸಂವೇದನೆಗಳು ಆತನ ಕಾವ್ಯವನ್ನು ಪ್ರಚಲಿತಗೊಳಿಸಿದವು. ಹೊಸತನಕ್ಕೆ ತೆರೆದುಕೊಂಡಿದ್ದ ಕಾವ್ಯ ಲಹರಿ, ಪದವಿನ್ಯಾಸಗಳು, ಲಯ ಎಲ್ಲವೂ ಡನ್‍ನ ಕಾವ್ಯವನ್ನು ಅಮರಗೊಳಿಸಿದವು. ಡನ್ ಮೆಟಾಫಿಸಿಕಲ್ ಕಾವ್ಯ ಪರಂಪರೆಯ ಪ್ರಮುಖ ಕವಿ. […]

ಕೊರೋನಾ ವಾರಿಯರ್ಸಗೊಂದು ನಮನ : ತೇಜಾವತಿ ಹೆಚ್. ಡಿ.(ಖುಷಿ)

ಮಾನವೀಯತೆಯ ದೀಪದಲ್ಲಿ ಕರುಣೆಯ ಬತ್ತಿ ಹಚ್ಚಿ ಜ್ಯೋತಿಯಾದೆ ನೀನುಅಂತಃಕರಣದ ಮಿಡಿತದಿಂದ ಆತ್ಮವಿಶ್ವಾಸದ ಕಿರಣಬೀರಿ ಬೆಳಕಾದೆ ನೀನು ಶುಭ್ರ ಶ್ವೇತ ವಸನವನ್ನುಟ್ಟು ಸ್ವಚ್ಛ ಮನವ ತೊಟ್ಟು ರೋಗಿಗಳ ಆರೈಕೆ ಮಾಡಿ ಮರಣದ ಕದ ತಟ್ಟಿದವರಿಗೆ ಹೆಗಲಾಗಿ ಸಾಂತ್ವನ ನೀಡುವ ದಿಟ್ಟೆಯಾದೆ ನೀನು ಅಬ್ಬಬ್ಬಾ…… ಮಹಿಳೆಯರ ಒಳಹೊರಗಿನ ಮಾನಸಿಕ ಸ್ಥಿತಿಗತಿಗಳು ಅವರಿಗಷ್ಟೇ ಗೊತ್ತು. ತಮ್ಮ ಹಾದಿಯಲ್ಲಿ ಬರುವ ಎಲ್ಲಾ ಅಡೆತಡೆಗಳನ್ನೂ ಮೀರಿ ದಿಟ್ಟ ಹೆಜ್ಜೆಯನ್ನಿಟ್ಟು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮಹಿಳಾಮಣಿಗಳು ಅವರಿಗೆ ಅವರೇ ಸಾಟಿ ಎನ್ನುವುದನ್ನು ತಾವು […]

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 33 & 34): ಎಂ. ಜವರಾಜ್

-೩೩- ಕರಿ ನಾಯಿ ಕಿಂವ್ಞ್ ಕಿಂವ್ಞ್ ಅನ್ತ ಬಾಲ ಅಳ್ಳಾಡುಸ್ತ ಬಂದು ಶಂಕ್ರಪ್ಪೋರ ಕಾಲ್ನೆಕ್ಕಕ ಶುರು ಮಾಡ್ತು ಈ ಶಂಕ್ರಪ್ಪೋರು ಬಂದು ಕುಂತು ಎಸ್ಟೊತ್ತಾಯ್ತು ಈ ಅಯ್ನೋರ್ ನಿದ್ದ ಮುಗಿನೇ ಇಲ್ಲ.. ತ್ವಾಟದ ಬೇಲಿ ಇಣುಕುದ್ರ ಊರೊಳಗ ತಮ್ಟ ಸದ್ದು ಜೋರಾಯ್ತು ಜೊತ್ಗ ಬೆಳಕೂ ಹರಿತು. ಈ ಅಯ್ನೋರು ಈಗ ಈಚ ಬಂದು ಮೈ ಮುರಿತಾ… ಆಕುಳುಸ್ತಾ ಕಣ್ಣಾಡುಸ್ತ ಕಣ್ಣಾಡುಸ್ತ ಕಲ್ಲಾಸಿನ ಮ್ಯಾಲ ಶಂಕ್ರಪ್ಪೋರು ಕುಂತಿರದ ನೋಡುದ್ರು ಈ ಅಯ್ನೋರು, ‘ಹ್ಞು ಈಗ ಗ್ಯಾನ ಬತ್ತಾ’ ‘ನಾನೇನು […]

ಗೆಳೆಯನಲ್ಲ (ಭಾಗ 3): ವರದೇಂದ್ರ ಕೆ.

(5) ಆ ದಿನ ರಾತ್ರಿ, ಸಂಪತ್ಗೂ ರಿಪ್ಲೈ ಮಾಡದೆ ಅತೀವ ದುಃಖದಿಂದ ಮಲಗಿಬಿಟ್ಟಳು. ಮರುದಿನ ಎದ್ದು, ತಲೆ ಸ್ನಾನ ಮಾಡಿ ದೇವರಿಗೆ ದೀಪ ಹಚ್ಚಿ, ಆದ ದುರ್ಘಟನೆಯನ್ನು ನೆನೆದು ಕಣ್ಣೀರಾದಳು. ಮುಖ ಸಪ್ಪೆ, ಕಣ್ಣುಗಳಲ್ಲಿ ಕಾಂತಿ ಇಲ್ಲ. ಮದುವೆ ಆಗುವ ಹುಡುಗಿಗೆ ಇರುವ ಲವಲವಿಕೆ ಇಲ್ಲ. ತವರು ಮನೆ ಬಿಟ್ಟು ಹೋಗುವ ದುಃಖ ಇರಬಹುದೆಂದು ಎಲ್ಲರೂ ಸುಮ್ಮನಾದರು. ಸಂತೋಷ್ ನಿಂದ ಮೆಸೇಜೂ ಇಲ್ಲ, ಕರೆನೂ ಇಲ್ಲ. ಎಂದಿನಂತೆ ಸಂಪತ್ನ ಜೊತೆ ಮಾತನಾಡುತ್ತಿದ್ದರೂ, ಮನಸಲ್ಲಿ ಮಾತ್ರ ಮೋಸ ಮಾಡುತ್ತಿರುವೆನೆಂಬ […]