Facebook

Archive for 2020

ಐರ್ಲೆಂಡಿನಲ್ಲಿ ಹಾವುಗಳೇ ಇಲ್ಲವಂತೆ!: ಜೆ.ವಿ.ಕಾರ್ಲೊ.

ಇಂಗ್ಲಿಶಿನಲ್ಲಿ: ಫ್ರೆಡ್ರಿಕ್ ಫೊರ್ಸೈತ್ ಸಂಗ್ರಹಾನುವಾದ: ಜೆ.ವಿ.ಕಾರ್ಲೊ. ಕೆಲಸ ಕೇಳಿಕೊಂಡು ಬಂದಿದ್ದ ಹೊಸ ಹುಡುಗನ ಕಡೆಗೆ ಮ್ಯಾಕ್ವೀನ್ ತಲೆ ಎತ್ತಿ ಕೊಂಚ ಹೊತ್ತು ನೋಡಿದ. ಅವನಿಗೆ ಸಮಧಾನವಾಗಲಿಲ್ಲ. ತನ್ನಷ್ಟಕ್ಕೆ ತಲೆಯಲ್ಲಾಡಿಸಿದ. ಈ ಮೊದಲು ಕೆಲಸ ಕೇಳಿಕೊಂಡು ಇಂತವರು ಯಾರೂ ಅವನ ಬಳಿ ಬಂದಿರಲಿಲ್ಲ. ಹಾಗಂತ ಅವನೇನು ನಿರ್ದಯಿಯಾಗಿರಲಿಲ್ಲ. ಹುಡುಗನಿಗೆ ಕೆಲಸ ಅಷ್ಟೊಂದು ಜರೂರಿಯಾಗಿದ್ದು ಎಲ್ಲರಂತೆ ಕೆಲಸ ಮಾಡುವಂತವನಾಗಿದ್ದರೆ ಅವನದೇನು ಅಭ್ಯಂತರವಿರಲಿಲ್ಲ. “ಇದು ಲೆಕ್ಕ-ಪತ್ರ ಬರೆದಿಡುವ ಕುರ್ಚಿ ಕೆಲಸ ಅಲ್ಲ, ಮೈಮುರಿಯುವಂತ ಕೆಲಸ ಕಣಪ್ಪ. ಯೋಚಿಸು.” ಎಂದ ತನ್ನ ಬೆಲ್ಫಾಸ್ಟ್ […]

ದಿಗಂಬರ ಸತ್ಯ (ಭಾಗ ೨): ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ ಚಳಿಗಾಲ ಬಂದರೆ ಹೇಗೆ ಟೈಮ್ ಪಾಸು ಮಾಡೋದು ಅನ್ನುವ ಪ್ರಶ್ನೆಗೆ ಅಲ್ಲಿನ ಎನ್ನಾರೈ ಹೈಕ್ಳು ಕೆಲವು ವಿಧಾನಗಳನ್ನು ಹೇಳಿಕೊಟ್ಟರು. ಅವುಗಳಲ್ಲಿ ನನಗೆ ತುಂಬಾ ಇಷ್ಟವಾಗಿದ್ದು ಅಂದರೆ “spiritual” ದಾರಿ. ಅಯ್ಯೋ ಆಧ್ಯಾತ್ಮ, ದೇವರು, ಭಜನೆ ಅಲ್ಲಾ ರೀ… ನಾ ಹೇಳಿದ ‘ಸ್ಪಿರಿಟ್’ ಬೇರೆಯದು! ಭಾರತದಲ್ಲಿ ‘ಚಾ ಮಾಡ್ಲಾ’ ಅಂತ ಕೇಳಿದಂಗೆ ಅಲ್ಲಿನ ಗೆಳೆಯರ ಮನೆಗೆ ಹೋದಾಗ ‘ನಿಮಗೆ ಯಾವುದು ಅಡ್ಡಿ ಇಲ್ಲ? ಅಂತ ಸ್ಪಿರಿಟ್ ಗಳ ಹಲವಾರು ಬಗೆಗಳನ್ನು ತೋರಿಸಿ ಬಾಯಲ್ಲಿ ನೀರು ಹರಿಸಿ ದೇಹಕ್ಕೆ […]

ಮರೆಯಲಾಗದ ಮದುವೆ (ಭಾಗ 2): ನಾರಾಯಣ ಎಂ ಎಸ್

ಇಲ್ಲಿಯವರೆಗೆ ಮದುವೆ ನಿಶ್ಚಯವಾದ ಮನೆಗಳು ಸಡಗರ ಸಂಭ್ರಮಗಳಿಂದ ತುಂಬಿಹೋಗುವುದು ಸಹಜ. ಇನ್ನು ಇಲ್ಲಿ ತೀರ ಎರಡೇ ತಿಂಗಳಲ್ಲಿ ಮದುವೆ ಗೊತ್ತಾಗಿರುವಾಗ ಕೇಳಬೇಕೆ? ಮಾಡಲು ಬೆಟ್ಟದಷ್ಟು ಕೆಲಸಗಳಿದ್ದವು. ವಿಶಾಖಪಟ್ಟಣದ ಕೃಷ್ಣಯ್ಯರ್ ಮನೆಯಲ್ಲಿ ಮದುವೆ ತಯಾರಿಯ ಕಲರವದ ತಾಂಡವ ಜೋರಾಗೇ ನಡೆದಿತ್ತು. ಹಾಗಂತ ತಿರುವಾರೂರಿನ ಗಂಡಿನ ಮನೆಯಲ್ಲೇನೂ ಕಡಿಮೆ ಗದ್ದಲವಿರಲಿಲ್ಲ. ಮುದ್ರಿಸಬೇಕಿದ್ದ ಲಗ್ನಪತ್ರಿಕೆಯ ವಿನ್ಯಾಸ, ಕರೆಯಬೇಕಿದ್ದ ಅತಿಥಿಗಳ ಪಟ್ಟಿ, ಕೊಡಬೇಕಿದ್ದ ಉಡುಗೊರೆಗಳು, ತೆಗೆಯಬೇಕಾದ ಜವಳಿ, ಗೊತ್ತುಮಾಡಬೇಕಿದ್ದ ಫೋಟೋಗ್ರಾಫರ್ ಒಂದೇ… ಎರಡೇ? ಪ್ರತಿಯೊಂದಕ್ಕೂ ಚರ್ಚೆ, ಸಮಾಲೋಚನೆ ಅಭಿಪ್ರಾಯ ಭೇದಗಳಿಂದ ದಿನವಿಡೀ ಮನೆ […]

ಗೆಳೆಯನಲ್ಲ (ಭಾಗ 2): ವರದೇಂದ್ರ ಕೆ.

ಇಲ್ಲಿಯವರೆಗೆ.. 3 ತನ್ನನ್ನು ಹುಡುಗ ನೋಡಿ ಹೋಗಿದ್ದು, ಅವನು ತನ್ನನ್ನು ಒಪ್ಪಿದ್ದು. ಮನೆಯಲ್ಲಿ ಎಲ್ಲರಿಗೂ ಇಷ್ಟವಾಗಿದ್ದು, ತಾನೂ ಒಪ್ಪಿದ್ದು ಎಲ್ಲ ವಿಷಯವನ್ನು ಸಂತೋಷ್ಗೆ ಹೇಳಬೇಕೆಂದು ಎಷ್ಟು ಪ್ರಯತ್ನಿಸಿದರೂ ಸಂತೋಷ್ ಸಂಪರ್ಕಕ್ಕೆ ಸಿಗ್ತಾನೇ ಇರ್ಲಿಲ್ಲ. ಮದುವೆ ಆಗುವ ಹುಡುಗ ಸಂಪತ್ನ ಫೋಟೋ ಕಳಿಸಬೇಕು ಎಂದು ಎಷ್ಟು ಬಾರಿ ಅಂದುಕೊಂಡರೂ ಸಂತೋಷ್ ಸಂಪರ್ಕಕ್ಕೆ ಸಿಗದ ಕಾರಣ ಸುಮ್ಮನಾದಳು. ಮದುವೆ ದಿನವೂ ಗೊತ್ತಾಯ್ತು, ಪ್ರೀತಿ ತನ್ನ ಎಲ್ಲ ಸ್ನೇಹಿತರಿಗೆ ಬರಲು ತಿಳಿಸಿದಳು. ಹಾಗೆ ಸಂತೋಷ್ಗೆ ಕಾಲ್ ಮಾಡಿ ಹೇಳಬೇಕು. ನನ್ನ ಮದುವೆ […]

ಮೆಟಾಫಿಸಿಕಲ್ ಸ್ಕೂಲ್‍ನ – ಜಾನ್ ಡನ್: ನಾಗರೇಖಾ ಗಾಂವಕರ

ಮೆಟಾಫಿಸಿಕಲ್ ಸ್ಕೂಲ್‍ನ ಪ್ರಮುಖ ಇಂಗ್ಲೀಷ ಕವಿ ಜಾನ್ ಡನ್. 1572ರ ಜನವರಿ 24ರಿಂದ ಜೂನ 19 ರ ಮಧ್ಯಭಾಗದಲ್ಲಿ ಲಂಡನ್ನಿನಲ್ಲಿ ಜನಿಸಿದ ಜಾನ್ ಡನ್. ರೋಮನ್ ಕ್ಯಾಥೋಲಿಕ್ ಕುಟುಂಬದಲ್ಲಿ ಜನಿಸಿದ್ದ. ಡನ್‍ನ ತಂದೆ ಇಜಾಕ್ ವಾಲ್ಟನ್ ಎಂಬಾತ ಶ್ರೀಮಂತ ವ್ಯಾಪಾರಿಯಾಗಿದ್ದ. ಆದರೆ ಡನ್ ತನ್ನ ತಂದೆಯನ್ನು ತನ್ನ ನಾಲ್ಕನೇ ವಯಸ್ಸಿಗೆ ಕಳೆದುಕೊಂಡ. ತಾಯಿ ಸರ್ ಥಾಮಸ್ ಮೋರ್‍ನ ಸಹೋದರಿ, ನಾಟಕಕಾರ ಜಾನ್ ಹೇವುಡ್‍ನ ಪುತ್ರಿಯಾಗಿದ್ದು ಪತಿ ಇಜಾಕ್‍ನ ಮರಣದ ನಂತರ ಡಾ. ಜಾನ್ ಸೈಮಂಜೆಸ್‍ನನ್ನು ಮರುವಿವಾಹವಾದಳು. ಹೀಗಾಗಿ […]

“ತೆರೆಮರೆಯ ಕಲೆಗಾರ ಅಪ್ಪ”: ಕವಿತಾ ಜಿ. ಸಾರಂಗಮಠ

‘ಬದುಕಿನ ಪುಟಗಳಲ್ಲಿ ಭರವಸೆಯ ಹಾದಿಯಲ್ಲಿ ನೂರು ಕನಸ ಹೊತ್ತು ಸಾಗಿಹನು. . ತಾ ಲಾಲಿಸಿದ ಮಕ್ಕಳಿಗೆ. . ‘ ಅಪ್ಪ ಎಂದರೆ ಭಯ, ಆತಂಕ, ಗೊಂದಲ, ಕೋಪ, ಪಕ್ಷಪಾತಿ ಎಂಬಿತ್ಯಾದಿ ಭಾವನೆಗಳ ಚಿತ್ರ ಎಲ್ಲ ಮಕ್ಕಳ ಮನದಲ್ಲಿ ಮೂಡಿರುತ್ತದೆ. ಆದರೆ ವಾಸ್ತವವೇ ಬೇರೆ. “ಅಪ್ಪ ಎಂದರೆ ಮಕ್ಕಳ ಪಾಲಿನ ಅದ್ಭುತ ಶಕ್ತಿ. ಉತ್ತಮ ಸ್ಥಾನ, ಮಾನ, ನಾಗರೀಕತೆಯ ಹಿರಿಮೆಯನ್ನು ಸಮಾಜದಲ್ಲಿ ಮಕ್ಕಳಿಗೆ ತಂದುಕೊಡುವ ದಿವ್ಯ ಚೇತನ” ನಾವೆಲ್ಲ ಅಮ್ಮನ ಬಗ್ಗೆ ಚಿಂತಿಸುತ್ತೇವೆ. ಅವಳ ತ್ಯಾಗ, ಹೋರಾಟ, ಹಿರಿಮೆ […]