Facebook

Archive for 2020

ಮರೆಯಲಾಗದ ಮದುವೆ (ಭಾಗ 1): ನಾರಾಯಣ ಎಂ ಎಸ್

ಇದು ನೆನ್ನೆಮೊನ್ನೆಯ ಮಾತಲ್ಲ. ಸುಮಾರು ಹತ್ತಿಪ್ಪತ್ತು ವರ್ಷಗಳೇ ಕಳೆದಿರಬೇಕು. ಆ ಕಾಲಕ್ಕಾಗಲೇ ಊರ ಕಣ್ಣಲ್ಲಿ ರಾಜನ್ಅಯ್ಯರ್ ಒಬ್ಬ ಹಿರೀಕನೆನಿಸಿದ್ದರು. ಆಗಲೇ ಎರಡು ಮೊಮ್ಮಕ್ಕಳಿಗೆ ಅಜ್ಜನಾಗಿದ್ದ ಅಯ್ಯರನ್ನು ಊರ ಜನ ಹಿರಿಯನೆನ್ನದೆ ಮತ್ತಿನ್ನೇನು ತಾನೇ ಅಂದೀತು? ಆದರೆ ಅಜ್ಜನಾದ ಬೆನ್ನಲ್ಲೇ ರಸಿಕ ರಾಜನ್ ಅಯ್ಯರ್ ಆ ಇಳಿವಯಸ್ಸಿನಲ್ಲೂ ಮಡದಿ ಸೀತಮ್ಮಳನ್ನು ಮತ್ತೊಮ್ಮೆ ಬಸಿರಾಗಿಸಿ ಹಲ್ಗಿಂಜುತ್ತಲೇ ಊರವರು ಆತುರದಲ್ಲಿ ಕಟ್ಟಿದ ಹಿರೀಕನ ಪಟ್ಟವನ್ನು ಮುಗುಮ್ಮಾಗಿ ಪಕ್ಕಕ್ಕೆ ಸರಿಸಿಟ್ಟುಬಿಟ್ಟಿದ್ದರು. ಅದೇಕೋ ಅಯ್ಯರಿಗೆ ಈ ಹಿರಿಯನೆಂಬ ಹೊಸ ಗೌರವದ ಹಣೆಪಟ್ಟಿಗಿಂತ ಲಾಗಾಯ್ತಿನಿಂದ ತನಗಿದ್ದ […]

ದಿಗಂಬರ ಸತ್ಯ! (ಭಾಗ ೧): ಗುರುಪ್ರಸಾದ ಕುರ್ತಕೋಟಿ

ನನಗೆ ತುಂಬಾ ಚೆನ್ನಾಗಿ ನೆನಪಿದೆ. ಕನ್ನಡ ಸಂಘದ ಕಾರ್ಯಕ್ರಮವೊಂದಕ್ಕೆ ಅಲ್ಲಿನ ಗೆಳೆಯರೊಬ್ಬರು ಕರೆದುಕೊಂಡು ಹೋಗಿದ್ದರು. ಅದೇ ಮೊದಲ ಸಲ ತುಂಬಾ ಜನ ಕನ್ನಡಿಗರು ಒಟ್ಟಿಗೆ ಸೇರಿದ್ದು ನೋಡಿ ಸಹಜವಾಗಿ ಸಿಕ್ಕಾಪಟ್ಟೆ ಖುಷಿ ಆಗಿತ್ತು. ಅದೂ ಅಲ್ಲದೆ ನಮ್ಮ ಕನ್ನಡಿಗರು ಅಲ್ಲಿ ಕನ್ನಡ ಮಾತಾಡುತ್ತಿದ್ದರು! ಅದು ಮತ್ತೊಂದು ದೊಡ್ಡ ಅದ್ಭುತವಾಗಿತ್ತು. ಕನ್ನಡಿಗರು ಒಂದಾಗಬೇಕು ಹಾಗೂ ಕನ್ನಡ ಮಾತಾಡಬೇಕು ಅಂದರೆ ಅವರು ವಿದೇಶದಲ್ಲಿ ನೆಲಸಿರಬೇಕು ಅನ್ನೋದು ನನಗೆ ಆಗ ಮನದಟ್ಟಾಯಿತು. ಕನ್ನಡ ಸಂಘದಲ್ಲಿ ಪ್ರತಿ ಹಬ್ಬಕ್ಕೆ ಅಂತ ಒಂದು ಕಾರ್ಯಕ್ರಮ […]

ಎಲ್ಲಿದೆ ನಮ್ಮ ಮನೆ?!: ಎಸ್.ಜಿ.ಶಿವಶಂಕರ್

ಸಮಯ ರಾತ್ರಿ ಏಳೂವರೆ ಸಮೀಪ. ಬಡಾವಣೆಯ ನಡುವಿನ ಆ ಪಾರ್ಕು ನಿರ್ಜನವಾಗುತ್ತಿತ್ತು. ಕತ್ತಲಾಗುವವರೆಗೂ ಅಲ್ಲಿ ಮಕ್ಕಳು, ಮಹಿಳೆಯರು ತುಂಬಿರುತ್ತಾರೆ. ಕತ್ತಲು ಕವಿಯುವ ಹೊತ್ತಿನ ನಂತರವೂ ಅಲ್ಲಿ ಉಳಿಯುತ್ತಿದ್ದವರೆಂದರೆ ಕೆಲವು ಹಿರಿತಲೆಗಳು. ಆರು ಜನರ ಆ ಹಿರಿಯರ ಗುಂಪು ಕಳೆದೈದು ವರ್ಷಗಳಿಂದ ಆ ಪಾರ್ಕಿನ ಅವಿಭಾಜ್ಯ ಅಂಗವಾಗಿದ್ದರು. ಅವರೆಲ್ಲ ಸರ್ವಿಸಿನಲ್ಲಿದ್ದು ರಿಟೈರ್ ಆದವರು. ಬೆಳಕಿರುವವರೆಗೂ ವಾಕಿಂಗ್ ಮಾಡಿ ನಂತರ ಪಕ್ಕಪಕ್ಕದಲ್ಲಿರುವ ಎರಡು ಕಲ್ಲು ಬೆಂಚುಗಳಲ್ಲಿ ಆಸೀನರಾಗುತ್ತಿದ್ದರು. ಏಳೂವರೆಯವರೆಗೂ ಅವರ ಹರಟೆ ಸಾಗುತ್ತಿತ್ತು. ನಂತರ ನಿಧಾನಕ್ಕೆ ಎಲ್ಲರೂ ತಂತಮ್ಮ ಮನೆಗಳತ್ತ […]

ಕವಡಿ ಈರಯ್ಯ..: ತಿರುಪತಿ ಭಂಗಿ

ನಮ್ಮೂರಲ್ಲಿ ದೇವರನ್ನ ನಂಬತಾರೋ ಬಿಡ್ತಾರೋ ಗೊತ್ತಿಲ್ಲ ಆದ್ರ ಕವಡಿ ಈರಯ್ಯನ ಮಾತಂತೂ ಯಾರೂ ಉಗಳ ಹಾಕಿ ದಾಟೂದಿಲ್ಲ. ಒಂದ ಲೆಕ್ಕದಾಗ ಹೇಳ್ಬೇಕಂದ್ರ ಕಣ್ಣಿಗೆ ಕಾಣುವ ದೇವ್ರಂದ್ರ ಅಂವ್ನ ಅಂತ ನಂಬಿದ ದಡ್ಡರೇನು ನಮ್ಮೂರಾಗ ಕಡಿಮಿಲ್ಲ. ಪಕ್ಕದ ರಾಜಗಳಾದ ಆಂದ್ರಪ್ರದೇಶ, ತಮೀಳನಾಡು, ಮಹರಾಷ್ಟದಿಂದ ಕಿಕ್ಕಿರದು ಮಂದಿ ಬರುದನ್ನು ಕಂಡು ಕೆಲವು ಪತ್ರಿಕೆಯವರು, ಟಿವಿ ಚಾನಲ್‍ದವರು ಈ ಕವಡಿ ಈರಯ್ಯನ ಸಂದರ್ಶನೂ ಮಾಡಿದ್ರು. “ನೀವ ಜನರ ದಿಕ್ಕ ತಪ್ಪಸಾಕತ್ತಿರೀ, ಮೂಢನಂಬಕೀನ ಜನರ ಮನಸನ್ಯಾಗ ಬಿತ್ತಾಕತ್ತಿರಿ” ಎಂದು ಅಬ್ಬರಸಿ ಬಂದು ದಡಕ್ಕ […]

ನೀನು ನಮ್ಮನ್ನು ಅಗಲಿ ಒಂದು ವರ್ಷವಾಯಿತು: ಅಶ್ಫಾಕ್ ಪೀರಜಾದೆ

ಸಾಹಿತಿ ಪತ್ರಕರ್ತ ಸಾಮಾಜಿಕ ಕಾರ್ಯಕರ್ತ ಹೋರಾಟಗಾರ ನಮ್ಮನ್ನು ಅಗಲಿ ಇದೇ ಜೂನ ೨೧ಕ್ಕೆ ಒಂದು ವರ್ಷವಾಯಿತು. ಈ ಪ್ರಯುಕ್ತ ಒಂದು ಲೇಖನ. ಪ್ರಿಯ ಈಶ್ವರ…..ನೀನು ನಮ್ಮನ್ನು ಅಗಲಿ ಒಂದು ವರ್ಷವಾಯಿತು. ಹೀಗಂತಾ ನೆನಪಿಸಿದವನು ನಿನ್ನ ಮಗ ರಾಜಶೇಖರ. ಅಪ್ಪನ ಪುಣ್ಯಸ್ಮರಣೆ ಲೇಖನ ಬರೆಯಿರಿ ಅಂಕಲ್ ಅಂತಾ ಮೆಸೇಜ ಮಾಡಿದ್ದ. ನೀನು ಹೋಗಿ ಇಷ್ಟು ಬೇಗ ಒಂದು ವರ್ಷವಾಯಿತೇ? ನಂಬಲಾಗುತ್ತಿಲ್ಲ. ನೀನು ಅಲ್ಲಿ-ಇಲ್ಲಿ, ಹಿಂದೆ-ಮುಂದೆ ಸದಾ ನಮ್ಮೊಂದಿಗೆ ಇರುವಂತೆ ಭಾಸವಾಗುತ್ತದೆ. ಆದರೂ ನಿನ್ನ ನೆನಪುಗಳೆಂದರೆ ಕೊನೆಯಿಲ್ಲದ ಒರತೆ. ಈ […]

ಗೆಳೆಯನಲ್ಲ (ಭಾಗ 1): ವರದೇಂದ್ರ ಕೆ.

ಕಮಲ ಬುದ್ಧಿವಂತೆ, ದಿಟ್ಟೆ ಜೊತೆಗೆ ಬಾಲ ವಿಧವೆ, ವಿವಾಹದ ಪರಿಕಲ್ಪನೆಯೂ ಇರದ ವಯಸ್ಸಲ್ಲಿ ಬಾಲ್ಯ ವಿವಾಹವಾಗಿ ಗಂಡನ ಉಸಿರನ್ನೂ ಸೋಕಿಸಿಕೊಳ್ಳದೆ, ತನ್ನ ಸೌಭಾಗ್ಯವನ್ನು ಅದರ ಮಹತ್ವ ಅರಿಯುವ ಮುನ್ನ ಕಳೆದುಕೊಂಡಾಕೆ. ತವರು ಮನೆಯೆಲ್ಲ ಸಂಪ್ರದಾಯಕ್ಕೆ ಕಟ್ಟು ಬಿದ್ದಿದ್ದರೂ ಓದಿಗೆ ಅಡ್ಡಿ ಆಗದ ಕಾರಣ, ಪದವೀಧರೆ ಆಗಿದ್ದಾಳೆ. ಪ್ರಾಯ ಬಂತು, ಪರಕಾಯ ಪ್ರವೇಶದಿಂದ ವಂಚಿತಳಾಗಿ; ಮನದ, ದೇಹದ ಭಾವನೆಗಳನ್ನು ಗಂಟು ಕಟ್ಟಿ ಎದೆಯೊಳಗೆ ಅಡಗಿಸಿಟ್ಟುಕೊಂಡಿದ್ದಾಳೆ. ಯಾರೂ ಅರಿಯದ ಕಮಲಳ ಭಾವನೆ, ತಂದೆ ತಾಯಿಯರ ಅರಿವಿಗೆ ಬರದಿರಲು ಸಾಧ್ಯವೇ? ತಂದೆಯ […]

ಜಾನ್ ಡ್ರೈಡನ್‍ನ “All for love”- ಪ್ರೇಮ ವಿಜಯ: ನಾಗರೇಖಾ ಗಾಂವಕರ

ಈಜಿಪ್ತನ ರಾಣಿ ಕ್ಲೀಯೋಪಾತ್ರ. ತನ್ನ ಅಪೂರ್ವ ಸೌಂದರ್ಯದ ಕಾರಣದಿಂದಲೇ ಐತಿಹಾಸಿಕ ಪುಟಗಳಲ್ಲಿ ತನ್ನದೇ ಛಾಪು ಒತ್ತಿದ ಆ ಕಾಲದ ಜಗತ್ತಿನ ವೀರರೆಲ್ಲರ ನಿದ್ದೆಗೆಡಿಸಿದ ಲಾವಣ್ಯವತಿ. ರೋಮನ ಪೂರ್ವಭಾಗದ ದೊರೆ ಮಾರ್ಕ ಆಂಟನಿ. ಆದರೆ ಆಕೆಯ ಪ್ರೇಮದಲ್ಲಿ ಬಿದ್ದ ರೋಮನ ದೊರೆ ಆಂಟನಿ ಸಂಪೂರ್ಣ ಅದರಲ್ಲಿ ಕೊಚ್ಚಿಹೋಗಿದ್ದಾನೆ. ಅವರಿಬ್ಬರ ಪ್ರೇಮ ಯಾರಿಂದಲೂ ಮುರಿಯಲಾಗದ್ದು. ಇದೇ ಸಂದರ್ಭ ಚಕ್ರವರ್ತಿ ಆಂಟನಿ ಒಕ್ಟೇವಿಯಸ್ ಸೀಸರನೊಂದಿಗಿನ ಯುದ್ದದಲ್ಲಿ ಸೋಲಿನಿಂದ ಹತಾಶನಾಗಿ ಬದುಕಿನ ಆಕಾಂಕ್ಷೆಗಳನ್ನು ಕಳೆದುಕೊಂಡು ಇಜಿಪ್ತನ ಅಲೆಕ್ಸಾಂಡ್ರಿಯಾದ ಐಸಿಸ್ ದೇವಾಲಯದಲ್ಲಿ ಏಕಾಂಗಿಯಾಗಿ ತಂಗಿದ್ದಾನೆ. […]

ಗುಂಪುಗಳಲ್ಲಿ “ಗುಂಪುಗಾರಿಕೆ”: ಸಹನಾ ಪ್ರಸಾದ್‌

ಯಾವ ಗುಂಪುಗಳ ಬಗ್ಗೆ ಮಾತನಾಡುತ್ತಿದ್ದೇನೆ, ಅಂದಿರಾ? ನಮ್ಮ ದೇಶದಲ್ಲಿ ಹೇರಳವಾಗಿ ಸಿಗುವ ಜಾತಿ, ಮತ, ಭಾಷೆ, ಜನಾಂಗ, ವ್ಯಕ್ತಿಗಳ ಪರ, ವಿರೋಧಗಳ ಗುಂಪಲ್ಲ, ಮಾರ್ರೆ. ನಾ ಹೇಳ್ತಾ ಇರೋದು ಈ ಮುಖಪುಟ, ವಾಟ್ಸಾಪ್, ಇನ್ಸ್ಟಾ, ಟೆಲಿಗ್ರಾಮ್ ಇತ್ಯಾದಿಗಳಲ್ಲಿ ಕಾಣ ಸಿಗುವ ” ಗ್ರೂಪ್” ಗಳು. ಊಟ, ಸೀರೆ, ಸಾಹಿತ್ಯ, ಅಡುಗೆ, ಭಾಷೆ, ಪಂಗಡ… ಯಾವುದು ಬೇಕು ಹೇಳಿ? ಎಲ್ಲ ರೀತಿಯ ಗುಂಪುಗಳೂ ನಿಮಗೆ ಕಾಣ ಸಿಗುತ್ತವೆ. ಗಣತಿಯ ಪ್ರಕಾರ ೬೨೦ಮಿಲ್ಲಿಯನ್ ಗ್ರೂಪುಗಳು ಇವೆಯಂತೆ ಬರೀ ಮುಖಪುಟದಲ್ಲಿ! ಇವುಗಳ […]

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 31 & 32): ಎಂ. ಜವರಾಜ್

-೩೧- ಬೀದಿ ದೀಪ್ಗಳು ಇಲ್ದೆ ಊರು ಗವ್ವನ್ನದು ಈ ಅಯ್ನೋರು ಗ್ಯಾನ ಇಲ್ದೆ ಬಿದ್ದಾಗ ಅವ್ರ್ ಕಾಲು ದಿಕ್ಕಾ ಪಾಲಾಗಿ ನಾನು ಮೋರಿ ಪಾಲಾದಿ ಮೋರಿ ಬದಿ ನನ್ ಮೈಮಾರ ಮೆತ್ತಿ ನಿಗುರಿ ನಿಗುರಿ ನೋಡ್ತಿದ್ದಾಗ ನೀಲವ್ವೋರು ಬಾಗುಲು ಸಂದಿಲಿ ಇಣ್ಕುದ್ರು. ಚೆಂಗುಲಿ ಅಯ್ನೋರ ಮೇಲುಕ್ಕೆತ್ತಿ ನಿಲ್ಸಿ ಹೆಗುಲ್ಗ ಕೊಟ್ಗಂಡು ಯಳ್ಕಂಡು ಒಳಕ ತಳ್ಳಾಗ ಒಂದ್ಕಾಲು ಸಿಗಕತ್ತು ಒಳಗಿಂದ ನೀಲವ್ವೋರು ಎಳಿತಿದ್ರ ಈಚ್ಲಿಂದ ಚೆಂಗುಲಿ ತಳ್ತಿದ್ದ ನೀಲವ್ವೋರು ಎಳುದ್ರು ಚೆಂಗುಲಿನು ತಳ್ದ ಆ ದೆಸ್ಗ, ಅಯ್ನೋರು ಒಳಕ್ಕೋದಂಗಾಯ್ತು […]