Facebook

Archive for 2020

ನಾನು ಅವನಲ್ಲ!: ಜೆ.ವಿ.ಕಾರ್ಲೊ

ಹಿಂದಿ ಮೂಲ: ಮುನ್ಶಿ ಪ್ರೇಮಚಂದ್ ಇಂಗ್ಲಿಶಿನಿಂದ: ಜೆ.ವಿ.ಕಾರ್ಲೊ ಇದು, ಹಿಂದಿನ ದಿನ ನಾನು ಕುದುರೆ ಗಾಡಿಯಲ್ಲಿ ಪೇಟೆಗೆ ಹೋಗುತ್ತಿದ್ದಾಗ ನಡೆದ ಘಟನೆ. ಗಾಡಿ ಸ್ವಲ್ಪ ಮುಂದೆ ಹೋಗಿತ್ತಷ್ಟೇ. ಯಾರೋ ಕೈ ಅಡ್ಡ ಹಾಕಿ ಗಾಡಿಯನ್ನು ಹತ್ತಿಕೊಂಡ. ಅವನನ್ನು ಹತ್ತಿಸಿಕೊಳ್ಳಲು ಗಾಡಿಯವನಿಗೆ ಸ್ವಲ್ಪವೂ ಇಷ್ಟವಿರಲಿಲ್ಲವಾದರೂ ಬೇರೆ ದಾರಿ ಇರಲಿಲ್ಲ. ಹತ್ತಿದವನು ಒಬ್ಬ ಪೊಲೀಸ್ ಆಫೀಸರನಾಗಿದ್ದ. ಕೆಲವು ಖಾಸಗಿ ಕಾರಣಗಳಿಂದಾಗಿ ಖಾಕಿ ಧರಿಸಿದವರೆಂದರೆ ನನಗೆ ಮೊದಲಿನಿಂದಲೂ ಅಷ್ಟಕಷ್ಟೇ. ಅವರ ನೆರಳು ಕಂಡರೂ ದೂರ ಓಡಿಹೋಗುತ್ತೇನೆ! ಗಾಡಿಯ ಒಂದು ತುದಿಗೆ ಕುಳಿತು […]

NRIs ಅಂದ್ರೆ ನಾನ್ ರಿಟರ್ನಿಂಗ್ ಇಂಡಿಯನ್ಸ್? (ಭಾಗ ೧): ಗುರುಪ್ರಸಾದ ಕುರ್ತಕೋಟಿ

(ಇಲ್ಲಿಯವರೆಗೆ : https://panjumagazine.com/?p=16864) ಒಂದು ಮಟ್ಟಕ್ಕೆ ಜೀವನದಲ್ಲಿ ಸೆಟ್ಲ್ ಆಗಿದ್ದೆ. ಸ್ವಂತಕ್ಕೆ ಅಂತ ಒಂದು ಮನೆಯಿತ್ತು (ಹೆಸರಿಗೆ ನನ್ನದು, ಆದರೆ ಅಧಿಕೃತವಾಗಿ ಅದರ ಮಾಲಿಕರು ಬ್ಯಾಂಕ್ ನವರೇ ಆಗಿದ್ದರು, ಆ ಮಾತು ಬೇರೆ! ನಾವು ಅವರ ಬಳಿ ತೆಗೆದುಕೊಂಡ ಸಾಲ ತೀರುವವರೆಗೆ ಅವರೇ ಯಜಮಾನರು). ರಿಟೈರ್ ಆದ ಮೇಲೆ ಇರಲಿ ಅಂತ ಊರಲ್ಲಿ ತೆಗೆದುಕೊಂಡ ಒಂದಿಷ್ಟು ಜಾಗವೂ ಇತ್ತು. ನನಗಾಗಲೇ ಆಫೀಸಿನಲ್ಲಿ ಒಂದು ಸ್ಥಾನಮಾನ ಸಿಕ್ಕಿತ್ತು. ಇಷ್ಟೆಲ್ಲಾ ಕಂಫರ್ಟ್ ಝೋನಿನಲ್ಲಿ (ಬೋನಿನಲ್ಲಿ?) ಇದ್ದ ನಾನು ಒಮ್ಮೆಲೇ ಎಲ್ಲವನ್ನೂ […]

ಕೊರೋನಾ ಕಾಲುಗಳು!: ಎಸ್.ಜಿ.ಶಿವಶಂಕರ್

ಏನು? ಕೊರೊನಾಕ್ಕೂ ಕಾಲುಗಳಿವೆಯೆ ಎಂದು ಹುಬ್ಬೇರಿಸಬೇಡಿ. ನಾನೀಗ ಹೇಳುತ್ತಿರುವುದು ಕೊರೋನಾ ಲಾಕ್ಡೌನ್ ಸಮಯದಲ್ಲಿ ಬರುತ್ತಿದ್ದ ಫೋನ್ ಕಾಲುಗಳ ಬಗೆಗೆ! ಕೊರೋನಾ ಮಾರಿ ಇಡೀ ವಿಶ್ವವನ್ನೇ ನಡುಗಿಸಿ, ಸಾವಿನ ಗಾಣದಲ್ಲಿ ಹಾಕಿ ಅರೆಯುತ್ತಿರೋವಾಗ ಅನಿವಾರ್ಯವಾಗಿ ಲಾಕ್‍ಡೌನ್ ಅಮರಿಕೊಂಡಿದೆ! ಎಲ್ಲೆಲ್ಲೂ ಲಾಕ್‍ಡೌನ್!! ಅಲ್ಲೂ ಲಾಕ್ಡೌನ್! ಇಲ್ಲೂ ಲಾಕ್‍ಡೌನ್, ಎಲ್ಲಾ ಕಡೆಯೂ ಲಾಕ್‍ಡೌನ್! ವಾರವೊ, ಹದಿನೈದು ದಿನವೊ ಆಗಿದ್ದರೆ ಹೇಗೋ ಜನ ತಡ್ಕೋಬಹುದು. ಅದು ತಿಂಗಳುಗಳನ್ನೂ ಮೀರಿ, ವಿಸ್ತರಿಸುತ್ತಾ..ವಿಸ್ತರಿಸುತ್ತಾ..ಮನೆಯೊಳಗೆ ಧಿಗ್ಭಂದಿಯಾದ ಜನ ಹೇಗೆ ಕಾಲ ಕಳೀಬೇಕೂಂತ ಪರಿತಪಿಸೋ ಹಾಗಾಗಿಬಿಡ್ತು. ಟಿ.ವಿ ವಾಹಿನಿಗಳೂ […]

ರೈತ ಫಾರ್ ಸರಕಾರ: ಸೂರಿ ಹಾರ್ದಳ್ಳಿ

ಒಂದು ಅಶುಭ ದಿನದಂದು, ಕಾಶೀಪತಿ ಕೊರೆಯಲು ಶುರುಮಾಡಿದನು. ‘ನಮ್ಮದು ರೈತರ ಫಾರ್ ಸರಕಾರ,’ ರಾಜಕಾರಣಿಗಳಿಗೆ ಮತ್ತು ಕವಿಗಳಿಗೆ ಇಹಲೋಕದಲ್ಲಿ ಬೇಕಿರುವುದು ‘ಕೇಳುವ ಕಿವಿಗಳು’ ಮತ್ತು ಆಡಿಸಲು ಒಳಗೆ ಟೊಳ್ಳಿರುವ ತಲೆಗಳು. ನಡುನಡುವೆ ಚಪ್ಪಾಳೆಯ ದನಿಗಳು. ಇವು ಮೂರಿರದ್ದರೆ, ದೇವರ ದಯೆ, ಒಡೆಯದ, ಮುರಿಯದ, ಚರ್ಮದ ಬಾಯಿ ದಣಿಯುವುದಿಲ್ಲ. ಕಾಶೀಪತಿ ಹೇಳಿದ್ದನ್ನು ನಾನು ತಿದ್ದಿದೆ, ‘ಅದರು ಫಾರ್ ಅಲ್ಲ, ಪರ.’ ‘ಇಂಗ್ಲಿಷಿನವರಿಗೂ ತಿಳಿಯಲಿ ಎಂದು ಹಾಗೆಂದೆ. ಆ್ಯಂಡು, ನಾನು ಹಳ್ಳಿಯವರ ಮಕ್ಕಳೂ ಗರ್ಭದಲ್ಲಿರುವಾಗಲೇ ಇಂಗ್ಲಿಷ್ ಕಲಿಯಬೇಕು ಎಂದು ವಾದಿಸುವವನು. […]

ಅಳಿಯದ ಸಂಬಂಧ: ಶೀಲಾ ಎಸ್. ಕೆ.

“ಅಂಜು, ಅಂಜು‌” ಎಂದು ಹೊರಗಡೆಯಿಂದ ಬಂದ ಕೂಗಿಗೆ, “ಅಮ್ಮಾ ಸಂತು ಬಂದ ನಾನ್ ಶಾಲೆಗೆ ಹೊರಟೆ ಬಾಯ್” ಎಂದು ಒಳಗಿನಿಂದ ತುಂಟ ಹುಡುಗಿ ಓಡಿ ಬಂದಳು. ತಿಂಡಿ ತಿಂದು ಹೋಗು ಎಂದು ಕೂಗಿದ ಅಮ್ಮನ ದನಿ ಕಿವಿಯ ಮೇಲೆ ಬೀಳಲೇ ಇಲ್ಲ. “ಇವತ್ತು ತಿಂಡಿ ತಿನ್ನದೆ ಬಂದ್ಯ ? ನನ್ನ ಬೈಸೋಕೆ ಹೀಗೆ ಮಾಡ್ತೀಯ” ಎಂದು ದಿನದ ಮಾತು ಆರಂಭಿಸಿದ ಸಂತು. ಯಥಾಪ್ರಕಾರ ಇದಕ್ಕೆ ಕಿವಿಕೊಡದ ಪೋರಿ “ಫಸ್ಟ್‌ ಪೀರಿಯಡ್ ಗಣಿತ ಇದೆ ಹೋಮ್ ವರ್ಕ್ ಮಾಡಿದ್ಯ” […]

“ಬದುಕಿಗೊಂದು ಹೊಸ ಆಯಾಮವಿರಲಿ”: ಸುಧಾ ಹುಚ್ಚಣ್ಣವರ

ಬದುಕು ಆ ದೇವರು ಕರುಣಿಸಿದ ಅತ್ಯಮೂಲ್ಯ ಕಾಣಿಕೆ ಸೃಷ್ಟಿಯ ಸಕಲ ಜೀವರಾಶಿಗಳಲ್ಲಿ ಮಾನವ ಬುದ್ಧಿಜೀವಿ ಎನಿಸಿಕೊಂಡಿದ್ದಾನೆ ಹಾಗೆಯೇ ಅವನ ಬದುಕಿನ ಶೈಲಿ ಇತರ ಪ್ರಾಣಿ ಪಕ್ಷಿಗಳಿಗಿಂತ ಸುಧಾರಿಸಿದೆ. ಪ್ರಕೃತಿಯ ಆಗುಹೋಗುಗಳ ಜೊತೆಗೆ ಕಾಲಕ್ಕೆ ತಕ್ಕಂತೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ರಾಜಕೀಯವಾಗಿ ಆರ್ಥಿಕವಾಗಿ ಎಲ್ಲ ರೀತಿಯ ಬದಲಾವಣೆಯ ಜೊತೆಗೆ ಮನುಷ್ಯನ ಜೀವನ ಸಾಗುತ್ತಾ ಬಂದಿದೆ. ಅನಾದಿ ಕಾಲದಿಂದ ಇಂದಿನವರೆಗೆ ಹಲವಾರು ಆಯಾಮಗಳಲ್ಲಿ ವ್ಯತ್ಯಾಸಗಳನ್ನು, ವೈಪರೀತ್ಯಗಳನ್ನು, ಬದಲಾವಣೆಗಳನ್ನು, ಸುಧಾರಣೆಗಳನ್ನು ಕಾಣುತ್ತಾ ಬಂದಿದ್ದಾನೆ. “ಬೆದಕಾಟ ಬದುಕೆಲ್ಲ ಚಣಚಣವು ಹೊಸಹಸಿವು ಅದಕ್ಕಾಗಿ ಇದಕ್ಕಾಗಿ ಮತ್ತೊಂದು […]

ಕಾಮೆಡಿಗಳಲ್ಲಿ ಅದ್ವಿತೀಯತೆ ಮರೆದ- Ben Jonson: ನಾಗರೇಖಾ ಗಾಂವಕರ

ಇಂಗ್ಲೀಷ ಸಾಹಿತ್ಯದಲ್ಲಿ ಅದ್ವಿತೀಯನೆಂದೇ ಹೆಸರು ಗಳಿಸಿದ ಶೇಕ್ಸಪಿಯರ್ ತನ್ನ ಟ್ರಾಜಡಿಗಳಿಂದ ಖ್ಯಾತನಾಗಿದ್ದರೆ ಆತನ ಸಮಕಾಲೀನನಾದ ಬೆನ್‍ಜಾನ್ಸನ್ [ಆದರೂ ಹತ್ತು ವರ್ಷಗಳಿಗೆ ಕಿರಿಯ] ಕಾಮೆಡಿಗಳಲ್ಲಿ ಅದ್ವಿತೀಯತೆ ಮೆರೆದಿದ್ದ. ಹಾಗೆಂದು ಇಬ್ಬರೂ ಬರಿಯ ಒಂದೇ ಪ್ರಕಾರಕ್ಕೆ ಸೀಮಿತಗೊಂಡಿರಲಿಲ್ಲ. ಟ್ರಾಜಡಿ ಕಾಮೆಡಿಗಳೆರಡೂ ಮನುಷ್ಯನ ಬದುಕಿನ ಎರಡು ದಾರಿಗಳೇ ಆಗಿದ್ದು, ಶೇಕ್ಸಪಿಯರ ಕಾಮೆಡಿಗಳಿಂದಲೂ ಪ್ರಸಿದ್ಧ. ಅದು 1598ರ ಸುಮಾರು. ಬೆನ್ ಜಾನಸನ್ ತನ್ನ ಮೊದಲ ಕಾಮೆಡಿಯ ‘Every Man in His Humour’ಮೂಲಕ ಹಾಗೂ ಶೇಕ್ಸಪಿಯರನ ತನ್ನ ಮೊದಲ ಕಾಮೆಡಿ ‘Love’s Labour”s […]

ಒಂದು ಆತ್ಮೀಯ ಆರೈಕೆ ಮರೆಯಾದಾಗ..: ವೃಶ್ಚಿಕ ಮುನಿ

ನೀನು ಮರೆಯಾದ ಹಾದಿಗುಂಟ.. ಸಾಲು ಮರದ ಹಾದಿಗುಂಟ ಮಳೆ ಬಿದ್ದ ನೆಲ, ಗಾಳಿಗೆ ಉದುರಿ ಬಿದ್ದ ಹಳದಿ ಹೂ, ಎಲೆ ಬಳುಕುಸುತ್ತಾ ಬಿಸುವ ತಂಪು ತಂಗಾಳಿ ಮೇಲೆ ಕವಿದ ಮೋಡ, ತೋಯ್ದ ಟಾರು ರಸ್ತೆಯ ಮೇಲೆ ಚೆಲ್ಲಿದ ಹಣ್ಣಲೆ ತೊಟ್ಟಿಕ್ಕುವ ಸಣ್ಣ ಹನಿಯ ಸಿಂಚನ. ದೂರದಲಿ ರವಿಯ ಹಳದಿ ಕಿರಣ, ಆ ಸಮಯಕ್ಕೆ ಒಂದು ರಮ್ಯತೆ ಇರಲು ಆತ್ಮೀಯ ಜೀವ ಜೊತೆಯಿರಲು ನಡಿಗೆ ದೀರ್ಘವಾಗಿರಲು ಇಟ್ಟ ಅಡಿಯ ಲೆಕ್ಕವಿಲ್ಲ ಒಂದು.. ಎರಡು.. ಮೂರು.. ಹೀಗೆ ಉಸಿರಿರೋವರೆಗೂ, ಸವಿದಷ್ಟು […]

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 25 & 26): ಎಂ. ಜವರಾಜ್

-೨೫- ಮ್ಯಾಲ ತಿಂಗ್ಳು ಬೆಳುಗ್ತಾ ಇತ್ತು ಬೆಳ್ಕು ಹಾಲ್ ಚೆಲ್ಕಂಡಂಗೆ ಚೆಲ್ಕಂಡಿತ್ತು ನಾ ಮೂಲ ಸೇರಿ ಬಾಳ ಹೊತ್ತಾಗಿತ್ತು ಆಗ, ‘ಅಯ್ನೋರಾ ಇಳ್ಯ ಬಂದುದ ಕೆಳಗಿಂದ’ ಕುಲೊಸ್ತರ ಗುಂಪು ನೆರುದು ಹೇಳ್ತು. ‘ಊ್ಞ.. ಗೊತ್ತು’ ‘ಗೊತ್ತು ಅಂದ್ರ ಏನಾ ಅಯ್ನೋರಾ.. ಎಮ್ಮ ದನ ಕುಯ್ಯ ಬೀದಿಗ ಎಂಗೆ’ ‘ಊರಂದ್ಮೇಲ ಬ್ಯಲ ಕೊಡ್ಬೇಕು ಇಳ್ಯ ಕೊಟ್ಮೇಲ ಕುಲ ಮೀರಗಿದ್ದಾ.. ಕಾಲ್ದಿಂದು ನಡಕಾ ಬಂದಿರದು ಅಲ್ವ.. ಸತ್ಗ ಕೊಡ್ಬೇಕು. ಕೊಟ್ಟ ಸತ್ಗಗ ಹೂ ಸಿಂಗಾರ ಮಾಡಿ ಕುರುಬನ ಕಟ್ಟೆ ಕಂಡಾಯ […]