Facebook

Archive for 2020

ಡಾ. ಹೆಚ್. ಶಾಂತಾರಾಮ್ ಪ್ರಶಸ್ತಿಗೆ ಕೃತಿ ಆಹ್ವಾನ

ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಷನ್ ನ ಆಡಳಿತಾಧಿಕಾರಿ ಡಾ. ಹೆಚ್. ಶಾಂತಾರಾಮ್ ಹೆಸರಿನಲ್ಲಿ ಕನ್ನಡದ ಅತ್ಯುತ್ತಮ ಸೃಜನಶೀಲ ಕೃತಿಗೆ ಪ್ರಶಸ್ತಿ ನೀಡಲಾಗುತ್ತಿದ್ದು ಈ ವರ್ಷ ಕಾದಂಬರಿಗಳನ್ನು ಮಾತ್ರ ಪರಿಗಣಿಸಲು ನಿರ್ಧರಿಸಲಾಗಿದೆ. 2018 ಜನವರಿಯಿಂದ 2019 ಡಿಸೆಂಬರ್ ಒಳಗೆ ಮೊದಲ ಆವೃತ್ತಿಯಾಗಿ ಪ್ರಕಟಗೊಂಡ ಕಾದಂಬರಿಗಳನ್ನು ಆಹ್ವಾನಿಸಲಾಗಿದೆ. ಕಾದಂಬರಿಗಳ ನಾಲ್ಕು ಪ್ರತಿಗಳನ್ನು ಜೂನ್ 5,2020ರ ಒಳಗೆ ( 5/6/2020) ಡಾ.ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಸಮಿತಿ, ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ, ಉಡುಪಿ ಜಿಲ್ಲೆ 576201.ಈ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ. […]

ರವಿವಾರದ ಸಂತೆ: ವೆಂಕಟೇಶ ಚಾಗಿ

ಇತ್ತೀಚಿನ ವರ್ಷಗಳಲ್ಲಿ ಸಂತೆಗೆ ಹೋಗುವುದೇ ತೀರ ಕಡಿಮೆ ಆಗಿದೆ. ದಿನಬೆಳಗಾದರೆ ತಾಜಾ ತಾಜಾ ತರಕಾರಿಗಳನ್ನು ತರಕಾರಿ ತಮ್ಮಣ್ಣ ತನ್ನ ತಳ್ಳುವ ಗಾಡಿಯಲ್ಲಿ ಮನೆ ಮುಂದೆ ತಂದು ನಿಲ್ಲಿಸ್ತಾನೆ. ಇನ್ನು ಕಿರಾಣಿ ಸಾಮಾನು ಬೇಕಾದ್ರೆ ರಸ್ತೆಯ ಕೊನೆಯಲ್ಲಿ ಇರುವ ಕಿರಾಣಿ ಅಂಗಡಿಯಲ್ಲಿ ಬೇಕಾದಾಗ ತಂದು ಬಿಡುತ್ತೇವೆ. ಡ್ಯೂಟಿಗೆ ಹೋದಾಗ ಹೆಂಡತಿ ಪೋನ್ ಮಾಡಿ “ರೀ , ವಾಟ್ಸ್ಯಾಪ್ ಲಿ ಲಿಸ್ಟ್ ಹಾಕಿದೀನಿ. ಕೆಲಸ ಮುಗಿಸಿ ಬರುವಾಗ ಅದರಲ್ಲಿನ ಸಾಮಾನೆಲ್ಲಾ ತಂದು ಬಿಡಿ.” ಎಂದು ಆದೇಶ ಮಾಡಿಬಿಡುತ್ತಾಳೆ. ಮನೆ ಯಜಮಾನಿ […]

ಹಕ್ಕಿ ಗೂಡು ಬಿಟ್ಟ ಮೇಲೆ ಗೂಡಿಗೇನು ಬೆಲೆಯಿದೆ . . ?: ಜಯಶ್ರೀ.ಜೆ. ಅಬ್ಬಿಗೇರಿ

ಬಾಳ ದಾರಿಯಲ್ಲಿ ಕೈ ಹಿಡಿದು ನಡೆಸುವ ಬಂಧಗಳ ಶಕ್ತಿ ಅಪರಮಿತವಾದದ್ದು. ಮಗ್ಗಲು ಮುಳ್ಳುಗಳಂತೆ ಚುಚ್ಚುವ ಸಮಸ್ಯೆಗಳು ಹಣಿಯುತ್ತಿರುವಾಗಲಂತೂ ಇವುಗಳು ಸಲುಹುವ ರೀತಿ ಪದಗಳಲ್ಲಿ ಹಿಡಿದಿಡಲಾಗದು. ಇತ್ತಿತ್ತಲಾಗಿ ಸಂಬಂಧಗಳೇ ಮಾಯವಾಗುತ್ತಿವೆ. ಅನ್ನುವ ಮಟ್ಟಿಗೆ ಬದುಕಿನ ಸವಾರಿ ನಡೆಸುತ್ತಿದ್ದೇವೆ. ದೂರ ದೂರ ಸರಿದು ನಿಂತು ಒಂದೊಂದು ಗೂಡಿನಲ್ಲಿ ಜೀವಿಸುತ್ತಿದ್ದೇವೆ. ಸಂಬಂಧಗಳ ಸವಿರುಚಿಯನ್ನು ಸವಿಯುವುದು ಕ್ವಚ್ಚಿತ್ತಾಗಿ ಬಿಟ್ಟಿದೆ. ಈ ಹಿಂದೆ ಸಂಬಂಧಗಳು ನಮ್ಮನ್ನು ಕೂಡು ಕುಟುಂಬದಲ್ಲಿ ಹತ್ತು ಹಲವು ರೀತಿಯಲ್ಲಿ ಆವರಿಸುತ್ತಿದ್ದವು. ಇನ್ನಿಲ್ಲದಂತೆ ಪೋಷಿಸುತ್ತಿದ್ದವು. ಅಜ್ಜ ಅಜ್ಜಿಯರಿಂದ ನೀತಿ ಕಥೆಗಳು ಹೇಳಲ್ಪಡುತ್ತಿದ್ದವು. […]