Facebook

Archive for 2020

ಪಂಜು ಕಾವ್ಯಧಾರೆ

ಹರಿದ್ರ ಕುಂಕುಮ ಶೋಭಿತಳಾದವಳಿಗೆ ಅದಕ್ಕಿಂತ ಬೇರೆ ಐಶ್ವರ್ಯ ಇಲ್ಲ ಅವನು ಹಾಕುವ ಮೂರುಗಂಟಿಗೆ ತಾನು ಬೆಳದ ಪರಿಸರ ತೊರೆಯುವಳಲ್ಲ ತಾಂಬೂಲದ ಮೇಲೆ ಕಾಸಿಟ್ಟು ಧಾರೆಯೆರೆಯುವರಲ್ಲ ತಂದೆಯ ಪ್ರೀತಿ ತಾಯಿಯ ವಾತ್ಸಲ್ಯ, ಒಡಹುಟ್ಟಿದವರ ಮಮತೆಯ ಕುಡಿಯನ್ನು ಇನ್ನೂ ನಿನಗೆ ಸ್ವಂತವೆಂದು ದೈವಸಾಕ್ಷಿಯಾಗಿ ಒಪ್ಪಿಸಿದರಲ್ಲ…. ಸಪ್ತಪದಿಯ ತುಳಿದು ತವರು ಮನೆಯ ನೆನಪಿನೊಂದಿಗೆ ತನ್ನ ಮನೆ ಸೇರುವಳಲ್ಲ ಗಂಡನ ಮನೆಯ ಸುಖ ಶಾಂತಿ ನೆಮ್ಮದಿ ಬಯಸಿ ತನ್ನ ತನವನ್ನು ಬದಿಗಿರಿಸಿ ಮನೆಗಾಗಿ ದುಡಿಯುವಳಲ್ಲ ಅತ್ತೆ ಮಾವನಿಗೆ ಮಗಳಂತೆ ಸೇವೆಮಾಡಿ ಗಂಡ ಮಕ್ಕಳ […]

ಕುರಿಯ ಹಾಲಿನ ಐಸ್ ಕ್ರೀಮು (ಭಾಗ ೩): ಗುರುಪ್ರಸಾದ‌ ಕುರ್ತಕೋಟಿ

ಇಲ್ಲಿಯವರೆಗೆ ಬೆಳಗಾಗುವುದೇ ಕಾಯುತ್ತಿದ್ದೆ. ಅಯೋವಾದ ಕುರಿ ಸಾಕಾಣಿಕಾ ಕೇಂದ್ರಕ್ಕೆ ಹೋಗುವ ಯೋಜನೆ ಆಗಲೇ ಸಿದ್ಧವಾಗಿತ್ತು. ಅಮೇರಿಕಾದಲ್ಲಿ ಪರಿಚಯವಾಗಿ ಚಡ್ಡಿ ದೊಸ್ತನಾಗಿದ್ದ ಮಂಜು ಎಲ್ಲ ಸಿದ್ಧತೆ ಮಾಡಿಕೊಂಡಿದ್ದ. ಅಲ್ಲಿ ದೂರ ಪ್ರವಾಸ ಹೋಗಬೇಕೆಂದರೆ ನಮ್ಮದೇ ಕಾರ್ ಒಯ್ಯಬೇಕೆಂದಿಲ್ಲ. ಬಾಡಿಗೆಗೆ ತರ ತರಹದ ಕಾರುಗಳು, ವ್ಯಾನುಗಳು ಅಲ್ಲಿ ದೊರಕುತ್ತವೆ. ಎಷ್ಟು ಸೀಟಿನ ವಾಹನ ಬೇಕು ಅಂತ ನಿರ್ಧರಿಸಿ, ಗ್ಯಾಸ್ ಹಾಕಿಸಿಕೊಂಡು ಹೊರಟರೆ ಆಯ್ತು. ಹೌದು ಅಲ್ಲಿ ಪೆಟ್ರೋಲ್ ಗೆ ಗ್ಯಾಸು ಅಂತಾರೆ. ಅವರು ಹಂಗೆ… ನಾವೇ ಬೇರೆ ನಮ್ಮ ಸ್ಟೈಲೇ […]

ಬದಲಾವಣೆಯ ಆರಂಭ ನಮ್ಮಿಂದಲೇ ಸಾಧ್ಯ: ಪ್ರೀತಿ ಕಾಮತ್

ಮೊನ್ನೆ ನಾನು ಮತ್ತು ನನ್ನ ಫ್ರೆಂಡ್ಸ ಸೇರಿ ನಡುರಾತ್ರಿ ವಿಡಿಯೋಕಾಲ್‍ನಲ್ಲೇ ಒಂದು ಸಣ್ಣ ಚರ್ಚಾಕೂಟ ಏರ್ಪಡಿಸಿದ್ದೆವು. ಹೆಣ್ಮಕ್ಳು ಅಂದ್ರೆ ಮತ್ತೆ ಕೇಳಬೇಕಾ? ಮಾತನಾಡಲು ಅವಕಾಶ ಸಿಕ್ಕರೆ ಸಾಕು. ಆದರೆ ಸದಾ ವಟಗುಡುವ ಗೆಳತಿ ಮಾತ್ರ ಬಾಯಿಗೆ ಬೀಗ ಹಾಕಿ ಕೂತಿದ್ದು ನನಗೆ ಸಹಿಸಲಾಗಲಿಲ್ಲ. ಕಾರಣ ಕೇಳಿದಾಗ ಹುಡುಗಿಯರು ಇಲ್ಲಿ ಮಾತನಾಡುವುದಷ್ಟೇ ಬಂತು ಸಮಯ ಬಂದಾಗ ನಾವು ಬಾಯಿ ಬಿಡಲಾರೆವು ಅಲ್ವಾ? ಅಂದಳು. ಲೇ ಎಲ್ಲಾದರೂ ಭೋಧೀ ವೃಕ್ಷದ ಕೆಳಗೆ ಕೂತಿದ್ದಿಯಾ? ಯಾಕೋ ತತ್ವಜ್ಞಾನಿಯಂತೆ ಮಾತಾಡುತ್ತಿದ್ದಿ, ಏನ್ ಮ್ಯಾಟರ್ […]

ಪುಟ್ರಾಜು: ಅಭಿಜಿತ್. ಎಮ್

ಪುಟ್ರಾಜುಗೆ ಪರೀಕ್ಷೆ ಹತ್ತಿರ ಬಂದಿದೆ. ಪುಸ್ತಕ ಹಿಡಿದು ಓದಲು ಕುಳಿತರೆ ಭಯ ಮನಸ್ಸು, ಮೆದುಳನ್ನು ಆವರಿಸುತ್ತದೆ. ಐದನೇ ತರಗತಿಯಲ್ಲಿ ಓದುತ್ತಿರುವ ಪುಟ್ರಾಜು ಗೆ ಈ ಬಾರಿಯೂ ಪರೀಕ್ಷೆ ಯಲ್ಲಿ ಕಡಿಮೆ ಅಂಕ ಗಳಿಸಿದರೆ ಏನಪ್ಪಾ ಗತಿ ಅನ್ನುವುದೇ ಚಿಂತೆಯಾಗಿರುತ್ತದೆ. ಶಾಲೆಯಲ್ಲಿ ಟೀಚರ್ ಗಳು, ಮನೆಯಲ್ಲಿ ಹೆತ್ತವರ ಬೈಗುಳ ತಿಂದು. . ತಿಂದು. . . ಹೈರಾಣಾಗಿರುತ್ತಾನೆ. ಅದಕ್ಕೆ ಓದಲು ಕುಂತರೂ ಪುಟ್ರಾಜುಗೆ ಅದೇ ಚಿಂತೆ. ಜಾಸ್ತಿ ಅಂಕ ಹೇಗೆ ಗಳಿಸುವುದು ಎಂದು ಆಲೋಚಿಸುತ್ತಿರುತ್ತಾನೆ. ಅವನ ತಲೆಯಲ್ಲಿ ಹಲವಾರು […]

ಕಿರುಗತೆಗಳು: ಪುನೀತ್‌ ಕುಮಾರ್‌

ಸ್ವಯಂ ಮೌಲ್ಯಮಾಪನ ಒಮ್ಮೆ ಒಬ್ಬ ಹುಡುಗ, ಒಂದು ಅಂಗಡಿಯ ಫೋನ್ನಿಂದ ಯಾರಿಗೋ ಕರೆ ಮಾಡಿ “ಅಮ್ಮ, ದಯಮಾಡಿ ನನಗೆ ಒಂದು ಕೆಲಸ ಕೊಡಿ” ಎಂದು ಕೇಳಿಕೊಳ್ಳುತ್ತಿದ್ದನು. ಅಲ್ಲೇ ಪಕ್ಕದಲ್ಲೇ ಇದ್ದ ಅಂಗಡಿಯವ ಇವನ ಮೃದು ದನಿಯ ಮಾತುಗಳನ್ನು ಕೇಳಲು ಆರಂಭಿಸಿದ. ಹುಡುಗ ಮುಂದುವರೆಯುತ್ತಾ ” ಅಮ್ಮ, ನಾನು ತುಂಬ ಬಡವ, ಮನೆಯಲ್ಲಿ ಹಣಕ್ಕಾಗಿ ತೊಂದರೆ ಇದೆ, ದಯವಿಟ್ಟು ಬೇಡ ಎನ್ನಬೇಡಿ ” ಎಂದು ಬೇಡಿಕೊಳ್ಳಲಾರಂಭಿಸಿದ. ಆದರೆ ಆ ಕಡೆಯಿಂದ ಬೇಡ ಆಗಲೇ ನಮ್ಮಲ್ಲಿ ಒಬ್ಬ ಹುಡುಗ ಕೆಲಸದಲ್ಲಿದ್ದಾನೆ. […]

ಸ್ನೇಹ ಮತ್ತು ಪ್ರೇಮವನ್ನು ಅಮರಗೊಳಿಸುವ- Shakespearean Sonnets: ನಾಗರೇಖಾ ಗಾಂವಕರ

ಸ್ನೇಹ ಎನ್ನುವುದು ಮಾನವ ಜಗತ್ತಿನ ಪ್ರಬಲ ಆಕಾಂಕ್ಷೆ ಮತ್ತು ಅದೊಂದು ಬಲ. ಸ್ನೇಹದ ಜೇನಹನಿ ಸ್ವಾದ ಸವಿದ ಮನಸ್ಸುಗಳಿಗೆ ಅದರ ಕಂಪು ಕೂಡಾ ಚಿರಪರಿಚಿತ. ಸ್ನೇಹ ಸ್ವರ್ಗದ ವಿಶಿಷ್ಟ ಕಾಣಿಕೆ. ವೈಯಕ್ತಿಕ ಜೀವನದ ಅದೆಷ್ಟೋ ಭಿನ್ನತೆಗಳು, ನ್ಯೂನ್ಯತೆಗಳು ಸ್ನೇಹದ ಪಯಣಕ್ಕೆ ಅಡ್ಡಿಯಾಗುವುದಿಲ್ಲ. ಅದಕ್ಕೊಂದು ಅಪೂರ್ವ ಉದಾಹರಣೆಯಾಗಿ ಶೇಕ್ಸಪಿಯರ್ ತನ್ನ ಜೀವಿತಾವಧಿಯಲ್ಲಿ ರಚಿಸಿದ 154 ಸಾನೆಟ್‍ಗಳಲ್ಲಿ ಮೊದಲ ಭಾಗದ ಸುಮಾರು 126 ಸುನೀತಗಳನ್ನು ತನ್ನ ಆಪ್ತ ಹಾಗೂ ಸುರಸುಂದರಾಂಗ ಶ್ರೀಮಂತ ಗೆಳೆಯನೊಬ್ಬನ ಕುರಿತು ಬರೆದಿದ್ದಾನೆ. ಆತನೊಂದಿಗಿನ ತನ್ನ ಅನುಪಮ […]

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 23 & 24): ಎಂ. ಜವರಾಜ್

-೨೩- ‘ಏಯ್, ಕೇಳಿಲ್ಲಿ..’ ಆ ಮೋರಿ ಅಂಚಿಂದ ಬೆಳಕಿನ ಜ್ವಾಲೆ ಎದ್ದು ಆ ಜ್ವಾಲೆಯೊಳಗಿಂದ ಗದರಿದಂಥ ಮಾತು. ಸಡನ್ ಎದ್ದೆ ನನಗೆ ಮಂಪರು ಆ ಬೆಳಕಿನ ಜ್ವಾಲೆ ಬೆಂಕಿ ತರ ಆಯ್ತು ಆ ಬೆಂಕಿ ಜ್ವಾಲೆಗೆ ನನ್ನ ಮಂಪರು ಅಳಿದು ಸೆಟೆದು ನಿಂತೆ. ಮೇಲೆ ಮಿಂಚು ಸೊಂಯ್ಯನೆ ಫಳಾರಂತ ಸಿಡಿಲು ಸಿಡಿಸಿಡಿ ಸಿಡಿತಾ ಗುಡುಗು ನಿಧಾನಕೆ ಗುಡುಗುಡುಗುಡುಕ್ತಾ ಇತ್ತು ‘ನನ್ ಮಾತ ನೀ ತಲಗಾಕತಿಲ್ಲ ಗಾಳಿ ಬೀಸ್ತ ಅದ ಆ ಮೋರಿಯಿಂದ ಈ ಮೋರಿಲಿ ಬಿದ್ದಿನಿ’ ‘ಅದೇನ […]

ರವಿಯು ಮಳೆಮೋಡವನು ಚುಂಬಿಸಿ ಆಗಸದಲಿ ರಂಗಿನ ರುಜು ಹಾಕಿದ: ಭಾರ್ಗವ್‌ ಹೆಚ್.‌ ಕೆ.

ಸಂಜೆ 4 ಗಂಟೆ. . ಹೈಸ್ಕೂಲಿನಲ್ಲಿ ವಿದ್ಯಾರ್ಥಿಗಳ ಸಂದಣಿ. 8ನೆಯ ತರಗತಿಯಲ್ಲಿ ಕಾಮನಬಿಲ್ಲಿನ ಬಗ್ಗೆ ಪೌರಾಣಿಕ ಕಥೆಯು ಅನುರಣಿಸುತ್ತಿತ್ತು. ಕಥಾಪ್ರಸ್ತುತಗಾರ ನಿಂಗಪ್ಪ ಮಾಸ್ಟರ್, ಲೇ. . ಆಟದ ಹೊತ್ತು ಆಯಿತು. . ಯಾವನಾದ್ರು ಹೋಗಿ ಗಂಟೆ ಹೊಡೀರಿ. ಇಷ್ಟು ಅಂದಿದ್ದೆ ತಡ. . . ಎಲ್ಲರೂ ಕೇ ಹೊ. . ಅಂತ ಮೈದಾನಕ್ಕೆ ತೆರಳಿದರು. ಮಾಳಿಂಗರಾಯನು ಮಾತ್ರ ಕದಲಲಿಲ್ಲ. ಸರ್. . ನಾವು ಏನು ಬೇಕಾದ್ರೂ ಕೇಳ್ತೀವಿ ಅಂತ ಕಾಮನಬಿಲ್ಲು ಬಗ್ಗೆ ಪೌರಾಣಿಕ ಕಥೆ ಹೇಳುತ್ತೀರಿ. ಶೃತಿ […]

ಪ್ರೀತಿಯು ಪ್ರೀತಿಯಾಗಬೇಕೇ ವಿನಃ ಹಿಂಸೆಯಾಗಬಾರದು: ನಾಗೇಶ್ ಪ್ರಸನ್ನ.ಎಸ್.

ಬಯಸಿದ್ದೆಲ್ಲಾ ಸಿಕ್ಕಿಬಿಡಬೇಕು – ಹುಟ್ಟಿದ ದಿವಸದಿಂದಲೂ ಇದು ಮನುಷ್ಯನಿಗೆ ಅಂಟಿಕೊಂಡಿರುವ ಒಂದು ತೆರನಾದ ವಿಚಿತ್ರ ಖಾಯಿಲೆ. ಈ ಖಾಯಿಲೆಯಿಂದ ಯಾರು ಹೊರಬರುತ್ತಾರೋ ಅವರೇ ಸುಖಜೀವಿಗಳು. ಇಲ್ಲದಿದ್ದರೆ, ಅವರಷ್ಟು ವಿಚಿತ್ರವಾಗಿ ನಡೆದುಕೊಳ್ಳುವವರೇ ಸಿಗುವುದಿಲ್ಲ. ಇದಕ್ಕೆ ಬುದ್ಧ ಹೇಳಿದ “ಆಸೆಯೇ ದುಃಖಕ್ಕೆ ಮೂಲ” ಎಂಬ ಮಾತು ಒಂದು ಉದಾಹರಣೆ. ಬದುಕಿನಲ್ಲಿ ಆಸೆಯನ್ನು ತ್ಯಜಿಸಿದವರು ಬಹಳಷ್ಟು ಮಂದಿ ಸಿಗುತ್ತಾರೆ. ಆದರೆ, ಪ್ರೀತಿಯಲ್ಲಿ ಆಸೆ ತ್ಯಜಿಸುವವರು ಅಥವಾ ಪ್ರೀತಿಯೆಂಬ ಆಸೆಯನ್ನೇ ತ್ಯಜಿಸುವವರು ಕೇವಲ ಬೆರಳೆಣಿಕೆಯ ಹೃದಯಗಳಷ್ಟೇ. ಈಗ ನಾನು ಆ ದಾರಿಯಲ್ಲಿ ಹೆಜ್ಜೆ […]

ಯುದ್ಧ ಗೆದ್ದ ಬಂದ ಪಾರ್ವತಿ: ಚಂದ್ರಿಕಾ ಆರ್ ಬಾಯಿರಿ

ಇದೇನಿದು ? ಯುದ್ಧ ಗೆದ್ದು ಬಂದ ಪಾರ್ವತಿ ಎಂದಾಕ್ಷಣ ಶಿವ ಪಾರ್ವತಿಯರ ಪುರಾಣ ಕಥೆ ಅಂದುಕೊಂಡಿರಾ? ಅಲ್ಲ, ಶಿವಪಾರ್ವತಿಯಂತಿರುವ ದಂಪತಿಗಳ ಕಥೆ. ಹೌದು ಮೊದಲನೆಯ ಮಗ ಸುಬ್ರಹ್ಮಣ್ಯ ಹುಟ್ಟಿ ಈಗಾಗಲೇ ಮೂರು ವರುಷ ಕಳೆದಿದೆ. ಮಗನ ಲಾಲನೆ ಪಾಲನೆ ಮಾಡಲು ಅಜ್ಜ ಅಜ್ಜಿ ಇರುವುದರಿಂದ ಮಗ ಬೆಳೆದು ದೊಡ್ಡವನಾದದ್ದೆ ಗೊತ್ತಾಗಲಿಲ್ಲ ಅವರಿಗೆ. ಕೆಲಸಕ್ಕೆ ಹೋಗಿ ಬಂದು ಮಗ ಅತ್ತೆ ಮಾವ ಗಂಡನನ್ನು ಬಹಳ ಅಕ್ಕರೆಯಿಂದಲೇ ನೋಡಿಕೊಂಡಳು ಪಾರ್ವತಿ. ಎರಡನೇ ಮಗುವಿಗಾಗಿ ಹಂಬಲಿಸುತ್ತಿದ್ದ ಗಂಡ ಈಗಲೇ ಇನ್ನೊಂದು ಮಗು […]