Facebook

Archive for 2020

ಪಂಜು ಕಾವ್ಯಧಾರೆ

ಅಪ್ಪನು ಯಾಕೋ ಹಿಂದಿದ್ದಾರೆ! ಅಮ್ಮ ಒಂಬತ್ತು ತಿಂಗಳು ಹೊತ್ತರೆ, ಅಪ್ಪ ಇಪ್ಪತ್ತೈದು ವರ್ಷ ಹೊತ್ತರೂ, ಯಾಕೋ ಅಪ್ಪ ಅಮ್ಮನಿಗಿಂತ ಹಿಂದಿದ್ದಾರೆ. ಮನೆಯಲ್ಲಿ ವೇತನ ಪಡೆಯದೆ ಅಮ್ಮ, ತನ್ನ ಸಂಪಾದನೆಯೆಲ್ಲ ಮನೆಗೆ ಖರ್ಚು ಮಾಡುವ ಅಪ್ಪ. ಇಬ್ಬರ ಶ್ರಮವೂ ಸಮಾನವಾದರು ಅಪ್ಪ ಯಾಕೋ ಹಿಂದಿದ್ದಾರೆ. ಏನು ಬೇಕೋ ಅದು ಪಾಕ ಮಾಡುವ ಅಮ್ಮ , ಏನು ಬೇಕೋ ಅದು ಕೊಡಿಸುವ ಅಪ್ಪ, ಇಬ್ಬರ ಪ್ರೀತಿಯೂ ಸಮಾನವೆಯಾದರೂ ಅಮ್ಮನಿಗೆ ಬಂದ ಹೆಸರಿಗಿಂತ ಅಪ್ಪ ಯಾಕೋ ಹಿಂದಿದ್ದಾರೆ. ಎದೆ ಮೇಲಿನ ಅಚ್ಚೆಯಲ್ಲಿ […]

ಲಾಟರಿ ಟಿಕೇಟು: ಜೆ.ವಿ.ಕಾರ್ಲೊ

ಲಾಟರಿ ಟಿಕೇಟು -ಆಂಟನ್ ಚೆಕೊವ್ ಅನುವಾದ: ಜೆ.ವಿ.ಕಾರ್ಲೊ ರಾತ್ರಿ ಊಟ ಮುಗಿಯುತ್ತಿದ್ದಂತೆಯೇ ಕೈಯಲ್ಲಿ ಪತ್ರಿಕೆಯನ್ನು ಹಿಡಿದು ಇವಾನ್ ಡಿಮಿಟ್ರಿಚ್ ಸೋಫಾದ ಮೇಲೆ ಮೈಚೆಲ್ಲಿದ. ವರ್ಷಕ್ಕೆ ಸಾವಿರದಿನ್ನೂರು ರೂಬಲುಗಳನ್ನು ದುಡಿಯುತ್ತಿದ್ದ ಅವನ ಸಂಸಾರ ನೌಕೆ ಯಾವುದೇ ವಿಘ್ನಗಳಿಲ್ಲದೆ ಸುಗಮವಾಗಿ ಸಾಗುತ್ತಿತ್ತು. “ನಾನಿವತ್ತು ಪತ್ರಿಕೆಯನ್ನು ನೋಡುವುದನ್ನೇ ಮರೆತು ಬಿಟ್ಟೆ..” ಊಟದ ಮೇಜನ್ನು ಸ್ವಚ್ಛಗೊಳಿಸಲು ಬಂದಿದ್ದ ಅವನ ಹೆಂಡತಿ ಹೇಳಿದಳು. “ಹಾಗೇ ಲಾಟರಿ ಫಲಿತಾಂಶ ಬಂದಿದೆಯಾ ನೋಡಿ.” ಎಂದಳು. ಡಿಮಿಟ್ರಿಚ್ ಪತ್ರಿಕೆಯ ಪುಟಗಳನ್ನು ತಿರುವುತ್ತಾ, “ಬಂದಿದೆ ಕಣೆ. ನೀನ್ಯಾವಾಗ ಲಾಟರಿ ಟಿಕೆಟ್ […]

ಬೆಂಗಳೂರಿನ ಬಸ್ಸಿನ ಸ್ವಗತಗಳು: ಶ್ರೀಕೊಯ

ಪ್ರಾರಂಭ. ನಾನು ಎಂದರೆ ? ಯಾರು ? ಇಗೋ ಈಗ ಹೇಳುತ್ತೇನೆ ಕೇಳಿ. ನಿಮ್ಮನ್ನು ಈ ಮಹಾ ನಗರಿಯಲ್ಲಿ ನಿಮಗೆ ಬೇಕಾದ ಸ್ಥಳಕ್ಕೆ ಹೊತ್ತೊಯ್ಯುವ ಬಸ್ಸು “ನಾನು” . ನನ್ನನ್ನು ನೀವು ’ ಬಸ್ಸಪ್ಪ’, ’ ಬಸ್ಸಣ್ಣ’ , ’ಬಂಧು’ ಎಂದೇ ಕರೆಯಬಹುದು. ನೀವು ಯಾವುದೇ ರೀತಿಯಲ್ಲಿ ಕರೆದರೊ ನನಗೆ ಬೇಸರವಿಲ್ಲ, ಏಕೆಂದರೆ ನೀವೆಲ್ಲರೊ ನನ್ನನ್ನು ದಿನವೂ ನಡೆಸಿಕೊಳ್ಳುವುದಕ್ಕಿಂತ ಅದೇ ವಾಸಿ ಎನಿಸುತ್ತದೆ. ನಾನು ಸಾಮಾನ್ಯನಲ್ಲ ಎಂಬುದು ನಿಮಗೆ ಈ ಬರಹದ ಕೊನೆಗೆ ತಿಳಿಯುತ್ತದೆ. ಬೆಂದಕಾಳೂರೆಂಬ ಒಂದು […]

ಸೋಲು: ಗಿರಿಜಾ ಜ್ಞಾನಸುಂದರ್

ಸಪ್ಪೆ ಮೊರೆ ಹಾಕಿಕೊಂಡು ಬರುತ್ತಿದ್ದ ಪ್ರೀತಿಯನ್ನು ಪಕ್ಕದ ಮನೆ ಆಂಟಿ “ಏನ್ ಪುಟ್ಟಿ! ರಿಸಲ್ಟ್ ಏನಾಯ್ತು? ಯಾವಾಗ್ಲೂ ಫಸ್ಟ್ ಬರ್ತಿದ್ದೆ ಅಲ್ವಾ. ಈಸಲ ಏನು? ಸ್ವೀಟು ಕೊಡ್ಲಿಲ್ಲ?” ಸುಮ್ಮನೆ ತಲೆ ತಗ್ಗಿಸಿ ಅಲ್ಲಿಂದ ಹೊರಟು ಬಂದಿದ್ದಳು. ಶಾಲೆಯಲ್ಲಿ ಎಲ್ಲದರಲ್ಲೂ ಮುಂದಿದ್ದ ಹುಡುಗಿ. ಇಡೀ ಶಾಲೆಗೆ ೧೦ನೇ ತರಗತಿಯಲ್ಲಿ ಎರಡನೇ ಸ್ಥಾನದಲ್ಲಿ ಪಾಸಾಗಿದ್ದವಳು. ಅವರಪ್ಪ ಅದಕ್ಕಾಗಿ ತಮ್ಮ ಸುತ್ತಮುತ್ತಲಿನ ಮನೆಗಳಿಗೆಲ್ಲ ಒಂದೊಂದು ಸ್ವೀಟ್ ಡಬ್ಬವನ್ನೇ ಹಂಚಿದ್ದರು. ತಮ್ಮ ಶಾಲೆಯಿಂದ ಬೇರೆ ಶಾಲಿಗಳಿಗೂ ಬಹಳಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ತಂದುಕೊಟ್ಟವಳು. […]

ಬೇಸಿಗೆಯ ಸಂಡಿಗೆ ಹಪ್ಪಳವೆಂಬ ಮತ್ತೊಂದು ಸಂಭ್ರಮ..!!: ರಾಜೇಶ್ವರಿ ಲಕ್ಕಣ್ಣವರ

ಬೇಸಿಗೆಯ ಬಿಸಿಲು ನೆತ್ತಿಯನ್ನು ಕಾವಲಿಯಂತೆ ಕಾಯಿಸುತ್ತಿದೆ ನಿಜ. ಆದರೆ ಬೇಸಿಗೆಯ ಬಿಸಿಲು ಬಂದರೆ ಮಾತ್ರ ಅಜ್ಜಿಗೆ ಹಾಗೂ ಅಮ್ಮನಿಗೆ ಸಂಭ್ರಮ. ತರೇವಹಾರಿ ತಿಂಡಿಗಳನ್ನು ಬೇಸಿಗೆಯಲ್ಲಿ ತಯಾರಿಸಿ ವರ್ಷಪೂರ್ತಿ ಕಾಪಿಟ್ಟುಕೊಳ್ಳಬಹುದಲ್ಲ ಎಂಬ ಸಂತೋಷವೇ ಅವರ ಮೊಗದಲ್ಲಿ ಮನೆ ಮಾಡಿರುತ್ತದೆ. ಮಳೆಗಾಲದಲ್ಲಿ ಜೋರು ಮಳೆಗೆ, ಬೀಸುವ ಚಳಿಗೆ, ಹಬ್ಬದೂಟಗಳಿಗೆ ಹಪ್ಪಳ, ಸಂಡಿಗೆ, ಚಿಪ್ಸ್, ಮುಂತಾದವುಗಳು ಬೇಕೆ ಬೇಕೆಂಬುದು ಅವರಿಗಲ್ಲದೆ ಮತ್ಯಾರೂ ತಾನೇ ಅಷ್ಟೊಂದು ಚೆನ್ನಾಗಿ ಅರಿಯಲು ಸಾಧ್ಯ. ಇಂತಹ ತಿಂಡಿಗಳನ್ನು ತಯಾರಿಸಲು ಮಳೆಗಾಲ ಹಾಗೂ ಚಳಿಗಾಲ ಪ್ರಾಶಸ್ತ್ಯವಾದ ಸಮಯವಲ್ಲವೆಂದು ಗೊತ್ತಿರುವದರಿಂದ […]

ಬಂಧಗಳು, ಸಂಬಂಧಗಳು. ಸತ್ಯ… ಆದರೆ ಶಾಶ್ವತ ಅಲ್ಲ… : ಭಾರ್ಗವಿ ಜೋಶಿ

ಬದುಕಿನ ದೋಣಿಯ ಪಯಣದಲ್ಲಿ ಹಲವಾರು ರೀತಿಯ ಬಂಧಗಳು, ಸಂಬಂಧಗಳು ಬೆಸೆದಿರುತ್ತವೆ. ಕೆಲವು ಗಟ್ಟಿಯಾಗಿ ಬೇರೂರಿರುತ್ತವೆ ನಮ್ಮ ಮನಸಲ್ಲಿ ಮತ್ತು ಜೀವನದಲ್ಲಿ. ಕೆಲವು ಹೀಗೆ ಬಂದು ಹಾಗೆ ಹೋಗಿ ಬಿಡುತ್ತವೆ. ಹುಟ್ಟಿದಾಗ ಜೊತೆಯಲ್ಲಿ ಬಂದ ಸಂಬಂಧಗಳನ್ನು ರಕ್ತ ಸಂಬಂಧಗಳು ಎನ್ನುತ್ತೇವೆ. ಅವು ಎಂದಿಗೂ ಮಾಸದವು. ಬೇಕಾಗಲಿ, ಬೇಡವಾಗಲಿ ಮುಗಿಯದ ಅನುಬಂಧ ಅದು. ಯಾವುದೊ ಕೋಪ, ಬೇಜಾರು ಏನೇ ಬಂದ್ರು ಮತ್ತೆ ಸ್ವಲ್ಪ ಸಮಯಕ್ಕೆ ತಾನಾಗೇ ಎಲ್ಲ ಮರೆತು ಬೆಸೆವಂತೆ ಮಾಡುತ್ತದೆ. ಕೆಲವು ಸಂಬಂಧಗಳು ಎಂದೂ ಬೆಸೆಯದ ಹಾಗೆ ದ್ವೇಷ […]

ಕತ್ತಲು ಬೆಳಕಿನ ಹೊಯ್ದಾಟದಲ್ಲಿ ತೆರೆದ ಪತ್ರ ಪುಟಗಳು: ಪಿ.ಎಸ್. ಅಮರದೀಪ್.

ಮೂರು ದಿನದ ಹಿಂದೆ ಮನೆಯಲ್ಲಿ ಬೀಳುವ ಎಳೆ ಬಿಸಿಲಿಗೆ ಕುಳಿತ ಮಗನ ಮುಖದ ಮೇಲೆ ಕಿರಣಗಳು ಫಳಫಳಿಸುತ್ತಿದ್ದವು. ಅವನ ಮುಂದೆ ಫೈಬರ್ ಛೇರ್ ನೊಳಗೆ ಇಣುಕುವ ತುಂಡು ತುಂಡು ಚೌಕಾಕಾರದ ಕತ್ತಲು ಅವನ ಮುಖದ ಮೇಲಿತ್ತು. ತಕ್ಷಣವೇ ಕ್ಯಾಮೆರಾ ತೆಗೆದುಕೊಂಡು ಫೋಟೋ ಕ್ಲಿಕ್ಕಿಸಿದೆ. ಬ್ಯಾಕ್ ಟು ಬ್ಯಾಕ್ ನನಗೆ ಕತ್ತಲು ಬೆಳಕಿನ ಚಿತ್ರ ತೆಗೆವ ನನ್ನ ಕುತೂಹಲದ ಕಡೆ ಗಮನ ತೇಲಿತು. ಯಾಕೆ ನಾನು ಈ ಕತ್ತಲು ಬೆಳಕಿನ ಚಿತ್ರಗಳ ಸೆಳೆತಕ್ಕೆ ಬಿದ್ದೆ? ಯಾವಾಗಿನಿಂದ ಈ ಫೋಟೋ […]

ಕೈಯಲ್ಲಿ ಏಳು ಡಾಲರ್ ಹಿಡಿದು ಸ್ವಾಮೀಜಿ ಹೊರಟೇ ಬಿಟ್ಟರು : ಅಭಿಜಿತ್. ಎಮ್

ಇಸ್ಕಾನ್(ISKCON). ಈ ಸಂಸ್ಥೆಯ ಹೆಸರು ನೀವೆಲ್ಲರೂ ಕೇಳಿರಬಹುದು. ಇಂದು ಹೊರದೇಶಗಳಲ್ಲಿಯೂ ಹಿಂದೂ ಮಂದಿರಗಳಿವೆ ಎಂದರೆ, ಅದಕ್ಕೆ ಇಸ್ಕಾನ್ ಸಂಸ್ಥೆಯ ಕೊಡುಗೆ ಅಪಾರ. ಆದರೆ ಈ ಸಂಸ್ಥೆಯ ಸ್ಥಾಪಕರ ಬಗ್ಗೆ ಭಾರತದಲ್ಲಿಯೇ ತಿಳಿದಿರುವವರ ಸಂಖ್ಯೆ ಬಹಳ ಕಡಿಮೆ. ನೀವು ಯಾವುದಾದರೂ ದೇವಸ್ಥಾನಕ್ಕೆ ಹೋದಾಗಲೋ ಅಥವಾ ಜಾತ್ರೆಗಳಲ್ಲಿಯೋ ಅಥವಾ ಪುಸ್ತಕ ಮೇಳಗಳಲ್ಲಿಯೋ ಖಾದಿ ತೊಟ್ಟು, ತಲೆ ಹಿಂದೆ ಜುಟ್ಟು ಇರಿಸಿ, ಹಣೆ ಮೇಲೆ ಗಂಧದ ತಿಲಕವನ್ನು ಇಟ್ಟುಕೊಂಡು ಶ್ರೀಮದ್ ಭಗವದ್ಗೀತೆ ಗ್ರಂಥವನ್ನು ಮಾರಾಟ ಮಾಡುತ್ತಿರುವುದನ್ನು ನೀವು ಗಮನಿಸಿರಬಹುದು. ಇವರ ಎಲ್ಲಾ […]

ಉರಿಯುವ ಒಲೆಯೂ ಮತ್ತು ಹೊಳೆಯುವ ನಕ್ಷತ್ರವೂ ! : ಈರಮ್ಮ ಹಾವರಗಿ

ಈ ಬದುಕು ಕೇವಲ ಅನಿಶ್ಚಿತತೆಗಳ ನಡುವೆಯೇ ಕಳೆದು ಹೋಗಿ ಬಿಡುತ್ತದೆನೋ ಎಂಬ ಜಿಜ್ಞಾಸೆ ಮೂಡುತ್ತಿದೆ. ಏನನ್ನು ಸಾಧಿಸಲಾಗದೆ, ಅಂದುಕೊಂಡಂತೆ ಬದುಕಲಾಗದೆ ಜೀವನ ವ್ಯರ್ಥವಾದರೆ ಹೇಗೆ ? ಎಂಬ ನನ್ನ ಮನದ ದುಗುಡವನ್ನು ಹೇಳುವುದಕ್ಕೂ ಆಗದ ಪರಿಸ್ಥಿತಿ. ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಡುತ್ತೇನೆ, ಜೊತೆಗೆ ಮದುವೆ,ಮಕ್ಕಳು, ಸಂಸಾರವೆಂಬ ಸಮಾಜದ ಕಟ್ಟು ಪಾಡುಗಳಿಗೆ ಹೆದರಿದ್ದೇನೆ. ಹಾಗಂತ ನಾನು ಅದನ್ನೆಲ್ಲ ವಿರೋಧಿಸುತ್ತಿಲ್ಲ. ನಮ್ಮ ಕನಸುಗಳಿಗೆ ಬೆಲೆ ಕೊಡದೆ ಹೆಣ್ಣನ್ನು ದ್ವಿತೀಯ ದರ್ಜೆಯ ಪ್ರಜೆಯನ್ನಾಗಿ ನೋಡಲಾಗುತ್ತಿದೆ, ಚಿಕ್ಕ ವಯಸ್ಸಿನಲ್ಲಿಯೆ ಮದುವೆ ಮಾಡಲಾಗುತ್ತಿದೆ. ನಮ್ಮ […]

ಸುಂದರ ಬದುಕಿನ ಸುಖಾಂತ ನಾಟಕ-As You Like It: ನಾಗರೇಖಾ ಗಾಂವಕರ

ಶೇಕ್ಸಪಿಯರ ರಿನೈಜಾನ್ಸ್ ಕಾಲದ ಶ್ರೇಷ್ಟ ನಾಟಕಕಾರ. ಇಂಗ್ಲೆಂಡಿನಲ್ಲಿ ಕ್ವೀನ ಎಲಿಜಬೆತ್ ಆಳ್ವಿಕೆಯ ಕಾಲ ಅದು. ಆತ ಬರೆದ As You Like It ರೋಮ್ಯಾಂಟಿಕ ಕಾಮೆಡಿ. ಗೊಲ್ಲ ಅಥವಾ ದನಗಾಯಿ ಸಂಪ್ರದಾಯದ ಕಾಲ್ಪನಿಕ ರಮಣೀಯ ಗ್ರಾಮೀಣ ಸೊಬಗನ್ನು ಕಟ್ಟಿಕೊಡುತ್ತ ಗೊಲ್ಲ ಜನಾಂಗದ ವೈಭವೀಕೃತ ಬದುಕನ್ನು ವಿಫುಲವಾಗಿ ತನ್ನ ಕಾವ್ಯದಲ್ಲಿ ವಿಜೃಂಬಿಸುತ್ತಾನೆ ಶೇಕ್ಸಪಿಯರ್. ರೋಮ್ಯಾಂಟಿಕ ಕಾಮೆಡಿಗಳಲ್ಲಿ ಪ್ರೇಮ ಪ್ರಮುಖವಾದ ಆಶಯ. ಇಟಲಿಯ ಡ್ಯೂಕ್ ಸಿನಿಯರ್ ತನ್ನ ಸ್ವಂತ ಸಹೋದರನ ಕರಾಮತ್ತಿಗೆ ಬಲಿಯಾಗಿ ರಾಜ್ಯಭ್ರಷ್ಟನಾಗಿ ಆರ್ಡನ್ ಕಾಡಿನಲ್ಲಿ ತನ್ನ ಸಂಗಡಿಗರೊಂದಿಗೆ […]