ಪಂಜು ಕಾವ್ಯಧಾರೆ

ಗಜಲ್ ಕಣ್ಣು ಬೇರಸಿ ಬಿಡು ಏಕಾಂತದ ಸುಖ ಸಿಗಲಿ ಸಖ ಮನಸಿನ ಸಂಭ್ರಮಕೆ ಸುಖ ತುಂಬಿ ಬರಲಿ ಸಖ ಯಾರ ಸಲುವಾಗಿ ಬದುಕು ನೊಂದಿತ್ತು ಅವರೆ ಆನಂದಿಸಲಿ ಇಬ್ಬರು ಕಳೆದ ಕತ್ತಲೆಗೆ ನೆನಪುಗಳ ಬೆಳಕು ಬರಲಿ ಸಖ ಗಿಡ ಮರ ಬಳ್ಳಿಗಳು ಹೂವ ಚೆಲ್ಲಿ ನಿಂತಿವೆ ನಮ್ಮೊಲವಿನ ಮಾತು ಸವಿಯಲು ಮೌನ ಮುರಿದು ಹೂವಿನ ಹಾಸಿಗೆ ಮೇಲೆ ನಡೆದು ಹೋಗಲಿ ಸಖ ಕಾಡಿ ಜೀವ ಹಿಂಡಿ ಜಾತಿಯ ಕೆಂಬಣ್ಣ ಹಚ್ಚಿ ಅಡ್ಡಗೋಡೆ ಕಟ್ಟಿದರು ವೈಭವದ ಮೆರವಣಿಗೆಯಲಿ ಬಂದು … Read more

ಇಂದಿರಾ ಕ್ಯಾಂಟೀನ್‌ ಹೆಸರನ್ನು ಡಾ. ಅಂಬೇಡ್ಕರ್‌ ಕ್ಯಾಂಟೀನ್‌ ಅಂತ ಮರುನಾಮಕರಣ ಮಾಡೋಕೆ ಆಗುತ್ತಾ?: ಡಾ. ನಟರಾಜು ಎಸ್.‌ ಎಂ.

ನಮ್ಮೂರಿನ ಬಳಿ ಒಂದು ಗಾರ್ಮೆಂಟ್ಸ್ ಫ್ಯಾಕ್ಟರಿ ಇದೆ. ಅಲ್ಲಿ ಸಾವಿರಾರು ಜನ ಕೆಲಸ ಮಾಡುತ್ತಾರೆ. ಪುಟ್ಟ ಹಳ್ಳಿಯಲ್ಲಿ ತೆರೆದುಕೊಂಡ ಈ ಗಾರ್ಮೆಂಟ್ ಫ್ಯಾಕ್ಟರಿ ನಮ್ಮ ಕಡೆಯ ಅನೇಕ ಜನರಿಗೆ ಉದ್ಯೋಗ ಕಲ್ಪಿಸಿದೆ. ದೂರದ ಊರುಗಳಿಂದಲೂ ಸಹ ಜನ ಬಂದು ಅಲ್ಲಿ ದುಡಿಯುತ್ತಾರೆ. ಫ್ಯಾಕ್ಟರಿ ಅಕ್ಕ ಪಕ್ಕ ಸಣ್ಣಪುಟ್ಟ ಅಂಗಡಿ, ಹೋಟೆಲ್ ಗಳು ತೆರೆದುಕೊಂಡಿವೆ. ಫ್ಯಾಕ್ಟರಿ ಊಟದ ಸಮಯ ಮತ್ತು ಬಿಟ್ಟ ಸಮಯದಲ್ಲಿ ಇಲ್ಲಿನ ಅಂಗಡಿ ಮತ್ತು ಹೋಟೆಲ್ ಗಳಲ್ಲಿ ಸಣ್ಣಪುಟ್ಟ ವ್ಯಾಪಾರ ವಹಿವಾಟು ನಡೆಯೋದು ಸಹಜ. ಸಣ್ಣಪುಟ್ಟ … Read more

ದೇವ್ರಾಟ..: ತಿರುಪತಿ ಭಂಗಿ

ಪ್ಯಾಟಿಗೆ ಹೋಗಿದ್ದ ಹನಮ್ಯಾ ಪೋಲಿಸರ ಕೈಯಾಗ ಸಿಕ್ಕಾಕ್ಕೊಂಡ ಬಲ್ಲಂಗ ಗಜ್ಜತಿಂದಿದ್ದ. ‘ಸತ್ನೋ ಯಪ್ಪಾ..’ ಅಂತ ನರಳ್ಯಾಡಕೋತ, ಕುಂಟಕೋತ, ಕುಂಡಿಮ್ಯಾಲ ಗಸಾಗಸಾ ತಿಕ್ಕೋತ ಮನಿಹಾದಿ ಹಿಡದಿದ್ದ. “ಈ ಪೋಲಸ್ರಿಗೆ ಮುಕಳಿ-ಮಾರಿ ಯಾವ್ದಂತ ಒಂದೂ ಗೊತ್ತಿಲ್ಲ, ದಬಾದಬಾ ದನಾ ಬಡ್ದಂಗ ಬಡಿತಾರ, ನಮ್ದ ಎಂತ ಸರಕಾರೋ,ಎಂತಾ ಕಾನೂನೋ..ಏನ್ ಆಡಳಿತಾನೋ..ನಮ್ಮ ದೇಶದಾಗ..! ಎಲ್ಲ ದೇವ್ರಾಟ. ಮೈತುಂಬ ಹಿಗ್ಗಾಮುಗ್ಗಾ ಪೋಲಿಸ್ರು ಥಳಸಿದ ಏಟಿಗೆ ಹನಿಮ್ಯಾನಿಗೆ ಎಂದೂ ನೆನಪಾಗದ ದೇಶದ ಸರಕಾರ, ಕಾನೂನು, ಆಡಳಿತಗಳೆಲ್ಲ ನೆನಪಾಗಿ ಮೈತುಂಬ ಪರಚಿದಂತಾದವು. ನಮಗ ರಕ್ಷಣಾ ಕೊಡವ್ರ ನಮಗ … Read more

ರಾಮಾಯಣದಲ್ಲಿ ಕಾಡುವ ಪಾತ್ರ ಉರ್ಮೀಳಾ: ಶ್ರೇಯ ಕೆ ಎಂ ಶಿವಮೊಗ್ಗ

ನಾವು ಹುಟ್ಟಿದಾಗಿನಿಂದಾನು ರಾಮಾಯಣ ಮಹಾಭಾರತಗಳೆರಡನ್ನು ನೋಡಿಕೊಂಡು ಕೇಳಿಕೊಂಡು ಓದಿಕೊಂಡು ಬೆಳೆದವರು.. ನಮ್ಮ ಅಜ್ಜಿ ದೊಡ್ಡಮ್ಮನ ಬಾಯಲ್ಲಿ ಎಲ್ಲಾ ಪಾತ್ರಗಳು ಕರತಲಾಮಲಕ ಆಗಿದ್ದವು, ಯಾವುದೇ ಸನ್ನಿವೇಶವನ್ನಾದರೂ ಲೀಲಾಜಾಲವಾಗಿ ಹೇಳುತ್ತಿದ್ದ ಪರಿ ಎಂಥವರನ್ನು ಭಾವಪರವಶ ಮಾಡುತ್ತಿತ್ತು. ಹಾಗೆಯೆ ನಾವೇನು ಇದರಿಂದ ಹೊರತಲ್ಲ, ಹೀಗೆ ಕೇಳುತ್ತ ಬೆಳೆದ ನಾವು ಅವರ ಬಾಯಲ್ಲಿ ರಾಮ ಲಕ್ಷ್ಮಣ ಸೀತೆ ಎಲ್ಲರೂ ದೇವರೇ, ಆದರೆ ಅ ಚಿಕ್ಕ ವಯಸ್ಸಲ್ಲೇ ನಂಗೆ ಕಾಡುತ್ತಿದ್ದ ಪಾತ್ರ ಊರ್ಮಿಳೆ, ದೊಡ್ಡವರು ಹೇಳುವ ಪ್ರಕಾರ ಊರ್ಮಿಳೆ ಆರಾಮಾಗಿ ರಾಜ್ಯದಲ್ಲಿ ಇದ್ದು ರಜಾ … Read more

ಕರೋನಾ ಕರ್ಫ್ಯೂ ಕಲಿಸುತ್ತಿರುವ ಪಾಠ: ಹೊ.ರಾ.ಪರಮೇಶ್ ಹೊಡೇನೂರು

ಅತ್ಯಾಧುನಿಕ ಕಾಲಘಟ್ಟದಲ್ಲಿ ಬದುಕುತ್ತಿರುವ ನಾವು ಇಂದು ವೈಜ್ಞಾನಿಕವಾಗಿ ಸಾಕಷ್ಟು ಸಾಧಿಸಿದ್ದೇವೆ, ವೈಚಾರಿಕ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ಬುದ್ಧಿವಂತರೆಂದು ಬೀಗುತ್ತಿದ್ದೇವೆ, ಉನ್ನತ ಶಿಕ್ಷಣವನ್ನು ಪಡೆದು, ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸುವ ನೌಕರಿ ಹಿಡಿದುಕೊಂಡು ಐಷಾರಾಮಿ ಜೀವನವನ್ನು ನಡೆಸುತ್ತಿದ್ದೇವೆ. ತಾಂತ್ರಿಕವಾಗಿ ಮುಂದುವರೆದು ಇಡೀ ಪ್ರಪಂಚದ ಯಾವುದೇ ಮೂಲೆಯಲ್ಲಿ ಏನೇ ವಿದ್ಯಮಾನ ಘಟಿಸಿದರೂ ಕ್ಷಣಾರ್ಧದಲ್ಲಿ ವೀಕ್ಷಿಸುವ ಮಾಧ್ಯಮಗಳನ್ನು ಸೃಷ್ಟಿಸಿಕೊಂಡಿದ್ದೇವೆ. ಮಂಗಳನ ಅಂಗಳದಲ್ಲಿ ಆಟವಾಡುವಷ್ಟು ಸಾಮರ್ಥ್ಯವನ್ನು ಹೊಂದಿದ್ದೇವೆ, ಚಂದ್ರನ ಮೈಲ್ಮೈಯಲ್ಲಿ ತುಸುಹೊತ್ತು ವಿರಮಿಸುವಷ್ಟರ ಮಟ್ಟಿಗೆ ಸಂಶೋಧನಾ ಕಾರ್ಯಗಳನ್ನು ಕೈಗೊಂಡು ಯಶಸ್ಸು ಕಂಡಿದ್ದೇವೆ. ವೈದ್ಯಕೀಯ ಲೋಕದ ಅದ್ಭುತವಾದ … Read more

ಶೃತಿ ನೀ ಮಿಡಿದಾಗ: ವರದೇಂದ್ರ.ಕೆ ಮಸ್ಕಿ

ಸದಾ ಕಪ್ಪು ಕೂದಲ ಗಡ್ಡಧಾರಿ ಮಿಂಚು ಮಾತುಗಳ ರಾಯಭಾರಿ ನಗುವಿನ ಸಮಯಗಳಿಗೆ ಸೂತ್ರಧಾರಿ. ರಸವತ್ತಾದ ಹೃದಯ ಸಿಂಹಾಸನದಿ ನೆಲೆ ಊರುವ ಅಧಿಕಾರಿ, ಅಂಗಾರಕನ ಬಣ್ಣ ಗರುವಿನ ವಿಶಾಲ ಮನ, ಅವನಿಯ ತಾಳ್ಮೆ ಸುಗುಣಗಳ ಗಣಿ ಸುಶಾಂತ ಒಲವಿನ ಪುಷ್ಪ ಹಿಡಿದು ಬದುಕೆಲ್ಲ ನೀನೆ, ನೀನಿಲ್ಲದೆ ಮತ್ತೇನಿದೆ ನಿನ್ನ ಒಲವಿನ ಒಂದು ಬೊಗಸೆಯಲಿ ನನ್ನ ಹಿಡಿದುಬಿಡು ಗೆಳತಿ ಎಂದು ದೊಂಬಾಲು ಬಿದ್ದವನ ಅಸ್ತಿತ್ವ ಅವಳ ಒಲುಮೆ ಪಡೆಯಲು ಕಳೆದುಹೋದರೂ ಪರವಾಗಿಲ್ಲ ಎನ್ನುವಷ್ಟು ಹುಚ್ಚು ಪ್ರೇಮ ಹಚ್ಚಿಕೊಂಡವನು. ಸದಾ ಕಣ್ಗಳಲಿ … Read more

ಕೊನೆಗೂ ದುಷ್ಟ ಸಂಹಾರಕ್ಕೆ ಮುನ್ನುಡಿ: ಭಾರ್ಗವಿ ಜೋಶಿ.

ಬರಿ ಈ ಕೊರೊನ, ಕೊರೊನ ಅಂತ ಆ ಕೀಟದ ಹಾವಳಿಯ ಮಧ್ಯ ಬೇರೆ ಬದುಕನ್ನೆಲ್ಲ ಮರೆತು ಬಿಟ್ಟಿದ್ದೇವೆ. ಹೋದ ತಿಂಗಳು ಭಾರತದಲ್ಲಿ ನಡೆದ ಒಂದು ಘಟನೆ ಇಂದು ಇತಿಹಾಸವೇ ಸರಿ. ನಿರ್ಭಯ ಅನ್ನುವ ಹೆಣ್ಣುಮಗಳನ್ನು ಅಷ್ಟು ಅಮಾನುಷವಾಗಿ ಹಿಂಸಿಸಿ ಕೊಂದ ಪಾತಕಿಗಳನ್ನು ಗಲ್ಲಿಗೆ ಬಲಿಕೊಡಲಾಯಿತು. ಅಂದು ಗಲ್ಲಿನ ಕುಣಿಕೆಗೆ ಕತ್ತು ನೀಡುವಾಗ ಅವರ ಮನಸುಗಳು ಎಷ್ಟು ಒದ್ದಾಡಿರಬಹುದು. ಅಯ್ಯೋ ಸಾವು ಕಣ್ಣಮುಂದೆ ಇದೆ ಎಂದಾಗ ಎಷ್ಟು ಭಯಾನಕ. ನಮ್ಮನ್ನು ಬದುಕಿಸಿ, ಒಂದು ಅವಕಾಶ ಕೊಡಿ ಎಂದು ಕೊನೇ … Read more

ಶೇಕ್ಸಪಿಯರನ ‘ Measure for measure ’ – ಡಂಭ ಚಹರೆ ಮತ್ತು ಕಟು ವಾಸ್ತವಗಳು: ನಾಗರೇಖ ಗಾಂವಕರ

ಡಾರ್ಕ ಕಾಮೆಡಿ ಎಂದೇ ಪ್ರಸಿದ್ಧವಾದ ಶೇಕ್ಸಪಿಯರನ Measure for measure ನಾಟಕ ತಾತ್ವಿಕ ಮತ್ತು ನೈತಿಕ ಸಂಘರ್ಷಗಳನ್ನು ಆಳವಾಗಿ ವಿಶ್ಲೇಷಿಸುವ ಮೂಲಕ ಗಮನ ಸೆಳೆಯುತ್ತದೆ. ನಾಟಕದ ಮುಖ್ಯ ಪಾತ್ರ ಎಂಜೆಲ್ಲೋ ಹಾಗೂ ಮತ್ತೊಬ್ಬಳು ಇಸಾಬೆಲ್ಲಾ ಈ ಸಂಘರ್ಷದ ಅಡಕತ್ತರಿಯಲ್ಲಿ ಸಿಕ್ಕಿ ಬೀಳುತ್ತಾರೆ. ನಾಟಕದ ಕೇಂದ್ರ ವಸ್ತುವೇ ಅದಾಗಿದ್ದು ತನ್ನ ಶೀಲವನ್ನು ರಕ್ಷಿಸಿಕೊಂಡು ತನ್ನತನವನ್ನು ಉಳಿಸಿಕೊಳ್ಳುವ ಇಲ್ಲವೇ ಅಣ್ಣನ ಪ್ರಾಣ ಉಳಿಸಲು ನೈತಿಕತೆಯನ್ನು ಮಾರಿಕೊಳ್ಳುವ ಸಂದಿಗ್ಧತೆಯಲ್ಲಿ ಇಸಾಬೆಲ್ಲಾ ತೊಳಲಾಡುತ್ತಾಳೆ. ಮುಖವಾಡದ ಧರ್ಮನಿಷ್ಠೆಯನ್ನು, ಸೈದ್ಧಾಂತಿಕ ಪ್ರತಿಪಾದನೆಯನ್ನು ಮಾಡುವ ಎಂಜೆಲ್ಲೋ ವ್ಯಕ್ತಿಗತ … Read more

ಅಳಿವಿನ ಅಂಚಿನಲ್ಲಿ ಮಾನವ ಕುಲ…? !: ಶಶಿಧರ ರುಳಿ

ರಸ್ತೆಯಲ್ಲಿ ಹೋಗುವಾಗ ಗಿಡದಲ್ಲಿಯ ಹೂವೊಂದು ಕಮರಿ ಹೋಗಿದ್ದು ಕಂಡಿತು. ಮುದುಡಿದ ಆ ತಾವರೆ ಕದಡಿದ ನನ್ನ ಮನಸ್ಸಿಗೆ ಸಾಕ್ಷಿಯಾಗಿ ನಿಂತಂತೆ ತೋರುತ್ತಿತ್ತು. ರಣ ಬಿಸಿಲಿನ ಹೊಡೆತಕ್ಕೆ ಬಾಡಿಹೋದ ಅದರ ಸುಂದರ ಪಕಳೆಗಳು ಯಾವುದೋ ಒಂದು ಕಾಲದಲ್ಲಿ ವೈಭವೋಪಿತ ಕಟ್ಟಡವಾಗಿದ್ದು ಈಗ ಬಿದ್ದುಹೋದ ಗೋಡೆಗಳು ಅದರ ಪಳಿಯುಳಕೆಯಂತೆ ಕಂಡವು. ಬೆಳಗಿನ ಜಾವ ಅರಳಿ ಸಂಜೆಯಾಗುತ್ತಿದ್ದಂತೆ ನಿಸ್ತೇಜವಾದ ಹೂವಿನ ಸುಂದರ ತನು, ಜೀವನದ ಕ್ಷಣಿಕತೆಯ ನೀತಿ ಹೇಳುತ್ತಿರುವಂತೆ ಅನಿಸಿತು. ಈ ಮೂಲಕ ಬದುಕಿನ ಪಯಣ ರಭಸದ ಯಾತ್ರೆ ಎಂಬ ಸತ್ಯವನ್ನು … Read more

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 13 & 14): ಎಂ. ಜವರಾಜ್

೧೩- ಬಿಸ್ಲು ಬಿಸ್ಲು ಏನಪ್ಪಾ ಬಿಸ್ಲು ಉಸ್ಸ್… ಅಲಲಲಾ ಏಯ್,  ಮಲ್ಗಿ ನಿದ್ರಾ ಮಾಡ್ತ ಇದ್ದಯ ಎದ್ರು ಮ್ಯಾಕ್ಕೆ.. ಬೆಚ್ಚಿ ಬೆರಗಾಗಿ ಒರಗಿದ ಕಂಬದಿಂದ ತಲೆ ಎತ್ತಿದೆ ಮಂಪರಿಡಿದ ಕಣ್ಣು ತೆರೆಯುತ್ತ ಎದುರು ದಿಟ್ಟಿಸಿದೆ ಫಳಾರ್ ಮಿಂಚಾಯ್ತಲ್ಲಾ.. ಅಯ್ನೋರ್ ಮಲ್ಗಿ ನಿದ್ರ ಮಾಡ್ತ ಒದ್ದಾಡ್ತ ನಾ ಬೆಂಕಿ ಬಿಸುಲ್ಲಿ ನರಳಾಡ್ತ ಇದ್ರ ನೀ ಸುಖವಾಗಿ ನಿದ್ರ ಮಾಡ್ತ ಇದ್ದಯ ನಾನೇನು ದೆವ್ವುಕ್ಕು ಭೂತುಕ್ಕು  ಹೇಳವ್ನು ಅನ್ಕಂಡಿದ್ದಯ.. ಇಲ್ಲ ಹೇಳು ಚೂರು ಮಂಪ್ರಾಯ್ತು.. ಅದೆ ಅಯ್ನೋರು ಮರದ ಕೆಳಗೆ … Read more

ಮೌನಯುದ್ಧದೊಂದಿಗೆ ನನ್ನ ಮಾತು: ಹೆಚ್. ಷೌಕತ್ ಆಲಿ

ಕವಿ ಸುರೇಶ ಎಲ್. ರಾಜಮಾನೆರವರು ಅಪ್ಪಟ ಕನ್ನಡಭಿಮಾನಿ, ವೃತ್ತಿಯಲ್ಲಿ ಶಿಕ್ಷಕನಾಗಿ ಪ್ರವೃತ್ತಿಯಲ್ಲಿ ಒಬ್ಬ ಕವಿಯಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ತನ್ಮೂಲಕ ಪ್ರಕಾಶಿಸುವ ಬೆಳಗಲಿ ದೀಪ. ಹುಟ್ಟೂರು ಮಹಾಕವಿ ರನ್ನನ ಊರೇ ಆಗಿರುವಾಗ ಆ ಛಾಪು ಕವಿ ಸುರೇಶನಲ್ಲಿಯೂ ಕಾಣಬಹುದಾಗಿದೆ. ಆ ನಿಟ್ಟಿನಲ್ಲಿ ಕವಿಯ ದ್ವೀತಿಯ ಕೃತಿ ರತ್ನ ‘ಮೌನಯುದ್ಧ’ ಮತ್ತೆ ಮತ್ತೆ ಓದಿದ ನಂತರ ಈ ಒಂದು ವಿಮರ್ಶೆಗೆ ನಾನು ಕೈಹಾಕಿದೆ ಓದುಗರು ಇಷ್ಟ ಪಡುವಂತಹ ಅನೇಕ ಅಂಶಗಳು ಈ ಕೃತಿಯಲ್ಲಿ ಅಡಕವಾಗಿದೆ. ಸರಳ ಭಾಷೆಯ ಸುಂದರ … Read more

ಮಕ್ಕಳ ಕವಿತೆ

ಅಲ್ಲಿದ್ದವರೆಲ್ಲರೂ ರೈಲಿಗಾಗಿ ಕಾಯುತ್ತಿದ್ದವರೇ, ಆದರೆ ಅವರಲ್ಲಿ ಯಾರಿಗೂ ಕಛೇರಿಗೆ ತಡವಾಗುತ್ತೆ ಅನ್ನುವವರಿರಲಿಲ್ಲ, ಊರಿಗೆ ಹೋಗಲು ಸಮಯವಾಗುತ್ತೆ ಅನ್ನುವ ಛಾಯೆಯೂ ಅವರ ಮುಖದಮೇಲೆ ಕಾಣಲಿಲ್ಲ, ಆದರೂ ಅದು ರೈಲ್ವೆ ನಿಲ್ದಾಣ, ಅಲ್ಲಿದ್ದ ಪ್ರಯಾಣಿಕರಲ್ಲಿ ಮಕ್ಕಳ ಸಂಖ್ಯೆಯೇ ಹೆಚ್ಚು. ಚುಕು ಬುಕು ಚುಕು ಬುಕು ಅಂತ ಕೂಗುತ್ತಾ ಬಂದಿದ್ದು ಮಕ್ಕಳ ನೆಚ್ಚಿನ ಪುಟಾಣಿ ಎಕ್ಸಪ್ರೆಸ್ ಇದೆಲ್ಲಾ ಕಂಡು ಬಂದದ್ದು ಬೆಂಗಳೂರಿ ಕಬ್ಬನ್ ಪಾರ್ಕ ನಲ್ಲಿರುವ ಬಾಲಭವನದಲ್ಲಿ. ಇದು ಕೊರೊನಾಗಿಂತ ಮುಂಚೆ ಇದೀಗ ಬಾಲಭವನದಲ್ಲಿನ ಪುಟಾಣಿ ಎಕ್ಸಪ್ರೆಸ್ ಮಕ್ಕಳನ್ನು ಹೊತ್ತು ತಿರುಗಲು … Read more

ವಿಷಾದ-೧ (ಸಂಬಂಧಗಳಲ್ಲಿ): ಸಹನಾ ಪ್ರಸಾದ್‌

ಮ್ಯಾನೇಜುಮೆಂಟಿನಲ್ಲಿ “ಅಪರೇಷನ್ಸ್ ರಿಸರ್ಚ್” ಎಂಬ ವಿಷಯವುಂಟು. ಮೂಲತಃ ಅದು ಗಣಿತ ಹಾಗೂ ಸಂಖ್ಯಾಶಾಸ್ತ್ರದಲ್ಲಿ ಒಂದು ವಿಭಾಗ. ಇರುವ ಸಮಯ, ಸಾಮಾಗ್ರಿ, ಸಂಪನ್ಮೂಲಗಳು ಅತ್ಯುತ್ತಮವಾಗಿ ಬಳಸಿಕೊಳ್ಳುವುದು ಹೇಗೆ? ಎಂಬುದು ಇದರ ತಿರುಳು. ಇದರಲ್ಲಿರುವ ಬಹಳಷ್ಟು ತತ್ವಗಳನ್ನು ನಾವು ನಿಜ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಬದುಕು ಗಮನಾರ್ಹವಾಗಿ ಸುಧಾರಿಸುತ್ತದೆ. ಇದನ್ನು ಅಳವಡಿಸಿಕೊಳ್ಳಲು ನಾವು ಗಣಿತ ಮತ್ತಿತರ ವಿಷಯಗಳಲ್ಲಿ ನಿಪುಣರಾಗಬೇಕೆಂದಿಲ್ಲ. ಸಾಮಾನ್ಯ ಮಟ್ಟದಲ್ಲಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಸ್ವಲ್ಪ ವಿವೇಚನೆ, ಯೋಚನೆ, ವಿವೇಕ ಇರಬೇಕು ಅಷ್ಟೆ! ಇವತ್ತಿನ ಲೇಖನದ ವಿಷಯ ” … Read more

ಬದಲಾದ ಬದುಕು: ಜ್ಯೋತಿ ಬಾಳಿಗ

ದಿನವಿಡೀ ಒಂಟಿ ಪಿಶಾಚಿಯಂತೆ ಮನೆಯಲ್ಲೇ ಇರುತ್ತಿದ್ದ ಕೀರ್ತಿಗೆ ಈ ಲಾಕ್ಡೌನ್ ಪಿರಿಯಡ್ ನಲ್ಲಿ ಗಂಡ ,ಮಕ್ಕಳು ಮನೇಲಿ ಇರೋದು ಒಂದು ರೀತಿಯ ಸಂತಸಕೂಡ ಕೊಟ್ಟಿದೆ. ಎಲ್ಲರೂ ಒಟ್ಟಿಗೆ ಬೆಳಗಿನ ತಿಂಡಿ ತಿನ್ನೋದು, ಒಟ್ಟಿಗೆ ಮಾತಾಡುತ್ತಾ ಊಟ ಮಾಡೋದು, ಒಬ್ಬರಿಗೊಬ್ಬರು ತಮಾಷೆ ಮಾಡಿಕೊಂಡು ಸಂಜೆಯ ಸಮಯ‌ ಕಳೆಯೋದು‌, ಜೀವನಕ್ಕಾಗಿ ಗಂಡನ ವರ್ಕ್ ಫ್ರಂ ಹೋಂ ಕೆಲಸ ಇವೆಲ್ಲವೂ ಎಷ್ಟೋ ವರ್ಷಗಳ ನಂತರ ಕೀರ್ತಿಗೆ ನೆಮ್ಮದಿಯ ಜೀವನ ನೀಡಿದೆ. ಇದು ಕೀರ್ತಿಯ ಕಥೆ ದಿನಾ ಬೆಳಿಗ್ಗೆ ಬೇಗ ಎದ್ದು ‌ಗಡಿಬಿಡಿಯಲ್ಲಿ … Read more

ಕನಸುಗಳ ಪೈಪೋಟಿ: ಸುನಿತಾ. ಎಸ್. ಪಾಟೀಲ

“ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡ” ಎಂಬ ಹಿತ ನುಡಿಯಂತೆ ಮನುಷ್ಯನಾದವನು ಜೀವನದಲ್ಲಿ ಹಾಗಿರಬೇಕು ಹೀಗಿರಬೇಕು ಎಂಬ ಕನಸು ಕಾಣುವುದು ಸಹಜ. ಮನುಷ್ಯನಾದವನಿಗೆ ತಿಳುವಳಿಕೆ ಬಂದಾಗಿನಿಂದ ತನ್ನ ಕನಸುಗಳನ್ನು ಪೂರೈಸಿಕೊಳ್ಳುವುದು ಒಬ್ಬ ಸಾಧಕನ ಸ್ವತ್ತು, ಹೊರತು ಸೋಮಾರಿಯ ಸ್ವತ್ತಲ್ಲ’ ಎಂಬುದನ್ನು ಮೊದಲು ಆತ ಅರಿತಿರಬೇಕು. ಅದನ್ನು ನೆರವೇರಿಸಲು ತನ್ನ ಜೀವನದಲ್ಲಿ ಹೆಣಗಾಡಬೇಕಾಗುತ್ತದೆ. ಕನಸು ಕಾಣುವುದು ತಪ್ಪಲ್ಲ! ಆದರೆ ಆ ಕನಸನ್ನು ನೆರವೇರಿಸಲು ಅವನು ಒಳ್ಳೆಯ ದಾರಿಯನ್ನು ಹಿಡಿದು ಮುಂದೆ ಸಾಗಬೇಕಾಗುತ್ತದೆ. ಒಂದೆಡೆ ಸಮೃದ್ಧಿ ಎಡೆಗೆ ಹೆಜ್ಜೆಯಿಟ್ಟರೆ ಮತ್ತೊಂದೆಡೆ ಭ್ರಷ್ಟಾಚಾರ, … Read more

ಕಲ್ಬುರ್ಗಿಯಲ್ಲೊಂದು ಬುದ್ಧವಿಹಾರ: ವೈ. ಬಿ. ಕಡಕೋಳ

ಬಿಸಿಲ ನಾಡು ಕಲ್ಬುರ್ಗಿ ಎಂದ ಕೂಡಲೇ ನಮಗೆ ನೆನಪಾಗುವುದು ಇಲ್ಲಿನ ಶರಣ ಬಸವೇಶ್ವರ ದೇಗುಲ ಮತ್ತು ವಿಶ್ವವಿದ್ಯಾಲಯ. ತೊಗರಿ ನಾಡೆಂದು ಪ್ರಸಿದ್ದವಾದ ಕಲ್ಬುರ್ಗಿಯಲ್ಲೊಂದು ವಿಶಿಷ್ಟ ಬುದ್ಧವಿಹಾರವಿದೆ. ಇದನ್ನು ನೋಡಲೇಬೇಕು. ಇದು ನಗರದಿಂದ ದೂರವಿರುವ ಕಾರಣ ಸ್ವಂತ ವಾಹವಿದ್ದರೆ ಅನುಕೂಲ ಇಲ್ಲವೇ ಅಟೋ ಅಥವ ಸೇಡಂ ಕಡೆಗೆ ಹೋಗುವ ಬಸ್ ಮೂಲಕ ಇಲ್ಲಿಗೆ ಬರಬಹುದು. ಅಥವ ನಗರ ಸಾರಿಗೆ ಬಸ್ ಮೂಲಕವೂ ಬರಬಹುದು. ಇದು ನಗರದಿಂದ 7 ಕಿ. ಮೀ ಅಂತರದಲ್ಲಿದೆ. ಸೇಡಂ ಕಡೆಗೆ ಸಂಚರಿಸುವ ಬಸ್ ರಸ್ತೆಯಲ್ಲಿ … Read more

ನಾ ಕಂಡಂತೆ ಹೆಣ್ಣು: ನಿಮ್ಮೊಳಗೊಬ್ಬ ನಾರಾಯಣ

ಒಂದು ಹೆಣ್ಣು ಮಗು ಹುಟ್ಟುತ್ತಾನೆ ಒಬ್ಬ ತಾಯಿ ಮತ್ತು ಮಗು ಎರಡು ಮನಸುಗಳು ಒಟ್ಟಿಗೆ ಹುಟ್ಟುತ್ತೆ. ಹೆಣ್ಣುಮಕ್ಕಳು ಮನೆಯ ಜೀವಾಳ ಒಂದು ಹೆಣ್ಣು ಮಗು ಜನಿಸಿದೆ ಎಂದರೆ. ಪ್ರತಿದಿನವೂ ಮನೆಯಲ್ಲಿ ಜೀವಂತಿಕೆ ತುಂಬಿದಂತೆ. ಪ್ರತಿ ಹಬ್ಬವು ಸಡಗರವೇ. ಪ್ರತಿ ಸಂಭ್ರಮವು ಸಡಗರವೇ. ಹೆಣ್ಣಿನ ಮನಸ್ಸು ಸುಂದರ ಮತ್ತು ಜೀವಂತ ಒಂದು ಕುಟುಂಬವನ್ನು ತನ್ನ ಹುಟ್ಟಿನಿಂದ ತನ್ನ ಜೀವಿತದ ಕೊನೆಯವರೆಗೂ ಪ್ರೀತಿಸುವ ಕಲೆ ಹೆಣ್ಣಿಗೆ ಮಾತ್ರ ಗೊತ್ತು. ಹೆಣ್ಣು ಎಂದರೆ ಆರೈಕೆ ಮತ್ತು ಒಡನಾಟ. ಅವಳ ಕಳಕಳಿ ಮತ್ತು … Read more