Facebook

Archive for 2020

ಪಂಜು ಕಾವ್ಯಧಾರೆ

“ಬುನಾದಿ ಇಲ್ಲದ ಬದುಕು “ ಕೂಡಿಟ್ಟ ಕನಸುಗಳ ಜೊತೆ ಪಾದಯಾತ್ರೆ ಮಾಡುತ್ತಿರುವೆ. ಅರಮನೆಗಲ್ಲ, ಹೊತ್ತಿನ ಅಂಬಲಿಗಾಗಿ! ಕಟ್ಟಿಕೊಂಡ ಆಸೆಗಳನ್ನ ಒಟ್ಟುಗೂಡಿಸಿ ಸಮಾಧಿ ಮಾಡಿರುವೆ. ಚಂದದ ಬಟ್ಟೆಗಲ್ಲ, ಹಸಿದ ಹೊಟ್ಟೆಗಾಗಿ! ನನ್ನೊಳಗಿನ ಖುಷಿಯನ್ನ ಮಾಯಾ ಬಜಾರಿನಲ್ಲಿ ಮಾರಿಕೊಂಡಿರುವೆ. ದುಡ್ಡಿಗಲ್ಲ, ಮನದ ದುಃಖಕ್ಕಾಗಿ! ಬುನಾದಿಯೇ ಇಲ್ಲದ ಬದುಕನ್ನ ನಡು ಬೀದಿಯಲ್ಲೆ ಕಳೆದುಕೊಂಡಿರುವೆ. ನನ್ನ ಸೋಲಿಗಲ್ಲ, ಗೆದ್ದ ಬಡತನಕ್ಕಾಗಿ! –ಹರೀಶ್ ಹಾದಿಮನಿ (ಹಾಹರೀ) ಸದಾ ಕಾಡುವೆ ಏಕೆ? ನೀ ಅಗಲಿದ ಕ್ಷಣವ ಮರೆಯಲಾಗದು ಎಂದಿಗೂ, ನಿನ್ನ ನೆನಪಿನ ಬುತ್ತಿ ಹೊತ್ತು ಸಾಗುತ್ತಿರುವ […]

ಅವ್ವಣ್ಣಿ: ಗಿರಿಜಾ ಜ್ಞಾನಸುಂದರ್

“ಮಗಾ ಸ್ಕೋರ್ ಎಷ್ಟು?” ಗೇಟ್ ಇಂದ ಹುಡುಗರ ಜೋರಾದ ದನಿ.. “ಯಾರು? ಸ್ಲಿಪ್ಪರ್ ಆ? ನಮ್ ಹುಡ್ಗ ಇಲ್ಲ ಕಣಪ್ಪ” ಅಜ್ಜಿಯ ದನಿ. “ಅಜ್ಜಿ, ಸ್ಕೋರ್ ಎಷ್ಟಾಗಿದೆ?” ” ಚೆನ್ನಾಗಾಡ್ತಿದಾರೆ ನಮ್ಮವರು, ೨೩೮ ಆಗಿದೆ ಬರಿ ೩ ಜನ ಔಟ್… ತಂಡೂಲ್ಕರ್ ಇನ್ನು ಆಡ್ತಿದಾನೆ, ತುಂಬ ಚೆನ್ನಾಗಿದೆ ಆಟ.. ಬಾ ನೀನು ನೋಡಿವಂತೆ” “ಇಲ್ಲ ಅಜ್ಜಿ.. ಟ್ಯೂಷನ್ ಗೆ ಹೋಗ್ಬೇಕು. ಅಮ್ಮ ಬೈತಾರೆ, ಇಂಡಿಯಾ ವಿನ್ ಆಗುತ್ತೆ ಬಿಡಿ… ಖುಷಿ ಆಯಿತು” ಅಂತ ಹೇಳಿ ಸ್ಟೀಫೆನ್ ಹೊರಟ. […]

ಕಾಲದ ಚಿತ್ರ: ಎಂ. ಜವರಾಜ್

ರಾತ್ರಿ ಹತ್ತಾಯ್ತು. ಕರೆಂಟ್ ಇಲ್ಲದೆ ಊರು ಗಕುಂ ಎನುವ ಹೊತ್ತಲ್ಲಿ ಬೀದಿಯಲ್ಲಿ ನಿಂತ ಅಕ್ಕಪಕ್ಕದ ಮನೆಯವರು ಗುಸುಗುಸು ಮಾತಾಡುತ್ತ ಇದ್ದರು. ಕರೆಂಟ್ ಇಲ್ಲದ್ದರಿಂದ ಟಿವಿ ನ್ಯೂಸ್ ನೋಡಲು ಆಗದೆ ದಿಂಬಿಗೆ ತಲೆ ಕೊಟ್ಟೆ. ಕರೋನಾ ಭೀತಿಯಿಂದ ದೇಶ ಪ್ರಕ್ಷುಬ್ಧವಾಗಿ ನಾಳಿನ ಜನತಾ ಕರ್ಫ್ಯೂಗೆ ಸನ್ನದ್ಧವಾಗಿತ್ತು. ಆಗಲೇ ಹೆಂಡತಿ ನಿದ್ರೆಗೆ ಜಾರಿದ್ದಳು. ನನ್ನ ಮಗಳು ಸೆಕೆಗೊ ಸೊಳ್ಳೆ ಹೊಡೆತಕೊ ಹೊರಳಾಡುತ್ತ ಕೈ ಕಾಲು ಆಡಿಸುತ್ತಿದ್ದಳು.ಹಬ್ಬದ ಹೊತ್ತಲ್ಲಿ ಇದೆಂಥ ಕೆಲ್ಸ ಆಯ್ತು.. ಛೇ! ಈ ಸಾರಿ ಯುಗಾದಿಗೆ ಏನೇನು ಮಾಡಬೇಕು. […]

“ಯುಗಾದಿ: ನಿನ್ನೆ-ನಾಳೆಗಳೆಂಬ ಬೇವು-ಬೆಲ್ಲಗಳು”: ಪೂಜಾ ಗುಜರನ್, ಮಂಗಳೂರು

ಮನುಷ್ಯ ಪ್ರತಿದಿನ ಹುಟ್ಟಿ ಪ್ರತಿದಿನ ಸಾಯುತ್ತಾನೆ. ಅವನಿಗೆ ಪ್ರತಿದಿನವೂ ಹೊಸ ಹುಟ್ಟು. ಹಾಗೇ ಈ ಪ್ರಕೃತಿ ಕೂಡ ಪ್ರತಿವರ್ಷವೂ ಹೊಸತನದ ಹೊಸ್ತಿಲಲ್ಲಿ ಸಂಭ್ರಮಿಸುವ ಹೊಸ ಯುಗದ ಆರಂಭವನ್ನು ಯುಗಾದಿಯಾಗಿ ಸಂಭ್ರಮಿಸಿ ಸಿಹಿ ಕಹಿಯನ್ನು ಸಮವಾಗಿ ಸವಿಯಲು ಕಲಿಸುತ್ತದೆ. ಬದುಕೆಂದರೆ ಹಾಗೇ ತಾನೆ ಒಮ್ಮೆ ಸುಖ ಒಮ್ಮೆ ದುಃಖ, ಸುಂದರ ಸ್ನೇಹ ಅಸಹ್ಯ ದ್ವೇಷ, ಮುಗಿಯದ ಆಸೆ. ಕಾಡಿಸುವ ಹತಾಶೆ, ನಿರಂತರ ಭಕ್ತಿ. ಕಾಣದ ಭಯ. ಹುಟ್ಟು ಸಾವಿನ ನಡುವೆ ಹಾದು ಹೋಗುವ ಸಣ್ಣ ಗೆರೆಯಂತೆ ಈ ಬದುಕು. […]

ಅನಾದಿ ಮೊರೆಯ ಕೇಳಿ..: ತಿರುಪತಿ ಭಂಗಿ

“ಭಾಳಂದ್ರ ಇನ್ನ ಒಂದೆರ್ಡ ದಿನ ಉಳಿಬಹುದ… ನಮ್ಮ ಕೈಯಿಂದ ಮಾಡು ಪ್ರಯತ್ನಾ ನಾಂವ ಮಾಡೀವಿ, ಇನ್ನ ಮಿಕ್ಕಿದ್ದ ಆ ದೇವ್ರರ್ಗೆ ಬಿಟ್ಟದ್ದ.” ಡಾಕ್ಟರ್ ಕಡ್ಡಿ ಮುರದ್ಹಂಗ ಮಾತಾಡಿದ್ದ ಕೇಳಿದ ಶಿವಕ್ಕನ ಎದಿ ಒಮ್ಮಿಗಿಲೆ ‘ದಸಕ್’ ಅಂದ ಕೈಕಾಲಾಗಿನ ನರಗೋಳಾಗಿದ್ದ ಸಕ್ತಿ ಪಟಕ್ನ ಹಿಂಡಿ ಹಿಪ್ಪಿ ಆದಾಂಗ ಆಗಿತ್ತು. ಎಷ್ಟೊತ್ತನಕಾ ದಂಗ್ ಬಡ್ದಾಂಗಾಗಿ ಪಿಕಿ ಪಿಕಿ ಕಣ್ಣ ಬಿಟಗೋತ, ಡಾಕ್ಟರಪ್ಪನ ನೋಡಕೋತ ನಿಂತ ಕೊಂಡ್ಳು. ಅದೆಲ್ಲಿತ್ತೋ ಎಲ್ಲಿಲ್ಲೋ ಅಕಿ ಎದಿಯಾಗಿನ ದುಕ್ಕದ ಶಳುವು ಒಮ್ಮಿಗಿಲೆ ಉಕ್ಕಿ ಬಂದದ್ದ ತಡಾ, […]

ಮತ್ತದೇ ಬೇಸರ: ಎನ್.ಎಚ್.ಕುಸುಗಲ್ಲ

ದೀರ್ಘಕಾಲದ ಎದೆನೋವು ತಾಳಲಾರದೆ ತತ್ತರಿಸಿ ಹೋಗಿದ್ದ ನೀಲಜ್ಜನಿಗೆ ಕಳೆಯುವ ಒಂದೊಂದು ನಿಮಿಷವೂ ಒಂದೊಂದು ಘಳಿಗೆಯಾಗುತ್ತಿದೆ. ಆಸರೆಯಾಗಬೇಕಾದ ಮಕ್ಕಳು ಹೊಟ್ಟೆಪಾಡಿನ ಕೆಲಸ ಅರಸಿ ಪಟ್ಟಣ ಸೇರಿದ್ದರು. ಊರುಗೋಲಾಗಬೇಕಾಗಿದ್ದ ಪತ್ನಿಯೂ ತೀರಿಹೋಗಿದ್ದಳು. ತಲತಲಾಂತರದಿಂದ ಬಂದಿದ್ದ ಕಂಬಳಿ ನೇಯುವ ಕಾಯಕವನ್ನು ಮಕ್ಕಳು ನೆಚ್ಚಿರಲಿಲ್ಲ. ಈ ಕೊರಗೂ ನೀಲಜ್ಜನಿಗಿತ್ತು. ಗಂಡು ಮಕ್ಕಳು ಪಟ್ಟಣ ಸೇರಿದರೇನಂತೆ ಮಗಳು ರುಕ್ಮಿಣಿ ಪಾದರಸದಂತೆ ಮನೆಯಲ್ಲಿ ಓಡಾಡಿಕೊಂಡು ಅಪ್ಪನ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಳು. ರುಕ್ಮಿಣಿ ಅಪ್ಪನ ಜೊತೆ ಇರುವುದರಿಂದ ಗಂಡು ಮಕ್ಕಳು ಅಪ್ಪನ ಬಗ್ಗೆ ಚಿಂತೆ ಮಾಡುತ್ತಿರಲಿಲ್ಲ. ಆದರೆ ಆರು […]

ಮಂಜಯ್ಯನ ಮಡಿಕೆ ಮಣ್ಣಾಗಲಿಲ್ಲ: ಜಗದೀಶ ಸಂ.ಗೊರೋಬಾಳ

ಬಹಳ ವರ್ಷಗಳಿಂದ ತಿರುಗದ ತಿಗರಿಯ ಶಬ್ದ ಕೇಳಿ ಮಂಜಯ್ಯನ ಮನಸ್ಸು ಕದಡಿತು. ಯಾವ ಶಬ್ದ ಕೇಳಿ ಮಂಜಯ್ಯ ತನ್ನ ಅರ್ಧಾಯುಷ್ಯ ಕಳೆದನೋ ಆ ಶಬ್ದ ಇಂದು ಮಂಜಯ್ಯನಿಗೆ ಅನಿಷ್ಟವಾಗಿದೆ. ಎದೆಬಡಿತ ಜಾಸ್ತಿಯಾಗಿ, “ಯಾರೇ ಅದು ಸುಗಂಧಿ ತಿಗರಿ ಸುತ್ತೋರು? ನಿಲ್ಸೆ ಅನಿಷ್ಟಾನಾ!” ಎಂದು ಕೂಗುತ್ತಾ ಕಿವಿ ಮುಚ್ಚಿಕೊಂಡನು ಮಂಜಯ್ಯ. ಸುಗಂಧಿ ತಿಗರಿ ಕಡೆ ಹೋಗುವಷ್ಟರಲ್ಲಿ ಶಬ್ದ ನಿಂತಿತ್ತು. ಪಕ್ಕದ ಮನೆಯ ಚಿಕ್ಕ ಹುಡುಗನೊಬ್ಬನು ತಿಗರಿಯನ್ನು ತಿರುಗಿಸಿ ಆಟವಾಡಿ ಸುಗಂಧಿ ಬರುವಷ್ಟರಲ್ಲಿ ಓಡಿ ಹೋಗಿದ್ದನು. ತಿಗರಿ ತಿರುಗಿಸುವುದೆಂದರೆ ಮಕ್ಕಳಿಗೆ […]

ಮಲೆನಾಡಿನ ಅಡಿಕೆ ವ್ಯವಸಾಯ ಮತ್ತು ಪರಿಸ್ಥಿತಿ: ಗೀತಾ ಜಿ.ಹೆಗಡೆ, ಕಲ್ಮನೆ.

ಈ ಯುಗಾದಿ ಹಬ್ಬದ ಆಸು ಪಾಸು ನಮ್ಮ ಮಲೆನಾಡಿನ ಹಳ್ಳಿಗಳಲ್ಲಿ ಅಡಿಕೆ ಕೊಯ್ಲು ಬಲು ಜೋರು. ಎಲ್ಲರ ಮನೆ ಅಂಗಳದಲ್ಲಿ ದೊಡ್ಡ ದೊಡ್ಡ ಅಟ್ಟ ನಿರ್ಮಿಸಿ ಅದರ ತುಂಬಾ ಅಡಿಕೆಯ ಹರವು ಕಂಡರೆ ಇನ್ನು ಮನೆ ಒಳಗೆ, ಹೆಂಚಿನ ಮಾಡಿನ ಮೇಲೆ ಎಲ್ಲೆಂದರಲ್ಲಿ ಅಡಿಕೆಯದೇ ದರ್ಬಾರು. ಒಣಗಿಸಲು ಹಾಕಿದ ಗೋಟು ಬಿಸಿಲಿಗೆ ಬಾಡಿ ಮುತ್ತಜ್ಜಿ ಮುಖವಾದರೆ ಇತ್ತ ಹಸಿ ಅಡಿಕೆ ಸೊಲಿದು ಬೇಯಿಸಿ ಒಣಗಿಸಿ ತೊಗರು ಬಣ್ಣದಲ್ಲಿ ಮಿರಿ ಮಿರಿ ಮಿಂಚುತ್ತಾ ಕೆಂಪಡಿಕೆಯೆಂಬ ಹೆಸರು ಪಡೆಯುತ್ತದೆ. ಒಂದು […]

ಖುಷಿಗಳನ್ನ ಕಂಪೇರ್ ಮಾಡಬಾರದು: ಭಾರ್ಗವಿ ಜೋಶಿ

ಏನು ಮಾಡೋದು ಬದುಕಿನಲ್ಲಿ ಖುಷಿಗಿಂತ ಜಾಸ್ತಿ ನೋವು, ಕಷ್ಟಗಳೇ ಇವೆ. ಯಾರಾದ್ರೂ ಒಬ್ಬರಾದ್ರೂ ಪೂರ್ತಿ ಖುಷಿ ಇಂದ ಇರೋ ವ್ಯಕ್ತಿ ಇದ್ದಾರಾ? ಅನ್ನೋ ಪ್ರಶ್ನೆ ನಮ್ನನ್ನು ಕಾಡತ್ತೆ, ಆದ್ರೂ ಜಗತ್ತಲ್ಲಿ ಇರೋ ಎಲ್ರಿಗಿಂತಲೂ ಹೆಚ್ಚಿನ ಕಷ್ಟ ನಮಗೆ ಅಂತ ನಾವೆಲ್ಲ ಅಂದುಕೊಳ್ತೀವಿ. ಯಾಕೆಂದರೆ ನಮ್ಮ ಮುಂದೆ ಇರೋ ಖುಶಿಗಳನ್ನು ಅನುಭವಿಸೋ ಕಲೆ ನಮಗೆ ಗೊತ್ತಿರೋದಿಲ್ಲ. ಅದೇ ಸಮಸ್ಯೆ. ಆ ಕ್ಷಣವನ್ನು ಹಾಗೆ ಅನುಭವಿಸಿ ಬಿಡಬೇಕು. ಕಳೆದುಹೋದ ದಿನಗಳನ್ನು ಮೆಲುಕು ಹಾಕಬೇಕು, ಆದ್ರೆ ಕಂಪೇರೆ ಮಾಡಬಾರದು. ಚಿಕ್ಕವರಿದ್ದಾಗ ಎಷ್ಟು […]

ಕರೋನ ವಿರುದ್ಧ ಗೆದ್ದು ಮತ್ತೊಮ್ಮೆ ಚಪ್ಪಾಳೆ ತಟ್ಟೋಣ: ವೆಂಕಟೇಶ ಚಾಗಿ

ಇತ್ತೀಚಿನ ದಿನಗಳಲ್ಲಿ ಎಲ್ಲೆಡೆಯೂ ವ್ಯಾಪಕವಾಗಿ ಕೇಳಿಬರುತ್ತಿರುವ ವಿಷಯ ಕರೋನ ಕುರಿತು. ಕರೋನ ನಿಜವಾಗಿಯೂ ಒಂದು ಸಾಂಕ್ರಾಮಿಕ ಸೋಂಕಾಗಿ ಜಗತ್ತಿನ ತುಂಬಾ ಪಸರಿಸುತ್ತಿದೆ. ಚೀನಾದ ವುಹಾನ್ ನಲ್ಲಿ ಮೊಟ್ಟ ಮೊದಲು ಕಾಣಿಸಿಕೊಂಡ ಈ ವೈರಸ್, ತುಂಬಾ ಅಪಾಯಕಾರಿಯಾಗಿ ಕಂಡದ್ದು ರೋಗಕ್ಕೆ ತುತ್ತಾಗಿ ಸಾವಿಗೀಡಾಗಿರುವ ಜನರ ಸಂಖ್ಯೆಯಿಂದಲೇ. ಜಾಗತಿಕವಾಗಿ ಹಿಂದೆ ಅನೇಕ ವೈರಸ್ಗಳನ್ನು ಕಂಡಿದ್ದ ಚೀನಾ ಕರೋನಾದ ವಿಷಯದಲ್ಲಿ ಜಾಗೃತಿ ಹಾಗೂ ಅದರ ತೀವ್ರತೆಯ ಬಗ್ಗೆ ಜಗತ್ತಿಗೆ ಮನವರಿಕೆ ಮಾಡಲು ವಿಳಂಬ ಧೋರಣೆ ಅನುಸರಿಸಿದೆ ಎಂಬುದು ಸ್ಪಷ್ಟ. ಚೀನಾದಲ್ಲಿ ಸಾವಿನ […]