Facebook

Archive for 2020

ಯುಗಾದಿ ವಿಶೇಷಾಂಕಕ್ಕೆ ಬರಹ ಆಹ್ವಾನ

ಪ್ರಿಯ ಪಂಜುವಿನ ಓದುಗರೇ ಹಾಗು ಬರಹಗಾರರೇ, ನಿಮ್ಮೆಲ್ಲರ ಸಹಕಾರದಿಂದ ಪಂಜು ತನ್ನ ಎಂಟನೇ ವರ್ಷದ ಯುಗಾದಿಯ ಸಂಭ್ರಮದಲ್ಲಿದೆ. ಕಳೆದ ವರ್ಷಗಳಂತೆ ಈ ಬಾರಿಯೂ ಯುಗಾದಿ ವಿಶೇಷಾಂಕವನ್ನು ತರಲು ಪಂಜು ಬಯಸುತ್ತದೆ. ಆದ ಕಾರಣ ಈ ವಿಶೇಷಾಂಕಕ್ಕಾಗಿ ನಿಮ್ಮ ಲೇಖನ, ಪ್ರಬಂಧ, ಕವಿತೆ, ಕತೆ ಇತ್ಯಾದಿ ಸಾಹಿತ್ಯದ ಬರಹಗಳನ್ನು ಪಂಜುವಿಗಾಗಿ ಕಳಿಸಿಕೊಡಿ. ನಿಮ್ಮ ಲೇಖನಗಳು ಮಾರ್ಚ್ 23 ರ ಸಂಜೆಯೊಳಗೆ ನಮಗೆ ತಲುಪಲಿ… ನಿಮ್ಮ ಬರಹಗಳನ್ನು editor.panju@gmail.com ಮತ್ತು smnattu@gmail.com ಮೇಲ್ ಐಡಿಗಳಿಗೆ ಕಳುಹಿಸಿಕೊಡಿ. ನಿಮ್ಮ ಲೇಖನಗಳ ನಿರೀಕ್ಷೆಯಲ್ಲಿ… […]

ಪಂಜು ಕಾವ್ಯಧಾರೆ

ಹೈಕುಗಳು. ಅಮ್ಮನ ಪ್ರೇಮ ಎಲ್ಲೆಲ್ಲಿಯೂ ಸಿಗದ ಅಮೃತದಂತೆ. * ಏನು ಚೆಂದವೋ ಸೂರ್ಯನ ಕಿರಣವು ಪ್ರತಿ ಮುಂಜಾವು. * ಗುರು ಬಾಳಿಗೆ ದೇವತಾ ಮನುಷ್ಯನು ಜೀವನ ಶಿಲ್ಪಿ. * ಬಾಳ ಬೆಳಗೋ ಆ ಸೂರ್ಯ, ಚಂದ್ರರಿಗೆ ಕೋಟಿ ಪ್ರಣಾಮ. * ನಿರ್ಗತಿಕರ ಸೇವೆ ನೀ ಮಾಡುತಲಿ ದೇವರ ಕಾಣು. * ಸಿರಿಗನ್ನಡ ನಮ್ಮ ಕಣಕಣದಿ ಪುಟಿಯುತ್ತಿದೆ. * ದಾನ ಹಸ್ತಕ್ಕೆ ಜಾತಿ ಕಾರಣವೇಕೆ ಮಾನವ ಧರ್ಮ. * ತಾಯಿಯ ಪ್ರೇಮ ದೇವನಿಗೆ ಸಮಾನ ಮಿಕ್ಕದ್ದು ಮಿಥ್ಯ. * […]

ದುರಂತ: ಗೀತಾ ಜಿ. ಹೆಗಡೆ, ಕಲ್ಮನೆ.

ಅದೊಂದು ಮಲೆನಾಡಿನ ಪುಟ್ಟ ಹಳ್ಳಿ.  ಅಲ್ಲಿ ಸುರೇಶನದು ಒಪ್ಪವಾದ ಸಂಸಾರ.  ಅವನಿಶ್ಚೆಯನರಿತ ಸತಿ, ಮುದ್ದಾದ ಒಬ್ಬಳೇ ಮಗಳು, ವಯಸ್ಸಾದ ಪ್ರೀತಿಯ ಅಮ್ಮ.  ಇವರೊಂದಿಗೆ ಬದುಕಿನ ಗತಿ ಸುಗಮವಾಗಿ ಸಾಗುತ್ತಿರುವಾಗ ಕೂಡಿಟ್ಟ ಅಲ್ಪ ಸ್ವಲ್ಪ ಹಣ ಸೇರಿಸಿ ಸರ್ಕಾರದ ಯೋಜನೆಯಡಿಯಲ್ಲಿ ಸಿಕ್ಕ ಒಂದೂವರೆ ಲಕ್ಷ ರೂಪಾಯಿ ಹಾಗೂ ಹೆಂಡತಿಯ ಒತ್ತಾಯದ ಮೇರೆಗೆ ಅವಳ ತವರಿನ ಒಡವೆ ಕೂಡಾ ಮಾರಿ ಎರಡು ರೂಮಿರುವ ಪುಟ್ಟದಾದ ಹೆಂಚಿನ ಮನೆ ಕಟ್ಟಿದ.  ಅದೇನೊ ಸಂಭ್ರಮ, ಸಂತೋಷ ಮನೆಯವರೆಲ್ಲರ ಮುಖದಲ್ಲಿ.  ತಮ್ಮದೇ ಆದ ಸ್ವಂತ […]

ಆತ್ಮ(ಮಿಯ)ಗೆಳೆಯ: ಜಯಂತ್ ದೇಸಾಯಿ

ಅದೊಂದು ದಿನ ಸುಬ್ಬರಾಯ ಆಟ ಆಡುತ್ತಾ ಆಡುತ್ತಾ ಮನೆಯಿಂದ ಎಷ್ಟೋ ದೂರ ಇರೋ ಮೊಬೈಲ್ ಟವರ್ ಹತ್ತಿರ ಹೋದ. ಅಲ್ಲಿ ಬಿದ್ದಿದ್ದ ಬಾಲ್ ತೆಗೆದುಕೊಂಡು ಯಾರ ಜೊತೆ ಮಾತಾಡುತ್ತಾ ಇದ್ದಂತೆ ಮಾಡಿ ತಿರುಗಿ ವಾಪಸ ಬಂದ. ಬಂದ ಮಗನನ್ನು ತಾಯಿ ರಾಧಾ ಯಾರ್ ಜೊತೆ ಮಾತಾಡುತ್ತಿದ್ದೆ ಅಲ್ಲಿ ಅಂದರೆ, ಅಮ್ಮ ಅವನು ಯಾರೋ ನನ್ನ ಸಹಾಯ ಬೇಕು ಅಂತಿದ್ದ ಅಮ್ಮ ಕಾಯುತ್ತಿದ್ದಾಳೆ ನಾಳೆ ನೋಡುವ ಅಂತ ಹೇಳಿ ಬಂದೆ ಅಂದ. ಆದ್ರೆ ತಾಯಿಗೆ ಏನೋ ಅನುಮಾನ ಬಂದು […]

ಕಾಮಣ್ಣ ಮಕ್ಕಳೊ: ರೇಣುಕಾ ಕೋಡಗುಂಟಿ

ಅಂದು ಹೋಳಿ ಹುಣ್ಣಿಮೆಯ ದಿನ ಬಳಿಗಾರ ಓಣಿಯ ಮಕ್ಕಳೆಲ್ಲ ಸೇರಿ ರಾಗಾ, ಶರಣಾ, ಮಲ್ಲಾ, ಮಂಜಾ ಇವರ ಮುಂದಾಳತ್ವದಲ್ಲಿ ಒಟ್ಟು 12 ಜನ ಮಕ್ಕಳು ಕಾಮಣ್ಣನ್ನ ಕೂರಿಸಾಕ ನಿರ್ಧಾರ ಮಾಡಿದ್ದರು. ಅಲ್ಲಿ ಇಲ್ಲಿ ಸ್ವಲ್ಪ ಪಟ್ಟಿ ಎತ್ತಿ ಒಂದು ಟೆಂಟ್ ಹೊಡೆದು ತಯಾರಿ ಮಾಡಿದ್ದರು. ಒಂದು ಹಳೆ ಅಂಗಿ ಪ್ಯಾಂಟು ತಂದು ಅದರಲ್ಲಿ ಹುಲ್ಲು ತುಂಬಿ, ಅಂಗಿನ್ನು ಪ್ಯಾಂಟನ್ನು ಸೂಜಿ ದಾರದಿಂದ ಹೊಲಿದು ಕಾಮಣ್ಣನ್ನ ರೆಡಿ ಮಾಡಿದ್ದರು. ಕಾಮಣ್ಣನ ಹೊಟ್ಟೆಯನ್ನು ದಪ್ಪವಾಗಿ ಕಾಣುವಂತೆ ಮಾಡಿದ್ದರು. ಕುಂಬಾರ ಮನಿಯಿಂದ […]

ಬರವಣಿಗೆ: ಭಾರ್ಗವಿ ಜೋಶಿ

ಕಲ್ಪನೆ,  ವಾಸ್ತವ ಯಾವುದೇ ಇರಲಿ ಅದಕ್ಕೆ ಅಕ್ಷರ ರೂಪ ಕೊಡುವುದೇ ಬರಹ. ಮನದ ಗೂಡಲ್ಲಿ ಒಡಮೂಡಿ,  ರೆಕ್ಕೆ ಕಟ್ಟಿ ಹಾರ ಬಯಸುವ ಪ್ರತಿ ಭಾವನೆಗಳು ಒಂದು ಬರಹವೇ.  ಹಾಗಾದರೆ ಯಾರು ಏನಾದರು ಗೀಚಿದರು ಅದು ಬರಹ ಆಗುತ್ತದಾ ಅನ್ನುವ ಪ್ರಶ್ನೆ ಎಲ್ಲರನ್ನು ಕಾಡುತ್ತದೆ.  ನನ್ನ ಅನಿಸಿಕೆ  ಖಂಡಿತವಾಗಿಯೂ ಹೌದು.  ಯಾಕೆಂದರೆ ಬರಹಗಾರರ ಪ್ರೀತಿ,  ಶ್ರದ್ಧೆ ಅಲ್ಲಿ ಅಡಕವಾಗಿರುತ್ತದೆ.  ಎಲ್ಲರು ಒಮ್ಮೆಲೆ ಉತ್ತಮ ಬರಹಗಾರರು,  ಪ್ರಶಸ್ತಿ ವಿಜೇತರು ಆಗಲು ಸಾಧ್ಯವಿಲ್ಲ.  ಎಲ್ಲವು ಅ, ಆ, ಇ, ಈ ಇಂದಲೇ ಆರಂಭವಾಗಬೇಕು.  ಬರಹ […]

ವಾಹನದ ವೇಗ ಮತ್ತು ಮಿತಿ: ಗಾಯತ್ರಿ ನಾರಾಯಣ ಅಡಿಗ

‘ಅವಸರವೇ ಅಪಾಯಕ್ಕೆ ಕಾರಣ ‘ ಎಂಬ ಮಾತೊಂದಿದೆ. ಪ್ರತಿಯೊಂದು ವಿಷಯದಲ್ಲಿಯೂ ಈ ಮಾತು ನೂರಕ್ಕೆ ನೂರು ಸತ್ಯ. ಈ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರೂ ಕನಿಷ್ಠ ಒಂದಾದರೂ ವಾಹನವನ್ನು ಹೊಂದಿರುತ್ತಾರೆ. ಒಂದೆಡೆ ವಾಹನಗಳಿಂದ ನಮಗೆ ಎಷ್ಟು ಅನುಕೂಲಗಳಿವೆಯೋ  ಇನ್ನೊಂದೆಡೆ ಆಷ್ಟೇ ಅನನುಕೂಲಗಳಿವೆ. ಅತಿಯಾದರೆ ಅಮೃತವೂ ವಿಷ ಎಂಬ ಮಾತೊಂದು ಇಲ್ಲಿ ನೆನಪಿಗೆ ಬರುತ್ತದೆ. ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ನಮ್ಮ ವಾಹನದ ವೇಗಕ್ಕೆ ಮಿತಿ ಇಲ್ಲದ ಕಾರಣ ಅಪಘಾತಗಳು ಹೆಚ್ಚು ಸಂಭವಿಸುತ್ತದೆ. ಇಂದಿನ ಯುವಕರಿಗಂತೂ ಇರುವ […]

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 9): ಎಂ. ಜವರಾಜ್

೯- ಅಯ್ಯಯ್ಯೋ ಬನ್ರಪ್ಪ ಅಯ್ಯಯ್ಯೋ ಬನ್ರವ್ವ ಅಯ್ಯಯ್ಯೋ ಬನ್ರಣ್ಣ ಅಯ್ಯಯ್ಯೋ ಬನ್ರಕ್ಕ ಅಯ್ಯಯ್ಯೋ ಯಾರ್ಯಾರ ಬನ್ನಿ ಈ ಅಯ್ನೋರು  ಆ ನೀಲವ್ವನ ನನ್ನ ಮೆಟ್ದ ಮೆಟ್ಲಿ ತುಳ್ದು ತುಳ್ದು ಜೀವ ತಗಿತಾವ್ನ ಬನ್ನಿ ಬನ್ಬಿ.. ಅಂತಂತ ನಾನ್ ಕೂಗದು ಕೇಳ್ನಿಲ್ವಲ್ಲೊ.. ಆಗ ಜನ ಜಗನ್ ಜಾತ್ರಾಗಿ ಆ ನೀಲವ್ವ  ಅಯ್ಯೋ ಉಸ್ಸೋ ಅನ್ಕಂಡನ್ಕಂಡು ಸುದಾರುಸ್ಕಂಡು ಮೇಲೆದ್ದು  ನಿಂತ ಜನ ನೋಡ್ತ ನೋಡ್ತ ಮೋರಿ ದಾಟಿ ಜಗುಲಿ ಅಂಚಿಗೆ ಕುಂತು ಗೋಳಾಡ್ತ ಗೋಳಾಡ್ತ  ಜಗುಲಿ ಕಂಬ ಒರಗಿದಳಲ್ಲೋ… ‘ಅಯ್ನೋರಾ.. […]

ಕ್ಷಮೆ ಮತ್ತು ರಾಜಿ ಸೂತ್ರ ಪ್ರತಿಪಾದಿಸುವ The tempest: ನಾಗರೇಖ ಗಾಂವಕರ

ಆಫ್ರಿಕಾದ ಟ್ಯುನಿಸ್‍ನಲ್ಲಿ ವಿವಾಹಕಾರ್ಯದಲ್ಲಿ ಭಾಗವಹಿಸಿ ಮರಳುತ್ತಿದ್ದ Neapolitansಗಳಾದ [ನೇಪಲ್ಸ್‍ನ ನಿವಾಸಿಗಳು] ಇಟಲಿಯ ನೇಪಲ್ಸ್‍ನ ರಾಜ ಅಲೆನ್ಸೋ ಆತನ ಪುತ್ರ ಫರ್ಡಿನಾಂಡ್, ಸಹೋದರ ಸೆಬಾಸ್ಟಿಯನ್ ಹಾಗೂ ಮಿಲನ್‍ನ ಡ್ಯೂಕ್ ಅಂಟೋನಿಯೋ ಮತ್ತು ಇತರ ಸಂಗಡಿಗರಿದ್ದ ಹಡಗು ಸಮುದ್ರ ಮಧ್ಯೆ ಬಿರುಗಾಳಿಯ ಹೊಡೆತಕ್ಕೆ ನಲುಗಿ ಹೋಗಿದೆ. ಇದಕ್ಕೆ ಕಾರಣ ಪ್ರೊಸ್ಪೆರೋ. ಆತನ ಉದ್ದೇಶವೆಂದರೆ ಅವರೆಲ್ಲಾ ತಾನು ವಾಸವಾಗಿದ್ದ ಆ ನಡುಗಡ್ಡೆಗೆ ಬರುವಂತಾಗಬೇಕು. ಅದಕ್ಕಾಗಿ ಅತ ತನ್ನ ಮಾಂತ್ರಿಕ ವಿದ್ಯೆಯನ್ನು ಬಳಸಿ ಚಂಡಮಾರುತವನ್ನೆಬ್ಬಿಸಿದ್ದಾನೆ. ಇದಕ್ಕೆ ಕಾರಣವಿದೆ. ಆತನಿಗೆ ಅವರಿಂದ ಅನ್ಯಾಯವಾಗಿದೆ. ಮಿಲನ್‍ನ […]

ಆಧ್ಯಾತ್ಮಿಕತೆಯ ಆಧುನಿಕ ನೆಲೆ……: ಪ್ರವೀಣ್.ಪಿ

ಆಧುನಿಕತೆಯ ಸುಳಿಯಲ್ಲಿ ಸಿಲುಕಿರುವ ಇಂದಿನ ಸಮಾಜ ವಿಭಿನ್ನತೆಯೊಂದಿಗೆ ಹೊಸ ಬದುಕಿಗೆ ತೆರದುಕೊಳ್ಳಲು ಹವಣಿಸುತ್ತಿದೆ. ಬದಲಾದ ಸಾಮಾಜಿಕ ವ್ಯವಸ್ಥೆಯಲ್ಲಿ ಹೊಸತನದ ಅಲೆಯೊಂದು ಜನರನ್ನ ಬೇರೆ ದಿಕ್ಕಿಗೆ ಸೆಳೆಯುತ್ತಿದೆ. ಮಾರ್ಡನಿಟಿಗೆ ಮಾರುಹೋದ ಜನರು ತಮ್ಮ ಆಲೋಚನೆ ಹಾಗೂ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಲು ಆರಂಭಿಸಿದ್ದಾರೆ. ಪ್ರೀತಿಯು ಆಧುನಿಕತೆಯ ನೆಲೆಯಲ್ಲಿ ನಡೆಯುತ್ತಿದೆ. ಇದರಲ್ಲಿ ಆಧ್ಯಾತ್ಮಿಕ ಕ್ಷೇತ್ರವು ಹೊರತಾಗಿಲ್ಲ. ಆಧ್ಯಾತ್ಮವು ಇಂದು ಉದ್ಯಮಶೀಲತೆಯ ತಳಹದಿಯಲ್ಲಿ ಸಾಗುತ್ತಿದೆ. ಆಚಾರ, ಸಂಪ್ರದಾಯ, ಪೂಜೆ, ಪುನಸ್ಕಾರ, ಸಂಸ್ಕೃತಿ ಎಲ್ಲವೂ ಆಧುನೀಕರಣದೊಂದಿಗೆ ಬೆರೆತು ಹೋಗಿದೆ. ಇದರ ಪರಿಣಾಮ ಹುಡುಗರಲ್ಲಿ ಬೇರೊಂದು […]