Facebook

Archive for 2020

ಪಂಜು ಕಾವ್ಯಧಾರೆ

ಬಾಲಲೀಲೆಗಳು ಮರಳಬೇಕೆನಿಸುತಿದೆ ಆ ಸಮೃದ್ಧಿಯ ದಿನಗಳಿಗೆ. ನುಗ್ಗಿಬರುತಿವೆ ನೆನೆಪುಗಳ ಬುಗ್ಗೆ, ಮನಸಿಗೆ ಬಂಧನವಿರದ, ಹೃದಯಕೆ ದಣಿವಾಗದಿರದ, ಆ ಮುಗ್ದ ಮುಕ್ತ ರಸವತ್ತಾದ ದಿನಗಳಿಗೆ. ಕಣ್ಣಿಗೆ ಕಟ್ಟಿದಂತಿವೆ ಆ ಆಟ ಪಾಟಗಳು… ಬೀದಿ ಬೀದಿ ಅಲೆದು ಹುಣೆಸೆ ಬೀಜ ಗುಡ್ಡೆಯಾಕಿ ಅಟಗುಣಿ ಆಡಿದ್ದು. ಹಳ ಕೊಳ್ಳಗಳ ಶೋಧಿಸಿ ಕಲ್ಲುತಂದು ಅಚ್ಚಿನಕಲ್ಲು ಆಡಿದ್ದು. ಬಳಪ ಸೀಮೆಸುಣ್ಣ ಸಿಗದೆ ಇದ್ದಲಿನಲಿ ಚೌಕಬಾರ ಬರೆದಿದ್ದು. ಕುಂಟೆಬಿಲ್ಲೆ ಆಡಿ ಕಾಲು ಉಣುಕಿಸಿಕೊಂಡಿದ್ದು. ಕಣ್ಣಾಮುಚ್ಚಾಲೆ ಹಾಡುವಾಗ ಕಣಜದಲಿ ಅಡಗಿ ನೆಲ್ಲಿನ ನವೆಗೆ ದಿನವೆಲ್ಲಾ ಮೈಕೆರೆದುಕೊಂಡಿದ್ದು. ಬರಿಗಾಲಲ್ಲಿ […]

ಕೋಳಿ ಮತ್ತು ಕೊರೋನ: ಡಾ. ನಟರಾಜು ಎಸ್. ಎಂ.

ವರ್ಷ ಎರಡು ಸಾವಿರದ ಹದಿಮೂರರ ಡಿಸೆಂಬರ್ ತಿಂಗಳು ಅನಿಸುತ್ತೆ. ಜಲ್ಪಾಯ್ಗುರಿಯಲ್ಲಿ ತುಂಬಾ ಚಳಿ ಇತ್ತು. ಒಂದು ಮುಂಜಾನೆ ಯಾವುದೋ ರೋಗ ಪತ್ತೆ ಹಚ್ಚಲು ನಮ್ಮ ಟೀಮ್ ಜೊತೆ ಕಾರಿನಲ್ಲಿ ಹೊರಟ್ಟಿದ್ದೆ. ನನ್ನ ಜೊತೆ ನನ್ನ ಡಾಟ ಮ್ಯಾನೇಜರ್, ಇಬ್ಬರು ಹೆಲ್ತ್ ವರ್ಕರ್ಸ್ ಮತ್ತು ಡ್ರೈವರ್ ಇದ್ದ. ಹೆಲ್ತ್ ವರ್ಕರ್ ಆಗಿದ್ದ ತೊರಿಕ್ ಸರ್ಕಾರ್ ಗೆ ಅವತ್ತು ತುಂಬಾ ಕೆಮ್ಮಿತ್ತು. ಕೆಮ್ಮಿದ್ದರೂ ಆತ ಮಾರ್ಗ ಮಧ್ಯೆ ಆಗಾಗ ಸಿಗರೇಟ್ ಸೇದುತ್ತಲೇ ಇದ್ದ. ಆತ ಮುಂದೆ ಡ್ರೈವರ್ ಪಕ್ಕ ಕುಳಿತ್ತಿದ್ದ. […]

ಕನ್ನಡ v/s ಇಂಗ್ಲಿಷ್ : ಸೂರಿ ಹಾರ್ದಳ್ಳಿ

ನಮ್ಮ ಕಂಪನಿಯಲ್ಲಿ ಕನ್ನಡೇತರರಿಗೆ ಕನ್ನಡ ಪಾಠ ಮಾಡುತ್ತಿದ್ದೆ. ಅಕ್ಷರಗಳ ಮಾಲೆ ಕೊಟ್ಟಾಗ ‘ಓಹ್ ಮೈ ಗಾಡ್,’ ಎಂಬೊಂದು ಉದ್ಗಾರ ಹಿಂದಿನಿಂದ ಬಂತು. ಇಂಗ್ಲಿಷಿನ ಇಪ್ಪತ್ತಾರು ಅಕ್ಷರಗಳು ಸರಿಯೆಂದ ನಮ್ಮವರು ಕನ್ನಡದಲ್ಲಿ ಇಷ್ಟೊಂದು ಅಕ್ಷರಗಳೇ, ಕಲಿಯಲು ಕಷ್ಟ ಎಂದು ಮೂಗು ಮುರಿಯುತ್ತಾರೆ. ಆದರೆ ಚೀನೀ ಭಾಷೆಯಲ್ಲಿ ಸುಮಾರು 43 ಸಾವಿರ ಅಕ್ಷರಗಳಿವೆ ಎಂದರೆ ನಂಬುವಿರಾ? ನಂಬಲೇಬೇಕು. ಆದರೆ ಒಬ್ಬ ವ್ಯಕ್ತಿಯು ಮಾತನಾಡಲು ಮೂರನೆಯ ಒಂದು ಭಾಗ ಮಾತ್ರ ಕಲಿತರೆ ಸಾಕಂತೆ. ಆದರ ಇನ್ನೊಂದು ದುರಂತ ಎಂದರೆ ಅದು ಧ್ವನಿ […]

ನಂಬಿಕೆ ದ್ರೋಹ ಮತ್ತು ದ್ವೇಷದ ಕಥಾನಕ- ಹ್ಯಾಮ್ಲೆಟ್: ನಾಗರೇಖ ಗಾಂವಕರ

ಆತ ಪ್ರಿನ್ಸ್ ಹ್ಯಾಮ್ಲೆಟ್ ಕಪ್ಪು ಬಟ್ಟೆ ಧರಿಸಿದ ಆತ ಮಾನಸಿಕವಾಗಿ ದ್ವಂದ್ವ ಸ್ಥಿತಿಯಲ್ಲಿದ್ದಾನೆ. ಅಷ್ಟೇ ಅಲ್ಲ ರೊಚ್ಚಿಗೆದ್ದಿದ್ದಾನೆ. ಕಾರಣ ತಂದೆ ಡೆನ್ಮಾರ್ಕನ ರಾಜ ಹ್ಯಾಮ್ಲೆಟ್ ಸಾವನ್ನಪ್ಪಿದ್ದಾರೆ. ತಾಯಿ ರಾಣಿ ನಾಚಿಕೆಯಿಲ್ಲದೇ ನಿಷ್ಠೆ ಇಲ್ಲದೇ ಮರುವಿವಾಹವಾಗಿದ್ದಾಳೆ. ಅದು ರಾಜಕುಮಾರನಿಗೆ ಇಷ್ಟವಿಲ್ಲ. ಆಕೆ ಹಾಗೆ ಮಾಡಿದ್ದು ತನ್ನ ತಂದೆಗೆ ಮಾಡಿದ ದ್ರೋಹವೆಂದೆನ್ನಿತ್ತದೆ.ಹಾಗಾಗಿ ಆತನ ಒಳಗುದಿ ಕುದಿಯುತ್ತಿರುವುದು ಬರಿಯ ತಂದೆಯ ಸಾವಿನಿಂದಲ್ಲ. ಬದಲಿಗೆ ತಾಯಿಯ ಮರುವಿವಾಹ ಅದೂ ತನ್ನ ಚಿಕ್ಕಪ್ಪ ಕ್ಲಾಡಿಯಸ್ ನೊಂದಿಗೆ ಹಾಗೂ ಆತ ರಾಣಿ ಗೆರ್ಟ್ರೂಡ್ ಳನ್ನು ಮದುವೆಯಾಗಿ […]

ಮಾಯಕಾರ: ತಿರುಪತಿ ಭಂಗಿ

ತಮ್ಮ ತಲೆಯಲ್ಲಿ ಅಲ್ಲಲ್ಲಿ ಹುಟ್ಟಿಕೊಂಡ ಬಿಳಿ ಕೂದಲು ನೋಡಿದೊಡನೆ ಅವತ್ತು, ತನ್ನ ವಯಸ್ಸು ದಿನೆದಿನೆ ಮಂಜುಗಡ್ಡೆಯಂತೆ ಕರಗುತ್ತಿದೆ ಎಂಬ ಅರಿವಾಗಿ ಸಾವಕಾರ ಸಿದ್ದಪ್ಪನ ಮನದಲ್ಲಿ ಶೂನ್ಯ ಆವರಿಸಿತು.“ನನಗೆ ಮಕ್ಕಳಾಗಲಿಲ್ಲ, ಆಗುವುದೂ ಇಲ್ಲ, ನಾನೊಬ್ಬ ಎಲ್ಲ ಇದ್ದು, ಏನೂ.. ಇಲ್ಲದ ನತದೃಷ್ಟ, ಕೈಲೆ ಆಗದವನು, ಮಕ್ಕಳನ್ನು ಹುಟ್ಟಿಸಲು ಆಗದ ಶಂಡ ನಾನು…..”ನೂರೆಂಟು ವಿಚಾರಗಳನ್ನು ಮನದಲ್ಲಿ ರಾಶಿ ಹಾಕಿಕೊಂಡು ನೆನೆ-ನೆನೆದು ವ್ಯಥೆಪಟ್ಟ. ಯಾರಿಗೂ ಗೊತ್ತಾಗದಂತೆ ಬೆಂಗಳೂರು, ಕಾರವಾರ, ಕೇರಳ, ಸುತ್ತಾಡಿ ನಾ..ನೀ.. ಅನ್ನುವ ನಂಬರ್ ಒನ್ ವೈದ್ಯರ ಮುಂದೆ ತಾವು […]

ನೆನಪಿನಂಗಳದಲ್ಲಿ ಒಂದು ಪುಟ್ಟ ವಾಕ್: ಭಾರ್ಗವಿ ಜೋಶಿ

ಜೀವನದಲ್ಲಿ ನೆನಪುಗಳು ಅಂದರೇನೇ ಸುಂದರ. ಆ ಕ್ಷಣಕ್ಕೆ ಅತಿಯಾದ ನೋವು ಕೊಟ್ಟ ವಿಷಯಗಳು ಸಹ ಇವತ್ತಿಗೆ ನಗು ತರಿಸುತ್ತವೆ. ಅದಕ್ಕೆ ನೆನಪುಗಳು ಅನ್ನೋದು. ಈ ರೀತಿಯ ನೆನಪುಗಳ ಆಗರವೇ ನಮ್ಮ ಬಾಲ್ಯ. ಆ ಬಾಲ್ಯದ ನೆನಪುಗಳೇ ನಮ್ಮ ಇಂದಿನ ಈ ಬಡಿದಾಟದ ಬದುಕಿಗೆ ಆಕ್ಸಿಜನ್ ಅಂದ್ರೆ ತಪ್ಪಾಗಲಾರದು. ಅಂತಹ ಬಾಲ್ಯದ ನೆನಪಿನಂಗಳದಲ್ಲಿ ಒಂದು ಪುಟ್ಟ ವಾಕ್ ಹೋಗೋಣ.. ಕಳೆದು ಹೋದ ದಿನವೇ ಬಾಲ್ಯ ಮರಳಿ ಬರದ ಬದುಕೇ ಬಾಲ್ಯ ಬಿದ್ದ ಗಾಯವು ಕಲೆಯಾಗಿ ನೋವುಗಳೆಲ್ಲ ನಲಿವಾಗಿ ಮಾಸದ […]

ಪದ್ಮಜಾ: ಮಲ್ಲಪ್ಪ ಎಸ್.

“ಅಮ್ಮಾ ನನ್ನ ಪೆನ್ಸಿಲ್ ಬಾಕ್ಸ ಎಲ್ಲಿ?” ಅನಿತಾ ಮಾಡು ಹಾರಿ ಹೋಗುವಂತೆ ಕಿರುಚಿದಳು. “ ಅಲ್ಲೇ ಇರಬೇಕು ನೋಡೆ. ನೀನೇ ಅಲ್ವಾ ನಿನ್ನೆ ರಾತ್ರೆ ಜಾಮಿಟ್ರಿ ಮಾಡ್ತಾ ಇದ್ದವಳು?” ಪದ್ಮಜಾ ಒಲೆಯ ಮೇಲೆ ಇದ್ದ ಬಾಣಲೆಯಲ್ಲಿಯ ಒಗ್ಗರಣೆ ಸೀದು ಹೋಗುತ್ತಲ್ಲಾ ಎಂದು ಚಡಿಪಡಿಸುತ್ತಾ ಕೈ ಆಡಿಸಲು ಚಮಚಕ್ಕಾಗಿ ಹುಡುಕಾಡುತ್ತಾ ಬಾಗಿಲಕಡೆ ಮುಖ ಮಾಡಿ ಉತ್ತರಿಸುತ್ತಿದ್ದಳು. “ಅಮ್ಮಾ ನನ್ನ ಇನೊಂದು ಸಾಕ್ಸ ಕಾಣುತ್ತಿಲ್ಲ. ಲೇ ಅನಿ-ಶನಿ ನನ್ನ ಸಾಕ್ಸ ಎಲ್ಲಿ ಬಿಸಾಕಿದ್ದಿಯೇ?” ದಕ್ಷ ಒಂದು ಕಾಲಲ್ಲಿ ಸಾಕ್ಸ ಹಾಕಿ […]

ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 8): ಎಂ. ಜವರಾಜ್

-೮- ಸೂರ್ಯ ಮೂಡೊ ಹೊತ್ತು ‘ಕಾ..ಕಾ.. ಕಾ..’ ಕಾಗೆ ಸದ್ದು ಮೈಮುರಿತಾ ಕಣ್ಬುಟ್ಟು ನೋಡ್ದಿ ಅವಳು ಕಸಬಳ್ಳು ತಗಂಡು ಮೂಲ್ ಮೂಲೆನು ಗುಡಿಸೋಳು ಆ ಕಸಬಳ್ಳು ನನಗಂಟು ಬಂದು ಗೂಡುಸ್ತು ಆ ಕಸಬಳ್ಳು ಗೂಡ್ಸ ದೆಸೆಗೆ ನಾನು ಮಾರ್ದೂರ ಬಿದ್ದು ಬೀದೀಲಿ ಒದ್ದಾಡ್ತಿದ್ದಂಗೆ ಸೂರ್ಯ ಕೆಂಪೇರ್ಕಂಡು ಮೇಲೆದ್ದು ನಂಗ ತಾಕಿ ನನ್ ಮೈ ಮುಖ ನೊಚ್ಚಗಾದಂಗಾಯ್ತು. ಆ ಕಸಬಳ್ಳು ಅಲ್ಲಿಗೂ ಬಂದು ನನ್ನ ಇನ್ನಷ್ಟು ದೂರ ತಳ್ತ ತಳ್ತ ಮೋರಿ ಅಂಚಿಗೆ ಬಂದು ನೋಡ್ತಿದ್ದಂಗೆ ‘ಏ.. ನೀಲ […]

ಯಮಲೋಕ ಭ್ರಷ್ಟಾಚಾರ ಮುಕ್ತವಾಗಲಿ: ಪಿ.ಕೆ. ಜೈನ್ ಚಪ್ಪರಿಕೆ

ಮರುಜನ್ಮದಲ್ಲಿ ನಾವೇನಾಗ್ತಿವಿ ಅನ್ನೋದು ನಾವು ಮಾಡಿದ ಪಾಪ ಪುಣ್ಯದ ಫಲಕ್ಕೆ ನೇರ ಸಂಬಂಧವಿದೆ ಅಂತಾ ಹೇಳ್ತೀವಿ. ಅದನ್ನೇ ಕರ್ಮಸಿದ್ಧಾಂತ ಅಂತಲೂ ಕರೀತಾರೆ. ಮುಂದಿನ ಜನ್ಮ ಮನುಷ್ಯ ಜನ್ಮವೇ ಆಗಬೇಕು ಅಂತಾದರೆ ಸಿಕ್ಕಾಪಟ್ಟೆ ಪುಣ್ಯ ಸಂಪಾದಿಸಬೇಕು ಅಂತಾ ಹೇಳ್ತಾ ಇರೋದನ್ನು ಕೇಳಿದ್ದೀವಿ. ಹಾಗೆಯೇ ಮುಂದಿನ ಏಳು ಜನ್ಮಗಳು ಮನುಷ್ಯನಲ್ಲದ ಜನ್ಮಗಳಾಗಿರ್ತಾವೆ ಅಂತಾನೂ ಕೇಳಿದ್ದೀವಿ. ಆದ್ರೆ ಇವೆಲ್ಲದರ ನಡುವೆ ಒಂದು ಕನ್ಫ್ಯೂಸನ್ ಮತ್ತು ಉತ್ತರ ಸಿಗದ ಪ್ರಶ್ನೆ ಈ ಕರೊನಾ ವೈರಸ್ ಬಂದಾಗ ಶುರು ಆಯ್ತು…ಎನ್ ಗೊತ್ತಾ…!??? ಪ್ರಸ್ತುತ ಪ್ರಪಂಚದಲ್ಲಿ […]

ಸಹಜ ನಗು ಆರೋಗ್ಯದ ಆಗರ!: ಕೆ ಟಿ ಸೋಮಶೇಖರ್ ಹೊಳಲ್ಕೆರೆ

‘ ನಗು ‘ ಎಂಬುದು ಮುಖದಲ್ಲಿ ಪ್ರಕಟವಾಗುವ ಒಂದು ಭಾವ! ಮನಸ್ಸು ಒಳಗಿರುವುದರಿಂದ ಅದರ ನೇರ ಸಾಕ್ಷಾತ್ ದರುಶನ ಕಷ್ಟ. ಮನ ಭಾವಗಳ ಮೂಲಕ ತನ್ನ ಸಾಕ್ಷಾತ್ ದರುಶನ ಮಾಡಿಸುವುದು! ಮುಖದಲ್ಲೆ ಮನದ ಭಾವಗಳು ಮೇಳೈಸುವುದು! ಮುಖದಲ್ಲೆ ಮನ ಬಂದು ನರ್ತಿಸಿ ತನ್ನ ಖುಷಿಯ ಪ್ರಕಟಿಸುವುದು! ದುಃಖವ ಅನಾವರಣಗೊಳಿಸುವುದು. ಮುಖವೆ ಮನದ ಆಡೊಂಬಲ. ಮುಖ ಎಂಬುದು ಆತ್ಮದ ಭಾವಗಳನ್ನು ಪ್ರಕಟಿಸುವ ಜೀವಂತ ಸ್ವಾಭಾವಿಕ ಕಿರು ಪರದೆ! ಮುಖದಲ್ಲೇ ನಗುವೆಂಬ ಅಮೂಲ್ಯ ಆಭರಣ ಮೈದೋರಿ ಮುಖದ ಸೊಗಸು ಹೆಚ್ಚಿಸುವುದು! […]