Facebook

Archive for 2020

ಪಂಜು ಕಾವ್ಯಧಾರೆ

ನಗ್ನ ರಾತ್ರಿಗಳು ನನ್ನ ಆಸೆಗಳು ಮತ್ತು ನಿನ್ನ ಯೌವ್ವನ ನಿನ್ನ ದೇಹ ನನ್ನ ಸ್ಪರ್ಷ ಎಷ್ಟು ಹೊತ್ತಿ೦ದ ಅನ್ನುವುದನ್ನು ಡಿಮ್ ಲೈಟಿನ ನಾಲ್ಕು ಗೋ‌ಡೆಯ ಮದ್ಯ ಮರೆತಿರುವುದು ಒ೦ದು ಹುಚ್ಚುತನ ಅ೦ತ ನನಗನಿಸಲಿಲ್ಲ, ನಿನಗೂ ಕೂಡ! ನಿನ್ನ ಕೈ ಬೆರಳಿನ ಉಗುರಿನ ಗಾಯ ನನ್ನ ಬೆತ್ತಲೆಯ ಬೆನ್ನಿನ ಮೇಲೆ ತೇವಗೊ೦ಡಿರುವುದು ನಿನ್ನ ಸ್ತನದ ತೊಟ್ಟು ನನ್ನ ತುಟಿಯ ಚು೦ಬನದಲಿ ನರಳುತ್ತಿರುವುದು ನೋವು ನಲಿವಿನ ಸ್ವರ್ಗಸುಖದಲಿ ಯಾವುದೂ ಅರಿವಿಲ್ಲದೆಯೆ ತಿರುಗುವ ಸೀಲಿ೦ಗ್ ಫ್ಯಾನಿನ ಕೆಳಗೆ ನಾವಿಬ್ಬರು ಹೀಗೆ ಎಷ್ಟು […]

ಮೆಟ್ಟು ಹೇಳಿದ ಕಥಾ ಪ್ರಸಂಗ (ಒಂದು ನೀಳ್ಗಾವ್ಯ): ಎಂ.ಜವರಾಜ್

  -೧- ‘ನನ್ನ ಏನಂತ ಅನ್ಕಂಡೆ..’ ಆ ಕಗ್ಗತ್ತಲ ಸರಿ ರಾತ್ರಿಯಲಿ ನನ್ನ ಮೈ ರೋಮ ರೋಮಗಳು ನಿಗುರಿ ನಿಂತವು. ಬೆಕ್ಕಸ ಬೆರಗಿನಲಿ ನಿಂತಲ್ಲೆ ನಿಂತು ಕಣ್ಗಗಲಿಸಿ ಅತ್ತಿತ್ತ ಕಾಲ ಹೆಜ್ಜೆಯ ಸರಿಸಿ ತಿರುಗಿ ಉರುಗಿ ನೋಡಿದೆ ಆ ಕತ್ತಲ ಸಾಮ್ರಾಜ್ಯದಲಿ ಜೀವ ಅಳುಕಿತು. ‘ನಿಂಗ ಏನೂ ಕಾಣೊಲ್ದು..’ ಮತ್ತೆ ಎತ್ತರಿಸಿದ ದನಿ. ದನಿ ಬಂದ ಕಡೆ ನೋಡಿದೆ. ಜೀವ ಇನ್ನಷ್ಟು ಅದುರಿತು. ಸರಕ್ಕನೆ ನಿಂತಲ್ಲೆ ಕುಂತೆ. ‘ಎದ್ರು ಮ್ಯಾಕ್ಕೆ..’ ಸಡನ್ ಎದ್ದವನು ಮತ್ತೆ ಮತ್ತೆ ತಿರುಗಿ […]

ಮಕ್ಕಳ ಆರೈಕೆ ಹೆತ್ತವರಿಗೊಂದು ಸವಾಲೇ ಸರಿ: ಸಿಂಧು ಭಾರ್ಗವ್

ಒಂದೇ ಬಳ್ಳಿಯ ಎರಡು ಸುಮಗಳ ನೋಡಲು ಎಲ್ಲರಿಗೂ ಇಷ್ಟ. ಅಂದರೆ ದಂಪತಿಗಳಿಗೆ ಮುದ್ದು ಮುದ್ದಾದ ಎರಡು ಮಕ್ಕಳು ಮನೆ ತುಂಬಾ ಓಡಾಡಿಕೊಂಡಿದ್ದರೆ ನೋಡಲು ಬಲುಸೊಗಸು. ಕೆಲವರು ಉದ್ಯೋಗ,ಬಡ್ತಿ ಮೇಲೆ ಬಡ್ತಿ ,ಲಕ್ಷ ಲಕ್ಷ ಸಂಬಳ , ಆಸ್ತಿ ಮಾಡಿಕೊಳ್ಳುವುದು ಎಂಬ ಆಸೆಯ ಪಾಶಕ್ಕೆ ಸಿಲುಕಿ ಒಂದು ಮಗುವನ್ನು ಹೆರಲು ಕೂಡ ಮನಸ್ಸು ಮಾಡುವುದಿಲ್ಲ. ಇನ್ನೂ ಕೆಲವರು “ಅಯ್ಯೋ.. ಈಗಿನ ಖರ್ಚು ದುಬಾರಿ ಜೀವನಕ್ಕೆ ಒಂದೇ ಮಗು ಸಾಕಪ್ಪ… ಎರಡೆರಡು ಮಕ್ಕಳನ್ನು ಯಾರು ನೋಡಿಕೊಳ್ತಾರೆ…”ಎಂದು ರಾಗ ಎಳೆಯುತ್ತಾರೆ. ಒಂದು […]

ಹೆಣ್ಣು ಮತ್ತು ಭಯ: ಸಹನಾ ಪ್ರಸಾದ್

ನಮ್ಮ ಜಮಾನಾದಲ್ಲಿ…ತಡೆಯಿರಿ, ನಾನು ಇನ್ನು ಬದುಕಿರುವುದರಿಂದ, ಇದೂ ನನ್ನ ಜಮಾನ! ಆಯ್ತು, ನಾ ೨೦ರ ಹೊಸಿಲಲ್ಲಿ ಇರುವಾಗ ಅಂದರೆ ೧೯೮೦ ರಲ್ಲಿ. ದೆಹಲಿಯಲ್ಲಿ ಅಪ್ಪನ ಕೆಲಸದ ನಿಮಿತ್ತ ವಾಸ. ಹೇಳಿ ಕೇಳಿ ನಾನು ಚಿಕ್ಕ, ತೀರ ಆಧುನಿಕವೂ ಅಲ್ಲದೆ, ತೀರ ಸಾಂಪ್ರದಾಯಿಕವೂ ಅಲ್ಲದ ಸಂಸಾರಕ್ಕೆ ಸೇರಿದವಳು. ದೆಹಲಿಯ ವಾತಾವರಣ, ಜನ, ಭಾಷೆ ನೋಡಿ ನಡುಗಿ ಹೋಗಿದ್ದಂತೂ ನಿಜ. ಎಲ್ಲದಕ್ಕಿಂತ ಆಘಾತ ಆಗಿದ್ದು ದೆಹಲಿಯ ಜನ. ಉತ್ತರದ ಅನೇಕ ರಾಜ್ಯಗಳಿಂದ ವಲಸೆ ಬಂದವರು ಇಲ್ಲಿ ಜಾಸ್ತಿ ಸಂಖ್ಯೆಯಲ್ಲಿ ಇದ್ದಿದ್ದರಿಂದ […]

ಜಿಪುಣಾಗ್ರೇಸರರು: ವೈ. ಬಿ. ಕಡಕೋಳ

ದೈನಂದಿನ ಬದುಕಿನಲ್ಲಿ ಜಿಪುಣತನ ಇರಕೂಡದು. ಹಾಗೆ ಇದ್ದರೆ ಅಂತಹ ವ್ಯಕ್ತಿಗಳು ಯಾರಿಗೂ ಹೊಂದಿಕೊಳ್ಳಲಾರರು. ಅಂತವರನ್ನು ಯಾರೂ ಕೂಡ ಇಷ್ಟ ಪಡಲಾರರು. ಕಾಗೆ ಒಂದಗುಳ ಕಂಡರೆ ಕರೆಯುವುದು ತನ್ನ ಬಳಗವನ್ನು ಕಾಕಾ ಎಂದು. ಎಂಬ ಮಹತ್ವವನ್ನು ಪಕ್ಷಿ ಪ್ರಾಣಿಗಳಿಂದ ಕಲಿಯುವ ನಾವು ಕನಿಷ್ಟರಾಗಿ ಬದುಕುವುದು ತರವೇ. ? ಒಂದು ಸಲ ಯೋಚಿಸಿ. ಒಂದು ಸಲ ಒಬ್ಬ ವ್ಯಕ್ತಿ ಮರಭೂಮಿಯಲ್ಲಿ ತನ್ನ ನಾಯಿಯೊಂದಿಗೆ ಪ್ರವಾಸ ಆರಂಭಿಸಿದ್ದ. ಬೇಸಿಗೆ ಕಾಲ ಬೇರೆ ಅಂತಹ ಸ್ಥಳದಲ್ಲಿ ನೀರನ ಕೊರತೆ ಇತ್ತು. ಆತ ತನ್ನ […]

ವಾರಾಂತ್ಯದಲ್ಲೊಂದು ರಂಗ ರಸದೌತಣ

ಡಿಸೆಂಬರ್ ಕೊನೆವಾರ ಜಗತ್ತು ಪಟಾಕಿ ಹಾಡು ಕುಣಿತದ ಮೂಲಕ ಹೊಸವರ್ಷವನ್ನು ಬರಮಾಡಿಕೊಳ್ಳುಲು ಸಜ್ಜಾಗುತ್ತದೆ. ಆದರೆ ಮೈಸೂರಿನ ರಂಗಾಸಕ್ತರು ಅರ್ಥಪೂರ್ಣವಾಗಿ ಹೊಸವರ್ಷವನ್ನು ಬರಮಾಡಿಕೊಳ್ಳುತ್ತಾರೆ. ಮಾಗಿಯ ಚಳಿಗೆ ನಗರವೆಲ್ಲ ತಣ್ಣಗೆ ಮನೆಸೇರುವಾಗ ಕಲಾಮಂದಿರದ ಆವರಣದಲ್ಲಿ ನಿರಂತರ ರಂಗೋತ್ಸವ ಕಳೆಗಟ್ಟುತ್ತದೆ. ಬಣ್ಣ ಬಣ್ಣದ ಹೊರ ಆವರಣ, ಬೇರೆ ಬೇರೆ ಊರುಗಳಿಂದ ಬಂದ ರಂಗತಂಡಗಳ ನಾಟಕ ಪ್ರದರ್ಶನ, ಜನಪದ ಕಲಾಪ್ರಕಾರಗಳ ಅನಾವರಣ, ಕೊನೆಯಲ್ಲೊಂದು ರಂಗಸಂಗೀತಕ್ಕೆ ಪ್ರೇಕ್ಷಕರೆಲ್ಲರು ಸಾಕ್ಷಿಯಾಗುವ ಮೂಲಕ ರಂಗಭೂಮಿಯ ಹಬ್ಬವನ್ನು ಯಶಸ್ವಿಗೊಳಿಸುತ್ತಾರೆ. ಹೌದು ಪ್ರತಿವರ್ಷದಂತೆ ಈ ವರ್ಷವೂ ನಿರಂತರ ರಂಗೋತ್ಸವ ಇದೇ […]

ಸಾಧನೆಯ ಹಾದಿ: ವೆಂಕಟೇಶ್‌ ಚಾಗಿ

ಕಮಲಾಪುರ ಎಂಬ ಊರಿನಲ್ಲಿ ರಾಮಯ್ಯ ಎಂಬ ರೈತನಿದ್ದನು. ರಾಮಯ್ಯ ತನಗೆ ತನ್ನ ಪೂರ್ವಿಕರಿಂದ ಬಂದ ಜಮೀನಿನಲ್ಲಿ ಉತ್ತಿ ಬಿತ್ತಿ ಬೆಳೆ ಬೆಳೆದು ಸುಖವಾಗಿ ಜೀವನ ಸಾಗಿಸುತ್ತಿದ್ದನು. ಯಾವುದೇ ಆಮೀಷಕ್ಕೆ ಅತೀ ಆಶೆಗೆ ಒಳಗಾಗದೇ ಕಷ್ಟ ಪಟ್ಟು ದುಡಿಯುವುದೇ ಅವನ ನಿತ್ಯ ಕಾಯಕವಾಗಿತ್ತು. ತನ್ನ ದಿನದ ಬಹುತೇಕ ಭಾಗವನ್ನು ಹೊಲ ಗದ್ದೆಗಳಲ್ಲಿ ಕಳೆಯುತ್ತಿದ್ದನು. ಕೆಲವು ಜನರು ಅವನನ್ನು ಆಸೆಬುರುಕ ಎಂತಲೂ ಲೋಭಿ ಎಂತಲೂ ಮತಿ ಹೀನ ಎಂತಲೂ ಕರೆಯುತ್ತಿದ್ದರು. ಆದರೂ ಯಾರ ಮಾತಿಗು ಗಮನ ಕೊಡದೆ ತನ್ನ ಕಾಯಕವನ್ನು […]

ಸರಸ್ವತಿ ಪುರಂದರ ದಾಸರ ಸತಿ ಸದ್ಗತಿ!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಪ್ರತಿಯೊಬ್ಬ ಮಹಾನ್ ಪುರುಷನ ಮಹಾನ್ ಸಾಧನೆಯ ಹಿಂದೆ ಒಬ್ಬ ಸ್ತ್ರೀ ಇರುತ್ತಾಳೆ ಎಂದು ಹೇಳಿರುವುದನ್ನು ಕೇಳಿರುತ್ತೇವೆ! ಗಾಂಧಿ, ಶಿವಾಜಿಯ ಮಹಾನ್ ಸಾಧನೆಯ ಹಿಂದೆ ಇದ್ದ ಸ್ತ್ರೀಯರು ಯಾರೆಂದು ಎಲ್ಲರೂ ತಿಳಿದಿದ್ದಾರೆ! ಕರ್ನಾಟಕ ಸಂಗೀತ ಪದ್ದತಿಯ ಪಿತಾಮಹಾ, ದಾಸವರೇಣ್ಯ, ಭಕ್ತಿಯಿಂದ ಮುಕ್ತಿ ಮಾರ್ಗ ತೋರಿದ ಪುರಂದರ ದಾಸರು ಯಾರಿಗೆ ತಾನೇ ಗೊತ್ತಿಲ್ಲ? ಅವರು, ಅವರ ಕೀರ್ತನೆಗಳು ಎಲ್ಲ ಜನರಿಗೂ ಗೊತ್ತು! ಆದರೆ ಅವರು ಹರಿದಾಸರಾಗಿ ಪ್ರಖ್ಯಾತಿ ಹೊಂದಲು ಕಾರಣವಾದ ಅವರ ಹೆಂಡತಿ ಬಗ್ಗೆ ಎಷ್ಟು ಜನಕ್ಕೆ ಗೊತ್ತು? ಕೆಲವರಿಗೆ […]