Facebook

Archive for 2020

ಗಿರಿಕನ್ಯೆಯ ಗುನುಗು: ಗೀತಾ ಪ್ರಸನ್ನ

ಅಣ್ಣಾವ್ರ ಗಿರಿಕನ್ಯೆ ಬರ್ತಿತ್ತು ಇವತ್ತು. ಎಷ್ಟ್ ಚೆಂದದ ಜೋಡಿ.. ಚೆನ್ನ ಚೆಲುವೆ. ಜಯಮಾಲಾ ಎಳೇ ಬಳ್ಳಿ, ಅಣ್ಣಾವ್ರ ಕರಿಷ್ಮಾ – ಇಬ್ಬರ ಜೋಡಿ ಆಹಾ.. ಆ ಎವರ್ ಗ್ರೀನ್ ಹಾಡುಗಳು. “ನಗು ನಗುತಾ ನೀ ಬರುವೆ.. ನಗುವಿನಲೆ ಮನ ಸೆಳೆವೆ.. “ ಆಹಾ ಎಂಥಾ ಮುದ. ದೋಣಿಯಲ್ಲಿ ಇಬ್ಬರ ರೋಮ್ಯಾನ್ಸ್!! ಈ ದೋಣಿ ಸೀನ್ ನೋಡಿ ಸೀದಾ ಕಾಲೇಜು ದಿನಕ್ಕೆ ಹೋಯ್ತು ನೆನಪು. ಅಣ್ಣಾವ್ರು ಹುಟ್ಟು ಹಾಕ್ತಾ ಇದ್ರೆ, ಚೆಲುವೆ ಎಳೇ ಬಳ್ಳಿ ಹಾಗೆ ಮರಕ್ಕೆ ಹಬ್ಬಿಕೊಳ್ಳೋ […]

ಪಂಜು ಕಾವ್ಯಧಾರೆ

ಮಳೆ – ಇಳೆ ಮಳೆಯ ಹನಿಗೆ ಇಳೆಯು ನಡುಗಿದೆಎದೆಯ ಗೂಡಿಗೆ ಮನವು ಮಿಡಿದಿದೆಹಸಿರು ತೋರಣವ ತೊಳೆದು ಬೆಳಗಿದೆಮನಕೆ ಮುದವ ತಂದು ಹಿತವಾಗಿದೆ ಬೀಸುವ ತಂಗಾಳಿ ನಿನ್ನ ನೆನಪಿಸಿದೆತೋಳು ಬಯಸಿ ಕೈಬೀಸಿ ಕರೆದಿದೆಬಂದು ಸೇರುವ ಬಯಕೆ ಮನದಲಿ ನೆಟ್ಟಿದೆಪಿಳಿಪಿಳಿಸುತ ಕಣ್ಣದೃಷ್ಟಿ ನಿನ್ನತ್ತಲೇ ನಾಟಿದೆ. ನೆನಪು ಬರಿಸುತ ತಿಳಿಗಾಳಿ ಚೇಡಿಸುತಿದೆಮಳೆಯ ಹನಿಯೂ ಸಾತ್ ನೀಡುತಿದೆಬಾ ಎನ್ನ ಬಳಿಗೆ ಹೇ… ಜೀವ ಒಲವೆಮೋಡ ಸರಿದು ಬಾನು ಭೂಮಿ ಒಂದಾಗಿವೆ. ನಿನ್ನಿಧ್ವನಿ ಕೇಳದೆ ಕರ್ಣಪಟಲವೇ ಮಂಕಾಗಿದೆನಿನ್ನಿನಿಯನ ಮನವು ಕಾದು ಕಾದು ಸೋತಿದೆಕಣ್ಣ ಕಾಂತಿಯಲೇ […]

ದೊಡ್ಡೂರು ಮತ್ತು ಅವಲಕ್ಕಿ: ಗುರುಪ್ರಸಾದ ಕುರ್ತಕೋಟಿ

ನಾನು ಬೆಳೆದ ಲಕ್ಷ್ಮೇಶ್ವರ (ಈಗಿನ ಗದಗ ಜಿಲ್ಲೆ) ನಾನಾ ಕಾರಣಗಳಿಂದ ನನಗೆ ಇಷ್ಟ. ಅದೊಂದು ಐತಿಹಾಸಿಕ ಮಹತ್ವವುಳ್ಳ ಊರು. ಅದರ ಸುತ್ತಲೂ ತುಂಬಾ ಹಳ್ಳಿಗಳು ಇವೆ. ಅದರಲ್ಲೇ ಕಳಶಪ್ರಾಯವಾದ ಹಳ್ಳಿಯ ಹೆಸರು ದೊಡ್ಡೂರು. ಅದೊಂದು ಚಿಕ್ಕ ಹಳ್ಳಿ ಆದರೂ ಹೆಸರು ಮಾತ್ರ ದೊಡ್ಡೂರು. ಒಂದು ಕಾಲದಲ್ಲಿ ಆ ಪ್ರದೇಶದಲ್ಲಿ ಅದೇ ದೊಡ್ಡ ಊರಾಗಿತ್ತೋ ಏನೋ. ಒಟ್ಟಿನಲ್ಲಿ ನನ್ನ ತಲೆಯಲ್ಲಿ ಹಳ್ಳಿಗಳ ಬಗ್ಗೆ ಒಂದು ವಿಶಿಷ್ಟ ಗೌರವ ಹುಟ್ಟಿಸಿ, ಕೃಷಿ ಬಗ್ಗೆ ನನ್ನ ತಲೆಯಲ್ಲಿ ಆಳವಾಗಿ ಬೀಜ ಬಿತ್ತಿದ […]

ಕಾಂತಾಸಮ್ಮಿತ: ಸುಂದರಿ ಡಿ

ಅದೊಂದು ಸಂಜೆ ಸ್ನೇಹಿತೆಯ ಮನೆಗೆ ಹೋಗಲೇಬೇಕಾಯಿತು, ಕಾರಣ ಬಹಳ ಕಾಲ ಸಬೂಬು ಹೇಳಿ ಸಾಕಾಗಿ ಆ ದಿನ ಅವಳ ಮನೆಯ ಬಳಿಯೇ ಹೋಗುವಾಗ ಅವಳ ಕಣ್ಣಲ್ಲಿ ಬಂಧಿಯಾದ ಮೇಲೆ ತಪ್ಪಿಸಿಕೊಳ್ಳುವುದಾದರೂ ಹೇಗೆ? ಕುಳಿತು ಆತಿಥ್ಯ ಸ್ವೀಕರಿಸಿಯೂ ಆಯಿತು. ಯಾರದೋ ಮನೆಗೆ ಹೋಗೋಣವೆಂದು ಕರೆದಳು. ಹೋಗಲು ಮನಸಿಲ್ಲ, ಕಾರಣ ಆಗಲೇ ಸಂಜೆಯಾಗಿತ್ತು, ಜೊತೆಗೆ ಯಾರದೋ ಮನೆಗೆ ನಾನೇಕೆ ಹೋಗುವುದು? ಹಾಗಾಗಿ ಬೇಡವೆಂದು ನಿರಾಕರಿಸಿದೆ. ಆದರೆ ಆಕೆ ಟಪ್ಪರ್‍ವೇರ್ ಡಬ್ಬಿ ಖರೀದಿಸುತ್ತಿದ್ದಳು ಅದನ್ನು ನೋಡಿ ನಾನು ಅಸ್ತು ಎನ್ನಬೇಕಿತ್ತು, ಕಾರಣ […]

ಡಾರ್ಕ್‍ವೆಬ್: ಸಾಮಾನ್ಯರಿಗೆ ನಿಲುಕದ ನಕ್ಷತ್ರ: ಚಾರು ಮಂಜುರಾಜ್

ನಮಗಿಷ್ಟವಾದುದನ್ನು ಆನ್‍ಲೈನ್‍ನಲ್ಲಿ ತರಿಸಿಕೊಳ್ಳುವಾಗಲೋ ಸ್ನೇಹಿತರಿಗಾಗಿ ಉಡುಗೊರೆಗಳನ್ನು ಕೊಳ್ಳುವಾಗಲೋ ಗೂಗಲ್‍ನಲ್ಲಿ ಕಾಣುವ ಪುಟಗಳು ಸರ್‍ಫೇಸ್ ವೆಬ್. ಅಂದರೆ ನಾವು ಗೂಗಲ್‍ನಲ್ಲಿ ಜಾಲಾಡುವಾಗ ಅದರಲ್ಲಿ ತೆರೆದುಕೊಳ್ಳುವ ಪ್ರತಿಯೊಂದು ಪುಟವೂ ಇಂಥ ಸರ್‍ಫೇಸ್ ವೆಬ್ಬೇ! ದಿನನಿತ್ಯ ನಾವು ಅಂತರ್ಜಾಲದೊಂದಿಗೆ ವ್ಯವಹರಿಸುವಾಗ ಕೇವಲ ಶೇಕಡ ಒಂದರಷ್ಟು ಮಾತ್ರ ಮಾಹಿತಿಯನ್ನು ಎಕ್ಸ್‍ಪ್ಲೋರ್ ಮಾಡುತ್ತಿರುತ್ತೇವೆ. ಉಳಿದ ಶೇಕಡ 96 ರಿಂದ 99 ರಷ್ಟು ಮಾಹಿತಿಗಳು ಡೀಪ್‍ವೆಬ್ ಮತ್ತು ಡಾರ್ಕ್‍ವೆಬ್‍ಗಳಲ್ಲಿ ಅಡಗಿರುತ್ತವೆ. ಎರಡಂತಸ್ತಿನ ಕಟ್ಟಡವೊಂದರಲ್ಲಿ ಮೇಲೆ ಕಾಣುವುದೇ ನಾವು ಜಾಲಾಡುವ ತಾಣಗಳು, ಆನಂತರದ್ದು ಡೀಪ್‍ವೆಬ್. ಅದರ ಕೆಳಗಿರುವುದೇ […]

ಬದುಕು ಮಾಯದ ಆಟ…: ಪಿ.ಎಸ್.ಅಮರದೀಪ್.

ಇದೇನ್  ಕಾಕಾ, ಯಾಕೆ ಹೀಗೆ ಮಾಡಿದ್ರಿ?  ಏನಿತ್ತು ಅಂಥ ಅವಸರ.  ಇನ್ನೂ ಒಂದಿಷ್ಟು ಹುಡುಗರಿಗೆ ದುಡಿಯುವ ದಾರಿ ತೋರಿಸಿ ಅವರಿಗೆ ಜೀವನ‌ದ ಪಾಠ ಹೇಳಿಕೊಡವುದು ಬಾಕಿ ಇತ್ತು.  ದಿನದ ಇಪ್ಪತ್ನಾಲ್ಕು ಗಂಟೆಗಳನ್ನು ಅದೇಗೆ‌ ದುಡಿಸಿಕೊಳ್ಳುವುದು‌ ಎನ್ನುವುದರ ಬಗ್ಗೆ ನಿಮ್ಮಿಂದ ನೋಡಿ ನಮ್ಮಂಥವರಿಗೆ ಕಲಿಯುವುದೂ ಇತ್ತು.  ಬಹಳ ಆತುರ ಪಟ್ಟು ಹೊರಟಿರಿ… ಮೊದಲೆಲ್ಲಾ ನೀವು ಪಕ್ಕಾ ಪ್ಲಾನ್ ಮಾಡುತ್ತಿದ್ದಿರಿ.. ಯಾವ ವಯಸ್ಸಿನಲ್ಲಿ ಎಷ್ಟು ಕಷ್ಟ‌ಪಡಬೇಕು, ಎಷ್ಟು ದುಡಿಯಬಹುದು, ಏನೆನೆಲ್ಲಾ ಕೆಲಸ ಮಾಡಲು ನಮಗೆ ಅವಕಾಶ ಇವೆ.. ಯಾರೆಲ್ಲಾ ಏನೇನು‌ ಕೆಲಸ ಮಾಡಬಲ್ಲರು? ಯಾರಿಂದ ಯಾವ ಮತ್ತು  ಎಷ್ಟು ಕೆಲಸ ಪಡೆಯಬಹುದು ಹೀಗೆ…  ಅದ್ಯಾಕೆ […]

ಮರೆಯಲಾಗದ ಮದುವೆ (ಭಾಗ 11): ನಾರಾಯಣ ಎಮ್ ಎಸ್

-೧೧- ಗಂಡಿನಮನೆಯವರನ್ನು ಸ್ವಾಗತಿಸಲೆಂದು ಈಗಾಗಲೇ ರೈಲ್ವೇಸ್ಟೇಷನ್ನಿಗೆ ಬಂದಿದ್ದ ಕೃಷ್ಣಯ್ಯರ್ ಮಕ್ಕಳಾದ ಶೇಖರ್ ಮತ್ತು ಮೋಹನ್ ತಮ್ಮ ಪತ್ನಿಯರೊಂದಿಗೆ ಅಯ್ಯರ್ ಕುಟುಂಬದವರಿಗಾಗಿ ಕಾಯುತ್ತಿದ್ದರು. ಸುಮಾರು ನಾಲ್ಕು ಘಂಟೆಹೊತ್ತಿಗೆ ತಿರುವಾರೂರಿನ ರೈಲು ವಿಶಾಖಪಟ್ಟಣ ಸ್ಟೇಷನ್ನಿಗೆ ಬಂದು ತಲುಪಿತು. ಜೋತುಮೋರೆ ಹಾಕಿಕೊಂಡು ಒಲ್ಲದ ಮನಸ್ಸಿನಿಂದ ಯಾಂತ್ರಿಕವಾಗಿ ಒಬ್ಬೊಬ್ಬರೇ ರೈಲಿನಿಂದಿಳಿಯುತ್ತಿದ್ದ ಗಂಡಿನ ಮನೆಯವರನ್ನು ಕಂಡ ಶೇಖರ್ ಮತ್ತು ಮೋಹನರಿಗೆ ಎಲ್ಲವೂ ಸರಿಯಿಲ್ಲವೆಂಬ ಸುಳಿವು ಮೇಲ್ನೋಟಕ್ಕೇ ಸಿಕ್ಕಿಹೋಯಿತು. ಅತಿಥಿಗಳ ಲಗೇಜುಗಳನ್ನು ಒತ್ತಾಯದಿಂದ ಕೆಳಗಿಳಿಸಿಕೊಳ್ಳುವಾಗ ಹೆಂಗಸರು ಸಣ್ಣಗೆ ಅಳುತ್ತಿದ್ದುದು ಗಮನಿಸಿ ಏನೋ ಎಡವಟ್ಟಾಗಿರಬೇಕೆಂದು ಗಾಬರಿಯಾಯ್ತು. ಸುಬ್ಬುವನ್ನು […]

ಹೆಬ್ಬಲಸು : ಅಪರೂಪದ ಕಾಡುಹಣ್ಣು: ಚರಣಕುಮಾರ್ ಮತ್ತು ಡಾ. ಶ್ರೀಕಾಂತ್ ಗುಣಗಾ

ಹೆಬ್ಬಲಸು : ಅಪರೂಪದ ಕಾಡುಹಣ್ಣುArtocarpus hirsutus Lam.ಕುಟುಂಬ: ಮೊರೇಸಿ ವಿತರಣೆ: ಭಾರತೀಯ ಮೂಲದ ಬೃಹದ್ಧಾಕಾರದ ವೃಕ್ಷ ಪಶ್ಚಿಮ ಘಟ್ಟದ ನಿತ್ಯಹರಿಧ್ವರ್ಣ ಮತ್ತು ಅರೆ-ನಿತ್ಯಹರಿಧ್ವರ್ಣ ಕಾಡುಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಪರಿಚಯ: ನೇರವಾಗಿ ಬೆಳೆಯುವ ಎತ್ತರದ ಮರ. ಕಂದು ಬಣ್ಣದ ತೊಗಟೆ. ತೊಗಟೆಯ ಮೇಲೆ ಸಣ್ಣ ವಾತರಂದ್ರಗಳು. ಗಾಯವಾದ ತೊಗಟೆಯಿಂದ ಹೊರಸೂಸುವ ಹಾಲಿನಂತ ಅಂಟು ಸೊನೆ. ಅಗಲವಾದ ಹುರುಬುರುಕಿನ ಎಲೆಗಳು ಕಡು ಹಸಿರಿನಿಂದ ಕೂಡಿವೆ. ಎಲೆಗಳ ಮೇಲೆ ಅಚ್ಚಾಗಿ ಮೂಡಿರುವ ನರಗಳಿವೆ. ಗಂಡು ಮತ್ತು ಹೆಣ್ಣು ಹೂವುಗಳು ಬೇರೆ ಬೇರೆಯಾಗಿರುತ್ತವೆ. […]

‘ನುಡಿಯೊಳಗಾಗಿ ನಡೆಯದಿದ್ದರೆ ಮೆಚ್ಚ …: ಡಾ. ಹೆಚ್ಚೆನ್ ಮಂಜುರಾಜ್

ಮೋಸ ವಂಚನೆಗಳಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ನನ್ನನ್ನು ತುಂಬ ಕಾಡುವುದು ಆತ್ಮವಂಚನೆ ಎಂಬುದು. ಅಂದರೆ ನಮ್ಮನ್ನು ನಾವೇ ವಂಚಿಸಿಕೊಳ್ಳುವ ವೈಖರಿಯೇ ಕಂಗೆಡಿಸುವ ವಿಚಾರ. ಆತ್ಮವಂಚನೆಯನ್ನೇ ರೂಢಿಸಿಕೊಂಡವರು ಕ್ರಮೇಣ ಬಂಡತನವನ್ನು ಬೆಳೆಸಿಕೊಂಡು ಸಂವೇದನಾಶೂನ್ಯರಾಗುವರೋ? ಅಥವಾ ಸಂವೇದನಾಶೀಲತೆ ಕಡಮೆಯಾದ ಮೇಲೆ ಆತ್ಮವಂಚನೆಗೆ ಇಳಿಯುತ್ತಾರೋ? ಸದಾ ಗೊಂದಲ ನನಗೆ. ನಾವೆಲ್ಲ ಒಂದಲ್ಲ ಒಂದು ಸಲ, ಒಂದಲ್ಲ ಒಂದು ದಿನ ಇಂಥ ಆತ್ಮವಂಚನೆಗೈದವರೇ! ಮನುಷ್ಯರಾದ ಮೇಲೆ ಇದೆಲ್ಲ ಮಾಮೂಲು ಎಂದು ಕೈ ತೊಳೆದುಕೊಂಡು ಬಿಡದೇ ಸೀರಿಯಸ್ಸಾಗಿ ಯೋಚಿಸಿದಾಗ ನನಗೆ ಹೊಳೆದದ್ದು: ಇದೊಂದು ಮನೋಬೇನೆ […]