Facebook

Archive for 2020

ಸೇತುವೆ….: ಸತೀಶ್ ಶೆಟ್ಟಿ ವಕ್ವಾಡಿ.

ಅದು ಶರದೃತುವಿನ ಬೆಳಗಿನ ಜಾವ. ಮುಂಗಾರಿನ ಮೋಡಗಳು ತೆರೆಮರೆಗೆ ಸರಿದು ಆಕಾಶ ಶುಭ್ರವಾಗಿತ್ತು. ಹುಣ್ಣಿಮೆಯ ದಿನವಾಗಿದ್ದರಿಂದ ಚಂದಿರ ಬೆಳ್ಳಿಯ ಬಟ್ಟಲಂತೆ ಸುಂದರವಾಗಿ ಕಾಣಿಸುತ್ತಿದ್ದ. ಮೋಡಗಳ ಸವಾಲುಗಳಿಲ್ಲದ ಕಾರಣ ತಾರೆಗಳು ಇಡೀ ಆಗಸವನ್ನು ಆಕ್ರಮಿಸಿ ತಮ್ಮ ಆಧಿಪತ್ಯ ಸ್ಥಾಪಿಸಿ, ಭಾನ ತುಂಬೆಲ್ಲಾ ಬೆಳಕಿನ ಸರಪಳಿ ನಿರ್ಮಿಸಿದ್ದವು. ಹುಣ್ಣಿಮೆಯ ಚಂದಿರ, ರಾತ್ರಿಯ ಕತ್ತಲೆಯನ್ನೆಲ್ಲ ತನ್ನ ಒಡಲೊಳಗೆ ತುಂಬಿಕೊಂಡು ಬೆಳದಿಂಗಳ ಮಳೆಯನ್ನೇ ಸುರಿಸುತ್ತಿದ್ದ. ಪಶ್ಚಿಮದಿಂದ ಬೀಸುತ್ತಿದ್ದ ತಂಗಾಳಿ, ನುಸುಕಿನ ಮಂಜಿನ ಹನಿಗಳ ಸಾಂಗತ್ಯದಿಂದ ಚಳಿಯು ಅನ್ನಿಸಿದ ತಣ್ಣನೆಯ ವಾತಾವರಣ ಸೃಷ್ಟಿಸಿತ್ತು. ಮರಗಿಡಗಳ […]

ಪ್ರೇಮನಾದ: ಸುಮ ಉಮೇಶ್

ರಾಧಮ್ಮನವರ ನಂತರ ಬಹಳ ವರ್ಷಗಳ ಮೇಲೆ ಹುಟ್ಟಿದವನೇ ಅವರ ತಮ್ಮ ಸುಧಾಕರ್. ರಾಧಮ್ಮನಿಗೂ ಸುಧಾಕರ್ ಗೂ ಅಂತರ ಹೆಚ್ಚಾಗಿದ್ದರಿಂದ ಅವನನ್ನು ಕಂಡರೆ ಎಲ್ಲರಿಗೂ ಅತೀವ ಪ್ರೀತಿ. ಅಕ್ಕನ ಮುದ್ದಿನ ತಮ್ಮ ಅವನು. ರಾಧಮ್ಮನವರ ಮದುವೆ ಆದಾಗ ಸುಧಾಕರ್ಗೆ ಕೇವಲ ಎಂಟು ವರ್ಷ. ಮದುವೆ ಆದ ವರ್ಷದೊಳಗೆ ರಾಧಮ್ಮ ಹೆಣ್ಣು ಮಗುವಿನ ತಾಯಿ ಆದಾಗ ಎಲ್ಲರಿಗೂ ಸಂತಸ. ರಾಧಳ ತಂದೆ ತಾಯಿಗೆ ದೂರದ ಒಂದು ಆಸೆ ಮೊಳೆಯಲಾರಂಭಿಸುತ್ತದೆ. ಪುಟ್ಟ ಸುರಭಿಯೇ ಮುಂದೆ ಸುಧಾಕರ್ನ ಕೈ ಹಿಡಿದು ಮೊಮ್ಮಗಳು ಮನೆ […]

ಸಾರ್ಥಕ್ಯ: ಡಾ. ಅಜಿತ್ ಹರೀಶಿ

ಎಂದಿನಂತೆ ಊರ ಈಶ್ವರ ದೇವರ ಪೂಜೆ ಮುಗಿಸಿ ಜನಾರ್ದನ ಭಟ್ಟರು ದೇವಸ್ಥಾನದ ಮೆಟ್ಟಿಲಿಳಿಯುತ್ತಿದ್ದರು. ಅಲ್ಲಿಂದ ಕೂಗಳತೆಯ ದೂರದಲ್ಲೇ ಅವರ ಮನೆ. ಪೂಜೆ ಮುಗಿಸಿ ಏಳುವಾಗಲೇ ತಲೆಯಲ್ಲಿ ಏನೋ ಒಂಥರಾ ಭಾರವಾದ ಹಾಗೆ ಅವರಿಗೆ ಅನ್ನಿಸಿತ್ತು. ನಾಲ್ಕು ಹೆಜ್ಜೆ ಹಾಕಿದಾಗ ದೇಹ ತೂಗಿದಂತೆ ಭಾಸವಾಗಿತ್ತು. ಆದರೂ ಅಲ್ಲಿ ಕುಳಿತುಕೊಳ್ಳದೇ ಬೇಗ ಮನೆಗೆ ಹೋಗಿ ವಿಶ್ರಾಂತಿ ತೆಗೆದುಕೊಂಡರಾಯಿತು ಎಂದುಕೊಂಡು ಕೊನೆಯ ಮೆಟ್ಟಿಲು ಇಳಿಯುತ್ತಿದ್ದರು. ಇಡೀ ದೇಹವು ಬಾಳೆದಿಂಡನ್ನು ಕತ್ತಿಯಿಂದ ಕಡಿದಾಗ ಬೀಳುವಂತೆ ಕುಸಿದು ಬಿತ್ತು. ಕೆಲ ಕ್ಷಣಗಳ ಮಟ್ಟಿಗೆ ಅವರಿಗೆ […]

ಹಣ್ಣೆಲೆಯ ಹಾಡು: ಗಿರಿಜಾ ಜ್ಞಾನಸುಂದರ್

ಎಳೆ ಬಿಸಿಲು ಅಂದವಾದ ಬೆಳಕು ಬೀರುತ್ತಾ ಎಲ್ಲೆಡೆ ಹರಡುತ್ತಿದೆ. ಅಂಗಳದಲ್ಲಿ ಆರಾಮ ಖುರ್ಚಿಯಲ್ಲಿ ಬಿಸಿಲು ಕಾಯುತ್ತ ಮೈಯೊಡ್ಡಿರುವ ಕೃಷ ದೇಹದ ವೃದ್ಧ ಶ್ರೀನಿವಾಸ. ವಯಸ್ಸು ಸುಮಾರು ೮೯- ೯೦ ಆಗಿರಬಹುದು. ಸುಕ್ಕುಗಟ್ಟಿದ ಮುಖ, ಪೂರ್ತಿ ನರೆತ ಕೂದಲು. ಹಣೆಯಮೇಲೆ ಎದ್ದು ಕಾಣುವ ಗೆರೆಗಳು, ಬೊಚ್ಚು ಬಾಯಿ. ಇಷ್ಟೆಲ್ಲದರ ಮಧ್ಯೆ ಏನನ್ನೋ ಕಳೆದುಕೊಂಡು ಹುಡುಕುತ್ತಿರುವಂಥ ಕಣ್ಣುಗಳು. ತನ್ನ ಮಕ್ಕಳು ಮೊಮ್ಮಕ್ಕಳೊಂದಿಗೆ ಸುಖವಾದ ಜೀವನ ಕಾಣುತ್ತಿರುವ ಹಿರಿಯ ಜೀವ. ದಿನವೂ ವಿಶ್ರಮಿಸುತ್ತ, ತನ್ನ ಹಿಂದಿನ ದಿನಗಳನ್ನು ನೆನೆಯುತ್ತ ಮೆಲುಕು ಹಾಕುವ […]

ಕಣ್ಣಾ ಮುಚ್ಚಾಲೆ..: ಜೆ.ವಿ.ಕಾರ್ಲೊ

ಇಂಗ್ಲಿಶ್ ಮೂಲ: ಗ್ರಹಾಂ ಗ್ರೀನ್ಅನುವಾದ: ಜೆ.ವಿ.ಕಾರ್ಲೊ ಬೆಳಕು ಮೂಡುತ್ತಿದ್ದಂತೆ ಪೀಟರನಿಗೆ ತಕ್ಷಣ ಎಚ್ಚರವಾಯಿತು. ಕಿಟಕಿಯ ಗಾಜಿನ ಮೇಲೆ ಮಳೆ ರಪರಪನೆ ಬಡಿಯುತ್ತಿತ್ತು. ಅಂದು ಜನವರಿ ಐದುಅವನ ಕಣ್ಣುಗಳು ಪಕ್ಕದ ಮಂಚದ ಮೇಲೆ ಮುಸುಕು ಎಳೆದುಕೊಂಡು ಇನ್ನೂ ಮಲಗಿದ್ದ ಅವನ ತಮ್ಮ ಫ್ರಾನ್ಸಿಸನ ಮೇಲೆ ನೆಲೆಗೊಂಡವು. ಅವನಿಗೆ ತನ್ನ ಪ್ರತಿರೂಪವನ್ನೇ ನೋಡಿದಂತಾಯಿತು! ಅದೇ ಕೂದಲು, ಕಣ್ಣುಗಳು, ತುಟಿಗಳು, ಕೆನ್ನೆ.. ಅವನ ತುಟಿಗಳ ಮೇಲೆ ಮಂದಹಾಸ ಮೂಡಿತು.ಜನವರಿ ಐದು. ಮಿಸೆಸ್ ಫಾಲ್ಕನಳ ಮಕ್ಕಳ ಪಾರ್ಟಿ ನಡೆದು ಆಗಾಗಲೇ ಒಂದು ವರ್ಷವಾಯಿತೆಂದು […]

ಮೂಡಿದ ಬೆಳಕು…: ಭಾರ್ಗವಿ ಜೋಶಿ

ಎಲ್ಲ ಕಡೆ ಝಗಮಗಿಸುತ್ತಿದ್ದ ದೀಪಗಳ ಸಂಭ್ರಮ. ಸಾಲು ಸಾಲು ದೀಪಗಳು ಇಡೀ ಬೀದಿಯ ಸಂಭ್ರಮ ಸೂಚಿಸುತ್ತಿತ್ತು.. ಆ ಬೀದಿಯ ಕೊನೆಯ ಮನೆಯಲ್ಲಿ ಮಾತ್ರ ಮೌನ. ಬೆಳಕು ತುಸು ಕೊಂಚ ಕಡಿಮೆಯೇ ಇತ್ತು. ಬಡವ -ಬಲ್ಲಿದ ಯಾರಾದರೇನು ಜ್ಯೋತಿ ತಾನು ಬೆಳಗಲು ಬೇಧ ಮಾಡುವುದಿಲ್ಲ ಅನ್ನೋ ಮಾತು ನಿಜವೇ? ಎಣ್ಣೆಗೆ ಕಾಸು ಇಲ್ಲದ ಬಡವರ ಮನೆಯಲ್ಲಿ ಜ್ಯೋತಿ ಉರಿದಿತೇ? ಬೆಳಕು ಚಲ್ಲಿತೇ? ಹೀಗೆ ಕತ್ತಲು ಆವರಿಸಿದ ಆ ಮನೆ, ಮನೆಯೊಡತಿ ಜಾನಕಮ್ಮ, ಪತಿ ರಾಮಣ್ಣ ಅವರ ಒಬ್ಬನೇ ಮಗ […]

ಒಂಟೆ ಡುಬ್ಬ: ಡಾ. ಅಶೋಕ್. ಕೆ. ಆರ್

ಬೈಕೋಡಿಸುವಾಗ ರಶಿಕ ಕನ್ನಡ ಹಾಡುಗಳನ್ನು ಕೇಳುವುದಿಲ್ಲ.ಬ್ಲೂಟೂಥ್ ಹೆಲ್ಮೆಟ್ಟಿನಲ್ಲಿ ಸಣ್ಣಗಿನ ದನಿಯಲ್ಲಿ ಗುನುಗುತ್ತಿದ್ದುದು ಮಲಯಾಳಂ, ತಮಿಳು ಹಾಡುಗಳು.ಕನ್ನಡ ಹಾಡ್ ಹಾಕಂಡ್ರೆ ಪ್ರತಿ ಪದಾನೂ ಅರ್ಥವಾಗ್ತ ಆಗ್ತ ಹಾಡಿನ ಗುಂಗಲ್ಲಿ ಸುತ್ತಲಿನ ಪರಿಸರ ಮರ್ತೋಗ್ತದೆ, ಹಂಗಾಗಿ ಭಾಷೆ ಅರ್ಥವಾಗ್ದಿರೋ ಹಾಡುಗಳೇ ವಾಸಿ.ರಾತ್ರಿಯಿಂದ ಬೋರ್ಗರೆದಿದ್ದ ಮಳೆ ಬೆಳಿಗ್ಗೆ ವಿರಮಿಸಿತ್ತು.“ಈ ಕಡೆ ರೋಡಲ್ಲಿ ಒಂದ್ ಮೂವತ್ ಕಿಲೋಮೀಟ್ರು ಹೋದ್ರೆ ಕರ್ಮುಗಿಲು ಅನ್ನೋ ಊರು ಸಿಗ್ತದೆ. ಹೆಚ್ಚೇನಿಲ್ಲ ಅಲ್ಲಿ. ಒಳ್ಳೆ ಸನ್ ರೈಸ್ ಪಾಯಿಂಟಿದೆ ಅಲ್ಲಿ. ಮೋಡ ಇದ್ರೆ ನಿರಾಸೆಯಾಗ್ತದೆ. ನೋಡಿ. ಡಿಸೈಡ್ ಮಾಡಿ” […]

ಮತ್ತೆ ವಸಂತ: ಶ್ರೇಯ ಕೆ ಎಂ

ಸ್ಮಿತಾ ಹಾಗೆಯೇ ಚೇರ್ ಗೆ ಒರಗಿದ್ದಾಳೆ. ಕಣ್ಣಂಚಲ್ಲಿ ನೀರಾಡಿದೆ. ಹಾಗೇ ಹಿಂದಿನ ನೆನಪುಗಳತ್ತ ಜಾರುತ್ತಿದೆ ಮನಸು. ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಸ್ಮಿತಾ ಓದಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಟೋಟ ಸ್ಪರ್ಧೆಗಳಲ್ಲಿ ಎಲ್ಲದರಲ್ಲೂ ಮುಂದು. ಮನೆಯಲ್ಲಿ ಮುದ್ದಿನ ಮಗಳು. ಒಡಹುಟ್ಟಿದವರೊಂದಿಗೆ ಬೆಳೆದ ಸ್ಮಿತಾ ಮನೆಯವರೆಲ್ಲರ ಪಾಲಿನ ಅಚ್ಚುಮೆಚ್ಚು. ಮಧ್ಯಮವರ್ಗದ ಕುಟುಂಬವಾದರೂ ಇದ್ದುದರಲ್ಲಿಯೇ ಸುಖವಾಗಿದ್ದ ಸಂಸಾರ. ಪದವಿ ಓದಿನ ಜೊತೆಗೆ ಹಲವಾರು ಕಲೆಗಳನ್ನು ಕಲಿತವಳು. ಹೀಗೆ ಸಾಗುತ್ತಿದ್ದ ಸಂಸಾರದಲ್ಲಿ ಒಮ್ಮೆ ಅದೆಲ್ಲಿಂದಾನೋ ಒಂದು ಗಂಡಾಂತರ ಬಂದು ಸ್ಮಿತಾಳ ಬಾಳೇ ಛಿದ್ರವಾಗಿ […]

ಬಯಲಾಗದ ಬಣ್ಣ: ಅನುರವಿಮಂಜು

ಶೋಭಿತಾಳ ಗಂಡ ತೀರಿಕೊಂಡು ವರ್ಷ ಕಳೆದಿದೆ, ಅವಳೀಗ ಒಂಟಿ ಜೀವನ ನಡೆಸುತ್ತಿದ್ದಾಳೆ. ನಿನ್ನ ಅಂದಿನ ಪ್ರೀತಿ ಇನ್ನು ಜೀವಂತ ಇರುವುದಾದರೆ ಅವಳನ್ನು ಮದುವೆಯಾಗಿ ಹೊಸ ಬದುಕನ್ನು ನೀಡು. ಆಕಸ್ಮಿಕವಾಗಿ ಭೇಟಿಯಾದ ಆತ್ಮೀಯ ಗೆಳೆಯ ಗೌತಮ್ ಆಚ್ಚರಿಯ ಸಂಗತಿ ತಿಳಿಸಿ ಸಲಹೆ ನೀಡಿದ. ಆತನ ಮಾತು ಕೇಳಿ ನನ್ನೊಳಗಿದ ಸೂಕ್ತ ಬಯಕೆಗಳು ಗರಿಗೆದರಿದವು. ಒಂದು ನಿರ್ಧಾರಕ್ಕೆ ಸಿದ್ದನಾದೆ, ಶೋಭಿತಾಳೊಂದಿಗೆ ಉತ್ತಮ ಸ್ನೇಹ ಸಂಬಂಧ ವಿರಿಸಿದ್ದರಿಂದ ನನ್ನ ಮಾತನ್ನು ತಿರಸ್ಕರಿಸಲಾರಳೆಂಬ ನಂಬಿಕೆ ಇತ್ತು. ಒಂಟಿ ಜೀವನ ಅವಳಿಗೂ ಬೇಸರ ತಂದಿರಬಹುದು. […]

ಕಿರುಗತೆಗಳು: ಜಯಂತ್ ದೇಸಾಯಿ

ಬಣ್ಣದ ಬಾರಿಗೆ( ಬಣ್ಣದ ಪೊರಕೆ) ಬಾರಿಗೆಮ್ಮೋ ಬಾರಿಗೆ 30 ರೂಪಾಯಿಗೆ ಜೊತಿ ಬಾರಿಗೆ ಸ್ವಲ್ಪವೇ ಅವ ನೋಡ್ರೆಮ್ಮೋ ಅಂತ ಕೂಗುತ್ತಾ ಹಳ್ಳಿಯ ಸಂದಿಸಂದಿಯ ಒಳಗೆ ನುಗ್ಗಿ ಹೋಗುತ್ತಿದ್ದ ಶರಣಪ್ಪ ನ ದ್ವನಿ ಕೇಳಿ ನಿರ್ಮಲ ನುಡಿದಳು ಹೇ ನಿಂದ್ರಪ್ಪ ನಿಂದ್ರು ಹೆಂಗ್ ಕೊಟ್ಟಿ ಅಂದಿ, 30 ರೂಪಾಯಿಗೆ ಅಂದ್ರ ಭಾಳಾ ಫೀರೆ ಆತು ಕಡಿಮೆ ಮಾಡು, ನೋಡಿದ್ರ ನಾಕು ಕಡ್ಡಿ ಇಲ್ಲ ಇದ್ರಾಗ, ಅವ್ವ ಹಂಗನ್ನ ಬ್ಯಾಡ ಗಿರಿ ಗಿರಿ ಹಾಕಿ ಎಳೆದು ಎಳೆದು ತೀಡಿ ನೆಲಕ್ಕೆ […]