ಪಂಜು ಕಾವ್ಯಧಾರೆ

ಈ ಜಗದಾಗೆ ದೊಡ್ಡೋರು ಯಾರಿಲ್ಲ ಚಿಕ್ಕೋರು ಯಾರಿಲ್ಲ ಎಲ್ಲಾರೂ ಒಂದೇನೆ ಈ ಜಗದಾಗೆ ದೇವ್ರಾಟ ಆಡ್ಕೋತ ಬದುಕನ್ನ ಬೇಯಿಸ್ಕೊತ ಕಡೆಗೆಲ್ಲಾ ಮಣ್ಣು ಈ ಜಗದಾಗೆ || ಲೋಕಾನೆ ಗೆಲ್ಬೇಕು ಅಂದ್ಕೊಂಡು ಬಂದವ್ರು ಬರಿಗೈಲಿ ಹೋದ್ರಂತೆ ಇತಿಹಾಸ್ದಾಗೆ ಅಂತಸ್ತು ಬಿದ್ದೋಯ್ತು ನೆಲವೆಲ್ಲಾ ಮುಳುಗೋಯ್ತು ಗೊತ್ತಿಲ್ಲಾ ಬರ್ದದ್ದು ಹಣೆಬರ್ದಾಗೆ || ಕಷ್ಟಾನೂ ಬರ್ತಾದೆ ಸುಖಾನೂ ಬರ್ತಾದೆ ಬಂದದ್ದು ತಗೋಬೇಕು ಜೀವಂದಾಗೆ ಕಷ್ಟದಲಿ ಕುಗ್ಗದಂಗೆ ಸುಖದಲ್ಲಿ ಹಿಗ್ಗದಂಗೆ ದೇವ್ರೌನೆ ಅಂದ್ಕೊಂಡ್ರೆ ನೆಮ್ಮದಿತಾನೆ || ಗೆದ್ದದ್ದು ಗೆಲುವಲ್ಲ ಸೋತದ್ದು ಸೋಲಲ್ಲ ಜಿದ್ದಾಜಿದ್ದಿಯ ಕಾಣೆ … Read more

ಅಮ್ಮ ಹೀಗೆ ಇರಬೇಕು: ಗಿರಿಜಾ ಜ್ಞಾನಸುಂದರ್

ಪುಟ್ಟ ಪುಟ್ಟ ಕೈಗಳು ಅಮ್ಮನನ್ನು ಹಿಡಿದಿದ್ದವು. ೮ ದಿನದ ಮಗು ಬಹಳ ಸಣ್ಣದಾಗಿ ಹುಟ್ಟಿದ್ದು, ಆ ಮಗುವನ್ನು ಹೇಗೆ ಎತ್ತಿಕೊಳ್ಳಬೇಕೆಂಬುದು ಸಹ ತಿಳಿದಿರಲಿಲ್ಲ ಅಮ್ಮನಿಗೆ. ಸರಸ್ವತಿ ತನ್ನ ೨೨ ನೇ ವರ್ಷಕ್ಕೆ ಮಗುವಿಗೆ ಜನನ ನೀಡಿದ್ದಳು. ಅವಳಿಗೆ ಇದೆಲ್ಲ ಹೊಸತು. ಮಗು ಅಳುತ್ತಿದ್ದರೆ ಏನು ಮಾಡಬೇಕೆಂಬುದೇ ಅವಳಿಗೆ ತಿಳಿಯುತ್ತಿರಲಿಲ್ಲ. ಯಾವ ಕಾರಣಕ್ಕೆ ಅಳುತ್ತಿದೆ ಎಂದು ಯೋಚಿಸುತ್ತಿದ್ದಳು. ಮಗು ತುಂಬ ಅಳುತ್ತಿತ್ತು, ಅವಳಿಗೆ ಅದನ್ನು ಸಮಾಧಾನ ಮಾಡುವುದೇ ಒಂದು ದೊಡ್ಡ ಸಾಹಸವಾಗಿತ್ತು. ಅವಳ ನಿದ್ದೆಗೆ, ಊಟಕ್ಕೆ ಪ್ರತಿಯೊಂದಕ್ಕೂ ಮಗು … Read more

ಇತಿ ತಮ್ಮ ವಿಶ್ವಾಸಿ: ಪ್ರಣವ್ ಜೋಗಿ

ಬಹುಶಃ ಶಾಲೆಯ ದಿನಗಳು ಇರಬೇಕು. ಯಾವುದೋ ಒಂದು ಪರೀಕ್ಷೆಯಲ್ಲಿ ಬರೆದ ಪತ್ರ. ಅದೇ ಕೊನೆಯ ಪತ್ರವಾಗಲಿದೆ ಎಂಬ ಸುಳಿವು ಆಗಲೇ ದೊರೆತ್ತಿದ್ದಿದ್ದರೆ, ಇನ್ನೂ ಒಂದಷ್ಟು ಸಾಲುಗಳನ್ನು ಬರೆದು ಬಿಡುತ್ತಿದ್ದೆ. ಆ ನಂತರ ಎಂದೂ ಪತ್ರ ಬರೆಯಲೇ ಇಲ್ಲ. ಕ್ಷಣ ಮಾತ್ರದಲ್ಲಿ ಸಂದೇಶ ತಲುಪುವ ತಂತ್ರಜ್ಞಾನ ಇರುವಾಗ, ಪತ್ರವೇಕೆ ಬರೆಯಬೇಕು ಎಂಬ ಆಲೋಚನೆ ಇದರ ರೂವಾರಿ. ದುರಂತರವೆಂದರೆ, ಮುಂಚೆ ಬರೆದ ಪತ್ರಗಳೂ ಕೂಡ ಪರೀಕ್ಷೆಗಳಲ್ಲೇ. ನಿಜ ಜೀವನದಲ್ಲಿ, ದೂರದ ಸಂಬಂಧಿಕರೊಬ್ಬರಿಗೆ ಒಂದೆರಡು ಬಾರಿ ಪತ್ರ ಬರೆದಿರಬಹುದಷ್ಟೇ. ಇಂದಿನ ಕಾಲದಲ್ಲಿ … Read more

ಮಕ್ಕಳ ಕವನ: ವರದೇಂದ್ರ ಕೆ

ಪ್ರಾರ್ಥನೆ ನಾವೆಲ್ಲ ಮಕ್ಕಳು ನಿನ್ನ ಚರಣ ಪುಷ್ಪಗಳು| ಜ್ಞಾನ ಅರಸಿ ಬಂದಿಹೆವು ವಿದ್ಯೆ ಬುದ್ಧಿ ನೀಡಮ್ಮ, ಹೇ ಮಾತೆ ಶಾರದಾಂಬೆ|| ನಾವೆಲ್ಲ ಮಕ್ಕಳೂ…. ವಿದ್ಯಾದಾಯಿನಿ ವೀಣಾಪಾಣಿ| ರಾಗ ತಾಳ ಎಲ್ಲ ನಾವೆ ಜ್ಞಾನ ವೀಣೆ ನುಡಿಸು ತಾಯೆ|೧| ನಾವೆಲ್ಲ ಮಕ್ಕಳೂ… ನಿತ್ಯವೂ ನಿನ್ನ ಸ್ಮರಣೆ ಮಾಡುವೆವು ಭಕ್ತಿಯಿಂದ| ಕರುಣೆ ತೋರಿ ಒಲಿಯಮ್ಮ ಸತ್ಯವನ್ನೆ ನುಡಿಸು ತಾಯೆ|೨| ನಾವೆಲ್ಲ ಮಕ್ಕಳೂ…. ಜ್ಞಾನ ದೀಪ ಹಚ್ಚುವೆವು ನಿನ್ನ ಚರಣ ಕಮಲಕ್ಕೆ| ಜ್ಯೋತಿ ಆಗಿ ಬಾರಮ್ಮ ನಮ್ಮ ಬಾಳ ಬೆಳಗು ತಾಯೆ|೩| … Read more

ಸಂ-ಜನ: ಹೆಚ್. ಷೌಕತ್ ಆಲಿ, ಮದ್ದೂರು

ಒಂದು ತಾಲ್ಲೋಕಿನಿಂದ ಮತ್ತೊಂದು ತಾಲ್ಲೋಕಿನ ಒಂದು ಕಾಲೇಜಿನಲ್ಲಿ ನಾನು ಉಪನ್ಯಾಸಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ದಿನಾ ಕೆ ಎಸ್ ಆರ್ ಟಿ ಸಿ ಬಸ್ನಲ್ಲಿ ಹೋಗಿ ಬರುವುದು ಮಾಮೂಲಿಯಾಗಿತ್ತು. ಸಮಯಕ್ಕೆ ಅರ್ಧಘಂಟೆ ಮುಂಚೆ ನಾನು ಬಸ್ಸ್ಟ್ಯಾಂಡ್ ನಿಂದ ಇಳಿದು ಕಾಲೇಜಿಗೆ ನಡೆದುಕೊಂಡೆ ಹೋಗುತ್ತಿದ್ದೆ. ನನ್ನ ಕೈಯಲ್ಲಿ ಟೀಫಿನ್ ಬಾಕ್ಸ್, ವಾಟರ್ ಬಾಟಲ್ ಅವುಗಳನ್ನು ಹೊತ್ತಿರೋ ಒಂದು ಬ್ಯಾಗ್ ಆ ಬ್ಯಾಗ್ ನನ್ನ ಕೈಯಲ್ಲಿ. ಆ ಬ್ಯಾಗ್ ಹಿಡಿದುಕೊಂಡು ನಾನು ಕಾಲೇಜಿಗೆ ಬರುವಾಗ, ಹೋಗುವಾಗ ನನ್ನ ವಾಕಿಂಗ್ ಸ್ಟೈಲ್ … Read more

ದೇಹವೆ ದೇವಾಲಯ !: ಕೆ ಟಿ ಸೋಮಶೇಖರ ಹೊಳಲ್ಕೆರೆ

ದೇವಾಲಯ ಎಂಬುದು ನೆಮ್ಮದಿಯ ತಾಣ. ದೇವರು ಎಂಬುದು ಒಳ್ಳೆಯದರ ಸಂಕೇತ! ಮಾನವರು ದೇವರನ್ನು ಪೂಜಿಸುವುದು ಆರಾಧಿಸುವುದು ಎಂದರೆ ಒಳ್ಳೆಯತನದ ಆರಾಧನೆ ಎಂದು ಅರ್ಥ ! ಎಲ್ಲರೂ ದೇವಸ್ಥಾನಕ್ಕೆ ಹೋಗುತ್ತಿದ್ದಾರೆಂದರೆ ಒಳ್ಳೆಯದನ್ನು ಬಯಸುತ್ತಿದ್ದಾರೆಂದು ಅರ್ಥ. ಒಳ್ಳೆಯತನ ಸದಾ ಮಾನವರಿಗೆ ನೆಮ್ಮದಿ ನೀಡುತ್ತದೆ! ಅದಕ್ಕಾಗಿ ಅನೇಕರು ಅದನ್ನು ಅರಸಿ ದೇವಾಲಯಗಳಿಗೆ ಹೋಗುತ್ತಾರೆ. ಆದರೆ ಅದನ್ನು ಕೆಲವರು ಅರ್ಥೈಸುವಲ್ಲಿ ಆಚರಿಸುವಲ್ಲಿ ಪ್ರಮಾದಗಳಾಗಲು ಕಾರಣರಾಗಿರುವುದರಿಂದ ರೌದ್ರ ಭೀಭತ್ಸ ವಾತಾವರಣ ಉಂಟಾಗುತ್ತಿದೆ. ನೆಮ್ಮದಿಯ ತಾಣವಾಗಬೇಕಾದವು ನೆಮ್ಮದಿಯ ಕದಡಲು ಕಾರಣವಾಗುತ್ತಿವೆ. ಕೆಲವು ಮಹನಿಯರು ದೇಹವೆ ದೇವಾಲಯವಾಗಬೇಕೆಂದಿರುವರು. … Read more