ಪಂಜು ಕಾವ್ಯಧಾರೆ

ಎನಿತು ಇನಿದು… ಎನಿತು ಇನಿದು ಅಕ್ಷಿನೋಟ; ಇಕ್ಷು ಮಧು! ಸ್ಪರ್ಶಿಸಿದ ರೇಶಿಮೆ ಮೈ ಎಷ್ಟು ಮೆದು!! ಮಧುರ ದನಿ ಅಧರ ಗಿಣಿ ಬರುವವೀ ಜಾತಿ ಧರ್ಮ; ಘನಪದರು ಎದುರ ದಾಟಬೇಕು ಸೀಳಿ; ಕೊಡದೆ ಸದರ ಏಕೆ? ಅಂಜುವೆ; ಎದೆಗುಂದುವೆ ಬಂದಿಹ ನಾ ವ್ಯಾಧನೆ? ನಾ; ಕಾಯುವ ಯೋಧ! ನಾವು ಆವು ಜೊತೆಗಿಹರು ಹಾವು ನಿತ್ಯ ಕಾಣುವುದು ಸಾವು-ನೋವು ಈ ಬಾಳೇ; ಸಿಹಿ-ಕಹಿ-ಬೇವು! -ಅಯ್ಯಪ್ಪಕಂಬಾರ         ಕೇಳು ನನ್ನೊಲವೇ …! ಒಲವೇ – ! … Read more

ಶಕ್ತಿದೇವತೆ: ಗಿರಿಜಾ ಜ್ಞಾನಸುಂದರ್

ಕಮಲಾ ತನ್ನ ಯೋಚನೆಯಲ್ಲಿ ಮುಳುಗಿದ್ದಳು. ತನ್ನ ಬಾಲ್ಯ, ತನ್ನನ್ನು ಮುದ್ದುಮಾಡಿ ಬೆಳೆಸಿದ ತವರು, ಅವಳಪ್ಪ ಅಮ್ಮನ ಮುದ್ದು ಸಾಲದೆಂದು ಅವಳ ಅಣ್ಣ ಕೂಡ ಅವಳನ್ನು ಅತಿಯಾಗಿ ಮುದ್ದು ಮಾಡುತ್ತಿದ್ದ. ಅವರೆಲ್ಲರ ಮುದ್ದಿನ ಕಣ್ಮಣಿ ಆಗಿದ್ದ ಅವಳನ್ನು ಸಿರಿವಂತನಿಗೆ ಕೊಟ್ಟು ಮಾಡುವೆ ಮಾಡಿದ್ದರು. ಅವನು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಂಡಿದ್ದ. ಆದರೆ ಅವನು ಮತ್ತು ಅವನ ಅಪ್ಪ ಅಮ್ಮ ಮನೆಯಲ್ಲಿ ಬೇರೆ ರೀತಿಯಲ್ಲಿಯೇ ಇರುತ್ತಿದ್ದರು. ಹೊರಗಿನ ಸಮಾಜದಲ್ಲಿ ಸಭ್ಯಸ್ಥರೆನಿಸಿಕೊಂಡ ಅವರು, ತಮ್ಮ ನಿಜವಾದ ಬಣ್ಣವನ್ನು ಮನೆಯಲ್ಲಿ ತೋರಿಸುತ್ತಿದ್ದರು. ಅವರನ್ನು … Read more

ಒಂಟಿ ಹೆಣ್ಣಿನ ಕಥೆ: ವರದೇಂದ್ರ ಕೆ

ಕಡು ಬಡತನದ ಬೇಗೆ. ಮನೆಯಲ್ಲಿ ತಾಯಿ ಮಗಳು ಮಾತ್ರ. ಗಾಯತ್ರಿ ಬದುಕಿಗೆ ಆದ ಹಲವು ಗಾಯಗಳಿಗೆ ನಗು ಸಹನೆಗಳನ್ನೇ ಔಷಧಿ ಆಗಿಸಿಕೊಂಡಾಕೆ. ಮದುವೆ ಆಗಿ ಒಂದು ಮಗುವಿಗೆ ತಾಯಿ ಆಗುತ್ತಾಳೆ. ಹೆರಿಗೆ ಆದ ದಿನವೇ ಗಂಡ ಆ್ಯಕ್ಸಿಡೆಂಟ್ ನಲ್ಲಿ ಸತ್ತು ಹೋಗುತ್ತಾನೆ. ಹೆರಿಗೆಗೆ ಬಂದಾಕಿ ತವರು ಮನೆಯಲ್ಲೇ ಉಳಿಯುತ್ತಾಳೆ. ಹುಟ್ಟಿ ತಂದೆಯನ್ನು ತಿಂದುಕೊಂಡ ಕೆಟ್ಟ ನಕ್ಷತ್ರದವಳೆಂಬ ಹಣೆ ಪಟ್ಟಿ ಹೊತ್ತ ಮಗಳನ್ನು ಗಂಡನ ಅಪ್ಪ ಅಮ್ಮ, ಮುಖ ನೋಡಲೂ ಬರುವುದಿಲ್ಲ. ಗಾಯತ್ರಿಗೆ ತವರು ಮನೆಯೇ ಗತಿಯಾಗುತ್ತದೆ ತವರನ್ನು … Read more

ಮಾಲಿಂಗ. . .: ಸಿದ್ದರಾಮ ತಳವಾರ

ರಾಮೇನಹಳ್ಳಿಯ ಇಡೀ ಊರಿಗೆ ಊರೇ ಪತರಗುಟ್ಟಿ ಹೋಗಿದೆ. ಊರ ರಾಮೇಗೌಡರ ಮನೆಯೆಂಬುದೊಂದು ಸಂತೆಯಾಗಿ ಹೋಗಿತ್ತು. ಇಡೀ ಊರಿಗೆ ಊರೇ ಅವರ ಮನೆ ಮುಂದೆ ನೆರೆದು ನೆರೆದವರೆಲ್ಲ ಕೌತುಕದಿಂದ ಪರಿಶೀಲನೆಗೆ ಬಂದ ಪೋಲೀಸರ ಮುಖಗಳನ್ನ ದಿಟ್ಟಿಸುತ್ತಿದ್ದಾರೆ. ಊರಿನ ಯಾವೊಬ್ಬ ಹೆಂಗಸು ಮುಖ ತೊಳೆದಿಲ್ಲ ಅಂಗಲದ ಕಸ ಗುಡಿಸಿಲ್ಲ ರಂಗೋಲಿ ಹಾಕಿಲ್ಲ ಬಾಯಲ್ಲಿ ಸೆರಗಿಟ್ಟುಕೊಂಡು “ಯವ್ವಾ ಹೆಂಗಾಗ್ಯದೋ ಏನೋ, ಪಾಪ ದೇವ್ರಂಥ ಗೌಡ್ರಿಗೆ ಹಿಂತಾ ಸ್ಥಿತಿ ಯಾಕ ಬಂತುಅಂತೇನಿ, ಮನೀ ಮಗನಂಗಿದ್ದ ಮಾಲಿಂಗ ಅದ್ಹೆಂಗ್ ಸತ್ನೋ ಏನೋ ಪಾಪ ಗೌಡರ … Read more

ಅಂತರಾಗ್ನಿ (ಭಾಗ 5): ಕಿರಣ್. ವ್ಹಿ

ಇಲ್ಲಿಯವರೆಗೆ.. ” ಆಮೇಲೆ ಇಲ್ಲಿಗೆ ಹೊರಟದ್ದು ಮಧ್ಯದಲ್ಲಿ ನೀವು ಸಿಕ್ಕಿದ್ದು. ನಿಮ್ಮ ಪರಿಚಯ. ಇದೆಲ್ಲ ನಡೆದದ್ದು. ಇಲ್ಲಿ ಕೂತುಕೊಂಡು ಗುಂಡು ಹಾಕುತ್ತಿರೋದು. ಅಷ್ಟೇ ಅಂಕಲ್. ಹೆಂಗಿತ್ತು ನನ್ನ ಪ್ಲಾಪ್ ಲವ್ ಸ್ಟೋರಿ?” ಎನ್ನುತ್ತಾ ನಕ್ಕ ಹರಿ. ಅಷ್ಟರಲ್ಲಿ ನಶೆಯಲ್ಲಿ ತೇಲುತ್ತಿದ್ದ. ” ಇಷ್ಟೆಲ್ಲಾ ಆಗಿದೆ ನಿನ್ನ ಲೈಫ್ನಲ್ಲಿ ಅಂತಾಯ್ತು..” ” ಹಂ ಅಂಕಲ್. ಎಲ್ಲರೂ ಮೋಸಗಾರು……. ಮೋಸಗಾರರು.” ಎನ್ನುತ್ತ ಧೊಪ್ಪನೆ ಬಿದ್ದುಬಿಟ್ಟ. ಹುಡುಗ ಫುಲ್ ಟೈಟ್ ಆಗಿದ್ದಾನೆ ಎಂದುಕೊಂಡು, ಎಲ್ಲವನ್ನೂ ನೀಟಾಗಿ ತೆಗೆದಿಟ್ಟು, ತಮ್ಮ ರೂಮಿಗೆ ನಡೆದರು … Read more

ಮೈತ್ರಿ ಪ್ರಕಾಶನದ ವತಿಯಿಂದ “ಅಮ್ಮ ಎಂದರೆ..…” ಪುಸ್ತಕಕ್ಕಾಗಿ ಲೇಖನಗಳ ಆಹ್ವಾನ

ಮೈತ್ರಿ ಪ್ರಕಾಶನದ ವತಿಯಿಂದ “ಅಮ್ಮ ಎಂದರೆ..…” ಪುಸ್ತಕಕ್ಕಾಗಿ ಲೇಖನಗಳ ಆಹ್ವಾನ ನಮ್ಮ ಮೈತ್ರಿ ಪ್ರಕಾಶನದ ವತಿಯಿಂದ ಈಗಾಗಲೇ ಅಪ್ಪನ ಕುರಿತಾಗಿ ಎರಡು ಪುಸ್ತಕಗಳು ಬಂದು ಜನಜನಿತವಾಗಿವೆ ಈಗ ನಿಮ್ಮ ತಾಯಿಯ ಕುರಿತಾಗಿ ಭಾವನೆಗಳ ಅನಾವರಣಗೊಳಿಸಲು ಸದಾವಕಾಶ. ಅವ್ವ, ಆಯಿ, ಮಾಯಿ, ಅಬ್ಬೆ ಹೀಗೆ ಅವಳ ನಾಮ ಹಲವು ದೈವಿರೂಪ ಒಂದೇ..! ನಿಮ್ಮ ತಾಯಿಯ ಬಗ್ಗೆ ನಿಮಗಿರುವ ಆದರ,ಪ್ರೀತಿ, ಅಂತಃಕರಣ ಲೇಖನದ ರೂಪದಲ್ಲಿ ಪ್ರಕಟಿಸುವ ವಿಚಾರವಿದೆ..ಲೇಖನ ಬರೆದು ಕೊಡಲು ನಿಮಗೆ ಖುಶಿ ಅನಿಸಿದರೆ ಪ್ರಕಟಿಸಲು ಮೈತ್ರಿಗೆ ಡಬಲ್ ಖುಷಿ….!! … Read more

ಕನ್ನಡ ಕಲಿಸಿದ ಮಕ್ಕಳು: ವೆಂಕಟೇಶ ಚಾಗಿ

ಆಸಂಗಿಪುರದ ಮಕ್ಕಳು ಎಂದರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ತುಂಬಾ ಪ್ರಸಿದ್ಧಿ. ಯಾವುದೇ ಸ್ಪರ್ಧೆಗಳಲ್ಲಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ, ಓದಿನಲ್ಲಿ ಆಸಂಗಿಪುರದ ಮಕ್ಕಳು ಸದಾ ಮುಂದು. ಪ್ರತಿ ಸಾರಿಯೂ ಕ್ರೀಡಾ ಕೂಟಗಳಲ್ಲಿ ಪ್ರಶಸ್ತಿಗಳನ್ನು ಗೆದ್ದುಕೊಂಡೇ ಊರಿಗೆ ಬರುತ್ತಿದ್ದರು. ಆಸಂಗಿಪುರವು ಆ ಊರಿನ ಮಕ್ಕಳಿಂದಲೇ ಪ್ರಸಿದ್ಧಿ ಪಡೆದಿತ್ತು. ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಹೆಸರು ಗಳಿಸಿದ್ದರು. ಇದಕ್ಕೆಲ್ಲಾ ಮೂಲ ಕಾರಣ ಆ ಊರಿನ ಶಾಲೆಯ ಗುರುಗಳು. ಗುರುಗಳ ಮಾರ್ಗದರ್ಶನದಲ್ಲಿ ಶ್ರದ್ಧೆಯಿಂದ ಛಲದಿಂದ ಯಾವುದೇ ಕಾರ್ಯವನ್ನಾಗಲೀ ಅಚ್ಚುಕಟ್ಟಾಗಿ ಮುಗಿಸುತ್ತಿದ್ದರು. ಬೇಸಿಗೆ ರಜೆ ಹತ್ತಿರ ಬರುತ್ತಿದ್ದ ಕಾಲ … Read more

ವಿಭಿನ್ನ ಕಲೆಯ ಪ್ರವೃತ್ತಿಯನ್ನು ವೃತ್ತಿ ಯನ್ನಾಗಿಸಿ ಯಶಸ್ಸು ಕಂಡ ಭರತ್ ಕುಲಾಲ್: ಹರ್ಷಿತಾ ಹರೀಶ ಕುಲಾಲ್

ಹುಟ್ಟಿದ ಪ್ರತಿಯೊಂದು ವ್ಯಕ್ತಿ ಯಲ್ಲಿಯೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಅದಕ್ಕಾಗಿ ಸೂಕ್ತ ವೇದಿಕೆ ಸಿಕ್ಕಾಗ ಪ್ರದರ್ಶನ ಮಾಡುತ್ತಾರೆ. ಇನ್ನೂ ಕೆಲವರು ಎಲ್ಲ ಕಲೆ ಗೊತ್ತಿದ್ದು ವೇದಿಕೆ ಸಿಗದೆ ವಂಚಿತರಾಗಿರುತ್ತಾರೆ. ಹಾಗೆಯೇ ಹಲವು ಕನಸುಗಳನ್ನು ಹೊತ್ತ ಯುವಕ ತಾನು ವೇದಿಕೆಯಲ್ಲಿ ಪ್ರದರ್ಶನ ನೀಡಿ ಅದರ ಅನುಭವದ ರುಚಿಯಿಂದ ಮುಂದುವರಿದ ಪ್ರತಿಭೆ ಬಾತು ಕುಲಾಲ್.. ಇವರು ಶ್ರೀ ನಾರಾಯಣ ಹಾಗೂ ಶ್ರೀಮತಿ ಸುಂದರಿ ಯವರ ತೃತೀಯ ಪುತ್ರನಾಗಿ. ನಿರಂಜನ್ ಕುಲಾಲ್ ಹಾಗೂ ಯಶವಂತ್ ಕುಲಾಲ್ ಅವರ ಪ್ರೀತಿಯ ತಮ್ಮನಾಗಿ … Read more

ಮಾಯವಾಗುತ್ತಿರುವ ಬರವಣಿಗೆ ಎಂಬ ಭಾಷಾ ಕೌಶಲ!: ಕೆ ಟಿ ಸೋಮಶೇಖರ ಹೊಳಲ್ಕೆರೆ

ವಿಜ್ಞಾನ ತಂತ್ರಜ್ಞಾನದ ಶೀಘ್ರ ಬೆಳವಣಿಗೆಯಿಂದ ಮಾನವನ ಬದುಕು ಎಷ್ಟು ಸುಖಮಯ ಸುಲಭವಾಗುತ್ತದೋ ಅಷ್ಟೇ ಸಂಕೀರ್ಣವೂ ಅವಲಂಬಿಯೂ ಆಕಸ್ಮಿಕವೂ ಅಘಾತಕಾರಿಯೂ ಆಗುವುದರೊಂದಿಗೆ ಏಷ್ಟೋ ಶ್ರೇಷ್ಠ ಕಲೆಗಳ ಅಳಿವಿಗೂ ಹೊಸ ಕಲೆಗಳ ಸೃಷ್ಟಿಗೂ ನಾಂದಿ ಹಾಡಿದೆ! ಆದರೆ ವಿಜ್ಞಾನದ ಪ್ರಗತಿಯ ಓಟದಲ್ಲಿ ನಾವು ಈ ಸಂಕೀರ್ಣತೆಯನ್ನು, ಕಲೆಯನ್ನೂ ಮುಖ್ಯವೆಂದು ಭಾವಿಸುತ್ತಿಲ್ಲ! ಮುಂದೊಂದು ದಿನ ಅದರ ಪ್ರಾಮುಖ್ಯತೆ ಗೊತ್ತಾಗುತ್ತದೆ. ವಿಜ್ಞಾನ ತಂತ್ರಜ್ಞಾನದ ಅಪರಿಮಿತ ಬೆಳವಣಿಗೆಯಿಂದಾಗಿ ಇಂದು ಕ್ಯಾಶ್ಲೆಸ್ ವ್ಯವಹಾರ ಆರಂಭವಾಗಿದೆ! ಇದು ಅದ್ಭುತ ಸಾಧನೆ! ಒಂದು ಕಡೆಯಿಂದ ಮತ್ತೊಂದು ಕಡೆಗೆ ಒಂದು … Read more