Facebook

Archive for 2019

ಪಂಜು ಕಾವ್ಯಧಾರೆ

ಗಜಲ್ ಕೊನೆಯುಸಿರವರೆಗೂ ನಿನ್ನದೇ ಹಾಡು ಹಾಡಬೇಕೆಂದಿರುವೆ ಮುಗಿಸಿಬಿಡು ಈ ಜಗದ ಲೆಕ್ಕ ನೆನ್ನೆಗೇ ವಿದಾಯ ಹೇಳಿ ನನ್ನೆಲ್ಲ ತಪ್ಪುಗಳ ಚೀಟಿ ಬರೆದಿಟ್ಟಿರುವೆ ಮುಗಿಸಿಬಿಡು ಈ ಜಗದ ಲೆಕ್ಕ ಪ್ರೀತಿಯ ಯುಗಾದಿ ಮೊಹರಂಗಳು ಈ ಜಗತ್ತಿನಲಿ ಎಲ್ಲಿಯವರೆಗೆ ಒಂದಾಗಲಾರವೋ ಸಾವು ಮೆರೆಯುವುದು ಗಲ್ಲಿಯಲಿ ಸದ್ದಿಲ್ಲದಂತೆ ಬೇವು ಬೆಲ್ಲ ಕೊಟ್ಟಿರುವೆ ಮುಗಿಸಿಬಿಡು ಈ ಜಗದ ಲೆಕ್ಕ ಅಪ್ಪ ಕಣ್ಣು ಅಮ್ಮ ಹೃದಯ ರಕ್ತ ಚರಿತ್ರೆಯಲಿ ದಾಖಲಾಗಿ ಕಣ್ಣೀರಿಗೆ ಬದಲು ರಕ್ತ ಸೋರಿಹುದು ಅಟ್ಟಹಾಸದ ಬೆಂಕಿಗೆ ಆಹುತಿಯಾದ ಆತ್ಮಗಳ ಕ್ಷೇಮ ಕೋರಿರುವೆ […]

ಬಾಲಕಿ ನೀಡಿದ ಆ ೫೭ ಸೆಂಟ್‌ಗಳು: ಎಂ.ಎನ್.ಸುಂದರ ರಾಜ್

ಅದೊಂದು ಚರ್ಚ್. ಚರ್ಚಿನಲ್ಲೊಬ್ಬ ಉದಾರವಾದಿ ಪಾದ್ರಿ. ಕೇವಲ ಧರ್ಮಪ್ರಚಾರವಷ್ಟೇ ತನ್ನ ಜೀವನದ ಉದ್ದೇಶವೆಂದು ಭಾವಿಸದವನು. ತನ್ನ ಚರ್ಚಿನ ಸುತ್ತ ಮುತ್ತ ಇದ್ದ ಬಡ ಕೂಲಿ ಕಾರ್ಮಿಕರ ಮನೆಮನೆಗೆ ಹೋಗಿ ಅವರ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕೆಂದು ಪ್ರಚಾರ ಮಾಡುತ್ತಿದ್ದ. ಅಂತಹ ಬಡ ವಿದ್ಯಾರ್ಥಿಗಳಿಗಾಗಿ ಒಂದು ಶಾಲೆಯನ್ನೂ ಸಹ ಚರ್ಚ್ನ ಕೆಳಭಾಗದ ಒಂದು ಪುಟ್ಟ ಕೊಠಡಿಯಲ್ಲಿ ನಡೆಸುತ್ತಿದ್ದ. ಅಲ್ಲಿ ತನ್ನ ಬಿಡುವಿನ ವೇಳೆಯಲ್ಲಿ ಅತ್ಯಂತ ಶ್ರದ್ಧೆ ಮತ್ತು ಪ್ರೀತಿಯಿಂದ ಕಲಿಸುತ್ತಿದ್ದ. ಅವರಿಗೆ ಲಘು ಉಪಹಾರ, ಪುಸ್ತಕ, ಬಟ್ಟೆ ಎಲ್ಲವನ್ನೂ ನೀಡಿ, […]

ಕರಾವಳಿಯ ಸೆಖೆಯೂ ಕುಚ್ಚಲು ಗಂಜಿಯೂಟವೂ: ಕೃಷ್ಣವೇಣಿ ಕಿದೂರ್

ಈ ವರ್ಷ ಕಾಡುಮಾವಿನಮರಗಳ ತುಂಬ ಜೋತಾಡುವ ಗೊಂಚಲು ಗೊಂಚಲು ಹಣ್ಣುಗಳು ಬಾಯಲ್ಲಿ ನೀರೂರಿಸುತ್ತವೆ. ಮನೆಯಂಗಳದಲ್ಲಿ ನಿಂತು ಸುತ್ತ ತಿರುಗಿದಾಗ ಆಕಾಶ ಮುಟ್ಟುವ ಹಾಗೆ ಬೆಳೆದ ಕಾಡುಮಾವಿನ ಮರದ ತುಂಬ ಗಾಳಿಗೆ ತೊನೆಯುವ ಅರೆಹಣ್ಣು, ಕಾಯಿಗಳು . ಬಲವಾಗಿ ಬೀಸುವ ಗಾಳಿ ಉದುರಿಸುವ ಹಣ್ಣು ಹೆಕ್ಕಲು ಮಕ್ಕಳ ಸ್ಪರ್ಧೆ.ಈ ದುರ್ಮುಖ ಸಂವತ್ಸರವನ್ನೇ ಅಪರಾಧಿ ಮಾಡಬೇಕೋ ಅಲ್ಲ ವರುಷ ವರುಷಕ್ಕೂ ಬರಡಾಗುವ ಪ್ರಕೃತಿಗೆ ವಿಷಾದಿಸಬೇಕೋ ಅರಿಯದು. ಹೇಳಿ ಕೇಳಿ ನಮ್ಮದು ಅರಬ್ಬಿ ಸಮುದ್ರದ ಪಕ್ಕದ ಊರು. ಕೇರ ನಾಡಿನ ತುಂಬ […]

ದೈವತ್ವದ ಪರಿಕಲ್ಪನೆ: ಡಾ. ಹೆಚ್ ಎನ್ ಮಂಜುರಾಜ್, ಮೈಸೂರು

ಬಸವಣ್ಣನವರ ವಚನವೊಂದರ ಸಾಲುಗಳು ಹೀಗಿವೆ: ಉದಕದೊಳಗೆ ಬಯ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತ್ತು, ಸಸಿಯೊಳಗಣ ರಸದ ರುಚಿಯಂತಿದ್ದಿತ್ತು, ನನೆಯೊಳಗಣ ಪರಿಮಳದಂತಿದ್ದಿತ್ತು…… ನೀರೊಳಗೆ ಬೆಂಕಿಯಿದೆ, ಅದರಿಂದಲೇ ವಿದ್ಯುತ್ತು ಹೊರಬರುವುದು. ಆಮೇಲೂ ಆ ನೀರು ನೀರಾಗಿಯೇ ಉಳಿವುದು. ಒಂದರಿಂದ ಇನ್ನೊಂದು ಹೊರಬಂದ ಮೇಲೂ ಅದು ಅದಾಗಿಯೇ ಇರುವ ಚೋದ್ಯವಿದು. ಮುಂದೆ ಬಿಡಲಿರುವ ಹಣ್ಣಿನ ರುಚಿ ಈಗಾಗಲೇ ಚಿಗುರುತ್ತಿರುವ ಸಸಿಯೊಳಗೆ ಹುದುಗಿದೆ. ಮೊಗ್ಗು ಅರಳುವ ಮುಂಚೆಯೇ ಅದರೊಳಗೆ ಪರಿಮಳ ಅಡಗಿರುತ್ತದೆ. ತಾಯಗರ್ಭದೊಳಗೆ ಬೆಳೆಯುತ್ತಿರುವ ಭ್ರೂಣದಲ್ಲೇ ಅದರೆಲ್ಲ ಬೆಳವಣಿಗೆಗೆ ಬೇಕಾದ ಅವಯವಗಳು ಹುದುಗಿರುವಂತೆ, ನವಿಲಿನ ಮೊಟ್ಟೆಯೊಳಗೆ […]

ಅಂತರಾಗ್ನಿ (ಭಾಗ ೪): ಕಿರಣ್. ವ್ಹಿ

ಇಲ್ಲಿಯವರೆಗೆ.. ಒಂದು ವಾರದಿಂದ ಅನೂಷಾ ಸರಿಯಾಗಿ ಮಾತನಾಡುತ್ತಿರಲಿಲ್ಲ. ಏನಾಯಿತು ಎಂದು ಕೇಳಿದರೆ ಬಾಯಿ ಸಹ ಬಿಡಲಿಲ್ಲ. ಇಗ್ನೋರ್ ಮಾಡುತ್ತಿದ್ದಾಳೆ ಎಂಬ ಭಾವನೆ ಹರಿಯಲ್ಲಿ ಮೂಡಲಾರಂಭಿಸಿತು. ಮುಂದಿನವಾರ ಊರಿಗೆ ಹೋಗುವ ಯೋಚನೆಯಲ್ಲಿದ್ದ ಹರಿ, ಅದೇ ಶುಕ್ರವಾರದ ರಾತ್ರಿ ಬಸ್ ಹತ್ತಿದ. ಏನಾಗಿದೆಯೋ ಎಂಬ ಚಿಂತೆ ಅವನನ್ನು ಬಹಳವೇ ಕಾಡುತ್ತಿತ್ತು. ರಾತ್ರಿಯಿಡಿ ನಿದ್ರೆ ಮಾಡಲಿಲ್ಲ ಹರಿ. ಏನೇನೋ ಯೋಚನೆಗಳು ಬೆಳಗು ಯಾವಾಗ ಆದೀತು, ಯಾವಾಗ ತಲುಪುತ್ತೇನೊ, ಎನ್ನುವ ಅವಸರ. ಬೆಳಗ್ಗೆ ಏಳರ ಸುಮಾರು ಬೆಂಗಳೂರು ತಲುಪಿದ. ಮನೆಗೆ ಹೋದವನೇ ಫ್ರೆಶ್ […]

ರೋಮಾಂಚಕ ಗಣಿತ ! ಶಾಲೆಯಲ್ಲಿ ಇದನ್ನು ಕಲಿಸುವುದಿಲ್ಲ: ಪ್ರವೀಣ್‌ ಕೆ.

ಗಣಿತವನ್ನು ಎಷ್ಟೊಂದು ಎಂಜಾಯ್ ಮಾಡಬಹುದು ಎಂಬುದಕ್ಕೆ ಈ ವಿಡಿಯೋ ನೋಡಿ. ಇದರಲ್ಲಿ ಒಂದೇ ವಿಧಾನದಿಂದ ಹಲವು ರೀತಿಯ ಗಣಿತದ ಸಮಸ್ಯೆಗಳನ್ನು ಹೇಗೆ ಬಿಡಿಸಬಹುದು ಎಂಬುದನ್ನು ತೋರಿಸಿದ್ದೇನೆ ಅದೂ ಕೂಡ 100% ಸರಿಯಾಗಿ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸಾಗಬೇಕೆಂದರೆ ಇಂಥ ಸುಲಭ, ತ್ವರಿತ ವಿಧಾನಗಳು ಅವಶ್ಯಕ. ನನ್ನ ಚಾನೆಲ್ ಇರುವುದೇ ನಿಮ್ಮನ್ನು ಯಶಸ್ಸಿನತ್ತ ಒಯ್ಯುವುದಕ್ಕಾಗಿ. ಇನ್ನೂ ಇಂಥ ಹಲವಾರು ಅದ್ಭುತ ವಿಧಾನ, ತಂತ್ರಗಳನ್ನು ಮುಂದಿನ ವಿಡಿಯೋಗಳಲ್ಲಿ ಕಾಣಬಹುದು. ನೀವು ಊಹಿಸದಷ್ಟು ಸುಲಭ ವಿಧಾನಗಳಿವು. ವಿಡಿಯೋ ನೋಡಿ, ಆನಂದಿಸಿ, ಇಷ್ಟವಾದರೆ ಚಂದಾದಾರರಾಗಿ, […]

ಮಕ್ಕಳ ಕಥೆಗಳ ಆಹ್ವಾನ

ಮಕ್ಕಳ ಕಥೆಗಳ ಆಹ್ವಾನ ರಾಯಚೂರು ತಾಲೂಕು ಘಟಕ ಮಕ್ಕಳ ಸಾಹಿತ್ಯ ಪರಿಷತ್ತು ವತಿಯಿಂದ “ಮಕ್ಕಳ ಕಥೆಗಳ” ಪುಸ್ತಕ ಹೊರತರಬೇಕೆಂದು ನಿರ್ಧರಿಸಿದ್ದು, ಇದೆ ನವೆಂಬರ್ ೧೪ ಮಕ್ಕಳ ದಿನಾಚರಣೆಯ ಸುಸಂದರ್ಭದಲ್ಲಿ ಮಕ್ಕಳ ಪ್ರಪಂಚಕ್ಕೆ ಒಂದು ಉತ್ತಮ ಪುಸ್ತಕವನ್ನು ನವೆಂಬರ್ ೧೪ ರಂದೆ ಒಂದು ಪುಸ್ತಕ ಮಕ್ಕಳ ಕೈ ಸೇರಬೇಕಿದೆ ಕಾರಣ ಆಸಕ್ತ ಕಥಾ ಬರಹಗಾರರು ನೀವು ಬರೆಯುವ ಮಕ್ಕಳ ಕಥೆಯನ್ನು ನವೆಂಬರ್ 4 ರ ಮಧ್ಯೆ ರಾತ್ರಿ ಒಳಗೆ ತಲುಪಿಸಬೇಕು. ▪ಸೂಚನೆಗಳು:- =>ಮಕ್ಕಳ ಕಥೆಯೆ ಆಗಿರಬೇಕು ೫೦೦-600 ಪದಗಳು […]

ಕನ್ನಡ ಸಾಹಿತ್ಯವನ್ನು ಓದುವವರು ಯಾರು?: ಕೆ ಟಿ ಸೋಮಶೇಖರ್ ಹೊಳಲ್ಕೆರೆ

ಹಬ್ಬ ಎಂಬುದು ಸಂತೋಷ ಉಂಟುಮಾಡುವ ವಿಷಯ. ಕನ್ನಡದ ಸಾಧನೆ ಸಾರುವ, ಸಾಧನೆಗೆ ಮಣೆ ಹಾಕುವ, ಸಾಧಕರಿಗೆ ಕಿರೀಟವಿಡುವ, ಆಸಕ್ತರಿಗೆ ಪ್ರೋತ್ಸಾಹಿಸುವ, ಕವಿಗೋಷ್ಟಿ, ಸಾಹಿತ್ಯಕ ಚರ್ಚೆ, ಚಿಂತನ, ಮಂಥನದ ಹಬ್ಬವಾಗಬೇಕಿರುವ ಸಾಹಿತ್ಯಸಮ್ಮೇಳನಗಳಲ್ಲಿ ಕನ್ನಡ ಉಳಿಸುವುದು ಹೇಗೆ ಎಂಬ ವಿಷಯ ತಾಲ್ಲೂಕು ಮಟ್ಟದ ಸಮ್ಮೇಳನಗಳಿಂದ ಹಿಡಿದು ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನಗಳವರೆಗೂ ಉದ್ಘಾಟನಾ ಸಭೆಯಿಂದನೇ ಚರ್ಚೆ ಆರಂಭವಾಗಬೇಕಾಗಿರುವ ಸಂದರ್ಭ ಬಂದಿರುವುದು ಕನ್ನಡಿಗರ ದುರದೃಷ್ಟ! ನುಡಿ ಹಬ್ಬದಲ್ಲಿ ಕನ್ನಡದ ಉಳಿಸುವ ಬೆಳೆಸುವ ಬಗ್ಗೆ ಚರ್ಚಿಸಿ ಇದಕ್ಕೆ ಪೂರಕವಾದ ಕೆಲವು ನಿರ್ಣಯಗಳನ್ನು ನುಡಿಹಬ್ಬದ […]