Facebook

Archive for 2019

ಪಂಜು ಕಾವ್ಯಧಾರೆ ೧

ನಾನು ಕವಿತೆ ಬರೆಯುವುದಿಲ್ಲ… ನಾನು ಕವಿತೆ ಬರೆಯುವುದಿಲ್ಲ… ನನ್ನೊಳಗಿನ ಬನಿಗೆ ದನಿಯಾಗಬೇಕೆಂಬ ಇರಾದೆ ನನಗಿಲ್ಲ. ಕೇವಲ ನನ್ನೊಳಗಿನ ಮಿಸುಗನ್ನು ನಸುಗುನ್ನಿಯನ್ನು ಅಕ್ಷರವಾಗಿಸುತ್ತೇನೆ. ಒಮ್ಮೊಮ್ಮೆ ಅಕ್ಷರಗಳು ಮಾತಾಡುತ್ತವೆ, ಕೆಲವೊಮ್ಮೆ ಹಾಡುತ್ತವೆ, ಮತ್ತೊಮ್ಮೆ-ಮಗದೊಮ್ಮೆ ಕಾಡುತ್ತವೆ. ದುಂಬಾಲು ಬಿದ್ದು ಮುದ್ದು ಮಾಡಿಸಿಕೊಳ್ಳುತ್ತದೆ. ಆಗ್ಗಾಗೆ ಮುಗಿಬಿದ್ದು ಮರುಬರೆಸಿಕೊಳ್ಳುತ್ತದೆ. ಬರೆವಾಗ ತನ್ಮಯಗೊಳಿಸಿ ಮೈಮರೆಸುತ್ತದೆ. ಲಲ್ಲೆಗರೆಯುತ್ತವೆ. ಚೆಲ್ಲುಬಡಿಯುತ್ತವೆ ಎಲ್ಲೆಂದರಲ್ಲಿ ನನ್ನೊಳಗೆ ರಾರಾಜಿಸುತ್ತದೆ. ನನ್ನ ಸೊಂಟಕ್ಕೆ ತುಂಟಮಗುವಾಗಿ, ಪಂಟುಹೊಡೆಯುವ ಲಂಪಟನಾಗಿ, ಉಪಟಳಿಸುವ ಸುಂಟರಗಾಳಿಯಂತೆ ನನ್ನ ಸುತ್ತಲೆ ತಿರುಗುತ್ತವೆ ! ಕನಸಲ್ಲಿ ಕಾಡುತ್ತವೆ ಥೇಟ್ ನನ್ನ ಪ್ರೇಮಿಯಂತೆ ! […]

ಕಡು ಪ್ರೀತಿಯ ಎದೆಯಲ್ಲಿ ಮತಾಪು ಸಿಡಿದ ಸದ್ದು: ಅಮರದೀಪ್

ಅದೊಂದು ಸಂಜೆ ಮುಳುಗಿ ಕತ್ತಲಾವರಿಸುತ್ತಿದ್ದಂತೆ ಅವನು ಮನೆಯಲ್ಲಿ ಯಾಕೋ ಇರುಸುಮುರುಸುಂಟಾಗಿ ತೇರು ಬಯಲಲ್ಲಿ ಬಂದು ಕುಳಿತ. ನೋಡಿದರೆ ಮನೆಯಲ್ಲಿ ಲಕ್ಷ್ಮಿ ಪೂಜೆ… ಉಳಿದವರಿಗೆ ದೀಪಾವಳಿ ಹಬ್ಬ. ಈ ಹಬ್ಬಗಳೆಂದರೆ ಇವನಲ್ಲಿ ಖುಷಿಗಿಂತ ಒಂಟಿತನವೇ ಆವರಿಸುತ್ತದೆ. ಮೊದಲಿಂದಲೂ ಅಷ್ಟೇ. ಕಾರಣ ಏನಂತ ಅವನಿಗೂ ಗೊತ್ತಿಲ್ಲ. ಬಹುಶಃ ಚಿಕ್ಕವನಿದ್ದಾಗಿನ ಮನೆಯ ಬಡತನ, ಅವರಿವರಲ್ಲಿ ಕೇಳಿ ಪಡೆದು ಮತಾಪು ಸುಡುವಾಗಿನ ಹಿಂಜರಿಕೆ ಏನೋ ಇರಬಹುದಾ? ಅವನಿಗೂ ಸ್ಪಷ್ಟವಿಲ್ಲ. ಆದರೆ ಬೆಳೆಯುತ್ತಾ ದೇವರು, ದೇವರ ಮನೆ, ಕೈ ಮುಗಿಯುವುದು, ಬೇಡಿಕೊಂಡು ಗಲ್ಲ ಬಡಿದುಕೊಳ್ಳುವುದೆಲ್ಲಾ […]

ಜಪ್ತಿ: ಎಂ ಜವರಾಜ್

ಅಪ್ಪನನ್ನು ತಬ್ಬಿಕೊಂಡು ಮಲಗಿದ ರಾತ್ರಿಗಳು ಸಾಕಷ್ಟಿದ್ದವು. ಅವನ ಮಗ್ಗುಲು ಬೆಚ್ಚನೆಯ ಗೂಡಾಗಿತ್ತು. ಒಂದೊಂದು ಸಾರಿ ಆ ಬೆಚ್ಚನೆಯ ಗೂಡು ದುಗುಡದಲಿ ಕನವರಿಸಿ ಕನವರಿಸಿ ನನ್ನನ್ನು ದೂರ ತಳ್ಳುತ್ತ ಮಗ್ಗುಲು ಬದಲಿಸುತ್ತಿತ್ತು. ಅಪ್ಪನನ್ನು ತಬ್ಬಿಕೊಂಡು ಮಲಗಲು ಅಷ್ಟು ಸುಲಭವಾಗಿರಲಿಲ್ಲ. ತಮ್ಮಂದಿರ ಸರದಿಯ ಸಾಲಿತ್ತು. ಒಂದೊಂದು ರಾತ್ರಿ ಒಬ್ಬೊಬ್ಬರಿಗೆ ಎಂದು ನಿಗದಿ ಮಾಡಿದ್ದರಿಂದ ಆ ಸರದಿಯ ಸಾಲಿನ ರಾತ್ರಿ ನನ್ನದಾಗುತ್ತಿತ್ತು. ಉಳಿದವರು ಅವ್ವನ ಮಗ್ಗುಲಲ್ಲಿ ಮಲಗುತ್ತಿದ್ದರು. ನನ್ನದಾದ ಆ ರಾತ್ರಿಗಳು ಅಪ್ಪನ ಪೇಚಾಟ ನರಳಾಟ ನನಗೆ ದಿಗಿಲು ಹುಟ್ಟಿಸುತ್ತಿತ್ತು. ಕರಿಯ […]

ಮುಚ್ಚಿಟ್ಟ ಪುಟಗಳು: ಉಮೇಶ ದೇಸಾಯಿ

  “ದಿವ್ಯಾ ಮಗನ ಪ್ರಶ್ನಿ ಕೇಳಿ ತಲಿ ತಿನಬ್ಯಾಡ. ಇದರ ಮಜಾ ತಗೊಳಲಿಕ್ಕೆ ಬಿಡು. ” ಶ್ರೀ ಹೇಳಿದ ಮಾತು ದಿವಾಕರನಿಗೂ ನಾಟಿತು. ಅವನು ಗ್ಲಾಸು ಎತ್ತಿ ಬೀರು ಗುಟಕರಿಸಿದ. ಹಂಗ ನೋಡಿದರ ದಿವಾಕರನ ಉತ್ಸಾಹಕ್ಕ ಅರ್ಥನೂ ಇತ್ತು. ಬರೋಬ್ಬರಿ ಮುವ್ವತ್ತು ವರ್ಷ ಆದಮ್ಯಾಲೆ ಜೀವದ ಗೇಳೆಯನ ಭೇಟಿ ಆಗಿದ್ದ ಅವ. ಗೆಳೆಯ ಅಂದರ ಅಂತಿತಂಹ ಗೆಳೆಯ ಅಲ್ಲ ರಂಗೀಲಾ ವ್ಯಕ್ತಿತ್ವದವ. ದಿವಾಕರನಿಗೆ ಯಾವಾಗಲೂ ಒಂದು ನಿಗೂಢ ವ್ಯಕ್ತಿಹಂಗ ಕಾಣಸತಿದ್ದ ಇವ ಹಿಂಗ ಇವನ ನಡಾವಳಿ ಹಿಂಗ […]

ಜಸ್ಟ್ ಮಿಸ್ಸೋ…………: ಗುಂಡುರಾವ್ ದೇಸಾಯಿ

ಇಡೀ ಭೂಮಂಡಲದಲ್ಲಿ ಅತಿ ಪ್ರಾಮಾಣಿಕನಾಗಿ, ಅನ್ಯಾಯ, ಹಿಂಸೆ, ಅಸೂಯೆ, ದ್ವೇಷ, ಮುನಿಸು, ಹೊಗಳಿಕೆ, ತೆಗಳಿಕೆ ಮೊದಲಾದ ರಾಗಗಳತ್ತ ಮುಖವೂ ಮಾಡದೆ ಮರಣವನ್ನಪ್ಪಿದ ಪದ್ದು ಯಮನ ಆಸ್ಥಾನಕ್ಕೆ ಬಂದ. ನಕ್ಕೋತ ಹರಿ ಧ್ಯಾನ ಮಾಡುತ್ತ ಬಂದದ್ದನ್ನು ನೋಡಿ ಯಮನಿಗೆ ಗಾಭರಿ ಮತ್ತು ಆಶ್ಚರ್ಯ ಎರಡು ಆತು. ನನ್ನತ್ರ ಬರೊಷ್ಟಿಗೆ ಕಾಲಿಗೆ ಬಿದ್ದು ‘ನನ್ನನ್ನ ದಯವಿಟ್ಟು ಸ್ವರ್ಗ ಕಳಿಸು ಹಾಂಗೆ ಹಿಂಗೆ ನಿನಗ ಅದೂ ಕೊಡುತಿ ಇದು ಕೊಡಸ್ತಿನಿ, ಭೂಲೋಕಕ್ಕೆ ಹೋದ್ರೆ ನನ್ನ ಬಂಗ್ಲೇಲಿ ಇಳಿಯೊಕೆ ವ್ಯವಸ್ಥ ಮಾಡಸ್ತಿನಿ’ ಅನ್ನೊರೆ […]

ಜೀರ್ಣೋದ್ದಾರ: ಸತೀಶ್ ಶೆಟ್ಟಿ ವಕ್ವಾಡಿ.

ಗುತ್ತಿಗೆಪುರದ ಶ್ರೀ ಅನಂತಪದ್ಮನಾಭ ದೇವಸ್ಥಾನ ಇತಿಹಾಸ ಪ್ರಸಿದ್ಧವಾದದ್ದು. ಸುತ್ತಲಿನ ಐದಾರು ಊರುಗಳ ಆರಾಧ್ಯ ದೇವರಾದ ಅನಂತಪದ್ಮನಾಭನನ್ನು ಏಳುನೂರು ವರ್ಷಗಳ ಹಿಂದೆ ಇಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಪ್ರತಿವರ್ಷದ ಮಾರ್ಗಶಿರ ಮಾಸದ ಮೊದಲ ಅಷ್ಟಮಿಯ ದಿನ ಇಲ್ಲಿ ರಥೋತ್ಸವ ಮತ್ತು ಕೃಷ್ಣಾಷ್ಟಮಿಯ ದಿನ ವಿಶೇಷ ಉತ್ಸವದ ಕಾರ್ಯಕ್ರಮವಿರುತ್ತದೆ. ಇದಲ್ಲದೆ ಗಣೇಶೋತ್ಸವ ಮತ್ತು ನವರಾತ್ರಿ ಉತ್ಸವಗಳನ್ನೂ ಆಚರಿಸಲಾಗುತ್ತೆ. ಆವಾಗೆಲ್ಲ ಸುತ್ತಲಿನ ಊರುಗಳ ಸ್ಥಳೀಯ ಪ್ರತಿಭೆಗಳ ಸಾಂಸ್ಕೃತಿಕ ಕಲರವ ರಂಗೆರಿಸುತ್ತವೆ. ಊರಿನವರೆಲ್ಲ ತಮ್ಮ ಗದ್ದೆಗಳ ನಾಟಿ ಮಾಡುವ ಮುನ್ನ ದಿನ ಮತ್ತು ನಾಟಿಯ ಕೊನೆ […]

ಹಾಸ್ಟೆಲ್ ಎಳೆಗಳನ್ನು ಬಿಡಿಸುತ್ತ..!: ಶೀಲಾ ಗೌಡರ.

“ಅಪ್ಪಾಜಿ ನನ್ನ ಹಾಸ್ಟೆಲ್ ಗೆ ಸೇರ್ಸು. ನನ್ನ ಗೆಳೆಯರು ಬಹಳಾ ಮಂದಿ ಹಾಸ್ಟೆಲ್ ನಿಂದ ಶಾಲೆಗೆ ಬರ್ತಾರಾ..“ ಇದು ಎರಡು ವರ್ಷದಿಂದ ನನ್ನ ಮಗನ ಗೋಳು. ಹಾಗಂತ ಆತನೇನು ದೊಡ್ಡ ತರಗತಿಯಲ್ಲಿ ಓದುತ್ತಿಲ್ಲ. ಈ ಸಾರಿ ನಾಲ್ಕನೇ ತರಗತಿ. ಅಜ್ಜಿಯ ಊರಿಗೆ ಹೋದಾಗಲೆಲ್ಲ ಅವಳ ಸಂದಕವನ್ನು ತೆಗೆದು “ಅಜ್ಜಿ ನಾ ಮುಂದಿನ ವರ್ಷ ಹಾಸ್ಟೆಲ್ ಹೋಗ್ತೇನಿ. ನೀ ನನಗ ಈ ಸಂದಕ ಕೊಡಬೇಕು ನೋಡು. ಕಿಲಿ ಹಾಕಾಕ ಬರ್ತೇತಿ ಹೌದಿಲ್ಲ. ನಾ ಕಿಲಿಹಾಕಿ ನನ್ನ ಉಡದಾರಕ್ಕ ಹಾಕ್ಕೊಂತೆನಿ. […]

ಮಲೆನಾಡಿನ ದೀಪಾವಳಿ: ವೇದಾವತಿ ಹೆಚ್. ಎಸ್.

“ಮಲೆನಾಡು”ಎಂದರೆ ಅದೊಂದು ಸುಂದರವಾದ ವನಸಿರಿಗಳ ನಡುವೆ ಕಂಗೋಳಿಸುವ ಊರೆಂದರೆ ತಪ್ಪಾಗಲಾರದು. ಒಂದೊಂದು ಮನೆಯೂ ಅವರವರ ಜಮೀನುಗಳ ಮಧ್ಯದಲ್ಲಿ ಸುಂದರವಾಗಿ ಕಟ್ಟಿಕೊಂಡು, ಅವರಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಂಡು ಜೀವನ ನೆಡೆಸಿಕೊಂಡು ಬಂದಿರುತ್ತಾರೆ. ಅವರಿಗೆ ಅವರದೇ ಆದ ಸಂಪ್ರದಾಯಗಳು ಹಳೆಯ ತಲೆಮಾರಿನಿಂದಲೂ ಬಳುವಳಿಯಾಗಿ ಬಂದಿರುತ್ತದೆ. ದೀಪಾವಳಿ ಹಬ್ಬವನ್ನು ನಮ್ಮ ಮಲೆನಾಡಿನ ಜನರು ಐದು ದಿನಗಳ ಕಾಲ ಸಂಭ್ರಮದಿಂದ ಆಚರಣೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಹಿಂದಿನ ತಲೆಮಾರಿನ ಜನರು ನಡೆಸಿದಷ್ಟು ಆಚರಣೆಗಳು ಇಂದು ಕಡಿಮೆಯಾಗಿದ್ದರೂ, ಅದನ್ನು ಸ್ಪಲ್ಪ ಮಟ್ಟಿಗೆಯಾದರೂ ಇಂದಿನ ತಲೆಮಾರಿನ ಜನರು […]

ಗಜ಼ಲ್: ಡಾ. ಗೋವಿಂದ ಹೆಗಡೆ, ಲಕ್ಷ್ಮಿಕಾಂತ ನೇತಾಜಿ ಮಿರಜಕರ

ಗಜ಼ಲ್-೧ ಎಂಥ ಸೋಗುಗಳಲ್ಲಿ ಬದುಕಿದ್ದೇನೆ ಯಾರ ಖುಷಿಗೋ ನುಡಿಯುತ್ತ ಎಂಥ ನೋವಿನಲಿ ಮುಳುಗಿದ್ದೇನೆ ನನ್ನೊಡಲ ನಾನೇ ಬಗೆಯುತ್ತ ಬಂದ ದಾರಿಯಲಿ ಸುರಿದ ಮಂಜು ಮುಂದಕ್ಕೂ ಚಾಚಿ ಮಬ್ಬು ಯಾರಿಗೆ ದೂರು ಹೇಳಿದ್ದೇನೆ ಒಡಕು ತಮಟೆಯ ಬಡಿಯುತ್ತ ಖಚಿತ ಚಹರೆಗಳೇ ಇಲ್ಲದೆ ಹೇಗೋ ಬರೆದಿದ್ದೇನೆ ಚಿತ್ರ ಮುಖ ಮೀಸೆ ಬರಿದೆ ಮೆತ್ತಿದ್ದೇನೆ ಗೆರೆಯ ಎಳೆಯಲು ಸೋಲುತ್ತ ಎಲ್ಲದು ಅಗಣಿತ ಸಂದಣಿಯಲ್ಲಿ ಕಳೆಯಿತು ಒಂಟಿದನಿ ಬರಿದೇ ಸಂತೆ ತಿರುಗಿದ್ದೇನೆ ನನ್ನನೇ ನಾನು ಹುಡುಕುತ್ತ ಕೈ ಕೈ ಹಿಡಿದು ಒಟ್ಟಿಗೆ ನಡೆದೂ […]

ಮಾತು ಮದುವೆ ಮಂಟಪದೊಳು ಸಕಲ ಕಾರ್ಯವಾ: ಡಾ. ವೃಂದಾ ಸಂಗಮ

ಸರಸ್ವತಿ ಮನೆಗೆ ಬಂದಾಗ ಏಳೂವರೆ. ಮುಂದಿನ ಹಾಲ್ ನಲ್ಲಿಯೇ ಲಕ್ಷ್ಮಿ ತನ್ನ ತಮ್ಮನನ್ನು ಓದಿಸುತ್ತಿದ್ದಳು. ಅಮ್ಮ ಬಂದಿದ್ದು ಕಂಡೊಡನೇ ಕಾಫಿ ಮಾಡಲು ಎದ್ದಳು. ಸರಸ್ವತಿ ಹತ್ತಿರದಲ್ಲೇ ಇರುವ ಹೆಸರಾಂತ ನರ್ಸಿಂಗ್ ಹೋಂ ಒಂದರಲ್ಲಿ ಹೆಡ್ ನರ್ಸ. ಮೈ ತುಂಬಾ ಕೆಲಸ. ಮನೆಗೆ ಬಂದರೆ ಸಾಕೋ ಸಾಕು ಎನಿಸುತ್ತಿರುತ್ತದೆ. ಈಗ ಮಗಳು ಲಕ್ಷ್ಮಿ ಮನೆಯಲ್ಲೇ ಇರುವುದರಿಂದ ಅವಳಿಗೆ ಮನೆ ಕೆಲಸದಲ್ಲಿ ಸಂಪೂರ್ಣ ವಿನಾಯಿತಿ. ಮಧ್ಯಮ ವರ್ಗದ ಮನೆಯಲ್ಲಿ ಬೇಡಿ ಬಯಸುವಂತಹ ಮಗಳು. ಪಿ ಯು ಸಿ ಯಲ್ಲಿ ಅತ್ಯುತ್ತಮ […]