Facebook

Archive for 2019

ಪಂಜು ಕಾವ್ಯಧಾರೆ

ಅಜ್ಜ ಬರುವುದ ಇನ್ನೂ ಬಿಟ್ಟಿಲ್ಲ..!! ಅಗೋ..! ನೋಡು ಅಲ್ಲಿ..? ಗೋಡೆನೆತ್ತಿಯ ಮೊಳೆಯಲ್ಲಿ ಅಹಿಂಸಾ ಮೂರುತಿಯ ಬಂಧಿಸಿ ಕಟ್ಟಿ ಹಾಕಿದಂತೆ ನೇತು ಹಾಕಿದೆ ಬಿಟ್ಟ ಕಣ್ಣು ಬಿಟ್ಟ ಹಾಗೆ ಹುಬ್ಬುಗಂಟಿಕ್ಕದೆ ಒಮ್ಮೆ ನಸು ನಗುತ್ತಾ ಜೀಸಸ್ ಕ್ರಿಸ್ತನಂತೆ ಕಾಣುತ್ತಿದ್ದಾನೆ..!! ನನ್ನ ತಾತ ಕೋಲು ಹಿಡಿದು ಸುಕ್ಕುಗಟ್ಟಿದ ಮೈಯ್ಯಲ್ಲಿ ತುಂಡು ಬಟ್ಟೆ ತೊಟ್ಟು ಮೇಲೆ ಹೊದಿಕೆ ಹೊದ್ದು ಕಾಲ್ನಡಿಗೆಯಲ್ಲೇ ಯಾರನ್ನೋ ? ಯಾವುದನ್ನೋ ! ಅರಸುತ್ತಾ , ನಡೆಯುತ್ತಾ ಹೊರಟಂತಿದೆ…!! ಕಪ್ಪು ಜನಾಂಗೀಯ ನಿಂದನೆ ದಹಿಸಿ ಅಹಿಂಸೆಯಿಂದ ಹಿಂಸೆ ಜಯಿಸಿ […]

ಟ್ರಿಣ್ ಟ್ರಿಣ್ . . . . . . . ದಾರಿಬಿಡಿ: ಸಂಗೀತ ರವಿರಾಜ್

ಸೈಕಲ್ ತುಳಿಯುತ್ತ, ಚಕ್ರ ತಿರುಗಿದ ಕಾಲಗತಿಯಲ್ಲಿ ಕಾಲಚಕ್ರವು ಸದ್ದಿಲ್ಲದೆ ಉರುಳುತ್ತಾ, ಈಗ ನನಗೆ ನಾನೆ ಹುಬ್ಬೇರುವಂತೆ ಎರಡು ಮಕ್ಕಳ ತಾಯಿಯಾಗಿ, ಮೂರು ಕತ್ತೆ ವಯಸ್ಸಾಗಿ, ಬಳುಕದ ಬಳ್ಳಿಯಾಗಿ ಬಾಳುತ್ತಿದ್ದರು ಸೈಕಲ್ ಕಂಡಾಗಲೊಮ್ಮೆ ತುಳಿಯಬೇಕೆಂಬ ಮನದ ಹುಚ್ಚು ವಾಂಛೆ ಈ ಕ್ಷಣಕ್ಕು ಹೋಗಿಲ್ಲ ಎಂದರೆ ಯಾರು ನಂಬಲಾರರು. ಬಾಲ್ಯದ ಬಾಗಿಲಲ್ಲಿಯೆ ಕಲಿತ ಸೈಕಲ್ ಸವಾರಿ, ಈಗಲು ನನ್ನ ಕಾಲತುದಿಯಲ್ಲಿ ಅದೇ ಆಸಕ್ತಿಯಿಂದ ಕುಳಿತಿದೆ ಅಂದರೆ ನನಗೆ ನಾನೆ ಪರಮಾಶ್ಚರ್ಯಗೊಳ್ಳುತ್ತೇನೆ. ಮನೆಗೆ ಯಾರಾದರೂ ಸೈಕಲಲ್ಲಿ ಬಂದರೆ, ಅಥವ ನಾವು ಹೋದ […]

ಅಂತರಾಗ್ನಿ (ಭಾಗ 3): ಕಿರಣ್. ವ್ಹಿ

ಇಲ್ಲಿಯವರೆಗೆ ಹೊರಗೆ ಬಂದ ಇಬ್ಬರು ತಮ್ಮ ತಮ್ಮ ಕೆಲಸ ನೋಡಿಕೊಳ್ಳಲು ಮುಂದಾದರು. ಹರಿಗೆ ತನ್ನ ಬೈಕ್ ಸರಿಯಾದರೆ ಸಾಕಾಗಿತ್ತು. ಆ ನಡುರಸ್ತೆಯಲ್ಲಿ ಕೆಟ್ಟು ನಿಂತದ್ದು ಮತ್ತೊಂದು ತಲೆನೋವಾಗಿತ್ತು. ಸಹಾಯಕ್ಕೆಂದು ಮ್ಯಾನೇಜರ್ ರವಿಯ ಬಳಿ ಹೋದ. ಗೋಪಾಲ್ ವರ್ಮಾರವರು ಕೂಡ ತಮ್ಮ ಮನೆಯವರೆಲ್ಲರ ಜೊತೆ ಸಪ್ತಗಿರಿಯನ್ನು ನೋಡಲು ಹೊರಟರು. ರವಿ, ಹರಿಗೆ ಒಬ್ಬ ಮೆಕ್ಯಾನಿಕ್ನನ್ನು ಪರಿಚಯಿಸಿ ಅವನ ಜೊತೆಯಲ್ಲಿ ಹೋಗಿ ಬೈಕನ್ನು ರಿಪೇರಿ ಮಾಡಿ, ತೆಗೆದುಕೊಂಡು ಬರಲು ಹೇಳಿದ. ಇಬ್ಬರು ಮೆಕ್ಯಾನಿಕ್ ನ ಬೈಕ್ನಲ್ಲಿ ಹೋಗಿ ಗಾಡಿಯನ್ನು ರಿಪೇರಿ […]

ಅಮಾಯಕನೊಬ್ಬನ ಕತೆ: ಸೂರಿ ಹಾರ್ದಳ್ಳಿ

ನಮ್ಮ ಗುಂಡ ಬರೀ ಅಮಾಯಕನಲ್ಲ, ಅಮಾಯಕರಲ್ಲಿ ಅಮಾಯಕ ಎಂಬುದರಲ್ಲಿ ಖಡಾಖಂಡಿತ ನಂಬಿಕೆಯುಳ್ಳವನು ನಾನು. ಇದಕ್ಕೆ ಕಾರಣಗಳಿಲ್ಲದಿಲ್ಲ. ಭಾರತದ ಹವಾಮಾನ ಇಲಾಖೆಯವರು ‘ಇನ್ನು ಮೂರು ದಿನ ಮಳೆ ಬರುತ್ತದೆ’ ಎಂದು ಹೇಳಿದರೆ ಮೂರೂ ದಿವಸ ತನ್ನ ಜೊತೆಯಲ್ಲಿ ತನ್ನ ಕೊಡೆಯನ್ನು ಹೊತ್ತೊಯ್ಯುವವನೇ ಅವನು. ‘ಇಲ್ಲವೋ ಮಂಕು ಮುಂಡೇದೇ, ನಿನಗೆಲ್ಲೋ ಭ್ರಮೆ. ಬರುತ್ತದೆ ಎಂದರೆ ಬರೋಲ್ಲ. ಮಳೆ ದೇವರಾದ ವರುಣನಿಗೆ ಈ ಇಲಾಖೆಯವರನ್ನು ಕಂಡರೆ ಕೋಪ. ಹಾಗಾಗಿ ಸದಾ ತದ್ವಿರುದ್ಧವಾಗಿರುತ್ತದೆ, ಇದು ಸತ್ಯಸ್ಯ ಸತ್ಯ,’ ಎಂದು ಬಿಡಿಸಿ ಬಿಡಿಸಿ ಹೇಳಿದರೂ […]

ಕೀರ್ತನ ಸಾಹಿತ್ಯದಲ್ಲಿ ಸಾಮಾಜಿಕ ವಿಡಂಬನೆ: ನಾಗರೇಖಾ ಗಾಂವಕರ

ಸಾಹಿತ್ಯ ಪ್ರಜ್ಞಾಪೂರ್ವಕ ಸ್ಥಿತಿಯಲ್ಲಿ ಕನಸು ಮೂಡಿಸುವ ಶಕ್ತತೆಯುಳ್ಳದ್ದು, ಹಾಗೇ ಅಪ್ರಜ್ಞಾಪೂರ್ವಕ ನೆಲೆಯಲ್ಲೂ ಮೂಡಿ ಬೆರಗು ಹುಟ್ಟಿಸುವಂತಹುದು. ಕಾವ್ಯ ಹುಟ್ಟುವ ಇಲ್ಲ ಕಟ್ಟುವ ಸಮಯದಲ್ಲಿ ಅದು ಒಳ್ಳಗೊಳ್ಳಬೇಕಾದ ಸಂಗತಿಗಳನ್ನು ಪರಿಕರಗಳನ್ನು ಕುರಿತು ವಿಶ್ಲೇಷಿಸಿದರೆ ಅದು ಕಾವ್ಯ ಮೀಮಾಂಸೆ, ಹಾಗೇ ಪ್ರಾಚೀನ ಕಾಲದ ಸಾಹಿತ್ಯದ ರೂಪುರೇಷೆಗಳ ಕುರಿತು ಇಲ್ಲ ಆ ಕಾಲದ ಕಾವ್ಯದ ಮುಖೇನ ಆ ಯುಗದ ಸಾಮಾಜಿಕ , ರಾಜಕೀಯ ಧಾರ್ಮಿಕ ಸಂಗತಿಗಳನ್ನು ಜೀವನ ರೀತಿನೀತಿಗಳನ್ನು ಮೌಲ್ಯಗಳನ್ನು ಕುರಿತು ವಿಶ್ಲೇಷಿಸುವುದು ಸಂಶೋಧನೆ. ದಾಸ ಪರಂಪರೆಯಲ್ಲಿ ಕೀರ್ತನೆಗಳ ಮುಖೇನ ವಿಡಂಬನಾತ್ಮಕ […]

ಕಗ್ಗದ ಅರ್ಥ ವಿವರಣೆ: ಜಗದೀಶ್ ಅಚ್ಚುತರಾವ್

ಧರೆಯ ಬದುಕೇನದರ ಗುರಿಯೇನು ಫಲವೇನು? । ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ ॥ ತಿರುತಿರುಗಿ ಹೊಟ್ಟೆ ಹೊರಕೊಳುವ ಮೃಗಖಗಕಿಂತ ನರನು ಸಾಧಿಪುದೇನು? – ಮಂಕುತಿಮ್ಮ ॥ ೨೭ ॥ ಈ ಕಗ್ಗದಲ್ಲಿ ಡಿ.ವಿ.ಜಿ. ಬದುಕಿನ ಗುರಿ ಏನು ನಾವು ಬದುಕುವ ದಿನದ ಬದುಕಿಗೆ ಏನಾದರೂ ಅರ್ಥವಿದೆಯೇ ಎಂಬುದಾಗಿ ಪ್ರಶ್ನಿಸುತ್ತಾರೆ. ಮಾನವನ ಬದುಕಿಗೆ ಗುರಿಯಿರದೆ ಬಹಳಷ್ಟು ಜನ ಬದುಕಿರುತ್ತ ಇರುತ್ತಾರೆ. ದೇವರು ನಮಗೆ ಮಾನವ ಜನ್ಮ ಕೊಟ್ಟಿರುವುದು ವ್ಯರ್ಥ ಮಾಡುವುದಕ್ಕೆ ಅಲ್ಲ. ಎಲ್ಲ ಜನ್ಮಗಳಲ್ಲಿ ಮಾನವ ಜನ್ಮ […]

“ಚೌಕಟ್ಟಿನಾಚೆ” ಒಂದು ತೌಲನಿಕ ಕೃತಿ: ಕೆ.ಎಂ.ವಿಶ್ವನಾಥ ಮರತೂರ

ಅನುಭವಗಳಾದರೆ ಅಕ್ಷರಗಳ ಜೊತೆಗೆ ಆಟವಾಡಬಹುದು. ನಮ್ಮೊಳಗೆ ಕಾಡಿದ ಅದೆಷ್ಟೊ ವಿಷಯಗಳಿಗೆ ಧ್ವನಿಯಾಗಬಹುದು. ಇಂತಹದ್ದೆ ಪ್ರಯತ್ನ “ಚೌಕಟ್ಟಿನಾಚೆ” ಕೃತಿ ಪ್ರಯತ್ನ ಮಾಡಿದೆ. ಸಮಾಜದಲ್ಲಿರುವ ಅನೇಕ ವಿಷಯಗಳು ಸಮಯ ಬಂದಂತೆ ನಮಗೆ ಕಾಡಲಾರಂಭಿಸುತ್ತವೆ ಅವಶ್ಯಕ ಮತ್ತು ಅನಾವಶ್ಯಕ ಎನ್ನುವ ವಿಚಾರಗಳತ್ತ ತೊಳಲಾಡುತ್ತವೆ. ಯಾವುದು ಸರಿ ಯಾವುದು ತಪ್ಪು ಎನ್ನುವ ವಿಚಾರದತ್ತ ವಿನಮಯದತ್ತ ಕೇಂದ್ರಿಕೃತವಾಗುತ್ತವೆ. ಇಂತಹ ವಿಚಾರಗಳತ್ತ ಹೊರಳುವುದೇ “ಚೌಕಟ್ಟಿನಾಚೆ” ಕೃತಿಯ ಮುಖ್ಯ ಉದ್ದೇಶವಾಗಿದೆ. ಲೇಖಕರು ತಮ್ಮ ಲೇಖನಗಳ ಮೂಲಕ ಬೀದರ ಜಿಲ್ಲೆಯ ಸಾಹಿತ್ಯದ ಕೊಡುಗೆ ಅದರ ಆಳ ಅಗಲ ತಿಳಿಸುವುದಕ್ಕೆ […]

ನಿಂತಲ್ಲೇ ಎಲ್ಲವೂ ಆಗಬೇಕು: ಕೆ.ಪಿ.ಎಮ್. ಗಣೇಶಯ್ಯ,

ಎಲ್ಲಾದರೂ ಉಂಟೆ..? ನಿಂತಲ್ಲೇ ಎಲ್ಲವೂ ಆಗಬೇಕು ಅಂದ್ರೆ..? ನಿಮಗೆಲ್ಲೋ ತಲೆ ಕೆಟ್ಟಿರಬೇಕು, ಇಲ್ಲಾ ಯಾರೋ ತಲೆಗೆ ತುರುಕಿರಬೇಕು. ಏನಂತ..? ನೀನು ಈಗಿಂದೀಗ ಅದು ಆಗಬೇಕು ಅಷ್ಟೆಯಾ..! ಎಲ್ಲಿಯಾದರೂ ಉಂಟೆ..? ನೆಚ್ಚಿಕೊಂಡ ಕ್ಷೇತ್ರದ ಬಗ್ಗೆ ಮಾಹಿತಿ, ತರಬೇತಿ, ಮಾರ್ಗದರ್ಶನ, ಅಭ್ಯಾಸ ಹೀಗೆ ಏನನ್ನೂ ಪಡೆಯದೆ, ಇದ್ದಕ್ಕಿದ್ದ ಹಾಗೆ ಎಲ್ಲವೂ ನನ್ನದಾಗಬೇಕು ಅಂದರೆ ಹೇಗೆ ಸಾಧ್ಯ.? ಮುಖವಾಡದ ಮುಖಗಳನ್ನು ಹೊತ್ತ ಮುಖಗಳಿಗೆ ನಿಜವಾದ ಮುಖಗಳ ಪರಿಶ್ರಮ, ಗೊತ್ತಿದ್ದರೂ ಅವುಗಳನ್ನು ಹಿಂದಕ್ಕೆ ನೂಕಿ, ನಾನೂ ಅವನಂತೆ, ನನ್ನನ್ನು ಒಪ್ಪಿಕೊಳ್ಳಿರಿ ಎಂದು ದುಂಬಾಲು […]

ಮೆಂಟಲ್ ಎಬಿಲಿಟಿ ಕೋಡಿಂಗ್ ಭಾಗ – 2: ಪ್ರವೀಣ್‌ ಕೆ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೋಡಿಂಗ್‌ ಕುರಿತ ಪ್ರಶ್ನೆಗಳನ್ನು ಉತ್ತರಿಸಲು ಈ ವಿಡಿಯೋ ನಿಮಗೆ ತುಂಬಾ ಸಹಕಾರಿ… ಕೋಡಿಂಗ್ ಭಾಗ –2:  

ಇಚ್ಛಾಮರಣಿಯ ತ್ಯಾಗದ ಜೀವನ, ತ್ಯಾಗದ ಮರಣ!: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಮಹಾಭಾರತದ ಮಹಾಪಾತ್ರಗಳಲ್ಲಿ ಭೀಷ್ಮನದು ಬಹು ಮುಖ್ಯವಾದ ಪಾತ್ರವಾಗಿದೆ! ತ್ಯಾಗವೆಂಬ ಮಹಾಮೌಲ್ಯದಿಂದ ಕೂಡಿ ಪ್ರಸಿದ್ದವಾದುದಾಗಿದೆ. ಇವ ಕೌರವ ಪಾಂಡವರಿಗೆ ಅಜ್ಜನೂ ಗುರುವೂ ಆಗಿದ್ದು ಮಹಾಪರಾಕ್ರಮಿಯಾಗಿದ್ದವ! ಶಂತನು ಮತ್ತು ಗಂಗಾದೇವಿಯರ ಪುತ್ರನೇ ಭೀಷ್ಮ! ಒಂದು ಕಟ್ಟುಪಾಡಿನ ಮೇರೆಗೆ ಶಂತನು ಗಂಗಾದೇವಿಯನ್ನು ಮದುವೆಯಾಗಿರುತ್ತಾನೆ. ಶಂತನು ಗಂಗಾ ದೇವಿಯಲ್ಲಿ ಒಬ್ಬರಾದ ಮೇಲೆ ಒಬ್ಬರಂತೆ ಎಂಟು ಜನ ಗಂಡು ಮಕ್ಕಳನ್ನು ಪಡೆಯುತ್ತಾನಾದರೂ ಮಗು ಹುಟ್ಟುತ್ತಿದ್ದಂತೆ ಗಂಗಾದೇವಿ ಅದನ್ನು ತೆಗೆದುಕೊಂಡು ಗಂಗಾ ನದಿಯಲ್ಲಿ ಮುಳುಗಿಸಿ ಬರುತ್ತಿರುತ್ತಾಳೆ! ಪ್ರತಿ ಮಗು ಹುಟ್ಟಿದಾಗಲೂ ಶಂತನು ಅವಳ ಹಿಂದೆ ನದಿ […]