Facebook

Archive for 2019

ಪಂಜು ಕಾವ್ಯಧಾರೆ

ಅದೆಷ್ಟು ಕಷ್ಟ ಬುದ್ಧನಾಗುವುದೆಂದರೆ…! ಅದೆಷ್ಟು ಕಷ್ಟ ಈಗ ಬುದ್ಧನಾಗುವುದೆಂದರೆ ಆಸೆಯ ಬಿಡುವ ಯುದ್ಧ ಒಂದೆಡೆಯಾದರೆ ಸಕಲವ ತ್ಯಜಿಸಿ ಎದ್ದು ಬಿಡುವುದು ಇನ್ನೊಂದು! ಕಲ್ಲೆಸೆದವರ ಎದೆಯಲ್ಲಿ ಪ್ರೀತಿ ತುಂಬಿ ಬೆರಳ ಹಾರ ಮಾಡಿದವರ ಕೊರಳಲ್ಲಿ ಶಾಂತಿ ಧ್ವನಿ ನುಡಿಸಿ ರೋಗಕ್ಕೆ ಹೆದರಿ, ಸಾವಿಗೆ ಬೆದರಿ ಮಧ್ಯರಾತ್ರಿ ದಿಗ್ಗನೆ ಎದ್ದು ನಡೆದುಬಿಡುವುದೆಂದರೆ ಉದ್ದುದ್ದ, ಮಾರುದ್ದದ ಬೋಧನೆ ನೀಡದೇ ಸದ್ದು ಮಾಡದೆ ಭೋಧಿಯಡಿಯಲ್ಲಿ ಸಿದ್ಧಿ ಪಡೆದು ಸಿದ್ದಾರ್ಥನ ನಿರ್ವಾಣ ಮಾಡಿ ಗೌತಮನ ನಿರ್ಮಾಣ ಹೊಂದುವುದೆಂದರೆ ಕಡು ಕಷ್ಟವೇ ಅದು!! ಬುದ್ಧನಾಗುವುದೆಂದರೆ ಬರೀ […]

ಹಸಿರು ಸೀರೆ ಉಟ್ಟು ನೆರಿಗೆ ಒದೆಯುತ್ತಾ ನಡೆದ ಹುಡುಗಿಯರು: ಅಮರದೀಪ್

ಇದು ಮಳೆಗಾಲವಾ? ಅನುಮಾನವಾಯಿತು. ಕಡು ಬೇಸಿಗೆಗಿಂತ ಧಗೆಯಾದ ವಾತಾವರಣ. ಮಳೆಗಾಲವೇ ಹೀಗೇ… ಇನ್ನು ಬೇಸಿಗೆ ಹೇಗೆ? ಎನ್ನುವ ಆತಂಕ ಬೇರೆ. ಆಗಾಗ ಆಯಾಸ, ಸುಸ್ತು, ಚೂರು ರೆಸ್ಟ್ ಬೇಕು ಎನ್ನುವ ವಯಸ್ಸು ನಾವು ಹರೆಯದಿಂದ ಇಪ್ಪತ್ತು ಇಪ್ಪತ್ತೈದು ವರ್ಷಗಳನ್ನು ದಾಟಿ ಮುಂದೆ ಬಂದಿದ್ದೇವೆನ್ನುವುದಕ್ಕೆ ಮತ್ತು ಗಂಭೀರತೆ, ತಿಳುವಳಿಕೆಯಿಂದ, ಘನತೆಯಿಂದ ಇರಲೇಬೇಕಾದ ಅನಿವಾರ್ಯತೆಗೆ ಕಾರಣವಾಗುತ್ತದೆ. ಯಾವಾಗ ಮಳೆ ಬರುತ್ತದೋ, ಮತ್ತೆ ಬಿಸಿಲು ಸುರಿಯುತ್ತದೋ ತಿಳಿಯುವುದಿಲ್ಲ. ಪ್ರತಿ ದಿನ ಆಫೀಸ್, ಮನೆ, ಮಾರ್ಕೆಟ್ಟು, ಕೊನೆಗೆ ತಲೆಕೆಟ್ಟು ಹೋದರೆ ಒಂದು ಸಿನಿಮಾ, […]

ವೆಂಕ್ಟಣ್ಣ ಟೈಯರ್ ಅಂಗಡಿ: ದಯಾನಂದ ರಂಗದಾಮಪ್ಪ

ಸತತವಾಗಿ ಹತ್ತು ವರ್ಷ ಯಾವುದೋ ಖಾಸಗಿ ವಿದೇಶಿ ಕಂಪನಿಗೆ ಜೀತದಾಳಾಗಿ ದುಡಿದ ಮೇಲೆ ಯಾಕೋ ಬೇಸರ, ಒಂಟಿತನ, ಜಿಗುಪ್ಸೆ ನಿತ್ಯ ನೋಡೋ ಮಾನಿಟರ್ ಗಿಂತ ಹತ್ತಿರವಾಗಿ ಕಾಣುತ್ತಿತ್ತು. ಟ್ರಾಫಿಕ್ ಜಾಮ್ ನಲ್ಲಿ ನಿಂತಾಗ ನಮ್ಮೂರು ಜಾತ್ರೇಲಿ ನಿಂತ ನೆನಪು, ಯಾರದೋ ಬೈಕ್ ಹಿಂದಿನಿಂದ ಹಾರ್ನ್ ಮಾಡಿದಾಗ ನಮ್ಮೂರ ಗಣೇಶ ಹಬ್ಬ ದಲ್ಲಿ ಹೊಡೆದ ತಮಟೆ ಸದ್ದಿನ ಹಾಗೆ ಭಾಸವಾಗುತ್ತಿತ್ತು. ಆರಂಭದ ದಿನಗಳಲ್ಲಿ ಇಷ್ಟವಾಗುತಿದ್ದ ಮಾಲ್ಗಳು ಹೀಗೇ ಮಾಮೂಲಿಯಾಗಿ ಕಾಣುತ್ತಿವೆ. ಬೆಂಗಳೂರಿನ ದೆವ್ವಗಳೆಲ್ಲ ಒಂದು ಕಡೆ ಸೇರಿ ಜೋರಾಗಿ […]

ಮುಂಬಯಿ ಮಾವ: ಶೀಲಾ ಭಂಡಾರ್‌ಕರ್, ಮೈಸೂರು

ಮೂಲ ಕೊಂಕಣಿ: ವಲ್ಲಿ ಕ್ವಾಡ್ರಸ್, ಅಜೆಕಾರು. ಕನ್ನಡಕ್ಕೆ ಅನುವಾದ: ಶೀಲಾ ಭಂಡಾರ್‌ಕರ್, ಮೈಸೂರು ‘ಮುಂಬೈ ಮಾವ ತೀರಿ ಹೋದನಂತೆ.’ ಬೆಳಿಗ್ಗೆ ಎದ್ದು ಅಡುಗೆಮನೆಯೊಳಗೆ ಚಹ ಮಾಡಲು ನೀರು ಕುದಿಯಲಿಡುವ ಸಮಯಕ್ಕೆ ಸರಿಯಾಗಿ ವಾಟ್ಸ್ ಆ್ಯಪ್‍ಗೆ ಬಂದ ಮೆಸೆಜ್ ಓದಿದ ರೀಟಾಳ ಮನಸ್ಸಿನಲ್ಲಿ ಯಾವುದೇ ಭಾವನೆಗಳು ಹುಟ್ಟಲಿಲ್ಲ. ಅವನಿಷ್ಟು ದಿನ ಎಲ್ಲಿದ್ದ? ಯಾರ ಜತೆಯಲ್ಲಿದ್ದ? ಏನಾಗಿದ್ದ? ಎನ್ನುವುದು ಯಾರಿಗೂ ಸರಿಯಾಗಿ ತಿಳಿದಿರಲಿಲ್ಲ. ಆದರೂ ಹೋದ ವಾರ, ಊರಿನ ಕಾಲೇಜಲ್ಲಿ ಓದುತ್ತಿರುವ ಸೋದರತ್ತೆಯ ಮಗನೊಬ್ಬ “ಫ್ಯಾಮಿಲಿ” ಎನ್ನುವ ಹೆಸರಿನ ವಾಟ್ಸ್ […]

‘ಅವ್ವ ಮತ್ತು ಅಬ್ಬಲಿಗೆ’ ಪುಸ್ತಕ ಪರಿಚಯ..: ಸಚಿನ್ ಅಂಕೋಲಾ

ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಶಿರಸಿಯ ಶೋಭಾ ಹಿರೇಕೈ ಅವರ ಚೊಚ್ಚಲ ಕವನ ಸಂಕಲನ ಈ ‘ಅವ್ವ ಮತ್ತು ಅಬ್ಬಲಿಗೆ’. ಸುಮಾರು ನಲವತ್ತು ಕವಿತೆಗಳನ್ನು ಒಳಗೊಂಡಿರುವ ಈ ಸಂಕಲನವನ್ನು ಹಿರಿಯ ಕವಿ ವಿಷ್ಣು ನಾಯ್ಕರು ತಮ್ಮ ಸುದೀರ್ಘ ಮುನ್ನುಡಿಯ ಆರಂಭದಲ್ಲಿಯೇ ‘ಇದೊಂದು ದೇಸಿ ಚಿಂತನೆಯ ನೆಲ ಮೂಲದ ಕವನ ಗುಚ್ಛ’ ಎಂದು ಉಲ್ಲೇಖಿಸಿದ್ದಾರೆ. ಈ ಕೃತಿಯ ಶೀರ್ಷಿಕೆಯೇ ಅವರ ಮಾತನ್ನು ಅನುಮೋದಿಸುವಂತಿದೆ. ಕನಕಾಂಬರ ಹೂವನ್ನು ನಮ್ಮ ಆಡುಭಾಷೆಯಲ್ಲಿ ಅಬ್ಬಲಿಗೆ ಅಥವಾ ಅಬ್ಬಲಿ ಹೂವು ಎಂದು ಕರೆಯುತ್ತೇವೆ.ಈ ಅಬ್ಬಲಿಗೆ ಹೂವು ಯಾವುದೇ […]

ಮೆಂಟಲ್ ಎಬಿಲಿಟಿ ಭಾಜ್ಯತೆಯ ನಿಯಮಗಳು: ಪ್ರವೀಣ್‌ ಕೆ.

ಭಾಗಾಕಾರವನ್ನು ಸುಲಭವಾಗಿ ಮಾಡಲು ಭಾಜ್ಯತೆಯ ನಿಯಮಗಳು ಸಹಕಾರಿಯಾಗಿವೆ. ಈ ವಿಡಿಯೋ (https://www.youtube.com/watch?v=zJzuz6baRkM)ದಲ್ಲಿ ಭಾಜ್ಯತೆಯ ನಿಯಮಗಳನ್ನು ಅರ್ಥಮಾಡಿಸಿ ಅವುಗಳನ್ನು ನೆನಪಿಡಲು ಸುಲಭ ವಿಂಗಡನೆಯನ್ನು ನೀಡಲಾಗಿದೆ.  

ಅಂತರಾಗ್ನಿ: ಕಿರಣ್. ವ್ಹಿ

ಧೋಧೋ ಎಂದು ಧಾರಾಕಾರವಾಗಿ ಸುರಿಯುತ್ತಿರುವ ಮಳೆ.ನೆಲವೆಲ್ಲ ತೋಯ್ದು ಘಮ್ ಎಂದು ಹೊರಸೂಸುವ ಮಣ್ಣಿನ ಸುವಾಸನೆಗೆ ಎಂತಹವರೆ ಆದರು ಮೈಮರೆಯುವರು. ಅಂತಹ ಸಮಯವದು. ಸಂಜೆಯಾಗಿದ್ದರಿಂದ, ಸೂರ್ಯ ತನ್ನ ಪ್ರತಾಪವನ್ನು ಇಳಿಮುಖಗೊಳಿಸಿ ಮರಳುತ್ತಿದ್ದ. ದೂರದ ಬಾನಂಚಿನಲ್ಲಿ ಮುಳುಗುತ್ತಿದ್ದ  ನೇಸರನನ್ನೆ ದಿಟ್ಟಿಸಿ ನೋಡುತ್ತಿದ್ದ ಹರಿ. ಅವನ ಮನಸ್ಸು ಅಲ್ಲಿರಲಿಲ್ಲ. ಕೇವಲ ಶೂನ್ಯವೇ ಆವರಿಸಿತ್ತು ಅವನಲ್ಲಿ. ಇನ್ನೇನು ಜೀವನ ಮುಗಿದೇ ಹೋಯಿತು ಎನ್ನುವಂತೆ ನಿಂತಿದ್ದ. ರಪರಪನೆ ಹೊಡೆಯುವ ಹೊಡೆತವು ಅವನ ಅರಿವಿಗೆ ಬರಲಿಲ್ಲ. “ಥೋ  ಇದೇನು ಮಳೆ. ಬೆಳಗ್ಗೆಯಲ್ಲ ನೆತ್ತಿ ಸುಡುವಂತೆ ಬಿಸಿಲಿರತ್ತೆ. […]

“ಮುದವಲ್ಲವೇ ಮೌನದಾಲಿಂಗನ”: ನಾಗರೇಖಾ ಗಾಂವಕರ, ದಾಂಡೇಲಿ

“ಸಾಯ್‍ಲೆನ್ಸ  ಇಜ್ ದ್ ಬೆಷ್ಟ್ ಆನ್ಸರ್ ಫಾರ್ ಆಲ್ ಸ್ಟುಪಿಡ್ ಕ್ವೆಶ್ಚನ್ಸ್, ಸ್ಮಾಯ್ಲಿಂಗ ಇಜ್ ದ್ ಬೆಷ್ಟ್ ರಿಯಾಕ್ಷನ್ ಇನ್ ಅಲ್ ಕ್ರಿಟಿಕಲ್ ಸಿಚ್ಯುಯೇಶನ್”. ಎಷ್ಟು ಸುಂದರವಾಗಿ ಹೇಳಿದ್ದಾರೆ ಅಲ್ವೆ? ಮೌನ ಮತ್ತು ಮುಗುಳು ನಗೆಯ ಪರಿಪೂರ್ಣ ಮಹತ್ವವನ್ನು ಬಿಂಬಿಸುವ ಈ ವ್ಯಾಖ್ಯಾನ ಮಾರ್ಮಿಕವೆನಿಸುತ್ತದೆ ಮುಗುಳುನಗೆಯ ಮುಖಾರವಿಂದದಲಿ ಮೌನದ ರಿಂಗಣ ಮನಮೋಹಕ. ಬಹಳ ಸಂದರ್ಭಗಳಲ್ಲಿ ಕೆಲವು ಮೂರ್ಖ ಪ್ರಶ್ನೆಗಳಿಗೆ ಮೌನವೇ ಸರಿಯಾದ ಉತ್ತರ. ಹಾಗೆ ಮುಗುಳುನಗೆ ಒಂದು ಉದ್ದಿಪನ ಮಾತ್ರೆಯಂತೆ. ಅತಿ ಗಂಭೀರ ಹಾಗೂ ಕ್ಲಿಷ್ಟಕರ ಸನ್ನಿವೇಷಗಳಲ್ಲಿ […]

ನವರಾತ್ರಿಯ ಸಂಭ್ರಮ: ಪೂಜಾ ಗುಜರನ್ ಮಂಗಳೂರು.

ಭೂಮಿ ಮೇಲೆ ರಾಕ್ಷಸರ ಅಟ್ಟಹಾಸವು ಮಿತಿಮೀರಿದಾಗ. ಎಲ್ಲೆಲ್ಲೂ ಅನ್ಯಾಯ ವಿಜೃಂಭಿಸಿ ಅಧರ್ಮವೇ ತಾಂಡವಾಡುವಾಗ ದುಷ್ಟರನ್ನು ಸಂಹರಿಸಿ ಶಿಷ್ಟರನ್ನು, ರಕ್ಷಿಸಲು ಧರೆಗಿಳಿದು ಬಂದವಳೇ ದುರ್ಗಾಮಾತೆ. ತನ್ನ ಬಳಿಗೆ ನೊಂದು ಬರುವ ಭಕ್ತರಿಗೆ ದೇವಿಯೂ ಅನುಗ್ರಹವನ್ನು ಮಾಡಿ ತಮ್ಮ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿ ಹರಸುತ್ತಾಳೆ ಅನ್ನುವ ಅಚಲವಾದ ನಂಬಿಕೆ ಭಕ್ತರಿಗಿದೆ. ನವರಾತ್ರಿಯ ಕುರಿತು ಪುರಾಣಗಳಲ್ಲಿ ಹಲವಾರು ಕಥೆಗಳಿವೆ. ದುರ್ಗಾದೇವಿಯೂ ಮಹಿಷಾಸುರನೊಂದಿಗೆ ಪಾಡ್ಯದಿಂದ ನವಮಿವರೆಗೆ ಯುದ್ಧ ಮಾಡಿ ನವಮಿಯಂದು ಅಸುರನನ್ನು ಕೊಂದಳು. ಅದುದರಿಂದ ದೇವಿಗೆ ಮಹಿಷಾಮರ್ಧಿನಿ ಎಂದು ಕರೆಯುತ್ತಾರೆ. ಪುರಾಣದ […]

ಪರಮ ದೇಶಭಕ್ತ ಕ್ರಾಂತಿಕಾರಿ ಭಗತ್ ಸಿಂಗ್  !: ಕೆ ಟಿ ಸೋಮಶೇಖರ್ ಹೊಳಲ್ಕೆರೆ

1931 ರಲ್ಲಿ  ತನ್ನ 23 ನೇ ವಯಸ್ಸಿನಲ್ಲಿ ನೇಣಿಗೆ ಸಿದ್ಧನಾಗಿ ಕಪ್ಪು ಬಟ್ಟೆಯನ್ನು ತೊಟ್ಟರೂ ನೇಣಿಗೆ ಹೆದರಿ ಮುಖ ಮುಚ್ಚಿಕೊಳ್ಳದೆ  ನೇಣಿಗೆ ನಡುಕ ಉಂಟು ಮಾಡಿ ಕತ್ತನ್ನು ನೇಣಿಗೆ ಕೊಟ್ಟು ಕತ್ತನ್ನು ಸುತ್ತುವರಿದ ನೇಣಿನ ಹಗ್ಗಕ್ಕೆ ಮುತ್ತಿಟ್ಟು ತನ್ನ ಇಬ್ಬರು ಸ್ನೇಹಿತರೊಂದಿಗೆ ಹುತಾತ್ಮನಾದ ಧೈರ್ಯವಂತ ಭಗತ್ ಸಿಂಗ್!  ನೇಣಿಗೆ ಕತ್ತು ಕೊಡಲು ಇನ್ನು ಕೆಲವೇ ಗಂಟೆಗಳು ಬಾಕಿ ಇರುವಾಗ ‘ ದ ರೆವಲ್ಯೂಷನರಿ ಲೆನಿನ್ ‘ ಪುಸ್ತಕ ತಂದಿದ್ದೀರಾ? ಎಂದು ತಮ್ಮ ಕೊನೆಯ ಅಸೆಯ ತಿಳಿಯಲು ಬಂದ  […]