Facebook

Archive for 2019

ಪಂಜು ಕಾವ್ಯಧಾರೆ

ಒಡೆದ ನೆನಪಿನ ಚೂರುಗಳು…!! ಆ ತೋರು ಬೆರಳು ಸಹ ಕಣ್ಣ ಮಿಟಿಗಿಸುತ್ತ ಮೊಬೈಲ್ನ ಮೂರು ಗಳಿಗೆಯೂ ಬ್ಲಾಕ್ ಮಾಡಿರುವ ವಾಟ್ಸಾಪ್ ನಂಬರ್, ಫೇಸ್ಬುಕ್ನ ಐಡಿ ನೋಡುವುದ ಬಿಡೋದಿಲ್ಲ ಅದಕ್ಕೂ ತಿಳಿದಿರಬೇಕು ನಾವು ದೂರವಾಗಿರುವ ವಿಷಯವು ಪದೇ ಪದೇ ನಿನ್ನ ನೆನಪಿಸುತ್ತಿದೆ !! ನೋಡು ನಮ್ಮನಗಲಿಕೆಯ ಕಂಡು ಆ ಬಸ್ಸು – ಲಾರಿ, ಕಾರು- ಸ್ಕೂಟರುಗಳು ಒಂದೇ ಸಮನೇ ಜೋರು ಸದ್ದು ಮಾಡಿ ರಸ್ತೆಗುಂಟ ಕೇಕೆ ಹಾಕುತ್ತ ಹೊಟ್ಟೆ ಉರಿಸುತ್ತಿವೆ…!! ಒಡೆದ ಕನ್ನಡಿಯೂ ಹೇಳುತ್ತಿತ್ತು ಛಿದ್ರ -ಛಿದ್ರವಾದ ಚೂರುಗಳಲ್ಲಿಯೂ […]

ಲೇಖನ ಆಹ್ವಾನ

ಆತ್ಮೀಯರೇ, ಆಯುಧ ಪೂಜೆ ಅಥವಾ ದಸರಾ ಹಬ್ಬದ ನಿಮ್ಮ ಅನುಭವಗಳನ್ನು ಬರೆದು ನಮಗೆ ಕಳುಹಿಸಿಕೊಡಿ. ಲೇಖನಗಳಿಗೆ ಪದಗಳ ಮಿತಿ ಇಲ್ಲ. ಲೇಖನದಲ್ಲಿ ಕನಿಷ್ಠವೆಂದರೂ 500 ಪದಗಳಿರಲಿ. ನಿಮ್ಮ ಲೇಖನಗಳು ಅಕ್ಟೋಬರ್ 5, 2019 ರ ಒಳಗೆ ನಮಗೆ ತಲುಪಲಿ. ನಮ್ಮ ಇ ಮೇಲ್ ವಿಳಾಸ: editor.panju@gmail.com, smnattu@gmail.com ನಿಮ್ಮ ಲೇಖನಗಳ ನಿರೀಕ್ಷೆಯಲ್ಲಿ ಪಂಜು ಬಳಗ

ಸಂಕಲನ ಮತ್ತು ವ್ಯವಕಲನ ಸುಲಭ ವಿಧಾನ: ಪ್ರವೀಣ್‌ ಕೆ.

ಸಂಕಲನ ಮತ್ತು ವ್ಯವಕಲನಗಳನ್ನು ಎಲ್ಲರೂ ಮಾಡುತ್ತಾರೆ. ಆದರೆ ಶಾಲೆಯಲ್ಲಿ ಕಲಿಸಿದ ಪಾರಂಪರಿಕ ವಿಧಾನದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸುಗಳಿಸುವುದು ಸುಲಭವಲ್ಲ. ಅಲ್ಲದೇ ಆ ವಿಧಾನಗಳನ್ನು ನಾವು ಉಪಯೋಗ ಮಾಡಬೇಕಾಗಿಯೂ ಇಲ್ಲ. ಅದಕ್ಕಿಂತ ಸುಲಭದ ಮನಸ್ಸಿನಲ್ಲಿಯೇ ಕ್ಷಣಮಾತ್ರದಲ್ಲಿ ಮಾಡುವಂತಹ ವಿಧಾನಗಳನ್ನು ಈ ವಿಡಿಯೋ ದಲ್ಲಿ ನೀಡಲಾಗಿದೆ. ಇದಕ್ಕೆ ಪ್ರಾಕ್ಟೀಸ್ ಮಾಡಲು ಕೊಂಡಿಯನ್ನು ಇಲ್ಲಿ ನೀಡಲಾಗಿದೆ. ಇಲ್ಲಿ ಒತ್ತಿ: Practical test  

ಚಿಮಣಿ ಬುಡ್ಡಿ: ಚೈತ್ರಾ ವಿ.ಮಾಲವಿ

ಕೇರಿಯ ಬೀದಿ ದೀಪದ ಮಂದ ಬೆಳಕಲ್ಲಿ ತನ್ನ ಗುಡಿಸ್ಲು ಮುಂದ ಓದ್ತಾ ಕುಂತಿದ್ಲು ಪಾರಿ. “ಲೇ.. ಪಾರಿ, ಚಿಮಣಿ ಬುಡ್ಡಿ ಎಲ್ಲಿಟ್ಟಿ? ಕಾಣವಲ್ತು” ಒದರಿದ್ಲು ಅವ್ವ ಹುಲಿಗೆವ್ವ. “ಯವ್ವಾ, ಅಲ್ಲೇ ಇಟ್ಟಿನಿ ನೋಡ್ಬೇ” ಕುಂತಲ್ಲೇ ಉಸರಿದಳು. ಕತ್ಲು ಕವಿದ ಗುಡಿಸ್ಲು ಒಳಗ ತಡಕಾಡ್ತಿದ್ದ ಹುಲಿಗೆವ್ವಗ ಅಡಿಗೆ ಮನಿ ಮೂಲ್ಯಾಗ ತಣ್ಣಗ ಕುಂತಿದ್ದ ಚಿಮಣಿ ಬುಡ್ಡಿ ಕರ್ರಗೆ ಕಾಣ್ತು. ಏನೇನೋ ಗುನುಗುತ್ತಾ ಚಿಮಣಿ ಬುಡ್ಡಿಯನ್ನು ಕೈಗೆ ತಕ್ಕಂಡು, ಗುಡಿಸ್ಲು ನಡು ಕಂಬಕ ತಂದಿಟ್ಲು. ಬೆಂಕಿಪಟ್ಣ ಕಾಣ್ದೇ ಪಾರಿ ಮ್ಯಾಲಾ […]

ನನ್ನ ಆನಂದ: ಹೆಚ್. ಷೌಕತ್ ಆಲಿ, ಮದ್ದೂರು

ಖಾಸಗಿ ಶಾಲೆಗಳಲ್ಲಿ ಪ್ರತಿಷ್ಠಿತ ವಿದ್ಯಾರ್ಥಿಗಳೇ ಹೆಚ್ಚು, ಪೋಷಕರಿಗೂ ತಮ್ಮ ಮಕ್ಕಳ ಶಾಲೆಗಳ ಬಗ್ಗೆ, ಶಿಕ್ಷಕರ ಬಗ್ಗೆ, ಆಡಳಿತಾಧಿಕಾರಿ, ಕಾರ್ಯಕಾರಿ ಮಂಡಳಿಯ ಬಗ್ಗೆ ಇತರರೊಂದಿಗೆ ಹೇಳಿಕೊಳ್ಳೋದೆ ಒಂದು ಶ್ರೀಮಂತಿಕೆ ಎನ್ನಬಹುದು ಒಂದು ನಗರದ ಹೃದಯ ಭಾಗದಲ್ಲಿದ್ದ ಒಂದು ಪ್ರಸಿದ್ಧ ಶಾಲೆಯಲ್ಲಿ ನಾನು ಶಿಕ್ಷಕನಾಗಿ ಸೇರಿದ್ದ ಮೊದಲ ವರ್ಷದಲ್ಲಿ ……………. . ! ಎಂಟನೆಯ ತರಗತಿಗೆ ಪ್ರವೇಶ ಮಾಡುವ ಕೆಲ ವಿದ್ಯಾರ್ಥಿಗಳಿಗೆ ನಾನು ಕೆಲವು ಪ್ರಶ್ನೆಗಳನ್ನು ಅವರ ಮೆಂಟಲ್ ಎಬಿಲಿಟಿ, ಮೆಮೋರಿ, ರೀಡಿಂಗ್, ರೈಟಿಂಗ್, ಜಿ. ಕೆ. ಸ್ಕಿಲ್ಸ್ ಬಗ್ಗೆ […]

ಜೀವದ ಪ್ರಾಮುಖ್ಯತೆ: ಗಿರಿಜಾ ಜ್ಞಾನಸುಂದರ್

ಅಹ್! ದೇಹ ಹಗುರವಾಗುತ್ತಿರುವ ಅನುಭವ! ಏನಾಯಿತು ಅಷ್ಟೊಂದು ನೋವಾಗುತ್ತಿದ್ದ ದೇಹಕ್ಕೆ? ಪ್ರಸಾದ್ ಯೋಚಿಸುತಿದ್ದಂತೆ ತಿಳಿಯಿತು ಅವನ ಆತ್ಮ ದೇಹದಿಂದ ಹೊರಗೆ ಬಂದಿದೆ!! ಹಾಗಾಗಿ ನೋವು ಮರೆಯಾಗಿದೆ…. ತಾನು ಮನನೊಂದು ಆತ್ಮಹತ್ಯೆ ಮಾಡಿಕೊಂಡದ್ದು ನೆನಪಿಗೆ ಬಂತು….. ಕಷ್ಟಪಟ್ಟು ಓದಿ ಶಾಲೆಯಲ್ಲಿ ಮೊದಲನೆಯವನಾಗಿದ್ದ ಪ್ರಸಾದ್. ಎಲ್ಲದರಲ್ಲೂ ಮೊದಲು. ಆಟ ಪಾಠ, ವಿದ್ಯೆ, ಪರಿಶ್ರಮ, ಸಹನೆ, ಸ್ನೇಹ ಎಲ್ಲದರಲ್ಲೂ. ಅತ್ಯಂತ ಶ್ರದ್ಧೆಯಿಂದ ಓದಿ ಡಾಕ್ಟರ್ ಆಗಿದ್ದು ಆಯಿತು. ಉತ್ತಮ ರಾಂಕ್ ಗಳಿಸಿದ್ದಕ್ಕಾಗಿ ಸರ್ಕಾರಿ ಉದ್ಯೋಗವು ಆಯಿತು. ಡಾಕ್ಟರ್ ಆಗಿ ತನ್ನ ಕರ್ತವ್ಯ […]

ಬದಲಾಗುವ ಬಣ್ಣಗಳು (ಕೊನೆಯ ಭಾಗ): ಅಶ್ಫಾಕ್ ಪೀರಜಾದೆ

ಇಲ್ಲಿಯವರೆಗೆ -7 – ಪ್ರತೀಕ ಮೊದಲು ಬಂದವನೇ ಚೇತನನ್ನು ಭೇಟಿಯಾದ. ಚೇತನ ತನ್ನ ಹೆಂಡ್ತಿ ಮಕ್ಕಳನ್ನು ತೋರಿಸಿ ತಾನೀಗ ಸಂಸಾರ ಸಮೇತ ಹಾಯಾಗಿರುವುದಾಗಿ ಹೇಳಿದ “ಅವಳ ಸಂಗ ಬಿಟ್ಟು ಬಿಟ್ಟಿದ್ದೇನೆ. ಆದರೂ ಒಮ್ಮೊಮ್ಮೆ ಅವಳು ನೆನಪಾಗಿ ಕಾಡುತ್ತಾಳೆ ಒಂದೆರಡು ಪೆಗ್ಗು ಹಾಕಿ ಮಲಗಿ ಬಿಡುತ್ತೇನೆ” ಎಂದು ಹೇಳಿದಾಗ ಪ್ರತೀಕನಿಗೆ ಆಶ್ಚರ್ಯವಾಗುತ್ತದೆ. “ಗಂಡ ಹೆಂಡತಿಗಿಂತ ಹೆಚ್ಚಾಗಿ ಇದ್ದವರು ನೀವು… ಇಬ್ಬರೂ ಇಷ್ಟು ಸುಲಭವಾಗಿ ಹೇಗೆ ಅಗಲಿದಿರಿ..?” ಎಂದು ಪ್ರತೀಕ ಪ್ರಶ್ನೆಸಿದಾಗ ಏನು ಮಾಡಲಿ ಅನಿವಾರ್ಯವಾಯಿತು. ಈ ಮದುವೆ ಸಂಬಂಧ […]

ಪ್ರಾಮಾಣಿಕತೆ ಎಂಬ ಪ್ರತಿಬಿಂಬ: ಎಂ.ಎಚ್. ಮೊಕಾಶಿ ವಿಜಯಪುರ

ಯಾವುದೇ ಸಂಸ್ಕೃತಿಯಾದರೂ ಕೆಲವು ಮೌಲ್ಯಗಳನ್ನು ಹೊಂದಿರುತ್ತದೆ. ಅದರಲ್ಲಿ ಪ್ರಾಮಾಣಿಕತೆ ಎಂಬುದು ಮಹಾಮೌಲ್ಯವಾಗಿದೆ ಎಂದು ಜಗತ್ತಿನ ಎಲ್ಲ ಸಂಸ್ಕೃತಿಗಳ ನಂಬಿಕೆ. ಪ್ರಾಮಾಣಿಕತೆ ಎನ್ನುವುದು ವ್ಯಕ್ತಿಯ ನಡತೆಯ ಅಂಶವನ್ನು ಸೂಚಿಸುವುದಾಗಿದೆ. ಪ್ರಾಮಾಣಿಕತೆಯಲ್ಲಿ ನಿಷ್ಠೆ, ನಿಷ್ಪಕ್ಷಪಾತ, ವಿಶ್ವಾಸರ್ಹ ಮೊದಲಾದ ಗುಣಗಳು ಸೇರಿವೆ. ಇಂದಿಗೂ ನಮ್ಮಲ್ಲಿ ಸತ್ಯ, ನಿಷ್ಟೆ, ಪ್ರಾಮಾಣಿಕತೆಯಂತಹ ಹಲವಾರು ಸದ್ಗುಣಗಳಿವೆ. ಆದರೆ ಅದನ್ನು ಗುರುತಿಸುವ ಒಳಗಣ್ಣು ಬೇಕಾಗಿದೆ. “ನಾನು ಸರಿ, ಉಳಿದವರು ಸರಿಯಿಲ್ಲ” ಎಂಬ ಭಾವನೆಗಳು ಪ್ರಸ್ತುತ ಹೆಚ್ಚಾಗುತ್ತಿವೆ. ನಾವು ಸತ್ಯ ನಿಷ್ಟರೇ? ಎಂಬುದನ್ನು ಮೊದಲು ಪರಾಮರ್ಶಿಸಿಕೊಳ್ಳಬೇಕು. ಪ್ರಾಮಾಣಿಕತೆಯ ಬಗ್ಗೆ […]

ಈ ನೆಲಮೂಲದ ಅನುಭವ ಮತ್ತು ಅಧ್ಯಯನದ ಘಮಲು “ಹಾಣಾದಿ: ಕೆ.ಎಂ.ವಿಶ್ವನಾಥ ಮರತೂರ.

“ಈ ಬಿಸಿಲಂದ್ರೆ ಅಪ್ಪ ಇದ್ದಂಗೆ, ಮುಂಜಾನೆ ಎಳೆ ಮಗುವಿನಂತೆ, ಮಧ್ಯಾನ ಉರಿ ಬಿಸಿಲಿನಂತೆ ಸಿಡುಕಿನ ಮನುಷ್ಯ, ರಾತ್ರಿ ಬಿಸಿಲು ಬಿಟ್ಟು ಹೋದ ಅವಶೇಷದಂತಿರುತ್ತಿದ್ದ. ಬಿಸಿಲಿನಷ್ಟೆ ಸದ್ದಿಲ್ಲದೆ ಕುದಿಯುತ್ತಿರುವ ಮನುಷ್ಯ” “ನೀರು ಹರಿದು ನುಣುಪಾದ ಜಾರು ಕಲ್ಲುಗಳು. ಉಸುಕು ಮಣ್ಣು ಬೆರೆತು ನೆಲದಲ್ಲಿ ನೀರು ನಿಂತ ಅಗಲವಾದ ಜಾಗ. ಮಧ್ಯೆ ಮಧ್ಯೆ ವಿಚಿತ್ರ ಕೀಟಗಳ ಹಾರಾಟ” ಈ ಮೇಲಿನ ಸಾಲುಗಳು ನಾನು ಇತ್ತೀಚಗೆ ಓದಿರುವ ಕಪಿಲ ಪಿ ಹುಮನಾಬಾದೆ ಎನ್ನುವ ಪ್ರೀತಿಯ ಹರೆಯದ ಹುಡುಗನ “ಹಾಣಾದಿ” ಕಾದಂಬರಿಯ ಸಾಲುಗಳು. […]

ಪರಿವರ್ತನೆಗೊಂದು ಅವಕಾಶಕೊಟ್ಟಾಗ: ಎಂ. ಡಿ. ಚಂದ್ರೇಗೌಡ ನಾರಮ್ನಳ್ಳಿ

ಬದುಕನ್ನು ರೂಪಿಸಿಕೊಳ್ಳಲು ಒಂದು ಕೆಲಸ ಬೇಕು. ಕೆಲವರು ವೈಟ್ ಕಾಲರ್ ವೃತ್ತಿಯನ್ನೆ ಹುಡುಕುತ್ತಾರೆ. ಕೆಲವರು ಕಮಾಯಿ ಅಧಿಕವಿರುವುದನ್ನು ಅಪೇಕ್ಷಿಸುತ್ತಾರೆ. ಮತ್ತೆ ಕೆಲವರು ಆದರ್ಶಗಳ ಬೆನ್ನು ಹತ್ತುತ್ತಾರೆ. ದೇಶ ಪ್ರೇಮದ ತುಡಿತವುಳ್ಳವರು ಸೈನಿಕರಾಗುತ್ತಾರೆ. ಅರ್ಪಣಾ ಮನೋಭಾವ ಇರುವವರು ಶಿಕ್ಷಕರಾಗುತ್ತಾರೆ. ಕೆಲವು ವಿದ್ಯಾರ್ಥಿಗಳು ‘ತಮ್ಮ ಗುರುಗಳನ್ನು ಅನುಕರಿಸಿ ಶಿಕ್ಷಕರಾಗಬೇಕೆಂದು’ ಹೊರಡುತ್ತಾರೆ . ಕೆಲವರು ಸ್ವ- ಉದ್ಯೋಗದ ದಾರಿ ಹಿಡಿದು ಬದುಕು ಕಟ್ಟಿಕೊಳ್ಳುತ್ತಾರೆ. ಎಷ್ಟೋ ದಿನಗಳ ನಂತರ, ಎದುರು ಸಿಕ್ಕಾಗಲೋ, ಪೋನ್ ಕರೆ ಮಾಡಿದಾಗಲೋ, ನೆನಪುಗಳಿಗೆ ಮತ್ತಷ್ಟು ಹಸಿರು ಬಣ್ಣ ಬಳಿಯುತ್ತಾರೆ. […]