Facebook

Archive for 2019

ಪರೀಕ್ಷೆಯಲ್ಲಿ ಪಾಸಾದವರೊಂದಿಗೆ ಫೇಲಾದವರೂ ಉತ್ತಮ ಸಾಧಕರು…: ವೀರಣ್ಣ ಮಂಠಾಳಕರ್, ಬಸವಕಲ್ಯಾಣ

ಪರೀಕ್ಷೆಯ ಫಲಿತಾಂಶ ಬಂದ ತಕ್ಷಣ ಅದೇಷ್ಟೋ ವಿದ್ಯಾರ್ಥಿಗಳು ಮಾರ್ಕ್ಸ್ ಕಡಿಮೆ ಬಂತು/ ಫೇಲಾದೆ ಎಂಬ ಕಾರಣಕ್ಕೆ ಮಾನಸಿಕ ಸ್ಥೈರ್ಯವನ್ನು ಕಳೆದುಕೊಳ್ಳದೇ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು. ಪಾಸಾದವರು, ರ್ಯಾಂಕ್ ಪಡೆದವರಷ್ಟೇ ಪ್ರತಿಭಾವಂತರಲ್ಲ. ನೆನಪಿರಲಿ ಫೇಲಾದವರೂ ಜೀವನದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ನೆನಪಿಸಿಕೊಂಡು, ಮುಂದಿನ ಗುರಿ-ಛಲದೊಂದಿಗೆ ಮುನ್ನುಗ್ಗಬೇಕು. ಜೀವನ ಮತ್ತು ಸಾಧನೆಗೆ ಶಿಕ್ಷಣವೊಂದೇ ಮುಖ್ಯವಲ್ಲ. ಕನಿಷ್ಠ ಓದು ಬರಹ ಕಲಿತವರೆಷ್ಟೋ ಶೈಕ್ಷಣಿಕ ವಿದ್ಯಾಭ್ಯಾಸದಲ್ಲಿ ಉತ್ತಮ ಬರಹಗಾರರಾಗಿ ರಾಜ್ಯ/ರಾಷ್ಟ್ರ ಮಟ್ಟದಲ್ಲಿ ಹೆಸರಾಗಿದ್ದಾರೆ. ಸಾಮಾಜಿಕ ಚಿಂತಕರಾಗಿ, ಪತ್ರಕರ್ತರಾಗಿ, ಪತ್ರಿಕಾ ಸಂಪಾದಕರಾಗಿ, ಹೋರಾಟಗಾರರಾಗಿ ಒಳ್ಳೆಯ […]

ಶಿಶು ಗೀತೆ: ದೇವರಾಜ್ ನಿಸರ್ಗತನಯ, ನಾಗರಾಜನಾಯಕ ಡಿ.ಡೊಳ್ಳಿನ

ರಜೆಯ ಮಜ… ಬೇಸಿಗೆ ರಜೆಯಲು ಪಾಠವಂತೆ ಯಾರಿಗೆ ಬೇಕಮ್ಮಾ ? ಅಜ್ಜಿಯ ಮನೆಯಲಿ ಆಡಿ ನಲಿವೆ ಊರಿಗೆ ಕಳಿಸಮ್ಮಾ..!! ಹತ್ತು ತಿಂಗಳು ಶಾಲೆಯ ಕಾಟ ಸಾಲದು ಏನಮ್ಮಾ ? ಎರಡು ತಿಂಗಳು ನಮ್ಮಯ ಆಟ ಆಡಲು ಬಿಡಿರಮ್ಮಾ..!! ಗೆಳೆಯರ ಜೊತೆಗೆ ಜೋಕಾಲಿಯಾಟ ಆಡುವೆ ಕಾಣಮ್ಮಾ ! ಹೊಂಗೆಯ ನೆರಳಲಿ ದುಂಬಿಯ ನಾನು ನೋಡಿ ನಲಿವೆನಮ್ಮಾ..!! ದನಕರುಗಳಾ ಜೊತೆ ಕಾಡು ಮೇಡನು ಅಲೆದು ಬರುವೆನಮ್ಮಾ ! ಹಳ್ಳಿಯ ಸೊಭಗ ಪ್ರಕೃತಿ ಸವಿಯ ಸವಿದು ಬರುವೆನಮ್ಮಾ..!! ಅಜ್ಜಿಯ ಜೊತೆಗೆ ಪ್ಯಾಟೆಯ […]

ಸಾಂಸ್ಕೃತಿಕ ವೀರ ಮೈಲಾರಲಿಂಗ ಪುಸ್ತಕ ವಿಮರ್ಶೆ: ಪ.ನಾ.ಹಳ್ಳಿ.ಹರೀಶ್ ಕುಮಾರ್

ಪುಸ್ತಕ ವಿಮರ್ಶೆ ಪುಸ್ತಕದ ಶೀರ್ಷಿಕೆ;- ಸಾಂಸ್ಕೃತಿಕ ವೀರ ಮೈಲಾರಲಿಂಗ ಲೇಖಕರು:- ಡಾ.ಚಿಕ್ಕಣ್ಣ ಯಣ್ಣೆಕಟ್ಟೆ. ಪ್ರಕಾಶನ:- ಗಡಿನಾಡ ಜಾನಪದ ಸಂಪರ್ಕಾಧ್ಯಯನ ಕೇಂದ್ರ ಪ್ರತಿಷ್ಠಾನ. ಕಾಳಿದಾಸ ನಗರ. ಸಿರಾ. ತುಮಕೂರು ಜಿಲ್ಲೆ. ಬೆಲೆ:- 150ರೂ ಪ್ರಥಮ ಮುದ್ರಣ: 2019 ಪುಟಗಳು: 214 ಡಾ.ಚಿಕ್ಕಣ್ಣ ಯಣ್ಣೆಕಟ್ಟೆ ವಿರಚಿತ ಸಾಂಸ್ಕೃತಿಕ ವೀರ ಮೈಲಾರಲಿಂಗ ಕೃತಿಯು ಕ್ಷೇತ್ರ ಕಾರ್ಯಾಧಾರಿತ ಅಧ್ಯಯನದಿಂದ ಸಂಗ್ರಹಿಸಿದ ಪ್ರತ್ಯಕ್ಷ ಸಾಕ್ಷಿಯಾಧಾರಿತ ಮಾಹಿತಿಗಳನ್ನೊಳಗೊಂಡ ರಚನೆಯಾಗಿದ್ದು ನಾಡಿನ ಸಾಂಸ್ಕೃತಿಕ ಹಾಗೂ ಜನಪದ ದೈವ ಮೈಲಾರಲಿಂಗಪ್ಪನ ಐತಿಹ್ಯ ಕುರಿತಾದ ಸಂಪೂರ್ಣ ಚಿತ್ರಣವನ್ನು ಓದುಗರಿಗೆ ಕಟ್ಟಿಕೊಡುವಲ್ಲಿ […]