Facebook

Archive for 2019

ಜಾಣಸುದ್ದಿ 21: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ […]

ಮೂಕ ಕಹಳೆ: ಗಿರಿಜಾ ಜ್ಞಾನಸುಂದರ್

ಕೈಯಲ್ಲಿ ಮಿಠಾಯಿ ಡಬ್ಬಿ ಹಿಡಿದು ಅಮ್ಮನ ಬಳಿ ಓಡಿ ಬಂದಳು ಆರತಿ, “ಅಮ್ಮ, ನಾನು     ಎಸ್ಎಸ್ಎಲ್ಸೀ ಪಾಸ್ ಆದೆ, ಫಸ್ಟ್ ಕ್ಲಾಸ್” ಎಂದು ಹೇಳುತ್ತಾ ಅಮ್ಮನ ಬಾಯಿಗೆ ಸಿಹಿಯನ್ನು ತುರುಕಿದ್ದಳು. ಅಮ್ಮನ ಖುಷಿಯನ್ನು ಅಮ್ಮ ತನ್ನ ಮುಗುಳ್ನಗೆಯಲ್ಲಿ ತಿಳಿಸಿದಳು. ಮನೆಯಲ್ಲಿ ಸಂಭ್ರಮ. ಒಂದು ವಾರವಾಗಿತ್ತು. ಯಾವ ಕಾಲೇಜು ಸೇರುವುದು, ಯಾವ ವಿಷಯ ಓದುವುದು ಎಂದು ಚರ್ಚೆ ನಡೆಯುತ್ತಿತ್ತು. ಆರತಿಯ ಅಜ್ಜಿ ಮನೆಗೆ ಬಂದರು. ಅಜ್ಜಿಗೂ ಸಿಹಿ ಕೊಟ್ಟದಾಯಿತು, ಸಂತೋಷ ಹಂಚಿದ್ದಾಯಿತು. ಆದರೂ ಅಜ್ಜಿ ಯಾಕೋ ಸಂತೋಷದಲ್ಲಿದ್ದಂತಿರಲಿಲ್ಲ. ಆರತಿಯ […]

ಗೆಲ್ಲುವ, ಗೆಲ್ಲಿಸುವ ದಾರಿಯ ಅನ್ವೇಷಣೆ: ರಘುನಂದನ ಕೆ. ಹೆಗಡೆ

ನಮ್ಮೂರ ಯಂಕ್ಟ ಅದ್ಭುತ ಮಾತುಗಾರ, ಏನನ್ನೇ ಕೊಟ್ಟರೂ ಮಾರಾಟ ಮಾಡಬಲ್ಲ. ಎಲ್ಲಿ ಬೇಕಾದರೂ ಬದುಕಬಲ್ಲ. ಯಾವ ವಿಷಯದ ಬಗ್ಗೆ ಬೇಕಾದರೂ ಮಾತಾಡಬಲ್ಲ. ರಿಸೆಶ್ಶನ್, ಷೇರು ಮಾರುಕಟ್ಟೆಯಿಂದ ರಸಗೊಬ್ಬರ, ಮಣ್ಣಿನ ಫಲವತ್ತತೆಯವರೆಗೆ ಎಲ್ಲ ವಿಷಯಗಳೂ ಅವನಿಗೆ ಗೊತ್ತು. ಜನರನ್ನ ಸೆಳೆಯುವುದು, ಸಂವಹನ ಮಾಡುವುದು, ಯಾವುದೇ ವಿಷಯದ ಬಗ್ಗೆ ಮಾತಾಡುವುದು ಇದರಲ್ಲಿ ಅವನು ತುಂಬಾ ನಿಪುಣ. ಆದರೇನು, ಕಳೆದ 20 ವರ್ಷಗಳಿಂದಲೂ ಅವನು ಸೇಲ್ಸ್‍ಮೆನ್ ಆಗಿಯೇ ದುಡಿಯುತ್ತಿದ್ದಾನೆ. ನಮ್ಮೂರ ಬಡ ಮೇಷ್ಟ್ರ ಮಗ ತುಂಬಾ ಬುದ್ದಿವಂತ. ನಾವೆಲ್ಲ ಕಂಪ್ಯೂಟರ್ ಎಂದರೇನು […]

ಪದಸಾಲುಗಳ ನಡುವೆ: ಅನುರಾಧ ಪಿ. ಸಾಮಗ

1. ಉಕ್ಕಿ ಹರಿಯುತ್ತಿದ್ದ ಉತ್ಸಾಹ ಅವರ ಬೆನ್ನಾರೆ ಹೊರಟೇಹೋಯಿತೇನೋ ಅನ್ನುವ ಹಾಗೆ… ಅವರ ನೆನಕೆಯ ನೂಲಿನಲಿ ಕಥೆಯೆಷ್ಟೋ ನೇಯ್ದುಬಿಡುವವರು ನಾವು ದೂರದಲಿದ್ದುಕೊಂಡೇ ಅವರೆಂದರೆ, ಎದೆಯೊಳಗಿನ ಪ್ರಾಣಕೆದುರಾಗುವವರು ಬಳಿಯಿದ್ದುಬಿಡು ಸದಾ ಎನ್ನಲೇಕೆ; ಜೊತೆಗಿರುವುದು ಸಾಲದೇನು? ಪ್ರೀತಿಯೆದುರು ಅದರ ಸಂಕಟದ್ದೇನು ನಡೆದೀತು; ಬೆರೆತ ಮನಸುಗಳೆದುರು ಈ ದೂರವೇನು ಮಾಡೀತು? ಹಾರಲು ಕಲಿಯುವ ಹಕ್ಕಿಯದು ನೆಲದ ನೆಲೆಯ ತೊರೆಯಲೇಬೇಕು ಚೂರುಚೂರೇ ತಮ್ಮೆದೆಯನಿಬ್ಬರೂ ಚೂರುಚೂರಾಗಿಸಲೇಬೇಕು ಮನಸಿನಪ್ಪಣೆಯಿದ್ದಮೇಲಿನ್ನು ಒಪ್ಪುವ ಯಾ ಒಪ್ಪದ ಲೋಕವೇನು ಮಾಡೀತು? ಪ್ರೀತಿಯೆದುರು ಅದರ ಸಂಕಟದ್ದೇನು ನಡೆದೀತು; ಬೆರೆತ ಮನಸುಗಳೆದುರು ಈ […]

ಆತ್ಮ ವಿಶ್ವಾಸ ಯಶಸ್ಸಿನ ಮೊದಲ ಮೆಟ್ಟಿಲು: ಎಂ.ಎನ್.ಸುಂದರ ರಾಜ್

ಹೆನ್ರಿ ಡೇವಿಡ್ ಥೋರೋ ಹೇಳಿದಂತೆ, “ಮನುಷ್ಯರು ಯಶಸ್ಸುಗಳಿಸಲೆಂದೇ ಜನಿಸಿರುವರು, ಅಪಜಯ ಹೊಂದುವುದಕ್ಕಲ್ಲ” ಸಂತೋಷದಂತೆ ಯಶಸ್ಸು ಸಹ ಮಾನವನ ಮೂಲಭೂತ ಗುರಿಯಾಗಿದೆ. ‘ನಾವು ಹೆಚ್ಚು ಗುಲಾಬಿಗಳನ್ನು ಪಡೆಯಬೇಕಾದರೆ ಹೆಚ್ಚು ಗಿಡಗಳನ್ನು ನೆಡಬೇಕು’ ಎಂದು ಇಲಿಯೆಟ್ ಒಂದೆಡೆ ಹೇಳಿದ್ದಾನೆ. ನಾವು ಜೀವನದಲ್ಲಿ ಏನೇ ಸಾಧಿಸಲು ನಮಗೆ ಅತ್ಯಗತ್ಯವಾದದ್ದು ಹಣವಲ್ಲ, ಯಾರ ಆಶ್ರಯವೂ ಅಲ್ಲ, ಇನ್ನೊಬ್ಬರ ಉತ್ತೇಜನವೂ ಇಲ್ಲ. ಬೇಕಾಗಿರುವುದು ಆತ್ಮವಿಶ್ವಾಸ. ಇದು ಇಲ್ಲದ ವ್ಯಕ್ತಿ ಎಷ್ಟೇ ಉತ್ತೇಜನ ನೀಡಿದರೂ ಯಶಸ್ಸಿನ ದಾರಿಯಲ್ಲಿ ನಡೆಯಲಾರ. ಆತ್ಮ ವಿಶ್ವಾಸವೆಂದರೇನು ಎನ್ನುವ ಪ್ರಶ್ನೆಗೆ ಉತ್ತರ […]

ದಿಟ್ಟ ಹೆಣ್ಣು..: ದೇವರಾಜ್ ನಿಸರ್ಗತನಯ

ಆಗ ತಾನೇ ಹೈಸ್ಕೂಲು ಮೆಟ್ಟಿಲೇರಿದ್ದ ನಿರೋಷಾಗೆ ತನ್ನ ದೇಹದಲ್ಲಾಗುತ್ತಿದ್ದ ಬದಲಾವಣೆಗಳನ್ನು ಕಂಡು ತನ್ನೊಳಗೇ ತಾನು ಹೆಮ್ಮೆಪಡಲಾರಂಭಿಸಿದಳು. ಇತರ ಹೆಣ್ಮಕ್ಕಳಿಗಿಂತ ಭಿನ್ನವಾಗಿ ಆಲೋಚಿಸತೊಡಗಿದಳು. ಮುಗ್ದತೆ ತುಂಟತನ ಮಾಯವಾಗಿ ಗಂಭೀರ ಸ್ವಭಾವ ದಿನೇ ದಿನೇ ಹೆಚ್ಚಾಗತೊಡಗಿತು. ಅವಳ ಬದಲಾವಣೆಯನ್ನು ಗಮನಿಸಿದ ಅವಳ ತಾಯಿ ಸುಜಾತಳಿಗೂ ತನ್ನ ಮಗಳು ಬೆಳೆದು ದೊಡ್ಡವಳಾಗುತ್ತಿದ್ದಾಳೆ ಎಂಬ ಹೆಮ್ಮೆ ಒಂದು ಕಡೆಯಾದರೆ ಈಗಿನ ಸಮಾಜದಲ್ಲಿ ಬೆಳೆದ ಹೆಣ್ಣುಮಕ್ಕಳು ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆ ಎನ್ನುವ ಆತಂಕವೂ ಅವಳನ್ನು ಕಾಡಿತ್ತು. ಚಿಕ್ಕವಯಸ್ಸಿಗೆ ಗಂಡನನ್ನು ಕಳೆದುಕೊಂಡು ಬದುಕುತಿದ್ದ ಒಂಟಿ ಜೀವ […]

ಜಗದೊಳು ಸರ್ವವೂ ಸುಖಮಯವು: ಜಯಶ್ರೀ.ಜೆ. ಅಬ್ಬಿಗೇರಿ ಬೆಳಗಾವಿ

ಹಾಲಿನಂಥ ಬೆಳದಿಂಗಳು ಚೆಲ್ಲಿ ಹಿತ ನೀಡುವ ಚಂದಿರ ಕಾರ್ಮೋಡಗಳ ನಡುವೆ ಸಿಕ್ಕು ಮರೆಯಾಗುತ್ತಾನೆ. ಕೆಲ ಕಾಲದ ನಂತರ ಬೆಳ್ಳಿ ಮೋಡಗಳ ನಡುವೆ ಮತ್ತೆ ಬೆಳ್ಳನೆಯ ನಗು ಬೀರುತ್ತಾನೆ. ಅಮವಾಸ್ಯೆಯ ದಿನ ಸಂಪೂರ್ಣ ಮಾಯವಾದ ಚಂದಿರ ಹುಣ್ಣಿಮೆ ದಿನ ಬಾಗಿಲು ಮುಚ್ಚಿ ಮಲಗಿದ್ದರೂ ಬೆಳಕಿಂಡಿಯಿಂದ ನಾವಿದ್ದಲ್ಲಿಗೆ ಬಂದು ತಂಪು ನೀಡುತ್ತಾನೆ. ಬದುಕಿನಲ್ಲಿ ಸುಖ ದುಃಖಗಳೂ ಹೀಗೇ ಒಂದರ ಹಿಂದೆ ಒಂದು ಬರುತ್ತಲೇ ಇರುತ್ತವೆ. ಸುಖ ದುಃಖಗಳು ಸೈಕಲ್ ಗಾಲಿಯ ಚಕ್ರದ ಕಡ್ಡಿಗಳಿದ್ದಂತೆ ಒಮ್ಮೆ ಮೇಲಿದ್ದದ್ದು ಇನ್ನೊಮ್ಮೆ ಕೆಳಗೆ ಬರಲೇಬೇಕು. […]

ಹೃದಯವನ್ನು ಸೀಟಿಯಂತೆ ಹೊಡೆಸುವ  ರೈಲಿನ ವೇಟಿಂಗ್ ಲಿಸ್ಟ್!: ಭಾರ್ಗವ ಎಚ್ ಕೆ

ಸುಡುಸುಡು ಬಿಸಿಲಿನಲ್ಲಿ ಬಿಳಿ ಟೊಪ್ಪಿಗೆಯನ್ನು ಹಾಕಿಕೊಂಡು ರಫೀಕ್ ತಾತನು ಎಳೆನೀರನ್ನು ಮಾರುತ್ತಿದ್ದನು. ಹೊಂದಿಸಿಟ್ಟ ಎಳೆನೀರನ್ನು ರಾಯಲ್ ಫೀಲ್ಡ್ ಬೈಕಿನಲ್ಲಿ ಬಂದ ಶೋಕಿಲಾಲ್ ರಾಕಿಭಾಯ್ ತನಗಿಷ್ಟವಾದುದನ್ನು ಕಿತ್ತುಕೊಂಡು ರಫೀಕ್ ತಾತನ ಕೈಯಲ್ಲಿ ಕೊಟ್ಟನು. ತಾತನ ಬಿಳಿ ಟೊಪ್ಪಿಗೆಯು  ನೀರು ದೋಸೆಯಂತೆ ನಾನ್ ಸ್ಟಿಕ್ ತಲೆಯ ಮೇಲೆ ಹೊಯ್ದುಬಿಟ್ಟಿತ್ತು. ಬೆವರ ಹನಿಯಲ್ಲೂ ರಾಕಿಭಾಯ್ ಮೇಲೆ ಸಿಟ್ಟು ಬರಲಿಲ್ಲ. ಕೈಯಲ್ಲಿರುವ ಮಚ್ಚು ಎಳೆನೀರನ್ನು ಕೊಚ್ಚಿತೇ ವಿನಹ ಬೈಕ್ ಸವಾರನನ್ನಲ್ಲ. ಆ ತಾತನು ಬಿಸಿಯಾಗಿದ್ದ ಎಳೆನೀರನ್ನು ಕುಡಿಯುತ್ತಿದ್ದ ರಾಕಿಭಾಯ್ ಗೆ ಒಂದು ನಿಂಬೆಹಣ್ಣನ್ನು […]

ರಾಜನ ಕಿವಿ ಕತ್ತೆ ಕಿವಿ – ಸಂಕೇತಳ ಸ್ವಾರಸ್ಯಕರ ಕತೆ : ಕೆ ಟಿ ಸೋಮಶೇಖರ ಹೊಳಲ್ಕೆರೆ.

ಕತೆಗಳೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಎಲ್ಲರಿಗೂ ಇಷ್ಟವೆ! ಅದರಲ್ಲೂ ಸ್ವಾರಸ್ಯಕರವಾದ ಕತೆಗಳು, ವಿಕ್ರಮ್ ಭೇತಾಳದಂತ ಕತೆಗಳು, ಅಲೌಕಿಕ ಕತೆಗಳು, ಹ್ಯಾರಿ ಪಾಟರ್ ನಂತಹ ಕತೆಗಳು, ಆಲಿಬಾಬಾ ಅರವತ್ತು ಕಳ್ಳರು, ಪಂಚತಂತ್ರದ ಕತೆಗಳು ತುಂಬಾ ಇಷ್ಟ. ಮಕ್ಕಳಿಗೇ ಏಕೆ ದೊಡ್ಡವರೂ ಟಾಮ್ ಅಂಡ್ ಜರ್ರಿ, ಹ್ಯಾರಿಪಾಟರ್, ಚೋಟಾ ಭೀಮ್, ಗೇಮುಗಳಲ್ಲಿ ಮುಳುಗಿರುವುದು ಅವರೂ ಇಷ್ಟಪಡುವರೆಂಬುದ ಸಾರುತ್ತವೆ! ನಾವು ಚಿಕ್ಕವರಿದ್ದಾಗ ದಿನಾ ರಾತ್ರಿಯಾಗುವುದನ್ನೇ ಕಾಯುತ್ತಿದ್ದೆವು. ಇಂದಿನಂತೆ ಮಕ್ಕಳನ್ನು ಹಿಂದೆ ಓದು ಓದು ಹೋಂ ವರ್ಕ್ ಮಾಡು ಮುಗಿಸು ಅಂತ […]