Facebook

Archive for 2019

ಬೆಳೆಸುವ ಸಿರಿ ಮೊಳಕೆಯಲ್ಲೇ?: ಕೊಟ್ರೇಶ್ ಕೊಟ್ಟೂರು

ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುವ ಗಾದೆಯನ್ನು ನಾವು ಕೇಳಿದ್ದೇವೆ ಆದರೆ ಇದು ಬೆಳೆಯುವ ಸಿರಿ ಮೊಳಕೆಯಲ್ಲೇ ಅಲ್ಲ, ಬದಲಾಗಿ ಬೆಳೆಸುವ ಸಿರಿ ಮೊಳಕೆಯಲ್ಲೇ ಎನ್ನುವುದು. ಯಾವುದೇ ಒಂದು ಮಗು ಬೆಳೆಯುವುದು ಬಿಡುವುದು ಅವರವರ ಇಚ್ಛೆ. ಆದರೆ ಈ ಮಗುವನ್ನು ಬೆಳೆಸುವುದರಲ್ಲಿ ಆ ಮಗುವಿನ ತಾಯಿ ಹೇಗೆ ಬೆಳೆಸಿ ಪೋಷಿಸುತ್ತಿರುವಳು ಎನ್ನುವುದು ನನಗಂತೂ ಆಶ್ಚರ್ಯ ಮತ್ತು ಅಗಾಧ. ಆ ಮಗುವಿಗೆ ಬದುಕುವ ಛಲವನ್ನು ಹೇಗೆಲ್ಲಾ ತುಂಬಬಹುದು ಎಂಬುದಕ್ಕೆ ಜೀವಂತ ನಿದರ್ಶನ ಅಮೃತಳ ಆ ನನ್ನ ತಾಯಿ. ನಾನೀಗ ಹೇಳುತ್ತಿರುವುದು […]

ಸಂಸ್ಕಾರ ಜ್ಞಾನವೇ ಸಂಸಾರ ಪ್ರಾಣ: ರವಿ ರಾ ಕಂಗಳ

ಯಾವುದೇ ದೇಶದ ಅಭಿವೃದ್ಧಿಗೆ ಪೂರಕವಾದ ಅಂಶಗಳೆಂದರೆ ಒಂದು ನೈಸರ್ಗಿಕ ಸಂಪನ್ಮೂಲ ಇನ್ನೊಂದು ಮಾನವ ಸಂಪನ್ಮೂಲ. ಯಾವ ದೇಶದಲ್ಲಿ ವಿಪುಲವಾಗಿ ನೈಸರ್ಗಿಕ ಸಂಪನ್ಮೂಲವಿದೆಯೋ ಆ ದೇಶವು ಅಭಿವೃದ್ಧಿಶೀಲ ದೇಶವೆಂದು ಹೇಳಲು ಸಾಧ್ಯವಿಲ್ಲ, ಆ ನೈಸರ್ಗಿಕ ಸಂಪನ್ಮೂಲವನ್ನು ಅಲ್ಲಿನ ಮಾನವ ಸಂಪನ್ಮೂಲವು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾರೆಯೋ ಎಂಬುದರ ಮೇಲೆ ಅದು ನಿರ್ಧಾರವಾಗುತ್ತದೆ. ಹಾಗಾಗಿ ನೈಸರ್ಗಿಕ ಸಂಪನ್ಮೂಲವನ್ನು ಮಿತವ್ಯಯವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮಾನವ ಸಂಪನ್ಮೂಲವು ಈ ದೇಶಕ್ಕೆ ಬೇಕಾಗಿದೆ. ಅದು ಅಲ್ಲದೆ ಇಂದು ನೈತಿಕ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ, ಮಾನವೀಯತೆಯ […]

“ಉತ್ತಮ ಸಮಾಜಕ್ಕೆ ಮಿಡಿಯುವ ಭಾವ ಬುಗುರಿ”: ಯಲ್ಲಪ್ಪ ಎಮ್ ಮರ್ಚೇಡ್

ಪುಸ್ತಕ: ಭಾವ ಬುಗುರಿ ಕೃತಿ ಕತೃ: ಶ್ರೀದೇವಿ ಹೂಗಾರ, ಬೀದರ ಬೆಲೆ:100 ರೂ ಕನ್ನಡ ಕಾವ್ಯ ಪರಂಪರೆಯಲ್ಲಿ ಹಲವಾರು ಕವಿ ಗಣಗಳು ಬೆಳೆದು ಬೆಳೆಸುತ್ತಾ ಬೆಳೆಯುತ್ತಿರುವುದನ್ನು ಕಾಣಬಹುದಾಗಿದೆ ಕನ್ನಡ ಸಾಹಿತ್ಯ ಸಾಗರ ತುಂಬಾ ವಿಶಾಲವಾದದ್ದು ಪ್ರಾಚೀನ ಕಾಲದ ದಾಸ ಶರಣ ಸಾಹಿತ್ಯ ಆಧುನಿಕ ಕನ್ನಡ ಕಾವ್ಯ ಬಂಡಾಯ ದಲಿತ ಸಾಹಿತ್ಯ ಇಂದು ಹೆಮ್ಮರವಾಗಿ ಬೆಳೆದಿದೆ. ಸಾಹಿತ್ಯ ಸಮ್ ಪ್ರೀತಿಯು ಇಂದು ಯುವಜನತೆಯ ಮನಸೆಳೆದು ಕಾವ್ಯ ಜಗತ್ತಿನ ಕಡೆಗೆ ಕೈಬೀಸಿ ಕರೆಯುತ್ತಿದೆ ಆಧುನಿಕ ಕಾಲದ ನವ ನವ ತಂತ್ರಜ್ಞಾನದ […]

ಪೂರ್ವಜರ ಪರಿಸರ ಪ್ರೇಮ: ಕೆ ಟಿ ಸೋಮಶೇಖರ ಹೊಳಲ್ಕೆರೆ.

ನಾಗಾಭರಣನಾದ ನಟರಾಜ! ನಾಗನನ್ನು ಸೊಂಟದ ಪಟ್ಟಿ ಮಾಡಿಕೊಂಡಿರುವ ಲಂಬೋದರ! ಶೇಷಶಯನನಾದ ವಿಷ್ಣು! ಕಾಡಿನ ರಾಜ ಸಿಂಹವಾಹನೆಯಾದ ಆದಿಶಕ್ತಿ! ನಂದಿವಾಹನನಾದ ನಂದೀಶ! ಮಹಿಷ ವಾಹನನಾದ ಯಮಧರ್ಮ! ಮರದ ಕೆಳಗೆ ಕುಳಿತು ಪಶುಗಳಿಂದ ಸುತ್ತುವರಿಯಲ್ಪಟ್ಟು ಪಶು ಪಕ್ಷಿ ಪರಿಸರ ಪ್ರೇಮಿ ಪಶುಪತಿ! ಕೊಳಲ ನುಡಿಸುತ ಗೋವುಗಳ ಮಧ್ಯ ನಿಂತ ಗೋಪಾಲ! ಜ್ಞಾನದ ಸಂಕೇತವಾದ ಗಜ ತಲೆಯ ಗಜಾನನ! ನಾಗಯಜ್ಞೋಪವೀತನಾದ ವಿಘ್ನೇಶ್ವರ! ಕುರಿ ತಲೆಯ ದಕ್ಷಬ್ರಹ್ಮ! ಹದಿನಾರು ವಿಷ್ಣುವಿನ ಅವತಾರಗಳಲ್ಲಿ ಒಂದಾದ ಹಂದಿಯ ತಲೆಯುಳ್ಳದ್ದಾದ ವರಹಾವತಾರ! ಪಕ್ಷಿರಾಜ ಗರುಡವಾಹನನಾದ ವಿಷ್ಣು! ಸುಂದರ […]

ಮನೆ ಖಾಲಿಯಿದೆ: ವೇದಾವತಿ ಹೆಚ್. ಎಸ್.

ಮಧ್ಯಾಹ್ನದ ಬಿರಿ ಬಿಸಿಲಿನಲ್ಲಿ ಸುಮ ಮೂರು ವರ್ಷದ ಮಗುವನ್ನು ಜೊತೆಯಲ್ಲಿ ಕರೆದುಕೊಂಡು ನಮ್ಮ ಮನೆಗೆ ಬಂದಿದ್ದಳು.ಅವಳ ಮುಖ ಬಿಸಿಲಿನ ತಾಪಕ್ಕೆ ಕೆಂಪು ಕೆಂಪಾಗಿ ಬಾಡಿ ಹೋಗಿತ್ತು.ಅವಳನ್ನು ಮನೆಯ ಒಳಗೆ ಬರ ಮಾಡಿಕೊಂಡು ಕುಳಿತು ಕೊಳ್ಳಲು ಹೇಳಿ ಪ್ಯಾನನ್ನು ಹಾಕಿ ನಿಂಬೆ ಹಣ್ಣಿನ ಜ್ಯೂಸ್ ಮಾಡಲು ಅಡುಗೆ ಮನೆಯ ಕಡೆಗೆ ಹೋದೆ. ಜ್ಯೂಸನ್ನು ಮೆಲ್ಲನೆ ಹೀರುತ್ತಾ ತನ್ನ ಸಂಕಟ ಹೇಳಲು ಪ್ರಾರಂಭ ಮಾಡಿದಳು. “ಈ ಬೆಂಗಳೂರು ಎಂಬ ಮಹಾನಗರದಲ್ಲಿ ಒಂದು ನೆಟ್ಟಗೆ ಮನೆಗಳು ಬಾಡಿಗೆಗೆ ಸಿಗುತ್ತಿಲ್ಲ. ಒಂದು ಸರಿಯಾಗಿದ್ದರೆ […]

ಪ್ರಭು ಗುಡಿಮನಿ & ರಘು ಬಿ ಎಂ ಫೋಟೋಗ್ರಾಫಿ

ಪ್ರಭು ಗುಡಿಮನಿ ಫೋಟೊಗ್ರಾಫಿ             ರಘು ಬಿ ಎಂ ಫೋಟೊಗ್ರಾಫಿ        

ಜಾಣಸುದ್ದಿ 20: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ […]

ಹೆಗ್ಗಡಹಳ್ಳಿ ಮಕ್ಕಳಿಂದ “ನಿಮ್ಮ ಕಸ ನಿಮಗೆ” ಅಭಿಯಾನ.

‘ನಾಳೆಗಳು ನಮ್ಮದು” ಎಂಬ ಧ್ಯೇಯದೊಂದಿಗೆ ನಂಜನಗೂಡು ತಾಲೂಕಿನ ಹೆಗ್ಗಡಹಳ್ಳಿಯ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಕಳೆದ ವಾರ ನಡೆದ ಬಣ್ಣದಮೇಳದಲ್ಲಿ ಮಕ್ಕಳು ಅಪರೂಪದ ಅಭಿಯಾನವೊಂದನ್ನು ಆರಂಭಿಸಿದರು. ಬೇರೆ ಬೇರೆ ರುಚಿಯ ಅತ್ಯಾಕರ್ಷಕ ಮಕ್ಕಳ ತಿಂಡಿಗಳನ್ನು ದೇಶದಲ್ಲಿ ಹಲವಾರು ಕಂಪೆನಿಗಳು ಉತ್ಪಾದಿಸುತ್ತವೆ. ಸಣ್ಣ ಸಣ್ಣ ಹಳ್ಳಿಗಳಲ್ಲಿಯೂ ಇಂತಹ ಉತ್ಪನ್ನಗಳು ಸಿಗುತ್ತವೆ. ಆ ಉತ್ಪನ್ನಗಳನ್ನು ಬಣ್ಣ ಬಣ್ಣದ ಪ್ಲಾಸ್ಟಿಕ್ ಕವರುಗಳಲ್ಲಿ ತುಂಬಿ ಮಕ್ಕಳನ್ನು ಆಕರ್ಷಿಸಲಾಗುತ್ತದೆ. ಹೆಗ್ಗಡಹಳ್ಳಿಯ ಮಕ್ಕಳು ಬಣ್ಣದಮೇಳದಲ್ಲಿ ಸೇರಿ ಈ ಕವರು ನಮ್ಮೂರಿಗೆ ಕಸವಾಗಿ ಹಾಗೆಯೇ ಉಳಿಯುತ್ತದೆ ಎಂಬುವುದನ್ನು […]