Facebook

Archive for 2018

ಯುಗಾದಿ ವಿಶೇಷಾಂಕಕ್ಕೆ ಲೇಖನ ಆಹ್ವಾನ

ಪ್ರಿಯ ಪಂಜುವಿನ ಓದುಗರೇ ಹಾಗು ಬರಹಗಾರರೇ, ನಿಮ್ಮೆಲ್ಲರ ಅಭಿಮಾನದಿಂದ ಪಂಜು ಕಳೆದ ತಿಂಗಳು ಜನವರಿ 21 ರಂದು ಐದು ವರ್ಷ ತುಂಬಿ ಆರನೇ ವರ್ಷಕ್ಕೆ ಕಾಲಿಟ್ಟಿದೆ. ಹತ್ತಾರು ವೆಬ್ ತಾಣಗಳ ನಡುವೆಯೂ ತನ್ನದೇ ಆದ ಓದುಗ ಬಳಗವನ್ನು ಹೊಂದಿರುವ ಪಂಜು, ತಿಂಗಳಿಗೆ ಕಡಿಮೆ ಎಂದರೂ ಎರಡೂವರೆ ಲಕ್ಷ ಹಿಟ್ಸ್ ಜೊತೆಗೆ ಸುಮಾರು ಏಳೂವರೆ ಸಾವಿರ ಓದುಗರು ಪಂಜುಗೆ ಭೇಟಿ ನೀಡುತ್ತಾರೆ ಎಂಬುದು 2017ರ ಹೈಲೈಟ್ಸ್.. ಪಂಜು ಆಗಾಗ ವಿಶೇಷ ಸಂಚಿಕೆಗಳನ್ನು ಹೊರ ತರುವುದು ವಾಡಿಕೆ. ಈ ವರ್ಷದ […]

ಪಂಜು ಕಾವ್ಯಧಾರೆ

ಪಯಣ  ನಿರರ್ಥಕ ಹಾದಿಯಲ್ಲಿ ಅರ್ಥಹೀನ ಹಗಳಿರುಳುಗಳ ಸೆಳುವಲ್ಲಿ ಯಾನ ಹೊರಟ ದೋಣಿಯ ಪಯಣಿಗ ತಲುಪಬೇಕೆನ್ನುವ ಗಮ್ಯ ಇಲ್ಲದಂತೆನಿಸಿ ಬಿಟ್ಟ ಗಾಳಿಯ ದಿಕ್ಕಿಗೆ ಹೊಮ್ಮುವ ಅಲೆಗಳ ನಾಟ್ಯದೊಟ್ಟಿಗೆ ಸಾಗುವ ಹುಚ್ಚು ಪಯಣಿಗ ಬದುಕಿನ ನಾವೆ ಕಾಲದ ಶರಧಿಯಲ್ಲಿ ಅಂಡಲೆಯುತಲೇ ಇದೆ ಇಲ್ಲಿ ಸುಳ್ಳುಗಳನ್ನೇ ಸತ್ಯವೆಂದುಕೊಂಡ ಸಹಯಾತ್ರಿಕರ ಹಿಂಡೇ ಇದೆ ಸ್ವತಃ ವಂಚಿಸುತ್ತಾ ಸಾತ್ವಿಕತೆಯ ಭೋದಿಸುವ ತಂಡೋಪ ತಂಡವೇ ಇದೆ ಕಾಲದ ಸಾಗರ ಮಾತ್ರ ತನ್ನೊಡಲೊಳಗೆ ಎಲ್ಲವನ್ನೂ ಹುದುಗಿಸಿಕೊಳ್ಳುತ್ತ ಉಕ್ಕೇರುತ್ತಲೇ ಇದೆ ತಲೆತಲಾಂತರಗಳಿಂದ ಹಲವು ಬಾರಿ ಒಡಲೊಳಗಿನ ಕಿಚ್ಚನ್ನೆಲ್ಲ ಸುನಾಮಿಯಂತೆ […]

ಜೀವ ಜೀವನದ ಭಿನ್ನತೆಯೊಳಗಿನ ಸಂಭ್ರಮ: ಪಿ. ಕೆ. ಜೈನ್ ಚಪ್ಪರಿಕೆ

ಅಂದು ಪ್ರಕೃತಿಯು ತನ್ನ ವಸಂತಕ್ಕೆ ಕಾಲಿಟ್ಟ ಸಮಯ. ಆ ತಾಯಿಯು ತನ್ನೆಲ್ಲ ನೋವುಗಳನ್ನು ಮರೆತು ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಳ್ಳುತ್ತಲ್ಲಿದ್ದಳು. ವಸಂತ ಎಂಬ ಪದವೇ ಹಾಗೆ. ಅವನಿಗೆ ಎಣೆ ಯಾರು? ಯಾರನ್ನಾದರೂ ಬಿಟ್ಟಿಹನೆ? ಸೃಷ್ಟಿಯ ರುವಾರಿಯಾದ ಬ್ರಹ್ಮನನ್ನೇ ಬಿಡದ ಮಾರ…ಪ್ರಕೃತಿಯನ್ನು ಬಿಡಬಲ್ಲನೆ? ಹಾಗೆಯೇ ವಸಂತಕ್ಕೆ ಕಾಲಿಟ್ಟ ಭೂಮಿ ತಾಯಿಯ ಜೊತೆ ಅನೋನ್ಯದಿಂದ ಜೀವಿಸುತ್ತಿದ್ದ ಪ್ರಾಣಿ ಪಕ್ಷಿಗಳು, ಗಿಡ ಮರಗಳಿಗೂ ಅದರ ಅನುಭವ ಆಗಬೇಕಲ್ಲವೇ… ಗಿಡ ಮರಗಳು ಮೈ ಕೊಡಗಿ ಚಿಗುರೊಡೆದು ಹಚ್ಚ ಹಸುರಿನಿಂದ ಕಂಗೊಳಿಸುತ್ತಿದ್ದವು…ಅವುಗಳನ್ನು ಅವಲಂಬಿಸಿದ ಪ್ರಾಣಿ ಪಕ್ಷಿಗಳಲ್ಲೂ […]

e – ಸಂಭಾಷಣೆ !: ಸಂತೋಷ್ ಮೂಲಿಮನಿ

ಇಬ್ಬರೂ ತಮ್ಮ ತಮ್ಮ ಲ್ಯಾಪ್ಟಾಪ್ ಮುಂದೆ ಕುಳಿತಿದ್ದಾರೆ, ಇಬ್ಬರ ತೆರೆಯ ಮೇಲೂ ಫೇಸ್ಬುಕ್ ನ ಪರದೆ ಇಣುಕಿ ಇವರ ಮುಖವನ್ನ ಆವರಿಸಿಕೊಂಡಿದೆ. ಇವನು ತನ್ನ ಫೇಸ್ಬುಕ್ ಪ್ರೋಪೈಲಿನಲ್ಲಿ ಈಗ ತಾನೆ ತನ್ನ ಬ್ಲಾಗ್ ನಲ್ಲಿ ಪ್ರಕಟಿಸಿದ ಲೇಖನದ ಕೊಂಡಿಯನ್ನು ಎಲ್ಲರೊಂದಿಗೆ ಹಂಚುತ್ತಲಿದ್ದ. ಅಪ್ದೇಟ್ ಬಟನ್ ಒತ್ತಿದ ತಕ್ಷಣ, ‘ ಸುಮಿ, ಆಯ್ತು ನೋಡು ‘ ಎಂದು ಸ್ವಲ್ಪ ದೂರದಲ್ಲೆ ಕೂತಿದ್ದ ಹೆಂಡತಿಗೆ ಉಸಿರಿದ್ದ. ಅವಳು ಆಗಲೆ ಮೆಚ್ಚಿದ್ದ ಗಂಡನ ಪೊಸ್ಟ್ ನ್ನ ಲೈಕ್ ಮಾಡಿದಳು. ಹೀಗೆ ಅವನ […]

ಜಾಣಸುದ್ದಿ 8: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ ಇ […]

ಮುರಿದ ಟೊಂಗೆಯ ಚಿಗುರು ಪುಸ್ತಕಾವಲೋಕನ: ಸುರೇಶ ಎಲ್.ರಾಜಮಾನೆ

ಕವನಸಂಕಲನ; “ಮುರಿದ ಟೊಂಗೆಯ ಚಿಗುರು” ಲೇಖಕರು; ಸೂಗುರೇಶ ಹಿರೇಮಠ(ಸುಹಿ) ಪುಸ್ತಕಾವಲೋಕನ; ಸುರೇಶ ಎಲ್.ರಾಜಮಾನೆ. ಚಿಗುರಿನ ಕವಿತೆಗಳೊಂದಿಗೆ ಮಾತಿಗಿಳಿದಾಗ…. ಇತ್ತೀಚಿಗೆ ತಾಂತ್ರಿಕ ಜಗತ್ತು ತನ್ನದೇ ಆದ ವೇಗ ಪಡೆದುಕೊಳ್ಳುತ್ತಿರುವದು ನಮ್ಮೆಲ್ಲರ ಕಣ್ಮುಂದಿರುವ ಸತ್ಯ. ಇದರ ಹಿನ್ನೆಲೆಯಲ್ಲಿ ಮುಖಪುಟದ ಮೂಲಕ ಸಾಹಿತ್ಯ ಲೋಕಕ್ಕೆ ಹೊಸ ಹೊಸ ಪ್ರತಿಭೆಗಳು ಲಗ್ಗೆ ಇಡುತ್ತಿವೆ ಎಲ್ಲರ ಮನಸನ್ನು ಆವರಿಸುತ್ತಿವೆ. ಹೀಗೆ ಅಂತರ್ಜಾಲದ ಮೂಲಕ ನನ್ನ ಅಂತರಂಗವನ್ನು ಸೇರಿಕೊಂಡ ಗೆಳೆಯ ಸೂಗುರೇಶ ಹಿರೇಮಠ ಅದರಾಚೆಗೂ ಭಾವನಾತ್ಮಕ ಬದುಕಿನ ದಾರಿಯಲಿ ಬದುಕಿರುವ ಒಬ್ಬ ಭಾವುಕ ಜೀವಿ. ಕವಿತೆಗಳಿಂದಲೇ […]

ವರ್ಣಮಯ ಬದುಕು ಆನಂದಮಯ: ಜಯಶ್ರೀ.ಜೆ. ಅಬ್ಬಿಗೇರಿ

ಮುದ್ದು ಕಂದಮ್ಮ ರಚ್ಚೆ ಹಿಡಿದು ಅಳುವಾಗ ಅದರ ಕೈಯಲ್ಲಿ ಬಣ್ಣದ ಗೊಂಬೆಯನ್ನು ಕೊಟ್ಟರೆ ಸಾಕು ತಕ್ಷಣಕ್ಕೆ ಅಳು ನಿಲ್ಲಿಸಿ ನಗು ಚೆಲ್ಲುತ್ತದೆ. ಬಣ್ಣದ ಆಕರ್ಷಣೆಯೇ ಅಂಥದು. ಬಣ್ಣವಿಲ್ಲದ ಬದುಕನ್ನು ಊಹಿಸಲು ಸಾಧ್ಯವೇ ಇಲ್ಲ. ಎನ್ನುವಷ್ಟರ ಮಟ್ಟಿಗೆ ಬಣ್ಣ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಬಣ್ಣಗಳು ತಮ್ಮ ಪ್ರಭಾವಲಯವನ್ನು ಅಷ್ಟೊಂದು ವ್ಯಾಪಕವಾಗಿ ವಿಸ್ತರಿಸಿಕೊಂಡಿವೆ. ದಿನಗಳೆದಂತೆ ನಾವೂ ಅವುಗಳ ಮೋಡಿಗೆ ಹೆಚ್ಚು ಹೆಚ್ಚು ಬೀಳಿತ್ತಲೇ ಇದ್ದೇವೆ.ನಮ್ಮಲ್ಲಿ ಬಣ್ಣಗಳಿಲ್ಲದೇ ಹಬ್ಬದ ರಂಗು ಹೆಚ್ಚುವುದೇ ಇಲ್ಲ. ನವರಾತ್ರಿಯಲ್ಲಿ ಶಕ್ತಿ ದೇವತೆಗೆ ಹಲವಾರು ರತ್ನ […]

ಕೆರೆಗೆ ಹಾರ ಭಾಗ 2: ಅಖಿಲೇಶ್ ಚಿಪ್ಪಳಿ

ಇಲ್ಲಿಯವರೆಗೆ [ಹಿಂದಿನ ವಾರ: ಉದ್ಘಾಟನೆಯ ಮಾರನೇ ದಿನವೇ ವಾಟ್ಸಪ್ ಗುಂಪು ಚುರುಕಿನಿಂದ ಕೆಲಸ ಮಾಡಿತು. ಸಲಹೆಗಳು ಹರಿದು ಬಂದವು. ಮತ್ತೂ ಮತ್ತೂ ಮರೆಯಬಾರದ ಸೂತ್ರವೊಂದಿದೆ. ಅದೇ ಸೂತ್ರವನ್ನು ಗಮನಿಸುತ್ತಲೇ ಇರಬೇಕು. ಅದೇ ಉತ್ಸಾಹ-ಸಲಹೆ-ಸೂಚನೆಗಳು ಕೆರೆಯ ಹೂಳನ್ನು ಎತ್ತಲಾರವು ಎಂಬುದೇ ಈ ಸೂತ್ರ. ಬಂಗಾರಮ್ಮನ ಕೆರೆಯ 600 ವರ್ಷಗಳ ಹೂಳನ್ನು ತೆಗೆಯಲು ಹಿಟಾಚಿ-ಟಿಪ್ಪರ್‍ಗಳು ಬೇಕು. ಇವಕ್ಕೆ ಮತ್ತೆ ಹಣಕಾಸು ಬೇಕು. ಅಗಾಧ ಪ್ರಮಾಣದ ಹೂಳನ್ನು ಹೊರಸಾಗಿಸಲು ಅಷ್ಟೇ ಪ್ರಮಾಣದ ಹಣಕಾಸು ಬೇಕು. ಕೆಲಸ ಶುರು ಮಾಡಿದ ವಾರದಲ್ಲೇ ಇಂಜಿನಿಯರ್ […]

ಬಡತನ: ಅಣ್ಣಪ್ಪ ಆಚಾರ್ಯ

ಸುತ್ತಲೊಮ್ಮೆ ನೋಡಿದರೆ ಗವ್ವೆನ್ನುವ, ಬೆಳಕನ್ನೇ ನುಂಗಿ ನೀರ್ ಕುಡಿಯುವ, ನಿಂತಲ್ಲೇ ಉಚ್ಚೆ ಹುಯ್ಯಿಕೊಳ್ಳುವ ಕತ್ತಲು; ಕಗ್ಗತ್ತಲು. ಅಮಾವಾಸ್ಯೆಯಾದ್ದರಿಂದ ನರಮನುಷ್ಯರು ಓಡಾಡಿದ ವಾಸನೆಯೂ ಬರುತ್ತಿಲ್ಲ. ಒಂದೆರಡು ನಾಯಿ-ಪಕ್ಕಿಗಳ ಕೂಗು, ನರಿಗಳ ಊಳಿಡುವಿಕೆ ಬಿಟ್ಟರೆ ಉಳಿದಂತೆ ಇಡೀ ಊರಿಗೆ ಊರೇ ಮೌನವಾಗಿದೆ. ಜಗವೆಲ್ಲ ಬೇಕಾಗಿದ್ದು, ಬೇಡವಾಗಿದ್ದನ್ನೆಲ್ಲ ತಿಂದು, ಬಕ್ಕ ಬೋರಲಾಗಿ ಮಲಗಿದೆ. ಆದರೆ ಈ ಗುಡಿಸಲಿನಲ್ಲಿ..?! ಆಗಲೋ, ಈಗಲೋ ಆರಿಹೋಗುವಂತಹ ಚಿಮಣಿ ಬುಡ್ಡಿಯನ್ನು ಎದುರಿಗಿಟ್ಟುಕೊಂಡು ಬಾಗಿಲ ಬಳಿ ಅವ್ವ ಕುಳಿತಿದ್ದಾಳೆ. ಮಕ್ಕಳೆಲ್ಲವೂ ‘ಪಿಳಿ-ಪಿಳಿ’ ಕಣ್ಣ್ ಬಿಡುತ್ತಾ, ತೆಂಗಿನ ಗರಿಯ ಮಾಡನ್ನೇ(ಛಾವಣಿ) […]

ಪ್ರೇಮ ಪತ್ರ ತಂದ ಪೇಚು: ವೈ. ಬಿ. ಕಡಕೋಳ

ಆ ದಿನ ಎಂದಿನಂತಿರಲಿಲ್ಲ ವಿಜಯ್ ಗರಬಡಿದವನಂತೆ ಕುಳಿತಿದ್ದ. “ಯಾಕೋ ಹೀಗೆ ಕುಳಿತಿರುವೆ ಏನಾಗಿದೆ ನಿನಗೆ? “ಎಂದ ಅಮಿತ್. “ಮಾಡೋದೆಲ್ಲ ಮಾಡಿಬಿಟ್ಟು ಏನೂ ಗೊತ್ತಿಲ್ಲ ಅನ್ನುವಂತೆ ಇದ್ದೀಯಲ್ಲ ನೀನೂ ಒಬ್ಬ ಗೆಳೆಯನಾ? “ಎಂದ. “ಯಾಕಪ್ಪಾ ಅಂಥಾ ತಪ್ಪು ನನ್ನಿಂದ ಆಗಿದ್ದಾದರೂ ಏನು? ” ಎಂದು ಅಮಿತ್ ಕುತೂಹಲದಿಂದ ಪ್ರಶ್ನಿಸಲು “ನನ್ನ ಭಾವಿ ಪತ್ನಿಗೆ ಪತ್ರ ಬರೆದಿದ್ದು  ಎಡವಟ್ಟಾಗಿದೆ ಏನು ಮಾಡಲಿ? ” ಎಂದ ಸಪ್ಪೆ ಮೋರೆಯಿಂದ, “ಅದಕ್ಯ್ಕಾಕೋ ಬೇಜಾರು? ” ಎಂದ ಅಮಿತ್ . ಆಗ ವಿಜಯ್ “ನೀನು […]