Facebook

Archive for 2018

ಪಂಜು ಕಾವ್ಯಧಾರೆ

ಮಂಗ ಮತ್ತು ಬೆಕ್ಕುಗಳು ಇಬ್ಬರ ಜಗಳದಿ ಯಾರಿಗೆ ಲಾಭವು ಬನ್ನಿರಿ ನಾವು ತಿಳಿಯೋಣ ನೀತಿಯ ಸಾರುವ ಕಥೆಯನು ಕೇಳಿ ಜೀವನ ಸುಂದರಗೊಳಿಸೋಣ|| ಸುಂದರವಾದ ಊರಿನಲಿ ಬೆಕ್ಕುಗಳೆರಡು ಜೊತೆಯಲ್ಲಿ ಆಡುತಲಿದ್ದವು ಅಲೆಯುತಲಿದ್ದವು ಬದುಕುತಲಿದ್ದವು ಸಂತಸದಿ|| ಹಸಿವನು ನೀಗಲು ಒಂದುದಿನ ಬೆಕ್ಕುಗಳಿಗೆ ಅದು ಸುದಿನ ಪ್ರತಿಮನೆಯಲ್ಲೂ ಬೆಣ್ಣೆಕದ್ದವು ಮರದಡಿ ಬಂದು ಸೇರಿದವು|| ಬೆಣ್ಣೆಯ ಆಸೆ ಹೆಚ್ಚಾಯ್ತು ಇಬ್ಬರ ಜಗಳವು ಶುರುವಾಯ್ತು ನನಗೂ ಜಾಸ್ತಿ ನಿನಗೂ ಜಾಸ್ತಿ ಬೆಣ್ಣೆಯು ಗೆಳೆತನ ಕೆಡಿಸಿತ್ತು|| ಮರದಲಿ ಕುಳಿತಿರೊ ಮಂಗಣ್ಣ ನೋಡುತಲಿದ್ದನು ಜಗಳವನ್ನ ಉಪಾಯ ಹೂಡಿ […]

ಸನ್ಮಾನಗಳು ಸಣ್ಮಾನಗಳಾಗಬಾರದಷ್ಟೇ..: ಪಿ.ಎಸ್. ಅಮರದೀಪ್

ಸಾಧನೆಗೆ ಹಲವು ಮುಖಗಳಿರುತ್ತವೆ. ಸಾಧಕರಿಗೆ ನೂರು ಯೋಚನೆಗಳಿರುತ್ತವೆ. ಒಂದು ಯೋಚನೆ ನೂರು ಸಾಧಕರನ್ನು ಸೃಷ್ಟಿಸಬಲ್ಲದು. ಅಂತಹ ಸಾಧನೆಗಳನ್ನು ಯಾರಾದರೂ ಕೇವಲ ಪ್ರಚಾರಕ್ಕಾಗಿ ಮಾಡಿರುವುದಿಲ್ಲ. ಒಂದೊಳ್ಳೆ ಉದ್ದೇಶವಿಟ್ಟುಕೊಂಡೇ ಪರಿಶ್ರಮದ ಹಾದಿ ತುಳಿದಿರುತ್ತಾರೆ. ನಾವು ಇಲ್ಲಿಯವರೆಗೂ ಕಣ್ಣೆದುರಿಗೆ, ಸುದ್ದಿ ಮೂಲಕ, ದೃಶ್ಯ ಮಾಧ್ಯಮದ ಮೂಲಕ ಸಾಧಕರನ್ನು ಗುರುತಿಸುವುದನ್ನು ನೋಡಿದ್ದೇವೆ. ಖುಷಿ ಪಟ್ಟಿದ್ದೇವೆ, ಹರಸಿದ್ದೇವೆ. ಕಿರಿಯರಿಗೆ ಮಾದರಿಯಾಗಿ ತೋರಿಸಿದ್ದೇವೆ. ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದವರ ಸಾಧಕರ ಪಟ್ಟಿಗೇನೂ ಕಮ್ಮಿಯಿಲ್ಲ. ಅಂತೆಯೇ ಅಂಥ ಸಾಧಕರ ಕುರಿತು ಬೆಳಕು ಚೆಲ್ಲುವ, ಸಾಧನೆಯ ಹಿಂದಿನ ಶ್ರಮದ […]

ಜಾಣಸುದ್ದಿ 7: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ ಇ […]

ಹೆಣ್ಣು: ಸಹನಾ ಪ್ರಸಾದ್

ರಾತ್ರಿ ಎಲ್ಲ ಮಧುಸೂದನನಿಗೆ ನಿದ್ರೆ ಇಲ್ಲ. ಆ ಕಡೆ, ಈ ಕಡೆ ಹೊರಳಾಡಿ, ಎದ್ದು ಕುಳಿತು, ಮತ್ತೆ ಮಲಗಿ, ಹೀಗೆ ಅರ್ಧ ರಾತ್ರಿ ಕಳೆಯಿತು. ಸಧ್ಯ, ಹೆ0ಡತಿಗೆ ಬೇರೆ ಕೋಣೆಯಲ್ಲಿ ಮಲಗಿ ಅಭ್ಯಾಸ. ಇಲ್ಲದಿದ್ದರೆ ಇಷ್ಟು ಹೊತ್ತಿಗೆ ರ0ಪ ಮಾಡಿ ಬಿಟ್ಟಿರುತ್ತಿದ್ದಳು. ಅಬ್ಬಬ್ಬಾ, ರಾತ್ರಿಯೆಲ್ಲ ನಿಮ್ಮ ಗೊರಕೆ ಇಲ್ಲಾ ಹೊರಳಾಟ, ನನ್ಕೈಲಿ ಆಗುವುದಿಲ್ಲಪ್ಪ. ಆರಾಮವಾಗಿ ಹೊದ್ದು ಮಲಗಲು ನಿಮಗೇನು ಕಷ್ಟ? ಹೇಗು ನನಗೆ ಚಿಕ್ಕ ವಯಸ್ಸಿನಿ0ದ ಆಸೆ, ನನ್ನದೇ ರೂಮು ಇರಬೇಕೆ0ದು, ರಮ್ಯಳ ರೂಮು ಖಾಲಿಯಾಗಿದೆಯಲ್ಲ, ಅಲ್ಲಿ […]

ಕೆರೆಗೆ ಹಾರ (ಭಾಗ 1): ಅಖಿಲೇಶ್ ಚಿಪ್ಪಳಿ

ಎಲ್ಲಾ ನಾಗರೀಕತೆಗಳು ಹುಟ್ಟಿ ವಿಕಾಸವಾಗಿದ್ದು ನದಿದಂಡೆಗುಂಟ ಎಂದು ಇತಿಹಾಸ ಹೇಳುತ್ತದೆ. ಗಾಳಿಯಲ್ಲಿರುವ ಆಮ್ಲಜನಕ ಪುಕ್ಕಟೆಯಾಗಿಯೇ ಸಿಗುತ್ತದೆ. ಅಂತೆಯೇ ನೀರು. ಗಾಳಿಯ ಲಭ್ಯತೆ ಇರುವಂತೆ ನೀರಿನ ಲಭ್ಯತೆ ಎಲ್ಲಾ ಸ್ಥಳಗಳಲ್ಲೂ ಇರುವುದಿಲ್ಲ. ಇಳಿಜಾರಿನತ್ತ ಸಾಗುವ ನೀರಿನ ಗುಣವೇ ಮನುಷ್ಯನನ್ನು ಸೆಳೆದು ತನ್ನ ದಂಡೆಗುಂಟ ಸಾಕಿಕೊಂಡಿತು. ಜೀವಜಲದ ಮಹತ್ವದ ಅರಿವು ಎಲ್ಲರಿಗೂ ಇರಬೇಕಿತ್ತು. ಅರಿವಿನ ಕೊರತೆ ನೀರಿನ ಅಗಾಧತೆಗಿಂತಲೂ ಹೆಚ್ಚಿದೆ. ತಗ್ಗಿನಲ್ಲಿ ನೀರು ಸಿಗುತ್ತದೆ ಎಂಬ ಅರಿವು ಮಾನವನಿಗೆ ಆದ ಕ್ಷಣ ಬಾವಿ-ಕೆರೆಗಳ ಹುಟ್ಟೂ ಆಯಿತು. ಒಂದು ಊರು ಆರೋಗ್ಯವಾಗಿ […]

ಪ್ರೇಮಪತ್ರಗಳು: ನಳಿನ.ಡಿ., ಆರೀಫ ವಾಲೀಕಾರ

ನೋವು ನಿರಂತರ ಧ್ಯಾನದಂತೆ! ಆ ಹೊತ್ತು ನೀನು ಸಿಗಬಾರದಿತ್ತೇನೋ, ನೀನು ಸಿಕ್ಕು ಖಾಲಿ ಬಿದ್ದಿದ್ದ ನನ್ನ ಮೊಬೈಕ್ ನೊಳಗೆ ಪೆಟ್ರೋಲ್ ತುಂಬಿಸಲು ಬೆನ್ನ ಹಿಂದೆ ಹತ್ತಿಸಿಕೊಂಡು ಹೋದಿ. ಅಗ ಬರೀ ನನ್ನ ಗಾಡಿಯ ಎದೆಯೊಳಗೆ ಪೆಟ್ರೋಲ್ ಮಾತ್ರ ತುಂಬಿಸಲಿಲ್ಲ, ನನ್ನ ಎದೆಯ ತುಂಬಾ ನೀನೇ ತುಂಬಿಕೊಂಡೆ. ಭಾಷೆ ಗೊತ್ತಿಲ್ಲದ ಅನಾಮಿಕ ಭಾಷೆಯಲ್ಲಿ ನಾನು ನಿನ್ನನ್ನು ಕಷ್ಟಪಟ್ಟು ಇಷ್ಟವಾದದ್ದನ್ನು ಹೇಳಿದಾಗ ನೀನು ’ಥೂ, ಹೋಗಾಚೆ’ ಅಂದಿದ್ದರೆ ಸಾಕಿತ್ತು, ನೀನು ಹಾಗೆ ಮಾಡುತ್ತೀಯೇನೋ ಅಂತ ನಾನು ಎಷ್ಟು ಸಲ ನನ್ನ […]

ಅಹಂಕಾರ ದರ್ಪಗಳ ಮಧ್ಯೆ ಬಂದ ಅವನೊಬ್ಬ: ಬಸವರಾಜ ಕಾಸೆ

ಮಧ್ಯೆ ರಾತ್ರಿ ಎರಡು ಗಂಟೆಯ ಸಮಯ, ಸಿಟಿ ರೈಲು ನಿಲ್ದಾಣದ ಎದುರು ಪುಟಪಾತ್ ಅಲ್ಲಿ ಹೇಗೇಗೊ ಪೇಪರ್ ಹಾಸಿಕೊಂಡು ಮಲಗಿರುವ ಜನರು. ಗಾಢ ಅಂಧಕಾರದ ನಡುವೆ ಕುಂಟುತ್ತಿರುವ ಕುದುರೆ ನಿಂತಲ್ಲೇ ಎಗರಾಡಿ ಬರುತ್ತಿದೆ ಅವನ ಮೈಮೇಲೆ, ಇನ್ನೇನು ತುಳಿದು ಬಿಟ್ಟಿತು ಎನ್ನುವಷ್ಟರಲ್ಲಿ ಒಂದೆಡೆ ರಣಕೇಕೆ ಹಾಕಿ ನಗುತ್ತಿರುವ ರಾಜ ರಾಣಿ ಮಂತ್ರಿಗಳು, ಅಷ್ಟರಲ್ಲಿ ಜೋರಾಗಿ ತಿರುಗುತ್ತಿರುವ ಯಂತ್ರವೊಂದು ಕಳಚಿ ಭಯಾನಕವಾಗಿ ಬಿದ್ದು ಬಿಟ್ಟಿತು. ಹೊಡಿ ಆರು ನೂರಾ ಎಂಭತ್ತು ಎಂಬ ಕರಾಳ ಧ್ವನಿ…ಮಲಗಿದ್ದ ಅವನು ಇದ್ದಕ್ಕಿದ್ದಂತೆ ಬೆಚ್ಚಿ […]

ವೃದ್ದಾಪ್ಯದಲ್ಲಿ ಮಕ್ಕಳ ಜವಾಬ್ದಾರಿ: ವೇದಾವತಿ ಹೆಚ್. ಎಸ್.

ಹಳ್ಳಿಯಿಂದ ಡೆಲ್ಲಿಯವರೆಗೆ ವೃದ್ದಶ್ರಾಮಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ದಿನೇ ದಿನೇ ಹೆಚ್ಚುತ್ತಿದೆ. ಕಾರಣ ಬೇಕಾದಷ್ಟು ಇರಬಹುದು. ಇಂದಿನ ಮಕ್ಕಳ ನಡವಳಿಕೆ,ಹೊಂದಾಣಿಕೆಯ ಕೊರತೆಯಿಂದಲೂ ಇರಬಹುದು. ಮೂವತ್ತು ವರ್ಷಗಳ ಹಿಂದೆ ತುಂಬಿದ ಕುಟುಂಬ ಇರುತ್ತಿದ್ದ ದಿನಗಳವು. “ಮನೆ ತುಂಬಾ ಮಕ್ಕಳಿರಲವ್ವ”ಎನ್ನುವ ಕಾಲವಾಗಿತ್ತು. ಒಂದು ಮನೆಯಲ್ಲಿ ಐದಾರು ಮಕ್ಕಳಿಂದ ತುಂಬಿ ತುಳುಕುತ್ತಿತ್ತು. ಮಕ್ಕಳಿಗೆ ತಂದೆ ತಾಯಿಯು ಮನೆಯಲ್ಲಿ ಸಂಸ್ಕಾರವನ್ನು ಕಲಿಸುತ್ತಿದ್ದರು. “ಮನೆಯೇ ಮೊದಲ ಪಾಠ ಶಾಲೆ”ಎಂಬ ಹಾಗೆ ದೊಡ್ಡವರಿಂದ ಹಿಡಿದು ಚಿಕ್ಕ ಮಕ್ಕಳವರೆಗೆ ಬೆರೆತು ಬಾಳಬೇಕು ಎನ್ನುವುದು ಮನೆಯ ಜನರಿಂದಲೇ ನೋಡಿ […]

ಯುವ ಜನತೆಗೆ ವಿವೇಕಾನಂದರ ಆದರ್ಶಗಳು: ವೈ. ಬಿ. ಕಡಕೋಳ

ಸ್ವಾಮಿ ವಿವೇಕಾನಂದ(ನರೇಂದನಾಥ ದತ್ತ)(ಜನೇವರಿ 12 1863 ಜನನ) ಭಾರತದ ಅತ್ಯಂತ ಪ್ರಸಿದ್ದ ಹಾಗೂ ಪ್ರಭಾವಶಾಲೀ ತತ್ವಜ್ಞಾನಿಗಳು. ನಿರ್ಭಯತೆ, ಆಶಾವಾದ, ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ  ವಿಶಾಲ ದೃಷ್ಟಿಯ ಸಂಕೇತವಾಗಿ ಇಡೀ ವಿಶ್ವಕ್ಕೆ ಮಾದರಿಯಾದ ಸನ್ಯಾಸಿ. ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನೇವರಿ 12 “ರಾಷ್ಟ್ರೀಯ ಯುವ ದಿನ”ವೆಂದು 1984 ರಿಂದ ಕೇಂದ್ರ ಸರಕಾರ ಸೂಚಿಸಿದ್ದು ಅಂದಿನಿಂದ ಇದನ್ನು ಆಚರಿಸಲಾಗುತ್ತಿದೆ. ಪ್ರತಿಯೊಬ್ಬರೂ ವಿವೇಕಾನಂದರ ಬದುಕಿನ ಆದರ್ಶಗಳ ಕುರಿತು ಈ ಸಂದರ್ಭದಲ್ಲಿ ಅರ್ಥೈಸಿಕೊಳ್ಳಬೇಕು. ವಿವೇಕಾನಂದರ ಪೂರ್ವಾಶ್ರಮದ ಹೆಸರು ನರೇಂದ್ರನಾಥ ದತ್ತ. ತಂದೆ […]

ಪ್ರೇಮಿಗಳ ದಿನಾಚರಣೆಯನ್ನು ಹೇಗೆ ಆಚರಿಸಬೇಕು?: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಪ್ರೀತಿ ಅತಿ ಅಮೂಲ್ಯ! ಜಗದ ತುಂಬ ತುಂಬಿದೆ. ಮಾನವನ ಜಗತ್ತನ್ನು ಆಳುತ್ತಿದೆ. ಸಕಲ ಜೀವಜಂತುಗಳಲ್ಲೂ ಮನೆ ಮಾಡಿದೆ. ಜಗತ್ತು ಆಗಿರುವುದೇ ಪ್ರೀತಿಯಿಂದ. ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ಪ್ರೀತಿ, ಪ್ರೇಮ ತೋರಿಸುವಂಥವು ಆಗಿರದೆ ನಡೆ, ನುಡಿ, ಮಾಳ್ಕೆಗಳಲ್ಲಿ ಕಂಡುಬರುವಂಥವು ಆಗಿವೆ. ಅವರವರ ಸಂಬಂಧ, ಭಾವನೆ, ಇಬ್ಬರಲ್ಲಿರುವ ಇಷ್ಟವಾಗುವ ಗುಣಗಳಿಂದ ಅವರ ಪ್ರೀತಿಯ ಅನ್ಯೋನ್ಯತೆ ತೀರ್ಮಾನವಾಗುತ್ತದೆ. ಪ್ರೀತಿ ಎಲ್ಲಾ ಜೀವಿಗಳಲ್ಲೂ ಸಹಜವಾಗಿ ಇರುವಂತಹದ್ದೇ! ಆದ್ದರಿಂದ ಪ್ರೇಮಿಗಳ ದಿನ, ಅಪ್ಪಂದಿರ ದಿನ, ಸ್ನೇಹಿತರ ದಿನ, ಅಮ್ಮಂದಿರ ದಿನ… ಆಚರಿಸುವುದು ಭಾರತೀಯ ಪರಂಪರೆಯಲ್ಲಿಲ್ಲ! […]