ಪಂಜು ಕಾವ್ಯಧಾರೆ

ಶ್ರಾವಣ…. ಎಲ್ಲೆಲ್ಲೂ ಹಸಿರು, ತಳಿರು ತೋರಣ, ನೀ ಬಂದೊಡನೆ ಬಂಜರು ಭೂಮಿಯಲ್ಲೂ ಹಬ್ಬದ ವಾತಾವರಣ … ಎಲ್ಲೆಲ್ಲೂ ಸಂತೋಷ, ನಗು, ಸಂಭ್ರಮ, ಸ್ವರ್ಗ ವಾಗುವುದು ಧರೆ ಲೆಕ್ಕಿಸದೆ ಪಟ್ಟಣ ಗ್ರಾಮ … ಆದರಲ್ಲಿ ಸಂಭವಿಸಿದ್ದು ಕಾಲನ ತಾಂಡವ, ಹರಿಯಿತು ಜಲ ಧಾರೆ ಲೆಕ್ಕಿಸದೇ ನಿನ್ನಯ ಬರುವಿಕೆಯ… ಆಕ್ರಂಧನ ಮಾತ್ರ ಕೇಳುತಿತ್ತು, ಅಲ್ಲಿ ದೇವರ ಸ್ವಂತ ನಾಡು ಮುಳುಗುತಿತ್ತು…. ನಿಸ್ಸಹಾಯಕರಾದರು ಮನುಜರು, ದಡ ಸೇರದಾದರು ಈಜಿದರೂ…. ನಿನ್ನ ಆಗಮನಕ್ಕೆ ಕಾದಿದ್ದ ಹೂರಾಶಿಗಳೆಲ್ಲ, ನೆಲದ ಮೇಲಿನ ರಂಗೋಲಿಯಾಗದೆಯೇ ಅಸುನೀಗಿದವು… ಎಲ್ಲವನ್ನು … Read more

ವಿಜ್ಞಾನಿ ಮಿತ್ರರು: ಡಾ. ಗಿರೀಶ್ ಬಿ.ಸಿ.

ಜಗುಲಿ ಮೇಲೆ ಕುಳಿತು ಬಲಗೈಯಲ್ಲಿ ಬೂದುಗಾಜು ಹಿಡಿದು ಎಡಗೈಯ ಬೆರಳುಗಳ ಮದ್ಯೆ ಅದಾವುದೊ ಕೀಟವನ್ನು ವೀಕ್ಷಿಸುತ್ತ್ತಿದ್ದ ಈಸುರಯ್ಯನ ರವಿ. ಅಚಾನಕ್ ಆಗಿ ಆಗಮಿಸಿದವನಿಗೆ ಕುಳಿತುಕೊಳ್ಳಲು ಕಣ್ಣಲ್ಲೇ ಸಂಜ್ಞೆಮಾಡಿ ತನ್ನ ಅಧ್ಯಯನವನ್ನು ಮುಂದುವರೆಸಿದ. ಅದೇನು ಮಾಡ್ತಾನೋ ನೋಡೋಣ ಅಂತ ಅವನ ಎಡಭಾಗದಲ್ಲಿ ಮಂಡಿವೂರಿ ಕುಳಿತೆ. ಕಣ್ಣು ಮಿಟುಕಿಸದೆ ಆ ಕೆಂಪು ಕೀಟವನ್ನು ನೋಡುತ್ತಾ ಕತ್ತನ್ನು ಮೇಲೆ ಕೆಳಗೆ ಆಡಿಸುತ್ತಾ ಏನನ್ನೋ ನೆನದು ‘ಯೆಸ್ ಯೆಸ್’ ಅಂದ. ಕೈಯಲ್ಲಿರುವುದನ್ನು ನೆಲದ ಮೇಲೆ ಹಾಕಿ ‘ಬಂದೇ ಇರು’ ಅನ್ನುತ್ತ ಒಳಗೆ ಹೋಗುವಾಗ … Read more

ಅಂತೆ ಕಂತೆಗಳ ನಡುವೆ…: ಅಶ್ಫಾಕ್ ಪೀರಜಾದೆ

ಗೆಳೆಯ ಗಂಗಾಧರ ಸತ್ತ ಸುದ್ದಿಯ ಹಿನ್ನಲೆಯಲ್ಲಿ ನಾನು ಬೆಂಗಳೂರಿನಿಂದ ಬೆಳಗಾವಿಗೆ ಪ್ರಯಾಣ ಬೆಳಸಬೇಕಾಗಿ ಬಂತು. ಗಂಗಾಧರ ನನ್ನ ಪ್ರಾಣ ಸ್ನೇಹಿತ, ವಾರಿಗೆಯವ, ಹೆಚ್ಚುಕಮ್ಮಿ ನನ್ನಷ್ಟೇ ವಯಸ್ಸು, ನಲವತ್ತೈದು ಸಾಯುವ ವಯಸ್ಸಲ್ಲ, ಅದಕ್ಕೆ ಅದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಆದರೆ ಗಂಗಾಧರನ ಪತ್ನಿಯೇ ಅಳುತ್ತ ದೂರವಾಣಿಯ ಮುಖಾಂತರ ಇದನ್ನು ಹೇಳಿದಾಗ ನಂಬದೇ ಗತಿಯಿರಲಿಲ್ಲ. ಗಂಗಾಧರನ ಅಗಲಿಕೆಯ ವೇದನೆ ಹೊತ್ತು ಭಾರವಾದ ಮನಸ್ಸಿನಿಂದ ಬೆಳಗಾವಿ ಬಸ್ಸು ಹತ್ತಿದೆ. ಬಸ್ಸು ನಿಲ್ಧಾಣ ಬಿಟ್ಟಾಗ ರಾತ್ರಿ ಹತ್ತರ ಸಮಯ, ಸೀಟಿಗೊರಗಿ ಮಲಗಲು ಪ್ರಯತ್ನಿಸಿದೆ.ಸಾಧ್ಯವಾಗಲಿಲ್ಲ. ಕೇವಲ … Read more

ಜಾಣಸುದ್ದಿ 15: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ … Read more

ಹವ್ಯಕರಲ್ಲಿ ಗಣೇಶ ಹಬ್ಬದ ಆಚರಣೆ: ಗೀತಾ ಜಿ.ಹೆಗಡೆ, ಕಲ್ಮನೆ.

ಸೃಷ್ಟಿ ಸೌಂದರ್ಯದ ತವರೂರಾದ ಮಲೆನಾಡಿನ ಜಿಲ್ಲೆಯಾದ್ಯಂತ ನೂರಾರು ಹವ್ಯಕ ಕುಟುಂಬಗಳು ಅಲ್ಲಲ್ಲಿ ನಾಲ್ಕು ಐದು ಮನೆಗಳಿಂದ ಸಣ್ಣ ಸಣ್ಣ ಹಳ್ಳಿಗಳಾಗಿ ಪುರಾತನ ಕಾಲದಿಂದಲೂ ನೆಲೆ ನಿಂತಿವೆ. ಒಂದೊಂದು ಹಳ್ಳಿಗೂ ಒಂದೊಂದು ಹೆಸರು. ಹಾಗೆ ಅಲ್ಲಿ ಆಚರಿಸುವ ಹಬ್ಬಗಳಲ್ಲೂ ವಿಶೇಷತೆಯಿದೆ. ಅವುಗಳಲ್ಲಿ “ಗಣೇಶ ಹಬ್ಬ”ವೂ ಒಂದು. ಹವ್ಯಕರಲ್ಲಿ ಈ ಗಣೇಶ ಹಬ್ಬಕ್ಕೆ ಚೌತಿ ಹಬ್ಬವೆಂದು ಹೇಳುವ ವಾಡಿಕೆ. ತಲೆ ತಲಾಂತರದಿಂದ ಮನೆತನದಲ್ಲಿ ನಡೆದುಕೊಂಡು ಬಂದ ಹಲವು ಪದ್ಧತಿಗಳಿದ್ದು ಅದು ಈಗಲೂ ಮುಂದುವರೆದಿದೆ. ಹಬ್ಬಕ್ಕೆ ಹದಿನೈದು ದಿನಗಳಿರುವಾಗಲೆ ಹಬ್ಬದ ತಯಾರಿ … Read more

ಜೀರಾ ರೈಸ್ ಮತ್ತು ದಾಲ್ ಫ್ರೈ ರೆಸಿಪಿ: ವೇದಾವತಿ ಹೆಚ್. ಎಸ್.

1.ಜೀರಾ ರೈಸ್.(ರೆಸ್ಟೋರೆಂಟ್ ಸ್ಟೈಲ್) ಬೇಕಾಗುವ ಸಾಮಾಗ್ರಿಗಳು: ಬಾಸುಮತಿ ಅಕ್ಕಿ 1ಕಪ್ ಎಣ್ಣೆ 1ಚಮಚ ಉಪ್ಪು 1/2ಚಮಚ ತುಪ್ಪ 2ಚಮಚ ಜೀರಿಗೆ 2ಚಮಚ ಕೊತ್ತಂಬರಿ ಸೊಪ್ಪು ಸ್ವಲ್ಪ ಅಕ್ಕಿ ಬೇಯಿಸಲು ನೀರು 5ಕಪ್ ತಯಾರಿಸುವ ವಿಧಾನ: ಬಾಸುಮತಿ ಅಕ್ಕಿಯನ್ನು 20ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ಬಾಣಲೆಯಲ್ಲಿ ಐದು ಕಪ್ ನೀರನ್ನು ಹಾಕಿ. ಈ ನೀರಿಗೆ ಉಪ್ಪು ಮತ್ತು ಎಣ್ಣೆಯನ್ನು ಹಾಕಿ ನೀರನ್ನು ಕುದಿಸಿ. ನಂತರ ನೆನೆಸಿ ಕೊಂಡ ಅಕ್ಕಿಯ ನೀರನ್ನು ತೆಗೆದು ಕುದಿಯುವ ನೀರಿಗೆ ಹಾಕಿ. ಎಂಟರಿಂದ ಹತ್ತು … Read more

ಈ ಹುಚ್ಚುವಿಗೆ ಯಾವುದು ಮದ್ದು?:  ಸ್ಮಿತಾ ಅಮೃತರಾಜ್. ಸಂಪಾಜೆ

ಅನ್ವರ್ಥ ನಾಮಕ್ಕೆ ವೈದ್ಯ, ವಿದ್ವಾಂಸ, ವ್ಯಾಪಾರಿ ಹೀಗೆ ಅನೇಕ ಉದಾಹರಣೆಗಳನ್ನು ಕೊಡುತ್ತಾ ಹೋಗಬಹುದು. ಹಾಗೆಯೇ ಒಂದಷ್ಟು ಮಿನಿ ಕವಿತೆ, ಚುಟುಕು ಅಂತ ಎರಡು ಸಾಲು ಗೀಚಿದ ಕವಿಗಳಿಗೆ ಕೂಡ ಅವರ ವಿಳಾಸದ ಕೆಳಗೆ ಅವರಿಗೂ ಗೊತ್ತಿಲ್ಲದಂತೆ ‘ಕವಿಗಳು’ ಅಂತ ಅನ್ವರ್ಥಕ ನಾಮವೊಂದು ತಗಲಿ ಹಾಕಿಕೊಂಡು ಬಿಡುತ್ತದೆ. ಇದನ್ನು ನಾನು ಯಾಕೆ ಉದಾಹರಿಸುತ್ತಿರುವೆನೆಂದರೆ ಕೆಲವೊಂದು ಪರ್ಯಾಯ ಹೆಸರುಗಳು ನಮಗೆ ಅದು ಹೇಗೋ  ಜಿಗುಟು ಜಿಗುಟು ಮೇಣದಂತೆ ಅಂಟು ಹಾಕಿಕೊಂಡು ಬಿಡುತ್ತದೆ. ಮತ್ತೆ ನಾವು ಬಿಟ್ಟರೂ ಅದು ನಮ್ಮನ್ನು ಬಿಡದಂತೆ … Read more

ಗುರುವೆಂಬುದು ಅತಿಭೌತಿಕ ಶಕ್ತಿ: ಶ್ರೀ.ಎಂ.ಎಚ್.ಮೊಕಾಶಿ

ಸಮಾಜದಲ್ಲಿ ಅನೇಕ ವೃತ್ತಿಗಳಿವೆ. ಅವುಗಳಲ್ಲಿ ಪ್ರಮುಖವಾದುದೆಂದರೆ ಶಿಕ್ಷಕ ವೃತ್ತಿಯಾಗಿದೆ. ಶಿಕ್ಷಕನನ್ನು ಬೋಧಕ, ಅಧ್ಯಾಪಕ, ಮೇಷ್ರು, ಗುರು, ಮೊದಲಾದ ಬೇರೆ ಬೇರೆ ಹೆಸರುಗಳಿಂದ ಕರೆಯುವರು. ಗುರುವನ್ನು “ಆಚಾರ್ಯ ದೇವೋಭವ”ಎನ್ನಲಾಗಿದೆ. ಅಂದರೆ ದೇವರ ಸ್ಥಾನ ಮಾನ ನೀಡಲಾಗಿದೆ. ಗುರು “ಸಂಸ್ಕøತಿಯ ಪ್ರಗತಿಯ ಅಗ್ರಧೂತ”, ”ರಾಷ್ರ ನಿರ್ಮಾತೃ”, ”ಇತಿಹಾಸದ ನಿರ್ಮಾಪಕ” ಕೂಡ ಆಗಿದ್ದಾನೆ. ಗುರು ಮಗುವಿಗೆ ದ್ವಿತೀಯ ಜನ್ಮದಾತನಾಗಿದ್ದಾನೆ. ಹೀಗಾಗಿ ಗುರುವಿಗೆ ಸಮಾಜದಲ್ಲಿ ಮಹತ್ವದ ಸ್ಥಾನಮಾನ ನೀಡಲಾಗಿದೆ. ಗುರು ಭೂಮಿಯ ಮೇಲಿರುವ ಅತಿಭೌತಿಕ ಹಾಗೂ ಉನ್ನತ ಶಕ್ತಿಯ ಕುರಿತಾದ ಅತ್ಯುನ್ನತ ಜ್ಞಾನವನ್ನು … Read more

ಅತಿಥಿ ದೇವೋ ಭವ: ಸುನಂದಾ ಎಸ್ ಭರಮನಾಯ್ಕರ

ಭಾರತೀಯ ನಾಗರೀಕತೆಯು ಭೂಮಿಯಲ್ಲಿಯೇ ಅತ್ಯಂತ ಪ್ರಾಚೀನವಾದವುಗಳಲ್ಲಿ ಒಂದಾಗಿರುವುದಲ್ಲದೇ, ಇತರೇ ಎಲ್ಲಾ ಸಂಸ್ಕøತಿಗಳಂತೆ ತನ್ನದೇ ಆದ ಸಂಪ್ರದಾಯಗಳನ್ನು ಹೊಂದಿದ್ದು ಅವುಗಳಲ್ಲಿ ಸಾಕಷ್ಟು ಅತಿಥಿ ಸತ್ಕಾರದ ವಿಚಾರಗಳನ್ನು ಹೊಂದಿದೆ. ಅತಿಥಿ ಎಂಬ ಶಬ್ದವು ಭಾರತೀಯರ ಒಂದು ವಿಶಿಷ್ಟ ಜೀವನಕ್ರಮವನ್ನು ಸೂಚಿಸುತ್ತದೆ. ಯಾರಿಗಾದರೂ ಅನೀರಿಕ್ಷಿತವಾಗಿ ಅಪರಿಚಿತರ ಆತಿಥ್ಯವನ್ನು ಅವಲಂಬಿಸುವ ಪ್ರಸಂಗ ಒದಗಬಹುದು. ಸಂಚಾರ ಸಾಧನಗಳು ಇಂದಿನ ಹಾಗೆ ಇಲ್ಲದಿದ್ದ ಕಾಲದಲ್ಲಿ ದೂರ ಪ್ರಯಾಣದಲ್ಲಿರುವವರು ಇಂಥ ಆತಿಥ್ಯವನ್ನು ನಂಬಿಕೊಂಡೆ ವ್ಯವಹಾರ ಸಾಗಿಸಬೇಕಿತ್ತು. ಇಂದು ಕೂಡ ಬಾರತೀಯ ಹಳ್ಳಿಗರಲ್ಲಿ ಈ ಧೋರಣೆ ಹಾಗೇ ಉಳಿದಿದೆ. … Read more

ದಿಟ್ಟ ಬಾಲಕಿಯೋರ್ವಳ ಕಥಾನಕದ ‘ಸಮಸ್ಯೆಗಳ ಮೆಟ್ಟಿ ನಿಂತ ಬಾಲಕಿ’ ನಾಟಕ ಪ್ರದರ್ಶನ: ಪ್ರೊ.ಅನ್ನಪೂರ್ಣ ತಳಕಲ್

ಇತ್ತೀಚೆಗೆ (26-08-2018) ಹುಬ್ಳಳ್ಳಿ-ಧಾರವಾಡ ನಗರಗಳನ್ನು ಸುತ್ತ-ಮುತ್ತ ಬೆಳೆದರೂ ತನ್ನ ಸೊಗಡನ್ನು ಕಳೆದುಕೊಳ್ಳದ ಸುತಗಟ್ಟಿ ಗ್ರಾಮದಲ್ಲಿ ಮಕ್ಕಳ ನಾಟಕವೊಂದನ್ನು ವೀಕ್ಷಿಸುವ ಭಾಗ್ಯ ಸಿಕ್ಕಿತ್ತು. ಆ ನಾಟಕದಲ್ಲಿ ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ ಎಂಬ ಮಾತಿನಂತೆ ಗ್ರಾಮೀಣ ಪ್ರದೇಶದ ಬಡ ಕುಟುಂಬದ ಹಿನ್ನಲೆಯ ಬಾಲಕಿಯೋರ್ವಳು ತನಗೆದುರಾಗುವ ಸಂಕಷ್ಟಗಳನ್ನು ಸಮಯೋಚಿತವಾಗಿ ಜಾಣ್ಮೆಯಿಂದ ಎದುರಿಸುವ ಕಥಾನಕದ ಕು.ಬಿಂದು ಮತ್ತಿಕಟ್ಟಿ ರಚನೆಯ ‘ಸಮಸ್ಯೆಗಳ ಮೆಟ್ಟಿ ನಿಂತ ಬಾಲಕಿ’ ನಾಟಕವನ್ನು ಹುಬ್ಬಳ್ಳಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುತಗಟ್ಟಿಯ ವಿದ್ಯಾರ್ಥಿ ಮಕ್ಕಳು ಶಾಲಾ ಆವರಣದ ರಂಗಮಂದಿರದಲ್ಲಿ … Read more

ತಲ್ಲೀನತೆಯ ಪರಾಕಾಷ್ಠೆ: ಕೆ ಟಿ ಸೋಮಶೇಖರ ಹೊಳಲ್ಕೆರೆ.

ತಲ್ಲೀನತೆಯೆಂದರೆ ವ್ಯಕ್ತಿ ಏನನ್ನು ಮಾಡಬಯಸುತ್ತಾನೋ ಅದರಲ್ಲಿಯೇ ಮನಸ್ಸು ಐಕ್ಯವಾಗುವುದು! ಮತ್ತೊಂದರ ಕಡೆಗೆ ಗಮನ ಹರಿಸದಂತೆ ಕೆಲಸದಲ್ಲಿ ಮುಳುಗುವುದು! ಯಾವುದೇ ಕೆಲಸವನ್ನು ಏಕಾಗ್ರತೆಯಿಂದ, ಇಷ್ಟಪಟ್ಟು, ಪ್ರೀತಿಸಿ ಮಾಡಿದಾಗ ಆ ಕೆಲಸ ಸುಂದರವಾಗುವುದು, ಮನಸ್ಸಿಗೆ ಮುದನೀಡುವುದು, ಇತರರ ಮನಸೂರೆಗೊಳ್ಳುವುದು! ಕಾಟಾಚಾರಕ್ಕೆ, ಒತ್ತಾಯಕ್ಕೆ, ಅಧಿಕಾರದ ದರ್ಪಕ್ಕೆ ಹೆದರಿ ಮಾಡುವ ಕೆಲಸಗಳು ಸುಂದರವಾಗವು, ಮಾಡಿದವರಿಗೂ ನೋಡುವವರಿಗೂ ಮೆಚ್ಚಿಗೆಯಾಗವು, ಯಾರಿಗೂ ತೃಪ್ತಿನೀಡವು. ಮಾಡಿದ್ದು ಸುಂದರವಾಗಬೇಕೆಂದರೆ ಗರಿಷ್ಟಮಟ್ಟದ ತಲ್ಲೀನತೆ ಅವಶ್ಯ! ಪ್ರಪಂಚದಲ್ಲಿ ಯಾವುವು ಪ್ರಸಿದ್ಧವಾದ, ಸುಂದರವಾದ ಕೆಲಸಗಳೋ ಅವು ತಲ್ಲೀನತೆಯ ಪರಾಕಾಷ್ಠೆಯ ಫಲಗಳಾಗಿವೆ. ಅವು ಯೋಗದ … Read more

ಎರಡು ಕನಸುಗಳು: ಚೈತ್ರಾ ವಿ.ಮಾಲವಿ

ಕನಸು-ಒಂದು (೧೫-೧೧-೨೦೧೭)ಶುಕ್ರವಾರ      ಅವತ್ತು ಮುಂಜಾನೆ ಚಹಾ ಮಾಡಲು ಅಡುಗೆ ಮನೆಗೆ ಹೋದ ಗಂಗಾ, ಗ್ಯಾಸ್ ಸ್ಟವ್ ಹಚ್ಚಲು ಪರಿತಪಿಸುತ್ತಿದ್ದಳು, ಮೂರು, ನಾಲ್ಕು ಬಾರಿ ಲೈಟರಿನಿಂದ ಟಕ್, ಟಕ್ ಅಂತ ಅಂದರೂ ಸ್ಟವ್ ಹತ್ತಲಿಲ್ಲ. ಟಕ್ ಟಕ್ ಸದ್ದು ಕೇಳಿದ ಕೂಡಲೇ, ಪಡಸಾಲೆಯಲ್ಲಿ ಟೀವಿ ನೋಡುತ್ತಿದ್ದ ಅವಳ ಮಾವ ಕಿರಣ್ ಅಡುಗೆ ಮನೆಗೆ ಹೋದ. ಕಿರಣ್ ನ ದೊಡ್ಡಕ್ಕನ ಮಗಳು ಈ ಗಂಗಾ.  ಅವಳನ್ನು ನೋಡಿ, “ಹೇ..ಮಬ್ಬು, ಈ ಕಡೆ ಬಾ..ಇಲ್ಲಿ. ಇಷ್ಟು.. ಗ್ಯಾಸ್ ಹಚ್ಚೋಕೆ … Read more

ಅಧೀನ ನೆಲೆಯಲ್ಲಿ ಹೆಣ್ತನ: ನಾಗರೇಖಾ ಗಾಂವಕರ

ಆಕೆ ಫಣಿಯಮ್ಮ. ಮನೆಗೆಲಸ ಮಾಡಿ ಬದುಕ ನಡೆಸುತ್ತ ಏಗುತ್ತಿರುವ ಮಧ್ಯವಯಸ್ಸಿನ ಹೆಂಗಸು. ನಾಲ್ಕು ಮಕ್ಕಳ ತಾಯಿ. ಮಕ್ಕಳೆಲ್ಲಾ ಶಾಲೆ ಕಾಲೇಜುಗಳಲ್ಲಿ ಕಲಿಯುತ್ತಿದ್ದಾರೆ. ಗಂಡ ಕೂಡಾ ಒಬ್ಬ ಕೂಲಿ. ಆದರೆ ವಿಪರೀತ ಕುಡುಕ. ದುಡಿದ ಹಣದಲ್ಲಿ ಬಹಳ ಸಲ ಬಿಡಿಗಾಸನ್ನು ಮನೆಗೆ ಕೊಡದೆ ಮನೆಯಲ್ಲಿ ಉಂಡು ಮಲಗುವ ದಂಡಪಿಂಡ. ಆಕೆ ಕಣ್ಣೀರಿನಲ್ಲಿಯೇ ಕೈತೊಳೆಯುತ್ತಿದ್ದಾಳೆ. ದಿನವೂ ಐದಾರು ಮನೆಗಳ ಕಸ ಮುಸುರೆ ತಿಕ್ಕಿ ತಿಂಗಳೊಂದಕ್ಕೆ ಐದಾರು ಸಾವಿರ ಗಳಿಸುವ ಆಕೆಯ ಕುಟುಂಬಕ್ಕೆ ಸಿಗುವ ಪಡಿತರ ಅಕ್ಕಿ ಕಾಳುಗಳು ಹೇಗೋ ಜೀವನ … Read more

ಎಲ್ಲಿ ಹೋದವು ಆ ದಿನಗಳು?: ಗೌರಿ. ಚಂದ್ರಕೇಸರಿ

ಗುರುವಿಗೊಬ್ಬ ಯೋಗ್ಯ ಶಿಷ್ಯ, ಶಿಷ್ಯನಿಗೊಬ್ಬ ಜ್ಞಾನಿಯಾದ ಗುರು ಇವೆರಡೂ ಲಭ್ಯವಾಗುವುದು ಅವರಿಬ್ಬರ ಅದೃಷ್ಟವೆಂದೇ ಹೇಳಬೇಕು. ವಿದ್ಯಾರ್ಥಿಗಳ ಜ್ಞಾನದಾಹವನ್ನು ನೀಗಿಸುವ ಗುರು ನಿರ್ಧಿಷ್ಟ ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡಿಕೊಂಡಿರಬೇಕಾಗುತ್ತದೆ. ಸತತ ಪರಿಶ್ರಮಿಯಾಗಿರಬೇಕಾಗುತ್ತದೆ. ತಾವು ಬೋಧಿಸುವ ವಿಷಯದ ಕುರಿತು ತುಡಿತವನ್ನು ಹೊಂದಿರಬೇಕಾಗುತ್ತದೆ. ಅಂದಾಗಲೇ ಅದನ್ನು ಮತ್ತೊಬ್ಬರೊಂದಿಗೆ ಪ್ರಸ್ತುತಪಡಿಸಬಹುದು ಹಾಗೂ ಚರ್ಚಿಸಬಹುದು.‘ಗುರು’ ಎಂಬ ಶಬ್ದವೇ ಕತ್ತಲೆಯನ್ನು ಹೊಡೆದೋಡಿಸುವುದು ಎಂಬ ಅರ್ಥವನ್ನು ಹೊಂದಿದೆ. ಪ್ರತಿಷ್ಠಿತ ಕಾಲೇಜೊಂದರಲ್ಲಿ ಓದಿದ ನಾನು ಪ್ರಸಿದ್ಧ ಸಾಹಿತಿಗಳು, ವಿಮರ್ಶಕರು, ವಾಗ್ಮಿಗಳು, ಭಾಷಾ ಪಾರಂಗತರನ್ನು ಗುರುಗಳನ್ನಾಗಿ ಪಡೆದದ್ದು ನನ್ನ … Read more