Facebook

Archive for 2018

ಅಪೂರ್ಣ ಹೋರಾಟ !: ಅಶ್ಫಾಕ್ ಪೀರಜಾದೆ

-1- ದೇಶ ಸ್ವಾತಂತ್ರವಾಗಿ ದಶಕಗಳೇ ಕಳೆದು ಹೋದರೂ ದೇಶದ ಪ್ರಜೆಗಳು ಮಾತ್ರ ಇನ್ನೂ ಗುಲಾಮರಾಗಿಯೇ ಉಳಿದಿರುವದು ನಮ್ಮ ದೇಶದ ಅತಿದೊಡ್ಡ ದುರಂತ. ಆಜಾದ ದೇಶದ ಗುಲಾಮ ಪ್ರಜೇಗಳು ನಾವು!. ಬ್ರಿಟೀಷರ ಕಾಲದಿಂದಲೂ ನಾವು ಶೋಷಣೆಯ ಹಳ್ಳಕ್ಕೆ ಬಿದ್ದು ಒದ್ದಾಡ್ತಾ ಇದ್ದೇವೆ. ಆಗ ಬ್ರಿಟೀಷರು ನಮ್ಮನ್ನು ಶೋಷಿಸುತ್ತಿದ್ದರೆ, ಈಗ ನಮ್ಮವರೆ ನಮ್ಮನ್ನು ಶೋಷಿಸುತ್ತಿದ್ದಾರೆ. ಸ್ವತಂತ್ರ್ಯಪೂರ್ವ ಮತ್ತು ಸ್ವಾತಂತ್ರದ ನಂತರದ ದಿನಗಳು ಕಂಡಿರು ಹಿರಿಯರನ್ನು ಕೇಳಿದರೆ ಸ್ವತಂತ್ರ್ಯಪೂರ್ವದ ದಿನಗಳೇ ಚೆನ್ನಾಗಿದ್ದವು. ಈಗೀನ ರಾಜಕಾರಣಿಗಳು ವೋಟಿನಾಸೆಗೆ ದೇಶದ ಜ್ವಲಂತ ಸಮಸ್ಯೆಗಳನ್ನೆಲ್ಲ ಹಾಗೇ […]

ಕಪ್ಪೆಯೊಂದರ ಅಂತಿಮಯಾತ್ರೆ: ಡಾ. ಗಿರೀಶ್ ಬಿ.ಸಿ.

ನಮ್ಮೂರಿನ ಹೆಸರನ್ನು ಒಂದ್ ಬಾರಿ ಹೇಳಿದ್ರೆ ಯಾರ್ಗು ಅರ್ಥಾನೇ ಆಗಲ್ಲ. ‘ಏನೂ .. ಕೊಕ್ಕರೇನಾ ?’ ಅನ್ನೊ ಪ್ರಶ್ನೇನ ಜರೂರು ಕೇಳ್ತಾರೆ. ಮೊದ್ಲು ಮೊದ್ಲು ಹೀಗಿ ಕೇಳಿದ್ರೆ ಕೋಪ ಮಾಡ್ಕೊತಿದ್ದ ನಾನು ಇತ್ತೀಚಿಗಂತು ತಾಳ್ಮೆಯಿಂದಲೆ ‘ಅಲ್ರಿ, ಬೆಕ್ಕರೆ ಅಂತ, ಪುಟ್ಟಣ್ಣ ಕಣ್‍ಗಾಲ್ ಅವರನ್ನ ಕರ್ನಾಟಕಕ್ಕೆ ಕೊಡುಗೆ ಇತ್ತ ಮೈಸೂರಿನ ಪಿರಿಯಾಪಟ್ಟಣ ತಾಲೂಕಿನಲ್ಲಿರೊ ಹಳ್ಳಿ ಇದು’ ಅಂತಾನೊ ಇಲ್ಲ …. ‘ನೀವು ಬೈಲುಕುಪ್ಪೆ ಬುದ್ದಿಸ್ಟ್ ಟೆಂಪಲ್‍ಗೆ ಹೋಗೋವಾಗ ಹತ್ತಿರದಲ್ಲಿ ಸಿಗುತ್ತೆ’ ಅಂತಾನೊ, ಕೆಲವೊಮ್ಮೆ ಮೂಡ್ ಇಲ್ದೆ ಇದ್ರೆ, ‘ಬೆಟ್ಟದಪುರದ […]

ಪಂಜು ಸಂಚಾಲಕರು

ನಲ್ಮೆಯ ಗೆಳೆಯರೇ, ಪಂಜು ಬಳಗದ ಪರವಾಗಿ ನಿಮ್ಮೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಪಂಜು ಈಗಾಗಲೇ ತನ್ನದೇ ಓದುಗ ಹಾಗು ಬರಹಗಾರರ ಬಳಗ ಹೊಂದಿದೆಯಾದರೂ ಪಂಜು ಇನ್ನೂ ಹೆಚ್ಚು ಓದುಗರಿಗೆ ತಲುಪಬೇಕೆನ್ನುವ ಉದ್ದೇಶದಿಂದ ಪಂಜು ಬಳಗಕ್ಕೆ ಪಂಜು ಸಂಚಾಲಕರನ್ನು ಸೇರಿಸಿಕೊಳ್ಳುವ ಆಸೆ ಇದೆ. ಆಸಕ್ತಿ ಉಳ್ಳವರು ನಿಮ್ಮ ಹೆಸರು, ವಿಳಾಸ, ಮೊಬೈಲ್ ನಂಬರ್ ಮತ್ತು ಫೋಟೋ ಕಳುಹಿಸಿಕೊಡಿ. ನಮ್ಮ ಇ ಮೇಲ್: smnattu@gmail.com, editor.panju@gmail.com ನಮ್ಮ ವಾಟ್ಸ್ ಅಪ್ ನಂಬರ್: 9844332505 ಧನ್ಯವಾದಗಳೊಂದಿಗೆ ಪಂಜು ಬಳಗ

ಮುತ್ತಿನ(0ಥ)ಸರ: ಎಂ.ಎಚ್.ಮೊಕಾಶಿ

ನನ್ನ ಮಿತ್ರರು, ಆತ್ಮೀಯರು ನನ್ನ ಲೇಖನಗಳನ್ನು ಓದಿ ಯಾವಾಗಲೂ ಬೇರೆ ಬೇರೆ ವಿಷಯದ ಬಗ್ಗೆ ಬರಿತಾ ಇದೀರಲ್ಲ ಯಾಕೆ ನೀವು ನಿಮ್ಮ ಜೀವನದಲ್ಲಿ ನಡೆದ ಯಾವುದಾದರೊಂದು ವಿಶೇಷ ಘಟನೆಯ ಬಗ್ಗೆ ಬರೆಯಬಾರದೇಕೆ? ಎಂದಾಗ ನಾನು ಒಂದು ಘಟನೆಯನ್ನು ಇಲ್ಲಿ ಚಿತ್ರಿಸಲು ಪ್ರಯತ್ನಿಸಿದ್ದೇನಷ್ಟೆ. ಗಂಡುಮೆಟ್ಟಿದ ನಾಡು ಉತ್ತರ ಕರ್ನಾಟಕ. ಇಲ್ಲಿ ಪಂಜಾಬ (ಪಂಚ ನದಿಗಳ ಬೀಡು) ಎಂದೇ ಖ್ಯಾತಿಯಾದ ಬಿಜಾಪೂರ (ಇಂದು ವಿಜಯಪುರ ಆಗಿದೆ) ಜಿಲ್ಲೆಯ ಒಂದು ಗ್ರಾಮದಲ್ಲಿ ಪ್ರೌಢ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದೆ. ಹಲವು ವರ್ಷಗಳ ಹಿಂದೆ […]

“ಒಂದು ಸಾಂತ್ವನಪರ ನುಡಿ ಚಳಿಗಾಲದ ಮೂರು ತಿಂಗಳನ್ನು ಬೆಚ್ಚಗಿಡಬಲ್ಲದು”: ಜಯಶ್ರೀ ಭ.ಭಂಡಾರಿ.

ಇಂದಿನ ಆಧುನಿಕ ಜೀವನದ ಧಾವಂತದ ಬದುಕಿನಲ್ಲಿ ಮಾನವೀಯ ಹಾಗೂ ಸಂವೇದನಾಶೀಲ ಗುಣಗಳ ಕೊರತೆ ಎದ್ದುಕಾಣುತ್ತಿದೆ.ಪರಸ್ಪರ ಕಾಲೇಳದಾಟದಲ್ಲಿ ಮೌಲ್ಯಯುತ ಜೀವನ ಕಾಣದಂತಾಗಿದೆ.ನಮ್ಮ ಪೂರ್ವಜರ ಬದುಕನ್ನು ಕಂಡಾಗ ಮನಸ್ಸು ಹಳಹಳಿಸುತ್ತದೆ.ಇಂದು ದಯಾಪರ ಜೀವನ ಎಂದಿಗಿಂತ ತುಂಬ ಆವಶ್ಯಕವೆನಿಸುತ್ತಿದೆ. ಮನುಷ್ಯ ಮನುಷ್ಯರ ಮಧ್ಯ ಪರಸ್ಪರ ಕೊಡಮಾಡಲು ಸಾಧ್ಯವಿರುವ ಉಡುಗೊರೆಗಳೆಲ್ಲ ಮೌಲ್ಯಯುತವಾದುದು ಎಂದರೆ ದಯೆ. ಅದು ಕಾರುಣ್ಯ,ಸಹಾನುಭೂತಿ,ಅನುಕಂಪ ಎಂಬ ಇತರ ಹೆಸರುಗಳಿಂದಲೂ ಕರೆಯಲ್ಪಡುತ್ತದೆ.ಮನುಷ್ಯ ತೋರ್ಪಡಿಸುವ ದಯೆ ಹುಟ್ಟುಗುಣವಾಗಿದ್ದರೂ ಅದು ಆತನಲ್ಲಿ ಸ್ಥಿರವಾಗಿ ನೆಲೆಗೊಳ್ಳಲು ಅದನ್ನು ಮಾದರಿಯಾದ ಗುಣವಿಶೇಷಗಳಿಂದ ಬೆಳೆಸಬೇಕಾಗುತ್ತದೆ. ಮನುಷ್ಯ ಸ್ವತಂತ್ರ ಜೀವನವನ್ನು […]

ಚೇತನ್ ನಾಗರಾಜರ ಖಾಲಿ ಕೋಣೆಯ ಹಾಡು: ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ.

ಗಜಲ್ ಸಂಕಲನ: ಖಾಲಿಕೋಣೆಯ ಹಾಡು ಲೇಖಕರು: ಚೇತನ್ ನಾಗರಾಳ ಅವಲೋಕನ: ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ. ಆತ್ಮೀಯ, ಪ್ರೀತಿಯ ಗೆಳೆಯ ಚೇತನ್ ನಾಗರಾಳ ಬರೆದ #ಖಾಲಿಕೋಣೆಯ_ಹಾಡು” ಗಜಲ್ ಸಂಕಲನ ಓದಿದಾಗ ನನ್ನ ಓದಿಗೆ ದಕ್ಕಿದ್ದಿಷ್ಟು… ಶೃಂಗಾರಕಾವ್ಯ, ರಮ್ಯಕಾವ್ಯ, ರಮಣೀಯ ಕಾವ್ಯ, ಮನಮೋಹಕ ಕಾವ್ಯ ಪ್ರಕಾರ ಎಂದು ಕರೆಸಿಕೊಳ್ಳುವ ಗಜಲ್ ಚೇತನ್ ನಾಗರಾಳನ ಭಾವದ ತೆಕ್ಕೆಯಲಿ ಸಿಕ್ಕು ದಿಕ್ಕು ದಿಕ್ಕುಗಳನ್ನೇ ಸಂಚರಿಸಿ ಎಲ್ಲ ಪ್ರಕಾರದ ಭಾವಗಳನ್ನು ವಿಶೇಷವಾಗಿ, ವಿಶಿಷ್ಟವಾಗಿ ಮತ್ತು ವಿಸ್ಮಯವಾಗಿ ಕಟ್ಟಿಕೊಟ್ಟ ಬಗೆ ಇಷ್ಟವಾಗುತ್ತದೆ. ಎಲ್ಲವನ್ನು ಹೇಳುವಾಸೆ ಆಗಿದೆ […]

ಬಂಜೆ: ಚೈತ್ರಾ ವಿ.ಮಾಲವಿ

‘ಹೇ..ಪೆದ್ದು ನೋಡಲ್ಲಿ ಒಲೆ ಮುಂದೆ ನಿಂತ್ಕೊಂಡು ಏನು ಯೋಚನೆ ಮಾಡ್ತಿದಿಯಾ. ತಲೆ ಸರಿಗಿದಿಯೋ..ಇಲ್ವೋ. ಹಾಲು ಉಕ್ತಿರೋದು ಕಾಣ್ತಿಲ್ವ’ ಕೊಂಕು ನುಡಿದಳು ಅತ್ತೆ. ಅತ್ತೆಯ ಮಾತಿನಿಂದ ಯಾವುದೋ ಲೋಕದಿಂದ ಹೊರ ಬಂದಳು ಭಾರತಿ. ‘ನಿನ್ನ ಯೋಗ್ಯತೆಗೆ ಮದುವೆ ಆಗಿ ಹತ್ತು ವರ್ಷ ಆದರೂ ಮಗು ಕೊಡೋಕೆ ಆಗಿಲ್ಲ ನಿನ್ನ ಕೈಲಿ.’ ಮತ್ತೆ ಅತ್ತೆಯ ಕೊಂಕು ನುಡಿಗಳು ಶುರುವಾದವು. ಭಾರತಿಗೆ ಹೊಸದೇನೂ ಅಲ್ಲ ಇದು. ಪ್ರತಿದಿನ ಅತ್ತೆಯ ಕೊಂಕು ನುಡಿಗಳನ್ನು ಕೇಳಿ ಬೇಸತ್ತಿದ್ದಳು. ‘ನನ್ನ ಅಂತರಂಗ ಬಲ್ಲವರು ಯಾರು? ನನ್ನ […]

ಹುಚ್ಚು ಖೋಡಿ ವಯಸ್ಸು: -ಗೌರಿ.ಚಂದ್ರಕೇಸರಿ, ಶಿವಮೊಗ್ಗ.

  ವಿದ್ಯಾರ್ಥಿ ಜೀವನವೇ ಹಾಗೆ. ನಿತ್ಯ ಸಂತೋಷ, ಸಂಭ್ರಮ, ತಮಾಷೆಗಳಿಂದ ಕೂಡಿರುತ್ತದೆ. ಒಬ್ಬರಿನ್ನೊಬ್ಬರ ಕಾಲೆಳೆಯುವುದು, ಚುಡಾಯಿಸುವುದು, ಮೂರ್ಖರನ್ನಾಗಿಸುವುದು ನಡೆದೇ ಇರುತ್ತದೆ. ಆಗ ತಾನೆ ಹೈಸ್ಕೂಲನ್ನು ಹಿಂದೆ ಬಿಟ್ಟು ಕಾಲೇಜಿಗೆ ಅಡಿ ಇಡುವ ವಿದ್ಯಾರ್ಥಿಗಳಂತೂ ಅಪ್ಪಟ ಮದ್ಯ ಹೀರಿದ ಮಂಗಗಳಂತಾಡುತ್ತವೆ. ನಾವು ಏನೇ ಮಾಡಿದರೂ ಅದು ಕೇವಲ ತಮಾಷೆಗಾಗಿ ಎಂದು ಇವರು ತಮ್ಮಷ್ಟಕ್ಕೆ ತಾವೇ ದೃಢೀಕರಿಸಿಕೊಂಡು ಬಿಟ್ಟಿರುತ್ತಾರೆ. ಹುಚ್ಚು ಖೋಡಿ ಮನಸು ಅದು ಹದಿನಾರರ ವಯಸ್ಸು ಎಂಬ ಮಾತನ್ನು ಅಕ್ಷರಷ: ಸತ್ಯ ಎಂಬುದನ್ನು ಸಾಬೀತು ಪಡಿಸುತ್ತಾರೆ. ಮಾಡುವ ತಮಾಷೆಗಳು […]

ಎಲ್ಲಿ ಹೋದವು ಆ ದಿನಗಳು…!: ಅಕ್ಷಯಕುಮಾರ ಜೋಶಿ

ಹಿಂದಿನ ಕಾಲದಲ್ಲಿ ಸಂಬಂಧಗಳು, ಆತ್ಮೀಯರ ಸ್ನೇಹಪರ ಬಾಂದವ್ಯಗಳು ಗಟ್ಟಿಯಾಗಿರುತ್ತಿದ್ದವು. ಇಂದಿನ ಆಧುನಿಕ ದಿನಮಾನಗಳಲ್ಲಿ ಆರೋಗ್ಯಕರ, ಪ್ರೀತಿಯ ಸಂಬಂಧಗಳು ನಶಿಸುತ್ತ ಅನಾರೋಗ್ಯಕರ ಚಿಂತನೆಗಳತ್ತ ಸಾಗುತ್ತಿರುವುದು ವಿಷಾಧನೀಯ, ದೇಶಸುತ್ತು – ಕೋಶಓದು ಎಂಬ ವಾಣಿಯೂ ಪೂರ್ವಿಕರು ಹೇಳಿದವಾಣಿ ನೂರಕ್ಕೆ-ನೂರು ಸತ್ಯ ಹಿಂದಿನ ಕಾಲದಲ್ಲಿ ಪ್ರೇಕ್ಷಣೀಯ ಸ್ಥಳಗಳ ಚಿತ್ರಣವನ್ನು ಕೆಲವರು ಬಲ್ಲವರಿದ ತಿಳಿದು ಇನ್ನು ಕೆಲವರು ಸ್ವತಃ ಅಲ್ಲಿಗೆ ಭೇಟಿನೀಡಿ ಅಲ್ಲಿಯ ಶಿಲ್ಪಕಲೆಗಳ ಸೌಂದರ್ಯದ ಸೊಬಗನ್ನು ಸವಿಯುವ ದಿನಗಳಿದ್ದವು. ಆಧುನಿಕತೆ, ತಂತ್ರಜ್ಞಾನ ಬೆಳೆಯುತ್ತ ಸಾಗಿದಂತೆ ಅಂಗೈಯಲ್ಲೇ ಆಗಸ ವೆಂಬಂತೆ ಮೋಬೈಲ್‍ನಲ್ಲಿಯೇ ಸ್ಥಳಗಳ […]

ತಮ್ಮ ಭಾವಚಿತ್ರದ ಸೌಂದರ್ಯ ಹೆಚ್ಚಿಸುವ ಸ್ವಯಂ ಕಟ್ಟುಗಳು !: ಕೆ ಟಿ ಸೋಮಶೇಖರ ಹೊಳಲ್ಕೆರೆ.

ಎಲ್ಲರೂ ತಮ್ಮ ತಮ್ಮ ಭಾವಚಿತ್ರಗಳಿಗೆ ಸಾಮಾನ್ಯವಾಗಿ ಕಟ್ಟನ್ನು ಹಾಕುತ್ತಾರೆ, ಹಾಕಿಸುತ್ತಾರೆ. ಯಾಕೆಂದರೆ ಎಲ್ಲರಿಗೂ ತಮ್ಮ ಭಾವಚಿತ್ರಗಳು ಸುಂದರವಾಗಿ ಕಾಣಬೇಕೆಂಬ ಆಸೆ. ಅದಕ್ಕೆ ಹಾಕಿಸುತ್ತಾರೆ. ಕಟ್ಟುಗಳು ಭಾವಚಿತ್ರದ ಶೋಭೆಯನ್ನು ಹೆಚ್ಚಿಸುತ್ತವೆ. ಭಾವಚಿತ್ರವನ್ನು ವಿರೂಪಗೊಳ್ಳದಂತೆ ಬಹಳ ವರುಷಗಳ ಕಾಲ ಹಾಳಾಗದಂತೆ ರಕ್ಷಿಸುತ್ತವೆ. ಕಟ್ಟು ಹಾಕಿದ ಭಾವಚಿತ್ರಗಳು ತಮ್ಮನ್ನು ಇರಿಸಿದ ಸ್ಥಳ, ಶೋಕೇಸಿನ, ನೇತು ಹಾಕಿದ ಗೋಡೆಯ, ತಾವಿರುವ ಟೇಬಲ್ಲಿನ ಅಂದವನ್ನು ಹೆಚ್ಚಿಸುತ್ತವೆ . ಭಾವಚಿತ್ರಗಳು ಯಾವ ವಯೋಮಾನದಲ್ಲಿನ ಭಾವಚಿತ್ರಗಳೋ ಆ ವಯೋಮಾನದಲ್ಲಿನ, ಯಾವ ಸಂದರ್ಭದಲ್ಲಿನ ಭಾವ ಚಿತ್ರಗಳೋ ಆ ಸಂದರ್ಭದಲ್ಲಿನ […]