Facebook

Archive for 2018

ದೋಷ: ಅಶ್ಫಾಕ್ ಪೀರಜಾದೆ

ಏಳು ಹಳ್ಳಿಗಳಿಂದ ಆವೃತ್ತಗೊಂಡು ಏಳು ಸುತ್ತಿನ ಕೋಟೆಯಂತಿರುವ ಊರು ಯಾದವಾರ! ನಾನು ಅಲ್ಲಿನ ಪಶು ಆಸ್ಪತ್ರೆಗೆ ಪಶು ಪರೀಕ್ಷಕನಾಗಿ ಹಾಜರಾದ ಹೊಸದರಲ್ಲಿ ಒಬ್ಬಳು ಅಂದರೆ ವಯಸ್ಸು ಸುಮಾರು ಇಪ್ಪತ್ತೆರಡರಿಂದ ಇಪ್ಪತ್ತೈದರ ನಡುವೆ ಇರಬಹುದು. ಕಣ್ಣು ಕೊರೈಸುವಂತಿರಬೇಕಾದ ಈ ಹರೆಯದಲ್ಲಿ ಅದ್ಯಾವುದೋ ಬಿರುಗಾಳಿಗೆ ಸಿಕ್ಕು ತತ್ತರಿಸಿದಂತಿದ್ದಳು. ಆಳಕ್ಕಿಳಿದ ನಿಸ್ತೇಜ ಕಣ್ಣುಗಳೇ ಜೀವನದಲ್ಲಿ ಅವಳು ಸಾಕಷ್ಟು ನೊಂದಿರುವ ಬಗ್ಗೆ ಸಂಕೇತ ನೀಡುತ್ತಿದ್ದವು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸೃಷ್ಟಿಯ ಯಾವುದೋ ವಿಕೋಪಕ್ಕೆ ಸಿಲುಕಿ ಭಗ್ನಾವಶೇಷವಾಗಿ ಇತಿಹಾಸ ಸೇರಿದಂತಿದ್ದಳು. ನಮಸ್ಕರಿಸುತ್ತ ಒಳಬಂದ ಅವಳನ್ನು […]

ಜಾಣಸುದ್ದಿ 13: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ […]

π ಗೊಂದು ದಿನ ಮಾರ್ಚ್ 14: ಜಲಸುತ

ಗಣಿತ ಸರ್ವ ವಿಜ್ಞಾನಗಳ ಅಧಿನಾಯಕಿ – – ಖ್ಯಾತ ಜರ್ಮನ್ ಗಣಿತಜ್ಞ ಕಾರ್ಲ್ ಫ್ರೆಡ್ರಿಕ್ ಗಾಸ್. ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದ ಯಾವುದೇ ವಿಷಯವನ್ನಾದರೂ ವಿವರಿಸಿ ಹೇಳಲು ಗಣಿತ ಬೇಕೇ ಬೇಕು. ಗಣಿತವಿಲ್ಲದೆ ವಿಜ್ಞಾನ ಇಲ್ಲ ವಿಜ್ಞಾನವನ್ನು ಒಂದು ಭಾಷೆ ಎಂದು ಪರಿಗಣಿಸಿದರೆ, ಗಣಿತ ಆ ಭಾಷೆಗೆ ಲಿಪಿಯಿದ್ದಂತೆ. ಇದು ಗಣಿತದ ಹೆಗ್ಗಳಿಕೆ. ಗಣಿತದಲ್ಲಿ ಕೆಲವೊಂದು ವಿಶೇಷ ಸಂಖ್ಯೆಗಳಿವೆ. ಇವಿಲ್ಲದೆ ವಿಜ್ಞಾನ-ತಂತ್ರಜ್ಞಾನವಿಲ್ಲ, ಕಲೆ-ವಾಸ್ತುಶಿಲ್ಪವಿಲ್ಲ. ಜಗದ ಜನರ ಮೊಗದಲಿ ಮಂದಹಾಸ ಮೂಡಲು ಯಾವುದ್ಯಾವುದು ಅಗತ್ಯವೋ ಅಲ್ಲೆಲ್ಲಾ ಈ ಸಂಖ್ಯೆಗಳು ಇರಲೇಬೇಕು. ಕೆಲವೊಮ್ಮೆ […]

ಅವಕಾಶಗಳು ಬಾಗಿಲು ಬಡಿದಾಗ: ಎಸ್, ಎಸ್, ಭರಮನಾಯ್ಕರ

ಯಾರು ಬದುಕೆಂಬ ಫಲವತ್ತಾದ ನೆಲದಲ್ಲಿ, ಸಾಮರ್ಥ್ಯ ಎಂಬ ಪೈರನ್ನು ನೆಟ್ಟು, ಅದನ್ನು ಆಸಕ್ತಿಯೆಂಬ ಗೊಬ್ಬರ ಮತ್ತು ಶ್ರದ್ಧೆ ಎಂಬ ನೀರನ್ನು ಹಾಕಿ ಬೆಳೆಸುತ್ತಾರೋ ಅವರು ಸಂಪತ್ತು, ಸೌಭಾಗ್ಯ, ಸುಖ, ಸಂತೋಷ ಎಂಬ ಇಳುವರಿಗಳನ್ನು ಅಧಿಕ ಪ್ರಮಾಣದಲ್ಲಿ ಪಡೆಯಬಹುದಾಗಿರುತ್ತದೆ. ವ್ಯಕ್ತಿಯು ತನ್ನಲ್ಲಿ ಸುಪ್ತವಾಗಿ ಹುದುಗಿರುವ ಶಕ್ತಿ ಸಾಮಥ್ರ್ಯಗಳನ್ನು ಗೊತ್ತು ಮಾಡಿಕೊಂಡು ಭಾಷಾಕಲಿಕೆ ಹಾಗೂ ಅಭಿವ್ಯಕ್ತಿಯಲ್ಲಿ ಅಗತ್ಯವಾದ ಶಿಕ್ಷಣ ತರಬೇತಿ ಹಾಗೂ ಸತತ ಅಭ್ಯಾಸದ ಮೂಲಕ ತಾನು ಅದನ್ನು ಗರಿಷ್ಟ ಪ್ರಮಾಣದಲ್ಲಿ ಅಭಿವ್ಯಕ್ತಿಪಡಿಸಲು ಸಮರ್ಥನಾಗಿ/ಳಾಗಿ ಸಾಧನೆ ಮಾಡಬೇಕು. ತನ್ನಲ್ಲಿಯೇ ಅಗಾಧ […]

ಪುಸ್ತಕ ಕೊಳ್ಳಿರಿ: ಮುಖವಾಡದ ಮಾಫಿಯಾದಲ್ಲಿ

ಶಿವಕುಮಾರ ಚನ್ನಪ್ಪನವರ ಇವರು ಬರೆದ ಮುಖವಾಡದ ಮಾಫಿಯಾದಲ್ಲಿ ಕಥಾಸಂಕಲನವನ್ನು ಕೊಳ್ಳಲು ಈ ಕೆಳಗಿನ ಲಿಂಕ್ ಒತ್ತಿರಿ.. https://www.instamojo.com/panjuprakashana/mukhavadada-mafiyadalli/  

ರಾಜಹಂಸ ನಿರ್ದೆಶನದ ಕಿರುಚಿತ್ರ

ನನ್ನ ಹೆಸರು ರಾಜಹಂಸ. ಮೂಲತಃ ಬೀದರ್ ದವನು. ಪ್ರಸ್ತುತ ಚಿಕ್ಕಬಳ್ಳಾಪುರದಲ್ಲಿ ನೆಲೆಸಿದ್ದೇನೆ. ಓರ್ವ ಕವಿ ಕೂಡ. ಈಗಾಗಲೇ ನಾಲ್ಕು ಕವನ ಸಂಕಲನಗಳನ್ನು ಪ್ರಕಟಿಸಿದ್ದೇನೆ. ಸಿನಿಮಾ ನಿರ್ದೇಶಕನಾಗಬೇಕೆಂಬುದು ನನ್ನ ಜೀವಮಾನದ ಕನಸು. ಈ ನಿಟ್ಟಿನಲ್ಲಿ ಕಳೆದ 10 ವರ್ಷಗಳಿಂದ ಪ್ರಯತ್ನಿಸುತ್ತಿದ್ದೇನೆ. ಈಗ “ನೋಡ್ ಬೇಡ” ಎಂಬ ಶೀರ್ಷಿಕೆಯ ಕಿರುಚಿತ್ರವೊಂದಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದೇನೆ. ಜೊತೆಗೆ ನಾಯಕನಟನಾಗಿ ಅಭಿನಯಿಸಿದ್ದೇನೆ. ಇದು ನನ್ನ ಮೊದಲ ಪುಟ್ಟಪ್ರಯತ್ನ. ದಯವಿಟ್ಟು ಒಮ್ಮೆ ನೋಡಿ ಮತ್ತು ಸಾಧ್ಯವಾದರೆ ಈ ಕಿರುಚಿತ್ರದ ಕುರಿತು ಸರಿ ತಪ್ಪುಗಳ […]

ಬಿಟ್ಟೇನೆಂದರೂ ಬಿಡದೀ ಮಾಯೆ: ಗೌರಿ. ಚಂದ್ರಕೇಸರಿ, ಶಿವಮೊಗ್ಗ.

  ಮೂರ್ಖ ಪೆಟ್ಟಿಗೆ, ಮಾಯಾ ಪೆಟ್ಟಿಗೆ ಎಂದು ಕರೆಸಿಕೊಳ್ಳುವ ದೂರದರ್ಶನ ಎಂಥವರ ಮೇಲೂ ಸಮ್ಮೋಹನವನ್ನು ಮಾಡಿ ಬಿಡುತ್ತದೆ. ಇದು ರೂಪದಲ್ಲಿ ಹೊಸ ಹೊಸ ಬಿನ್ನಾಣಗಳನ್ನು ಬದಲಿಸುತ್ತ ಅಬಾಲವೃದ್ಧರಾದಿಯಾಗಿ ತನ್ನತ್ತ ಸೆಳೆದುಕೊಂಡು ಬಿಟ್ಟಿದೆ. ಮೊದ ಮೊದಲು ಕಪ್ಪು-ಬಿಳುಪು ಸುಂದರಿಯಾಗಿ ಅವತರಿಸಿ ಈಗ ರಂಗು ರಂಗಿನ ಮಿಂಚುಳ್ಳಿಯಂತೆ ಬಣ್ಣಮಯವಾಗಿದೆ. ಹಿಂದೆ ಧಡೂತಿ ದೇಹವನ್ನು ಹೊಂದಿದ ಈ ಮಾಯೆ ಇತ್ತೀಚೆಗೆ ಸ್ಲಿಮ್ ಆಗಿ, ಗೋಡೆಯಲ್ಲಿ ಕಂಗೊಳಿಸುತ್ತಿದ್ದಾಳೆ. ಸಾವಿಲ್ಲದ ಮನೆಯ ಸಾಸುವೆ ದಕ್ಕುವುದು ಎಷ್ಟು ದುಸ್ತರವೋ ಟಿ.ವಿ.ಇಲ್ಲದ ಮನೆ ಸಿಕ್ಕುವುದೂ ಅಷ್ಟೇ ದುಸ್ತರ. […]

ಕೃಷ್ಣೆಯಿಂದ ಸಾಗಿ ಕೃಷ್ಣೆಯವರೆಗೆ: ಶ್ರೀ.ಎಂ.ಎಚ್.ಮೊಕಾಶಿ

ಒಂದು ದಿನ ಸಂಜೆ ತಂಪಾದ ಗಾಳಿ ಬೀಸುತ್ತಿತ್ತು, ಆಕಾಶದಲ್ಲಿ ಮೋಡಕವಿದ ವಾತಾವರಣವಿತ್ತು. ಇಂಥ ಚುಮುಚುಮು ಚಳಿಯಲ್ಲಿ ನಾವೆಲ್ಲ ನಾಲ್ಕೈದು ಗೆಳೆಯರು ಕೂಡಿ ಹರಟೆ ಹೊಡೆಯುತ್ತಿದ್ದೆವು. ಕೆಲ ಸಮಯದ ನಂತರ ಗೆಳೆಯರೆಲ್ಲರೂ ಕೂಡಿ ಟೀ ಕುಡಿಯಲು ಹೋಟೆಲ್ ಗೆ ಹೋದೆವು. ಅಲ್ಲಿ ಹಲವಾರು ವಿಷಯಗಳ ಚರ್ಚೆನಡೆಸುತ್ತಿರುವಾಗ ಗೆಳೆಯನೊಬ್ಬನು ಇಂಥ ಒಳ್ಳೆಯ ಕ್ಲೈಮೇಟ್ ನಲ್ಲಿ ಯಾಕೆ ನಾವೆಲ್ಲರೂ ಒಂದೆರಡು ದಿನ ಟೂರ್ ಗೆ ಹೋಗಬಾರದು ಎಂದನು. ಅದಕ್ಕೆ ಒಬ್ಬ ಗೆಳೆಯನು ಸಧ್ಯ ಮಳೆಗಾಲದಲ್ಲಿ ಟೂರ್ ಬೇಡ ಎಂದನು. ಆಗ ಇನ್ನೊಬ್ಬ […]

ಯಾವ ವೃತ್ತಿಗೆ ಅತಿ ಹೆಚ್ಚು ವೇತನ ಸಿಗಬೇಕು ಮತ್ತು ಏಕೆ?: ವೇದಾವತಿ ಹೆಚ್. ಎಸ್.

ಈ ಪ್ರಶ್ನೆಯನ್ನು ವಿಶ್ವಸುಂದರಿ ಸ್ಫರ್ಧೆಯಲ್ಲಿ “ಮಾನುಷಿ ಛಿಲ್ಲರ್”ಗೆ ಕೇಳಿದ ಪ್ರಶ್ನೆ ಆಗಿತ್ತು. ಇದಕ್ಕೆ ಉತ್ತರವಾಗಿ “ನಾನು ನಮ್ಮ ಅಮ್ಮನಿಗೆ ತುಂಬಾ ಹತ್ತಿರವಾಗಿರುವುದರಿಂದ,ನನ್ನ ಪ್ರಕಾರ ತಾಯಿಗೇ ಆತಿ ಹೆಚ್ಚಿನ ಗೌರವ ಸಿಗಬೇಕು. ವೇತನ ಅಂದರೆ,ಅದು ಹಣ ಮಾತ್ರವಲ್ಲ,ಬೇರೆಯವರಿಗೆ ತೋರಿಸುವ ಪ್ರೀತಿ-ಗೌರವವೂ ಕೂಡ ಆ ಲೆಕ್ಕಕ್ಕೆ ಬರುತ್ತದೆ. ಅಮ್ಮನೇ ನನ್ನ ಜೀವನದ ದೊಡ್ಡ ಸ್ಫೂರ್ತಿ.ಎಲ್ಲ ತಾಯಂದಿರೂ ತಮ್ಮ ಮಕ್ಕಳಿಗಾಗಿ ತುಂಬಾ ತ್ಯಾಗ ಮಾಡುತ್ತಾರೆ,ಅತಿ ಹೆಚ್ಚು ವೇತನ, ಗೌರವ ಮತ್ತು ಪ್ರೀತಿ ಸಿಗಬೇಕಾಗಿದ್ದು ತಾಯಿಂದಿರಿಗೆ.”ಈ ಉತ್ತರದಿಂದ ಇಡೀ ವಿಶ್ವಕ್ಕೆ ವಿಶ್ವ ಸುಂದರಿ […]

ಪಂಜು ಕಾವ್ಯಧಾರೆ

ಕನಸು ಕನ್ನಡಿಯೊಳಗೆ… ನಮ್ಮ ಖಾಸಗೀ ಕನಸಿನ ಲೋಕದೊಳಗೆ ಪ್ರವೇಶ ಮಾಡುವರು ನಮ್ಮ ಖಾಸಾ ಮಂದಿ ಅಚ್ಚು ಮೆಚ್ಚಿನವರು ಪ್ರೀತಿಪಾತ್ರರು ಸಂಬಂಧಿಕರು ಸ್ನೇಹಿತರು ಮುಂತಾದವರು ಒಮೊಮ್ಮೇ ನಾವು ಕಂಡು ಹೃನ್ಮನ ತುಂಬಿಕೊಂಡ ಸಿನೇಮಾದವರು ಸಿಲೇಬ್ರಟಿಗಳು ಆದರ್ಶ ವ್ಯಕ್ತಿಗಳು ಸಮಾಜಕ್ಕೆ ಮಾದರಿ, ಮಾರಿಯಾದವರು ಹಾಗೇ ಒಮ್ಮೊಮ್ಮೇ ನಮ್ಮ ಸ್ವಪ್ನ ಲೋಕಕ್ಕೆ ಲಗ್ಗೆ ಇಟ್ಟು ಬೆಚ್ಚಿ ಬೀಳಿಸುವರು ಭಯಾನಕ ಚಹರೆಗಳು ವಿಕೃತ ಮನಸ್ಸುಗಳು ದುಷ್ಟರು, ಭ್ರಷ್ಟರು ಸಮಾಜ ಘಾತುಕರು ಖೂಳರು, ಪಿಶಾಚಿಗಳು ಧುತ್ತೆಂದು ಪ್ರಕಟವಾಗುವರು ಎಲ್ಲೋ ಮಾತಾಡಿ ಮರೆತು ಬಿಟ್ಟವರು ಹಗಲ್ಹೋತ್ತು […]