Facebook

Archive for 2018

ಪಂಜು ಕಾವ್ಯಧಾರೆ

ಗಝಲ್… ಹುಡುಕುತ್ತಾ ಹೊರಟ ನನಗೆ ಕಳೆದುಕೊಂಡಷ್ಟು ಸಿಕ್ಕಿತು ಸಖಾ.. ಬಯಸುತ್ತಾ ಹೊರಟ ನನಗೆ ಬಯಸಲಾರದಷ್ಟು ದಕ್ಕಿತು ಸಖಾ… ನಿನ್ನ ಗುಟ್ಟುಗಳೆಲ್ಲಾ ನನ್ನ ಪಿಸುದ್ವನಿಯಲಿ ರಟ್ಟಾದವು… ಮೆರೆದು ತುಳುಕಿದ ಒಂದೆರಡು ಹನಿ ಜೀವದ ಕೊನೆ ಹೊಕ್ಕಿತು ಸಖಾ… ನಿನ್ನ ಬಾಹುವಿನ ಮುದ ಬಂಧಿಸಿದೆ ಬಿಡದೆ ನನ್ನ ತಾರುಣ್ಯ… ತಾಜಮಹಲಿನ ಗೋರಿ ಇದ ಬಯಸಿ ಬಿಕ್ಕಿತು ಸಖಾ… ಯಮುನೆಯಲ್ಲಾ ಬಸಿದು ತಂದೆ ಬೊಗಸೆಯಲಿ ನನ್ನ ಕಣ್ಣ ಭಾವಕ್ಕೆ… ನನ್ನೆದೆಯ ಗಂಧ ನಿನ್ನ ಹುಮ್ಮಸ್ಸಿನ ಹೂಂ ಗುಟ್ಟುವಿಕೆಗೆ ಸೊಕ್ಕಿತು ಸಖಾ… ಬಡಿದ […]

ಒಂದು ಹುಡಗಿಯ ಶವ ಮತ್ತು ಪವಿತ್ರ ಜಲ !: ಅಶ್ಫಾಕ್ ಪೀರಜಾದೆ

-1- ದುಂಡಾಪುರ ! ಎಲ್ಲ ಜಾತಿಯ , ಎಲ್ಲ ವರ್ಗದ ಜನ ಒಟ್ಟಾಗಿ,ಒಗ್ಗಟ್ಟಾಗಿ ಬದುಕುವ ಒಂದು ಪುಟ್ಟ ಗ್ರಾಮ. ಜಾತಿಯಾಧಾರಿತ ಕಸಬುಗಳಲ್ಲಿ ನಿರತ ಗ್ರಾಮಸ್ಥರು ತಂತಮ್ಮ ಯೋಗ್ಯತೆಯನುಸಾರ ನಡೆದುಕೊಳ್ಳುವುದರಿಂದ ವಿವಿಧ ಕೋಮುಗಳ ನಡುವೆ ಮನಸ್ತಾಪವಿಲ್ಲ, ಗಲಭೆಗಳಿಲ್ಲ. ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ತತ್ತ್ವದಲ್ಲಿ ನಂಬಿಕೆಯಿಟ್ಟು ಶಾಂತಿಯಿಂದ, ನಂಬಿಕೆಯಿಂದ ಬದುಕು ಸಾಗಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಈ ಗ್ರಾಮವನ್ನು ಒಂದು ಆದರ್ಶ ಗ್ರಾಮ ಒಂದು ಮಾದರಿ ಗ್ರಾಮವೆಂದೇ ಬಣ್ಣಿಸಬಹುದು. ಜಾತಿಯಾಧಾರಿತ ಕಸಬುಗಳಾದ ಚಮ್ಮಾರಿಕೆ, ಕುಂಬಾರಿಕೆ,ಕಂಬಾರಿಕೆ, ಪತ್ತಾರಿಕೆ, ಬಡಿಗತನ, ಕುರಿ […]

“ಅಡಚಣೆಗಾಗಿ ಕ್ಷಮಿಸಿ…ದ್ದರೂ ಏಟು ಬಿದ್ದಿತ್ತು ಅಂದು !!”: ಗಿರೀಶ್.ವಿ

ಅಂದು ಡಿಸೆಂಬರ್ 4, 2017 ರಾತ್ರಿ ಎಂಟಾಗಿತ್ತು. ನನ್ನವಳು ಕನ್ನಡ ಪತ್ರಿಕೆ ಯೊಂದರಲ್ಲಿನ ಪದಬಂಧ ಬಿಡಿಸುವುದರಲ್ಲಿ ನಿರತಳಾಗಿದ್ದಳು. ಸಾಮಾನ್ಯವಾಗಿ ಅತೀ ವೇಗದಲ್ಲಿ ಉತ್ತರ ಕಂಡುಕೊಳ್ಳುತ್ತಿದ್ದವಳಿಗೆ ಅಂದು ಒಂದು ಸಾಲು ಮಾತ್ರ ಕೈಕೊಟ್ಟಿತ್ತು. ‘ಈಗಂತೂ ಅರ್ಜೆಂಟಾಗಿ ಒಂದು ಕಾಫಿ ಬ್ರೇಕ್ ತಗೋಬೇಕು’ ಅನ್ನುತ್ತಾ ಎದ್ದವಳಿಗೆ ನಾನು ‘ವಿರಾಮ ಬೇಕಿದ್ದರೇ ಸ್ವಲ್ಪ ದೂರ ವಾಕಿಂಗ್‍ಗೆ ಹೋಗಬಹುದು, ಅದಿಲ್ಲದಿದ್ದರೆ ಸಂಗೀತ ಕೇಳಬಹುದು! ಆದ್ರೆ ಕಾಫಿ ಮಾತ್ರ ಬೇಡ ಅಂದೆ’. ಇನ್ನೂ ಮುಂದುವರಿದು, ತಮಾಷೆಗೆ ‘ನಿನ್ನ ಸಾಮಥ್ರ್ಯ ಮತ್ತು ಬುದ್ಧಿಮತ್ತೆ ಚುರುಕಾಗಲು ಕಾಫಿಯ […]

ಬುಟ್ಟಿಗೊಂದು ಬುತ್ತಿ ಬಿದ್ದಾಗ…: ಮಂಗಳ ರವಿಕುಮಾರ್

ಬೆಂಗಳೂರಿನಲ್ಲಿ ಬದುಕುವುದು ಕಲಿತು ನಾಲ್ಕೈದು ವರ್ಷ ಆಗಿರಬಹುದು. ಆದರೆ ನನ್ನನ್ನು ನಾನು ಇಷ್ಟೊಂದು ಕಳೆದುಕೊಂಡಿದ್ದು ಇದೇ ಮೊದಲು. ಹಾಡು, ಕುಣಿತ, ಎಲ್ಲರನ್ನೂ ಆಕರ್ಷಿಸುತ್ತಿದ್ದ ನನ್ನ ತಮಟೆ ಸದ್ದು.. ಅವ್ಯಾವೂ ಈಗಿಲ್ಲ. ನಾನು, ನನ್ನ ಅಸ್ಮಿತೆ ಬೇರೆಬೇರೆಯಂತೆ ಅನಿಸುತ್ತಿದೆ. ನೋಡಿ, ಆಗ ಜೊತೆಗಿದ್ದ ಗೆಳೆಯ-ಗೆಳತಿಯರು ಈಗ ದೊಡ್ಡ ಸಾಧಕರಂತೆ, ಪತ್ರಕರ್ತರಂತೆ, ಅಥವಾ ತುಂಬಾ ಸುಖೀ ಜೀವಿಗಳಂತೆ ಕಾಣುತ್ತಾರೆ. ನಾನೂ ಅವರನ್ನೆಲ್ಲಾ ಸಂಪರ್ಕಿಸುವುದೇ ಕಡಿಮೆ. ಬಹುಶಃ ನಾನೀನ ಅವರಿಗೆ ತುಂಬಾ ದೂರದ ಗೆಳತಿಯಾಗಿದ್ದಿರಬಹುದು. ಅಥವಾ ನನಗೇ ನಾನೇ ಹಾಗಂದುಕೊಂಡಿರಬಹುದು! ಒಂದಿಷ್ಟು […]

ಜಾಣಸುದ್ದಿ 12: ಕೊಳ್ಳೇಗಾಲ ಶರ್ಮ, ಡಾ. ಎನ್. ಆರ್. ಮಂಜುನಾಥ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ […]

ಹುರುಳಿ ಕಾಳಿನ ಬಸ್ಸಾರು, ಹುರುಳಿ ಕಾಳಿನ ಉಸುಲಿ ರೆಸಿಪಿ: ವೇದಾವತಿ ಹೆಚ್. ಎಸ್.

ಹುರುಳಿ ಕಾಳು ದ್ವಿದಳ ಧ್ಯಾನವಾಗಿದ್ದು, ಅನೇಕ ರೀತಿಯ ಆರೋಗ್ಯ ಸಂಗಾತಿ ಗುಣ ಹೊಂದಿದೆ. ಬಹಳ ರುಚಿಯಾದ ಹಾಗೂ ಪೋಷಕಾಂಶಯುಕ್ತ ಆಹಾರ ಪದಾರ್ಥಗಳಲ್ಲೊಂದಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್, ವಿಟಮಿನ್, ಜೀವಸತ್ವ, ಖನಿಜ, ಕಬ್ಬಿಣ, ಫಾಸ್ಪರಸ್, ಕ್ಯಾಲ್ಸಿಯಂ ಹೊಂದಿದೆ. 1.ಹುರುಳಿ ಕಾಳಿನ ಬಸ್ಸಾರು. ಬೇಕಾಗುವ ಸಾಮಾಗ್ರಿಗಳು: ಮೊಳಕೆ ಕಟ್ಟಿದ ಹುರುಳಿ ಕಾಳು 1ಕಪ್ ತೆಂಗಿನ ತುರಿ ಅರ್ಧ ಕಪ್/ಆಗಲೇ ತುರಿದದ್ದು. ಹುಣುಸೆ ಹಣ್ಣಿನ ರಸ ಸ್ವಲ್ಪ ಜೀರಿಗೆ ಒಂದು ಟೀ ಚಮಚ ಸಾಸಿವೆ ಅರ್ಧ ಟೀ ಚಮಚ ಇಂಗು ಚಿಟಿಕೆ […]

ಅರೆ! ನಾವ್ಯಾಕೆ ಹೀಗಾಡ್ತಿವಿ??: ಜಯಶ್ರೀ.ಜೆ.ಅಬ್ಬಿಗೇರಿ.

ಮನಸ್ಸಿನಲ್ಲಿ ಮಂಡಿಗೆ ತಿನ್ನೋದು ಅಂತಾರಲ್ಲ ಹಾಗೆ ಮನೆ ಮಂದಿಗೆ ಗೆಳೆಯರಿಗೆ ಹೆತ್ತವರಿಗೆ ಹೇಳಲೇಬೇಕಾದುದನ್ನು ನಮ್ಮಲ್ಲಿ ಕೆಲವರು ತಾವು ಹೇಳುವುದು ಸರಿಯಿದ್ದರೂ ಹೇಗೆ ಹೇಳೋದು ಅಂತ ಇದ್ದ ಒಂದು ತಲೆ ಕೆಡಿಸಿಕೊಂಡು ಬೇಕಾಗಿದ್ದನ್ನು ಬೇಡವಾಗಿದ್ದನ್ನು ಯೋಚಿಸಿ ಇನ್ನೇನು ಪರಿಸ್ಥಿತಿ ಹದಗೆಡುತ್ತೆ ಅನ್ನೋವಾಗ ಅದೆಷ್ಟೋ ದಿನಗಳಿಂದ ತಲೆಯಲ್ಲಿಟ್ಟಕೊಂಡ ವಿಷಯವನ್ನು ಹೇಳಿದರೆ ಅವರೇನು ಅಂದುಕೊಳ್ತಾರೋ ಎಲ್ಲಿ ನೊಂದುಕೊಳ್ತಾರೋ ತನ್ನಿಂದಾಗಿ ಅವರಿಗೆ ಬೇಸರ ಆದರೆ ಸಿಟ್ಟು ಮಾಡಿಕೊಂಡರೆ ಅಂತ ತಾವೇ ಲೆಕ್ಕ ಹಾಕುತ್ತ ಕೂಡಿಸಿ ಕಳೆದು ಗುಣಿಸಿ ಇನ್ನೇನು ತಲೆ ಸಿಡಿಯುತ್ತೆ ಅನ್ನುವಾಗ […]

ಶಾಲಾ ಶೈಕ್ಷಣಿಕ ಯೋಜನೆ: ವೈ. ಬಿ. ಕಡಕೋಳ

ಸ್ವಂತ ಜ್ವಾಲೆಯಿಂದ ಉರಿಯುವ ದೀಪ ಮತ್ತೊಂದು ದೀಪವನ್ನು ಹೇಗೆ ಹೊತ್ತಿಸಲಾರದೋ ಹಾಗೆಯೇ ಸ್ವತಃ ಕಲಿಯದೇ ಇದ್ದ ಶಿಕ್ಷಕನು ಸಮರ್ಥವಾಗಿ ಬೋಧಿಸಲಾರ -ರವೀಂದ್ರನಾಥ ಠಾಗೂರ್ ಜೂನ್ ತಿಂಗಳು ಬಂತೆಂದರೆ ಶಾಲೆಗಳ ಪ್ರಾರಂಭ. ಇಲ್ಲಿ ಪಾಲಕರು. ಮಕ್ಕಳು ಶಿಕ್ಷಕರು ತಮ್ಮದೇ ಆದ ತಯಾರಿ ಮಾಡಿಕೊಳ್ಳುವ ಮೂಲಕ ಕಲಿಕಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಿದ್ದರಾಗುವ ಸಮಯ. 2018-19 ಶೃಕ್ಷಣಿಕ ವರ್ಷ ಪ್ರಾರಂಭವಾಯಿತು. ಶಾಲೆ ಪ್ರಾರಂಭವಾಗುವ ಮೊದಲು ವೇಳಾಪತ್ರಿಕೆ, ವರ್ಗದ ಶೈಕ್ಷಣಿಕ ರೂಪರೇಷೆಗಳ ಅಂದಾಜು ಪತ್ರಿಕೆ,ಅಭ್ಯಾಸ ಪತ್ರಿಕೆ, ದಿನಚರಿ ಹೀಗೆ ಒಂದಲ್ಲಾ ಹಲವು ದಾಖಲೆಗಳ […]

ಬದಲಾವಣೆ ಜಗ(ನ)ದ ನಿಯಮ: ನಾಗವೇಣಿ ಹೆಗಡೆ ಹೆಗ್ಗರ್ಸಿಮನೆ

ಕಾಲ ಎಂದೆಂದೂ ಕಾಲ ಕಾಲವೇ.. ಮನುಷ್ಯನ ಗುಣಸ್ವರೂಪ ಮಾತ್ರ ಬದಲಾಗುವುದಲ್ಲವೇ.. !!!! ಹಿಂದಿನ ಕಾಲದಲ್ಲಿ ಬಾಂಧವ್ಯಗಳ ಬೆಸುಗೆ ಜಾಸ್ತಿಯಾಗಿತ್ತು.ಒಗ್ಗಟ್ಟಿತ್ತು.ಪರಸ್ಪರ ಸಹಬಾಳ್ವೆ ಜಾಸ್ತಿಯಾಗಿತ್ತು.ಆದರೆ ಇಂದಿನ ಕಾಲದಲ್ಲಿ ಅದ್ಯಾವುದೂ ಇಲ್ಲ.ಕೊಲೆ,ಸುಲಿಗೆ,ಅತ್ಯಾಚಾರಗಳು ತಾಂಡವವಾಡುತ್ತಿವೆ.ಸಂಬಂಧಗಳ ಬೆಲೆಯೇ ತಿಳಿಯದೇ ಅಣ್ಣ-ತಂಗಿ,ಅಪ್ಪ – ಮಗಳು,ಪುಟ್ಟ ಮಕ್ಕಳು ಎನ್ನುವ ಭಾವನೆಗಳಿಲ್ಲದೇ ಅತ್ಯಾಚಾರ ಮಾಡುವ ಮನಸ್ಥಿತಿ ಇಂದಿನವರದು ಎನ್ನುವ ಮಾತುಗಳನ್ನು ಕೇಳುತ್ತಲೇ ಇರುತ್ತೇವೆ.ಮೊದಲಿನ ಕಾಲದ ಭಾರತೀಯ ಸಂಸ್ಕೃತಿ ಉನ್ನತವಾಗಿತ್ತು.ಈಗಿನ ಜನರು ಮಾನವೀಯತೆ ಮರೆಯುತ್ತಿದ್ದಾರೆ ಎಂಬ ನುಡಿಗಳು ಕರ್ಣಗಳ ಕೊರೆದು ಸಾಗುತ್ತಲೇ ಇರುತ್ತದೆ. ಹಾಗಾದರೆ ಹಿಂದಿನ ಕಾಲದಲ್ಲಿ ದುಷ್ಟರು,ದುರ್ಜನರು ಇರಲೇ […]

ದಯೆಯೇ ಧರ್ಮದ ಮೂಲ (ಭಾಗ 1): ಸುನಂದಾ ಎಸ್ ಭರಮನಾಯ್ಕರ

ಇಂದು ಮಾನವ ಕಟುಕನಾಗಿದ್ದಾನೆ, ಕರುಣೆ, ಕನಿಕರ ಎಲ್ಲವೂ ಅವನಿಂದ ಮಾಯವಾಗಿದೆ ಎನ್ನುವುದು ಸತ್ಯ. ಅತೀ ಶ್ರೇಷ್ಠ ಎನಿಸಿಕೊಂಡ ಮಾನವ ಜೀವಿ ಕರುಣಾ ಮೂರ್ತಿ, ಸಹನಾಮಯಿ, ಸಂಘಜೀವಿ ಎಂದೆಲ್ಲಾ ಬಿರುದು ಪಡೆದಿರುವ ಮನುಷ್ಯ ಇಂದು ತನ್ನೆಲ್ಲ ಮೌಲ್ಯಯುತ ಗುಣಗಳನ್ನು ತೊರೆದು ರಾಕ್ಷಸ ಪ್ರವೃತ್ತಿಗೆ ಇಳಿದಿರುವುದು, ಹೇಯಕರ ಸಂಗತಿ. ನಮ್ಮ ಧರ್ಮಗಳು, ಪರಸ್ಪರ ಮಾನವರು ಮಾತ್ರವಲ್ಲ ಇಡೀ ಪ್ರಕೃತಿಯನ್ನೇ ಪ್ರೀತಿಸುವದಕ್ಕೆ ಹೆಚ್ಚು ಒತ್ತು ಕೊಟ್ಟಿವೆ. ಪ್ರಳಯ ಎದುರುಗೊಂಡರೂ ಕೈಯಲ್ಲಿರುವ ಸಸಿಯನ್ನು ನಾಟಿ ಮಾಡಿರೆಂದು ಹೇಳುತ್ತವೆ. ನಾವು ಬೆಳೆದ ಕೃಷಿಯನ್ನು ಮಾನವರು […]